*ಆತ್ಮಹತ್ಯಾ ದಾಳಿಕೋರರಿಗೆ "ಖುರ್ಆನ್ ಪ್ರಚೋದನೆ" ಎಂದ ಚಕ್ರವರ್ತಿ ಸೂಲಿಬೆಲೆ ಯವರಿಗೊಂದು ಬಹಿರಂಗ ಪತ್ರ..*
✍🏽 *ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಪುಲ್ವಾಮ ದಲ್ಲಿ ಸೈನಿಕರ ಮೇಲೆ ನಡೆದ ಆತ್ಮಹತ್ಯಾ ದಾಳಿಯನ್ನು ಪ್ರತಿಯೊಬ್ಬ ಮನುಷ್ಯ ಕೂಡಾ ಕಂಡಿಸಬೇಕಾದದ್ದೇ. ಅದರೊಂದಿಗೆ, ಆ ದಾಳಿಗೆ ಕಾರಣವಾಗಿ *ಖುರ್ಆನ್* ನನ್ನು ಎಳೆದುತಂದ ಚಕ್ರವರ್ತಿ ಸೂಲಿಬೆಲೆ ಯವರ ಆರೋಪವನ್ನು ಕೂಡಾ ನಾವು ಕಠಿಣವಾದ ಭಾಷೆಯಲ್ಲಿ ಕಂಡಿಸುತ್ತೇವೆ.
(ಚಕ್ರವರ್ತಿ ಯವರ ಭಾಷಣದ ಲಿಂಕ್, 1:40 ರಿಂದ, 2:20 ರೊಳಗೆ ಈ ವಿಷಯ ಇದೆ.
https://youtu.be/PfmSciFnwDo)
*ಚಕ್ರವರ್ತಿ ಸೂಲಿಬೆಲೆ ಯವರೇ,*
ಭಯೋತ್ಪಾದಕರಿಗೆ ಖುರ್ಆನ್ ನನ್ನು ಮೇಲಿಂದ ಮೇಲೆ ಓದಿ ಕೇಳಿಸಿ ಆತ್ಮಹತ್ಯಾ ದಾಳಿಯನ್ನು ಮಾಡಲು ಪ್ರೇರೇಪಿಸಲಾಯಿತು ಅಂತ ತಾವು ಆರೋಪಿಸಿದ್ದೀರಿ. ಇದು ಶುದ್ಧ ಸುಳ್ಳು ಮಾಹಿತಿಯಾಗಿದೆ. ಖುರ್ಆನ್ ಓದಿ ಒಬ್ಬನನ್ನು ಭಯೋತ್ಪಾದಕನನ್ನಾಗಿಯೋ, ಆತ್ಮಹತ್ಯಾ ದಾಳಿ ಕೋರನನ್ನಾಗಿಯೋ ಮಾಡಲು ಸಾದ್ಯವಿಲ್ಲ.
ಭಯೋತ್ಪಾದಕರಿಗೆ ಆತ್ಮಹತ್ಯಾ ಧಾಳಿ ಮಾಡಲು ಖುರ್ಆನ್ ಓದಿಸಲಾಗಿತ್ತು ಎಂದು ನೀವು ಸ್ಪಷ್ಟವಾಗಿ ಹೇಳಲು, ನಿಮಗೆ ಆ ಮಾಹಿತಿಯನ್ನು ಕೊಟ್ಟವರಾರು? ಭಯೋತ್ಪಾದಕರೇ ಖುದ್ದು ನಿಮ್ಮಲ್ಲಿ ಬಂದು ಹೇಳಿದ್ದಾ, ಅಥವಾ ನೀವಾಗಿ ಹೋಗಿ ಕೇಳಿ ತಿಳಿದುಕೊಂಡಿದ್ದಾ?
ಯಾವ ಭಯೋತ್ಪಾದಕ ಕೂಡಾ ತಮ್ಮ ಕೃತ್ಯಕ್ಕೆ ಖುರ್ಆನ್ ಪ್ರೇರಣೆ ಎಂದು ಹೇಳಲು ಖಂಡಿತಾ ಸಾದ್ಯವಿಲ್ಲ. ಇದೆಲ್ಲವೂ ಮುಸ್ಲಿಂ ವಿರೋಧಿಗಳ ಸೃಷ್ಟಿ ಅಷ್ಟೇ.
*ಖುರ್ಆನ್ ಅಂದರೆ ಏನೆಂದು ಮೊದಲು ಅರಿಯುವ ಪ್ರಯತ್ನ ಮಾಡಿ ಚಕ್ರವರ್ತಿ ಯವರೇ..*
ಖುರ್ಆನ್ ಸೃಷ್ಟಿಕರ್ತನಾದ ಅಲ್ಲಾಹನ ಕಲಾಂ (ಮಾತು) ಆಗಿದೆ. ಅದನ್ನು ಮಲಾಯಿಕ್ (ದೇವಚರರ) ಮೂಲಕ ಅಲ್ಲಾಹನು ಪ್ರವಾದಿ ﷺ ರವರಿಗೆ ನೇರ ತಲುಪಿಸಿದ್ದಾನೆ. ಖುರ್ಆನ್ ನಲ್ಲಿ ಒಟ್ಟು 30 ಕಾಂಡಗಳು, 114 ಅಧ್ಯಾಯಗಳು, ಮತ್ತು 6666 ಶ್ಲೋಕಗಳಿವೆ. ಆ ಪವಿತ್ರ ಖುರ್ಆನಿಗೆ ಸಾವಿರಕ್ಕೂ ಮಿಕ್ಕ ವಿವರಣೆಗಳುಲ್ಲ ಗ್ರಂಥಗಳಿವೆ.
ಖುರ್ಆನ್ ಓದಿಸಿ ಓರ್ವನನ್ನು ಭಯೋತ್ಪಾದಕನನ್ನಾಗಿ ಮಾಡಲು ಸಾಧ್ಯವಾಗುವುದಾದರೆ, ಪ್ರಪ್ರಥಮವಾಗಿ ಭಯೋತ್ಪಾದನೆಯಂತಹ ಕೃತ್ಯ ಉದಯಿಸಬೇಕಾದದ್ದು ಪ್ರವಾದಿ ಮುಹಮ್ಮದ್ (ﷺ) ರಿಂದ ಆಗಿರಬೇಕಿತ್ತು.
ಯಾಕೆಂದರೆ, ಖುರ್ಆನ್ ನೇರ ತಲುಪಿದ್ದು ಪ್ರವಾದಿ (ﷺ) ರಿಗಾಗಿದೆ. ಪ್ರವಾದಿ ಮುಹಮ್ಮದ್ (ﷺ) ರಿಂದವಾಗಿದೆ ನಂತರದವರಿಗೆ ಖುರ್ಆನ್ ತಲುಪಿದ್ದು. ಆ ಪ್ರವಾದಿ ﷺ ರಿಗಿಂತ ಹೆಚ್ಚು ಖುರ್ಆನ್ ಬಗ್ಗೆ ತಿಳಿಯಲು ಬೇರಾರಿಗೂ ಸಾದ್ಯವಿಲ್ಲ.
*ಚಕ್ರವರ್ತಿ ಯವರೇ, ತಮಗೆ ಖುರ್ಆನ್ ಬಗ್ಗೆ ತಿಳಿಯಬೇಕಿದ್ದರೆ ಈ ರೀತಿ ಮಾಡಿ..*
ಖುರ್ಆನ್ ಬಗ್ಗೆ ನೇರ ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಕಷ್ಟವಾಗಬಹುದು. ಅದಕ್ಕೆ ಮಾಡಬೇಕಾದದ್ದು ಇಷ್ಟೇ, ಪ್ರವಾದಿ ಮುಹಮ್ಮದ್ ﷺ ರ ಸಂಪೂರ್ಣ ಜೀವನ ಚರಿತ್ರೆಯನ್ನು ಒಮ್ಮೆ ಅವಲೋಕನ ಮಾಡಿದರೆ ಸಾಕು.
ಕಾರಣ, ಪ್ರವಾದಿ ಮುಹಮ್ಮದ್ ﷺ ರ ಜೀವನ ಸಂಪೂರ್ಣ ಖುರ್ಆನ್ ಆಗಿದೆ. ಖುರ್ಆನ್ ಅಲ್ಲದ ಒಂದೂ ಪ್ರವಾದಿ ಮುಹಮ್ಮದ್ ﷺ ರು ನುಡಿಯಲಾರರು ಎಂದು ಖುರ್ಆನ್ ನಲ್ಲಿ ಅಲ್ಲಾಹನು ಸ್ಪಷ್ಟ ಪಡಿಸಿದ್ದಾನೆ.
*ಅವರ (ಪ್ರವಾದಿ ﷺ ರವರ) ನುಡಿ ಅವರಿಗೆ ಅವತೀರ್ಣಗೊಳ್ಳುವ ಸಂದೇಶ ಮಾತ್ರವಾಗಿರುವುದು* (ಅನ್ನಜ್ಮ್ 53-4)
ಪ್ರವಾದಿ ಮುಹಮ್ಮದ್ ﷺ ರು ತನ್ನ ಜೀವನದಲ್ಲಿ, ಒಂದು ಸಣ್ಣ ಜೀವಿಯನ್ನು ಕೂಡಾ ನೋಯಿಸಿದ್ದಾಗಿ, ಅನ್ಯಾಯ ಆಕ್ರಮನ ವೆಸಗಿದ್ದಾಗಿ ತೋರಿಸಲು ಯಾರಿಂದಲೂ ಸಾಧ್ಯವಿಲ್ಲ.ಅಷ್ಟೊಂದು ನಿಷ್ಕಳಂಕರಾಗಿದ್ದರಿಂದಲೇ ಪ್ರವಾದಿ ﷺ ರ ಕಾಲದ ಶತ್ರುಗಳೇ ಪ್ರವಾದಿ ಮುಹಮ್ಮದ್ ﷺ ರನ್ನು *ಅಲ್ ಅಮೀನ್* (ವಿಶ್ವಾಸ ಯೋಗ್ಯನು) ಅಂತ ವಿಷೇಶ ನಾಮದಿಂದ ಗೌರವಿಸಿದ್ದು.
ಪ್ರವಾದಿ ಮುಹಮ್ಮದ್ ﷺ ರು ಶಾಂತಿಯ ಪ್ರತಿರೂಪವಾಗಿದ್ದಾರೆ ಎಂಬ ವಿಷಯದಲ್ಲಿ ಅಂದಿನಿಂದ ಇಂದಿನವರೆಗೂ ಇರುವ ಶತ್ರು-ಮಿತ್ರ ರೆಂದಿಲ್ಲದೆ ಯಾರಿಗೂ ಅಭಿಪ್ರಾಯ ವ್ಯತ್ಯಾಸವಿಲ್ಲ.
ಯಾವ ಸಮಯದಲ್ಲೂ ತಮ್ಮ ಶತ್ರುಗಳಿಗೂ ಅನ್ಯಾಯ ವೆಸಗಿದವರಲ್ಲ ಪ್ರವಾದಿ ಮುಹಮ್ಮದ್ ﷺ.
ತನ್ನ ಮೇಲೆ ನಿರಂತರ ಕಸಕಡ್ಡಿಗಳನ್ನು ಎಸೆಯುತ್ತಿದ್ದ ಮಹಿಳೆಯೊಬ್ಬಳು ಅನಾರೋಗ್ಯ ಪೀಡಿತಳಾಗಿ ಹಾಸಿಗೆ ಹಿಡಿದಾಗ, ಅವಳ ಮನೆಗೆ ಭೇಟಿಕೊಟ್ಟು ಅರೋಗ್ಯ ವಿಚಾರಿಸಿ, ಗುಣಮುಖವಾಗಲು ಪ್ರಾರ್ಥಿಸಿ ಶತ್ರುಗಳನ್ನೂ ಅಚ್ಚರಿಗೊಳಿಸಿದವರಾಗಿದ್ದಾರೆ ಪ್ರವಾದಿ ಮುಹಮ್ಮದ್ ﷺ.
ಪ್ರವಾದಿ ﷺ ರವರ ಕಾಲದಲ್ಲಿ ಕೆಲವೊಂದು ಯುದ್ಧಗಳು ನಡೆದಿವೆ ನಿಜ. ಆದರೆ ಅವುಗಳೆಲ್ಲವೂ ಅನಿವಾರ್ಯ ಘಟ್ಟದಲ್ಲಿ ನಡೆದವುಗಳಾಗಿವೆ. ಯುದ್ಧಕ್ಕಾಗಿ ಪ್ರವಾದಿ ಮುಹಮ್ಮದ್ ﷺ ರು ಎಂದೂ ಹೊರಟು ಹೋಗಿದ್ದಿಲ್ಲ. ಸಾಧ್ಯವಾದಷ್ಟು ಯುದ್ಧವನ್ನು ತಪ್ಪಿಸಿ, ಐಕ್ಯತೆಗಾಗಿ ಶ್ರಮಿಸಿದವರಾಗಿದ್ದರು ಪ್ರವಾದಿ ﷺ ರು. ಇನ್ನು ಯುದ್ಧ ನಡೆದರೂ, ಆ ಸಂದರ್ಭದಲ್ಲಿ ತನ್ನ ಸಹಚರರಿಗೆ (ಸ್ವಹಾಬಿಗಳಿಗೆ) ಕಂಡೀಶನ್ ಇಡುತ್ತಿದ್ದರು. ಅದೇನೆಂದರೆ, ಮಹಿಳೆಯರ, ಮಕ್ಕಳ, ವೃದ್ಧರ, ರೋಗಿಗಳ ಮೇಲೆ ಹಾಗೂ, ಶತ್ರುಗಳ ಹಿಂಬದಿಯಿಂದ ದಾಳಿ ಮಾಡಬಾರದು ಎಂಬಿತ್ಯಾದಿ. ಸೆರೆ ಹಿಡಿಯಲಾಗುತ್ತಿದ್ದ ಶತ್ರುಗಳನ್ನು ಹಿಂಸಿಸದೆ, ಕ್ಷಮಿಸಿ ಬಿಟ್ಟು ಬಿಡುತ್ತಿದ್ದರು. ಪ್ರವಾದಿ ﷺ ರ ಆ ಸೌಮ್ಯವಾದ ಗುಣನಡತೆಯಿಂದಲೇ ಅಂದು ಲಕ್ಷಾಂತರ ಮಂದಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು. ಅಷ್ಟೊಂದು ತಮ್ಮ ಶತ್ರುಗಳ ಮೇಲೂ ಕರುಣೆ ತೋರಿಸುತ್ತಿದ್ದ ಪ್ರವಾದಿ ಮುಹಮ್ಮದ್ ﷺ ರು, ತನ್ನ ಅನುಯಾಯಿಗಳಿಗೆ ಭಯೋತ್ಪಾದನೆಯಂತಹ ಮನುಷ್ಯ ವಿರೋಧಿ ಚಟುವಟಿಕೆ ಗಳನ್ನು ಬೋಧಿಸಲು ಹೇಗೆ ತಾನೇ ಸಾದ್ಯ.
ಪ್ರವಾದಿ ﷺ ರ ನಡತೆಯಲ್ಲಿ, ಬೋಧನೆಯಲ್ಲಿ ಭಯೋತ್ಪಾದನೆ ಇರಲಿಲ್ಲ ಅಂದಮೇಲೆ, ಅದು ಖುರ್ಆನ್ ನಲ್ಲಿ ಇರಲು ಸಾಧ್ಯವೇ ಇಲ್ಲ.
ಇಸ್ಲಾಮಿನಲ್ಲಿ, ಪ್ರವಾದಿ ಗಳು, ಅವುಲಿಯಾಗಳು, ಪುಣ್ಯ ಪುರುಷರು, ಇಮಾಮರುಗಳು, ಸೂಫಿಗಳು, ಉಲಮಾಗಳು ಮುಂತಾದವರನ್ನು ನಾವು ಅಲ್ಲಾಹನ ಇಷ್ಟ ದಾಸರು ಅಂತ ಕರೆಯುತ್ತೇವೆ. ಅಲ್ಲಾಹನ ಇಷ್ಟ ದಾಸರಾಗಬೇಕಾದರೆ, ಖುರ್ಆನ್ ನಲ್ಲಿರುವುದನ್ನು ಸಂಪೂರ್ಣವಾಗಿ ಅವರು ಅನುಸರಿಸಿ ನಡೆಯಬೇಕು. ಕೆಟ್ಟ ಕಾರ್ಯಗಳನ್ನೆಲ್ಲಾ ತ್ಯಜಿಸಬೇಕು. ಇಸ್ಲಾಂ ಆಜ್ಙಾಪಿಸಿದ ಒಲಿತುಗಳನ್ನೆಲ್ಲಾ ಕಡ್ಡಾಯವಾಗಿ ಮಾಡುವವರಾಗಬೇಕು.
ಪವಿತ್ರ ಖುರ್ಆನ್ ಪ್ರವಾದಿ ﷺ ರಿಗೆ ಅವತೀರ್ಣಗೊಂಡು 1400 ವರ್ಷ ಕಳೆದರೂ, ಇದುವರೆಗೂ ಇಸ್ಲಾಮಿನ ಈ ಇಷ್ಟ ದಾಸರಿಂದ ಒಂದೇ ಒಂದು ಭಯೋತ್ಪಾದನೆ ಯಂತಹ ಕೃತ್ಯ, ಅಥವಾ ಅದಕ್ಕೆ ಬೆಂಬಲ ಕೊಟ್ಟಂತಹ ಒಂದೇ ಒಂದು ಸಣ್ಣ ಉದಾಹರಣೆಯನ್ನು ಕೂಡಾ ತೋರಿಸಲು ಯಾರಿಂದಲೂ ಸಾದ್ಯವಿಲ್ಲ. ಒಂದು ವೇಳೆ ಖುರ್ಆನ್ ನಲ್ಲಿ ಭಯೋತ್ಪಾದನೆ, ಆತ್ಮಹತ್ಯಾ ಧಾಳಿ ಬಗ್ಗೆ ಪ್ರೋತ್ಸಾಹ ಇದ್ದಿದ್ದರೆ, ಅದನ್ನು ಪ್ರಪ್ರಥಮವಾಗಿ ಮಾಡಬೇಕಾದವರು ಇವರಾಗಿದ್ದರು. ಖುರ್ಆನ್ ನಲ್ಲಿ ಇರುವುದನ್ನು ಮಾಡದ ಹೊರತು ಯಾವ ಪ್ರವಾದಿ ಗಳೂ, ವಲಿಯ್ಯ್ ಗಳೂ, ಇಮಾಮರುಗಳೂ, ಉಲಮಾಗಳೂ, ಸೂಫಿಗಳೂ ಪರಿಪೂರ್ಣರಾಗುತ್ತಿರಲಿಲ್ಲ. ಖುರ್ಆನ್ ನನ್ನು ನೂರು ಶೇಕಡಾ ಅನುಸರಿಸುವ ಇವರ ಜೀವನದಲ್ಲಿ ಭಯೋತ್ಪಾದನೆಯ ಒಂದಂಶ ಕೂಡಾ ಇಲ್ಲ ಅಂದರೆ, ಇಸ್ಲಾಮಿನಲ್ಲಿ, ಖುರ್ಆನ್ ನಲ್ಲಿ ಭಯೋತ್ಪಾದನೆ ಇಲ್ಲ ಎಂದೇ ಅರ್ಥ.
ವಿಶ್ವದಲ್ಲಿ ಮುಸ್ಲಿಮರ ಜನಸಂಖ್ಯೆ 150-60 ಕೋಟಿಯಷ್ಟು ಇದೆ. ಅದರಲ್ಲಿರುವ ಭಯೋತ್ಪಾದಕರ ಸಂಖ್ಯೆ ಹೆಚ್ಚೆಂದರೆ ಕೇವಲ ಹತ್ತಿಪ್ಪತ್ತು ಸಾವಿರದಷ್ಟು ಮಾತ್ರ ಇರಬಹುದು. ಉಳಿದ 149. 99.9 ಕೋಟಿ ಮುಸಲ್ಮಾನರು ಭಯೋತ್ಪಾದಕರಲ್ಲ. ಮಾತ್ರವಲ್ಲ, ಭಯೋತ್ಪಾದನೆಗೆ ವಿರುದ್ಧ ಕೂಡಾ ಆಗಿದ್ದಾರೆ.
ಒಂದು ವೇಳೆ ಇಸ್ಲಾಮಿನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಇದ್ದಿದ್ದರೆ, ಬಹುಸಂಖ್ಯೆಯ ಮುಸ್ಲಿಮರೆಲ್ಲರೂ ಭಯೋತ್ಪಾದನೆಯಲ್ಲಿ ತೊಡಗಿರಬೇಕಾಗಿತ್ತು. ಆದರೆ, ಬಹುಸಂಖ್ಯೆಯ ಮುಸ್ಲಿಮರು ಭಯೋತ್ಪಾದನೆಗೆ ವಿರುದ್ಧವಾಗಿ, ಒಂದು ಸಣ್ಣ ಸಂಖ್ಯೆ ಮಾತ್ರ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದರೆ, ಅದಕ್ಕೆ ಧರ್ಮವಾಗಲಿ, ಧರ್ಮ ಗ್ರಂಥವಾಗಲೀ ಕಾರಣವಾಗುವುದಿಲ್ಲ ಎಂದು ಬುದ್ಧಿ ಇರುವವರಿಗೆ ಅರ್ಥವಾಗಬಹುದು.
*ಸಣ್ಣ ಸಂಖ್ಯೆಯ ಭಯೋತ್ಪಾದಕರು ಇಸ್ಲಾಮಿನಲ್ಲಿ ಮಾತ್ರವಲ್ಲ, ಎಲ್ಲಾ ಧರ್ಮದಲ್ಲೂ ಇದ್ದಾರೆ. ಅದರಲ್ಲಿ ಇಸ್ಲಾಮೇತರರ ಕಾರ್ಯಗಳು ಹೈಲರ್ಟ್ ಆಗುವುದಿಲ್ಲ. ಅದೂ ಅಲ್ಲದೆ, ಅವರ ಕಾರ್ಯಗಳನ್ನು ಭಯೋತ್ಪಾದನೆ ಎಂಬ ಹೆಸರಲ್ಲಿ ಗುರುತಿಸಲಾಗುತ್ತಿಲ್ಲ ಎಂದು ಮಾತ್ರ.*
*ಖುರ್ಆನ್ ನಲ್ಲಿರುವ ಪ್ರತಿಯೊಂದು ಸಾಲುಗಳನ್ನು ಅವನಿಗೆ ಮತ್ತೆ ಮತ್ತೆ ಓದಿಸಿ ಅವನು ಫಿದಾಯಿನ್ ಆಗಬೇಕು, ಆತ್ಮಹತ್ಯಾ ಧಾಳಿ ಮಾಡಬೇಕು ಅನ್ನುವ ತರದಲ್ಲಿ ಅವನನ್ನು ಪ್ರಿಫೇರ್ ಮಾಡಲಾಯಿತು.* ಎಂದು ಚಕ್ರವರ್ತಿ ಯವರು ಆರೋಪಿಸಿದರು.
ನೋಡಿ ಚಕ್ರವರ್ತಿ ಯವರೇ..
ವಿಶ್ವದಲ್ಲಿ ಅತ್ಯಂತ ಹೆಚ್ಚು ಓದಲ್ಪಡುವ ಒಂದು ಧರ್ಮ ಗ್ರಂಥ ಈ ಭೂಮಿ ಮೇಲೆ ಇದ್ದಿದ್ದರೆ, ಅದು ಪವಿತ್ರ ಖುರ್ಆನ್ ಮಾತ್ರ. ವಿಶ್ವದ ನೂರ ಐವತ್ತು ಕೋಟಿ ಮುಸಲ್ಮಾನರೂ ನಿತ್ಯ ಖುರ್ಆನ್ ಓದುತ್ತಾರೆ. ಹೆಚ್ಚಿನವರು ವರ್ಷದಲ್ಲಿ ಒಂದು, ಎರಡು, ಮೂರು, ಹತ್ತು ಭಾರಿ ಈ ರೀತಿ ಖುರ್ಆನ್ ಸಂಪೂರ್ಣ ಓದಿ ಮುಗಿಸುತ್ತಾರೆ.
ಇನ್ನು ನಮ್ಮ ಪೂರ್ವ ಇಮಾಮರುಗಳು ದಿನಕ್ಕೊಮ್ಮೆಯಂತೆ ಖುರ್ಆನ್ ಸಂಪೂರ್ಣವಾಗಿ ಓದಿ ಮುಗಿಸುತ್ತಿದ್ದರು.
ಈಗಿನ ನಮ್ಮ ಉಲಮಾಗಳಲ್ಲಿ ಕೆಲವರು ಎರಡು ಮೂರು ದಿನಕ್ಕೊಮ್ಮೆ ಸಂಪೂರ್ಣ ಖುರ್ಆನ್ ಓದಿ ಮುಗಿಸುವವರೂ ಇದ್ದಾರೆ. ಅಂದರೆ, ವರ್ಷದಲ್ಲಿ ನೂರಕ್ಕಿಂತಲೂ ಮಿಕ್ಕಿ ಸಂಪೂರ್ಣವಾಗಿ ಖುರ್ಆನ್ ಓದಿ ಮುಗಿಸುತ್ತಾರೆ. ಇಷ್ಟು ಓದಲು ಉಲಮಾಗಳೇತರರಿಗೆ ಖಂಡಿತಾ ಸಾದ್ಯವಿಲ್ಲ. ಅಷ್ಟೊಂದು ಬಾರಿ ಖುರ್ಆನ್ ಓದುವ ನಮ್ಮ ಉಲಮಾಗಳ್ಯಾರೂ ಭಯೋತ್ಪಾದಕರಾಗಿಲ್ಲ. ಪೂರ್ವಿಕರಾದ ಇಮಾಮರುಗಳ ಹಾಗೂ ಇಂದಿನ ನಮ್ಮ ಉಲಮಾಗಳ ಚರಿತ್ರೆಗಳನ್ನು ಒಮ್ಮೆ ಪರಿಶೀಲಿಸಿದರೆ, ಅವರು ಅನ್ಯಾಯ ಅಕ್ರಮ ಭಯೋತ್ಪಾದನೆ ಗಳನ್ನು ಪ್ರೋತ್ಸಾಹಿಸಿದ ಒಂದೇ ಒಂದು ಉಲ್ಲೇಖಗಳನ್ನು ತೋರಿಸಲು ಸಾದ್ಯವಿಲ್ಲ. ಮತ್ತೆ ಹೇಗೆ ಸಾದ್ಯ, ಮತ್ತೆ ಮತ್ತೆ ಖುರ್ಆನ್ ಓದಿಸಿ ಓರ್ವನನ್ನು ಭಯೋತ್ಪಾದಕನನ್ನಾಗಿ ಮಾಡಲು?.
ಭಯೋತ್ಪಾದಕರು ಹತ್ಯೆ ಮಾಡುತ್ತಿರುವುದು ಮುಸ್ಲಿಮೇತರರನ್ನು ಮಾತ್ರವಲ್ಲ . ಮುಸ್ಲಿಮೇತರರಿಗಿಂತ ಹೆಚ್ಚಾಗಿ ಅವರು ದಾಳಿ ಮಾಡಿದ್ದೇ ಮುಸ್ಲಿಮರ ಮೇಲೆ. ಅನ್ಯ ಧರ್ಮದವರನ್ನೇ ಹಿಂಸಿಸಲು ಪ್ರೋತ್ಸಾಹಿಸದ ಧರ್ಮ ಗ್ರಂಥವೊಂದರಲ್ಲಿ ಸ್ವ ಧರ್ಮದವರನ್ನೇ ಕೊಲ್ಲುವಂತೆ ಇರಲು ಸಾಧ್ಯವೇ?. ಮತ್ತೆ ಹೇಗೆ ಭಯೋತ್ಪಾದನೆ ಖುರ್ಆನ್ ನಿಂದ ಪ್ರೇರೇಪಿತ ಎಂದು ಹೇಳಲು ಸಾಧ್ಯವಾಗುತ್ತದೆ.?
ಈ ಭಯೋತ್ಪಾದನೆ ಎಂಬ ಮಹಾ ಮಾರಿ ವಿಶ್ವವನ್ನು ಆವರಿಸಿದ್ದೇ ಇತ್ತೀಚೆಗೆ. ಅಂದರೆ, ಹತ್ತಿಪ್ಪತ್ತು ವರ್ಷಗಳಿಂದ. ಖುರ್ಆನ್ ಪ್ರವಾದಿ ﷺ ರಿಗೆ ಅವತೀರ್ಣಗೊಂಡು ಇಂದಿಗೆ 1430 ಕ್ಕೂ ಮಿಕ್ಕ ವರ್ಷಗಳಾಯಿತು. ಖುರ್ಆನ್ ಅವತೀರ್ಣಗೊಂಡು 1430 ವರ್ಷಗಳ ವರೆಗೂ ಇರದ ಈ ಭಯೋತ್ಪಾದನೆ, ಇತ್ತೀಚೆಗೆ ಹತ್ತಿಪ್ಪತ್ತು ವರ್ಷಗಳಿಂದ ಹುಟ್ಟಿಕೊಂಡಿದ್ದರೆ ಅದಕ್ಕೆ ಖುರ್ಆನ್ ಹೇಗೆ ತಾನೇ ಹೊಣೆಯಾಗಲು ಸಾದ್ಯ.?
ಖುರ್ಆನ್ ನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಇದ್ದಿದ್ದರೆ, ಭಯೋತ್ಪಾದನೆ ಈ ಭೂಮಿ ಮೇಲೆ 1400 ವರ್ಷಗಳಿಂದಲೂ, ಅಂದರೆ, ಪ್ರವಾದಿ ﷺ ರ ಕಾಲದಿಂದಲೂ ಇದ್ದಿರಬೇಕಿತ್ತು ಅಲ್ವ.
ಅದೂ ಅಲ್ಲದೇ, ವಿಶ್ವದಲ್ಲಿ ಅರವತ್ತಕ್ಕೂ ಮಿಕ್ಕ ಮುಸ್ಲಿಂ ರಾಷ್ಟ್ರಗಳಿವೆ. ಅದರಲ್ಲಿ ಬಹುತೇಕ ರಾಷ್ಟ್ರದಲ್ಲಿ ಶರಿಅತ್ ಕಾನೂನು ಜಾರಿಯಲ್ಲಿದೆ. ಅಂತಹ ರಾಷ್ಟ್ರದಲ್ಲೆಲ್ಲೂ ಕೂಡಾ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿಲ್ಲ.
ವಿಶ್ವದಲ್ಲಿ ಇಂದು ಅತ್ಯಂತ ಹೆಚ್ಚು ಮಂದಿ ಮತಾಂತರ ವಾಗುತ್ತಿರುವುದು ಕೂಡಾ ಇಸ್ಲಾಂ ಧರ್ಮಕ್ಕಾಗಿದೆ. ವಿಶ್ವದಲ್ಲಿ ಇಸ್ಲಾಂ ಅದೆಷ್ಟು ಬೇಗ ಬೆಳೆಯುತ್ತಿದೆಯೆಂದರೆ, ಲಂಡನ್ ಅಮೇರಿಕಾ ದಂತಹ ಪಾಶ್ಚಾತ್ಯ ರಾಷ್ಟ್ರದ ಜನಸಂಖ್ಯೆಯ ಎರಡನೇ ಅತ್ಯಂತ ದೊಡ್ಡ ಸಮೂಹ ಇಂದು ಮುಸ್ಲಿಮರಾಗಿದ್ದಾರೆ. ಇವರ ಈ ಬದಲಾವಣೆಗೆ ಪ್ರಮುಖ ಕಾರಣ ಖುರ್ಆನ್ ಎಂಬ ಅದ್ಭುತ ಗ್ರಂಥವಾಗಿದೆ. ಆ ಖುರ್ಆನ್ ನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ಇದ್ದಿದ್ದರೆ, ಇವರ್ಯಾರು ಇಸ್ಲಾಂ ಧರ್ಮಕ್ಕೆ ಮತಾಂತರ ವಾಗುತ್ತಿರಲಿಲ್ಲ ತಾನೇ.
ಅಂದರೆ, ಖುರ್ಆನ್ ನಿಂದ ಭಯೋತ್ಪಾದನೆಗೆ ಪ್ರೋತ್ಸಾಹಿಸಲಾಗುತ್ತಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದವುಗಳಾಗಿದೆ.
ಹಾಗೆ ಒಂದು ಸಮುದಾಯದ ಜನ ಮಾಡುವ ಅನ್ಯಾಯಗಳಿಗೆ ಅವರಿಗೆ ಸಂಬಂಧಪಟ್ಟ ಧರ್ಮ ಗ್ರಂಥವನ್ನು ದೂರುವುದಾದರೆ,
ಸಾವಿರಾರು ಜನರ ಸಾವಿಗೆ ಕಾರಣರಾಗುವ ನಕ್ಸಲರು, ಮಾವೋ ವಾದಿಗಳು, ಉಲ್ಫಾ ಉಗ್ರರು, ವೀರಪ್ಪನ್ ಸಹಚರರು, ಎಲ್.ಟಿ.ಟಿ. ಇ ಉಗ್ರರು ಕೂಡಾ ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಇವರಿಗೂ ಒಂದು ಧರ್ಮ ವಿದೆ.ಆ ಧರ್ಮಕ್ಕೂ ಒಂದು ಧರ್ಮ ಗ್ರಂಥವಿದೆ ತಾನೇ.
*ಚಕ್ರವರ್ತಿ ಯವರೇ,* ಯಾರೋ ಮಾಡುವ ಅಕ್ರಮಗಳನ್ನು ಒಂದು ಧರ್ಮ ಗ್ರಂಥದ ಮೇಲೆ ಎತ್ತಿಕಟ್ಟಲು ನಿಮ್ಮ ಹಾಗೆ ನಾವು ಕೂಡಾ ಬಯಸುವುದಾದರೆ, ಈ ಮೇಲೆ ಹೆಸರಿಸಿದ ಆಕ್ರಮಣಕಾರರಿಗೆ ಪ್ರೋತ್ಸಾಹ ಅವರಿಗೆ ಸಂಬಂಧಪಟ್ಟ ಧರ್ಮ ಗ್ರಂಥವಾಗಿದೆ ಎಂದು ನಮಗೂ ಆರೋಪಿಸಬಹುದಿತ್ತು.
ಆದರೆ, ಅಂತಹ ಕೀಲು ಮಟ್ಟಕ್ಕೆ ನಾವು ಇಳಿಯಲಾರೆವು. ಯಾಕೆಂದರೆ, ಆ ರೀತಿ ಒಂದು ಧರ್ಮವನ್ನು, ಧರ್ಮ ಗ್ರಂಥದ ಮೇಲೆ ಆರೋಪಿಸಲು ಇಸ್ಲಾಂ ನಮಗೆ ಕಳಿಸಿಕೊಟ್ಟಿಲ್ಲ. ಇಸ್ಲಾಮಿನಲ್ಲಿ ಅದು ಮಹಾ ಪಾಪವಾಗಿದೆ.
*ಭಯೋತ್ಪಾದಕರಿಗೆ ಖುರ್ಆನ್ ಬರುತ್ತದೆಯೇ?*
ಖಂಡಿತಾ ಸಾದ್ಯವಿಲ್ಲ. ಯಾಕೆಂದರೆ, ಪ್ರವಾದಿ ﷺ ರು ತನ್ನ ಸಹಚರರಿಗೆ ಖುರ್ಆನ್ ಸಂಪೂರ್ಣ ಕಲಿಸಲು ತೆಗೆದುಕೊಂಡ ಕಾಲ ಬರೋಬ್ಬರಿ 23 ವರ್ಷ.! ಅಷ್ಟೊಂದು ಸವಿಸ್ತಾರವಾಗಿದೆ ಖುರ್ಆನ್ ನ ವ್ಯಾಖ್ಯೆ. ಇಂದು ನಮ್ಮಲ್ಲಿರುವ ಉಲಮಾಗಳೂ 10-15 ವರ್ಷಗಳ ಕಾಲ ಬೆಳಿಗ್ಗೆ ಯಿಂದ ರಾತ್ರಿವರೆಗೆ, ಧರ್ಮ ಗ್ರಂಥವನ್ನು ಅಭ್ಯಾಸ ಮಾಡಿಯೇ ಕಾಲೇಜು ಗಳಿಂದ ಬಿರುದು ಪಡೆದು ಹೊರಬರುತ್ತಿರುವುದು. ಅಂತಹುದರಲ್ಲಿ, 15-20 ವರ್ಷ ವಯಸ್ಸಾದಾಗಲೇ ಮನೆಬಿಟ್ಟು ತೆರಳಿ, ಭಯೋತ್ಪಾದಕರೊಂದಿಗೆ ಸೇರಿ ಒಂದೆರಡು ವರ್ಷದಲ್ಲೇ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಕೊಳ್ಳುವ ಉಗ್ರರು ಖುರ್ಆನ್ ಕಲಿತದ್ದಾದರೂ ಯಾವಾಗ? ಕೇವಲ ಯಾರೋ ಓದಿ ಕೊಟ್ಟು ಒಬ್ಬ ವ್ಯಕ್ತಿಗೆ ಖುರ್ಆನ್ ಅನ್ನು ಮನವರಿಕೆ ಮಾಡಿಕೊಡಲು ಸಾದ್ಯವಿದೆಯಾ? ಖಂಡಿತಾ ಸಾದ್ಯವಿಲ್ಲ. ಯಾವುದೋ ಕಾರಣಕ್ಕೆ ಕೆಲವೊಂದು ಯುವಕರು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಕೊಂಡಿದ್ದರೆ, ಅದಕ್ಕೆ ಖುರ್ಆನ್ ಎಂದೂ ಕಾರಣವಲ್ಲ.
*ಇನ್ನೊಬ್ಬನನ್ನು ಕೊಲೆ ಮಾಡದ ಅಥವಾ ಭೂಮಿಯಲ್ಲಿ ಕ್ಷೋಭೆ ಯನ್ನುಂಟು ಮಾಡದ ಒಬ್ಬನನ್ನು ಯಾರಾದರೂ ಕೊಂದರೆ, ಅವನು ಇಡೀ ಮಾನವ ಜನಾಂಗವನ್ನೇ ಕೊಂದವನಂತೆ. ಒಬ್ಬನ ಜೀವ ಉಳಿಸಿದರೆ ಇಡೀ ಮಾನವ ಕೋಟಿಗೆ ಜೀವದಾನ ಮಾಡಿದಂತೆ* (ಖುರ್ಆನ್ 5:32)
*"ಕೋಮುವಾದಕ್ಕಾಗಿ ಆಹ್ವಾನಿಸುವವನು, ಕೋಮುವಾದಕ್ಕಾಗಿ ಹೋರಾಡುವವನು,ಕೋಮುವಾದದ ಹೆಸರಲ್ಲಿ ಮಡಿಯುವವನೂ ನಮ್ಮವನಲ್ಲ"* (ಪ್ರವಾದಿ ﷺ ವಚನ).
ಅನ್ಯಾಯವಾಗಿ ಯಾರನ್ನೂ ಕೊಲ್ಲಬಾರದೆಂದೂ, ಅಂತಹವರು ನಮ್ಮವರಲ್ಲ ಎಂದು ಖುರ್ಆನ್ ಮತ್ತು ಪ್ರವಾದಿ ﷺ ರ ವಚನ ನಮಗೆ ಸ್ಪಷ್ಟ ತಾಕೀತು ಮಾಡುತ್ತದೆ. ಅದೂಅಲ್ಲದೆ, ಇಸ್ಲಾಮಿನಲ್ಲಿ ಆತ್ಮಹತ್ಯೆ ಮಾಡುವುದು ಮಹಾ ಅಪರಾಧ. ಅಂತಹುದರಲ್ಲಿ ಆತ್ಮಹತ್ಯಾ ದಾಳಿಗೆ ಖುರ್ಆನ್ ಪ್ರೋತ್ಸಾಹಕವಾಗಲು ಹೇಗೆ ತಾನೇ ಸಾದ್ಯ.
ಸತ್ಯವು ಇಷ್ಟೊಂದು ಬಹಿರಂಗವಾಗಿ ವ್ಯಕ್ತವಾಗಿದ್ದೂ ಸಹ ಕೆಲವರು ಇಸ್ಲಾಂ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದರೆ, ಅದೆಲ್ಲವೂ ಇಸ್ಲಾಂ ವಿರೋಧಿಗಳ, ಇಸ್ಲಾಂ ವಿರುದ್ಧದ ವ್ಯವಸ್ಥಿತವಾದ ಷಡ್ಯಂತರವಲ್ಲದೆ ಇನ್ನೇನೂ ಅಲ್ಲ ಎಂದಷ್ಟೇ ನಮಗೆ ಹೇಳಲು ಸಾಧ್ಯ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment