ಟೋಪಿ ಧರಿಸುವುದು/ತಲೆ ಕಟ್ಟು ಕಟ್ಟುವುದು, ಗಡ್ಡ ಬಿಡುವುದು ಪ್ರವಾದಿ ﷺ ರವರ (ಸುನ್ನತ್) ಚರ್ಯೆಯಾಗಿದೆ.
ಪ್ರವಾದಿ ﷺ ರವರನ್ನು ಅನುಸರಿಸುವ ಸತ್ಯ ವಿಶ್ವಾಸಿಗಳು, ಅಂದಿನಿಂದ ಇಂದಿನವರೆಗೂ ಆ ಪ್ರವಾದಿ ﷺ ರ ಚರ್ಯೆಯಾದ ತಲೆ ಕಟ್ಟು ಕಟ್ಟುವುದನ್ನು, ಗಡ್ಡ ಬಿಡುವಂತಹ ಸುನ್ನತ್ ಆದ ಕಾರ್ಯವನ್ನು ಅನುಸರಿಸುತ್ತಾ ಬಂದವರಾಗಿದ್ದಾರೆ.
ಅದು ಇಂದು ನಿನ್ನೆ ಪ್ರಾರಂಭವಾದುದಲ್ಲ.
ನಾವು ಅರಿತಂತೆ, ನಮ್ಮ ಪೂರ್ವಿಕ ಉಲಮಾಗಳು ನೂರಾರು ವರ್ಷಗಳಿಂದ ಎಲ್ಲಾ ಸಂದರ್ಭದಲ್ಲೂ ತಲೆ ಕಟ್ಟು ಕಟ್ಟುವುದನ್ನು, ಗಡ್ಡ ಬಿಡುವುದನ್ನು ನಾವು ಕಂಡವರಾಗಿದ್ದೇವೆ. ಅವರಿಗೆ ಯಾವ ಸಂದರ್ಭದಲ್ಲೂ ತಮ್ಮ ತಲೆ ಕಟ್ಟು ಕಟ್ಟುವಿಕೆಗೆ, ಗಡ್ಡ ಬಿಡುವಿಕೆಗೆ ತೊಡಕಾಗಿ ಪರಿಣಮಿಸಿದ ಸಂದರ್ಭಗಳಿಲ್ಲ. ಅದಕ್ಕೆ ಬಹುಮುಖ್ಯ ಕಾರಣ, ಇಲ್ಲಿನ ಸೌಹಾರ್ದ ಬಯಸುವ ಬಹುಸಂಖ್ಯಾತ ಹಿಂದೂ ಸಹೋದರರು ಅಂದರೆ ತಪ್ಪಾಗಲಾರದು.
ನಾವಂತೂ, ಟೋಪಿ ಧರಿಸುವುದು, ಗಡ್ಡ ಬಿಡುವುದು ಸುನ್ನತ್ ಎಂದು ಮದರಸದಲ್ಲಿ ಕಲಿತಂದಿನಿಂದ ಇಂದಿನವರೆಗೂ ಟೋಪಿ ಧರಿಸುತ್ತಾ ಬರುತ್ತಿದ್ದೇವೆ. ಅದೇ ರೀತಿ ಗಡ್ಡವನ್ನು ಕೂಡಾ.
ಅದಲ್ಲದೆ, ಹತ್ತದಿನೈದು ವರ್ಷಗಳ ಮುಂಚೆ ಇಲ್ಲಿ ಹುಟ್ಟಿದ ಯಾವುದೋ ಒಂದು ಸಂಘಟನೆಯ ಕಾರಣದಿಂದಲ್ಲ ನಾವು ಮತ್ತು ನಮ್ಮ ಉಲಮಾಗಳು ಟೋಪಿ ಹಾಕಲು ಮತ್ತು ಗಡ್ಡ ಬಿಡಲು ಪ್ರಾರಂಭಿಸಿದ್ದು.
*ತಲೆಗೆ ಸರಿಯಾಗಿ ಟೋಪಿ ಧರಿಸದವರು, ಗಡ್ಡ ಬಿಡದವರು ಕೂಡಾ, ನೂರಾರು ವರ್ಷಗಳಿಂದ ಗಡ್ಡ, ತಲೆ ಕಟ್ಟು ಕಟ್ಟುತ್ತಾ ಬಂದವರ, ಕಾರ್ಯವನ್ನು ತಮ್ಮ ಸಾಧನೆ ಎಂದು ಬೀಗುವುದು, ಶತಮಾನ ಕಂಡ ಮಹಾ ಜೋಕ್ ಅಲ್ಲದೆ ಇನ್ನೇನೂ ಅಲ್ಲ.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment