ಅಲ್ಲಾಹನಿಂದ ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಸಮಯಗಳ ಕುರಿತು ಪ್ರವಾದಿಯವರು(ಸ) ತಿಳಿಸಿದ್ದಾರೆ. ಅವು ಗ ಳಾವುವೆಂದರೆ:
1) ರಾತ್ರಿಯ ಅಂತಿಮ ಜಾವ:
ಹ. ಅಮ್ರ್ ಬಿನ್ ಆಸ್(ರ)ರವರು ವರದಿ ಮಾಡುತ್ತಾರೆ, “ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ನಾನು ಕೇಳಿದ್ದೇನೆ, ಪ್ರಭುವು ತನ್ನ ದಾಸನಿಗೆ ಅತ್ಯಧಿಕ ನಿಕಟನಾಗಿರುವ ಸಮಯವು ರಾತ್ರಿಯ ಅಂತಿಮ ಜಾವವಾಗಿದೆ. ನಿಮಗೆ ಸಾಧ್ಯವಾದರೆ ರಾತ್ರಿಯ ಕೊನೆಯ ಜಾವಗಳಲ್ಲಿ ಅಲ್ಲಾಹನನ್ನು ಸ್ಮರಿಸುವವ ರೊಂದಿಗೆ ಸೇರಿರಿ.” (ತಿರ್ಮಿದಿ)
2) ಅದಾನ್ ಹಾಗೂ
ಇಕಾಮತ್‍ನ ಮಧ್ಯದಲ್ಲಿ:
ಅನಸ್(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿರುವರು, “ಅದಾನ್ ಹಾಗೂ ಇಕಾಮತ್‍ನ ಮಧ್ಯದಲ್ಲಿ ಮಾಡಿದ ಪ್ರಾರ್ಥನೆಯು ನಿರಾಕರಿಸಲ್ಪಡುವುದಿಲ್ಲ.”
3) ಶುಕ್ರವಾರದ ಒಂದು ಸಮಯ:
ಹ. ಅಬೂಹುರೈರಾ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಶುಕ್ರವಾರದಂದು ಒಂದು ಸಮಯ ವಿದೆ. ಆ ವೇಳೆಯಲ್ಲಿ ಯಾರಾದರೂ ನಮಾಝ್ ಹಾಗೂ ದುಆ ಮಾಡು ತ್ತಿದ್ದರೆ ಅಲ್ಲಾಹನು ಖಂಡಿತವಾಗಿಯೂ ಆತನ ಆಕಾಂಕ್ಷೆಗಳನ್ನು ಪೂರೈಸುತ್ತಾನೆ. ಪ್ರವಾದಿಯವರು(ಸ) ತಮ್ಮ ಕೈಯನ್ನು ಎತ್ತಿ ಆ ವೇಳೆಯ ಸಂಕ್ಷಿಪ್ತತೆಯನ್ನು ತೋರಿಸಿದರು.” (ಸಹೀಹ್ ಬುಖಾರಿ)
ಕೆಲವರ ಅಭಿಪ್ರಾಯದಂತೆ ಆ ಸಮಯವು ಶುಕ್ರವಾರದ ನಮಾಝಿ ನಂದು ಇಮಾಮರು ಮಸೀದಿಯಲ್ಲಿ ಪ್ರವೇಶಿಸಿದ ಸಮಯದಿಂದ ನಮಾಝ್ ಮುಗಿಯುವ ಅವಧಿಯವರೆಗೆ (ಉದಾ: ಎರಡು ಖುತ್ಬಾದ ಮಧ್ಯದಲ್ಲಿ). ಇನ್ನು ಕೆಲವರು ಅಭಿಪ್ರಾಯದಂತೆ, ಅದು ಆ ದಿನದ ಕೊನೆಯ ಸಮಯ. ಅಂದರೆ ಅಸರ್‍ನಿಂದ ಮಗ್ರಿಬ್ ನಮಾಝïನ ಮೊದಲಾಗಿದೆ.
4) ಝಂ ಝಂ ನೀರು
ಕುಡಿಯುವಾಗ:
ಜಾಬಿರ್(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಯಾವ ಉದ್ದೇಶಕ್ಕಾಗಿ ಕುಡಿಯುತ್ತೇವೆಯೋ ಅದೇ ಝಂ ಝಂ ನೀರಾಗಿದೆ.” (ಅಹ್ಮದ್ ಹಾಗೂ ಇಬ್ನ್‍ಮಾಜಃ)
ಇದರರ್ಥ ಝಂ ಝಂ ನೀರು ಕುಡಿಯುವಾಗ ನಮ್ಮ ಲಾಭಕ್ಕಾಗಿ ಏನಾದರೂ ಪ್ರಾರ್ಥಿಸಿದರೆ ಅದನ್ನು ಅಲ್ಲಾಹನು ಆಲಿಸುತ್ತಾನೆ. ಉದಾ: ರೋಗದಿಂದ ಗುಣಮುಖರಾಗುವುದು.
5) ಸಾಷ್ಟಾಂಗವೆರಗುವ ಸಂದರ್ಭ:
ಅಬೂ ಹುರೈರಾ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಸಾಷ್ಟಾಂಗವೆರಗಿದಾಗ ಅಲ್ಲಾಹನು ತನ್ನ ದಾಸರಿಗೆ ಅತೀ ನಿಕಟನಾಗಿರುತ್ತಾನೆ. ಆದುದರಿಂದ ಆ ಸಂದರ್ಭದಲ್ಲಿ ಹೆಚ್ಚಾಗಿ ಅಲ್ಲಾಹನಲ್ಲಿ ಬೇಡಿರಿ.”
ಆ ಸಂದರ್ಭದಲ್ಲಿ ಲೌಕಿಕ ಸುಖ ಕ್ಕಾಗಿ ಬೇಡುವ ಬದಲು ಶಾಶ್ವತ ಸುಖಕ್ಕಾಗಿ ಪ್ರಾರ್ಥಿಸಬೇಕು.
6) ರಾತ್ರಿ ಸಮಯದಲ್ಲಿ ಎಚ್ಚೆತ್ತುಕೊಂಡರೆ:
ಪ್ರವಾದಿ(ಸ) ಹೇಳಿದರು, “ರಾತ್ರಿ ಸಮಯದಲ್ಲಿ ಯಾರು ಎಚ್ಚರಗೊಂಡು ಈ ರೀತಿ ಹೇಳುವರೋ, ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು ಲಹುಲ್‍ಮುಲ್‍ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್‍ಹಮ್ದುಲಿಲ್ಲಾಹಿ, ವ ಸುಬ್ಹಾನಲ್ಲಾಹಿ ವಲಾ ಇಲಾಹ ಇಲ್ಲಲ್ಲಾಹು, ವಲ್ಲಾಹ್ ಅಕ್ಬರ್ ವಲಾಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾ. ಹೇಳಿ ನಂತರ ಅಲ್ಲಾಹುಮ್ಮ ಇಗ್‍ಫಿರ್‍ಲಿ (ಅಲ್ಲಾಹನೇ ನನ್ನನ್ನು ಕ್ಷಮಿಸು) ಎಂದು ಪ್ರಾರ್ಥಿಸಿದರೆ ಆತನು ಅದಕ್ಕೆ ಪ್ರತ್ಯುತ್ತರಿಸುತ್ತಾನೆ. ಅದೇ ರೀತಿ ಅವನು ನಮಾಝ್ ಮಾಡಿದರೆ ಅಲ್ಲಾಹನು ಅದನ್ನೂ ಸ್ವೀಕರಿಸುತ್ತಾನೆ. (ಬುಖಾರಿ) (ವರದಿ: ಉಬಾದ ಬಿನ್ ಅಸಾಮಿತ್)
7) ಮಳೆಯ ಸಂದರ್ಭದಲ್ಲಿ:
ಪ್ರವಾದಿ(ಸ) ಹೇಳಿದರು, “ಎರಡು ಪ್ರಾರ್ಥನೆಗಳು ತಿರಸ್ಕರಿಸಲ್ಪಡುವುದಿಲ್ಲ. ಅದಾನ್ ಕರೆ ಕೇಳಿದಾಗ ಹಾಗೂ ಮಳೆಯ ಸಂದರ್ಭದಲ್ಲಿ.” (ವರದಿ ಸಹ್ಲ್ ಇಬ್ನ್ ಸಾದ್(ರ))
8) ಅನ್ಯಾಯ ಹಾಗೂ ದಬ್ಬಾಳಿಕೆಯಿಂದ ಬಳಲುತ್ತಿದ್ದ ಸಂದರ್ಭ:
ಪ್ರವಾದಿ(ಸ) ಹೇಳಿದರು, “ಉಪವಾಸಿಗನು ಉಪವಾಸ ತೊರೆಯುವಾಗ, ನ್ಯಾಯವಂತ ಆಡಳಿತಗಾರ ಹಾಗೂ ದಬ್ಬಾಳಿಕೆಗೆ ಒಳಗಾದವರು. ಈ ಮೂರು ವ್ಯಕ್ತಿಗಳ ದುಆ ತಿರಸ್ಕರಿಸಲ್ಪಡುವುದಿಲ್ಲ.”
ಅದೇ ರೀತಿ ಇನ್ನೊಂದು ಹದೀಸ್‍ನಲ್ಲಿ ಪ್ರವಾದಿ(ಸ) ಹೇಳು ತ್ತಾರೆ, “ದೌರ್ಜನ್ಯಕ್ಕೊಳಗಾದವರ, ಪ್ರಯಾಣಿಕರ ಹಾಗೂ ಮಾತಾ-ಪಿತರ ಪ್ರಾರ್ಥನೆಗಳಿಗೆ ಉತ್ತರವು ಖಂಡಿತ ಲಭಿಸುತ್ತದೆ.”
9) ಅಲ್ಲಾಹನನ್ನು ಪ್ರಶಂಸಿಸುವಾಗ ಹಾಗೂ ನಮಾಝ್‍ನ ಕೊನೆಯಲ್ಲಿ ತಶಹುದ್ದ್‍ನಲ್ಲಿ ಸ್ವಲಾತ್ ಹೇಳಿದ ಬಳಿಕ ಮಾಡಿದ ಪ್ರಾರ್ಥನೆ:
ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನ ನಾಮ ದೊಂದಿಗೆ ಆತನ ಗುಣಗಾನ ಮಾಡುತ್ತಾ ಪ್ರಾರ್ಥಿಸಿದಾಗ ಹಾಗೂ ಅಲ್ಲಾಹನ ಪ್ರವಾದಿಯವರ(ಸ) ಮೇಲೆ ದರೂದ್ ಕಳಿಸಿದ ಬಳಿಕ ಆತನು ತನಗಾಗಿ ಏನನ್ನಾದರೂ ನೀಡಲಿ.” (ವರದಿ ಫದ್ದಲಹ್ ಇಬ್ನ್ ಉಬೈದ್(ರ))
10) ಓರ್ವ ಮುಸ್ಲಿಮನ ಸಹೋದರ/ರಿಯ ಅನುಪಸ್ಥಿತಿಯಲ್ಲಿ ಹೃದಯಾಂತರಾಳದಿಂದ ಹೊರಟ ಪ್ರಾರ್ಥನೆಯು ಸ್ವೀಕಾರಾರ್ಹ.
11) ಅರಫಾತ್‍ನ ದಿನದಂದು ಮಾಡಿದ ಪ್ರಾರ್ಥನೆ:
ಪ್ರವಾದಿ(ಸ) ಹೇಳಿದರು, “ಅರಫಾತ್‍ನ ದಿನದಂದು ಮಾಡಿದ ದುಆ ಅತ್ಯುತ್ತಮ ದುಆ ಆಗಿದೆ.”
12) ರಮಝಾನ್ ಮಾಸದಲ್ಲಿ ಮಾಡಿದ ದುಆ:
ಪ್ರವಾದಿ(ಸ) ಹೇಳಿದರು, “ರಮಝಾನಿನ ಸಂದರ್ಭದಲ್ಲಿ ಕಾರುಣ್ಯ/ಸ್ವರ್ಗದ ಬಾಗಿಲುಗಳು ತೆರೆಯಲ್ಪಡುವುದು, ನರಕದ ಬಾಗಿಲುಗಳು ಮುಚ್ಚಲ್ಪಡುವುವು. ಶೈತಾನನು ದಿಗ್ಬಂಧಿತ ನಾಗುವನು. ಆದುದರಿಂದ ದುಆ ಮಾಡಿರಿ. ಏಕೆಂದರೆ ಈ ಮಾಸವು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಪವಿತ್ರ ಮಾಸವಾಗಿದೆ.”
13) ಸೇನೆಗಳ ಭೇಟಿಯ ಸಂದರ್ಭ:
ಪ್ರವಾದಿ(ಸ) ಹೇಳಿದರು, “ಎರಡು ಸೇನೆಗಳ ನಡುವೆ ಕಾಳಗ ನಡೆಯುವ ಸಂದರ್ಭದಲ್ಲಿ ಭಕ್ತರು ಮಾಡಿದ ಪ್ರಾರ್ಥನೆ ತಿರಸ್ಕರಿಸಲ್ಪಡುವುದಿಲ್ಲ.” (ವರದಿ ಸಹ್ಲ್ ಇಬ್ನ್ ಸಾದ್)
14) ಅಲ್ಲಾಹನ ಸ್ಮರಣೆಗಾಗಿ ಒಟ್ಟು ಸೇರಿದ ಮುಸ್ಲಿಮರ ಕೂಟ:
ಪ್ರವಾದಿ(ಸ) ಹೇಳಿದರು, “ಅಲ್ಲಾಹನ ಸ್ಮರಣೆಗಾಗಿ ಜನರ ಗುಂಪು ಒಟ್ಟಾಗಿ ಕುಳಿತು ಧ್ಯಾನಿಸಿದಾಗ, ಅವರನ್ನು ದೇವಚರರೂ ಸುತ್ತುವರಿಯುತ್ತಾರೆ, ಅವರೆಲ್ಲರ ಮೇಲೆ ಅಲ್ಲಾಹನು ಕಾರುಣ್ಯದ ಮಳೆ ವರ್ಷಿಸುತ್ತಾನೆ ಹಾಗೂ ಅ ಲ್ಲಾಹನು ಅವರನ್ನು ಅವನ ಜೊತೆ ಅವರ ನಡುವೆ ನೆನಪಿಸುತ್ತಾನೆ.” (ಮುಸ್ಲಿಮ್)
15) ದುಲ್‍ಹಜ್ಜ್ ನ ಮೊದಲ ಹತ್ತು ದಿನ:
ಪ್ರವಾದಿ(ಸ) ಹೇಳಿದರು, “ಅಲ್ಲಾಹನಿಗೆ ಈ ಹತ್ತು ದಿನ ಗಳಲ್ಲಿ ಮಾಡಿದ ಸತ್ಕಾರ್ಯ ಇತರ ದಿನಗಳಿಗಿಂತ ಹೆಚ್ಚು ಪ್ರಿಯವಾಗಿದೆ.”
16) ಪ್ರಾಮಾಣಿಕರಾಗಿ ಅಲ್ಲಾಹನಲ್ಲಿ ಬೇಡಿದ ಪ್ರಾರ್ಥನೆ ಸ್ವೀಕರಿಸಲ್ಪಡುತ್ತದೆ.
17) ವ್ಯಕ್ತಿಯ ನಿಧನದ ಬಳಿಕ ಜನರು ಮಾಡಿದ ದುಆ:
ತನ್ನ ಪತ್ನಿ ಉಮ್ಮು ಸಲ್ಮಾರ ತಂದೆ ನಿಧನರಾದ ಕ್ಷಣವೇ, ಪ್ರವಾದಿಯವರು(ಸ) ಕಣ್ಣುಗಳನ್ನು ಮುಚ್ಚಿಕೊಂಡು, “ಅಲ್ಲಾಹನೇ ಉಮ್ಮು ಸಲ್ಮಾರ ತಂದೆಯನ್ನು ಕ್ಷಮಿಸು. ಹಾಗೂ ಸ್ವರ್ಗದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ದಯ ಪಾಲಿಸು” ಎಂದು ಪ್ರಾರ್ಥಿಸಿದರು. ನಂತರ “ಮೃತರಿಗಾಗಿ ಒಳಿತಿನ ಹೊರತು ಏನನ್ನೂ ಪ್ರಾರ್ಥಿಸಬೇಡಿ. ಏಕೆಂದರೆ ನಮ್ಮ ಪ್ರಾರ್ಥನೆಗೆ ದೇವಚರರು ಆಮೀನ್ ಎನ್ನುತ್ತಾರೆ” ಎಂದರು. (ವರದಿ: ಉಮ್ಮು ಸಲ್ಮಾ)
18) ವುಝೂ ಮಾಡಿದ ಕೂಡಲೇ ಮಾಡಿದ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ.
19) ಹಜ್ಜ್ ಸಂದರ್ಭಲ್ಲಿ ಜಮ್ರಾತ್‍ನಲ್ಲಿ ಕಲ್ಲೆಸೆಯುವಾಗ ಮಾಡಿದ ಪ್ರಾರ್ಥನೆ:
“ಪ್ರವಾದಿಯವರು(ಸ) ಸಣ್ಣ ಜಮ್ರಾತ್ (ಹಜ್ಜ್‍ನ ಕೊನೆಯ ದಿನಗಳಲ್ಲಿ ಕಲ್ಲೆಸೆಯುವ ಮೂರು ಸ್ತಂಭಗಳಲ್ಲೊಂದು. ಕಲ್ಲು ಹೊಡೆದು ನಂತರ ಕಿಬ್ಲಾದ ಕಡೆ ಮುಖ ಮಾಡಿ ತನ್ನೆರಡು ಕೈಗಳನ್ನೆತ್ತಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತದ ನಂತರ ಮಧ್ಯದ ಜಮ್ರಾತ್‍ಗೆ ಕಲ್ಲೆಸೆದು ಅದೇ ರೀತಿ ಮಾಡುತ್ತಿದ್ದರು. ಕೊನೆಯಲ್ಲಿ ದೊಡ್ಡ ಜಮ್ರಾತ್‍ಗೆ ಕಲ್ಲೆಸೆದು ದುಆ ಮಾಡದೆ ಅಲ್ಲಿಂದ ನಿರ್ಗಮಿಸಿದರು” ಎಂದು ಹದೀಸ್‍ನಲ್ಲಿ ವರದಿಯಾಗಿದೆ.
20) ಹುಂಜವು ಬಾಂಗ್ ನೀಡಿದಾಗ:
ಪ್ರವಾದಿಯವರು(ಸ) ಹೇಳಿದರು, “ಹುಂಜವು ಬಾಂಗ್ ನೀಡಿದಾಗ ನೀವು ಅಲ್ಲಾಹನಲ್ಲಿ ಕಾರುಣ್ಯಕ್ಕಾಗಿ ಪ್ರಾರ್ಥಿಸಿ. ಏಕೆಂದರೆ ಆ ವೇಳೆ ಹುಂಜಗಳಿಗೆ ದೇವಚರರು ಗೋಚರಿಸುತ್ತಾರೆ. ಕತ್ತೆಯ ಸ್ವರ ಆಲಿಸಿದಾಗ ತನಗೆ ಶೈತಾನನಿಂದ ಅಭಯ ನೀಡು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಏಕೆಂದರೆ ಆ ವೇಳೆ ಕತ್ತೆಗೆ ಶೈತಾನನು ಗೋಚರಿಸುತ್ತಾನೆ.” (ವರದಿ: ಅಬೂಹುರೈರಾ(ರ))
21) ಕಅಬಾದೊಳಗಿದ್ದಾಗ ದುಆ ಮಾಡಿರಿ:
“ಪ್ರವಾದಿ(ಸ) ಕಅಬಾದೊಳಗೆ ಪ್ರವೇಶಿಸಿದಾಗ ಅದರ ಎಲ್ಲಾ ಮೂಲೆಗಳಲ್ಲೂ ನಿಂತು ದುಆ ಮಾಡಿದರೆಂದು” ಉಸ್ಮಾನ್ ಬಿನ್ ಝೈದ್ ವರದಿ ಮಾಡುತ್ತಾರೆ.
22) ಉಮ್ರಾ ಹಾಗೂ ಹಜ್ಜ್‍ನ ಸಂದರ್ಭದಲ್ಲಿ ಸಫಾ ಹಾಗೂ ಮರ್ವಾದಲ್ಲಿ ನಿಂತು ದುಆ ಮಾಡಬೇಕು:
“ಪ್ರವಾದಿಯವರು(ಸ) ಸಫಾ-ಮರ್ವಾದಲ್ಲಿ ನಿಂತು ದೀರ್ಘಕಾಲದ ವರೆಗೆ ಪ್ರಾರ್ಥಿಸುತ್ತಿದ್ದರು.” (ಮುಸ್ಲಿಮ್)
23) ಪ್ರವಾದಿ ಸ್ಥಳಗಳಲ್ಲಿ ಮಾಡಿದ ದುಆ ಸ್ವೀಕಾರ್ಹ.
24) ಸೂರಃ ಫಾತಿಹಾ ಪಠಿಸುವಾಗ ಮಾಡಿದ ದುಆ ಸ್ವೀಕರಿಸಲ್ಪಡುತ್ತದೆ.
25) ಪ್ರವಾದಿ(ಸ) ಹೇಳುತ್ತಾರೆ, “ಇಮಾಮರು `ಆಮೀನ್’ ಎಂದಾಗ ಅವರ ಹಿಂಬಾಲಕರೂ ಆಮೀನ್ ಎನ್ನಲಿ. ಏಕೆಂದರೆ ಮಲಕ್‍ಗಳ ಜೊತೆಯಲ್ಲಿ ತಾವೂ ಆಮೀನ್ ಎಂದು ಹೇಳಿದವರ ಪಾಪಗಳು ಮನ್ನಿಸಲ್ಪಡುತ್ತವೆ.”
26) “ರೋಗಿಗಳನ್ನು ಸಂದರ್ಶಿಸಿದಾಗ, ರೋಗಿಯು ಮಾಡಿದ ದುಆ ಸ್ವೀಕರಿಸಲ್ಪಡುತ್ತದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ.
“ಅಲ್ಲಾಹನ ಬಳಿ ಬೇಡುವಾಗ ಲೌಕಿಕದ ಸುಪ್ಪತ್ತಿಗೆಯನ್ನು ಬೇಡುವುದಕ್ಕಿಂತ ಶಾಶ್ವತವಾಗಿ ವಾಸಿಸುವ ಪರಲೋಕದ ಐಶ್ವರ್ಯಕ್ಕಾಗಿ ಬೇಡುವುದೇ ನೈಜ ಮೂಮಿನ್‍ನ ಲಕ್ಷಣ.”
No comments:
Post a Comment