Saturday, December 2, 2017

*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘    *ಪ್ರವಾದಿಯವರ ಬಹುಪತ್ನಿತ್ವ    🏘🏘🏘    ಸತ್ಯಾಂಶವೇನು...?*       🏘🏘🏘🏘🏘🏘🏘🏘🏘🏘🏘🏘🏘

*﷽*

*ಸಂಚಿಕೆ* 0⃣2⃣

💥 ಪ್ರವಾದಿಯವರ ಎರಡನೇ ಪತ್ನಿಯಾದ ಸೌದ ಬೀವಿಯವರು ವಿಧವೆಯಾದ ವೃಧ್ಧ ಮಹಿಳೆಯಾಗಿದ್ದರು. ಮೊದಲು ಪ್ರವಾದಿಯವರ ಓರ್ವ ಅನುಯಾಯಿಯ ಪತ್ನಿಯಾಗಿದ್ದ ಇವರು ಪತಿಯೊಂದಿಗೆ ಅಬಿಸೀನಿಯಾಕ್ಕೆ ಪಾಲಾಯಣ ಮಾಡಿದ್ದರು. ಅಲ್ಲಿಂದ ಹಿಂತಿರುಗಿ ಬರುವಾಗ ಪತಿ ಮರಣ ಹೊಂದಿದ್ದರಿಂದ ಅವರು ಒಂಟಿಯಾದರು. ಅವರಿಗೆ ಸಂರಕ್ಷಣೆಯನ್ನು ನೀಡಲು ಪ್ರವಾದಿಯವರು ಅನುಯಾಯಿಗಳೊಂದಿಗೆ ಹೇಳಿದರು. ಒಂದು ದಿವಸ ಪ್ರವಾದಿಯವರ ಸನ್ನಿಧಿಗೆ ಬಂದು ತನ್ನನ್ನು ವಹಿಸಿಕೊಳ್ಳಬೇಕೆಂದು ಕಣ್ಣೀರಿನೊಂದಿಗೆ ಅಪೇಕ್ಷಿಸಿದರು. ಕಾರುಣ್ಯದ ಕಡಲಾದ ಪ್ರವಾದಿಯವರು ಆ ವಯೋವೃಧ್ಧೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದರು.

💥 ಮೂರನೇ ಪತ್ನಿ ಆಯಿಶಾ ಬೀವಿ (ರ.ಅ)ರವರು ಅಬೂಬಕ್ಕರ್ ಸಿದ್ದೀಖ್ (ರ.ಅ)ರವರ ಮಗಳಾಗಿದ್ದಾರೆ. ಪ್ರವಾದಿಯವರೊಂದಿಗೆ ಹತ್ತಿರದ ಸಂಭಂಧವನ್ನು ಸ್ಥಾಪಿಸಲೂ ಆಗ್ರಹಿಸಿದ ಸಿದ್ದೀಖ್ (ರ.ಅ)ರವರಾಗಿದ್ದಾರೆ ಬಾಲಕಿಯಾದ ಮಗಳನ್ನು ಪ್ರವಾದಿಯವರಿಗೆ ವಿವಾಹ ಮಾಡಿಕೊಡಲೂ ಮುಂದಾದದ್ದು. ಪತ್ನಿಯಾದ ಆಯಿಶಾ (ರ.ಅ)ರವರು ತನ್ನ ಆಟಿಕೆಗಳೊಂದಿಗಾಗಿತ್ತು ಪ್ರವಾದಿಯವರನ್ನು ಸ್ವೀಕರಿಸಿದ್ದು. ವಿವಾಹ ಕಳೆದು ಹಲವು ವರ್ಷಗಳ ಕಾಲ ತಂದೆಯ ಮನೆಯಲ್ಲಿಯೇ ಆಗಿತ್ತು ಬೀವಿಯವರು ಜೀವಿಸಿದ್ದು. ಖತೀಜಾ ಬೀವಿಯವರ ನಂತರ ಪ್ರವಾದಿಯವರಿಗೆ ಅತಿಯಾಗಿ ಸಹಕಾರಿಯಾದದ್ದು ಆಯಿಶಾ ಬೀವಿಯವರಾಗಿದ್ದರು. ಇಸ್ಲಾಮಿಗೆ ಬಹಳಷ್ಟು ಕೊಡುಗೆಗಳನ್ನು ನೀಡಲೂ ಆಯಿಶಾ ಬೀವಿಯವರಿಗೆ ಸಾದ್ಯವಾಯಿತು. ಬೀವಿಯವರ ಕೋಣೆಯಲ್ಲಿ ಹಲವು ಸಲ ಪ್ರವಾದಿಯವರಿಗೆ ದೈವ ಸಂದೇಶವೂ ಅವತರಿಸಿದೆ. ಪ್ರವಾದಿಯವರ ಮರಣದ ನಂತರ 30 ವರ್ಷದವರೇಗೆ ಆಯಿಶಾ ಬೀವಿಯವರು ಜೀವಿಸಿದ್ದಾರೆ.

(ಮುಂದುವರೆಯುವುದು)
🌻⭐⭐⭐☀☀☀✨✨

No comments:

Post a Comment