*ಅವರು ಬುಧ್ಧಿವಂತರು ಪ್ರಗತಿಪರರು ಅದರಲ್ಲಿ ಸಂಶಯವಿಲ್ಲ.....*
*ಏನಿದು ಮುಸ್ಲಿಂ ಜಮಾಅತ್!!?*
ಸಮಸ್ತ ವಿಭಜನೆಯಾದ ನಂತರ ಸುನ್ನಿಗಳು ಎರಡು ತಕ್ಕಡಿಯಲ್ಲಾಗುತ್ತಾರೆ. ಒಗ್ಗಟ್ಟಿನಲ್ಲಿ ಕಾರ್ಯಚರಿಸುತ್ತಿದ್ದ ಸುನ್ನಿಗಳ ಅಭಿವೃದ್ಧಿಗೆ ಈ ವಿಭಜನೆ ಕಂಟಕವಾಗಿದೆಯಾ?
ಎಂಬ ಪ್ರಶ್ನೆಯನ್ನು ಸಮಾನಮನಸ್ಕರಾದ ಹಲವರಲ್ಲಿ ನಾನು ಕೇಳಿದಾಗ ಬಂದ ಉತ್ತರ 'ಇಲ್ಲ' ಎಂದಾಗಿತ್ತು.ಮಾತ್ರವಲ್ಲ ವಿಭಜನೆಯೊಂದು ಸಮುದಾಯವನ್ನು ಕ್ಷೀಣಿಸುತ್ತಿದೆಯೆಂಬ ಕೂಗಿಗೆ ವಿರುಧ್ಧವಾಗಿ ಸುನ್ನಿಗಳ ಈ ವಿಭಜನೆ ಸಮುದಾಯವನ್ನು ಅದರಲ್ಲಿ ವಿಶೇಷವಾಗಿ ಸುನ್ನಿಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಿತು!
ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಮುದಾಯ ಮುಂದೆನಿಂತಿತು.
ಸಮಸ್ತ ವಿಭಜನೆಯಾದ ನಂತರ ಎಪಿ ವಿಭಾಗ ದೊಡ್ಡ ಮಟ್ಟಿನ ಕ್ರಾಂತಿ ಮಾಡಿತೆಂದು ಹೇಳದೆ ನಿರ್ವಾಹವಿಲ್ಲ. ಅದರ ಅರ್ಥ ಇ.ಕೆ ವಿಭಾಗ ಸುಮ್ಮನೆ ಕೂರಿತೆಂದು ಅಲ್ಲ.ಅವರು ಕಾರ್ಯಚರಿಸಿದ್ದಾರೆ.ಆದರೆ ಸಾಕಷ್ಟು ಮಹಲ್ಲ್'ಗಳ ಸ್ವಾಧೀನ ವಿಲ್ಲದೆಯೂ,ಶ್ರೀಮಂತ ಉಮರಾ ದಿಗ್ಗಜರ ಬೆಂಬಲದ ಕೊರತೆಯ ನಡುವಯೂ,ರಾಜಕೀಯ ಪಕ್ಷಗಳ ಸ್ಪಷ್ಟ ಸಹಾಯದಿಂದ ವಂಚಿತರಾಗಿಯೂ ಎಪಿ ವಿಭಾಗ ಕೇರಳ ಕರ್ನಾಟಕ ಸಹಿತ ಭಾರತದ 27 ರಾಜ್ಯಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವ್ಯಾಪಿಸಿ ಇತಿಹಾಸ ಸ್ರಷ್ಟಿಸಿದೆ.
ಭಾರತದ ಕಾಶ್ಮೀರದಲ್ಲಿ ಕೂಡಾ ಶೈಕ್ಷಣಿಕವಾಗಿ ಮತ್ತು ಧಾರ್ಮಿಕ ವಾಗಿ ಎಪಿ ವಿಭಾಗ ಸಂಚಲನ ಸ್ರಷ್ಟಿಸಿದೆ. ಅದೊಂದು ಉದಾಹರಣೆ ಮಾತ್ರ.
ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳಿಗೆ ಅಲ್ಲಿಗೆ ತಲುಪಲು ಸಾದ್ಯವಾಗಿಲ್ಲ.
ನಮ್ಮ ಉತ್ತರ ಕರ್ನಾಟಕದಲ್ಲಿ ಎಪಿ ವಿಭಾಗ ಮಾಡುತ್ತಿರುವ ಕ್ರಾಂತಿ ನೋಡಿ ಅಲ್ಲಿನ ನ್ಯಾಯವಾದಿಯೊಬ್ಬರು ಕಮಂಟ್ ಮಾಡಿದ್ದರು "ನಿಮ್ಮ ಎಸ್ಸೆಸ್ಸೆಫ್ ನವರು ಬಂದ ನಂತರ ನಮ್ಮ ನಾಡು ಬದಲಾಗಿದೆ"
ಇತ್ತೀಚೆಗಿನ ಪ್ರಳಯ ಬಂದಾಗಲೂ ಅತ್ತ ಕೊಡಗು ಮತ್ತು ಉತ್ತರಕರ್ನಾಟಕದ ಪ್ರಳಯಭಾದಿತ ಪ್ರದೇಶಗಳಿಗಳಿಗೆ ನಿರಂತರ ಸಂಪರ್ಕವಿಟ್ಟು ಸೇವೆ ಮಾಡಿದ್ದು ಕೂಡಾ ಎಪಿ ವಿಭಾಗದವರಾಗಿದ್ದಾರೆ.ಬೇರೆ ಯಾವ ಧಾರ್ಮಿಕ ಸಂಘಟನೆಗಳಿಗೆ ಅತ್ತಕಡೆ ದೊಡ್ಡ ಮಟ್ಟದ ಸೇವೆಗೆಯ್ಯಲು ಸಾದ್ಯವಾಗಲಿಲ್ಲ.
ಎರಡನೇಯದಾಗಿ ಸಮುದಾಯ ಸಬಲೀಕರಣದ ಹೊಸ ಹೊಸ ಮಜಲುಗಳನ್ನು ಮೊತ್ತಮೊದಲು ತೋರಿಸಿಕೊಡುವುದು ಎಪಿ ವಿಭಾಗವಾಗಿದೆ.
ನಂತರ ಹಲವರು ಅದನ್ನು ಅನುಕರಣೆ ಮಾಡುತ್ತಾರೆ ಆವಾಗ ಸಮುದಾಯ ಇನ್ನಷ್ಟು ಗಟ್ಟಿಯಾಗುತ್ತದೆ.
ಉದಾಹರಣೆಗೆ ನಮ್ಮ ಹೆಣ್ಮಕ್ಕಳು ಸಾಮಾನ್ಯವಾಗಿ ಆರು,ಏಳು ತರಗತಿ ಕಲಿತು ಮನೆಯಲ್ಲಿರುವುದು ರೂಡಿಯಾಗಿತ್ತು.ನಂತರ ಉನ್ನತಮಟ್ಟದ ವಿದ್ಯಾಭ್ಯಾಸ ಹೆಣ್ಣು ಮಕ್ಕಳಿಗೂ ಬೇಕೆಂಬ ಬೇಡಿಕೆ ವ್ಯಾಪಕವಾಗಿ ಕಾಲೇಜು ಮೆಟ್ಟಿಲುಗಳನ್ನು ಏರಲು ಆರಂಭಿಸಿದಾಗ ಧಾರ್ಮಿಕತೆ ಅವರಿಂದ ಮಾಯವಾಗ ತೊಡಗಿತು.ಇದಕ್ಕೆ ಪರಿಹಾರವಾಗಿ ನಮ್ಮ ದ.ಕ ದಲ್ಲಿ ಮೊತ್ತಮೊದಲ ಮಹಿಳಾ ಕಾಲೇಜು ಪುತ್ತೂರು ಕುಂಬ್ರದಲ್ಲಿ ಆರಂಭಿಸಿ ಎಪಿ ವಿಭಾಗ ಕ್ರಾಂತಿಮಾಡಿತು. ಅಂತಹ ಧಾರ್ಮಿಕ ಮತ್ತು ಲೌಕಿಕ ಮಹಿಳಾ ಕಾಲೇಜು ನಮಗೂ ಬೇಕೆಂದು ತಿಳಿಯಲು ಇತರರಿಗೆ ಬರೋಬ್ಬರಿ 20 ವರ್ಷ ಬೇಕಾಯಿತು!
ಅದೇ ನಾನು ಹೇಳಿದ್ದು ಎಪಿ ವಿಭಾಗದಲ್ಲಿರುವವರು ಬುಧ್ಧಿವಂತರು.ಅವರ ಚಿಂತನೆ ಏನೇ ಇದ್ದರೂ 100 ವರ್ಷದ ಆಚೆಗಿನ ಜನರೇಶನ್ ಕುರಿತಾಗಿರುತ್ತದೆ.
ನೀವೆ ನೋಡಿ ಮಹಲ್ಲ್ ಸ್ವಾಧೀನ, ರಾಜಕೀಯ ಪಕ್ಷದ ಬೆಂಬಲ, ಶ್ರೀಮಂತ ಉಮರಾಗಳ ಸಾಥ್ ಇದ್ಯಾವುದೂ ನಿರೀಕ್ಷಿಸಿದಷ್ಟು ಸಿಗದ ಎಪಿ ವಿಭಾಗ 'ಮರ್ಕಝ್ ನಾಲೆಡ್ಜ್ ಸಿಟಿ' ನಿರ್ಮಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು.
ಎಲ್ಲಾ ಸ್ವಾಧೀನವಿರುವ ಬೇರೆ ಯಾವುದೇ ಸಂಘಟನೆಗಳಿಗೆ ಇದು ಸಾದ್ಯವಾಗಿಲ್ಲ.
ಇನ್ನು ಇಪ್ಪತ್ತು ವರ್ಷದ ನಂತರ ಅವರು ಕೂಡಾ ಪ್ರಯತ್ನಿಸಬಹುದು.ಆವಾಗ ಎಪಿ ವಿಭಾಗ ಇನ್ನೊಂದು ಮಹಾ ಅಧ್ಬುತಕ್ಕೆ ಕೈ ಹಾಕಿರುತ್ತದೆ!
ಎಪಿ ವಿಭಾಗದ ಸಂಘಟನೆ ಸಟ್ಟಪ್ ಕೂಡಾ ಅಧ್ಬುತ!
ಕೇವಲ ಕೇರಳ ಕರ್ನಾಟಕ ಮಾತ್ರವಲ್ಲ ದೇಶದ 27 ರಾಜ್ಯಗಳಲ್ಲಿಯೂ ಅವರಿಗೆ ಸಂಘಟನೆ ಸಟ್ಟಪ್ ಇದೆ.ಅದರ ಕೊನೆಯ ಉದಾಹರಣೆಯಾಗಿದೆ ಇತ್ತೀಚೆಗೆ ನಡೆದ ಎಸ್ಸೆಸ್ಸೆಫ್ ನ ಭಾರತ ಯಾತ್ರೆ!
ಆ ಯಾತ್ರೆ ಹೋದ ಎಲ್ಲಾ ಕಡೆಗಳಲ್ಲಿ ವಿಜ್ರಂಭಣೆಯ ಸ್ವಾಗತ ಲಭಿಸಿತು.ಅಷ್ಟೇ ಜನಸಂದಣಿ ನೆರೆದಿತ್ತು.
ಇಂತಹ ಒಂದು ಶೈಕ್ಷಣಿಕ ಪ್ರಗತಿ ಭಾರತಯಾತ್ರೆಯನ್ನು ಎಪಿ ವಿಭಾಗದವರಿಗಲ್ಲದೆ ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳಿಗೆ ಮಾಡಲು ಸಾದ್ಯವಾಗಿಲ್ಲ.
ಎಲ್ಲಾ ಹೋಗಿ ಕೇರಳದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಮಾಡಿದ ಒಂದು ಯಾತ್ರೆ ಇತಿಹಾಸ ವಾಗಿತ್ತು.
ಅದು ಕೂಡಾ ಮಾಡಲು ಇತರರಿಗೆ ಸಾದ್ಯವಾಗಿಲ್ಲ ಕಾರಣ ಎಪಿ ವಿಭಾಗದ ಸಂಘಟನೆ ಸಟ್ಟಪ್ ಆ ರೀತಿ ಇದೆ.ಇನ್ನು ಇದನ್ನು ಅನುಕರಿಸಲು ಇತರರಿಗೆ ಹಲವಾರು ವರ್ಷಗಳೇ ಬೇಕಾಗ ಬಹುದು.ಆವಾಗ ಎಪಿ ವಿಭಾಗ ವಿಶ್ವ ಪರ್ಯಟನೆ ಮಾಡುತ್ತಿರಬಹುದು.
ಅದೇ ನಾನು ಹೇಳಿದ್ದು ಎಪಿ ವಿಭಾಗ ತುಂಬಾ ಫಾಸ್ಟ್' ಉಲಮಾಗಳ ಅವುಲಿಯಾಗಳ ಆಶೀರ್ವಾದದ ಬರಕತ್.
ಆಧುನಿಕತೆಯ ತುತ್ತತುದಿಗೇರಿ ಕಾರ್ಯಚರಿಸುತ್ತಿದ್ದರೂ ಆಧ್ಯಾತ್ಮಿಕತೆ ಅವರು ಕೈ ಬಿಟ್ಟಿಲ್ಲ!
ಇಷ್ಟೆಲ್ಲಾ ಅಧ್ಬುತ ಸ್ರಷ್ಟಿಸುವಾಗಲೂ ಧಾರ್ಮಿಕತೆ ಯ ಕಟ್ಟುಪಾಡು ಬಿಟ್ಟುಕೊಟ್ಟಿಲ್ಲ!
ಹಾಗಾಗಿ ಅವರನ್ನು 'ಆಧುನಿಕ ಪಝಂಜನ್ ಮೈಲಾರ್' ಎಂಬ ಹೆಸರಿನಲ್ಲಿ ಮೀಡಿಯಾಗಳು ಮೆನ್ಶನ್ ಮಾಡುತ್ತಿದೆ.
ಪಕ್ಷ ನೋಡದೆ ರಾಜಕೀಯ ನೇತಾರರನ್ನು ಯಾವ ರೀತಿ ಸಮುದಾಯ ಸಬಲೀಕರಣಕ್ಕೆ ಬಳಸಬೇಕೆಂದು ಕಲಿಸಿಕೊಟ್ಟದ್ದು ಎಪಿ ವಿಭಾಗವಾಗಿದೆ.ಅಂದು ಅದನ್ನು ವಿರೋಧಿಸಿದವರು ಇಂದು ಸಾಲು ಸಾಲಾಗಿ ಶಾಲು ಹಾಕಲು ಕ್ಯೂ ನಿಲ್ಲಬೇಕಾಯಿತು!
ಸೋಜಿಗವೇನಂದರೆ ನಕ್ವಿ,ನಳಿನ್ ಸಹಿತ ನಮಗಾಗದವರು ಅಧಿಕಾರಕ್ಕೆ ಬಂದರೆ ಅವರನ್ನು ಯಾವ ರೀತಿ ನೋಡಿಕೊಳ್ಳಬೇಕೆಂಬ ಬುಧ್ಧಿ ಹೊಳೆಯಲು ಇತರರಿಗೆ 30 ವರ್ಷ ಬೇಕಾಯಿತು!
ನಾಲೆಡ್ಜ್ ಸಿಟಿಗೆ ಐದು ಸೆಂಟ್ ಜಾಗ ಕೂಡಾ ಇಲ್ಲವೆಂದು ಪರಿಹಾಸ್ಯ ಮಾಡಿದವರು ಅದನ್ನೊಮ್ಮೆ ನೋಡಲು ಕಾತರದಿಂದ ಕಾಯುವಂತಾಯಿತು!
ಶಹರೇ ಮುಬಾರಕ್ ಮಸೀದಿ ಯ ಹೆಸರಲ್ಲಿ ಎಪಿ ವಿಭಾಗ 40 ಕೋಟಿ ಗುಳುಂ ಮಾಡಿತೆಂದು ಸಾರಿ ಪಾಣಕ್ಕಾಡ್ ಸಯ್ಯದ್ ನೀಡಿದ ಸಾವಿರ ರೂಪಾಯಿ ಮರಳಿಸಬೇಕೆಂದು ಪಟ್ಟು ಹಿಡಿದವರು ಆ ಮಸೀದಿ ಕಾಮಗಾರಿಗೆ ನೋಡಿ ಮೂಗಿಗೆ ಬೆರಳಿಟ್ಟರು!
ಹೌದು ಎಪಿ ವಿಭಾಗದಲ್ಲಿರುವವರು ಬುಧ್ಧವಂತರು ಪ್ರಗತಪರರು,ಉಲಮಾಗಳ ಅವುಲಿಯಾಗಳ ಆಶೀರ್ವಾದ ದೊಂದಿಗೆ ಮುನ್ನಡೆಯುವವರು.ಅವರು ನಿಮಗೆ ಬಾಯಲ್ಲಿ ಉತ್ತರಿಸಲ್ಲ. ಮಾಡಿತೋರಿಸುವರು.ಅವರು ನಿಂತ ನೀರಲ್ಲ ಮತ್ತೂ ಮುಂದುವರೆಯುವರು.
ಅಪಹಾಸ್ಯ,ನಿಂದನೆಗಳಿಗೆ ಉತ್ತರಿಸಲು ಅವರಿಗೆ ಸಮಯವಾದರೂ ಎಲ್ಲಿ?
ಇದೀಗ ಕರ್ನಾಟಕ ಮುಸ್ಲಿಂ ಜಮಾತ್ ರಚನೆಯಾಗಿದೆ. ಉತ್ತರ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಅದು ಬೇರೂರಿಯಾಗಿದೆ.
ದ.ಕ ಸಮಿತಿ ಕೂಡಾ ಯಾನೆಪೋಯ ಸರ್,ರಶೀದ್ ಹಾಜಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇನ್ನು ಬಂಟ್ವಾಳ, ಪುತ್ತೂರು ಸಹಿತ ಅಲ್ಲಲ್ಲಿ ತಾಲೂಕ್ ಸಮಿತಿ ರಚನೆಯಾಗಲಿದೆ.
ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಇನ್ಶಾಅಲ್ಲಾ ನಾಳೆ (ಶನಿವಾರ) ಬೆಳಿಗ್ಗೆ 10 ಗಂಟೆಗೆ ರಚನೆಯಾಗಲಿದೆ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ.
ಸಮುದಾಯ ಸಬಲೀಕರಣಕ್ಕಾಗಿ ದೊಡ್ಠಮಟ್ಟದ ಕ್ರಾಂತಿ ಈ ಮೂಲಕ ನಡೆಯಲಿದೆ.
ನಡೆಯಬಹುದಾ? ಎಂದು ಸಂಶಯ ಯಾರಿಗೂ ಬೇಡ.
ಎಪಿ ವಿಭಾಗ ಮುಟ್ಟಿದೆಲ್ಲವೂ ಚಿನ್ನವಾಗಿದೆ.ಕಾರಣ ಅವರು ಈಗಿನ ಜನರೇಶನ್ ಸಹಿತ ಮುಂದಿನ ಹಲವಾರು ವರ್ಷಗಳ ಜನರೇಶನ್ ಮನದಲ್ಲಿಟ್ಟು ಕಾರ್ಯಚರಿಸುತ್ತಾರೆ.
ಇದರಲ್ಲಿ ಯಾರೂ ಗ್ರೂಪಿಸಂ ತರಬೇಡಿ.ಸಮುದಾಯಕ್ಕಾಗಿ ಪಕ್ವತೆಯೊಂದಿಗೆ ಕಾರ್ಯಚರಿಸುವ ಇರಾದೆ ಇರುವವರು ಸಾಥ್ ಕೊಡಬಹುದು.ಅದಲ್ಲ ಇನ್ನೂ ಕೂಡಾ ಗ್ರೂಪಿಸಂ ಅಮಲಿನಲ್ಲೇ ಇದ್ದೂ ಪರಿಹಾಸ್ಯ, ಸುಳ್ಳು ಹೇಳುತ್ತಾ ಇದ್ದರೆ ನಿಮಗೆ ಉತ್ತರಿಸಲು ಎಪಿ ವಿಭಾಗಕ್ಕೆ ಸಮಯ ಇಲ್ಲ.
ನಿಮಗೆ ನಿಮ್ಮ ಪಾಡು,ನಮಗೆ ನಮ್ಮದು,
ನಾಲೆಡ್ಜ್ ಸಿಟಿ, ಶಅರೇ ಮುಬಾರಕ್ ಮಸೀದಿ ತಲೆ ಎತ್ತುವಾಗ ಯಾರದೋ ಚಾಡಿ ಕೇಳಿ ಅದರ ವಿರುಧ್ಧ ಮಾತನಾಡಿದವರು ಇಂದು ಖೇದಿಸುವ ಹಾಗೆ ಮುಂದೊಂದು ದಿನ 'ಕರ್ನಾಟಕ ಮುಸ್ಲಿಂ ಜಮಾಅತ್' ಸ್ಪಷ್ಟ ಗುರಿಯೊಂದಿಗೆ ಬೆಳಕು ಚೆಲ್ಲಿ ನಿಲ್ಲುವಾಗ 'ನಾನು ಅವಕಾಶ ವಂಚಿತನಾದೆ' ಎಂದು ಗೋಗೆರದು ಫಲವಿಲ್ಲ.
ಚಿಂತಿಸಿ ಕಾರ್ಯಚರಿಸಿರಿ......
ಅಬೂಶಝ
27/9/2019
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Friday, September 27, 2019
Subscribe to:
Post Comments (Atom)
No comments:
Post a Comment