*ಬ್ಲಡ್ ಸೈಬೋ: ಬನ್ನಿ ಭಾಗವಹಿಸಿ, ಯಶಸ್ವಿಗೊಳಿಸಿ.*
💧💧💧💧💧💧💧
✍ _ಗಫೂರ್ ಬಾಯಾರ್_
**********************
ಹದಿಹರೆಯದಲ್ಲಿ ಮುಸ್ಲಿಂ ಯುವ ಸಮೂಹ ದಾರಿ ತಪ್ಪದೆ ಸುನ್ನತ್ ಜಮಾಅತಿನ ತತ್ವ ಮತ್ತು ಆದರ್ಶಗಳನ್ನು ಪಾಲಿಸುತ್ತಾ ದೀನೀ ಚೌಕಟ್ಟಿನಲ್ಲಿ ಬದುಕು ಸಾಗಿಸಲು ಪ್ರೇೂತ್ಸಾಹ ನೀಡುವ ಹೆಮ್ಮೆಯ ಸಂಘಟನೆಯಾಗಿದೆ ಎಸ್ಸೆಸ್ಸೆಫ್.
ಸುಲ್ತಾನುಲ್ ಉಲಮಾ ಕಾಂತಾಪುರಂ ಎ.ಪಿ. ಉಸ್ತಾದ್ ಎಂಬ ಮಹಾನ್ ಸೂಫಿವರ್ಯರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಭಾರತದಾದ್ಯಂತ ಮನೆಮಾತಾಗಿರುವುದಷ್ಟೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲೂ ದೀನೀ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ.
ತನ್ನ ಸೇವೆಯನ್ನು ಧಾರ್ಮಿಕ ರಂಗಕ್ಕಷ್ಟೇ ಸೀಮಿತವಾಗಿಸದ ಎಸ್ಸೆಸ್ಸೆಫ್, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲೂ ತನ್ನ ಛಾಪು ಮೂಡಿಸಿರುವುದಷ್ಟೇ ಅಲ್ಲದೆ ಭಾರತದ ಬಹುತೇಕ ಕಡೆ ಮಸೀದಿ, ಆಸ್ಪತ್ರೆ, ಶಾಲೆ, ಕಾಲೇಜು, ಯತೀಂಖಾನ ಮುಂತಾದ ಸ್ಥಳಗಳಲ್ಲಿ ಸಮಾಜ ಸೇವೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ನಿಜಕ್ಕೂ ಶ್ಲಾಘನೀಯ.
ಜೀವಕಾರುಣ್ಯ ಸೇವೆಯಲ್ಲಿ ಯಾವತ್ತೂ ಮುಂಚೂಣಿಯಲ್ಲಿರುವ ಎಸ್.ಎಸ್.ಎಫ್ ಸಂಘಟನೆ, ಅಪಘಾತ, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭಗಳಲ್ಲಿ ಮನುಷ್ಯನ ಜೀವ ಉಳಿಸಲು ರಕ್ತದ ಅಗತ್ಯತೆಯನ್ನು ಮನಗಂಡು 2017 ರಲ್ಲಿ ರಕ್ತದಾನ ಶಿಬಿರವನ್ನು ಆರಂಭಿಸಿ ರಕ್ತದಾನಿಗಳಿಂದ ರಕ್ತ ಸಂಗ್ರಹಿಸುವ ಯೇೂಜನೆಯ್ನೂ ಆರಂಭಿಸಿತು.
2017 ರ ಜುಲೈ 14 ರಂದು ಅಧಿಕೃತವಾದ ಆರಂಭವಾದ ಎಸ್ಸೆಸ್ಸೆಫ್ ರಕ್ತದಾನ ಶಿಬಿರವು ಕೇವಲ ಎರಡು ವರ್ಷಗಳಲ್ಲಿ 7013 ಯುನಿಟ್ ರಕ್ತ ಸಂಗ್ರಹಿಸಿ ತುರ್ತು ಸಮಯದಲ್ಲಿ ರಕ್ತದ ಅಗತ್ಯತೆಯಿದ್ದ ರೇೂಗಿಗಳಿಗೆ ನೀಡಿ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ.
ಒಂದೇ ದಿನದಲ್ಲಿ ಆರು ಕಡೆ ರಕ್ತದಾನ ಶಿಬಿರ ಆಯೇೂಜಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಎಸ್ಸೆಸ್ಸೆಫ್, ಕೇವಲ ಒಂದೇ ಶಿಬಿರದಲ್ಲಿ 150ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಿದೆ. ಮಾತ್ರವಲ್ಲ ಒಂದೇ ತಿಂಗಳಿನಲ್ಲಿ 18 ರಕ್ತದಾನ ಶಿಬಿರಗಳನ್ನು ಆಯೋಜಿಸಿ 1078 ದಾನಿಗಳಿಂದ ರಕ್ತ ಸಂಗ್ರಹಿಸಿ ಅಪರೂಪದ ದಾಖಲೆ ನಿರ್ಮಿಸಿದೆ.
*ಈ ತನಕ ಅಂದರೆ ಎರಡು ವರ್ಷಗಳಲ್ಲಿ 99 ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ದ.ಕ ಜಿಲ್ಲಾ ಎಸ್ಎಸ್ಎಫ್, ತನ್ನ ನೂರನೇ ರಕ್ತದಾನ ಶಿಬಿರವನ್ನು (ಮಂಗಳೂರಿನ 5 ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ "ಬ್ಲಡ್ ಸೈಬೋ" ಎಂಬ ಹೆಸರಿನಲ್ಲಿ) ಮಂಗಳೂರಿನಲ್ಲಿ ನಾಳೆ (ಆಗಸ್ಟ್ 18) ಹಮ್ಮಿಕೊಂಡಿದೆ.*
ಜಾತಿಮತ ಭೇದವಿಲ್ಲದೆ ಮನುಷ್ಯನ ಅತ್ಯಮೂಲ್ಯವಾದ ಜೀವ ಉಳಿಸಲು ಎಸ್.ಎಸ್.ಎಫ್ ಆಯೋಜಿಸಿರುವ ಈ ರಕ್ತದಾನ ಶಿಬಿರದಲ್ಲಿ ನಾವೆಲ್ಲರೂ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಎಸ್ಸೆಸ್ಸೆಫ್‌ನ ನೂರನೇ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸೋಣ.
ಇನ್ ಷಾ ಅಲ್ಲಾಹ್
💐💐💐💐💐💐💐
No comments:
Post a Comment