*SSF ಎಂಬ ಸಂಘಟನೆಯಿಂದ ಯಾರೆಲ್ಲಾ ಯಾಕ್ಯಾಕೆ ಹೊರ ಹೋಗಿದ್ದಾರೆ ಎಂಬುದಕ್ಕಿಂತಲೂ, SSF ನಲ್ಲಿ ಯಾರೆಲ್ಲಾ ಇದ್ದಾರೆ, ಯಾಕಿದ್ದಾರೆ, SSF ಅನ್ನು ಯಾರೆಲ್ಲಾ ಅಂಗೀಕರಿಸುತ್ತಾರೆಂಬುದು ಮುಖ್ಯವಾಗಿದೆ.*
ಸೈಯ್ಯಿದ್ ಕುಟುಂಬಸ್ತರೂ, ಉನ್ನತ ವಿದ್ವಾಂಸರೂ ತನ್ನ ಹಯಾತ್ ಕಾಲದಲ್ಲೂ ಮರಣಾ ನಂತರವೂ ಹಲವಾರು ಕರಾಮತ್'ಗಳ ಒಡೆಯ ತಾಜುಲ್ ಉಲಮಾ (ಖ:ಸಿ), ವಿನಯದ ಪ್ರತೀಕವಾಗಿದ್ದ, ತನ್ನ ಜೀವಿತ ಕಾಲದಲ್ಲಿ ಯಾರ ಬಗ್ಗೆಯೂ ವಿಮರ್ಶಿಸದ ಉಲಮಾ ಪ್ರಕಾಶ ಎಂ.ಎ ಉಸ್ತಾದ್ (ಖ:ಸಿ), ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ಆಶಿರ್ವದಿಸುತ್ತಾ ಹುರಿದುಂಬಿಸುತ್ತಿದ್ದ ವಲಿಯ್ಯುಲ್ಲಾಹಿ ಸಿ.ಎಂ. ಮಡವೂರ್ (ಖ:ಸಿ). ಅವೇಲತ್ತ್ ಸಾದತ್ತುಗಳು (ಖ:ಸಿ) ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್ (ಖ:ಸಿ) , ವಲಿಯುಲ್ಲಾಹಿ ಕುಂಡೂರ್ ಉಸ್ತಾದ್ (ಖ:ಸಿ), ಪೊಸೋಟ್ ತಂಙಳ್ (ಖ:ಸಿ), ಈ.ಕೆ. ಹಸ್ಸನ್ ಮುಸ್ಲಿಯಾರ್ (ಖ:ಸಿ) ಕೂರಾ ತಂಙಳ್, ಬಾಯಾರ್ ತಂಗಳ್ ಜಗತ್ತಲ್ಲೇ ಸರಿಸಾಟಿ ಇಲ್ಲದ ಉಲಮಾ ನಾಯಕ, ಅನಾಥ ನಿರ್ಗತಿಕರ ಪಾಲಕ, ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಅದೇ ರೀತಿ ಅನೇಕ ಉಲಮಾಗಳು, ಸಾವಿರಾರು ಸೈಯ್ಯಿದ್-ಸಾದಾತುಗಳು, ವಲಿಯ್ಯ್'ಗಳು ನೇತೃತ್ವಕೊಡುವ ಪ್ರಮುಖ ಸಂಘಟನೆಯಾಗಿದೆ *SSF.*
ವಿಶ್ವ ಶ್ರೇಷ್ಠ ಉಲಮಾ ನಾಯಕರುಗಳಾದ ಅಬ್ಬಾಸ್ ಅಲವೀ ಮಾಲಿಕಿ ಮಕ್ಕ (ಖ:ಸಿ), ಉಮರ್ ಅಲ್ ಕಾಮಿಲ್ (ಖ:ಸಿ), ಶೈಕ್ ಶದ್ದಾದ್ (ರ), ಶೈಕ್ ಸ್ವಬಾಹುರ್ರಿಫಾಹಿ, ಸೈಯ್ಯದ್ ಜಿಫ್ರೀ ತಂಙಳ್ (ಖ:ಸಿ), ಸೇರಿದಂತೆ ವಿಶ್ವದ ಎಲ್ಲಾ ಪ್ರಮುಖ ಉಲಮಾ ಸಾದಾತುಗಳು ಎಪಿ ಉಸ್ತಾದ್ ಮತ್ತು ಎಪಿ ಉಸ್ತಾದ್ ನೇತೃತ್ವ ಕೊಡುವ *SSF* ನಂತಹ ಸಂಘಟನೆಯನ್ನೂ ಬೆಂಬಲಿಸುತ್ತಾರೆ.
ವರಕ್ಕಲ್ ಮುಲ್ಲಕೋಯ ತಂಙಳ್ (ರ) ಸ್ತಾಪಿತ ಸಮಸ್ತದ ಲಕ್ಷ್ಯದೊಂದಿಗೆ ಮುನ್ನಡೆಯುತ್ತಿರುವ, ಕನ್ನಿಯತ್ ಉಸ್ತಾದ್ (ಖ:ಸಿ), ಶಂಸುಲ್ ಉಲಮಾ (ಖ:ಸಿ), ತಾಜುಲ್ ಉಲಮಾ (ಖ:ಸಿ), ನೂರುಲ್ ಉಲಮಾ (ಖ:ಸಿ) ನೇತೃತ್ವ ಕೊಟ್ಟಂತಹ, ಈಗ ಸುಲೈಮಾನ್ ಉಸ್ತಾದ್ ಹಾಗೂ ಎಪಿ ಉಸ್ತಾದ್ ನೇತೃತ್ವ ಕೊಡುತ್ತಿರುವ ಸಮಸ್ತ ಕೇರಳ ಸುನ್ನಿ ಜಮ್ಹಿಯ್ಯತುಲ್ ಉಲಮಾ, ಭಾರತ ದೇಶದ ವಿವಿಧ ರಾಜ್ಯಗಳ ಸುನ್ನೀ ಉಲಮಾಗಳನ್ನೊಳಗೊಂಡ ಒಕ್ಕೂಟವಾದ ಅಖಿಲ ಭಾರತ ಸುನ್ನೀ ಜಮ್ಹಿಯ್ಯತುಲ್ ಉಲಮಾ ಹಾಗೂ ವಿಶ್ವ ಸುನ್ನಿ ಉಲಮಾ ಒಕ್ಕೂಟ ಕೂಡಾ *SSF* ಅನ್ನು ಅಂಗೀಕರಿಸುತ್ತದೆ.
"ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ನಾಳೆ ಮಹ್ಷರಾದಲ್ಲಿ ಹರ್ಷ್ ನ ನೆರಳು ಇದೆ" ಎಂದು ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ (ಖ:ಸಿ) ಯವರಿಂದ ಆಶೀರ್ವದಿಸಲ್ಪಟ್ಟ ಏಕೈಕ ಸಂಘಟನೆ ಅದು *SSF* ಮಾತ್ರ್ರವಾಗಿದೆ.
ಸುನ್ನೀ ಸಂಘಟನೆಯ ನಾಯಕರಾಗಿದ್ದ ಪಾನಕ್ಕಾಡ್ ಪೂಕೋಯ ತಂಙಳ್ (ಖ:ಸಿ) ವಫಾತ್ ಆದಾಗ ಸಂಘಟನೆಗೆ ಯೋಗ್ಯ ಅರ್ಹ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಅಂದಿನ ಉಲಮಾ ದಿಗ್ಗಜರುಗಳಾದ ವಲಿಯುಲ್ಲಾಹಿ ಚಾಪರಂಗಾಡಿ ಭಾಪು ಮುಸ್ಲಿಯಾರ್ (ಖ:ಸಿ), ಕನ್ನಿಯತ್ ಉಸ್ತಾದ್ (ಖ:ಸಿ), ಶಂಸುಲ್ ಉಲಮಾ ಇ ಕೆ ಉಸ್ತಾದ್ (ಖ:ಸಿ) ಮುಂತಾದ ಉಲಮಾ ನಾಯಕರುಗಳು ಸಭೆ ಸೇರಿದರು. ಓರ್ವ ಯೋಗ್ಯ ಅರ್ಹ ನಾಯಕನ ಆಯ್ಕೆಯ ಅಧಿಕಾರವನ್ನು , ಶಂಸುಲ್ ಉಲಮಾ (ಖ:ಸಿ), ಕನ್ನಿಯತ್ ಉಸ್ತಾದ್ (ಖ:ಸಿ) ಸಹಿತವಿರುವ ಎಲ್ಲಾ ಉಲಮಾಗಳು ಬಹುಮಾನ್ಯರಾದ ವಲಿಯುಲ್ಲಾಹಿ ಚಾಪರಂಗಾಡಿ ಭಾಪು ಮುಸ್ಲಿಯಾರ್ (ಖ:ಸಿ) ಗೆ ಕೊಟ್ಟಾಗ, ಬಹುಮಾನ್ಯರಾದ ವಲಿಯ್ಯ್ ರವರು ಸೂಚಿಸಿದ ಆ ಮಹಾ ನಾಯಕನಾರು ಗೊತ್ತೇ? ಅಂದು ಕೇವಲ ಮೂವತ್ತರ ಹರೆಯದ ಶೈಖುನಾ ಶೈಖುಝ್ಝಮಾನ್ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಆಗಿದ್ದರು. ಸುನ್ನೀ *ಸಂಘ ಶಕ್ತಿಗಳಿಗೆ ನಾಯಕನಾಗಲು ಅರ್ಹ ವ್ಯಕ್ಕಿ* ಎಂದು ವಲಿಯ್ಯವರ ಪವಿತ್ರ ನಾಲಗೆಯಿಂದ ಸೂಚಿಸಲ್ಪಟ್ಟ ಬಹುಮಾನ್ಯರಾದ ಎಪಿ ಉಸ್ತಾದ್ ಅಂದಿನಿಂದ ಇಂದಿನವರೆಗೂ ನೇತೃತ್ವ ಕೊಡುತ್ತಿರುವ ಯುವ ಸಂಘಟನೆಯಾಗಿದೆ *SSF*.
ಈಜಿಫ್ಟ್ ನ ಅಝ್ಹರಿಯಾ ಕಾಲೇಜು, ಮಲೇಶ್ಯದ ಶರಿಯತ್ ಕಾಲೇಜು, ಯುಪಿಯ ಅಮ್ಜದಿ ಕಾಲೇಜು, ಉತ್ತರ ಭಾರತದ ನಯೀಮಿ ಕಾಲೇಜು, ರಝಾ ಕಾಲೇಜು, ವೆಲ್ಲೂರು ಬಾಖಿಯಾತ್ ಕಾಲೇಜು, ಮರ್ಕಝ್, ಸಹದಿಯಾ, ಮದನಿ, ಝುಹ್ರಿ, ಅಹ್ಸನಿ ಸೇರಿದಂತೆ ದೇಶದ ಬಹುತೇಕ ಎಲ್ಲಾ ರಾಜ್ಯಗಳ ಹಾಗೂ ವಿದೇಶಗಳ ಎಲ್ಲಾ ಶರಿಯತ್ ಕಾಲೇಜುಗಳಲ್ಲಿ *SSF* ಗೆ ಪ್ರವೇಶಾವಕಾಶವಿದೆ.
ದೇಶ-ವಿದೇಶಗಳ ಪ್ರಗಲ್ಭ ಉಲಮಾಗಳು, ಸೈಯ್ಯಿದ್-ಸಾದಾತುಗಳು, ವಲಿಯ್ಯ್ ಗಳ ನೇತೃತ್ವದಡಿ ಮುನ್ನಡೆಯುತ್ತಿರುವ *SSF* ಎಂಬ ಅತ್ಯದ್ಭುತ ಸಂಘಟನೆಯಲ್ಲಿ ಕಾರ್ಯಕರ್ತರಾಗುವ ಅವಕಾಶ ಸಿಕ್ಕಿರುವುದೇ ನಮ್ಮ ಸೌಭಾಗ್ಯ.. ಅಲ್ಲಾಹು ಅಂತ್ಯ ದಿನದವರೆಗೂ ನೆಲೆಗೊಳಿಸಲಿ.. ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment