*ಎಪಿ ಉಸ್ತಾದ್ ಶಿಯಾ ಕಾರ್ಯಕ್ರಮದಲ್ಲಿ..?*
ಇರಾಕಿನ ರಾಜಧಾನಿ ಬಾಗ್ದಾದ್ ನಲ್ಲಿ ನಡೆಯುತ್ತಿರುವ *ಅಂತರಾಷ್ಟ್ರೀಯ ಖುರ್ಆನ್ ಸಮ್ಮೇಳನ* ದಲ್ಲಿ, ಭಾರತದ ಏಕೈಕ ಪ್ರತಿನಿಧಿಯಾಗಿ ಸುನ್ನೀ ಮುಸಲ್ಮಾನರ ಅಭಿಮಾನ ಶಬ್ದ, ಶೈಖುನಾ *ಸುಲ್ತಾನುಲ್ ಉಲಮಾ ಎಪಿ ಉಸ್ತಾದ್* ಭಾಗವಹಿಸುತ್ತಿರುವುದು ಸುನ್ನಿಗಳಾದ ನಮಗೆ ಅಭಿಮಾನವಾಗಿದೆ.
ಇದರ ಮಧ್ಯೆ, ಎಪಿ ಉಸ್ತಾದ್ ಶಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂಬಂತಹ ತಪ್ಪು ಮಾಹಿತಿಯನ್ನು ವಿರೋಧಿಗಳು ಹರಡುತ್ತಿದ್ದಾರೆ. ವಾಸ್ತವದಲ್ಲಿ ಅದು ಸತ್ಯಕ್ಕೆ ದೂರವಾದ ವಿಷಯ ವಾಗಿದೆ.
ಎಪಿ ಉಸ್ತಾದರ ಫೇಸ್‌ಬುಕ್ ವಾಲ್ ತೆಗೆದು ನೋಡಿದರೆ ಕಾಣಬಹುದು, ಎಪಿ ಉಸ್ತಾದ್ ಸಿರಿಯಾ ದ ತನ್ನ ಸಹಪಾಠಿ ಪ್ರಖ್ಯಾತ ಸುನ್ನೀ ಉಲಮಾ ನಾಯಕ Sheikh mahmood nasir al hout ರೊಂದಿಗೆ ಮಾತುಕತೆ ನಡೆಸುತ್ತಿರುವ ದೃಶ್ಯ.
(ಇದರ ಲಿಂಕ್,
https://www.facebook.com/673812582702569/posts/2175947009155778/)
ಅದೇರೀತಿ, ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮತ್ತು Sheikh mahmood nasir al hout, siriya ರವರು ಜಂಟಿಯಾಗಿ ಬಾಗ್ದಾದ್ ನಲ್ಲಿ ನಡೆದ ಒಂದು ಆಧ್ಯಾತ್ಮಿಕ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.
(ಇದರ ಲಿಂಕ್,
https://www.facebook.com/673812582702569/posts/2174327829317696/)
*ವಿರೋಧಿಗಳು ಆರೋಪಿಸುವಂತೆ ಅದು ಶಿಯಾಗಳ ಕಾರ್ಯಕ್ರಮ ಅಲ್ಲ.*
ಸಾಧಾರಣವಾಗಿ ಕೆಲವರ ಭಾವನೆ ಏನೆಂದರೆ, ಇರಾನ್-ಇರಾಕ್ ನವರೆಲ್ಲಾ ಶಿಯಾ ಗಳೆಂದೂ, ಸೌದಿ ಅರೇಬಿಯಾದವರೆಲ್ಲಾ ಸಲಪಿ ಗಳಾಗಿದ್ದಾರೆ ಎಂಬುದು. ಇದು ತಪ್ಪು ತಿಳುವಳಿಕೆಯಾಗಿದೆ. ಒಂದು ರಾಷ್ಟ್ರದಲ್ಲಿ ಒಂದು ಪಂಗಡದ ಜನರು ಅಧಿಕವಿದ್ದಾರೆ ಎಂಬ ಕಾರಣಕ್ಕೆ, ಆ ರಾಷ್ಟ್ರದಲ್ಲಿ ಅವರಲ್ಲದೆ ಬೇರೆ ಯಾರೂ ಇಲ್ಲ ಎಂಬುದು ಮೌಡ್ಯವಾದವಾಗಿದೆ. ಇನ್ನು ಕೆಲವರು ಜನರನ್ನು ವಂಚಿಸಲು ಬೇಕಾಗಿಯೇ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುತ್ತಾರೆ.
(ಇರಾಕ್ ನಲ್ಲಿ ಕೇವಲ ಶಿಯಾಗಳು ಮಾತ್ರ ಇರುವುದಲ್ಲ. ನಲವತ್ತು ಶೇಕಡಾ ಸುನ್ನಿಗಳೂ ಇದ್ದಾರೆ ಎಂಬುದನ್ನು ಮರೆಯಬೇಡಿ)
*ಅದೇರೀತಿ, ವಸ್ತ್ರದಾರಣೆಯ ಮೇಲೆ ಶಿಯಾಗಳೆಂದು ಅಳೆಯುವುದು ಕೂಡಾ ವಿರೋಧಿಗಳ ಚಾಲಿಯಾಗಿದೆ..*
ಒಬ್ಬರ ವಸ್ತ್ರ ಧಾರಣೆಯ ಆಧಾರದಲ್ಲಿ ಇಂತಿಂತಹ ಪಂಗಡಕ್ಕೆ ಸೇರಿದವನೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೆಲವೊಂದು ಪ್ರದೇಶದಲ್ಲಿ ಪಂಗಡಗಳು ಬೇರೆ ಬೇರೆಯಾಗಿದ್ದರೂ, ಅವರ ವಸ್ತ್ರಧಾರಣೆಯು ಒಂದೇ ರೀತಿಯದ್ದಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಉದಾಹರಣೆಯನ್ನೇ ತೆಗೆದು ನೋಡಿದರೆ, ತಬ್ಲೀಗ್-ಜಮಾಹತ್ ನವರು ಹೆಚ್ಚಾಗಿ ಉದ್ದುದ್ದದ ಪೈಜಾಂ ಗಳನ್ನು ಧರಿಸುತ್ತಾರೆ. ಅದೇರೀತಿಯ ಪೈಜಾಂ ಧರಿಸುವ ಸುನ್ನಿಗಳೂ ಧಾರಾಳವಾಗಿ ನಮ್ಮಲ್ಲಿದ್ದಾರೆ. ಅಂದರೆ, ಯಾರಿಗೂ ಯಾವ ರೀತಿಯ ವಸ್ತ್ರ ಧಾರಣೆಯೂ ಸೀಮಿತವಾಗಿಲ್ಲ.
ವಸ್ತ್ರಧಾರಣೆಯ ಕಾರಣವನ್ನು ಮುಂದಿಟ್ಟೇ ಕೆಲವರು ಜನರನ್ನು ವಂಚಿಸುತ್ತಾರೆ. ಅದು ಅವರ ಹತಾಶೆಯ ಪ್ರಯತ್ನವಾಗಿದೆ.
ಆದರ್ಶವನ್ನು ಆದರ್ಶದಿಂದ ಎದುರಿಸಲಾಗದಿದ್ದಾಗ, ಎಪಿ ಉಸ್ತಾದರ ಸುನ್ನೀ ಕ್ರಾಂತಿಯ ನಾಗಲೋಟಕ್ಕೆ ತಡೆಯಿಡಲು ಸಾದ್ಯವಾಗದಿದ್ದಾಗ, ಇಂತಹ ನೀಚ ಕೆಲಸಕ್ಕೆ ಇಳಿಯದೆ ಅವರಿಗೆ ಬೇರೆ ದಾರಿ ಇರುವುದಿಲ್ಲ ಅಷ್ಟೇ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment