Saturday, December 2, 2017

*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣1⃣

 ಯಾವುದೇ ವಿಷಯವಾದರೂ ಇಸ್ಲಾಂ ಧರ್ಮವನ್ನು ಅದರ ಪ್ರವಾದಿಯವರನ್ನೂ ವಿಮರ್ಷಣೆಗೆ ಒಳಪಿಸುವ ಜೂದ ಸಿಯೋನಿಷ್ಟ್ ಲೋಬಿಗಳು ಅಧಿಕವಾಗಿ ಚರ್ಚೆಗೊಳಪಡಿಸುವ ಒಂದು ವಿಷಯವಾಗಿದೆ ಪ್ರವಾದಿಯವರ ಬಹುಪತ್ನಿತ್ವ. ಮುಸ್ಲಿಮರಿಗೆ ಒಂದೇ ಸಮಯದಲ್ಲಿ ನಾಲ್ಕರವರೇಗೆ ಮಾತ್ರ ಪತ್ನಿಯರನ್ನು ಹೊಂದಲೂ ಅವಕಾಶ ನೀಡಿ ಪ್ರವಾದಿಯವರು ಹನ್ನೆರಡು ಪತ್ನಿಯರನ್ನು ಹೊಂದಿದ ವಿರೋಧಾಭಾಸದ ಕುರಿತಾಗಿದೆ ಇವರಿಗೆ ಅಹವಾಲು ಹೇಳಲಿಕ್ಕಿರುವುದು. ಇಸ್ಲಾಮಿನಲ್ಲಿ ಜಾತಿಪದ್ದತಿ ಇದೆಯೆಂದು ಕಂಡುಹಿಡಿದ ಕಾಣದ ಕೈಗಳಾಗಿವೆ ಇದರ ಹಿಂದೆಯೂ ಇರುವುದು. ಪ್ರವಾದಿಯವರ ಬಹುಪತ್ನಿತ್ವದ ಕುರಿತು ಹೃಸ್ವವಾದ ರೀತಿಯಲ್ಲಿ ನಾವೊಮ್ಮೆ ಅವಲೋಕನ ನಡೆಸುವ.

 ಪ್ರವಾದಿಯವರ ಮೊದಲ ವಿವಾಹವೂ 25ನೇ ವಯಸ್ಸಿನಲ್ಲಾಗಿತ್ತು ನಡೆದದ್ದು. ಪತ್ನಿಯಾದ ಖತೀಜ್ ಬೀವಿಯವರಿಗೆ ಪ್ರವಾದಿಯವರಿಗಿಂತ 15 ವರ್ಷ ಜಾಸ್ತಿಯಾಗಿತ್ತು. 40 ವರ್ಷದವರಾದ ಖತೀಜಾ ಬೀವಿಯೂ ಅಂದಿನ ಉತ್ತಮವಾದ ವ್ಯವಹಾರ ಮಾಡುವವರಾಗಿದ್ದರು. ಪ್ರವಾದಿಯವರ ಸತ್ಯಸಂಧತೆಯನ್ನೂ ವ್ಯಕ್ತಿ ಪ್ರಭಾವವನ್ನೂ ತಿಳಿದುಕೊಂಡ ಬೀವಿಯವರು ಪ್ರವಾದಿಯವರಿಗೆ ಮೊದಲು ತನ್ನ ವ್ಯವಹಾರದ ಜವಾಬ್ದಾರಿಯನ್ನು ನೀಡಿದರು. ಆ ಮೂಲಕ ವ್ಯವಹಾರವೂ ಅಭಿವೃದ್ದಿ ಹೊಂದಿದ್ದರಿಂದ ಪ್ರವಾದಿಯವರನ್ನು ಜೀವನ ಸಂಗಾತಿಯನ್ನಾಗಿಸಲೂ ತೀರ್ಮಾನಿಸಿದರು. ಅದರಂತೆ ಅವರ ವಿವಾಹವೂ ನಡೆಯಿತು. ಪ್ರವಾದಿ (ಸ.ಅ)ರವರಿಗೆ ಇಬ್ರಾಹೀಂ ಎಂಬ ಪುತ್ರನ ಹೊರತು ಉಳಿದ ಆರು ಮಕ್ಕಳು ಖತೀಜಾ ಬೀವಿಯವರಿಂದ ಜನಿಸಿದ್ದಾಗಿದೆ. ಅರಬಿಗಳಲ್ಲಿ ಬಹುಪತ್ನಿತ್ವವೂ ವ್ಯಾಪಕವಾಗಿದ್ದರೂ ಕೂಡಾ ಖತೀಜಾ ಬೀವಿಯವರ ಮರಣದವರೇಗೆ ಪ್ರವಾದಿಯವರು ಬೇರೆ ವಿವಾಹವಾಗಲಿಲ್ಲ. ಪ್ರವಾದಿಯವರಿಗೆ 50 ವರ್ಷವಾದಾಗಾಗಿತ್ತು ಬೀವಿಯವರು ಮರಣಹೊಂದಿದ್ದು. ಅತೀ ಸಂತೃಪ್ತಿಯಿಂದ ಕೂಡಿದ್ದಾಗಿತ್ತು ಆ ದಾಂಪತ್ಯ ಜೀವನ. ಪ್ರವಾದಿಯವರ ದುಃಖದಲ್ಲಿಯೂ ಸಂತೋಷದಲ್ಲಿಯೂ ಬೀವಿಯವರು ಪೂರ್ಣವಾಗಿ ಭಾಗಿಯಾಗುತ್ತಿದ್ದರು. ಸಂಕಷ್ಟದ ಸಂಧರ್ಭಗಳಲ್ಲಿ ಸಾಂತ್ವಾನವನ್ನು ನೀಡಿದರು. ಬೀವಿಯವರು 65ನೇ ವಯಸ್ಸಿನಲ್ಲಿ ಮರಣಹೊಂದುವವರೇಗೆ ಪ್ರವಾದಿಯವರ ಎಲ್ಲಾ ಆಗುಹೋಗುಗಳಲ್ಲಿಯೂ ಭಾಗಿಯಾಗುತ್ತಿದ್ದರು. ಮೊತ್ತಮೊದಲನೆಯದಾಗಿ ಪ್ರವಾದಿಯವರ ಸಂದೇಶವನ್ನು ಸ್ವೀಕರಿಸಿ ಮುಸ್ಲಿಮಾದ ವನಿತೆ ಖತೀಜ ಬೀವಿಯವರಾಗಿದ್ದರು. ಬೀವಿಯವರ ವಯೋಗವೂ ಪ್ರವಾದಿ (ಸ.ಅ)ರವರನ್ನು ಅಗಾಧವಾದ ದುಃಖಕ್ಕೀಡು ಮಾಡಿತ್ತು.
         
*(ಮುಂದುವರೆಯುವುದು)*

No comments:

Post a Comment