Saturday, December 2, 2017

*ಸಲಪಿಯ ಕೊನೆಯ ಅಸ್ತ್ರವೂ ನಡೆಯದಿದ್ದಾಗ*

ಈದ್ ಮೀಲಾದ್ ನ ಅಂಗವಾಗಿ ಎಲ್ಲಾ ಕಡೆ ಮಸೀದಿ ಕಂಗೊಳಿಸುತ್ತಾ ಇದೆ.
ಸಂತೋಷ ದ ವೇಳೆ ಲೈಟಿಂಗ್ಸ್ ಗಳ ಮೂಲಕ ಅಲಂಕರಿಸುವುದು ಮಾಮೂಲಿಯಾಗಿದೆ.ಇದು ಎಲ್ಲರೂ ನಿರ್ವಹಿಸುವ ಕಾರ್ಯವಾಗಿದೆ.ಸಲಪಿಗಳ ಸಮ್ಮೇಳನ , ವಾರ್ಷಿಕ ನಡೆಯುವಾಗ ಅಲ್ಲೆಲ್ಲಾ ಅಗತ್ಯಕ್ಕಿಂತ ಹೆಚ್ಚು ಲೈಟ್ ಗಳು ಹೊತ್ತುತ್ತಾ ಇರುತ್ತದೆ.
ಈದ್ ಮಿಲಾದ್ ಗೆ ಲೈಟಿಂಗ್ ಕಾಣುವಾಗ ಸಲಪಿಯ ಪಿತ್ತ ನೆತ್ತಿಗೇರುತ್ತದೆ.
ಅವನಿಗೆ ಆವಗ ಖುರ್'ಆನ್ ,ಹದೀಸ್ ನೆನಪಾಗುತ್ತದೆ.
ಮಸೀದಿಯನ್ನು ಅಲಂಕರಿಸಕೂಡದೆಂದು ಸಲಪಿ ಹೊಸ ವಾದದೊಂದಿಗೆ ಬಂದಿದ್ದಾನೆ.
ಹಾಗಾದ್ರೆ ಈ ಸಲಪಿಯ ಅಪ್ಪಂದಿರು ನೇತೃತ್ವ ನೀಡುತ್ತಿರುವ ಮಕ್ಕಾ ಮತ್ತು ಮದೀನಾ ಮಸೀದಿಯನ್ನು ಯಾಕೆ ಅಲಂಕರಿಸುತ್ತಾರೆ?
ಮಕ್ಕಾ ಮದೀನಾ ಮಸೀದಿ ಅಗತ್ಯಕ್ಕಿಂತ ಹೆಚ್ಚು ಅಲಂಕರಿಸಿಲ್ಲ ಎಂಬ ವಾದ ಈ ಬರೆದ ಸಲಪಿಗಿದೆಯಾ?

ಸಲಪಿಯ ಮಸೀದಿ ಸಹಿತ ಎಲ್ಲಾ ಮಸೀದಿಗಳು ಈಗೀಗ ಆಡಂಭರದಿಂದ ಕೂಡಿಲ್ಲವೇ?

ಮಸೀದಿಯನ್ನು ಅಲಂಕರಿಸಕೂಡದು ಎಂಬ ಅರ್ಥವಿರುವ ಹದೀಸನ್ನು ವ್ಯಾಖ್ಯಾನಿಸಿ ಪ್ರಖ್ಯಾತ ವಿಧ್ವಾಂಸರಾದ ಹಾಫಿಲ್ ಇಬ್ನ್ ಹಜರ್ (ರ)ಹೇಳುವುದು ನೋಡಿ,
وقال ابن المنير :لما شيد الناس بيوتهم وزخرفوها ناسب ان يصنع ذلك بالمساجد صونا لها عن الاستهانة .(فتح الباري 1/541)
ಜನರು ಅವರ ಮನೆಗಳನ್ನು ಅಲಂಕರಿಸತೊಡಗಿದಾಗ ಮಸೀದಿಗಳನ್ನು ಕೂಡಾ ಅಲಂಕರಿಸಬೇಕಾದ ಅನಿವಾರ್ಯತೆ ಬಂತು.
ಇಲ್ಲದಿದ್ದರೆ ಮಸೀದಿಯೊಂದಿಗೆ ಜನರಿಗೆ ತಾತ್ಸಾರ ಮನೋಭಾವ ಬರಬಹುದು.
(ಫತ್'ಹುಲ್ ಬಾರೀ1/541).

ವಿಶೇಷವಾಗಿಯೂ ಈ ಕಾಲದಲ್ಲಿ ಮಸೀದಿ ಮತ್ತು ಮುಸ್ಲಿಮರ ಆರಾಧನಾಲಯಗಳನ್ನು ಅಲಂಕರಿಸದಿದ್ದಲ್ಲಿ ಇತರ ಧರ್ಮದ ಜನರಿಗೆ ತಾತ್ಸಾರ ಮನೋಭಾವವುಂಟಾಗಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ.

*ನಿಮ್ಮವ*

No comments:

Post a Comment