*ಮೀಲಾದ್ ರ‌್ಯಾಲಿಗಳಲ್ಲಿ ಅತಿರೇಕ ಯಾತಕ್ಕೆ?.*
ಪ್ರವಾದಿ ﷺ ರ ಜೀವನ ಸಂದೇಶವನ್ನು ಸಾರ್ವಜನಿಕವಾಗಿ ನೀಡುತ್ತಾ ಸಾಗುವ ಒಂದು ಅವಕಾಶವಾಗಿದೆ ಮೀಲಾದ್ ರ‌್ಯಾಲಿಗಳು. ಅದನ್ನು ಸೂಕ್ತ ರೀತಿಯಲ್ಲಿ ಬಳಸಬೇಕೇ ಹೊರತು, ವಿರೋಧಿಗಳನ್ನು ಉದ್ರೇಕಿಸುವ ಅವಕಾಶವನ್ನಾಗಿ ಪರಿವರ್ತಿಸಬಾರದು.
ಅನ್ಯ ಧರ್ಮೀಯರ ಮನೆ ಮುಂದೆ, ಅನ್ಯ ಧರ್ಮೀಯರ ಆರಾಧನಾಲಯಗಳ ಮುಂದೆ ರ‌್ಯಾಲಿ ಸಾಗುವಾಗ ಅನಗತ್ಯ ಕಿರುಚಾಡುವುದು, ವಾಹನಗಳಲ್ಲಿ ಕರ್ಕಶ ಶಬ್ದಗಳನ್ನು ಮಾಡಿ ಸಾರ್ವಜನಿಕರಿಗೆ ತೊಂದರೆಗಳನ್ನು ಕೊಡುವುದು ಇತ್ಯಾದಿ ಖಂಡನೀಯ. ನೈಜ ಪ್ರವಾದಿ ﷺ ರ ಪ್ರೇಮಿಗಳಿಂದ ಇಂತಹ ದುರ್ವರ್ಥನೆ ಬರಲು ಖಂಡಿತಾ ಸಾದ್ಯವಿಲ್ಲ.
ಪ್ರವಾದಿ ﷺ ರ ಮೇಲಿನ ಪ್ರೀತಿ ಎಂದರೆ, ಅದು ಕೇವಲ ಹಸಿರು ತೋರಣ ಕಟ್ಟುವುದಲ್ಲ, ಉದ್ರೇಕಕ್ಕೆ ಪ್ರತಿ ಉದ್ರೇಕತೆ ಸೃಷ್ಟಿಸುವುದಲ್ಲ. ಬದಲಾಗಿ, ಪ್ರವಾದಿ ﷺ ರ ಕೀರ್ತನೆಯನ್ನು ಹಾಡುವುದು, ಪ್ರವಾದಿ ﷺ ರ ಜೀವನ ಸಂದೇಶವನ್ನು ನೀಡುವುದು, ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವುದು, ಸ್ವಲಾತ್-ಸಲಾಂ ಹೇಳುತ್ತಾ ಶಾಂತಿಯುತವಾಗಿ ರ‌್ಯಾಲಿಯಲ್ಲಿ ಸಾಗುವುದು.
ಇತ್ಯಾದಿ, ಪ್ರವಾದಿ ﷺ ರು ತೋರಿಸಿಕೊಟ್ಟ ಆದರ್ಶವನ್ನು ಜೀವನದಲ್ಲಿ ಅಳವಡಿಸುವ ಮೂಲಕ ಪ್ರವಾದಿ ﷺ ರ ಮೇಲಿನ ಪ್ರೀತಿಯನ್ನು ಪ್ರಕಟಿಸಬೇಕು. ಅವಾಗ ಮಾತ್ರ ನಾವು ನೈಜ ಪ್ರವಾದಿ ﷺ ರ ಪ್ರೇಮಿಗಳಾಗಲು ಸಾದ್ಯ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment