*ನೂತನವಾದಿಗಳೊಂದಿಗಿನ ಐಕ್ಯತೆ ವಿಷಯದಲ್ಲಿ ಎಪಿ ಉಸ್ತಾದರ ನಿಲುವು, ಅಂದೂ ಇಂದೂ ಎಂದೂ ಒಂದೇ ಆಗಿದೆ.!*
ಕಾಶ್ಮೀರದ ಬಗ್ಗೆಗಿನ ಎಪಿ ಉಸ್ತಾದರ ಹೇಳಿಕೆಯನ್ನು ಅಪಾರ್ಥ ಕಲ್ಪಿಸಿ, ಕಾಶ್ಮೀರ ವಿಷಯದಲ್ಲಿ ಸುನ್ನೀ ಸಲಪಿ ಜಮಾಹತ್ ಎಲ್ಲಾ ಒಂದಾಗಿ ಹೋರಾಡಬೇಕು ಎಂದು ಎಪಿ ಉಸ್ತಾದ್ ಕರೆಕೊಟ್ಟರೆಂಬಂತೆ ಕೆಲವರು ಪ್ರಚಾರ ಮಾಡುತ್ತಿದ್ದಾರೆ.
ಎಪಿ ಉಸ್ತಾದ್ ಹೇಳಿದ್ದೇನೆಂದರೆ: ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಕೊನೆಗಾಣಿಸಬೇಕು ಎಂಬ ವಿಷಯದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಧರ್ಮದ ವ್ಯತ್ಯಾಸವಿಲ್ಲದೆ, ಸುನ್ನೀ, ಮುಜಾಹಿದ್, ತಬ್ಲೀಗ್ ಎಂಬ ಪಂಗಡಗಳ ವ್ಯತ್ಯಾಸವಿಲ್ಲದೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ರಾಜಕೀಯ ವ್ಯತ್ಯಾಸವಿಲ್ಲದೆ ಎಲ್ಲರೂ ಒಂದೇ ಶಬ್ದದಲ್ಲಿ ಮನವಿಮಾಡುತ್ತಿದ್ದಾರೆ ಎಂದಾಗಿದೆ ಎಪಿ ಉಸ್ತಾದ್ ಹೇಳಿದ್ದು.
ಕಾಶ್ಮೀರದ ವಿಷಯದಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ ಆಗಿದೆ. ಅದಲ್ಲದೇ, ಸಲಪಿ ಜಮಾಹತ್ ನವರ ಅಭಿಪ್ರಾಯ ವ್ಯತಿರಿಕ್ತವಾಗಿದೆ ಎಂಬ ವಾದ ಸುನ್ನಿಗಳ್ಯಾರಿಗೂ ಇಲ್ಲ. ಎಪಿ ಉಸ್ತಾದರ ಭಾಷಣದ ತಾತ್ಪರ್ಯ ಕೂಡಾ ಅದೇ ಆಗಿದೆ.
ಕೆಲವರ ವಾದದಂತೆ, ಎಪಿ ಉಸ್ತಾದರ ಭಾಷಣವನ್ನು ಸುನ್ನೀ ಸಲಪಿ ಜಮಾಹತ್ ಐಕ್ಯತೆಗೆ ಕರೆಕೊಟ್ಟರೆಂಬಂತೆ ವ್ಯಾಖ್ಯಾನಿಸುವುದಾದರೆ, ಎಪಿ ಉಸ್ತಾದ್ ತನ್ನ ಭಾಷಣದಲ್ಲಿ ಸಲಪಿ ತಬ್ಲೀಗ್ ನವರನ್ನು ಹೆಸರಿಸಿದಂತೆ, ಹಿಂದೂ ಕ್ರಿಶ್ಚಿಯನ್ ನವರನ್ನೂ, ಅದೇ ರೀತಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನವರನ್ನೂ ಹೆಸರಿಸಿದ್ದಾರೆ. ಎಪಿ ಉಸ್ತಾದರ ಭಾಷಣವನ್ನು ಅಪಾರ್ಥ ಕಲ್ಪಿಸಿ ಪ್ರಚಾರ ಮಾಡುತ್ತಿರುವವರು, ಈ ಅಂಶವನ್ನು ತಮ್ಮ ಪ್ರಚಾರದಿಂದ ಕೈ ಬಿಟ್ಟಿದ್ದಾರೆಂದರೆ, ಎಪಿ ಉಸ್ತಾದರ ಭಾಷಣಕ್ಕೂ, ಕೆಲವರು ಮಾಡುತ್ತಿರುವ ಅಪಪ್ರಚಾರಕ್ಕೂ ಯಾವುದೇ ಬಂಧ ಇಲ್ಲವೆಂದು ಅರ್ಥೈಸಬಹುದು.
ಸುನ್ನೀ ಸಲಪಿ ಜಮಾಹತ್ ಎಲ್ಲಾ ಒಂದಾಗಿ ಆಯೋಜಿಸುವ ಕಾರ್ಯಕ್ರಮ, ಪ್ರತಿಭಟನೆಯನ್ನು ಎಪಿ ಉಸ್ತಾದ್ ಅಂದೂ ವಿರೋಧಿಸಿದ್ದಾರೆ, ಇಂದೂ ಎಂದೂ ಅದನ್ನು ವಿರೋಧಿಸುತ್ತಾರೆ. ಕಾರಣ, ಅಂತಹ ಒಂದು ಐಕ್ಯತೆ ಅದು ಇಸ್ಲಾಮಿಕವಲ್ಲ. ಇಸ್ಲಾಮಿಕವಲ್ಲದ ಒಂದು ಕಾರ್ಯವನ್ನು ಎಪಿ ಉಸ್ತಾದ್ ಪ್ರೋತ್ಸಾಹಿಸುತ್ತಾರೆಂದು ಯಾರೂ ಹಗಲು ಕನಸು ಕಾಣಬೇಡಿ ಎಂದಷ್ಟೇ ನಮಗೆ ಹೇಳಲಿಕ್ಕಿರುವುದು.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment