*#ಝಿಯಾರತ್ತ್ #ಕೇಂದ್ರ*
🌾🌾 3⃣2⃣🌾🌾
➖➖➖➖➖➖➖
✍ಗಫೂರ್ ಬಾಯಾರ್
➖➖➖➖➖➖➖
*_"ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ"(ರ) ಮುಖಾಂ. ಒಳಪಟ್ಟಣಂ, ಕಣ್ಣೂರು_*
〰〰〰〰〰〰〰
ಅಹ್ಲುಬೈತ್ತಿನ ಗೋತ್ರವಾದ *"ಬುಖಾರಿ"* ಪರಂಪರೆ ಪ್ರಥಮವಾಗಿ ಕೇರಳಕ್ಕೆ ಆಗಮಿಸಿದ ಪುಣ್ಯ ಮಹಾತ್ಮರಾಗಿದ್ದಾರೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ (ರ) ರವರು. ಈಗಿನ ಉಸ್ಬಕಿಸ್ತಾನ್'ನ ಬುಖಾರದಿಂದ ಹಿಜರಿ ವರ್ಷ-928
( ಎ. ಡಿ. 1521 ) ರಲ್ಲಿ
ಮಹಾನವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಒಳಪಟ್ಟಣಂ ಎಂಬ ಸ್ಥಳದಲ್ಲಿ ಆಗಮಿಸಿ ವಾಸ್ತವ್ಯ ಹೂಡಿದರು.
ಪೂರ್ವ ಕಾಲದಿಂದಲೇ ಉನ್ನತ ಇಸ್ಲಾಮಿಕ ಸಂಸ್ಕೃತಿಯ ತವರೂರಾಗಿತ್ತು ಒಳಪಟ್ಟಣಂ ಎಂಬ ಸ್ಥಳ.
ಒಂದನೇ ಖಲೀಫ "ಅಬೂಬಕ್ಕರ್ ಸಿದ್ದೀಖ್" (ರ).ರವರ ನಂತರದ ಪೀಳಿಗೆಯವರಾದ "ಹಝ್ರತ್ತ್ ರಮಳಾನ್" (ರ). ರವರು ಇಲ್ಲಿಯ ಇಸ್ಲಾಮಿನ ಪ್ರಥಮ ಕಾಲದ ದೀನೀ ಪ್ರಬೋದಕರಲ್ಲಿ ಒಬ್ಬರಾಗಿದ್ದರು.
*"ಪ್ರವಾದಿ ﷺರವರ 27'ನೇ ಕುಟುಂಬ ಪರಂಪರೆಯಾಗಿದ್ದಾರೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ (ರ) ರವರು.*
ನಂತರದ ಕಾಲದಲ್ಲಿ ಒಣಪಟ್ಟಣದಲ್ಲಿ ಖಾಝಿಯಾಗಿದ್ದರು ಮಹಾನವರು.
ಶೈಖ್ "ಸ್ವಲಾಹುದ್ದೀನ್ ಬಿಂಜುಂ ಅತ್ತುಲ್ ಖಾದಿರಿ" (ರ). ರವರ ಮಗಳಾಗಿದ್ದಾರೆ ಸಯ್ಯಿದವರ ಸಹ ಧರ್ಮಿಣಿ.
ಪಂಡಿತರೂ, ಸೂಫಿವರ್ಯರೂ ಆಗಿದ್ದ ಹಝ್ರತ್ತ್ ಸೀತಿ ಇಬ್ರಾಹಿಂ ತಂಙಳ್(ರ) ರವರು ಒಳಪಟ್ಟಣಕ್ಕೆ ತಲುಪಿದ ಮಹಾನವರನ್ನು ಹಾಗು ಪ್ರಿಯ ಪತ್ನಿಯವರನ್ನು ಬರಮಾಡಿಕೊಂಡರು.
ವಾಸಿಸಲು ಮನೆಯನ್ನು ನಿರ್ಮಿಸಿ ಕೊಟ್ಟರು. ಮಹಾನವರ ಮೊದಲನೇ ಪತ್ನಿಯ ವಫಾತ್ತಿನ ನಂತರ ಖಾಝಿ ಸೀತಿ ತಂಙಳ್ (ರ)ರವರ ಮಗಳನ್ನು ವಿವಾಹವಾದರು.
ಖಾಝಿಯವರ ವಫಾತ್ತಿನ ನಂತರ ಒಳಪಟ್ಟಣದ ಖಾಝಿಯಾಗಿ ಮಹಾನವರನ್ನು ನೇಮಿಸಲಾಯಿತು.
ಹಲವಾರು ಅವಿಶ್ವಾಸಿಗರಿಗೆ ಇಸ್ಲಾಮಿಗೆ ಬರಲು ಮಹಾನವರ ಜೀವನ ಶೈಲಿ ನಿಮಿತ್ತವಾಯಿತು.
ಮಹಾನವರ ಮಖ್ಬರ ಝಿಯಾರತ್ತ್ ಮಾಡಲು ಹಲವಾರು ಮಹಾತ್ಮರು ಬರುತ್ತಿದ್ದರು.
ಮರ್ಹೂಂ ಶೈಖ್ ಅಬ್ದುಲ್ಲಾಹಿಇಬ್ನು ಹಬೀಬ್ ಹೈದ್ರೂಸ್ ತಂಙಳ್ (ರ) ರವರು ಮಖ್ಬರ ಸಂದರ್ಶಗರಲ್ಲಿ ಒಬ್ಬರಾಗಿದ್ದರು.
ಅವರು ಮಖ್ಬರ ಸಂದರ್ಶಿಸಲು ಬರುವಾಗೆಲ್ಲ ಬಹಳ ದೂರದಿಂದಲೇ ತನ್ನ ಚಪ್ಪಲು ಕಳಚಿ ಇಡುತ್ತಿದ್ದರು.
*"ಹಯಾತ್ತುಲ್ ಮುಹ್'ಮಿನೀನ್" (ರ) ಮಖಾಂ*
"ಜಲಾಲುದ್ದೀನ್ ಬುಖಾರಿ" (ರ). ರವರ ಮಖಾಮಿನ ಮಕ್ಬರದ ಪಕ್ಕದಲ್ಲೇ ಹಯಾತ್ತುಲ್ ಮುಹ್'ಮಿನೀನ್ (ರ) ಎಂಬ ಮಹಾನರ ಮಖಾಮಿದೆ.
ಪಾಂಡಿತ್ಯದ ಮಹಾನ್ ಮೇಧಾವಿಯೂ, ವಲಿಯ್ಯರೂ ಆಗಿದ್ದರು. ಹಲವಾರು ಕಶ್ಫ್ ಕರಾಮತ್ತುಗಳಿಗೂ ಶಾಕ್ಷ್ಯ ವಹಿಸಿದ್ದರು ಮಹಾನರಿಗೆ ಜನ ಸಂಪರ್ಕ ಪ್ರಯಾಸವಾದಾಗ ಒಮ್ಮೆ ಶಿಷ್ಯರೊಂದಿಗೆ ಹೇಳಿದರು *ನಾನು ಖಬರಿಗೆ ಹೋಗುತೇನೆಂದು, 40 ದಿವಸ ಕಳೆದ ನಂತರ ತೆರೆದು ನೋಡಬೇಕೆಂದು ಹೇಳಿ, ಮೊದಲೇ ತಯಾರಾಗಿಸಿದ ಖಬರಿಗೆ ಖುರ್'ಆನಿನೊಂದಿಗೆ ಇಳಿದರು. ಖಬರನ್ನು ಮುಚ್ಚಿ ಅವರು ಹೇಳಿದ ಪ್ರಕಾರ 40ನೇ ದಿವಸ ಶಿಷ್ಯಂದಿರರು ಖಬರ್ ತೆರೆದರು. ಆಗ ಮಹಾನವರು ಖಬರಿನಲ್ಲಿ ಕುಳಿತು ವಿಶುದ್ಧ ಖುರ್'ಆನ್ ಪಾರಾಯಣ ಮಾಡುತ್ತಿದ್ದರು. ಶಿಷ್ಯರೊಂದಿಗೆ ಹೇಳಿದರು ಇನ್ನು ಭೂಮುಖಕ್ಕೆ ಇಲ್ಲವೆಂದು ಹೇಳಿ ಖಬರ್ ಮುಚ್ಚಲು ಹೇಳಿದರು. ಹೀಗೆ ಖಬರಿನಲ್ಲಿ ಜೀವಂತವಿದ್ದಾರೆಂದು ಅರ್ಥದಲ್ಲಿ "ಹಯತ್ತುಲ್ ಮುಹ್'ಮಿನೀನ್" ಎಂಬ ನಾಮದಿಂದ ಪ್ರಾಮುಖ್ಯತೆ ಪಡೆದರು.*
ಪ್ರಸ್ತುತ ಮಹಾತ್ಮರುಗಳ ಹತ್ತಿರದಲ್ಲೇ ಶಾದುಲಿ ತ್ವರಿಕತ್ತಿನ ನಾಲ್ಕು ಖಲೀಫರುಗಳ ಮಕ್ಬರಗಳು ಕೂಡ ಇದೆ.
ಅಲ್ಲದೇ ಆ ಮಖ್ಬರಗಳ ಪೈಕಿಯಲ್ಲಿ ಬಹುಮಾನ್ಯರಾದ ಪಾಣಕ್ಕಾಡ್ ಶಿಹಾಬ್ ತಂಙಳ್ ರವರ 5'ನೇ ಪಿತಾಮಹಾನರು ಒಳಗೊಂಡ ಅನೇಕ ಮಹಾತ್ಮರುಗಳ ಮಖ್ಬರಗಳೂ ಇದೆ.
ಅಲ್ಲಿರುವ ಹಳೇ ಕಾಲದ ಮಸೀದಿ ಮತ್ತು ಅದರ ಪಕ್ಕದಲ್ಲಿರುವ ಕೊಳವನ್ನು ನೋಡಬೇಕಾದಂತದ್ದು.! ಮಾತ್ರವಲ್ಲ ಬಹಳಾ ವಿಶೇಷತೆಯೂ ಇದೆ. ಇಲ್ಲಿಯ ದೃಶ್ಯಗಳು ನಮ್ಮನ್ನು ಹಲವಾರು ಕಾಲದ ಹಿಂದಿನ ಚರಿತ್ರೆಯ ಇತಿಹಾಸದ ಪುಟವನ್ನು ಪುನರಾವರ್ತಿಸುತ್ತದೆ.
ವರ್ಷಂ ಪ್ರತಿ ದುಲ್ 'ಹಜ್ಜ್ ತಿಂಗಳ ಚಾಂದ್ 17'ರಂದು ಸಯ್ಯಿದ್ ಜಲಾಲುದ್ದೀನ್ ಬುಖಾರಿ" ( ರ) ರವರ ಆಂಡ್ ನೇರ್ಚೆಯು (ಉರೂಸ್)
ಕಣ್ಣೂರು ಒಳಪಟ್ಟಣದ ಹತ್ತಿರ ಕಕ್ಕಲಂಗರ ಜುಮಾ ಮಸೀದಿಯ ಸಭಾಂಗಣದಲ್ಲಿ ಜರಗುತ್ತದೆ.
ಮಹಾನವರುಗಳ ಬರ್ಕತ್ತಿನಿಂದ ಅಲ್ಲಾಹು ನಮ್ಮನ್ನು ವಿಜಯಿಗಳ ಜೊತೆ ಸೇರಿಸಲಿ ಆಮೀನ್.
🛣 ದಾರಿ:👉 ಕಣ್ಣೂರು ಚಿರಕ್ಕಲ್ ಜಂಕ್ಷನ್'ನಿಂದ ಮನ್ನಾ ಜಂಕ್ಷನ್ ದಾರಿಯಾಗಿ ಒಳಪಟ್ಟಣಂ ಕಕ್ಕುಲಂಗರಗೆ ತಲುಪಬಹುದು. ಕಣ್ಣೂರು ಸಿಟಿಯಿಂದ 8 ಕೀ ಮಿ ದೂರವಾಗಿದೆ ಮಖಾಂ ನೆಲೆಗೊಳ್ಳುವುದು.
✍ ಗಫೂರ್ ಬಾಯಾರ್.





No comments:
Post a Comment