*ಹಬೀಬರ ಜನ್ಮದಿನದ ವೇಳೆ ಬೀಳದಿರಿ ಇಬ್ಲೀಸನ ಬಲೆಗೆ*
*✍ಸಲಾಂ ಪಡ್ಪು*
ರಬೀಉಲ್ ಅವ್ವಲ್ ತಿಂಗಳು ಆಗಮನವಾದರೆ ಸಾಕು ಮುಸ್ಲಿಂ ಸಮುದಾಯಕ್ಕೆ ಹೇಳಲು ಸಾಧ್ಯವಾಗದಂತಹಾ ಸಂತೋಷ. ಅದರಲ್ಲೂ ರಬೀಉಲ್ ಅವ್ವಲ್ 12ರಂದು ಹಬೀಬ್ (ﷺ) ತಂಙಳ್ ರವರ ಹೆಸರಿನಲ್ಲಿ ಮೌಲೂದ್ ಪಾರಾಯಣ, ಮದ್'ಹ್ ಗಾನಗಳೊಂದಿಗೆ ಅವರ ಜನ್ಮ ದಿನವನ್ನು ಕೊಂಡಾಡುವುದರಲ್ಲಿ ಮನಸ್ಸಿಗೆ ಆಗುವ ಆನಂದ ಒಂದೆರಡಲ್ಲ. ಹೀಗಿರುವಾಗ ಕೆಳವರಿಂದ ಕೇಳಿಬರುವ ಪ್ರಶ್ನೆಗಳಾಗಿದೆ ರಸೂಲರ ಮೇಲೆ ಇರುವ ಸ್ನೇಹ ತೋರಿಸಬೇಕಾದದ್ದು ಕೇವಲ ರಬೀಉಲ್ ಅವ್ವಲಿನಲ್ಲಿ ಮಾತ್ರವಾಗಿದೆಯೇ ಎಂದು.
ಇಂತಹ ಪ್ರಶ್ನೆ ಕೇಳುವವರಲ್ಲಿ ನನಗೊಂದು ಪ್ರಶ್ನೆ ಕೇಳಲಿದೆ. ಕುರ್'ಆನ್ ಓದಬೇಕಾದದ್ದು ಯಾವಾಗ? ಒಂದು ಪವಿತ್ರ ತಿಂಗಳಿನಲ್ಲಿ ಮಾತ್ರವಾ? ಅಥವ ಇನ್ನಿತರ ವಿಶೇಷ ದಿನಗಳಲ್ಲಿ ಮಾತ್ರವಾ? ಇದಕ್ಕೆ ಉತ್ತರ ಯಾವಾಗಲೂ ಎಂದಾಗಿರಬಹುದು. ಹಾಗಾದರೆ ರಮಾಳಾನ್ ತಿಂಗಳ ಹಾಗೂ ಇತರ ತಿಂಗಳಿನಲ್ಲಿ ನಡೆಯುವ ಕುರ್'ಆನ್ ಪಾರಾಯಣವನ್ನು ಒಮ್ಮೆ ನೋಡಿ. ಮಸೀದಿಗಳಲ್ಲಿ, ಮನೆಗಳಲ್ಲಿ, ಅಂಗಡಿಗಳಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಕುರ್'ಆನ್ ಪಾರಾಯಣ ಹಾಗೂ ಇನ್ನಿತರ ಇಬಾದತ್ ಗಳಲ್ಲಿ ಮುಸ್ಲಿಮ್ ಸಮುದಾಯ ಮುಳುಗಿರುತ್ತಾರೆ. ರಮಳಾನ್ ತಿಂಗಳಿಗೆ ಕುರ್'ಆನಿನ ತಿಂಗಳು ಎಂಬ ಹೆಸರೇ ಇದೆ.
ಮೇಲೆ ಹೇಳಿದಂತಹ ಪ್ರಶ್ನೆ ಕೇಳುವವರಿಗೆ ಇಲ್ಲಿ ಎರಡು ಕೆಲಸವನ್ನು ಮಾಡಬಹುದು. ಒಂದು ಕುರ್'ಆನ್ ರಮಳಾನಿನಲ್ಲಿ ಅಧಿಕವಾಗಿ ಓದುವುದರ ವಿರುದ್ದವಾಗಿ ಮಾತನಾಡಿ ಅದನ್ನು ನಿಲ್ಲಿಸುವುದು, ಅಥವಾ ಇನ್ನಿತರ ದಿನಗಳಲ್ಲಿ ಕುರ್'ಆನ್ ಪಾರಾಯಣ ಮಾಡುವುದು ಬಿಟ್ಟು ಅದನ್ನು ತಿರುಗಿ ನೋಡದವರು ಈ ತಿಂಗಳಿನಲ್ಲಾದರೂ ಸಜೀವವಾಗಿ ಪಾರಾಯಣ ಮಾಡುವುದನ್ನು ನೋಡಿ ಸಂತೋಷಪಡುವುದು. ಹಾಗೂ ಇದು ಎಲ್ಲಾ ದಿನ ಮುಂದುವರಿಸಲು ಅವರನ್ನು ಪ್ರೇರೇಪಿಸಿ ಅದಕ್ಕೆ ಬೇಕಾದ ಅನುಕೂಲವನ್ನು ಮಾಡಿಕೊಡುವುದು.
ನಾವು ಮೇಲೆ ನೋಡಿದ ಪ್ರಶ್ನೆಯನ್ನು ಕೇಳುವವರು ಮೊದಲನೆಯ ಪಂಗಡಕ್ಕೆ ಸೇರಿದವರಾಗಿದ್ದು, ಅಂಥವರ ಪ್ರಶ್ನೆ ಕೇಳಿದಾಗ ಜನಸಾಮಾನ್ಯರಲ್ಲಿ ಮೂಡಿ ಬರುವಂತಹ ಸಂಶಯ ಈ ನೆಬಿಸ್ನೇಹ ಈ ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲಾ ದಿವಸ ಹಾಗೂ ಎಲ್ಲಾ ತಿಂಗಳು ನಡೆಸಬೇಕು ಎಂದಾಗಿದೆ. ಇದು ಇಬ್ಲೀಸಿನ ಕೆಲಸವಾಗಿದೆ. ದೊಡ್ಡ ದೊಡ್ಡ ಕಾರ್ಯವನ್ನು ನೆನಪಿಸಿ ಸಣ್ಣ ಸಣ್ಣ ಕಾರ್ಯಗಳನ್ನೂ ಇಲ್ಲದಾಗಿಸಿ ಮುಸ್ಲಿಮರ ನಡುವೆ ಫಿತ್ನಗಳನ್ನು ಹಬ್ಬಿಸಿ, ದೊಡ್ಡದಾದ ಸಮಸ್ಯೆಗಳನ್ನು ಹುಟ್ಟುಹಾಕಿಸುವುದು. ಹೀಗೆ ಸುಳ್ಳುಹೇಳಿ ಅಲ್ವ ಸ್ವರ್ಗದಲ್ಲಿದ್ದ ಆದಂ ನೆಬಿ (عليه السلام) ಹಾಗೂ ಹವ್ವಾ ಉಮ್ಮರನ್ನು ಭೂಮಿಗೆ ಕಳುಹಿಸಿದ್ದು. ಹೀಗೆಯೇ ರಬೀಉಲ್ ಅವ್ವಲ್ ತಿಂಗಳಿನಲ್ಲಿ ನಡೆಸುವ ನೆಬಿ (ﷺ) ಸ್ನೇಹ ಪ್ರಕಟನೆಯನ್ನು ಹೇಗಾದರೂ ಮಾಡಿ ಇಲ್ಲದಾಗಿಸಬೇಕು ಎಂದು ಈ ಇಬ್ಲೀಸನ ಉದ್ದೇಶ. ಈ ದುರುದ್ದೇಶವನ್ನು ಅರ್ಥಮಾಡಲು ನೈಜ ಮುಸ್ಲಿಮನಿಂದ ಮಾತ್ರವಾಗಿದೆ ಸಾಧ್ಯ.
ನಿಜವಾಗಿ ಹೇಳುವುದಾದರೆ ನೆಬಿ ದಿನ ಆಚರಣೆ ಮಾತ್ರವಲ್ಲದೇ, ಆ ಆಚರಣೆಯನ್ನು ದೀನೀ ಸೇವೆಗಾಗಿ ಇನ್ನೊಂದು ಆಚರಣೆಯನ್ನಾಗಿ ಮಾರ್ಪಡಿಸುವುದಾಗಿದೆ. ಹೇಗೆಂದರೆ ಆಚರಣೆಯನ್ನು ಮನಸಾರೆ ಸ್ವಾಗತಿಸುವ ಆತುರ ಜನರಲ್ಲಿದೆ. ಇಂತಹಾ ಸಂದರ್ಭದಲ್ಲಿ ಸಾಧ್ಯವಾದಷ್ಟು ದೀನೀ ತಿಳುವಳಿಕೆ, ಅತ್ಮೀಯತೆ ಹೆಚ್ಚಿಸುವುದು ಹಾಗೂ ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸುವುದಾಗಿದೆ ಮಾಡಬೇಕಾದದ್ದು.
ತಮ್ಮ ಕೈಯಲ್ಲಿ ಏನು ಎಂದು ಕೇಳಿದಾಗ ಇದೊಂದು ಕೋಲು ಎಂದು ಒಂದೇ ವಾಕ್ಯದ ಉತ್ತರ ಹೇಳಿದರೆ ಸಾಕಾಗಿತ್ತು ಮೂಸಾ ನೆಬಿಯವರಿಗೆ. ಆದರೆ ಅವರು ಹಾಗೆ ಮಾಡಲಿಲ್ಲ ಬದಲಾಗಿ ಆ ಕೋಲಿನ ವಿವಿಧ ಉಪಯೋಗಗಳನ್ನು ವಿವರಿಸಿ ಸಿಕ್ಕಿದ ಅವಸರವನ್ನು ಸರಿಯಾಗಿ ಉಪಯೋಗಿಸಿದರು ಮೂಸಾ ನೆಬಿಯವರು. ಇದೇ ತರಹ ಇಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರ ಜನ್ಮ ದಿನ ಆಗಮನವಾಗುವಾಗ ಅವರ ಜೀವನ ಶೈಲಿ ವಿವಿಧ ರೂಪದಲ್ಲಿ ಜನಸಾಮಾನ್ಯರ ಅರಿವಿಗೆ ತಲುಪಿಸಿ ಅದರ ಮುಖಾಂತರ ದೀನನ್ನು ಇನ್ನಷ್ಟು ವ್ಯಾಪಾಕಗೊಳಿಸಲಾಗಿದೆ ನಾವು ಶ್ರಮಿಸಬೇಕಾದದ್ದು. ಬದಲಾಗಿ ಸುಳ್ಳು ಮಾಹಿತಿಗಳನ್ನು ಹೇಳಿ ಜನರಲ್ಲಿ ಮೂಡನಂಬಿಕೆಗಳನ್ನು ಸೃಷ್ಟಿಸುವುದರಿಂದ ಪ್ರಯೋಜನವಿಲ್ಲ.
ಸಹೋದರಾ ನೆನೆದ ಮಣ್ಣಿನಲ್ಲಾಗಿದೆ ಗಿಡಗಳು ಮೊಳಕೆಯೊಡೆಯುವುದು. ಆ ಗಿಡದಲ್ಲಾಗಿದೆ ಹೂವು ಅರಳುವುದು. ಹೂಗಳಿರುವಲ್ಲಿಗಾಗಿದೆ ಚಿಟ್ಟೆಗಳು ಬರುವುದು. ಹೀಗೆಯೇ ಸ್ನೇಹ ಇರುವ ಮನಸ್ಸಿನಿಂದಾಗಿದೆ ಕವನ ಸೃಷ್ಟಿಯಾಗುವುದು. ಸ್ನೇಹ ಹಾಗೂ ಕವನ ಸಹೋದರರಾಗಿದ್ದಾರೆ. ಕಲ್ಲು ಹೃದಯದಿಂದ ಕವನ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಒಣಗಿದ ಮರುಭೂಮಿಯಲ್ಲಿ ಫಲಗಳು ಸಿಗದಹಾಗೆ ಕಲ್ಲು ಹೃದಯದಲ್ಲಿ ಮಾಲಾ ಮೌಲೂದ್ ಗಳಿಗೆ ಸ್ಥಾನವಿಲ್ಲ. ಹೀಗೆ ಹೇಳಲಿರುವ ಕಾರಣವೇನೆಂದರೆ ಸ್ನೇಹ ಪ್ರಕಟಣೆ ಎಂದರೆ ಕೇವಲ ಮೌಲೂದ್, ಕವನ ಹಾಗೂ ಪ್ರಸಂಗಗಳು ಇದು ಯಾವುದೂ ಅಲ್ಲ. ಬದಲಾಗಿ ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅನುಸರಿಸಿ ಅದರಂತೆ ಜೀವಿಸುವುದಾಗಿದೆ ನಿಜವಾದ ಪ್ರವಾದಿ ಸ್ನೇಹ ಎಂದು ಹೇಳುವ ಇಬ್ಲೀಸ್ ಗಳು ಈಗಲೂ ಇಲ್ಲಿ ಇರುವುದರಿಂದಾಗಿದೆ. ಮೊದಲೇ ಹೇಳಿದ ಹಾಗೆ ಕೇಳಲು ಕೆಲವೊಮ್ಮೆ ಸತ್ಯವೆಂದೆನೆಸುವ ದೊಡ್ಡ ದೊಡ್ದ ಆಶಯಗಳನ್ನೇ ಇಬ್ಲೀಸ್ ಹೇಳುವುದು ಆದರೆ ಅದರ ಒಳಗಡೆ ಒಂದು ಮೋಸವಿರುತ್ತದೆ.
ನಾನೊಂದು ಕಥೆ ಹೇಳುತ್ತೇನೆ. ಒಂದು ಹಜ್ಜ್ ಪೆರ್ನಾಲ್ ದಿವಸ ಒಂದು ಮನೆಗೆ ಹೋದಾಗ ತಂದೆ ಹಾಗೂ ಮೂರು ಮಕ್ಕಳು ಒಟ್ಟಿಗೆ ಕುಳಿತಿರುತ್ತಾರೆ. ದೊಡ್ಡವಳು ಹೆಣ್ಣುಮಗಳು ಎಲ್ಕೇಜಿ ಕಳಿಯುವ ಹುಡುಗಿ, ಎರಡನೆಯವನು ಯುಕೆಜಿಯಲ್ಲಿ ಹಾಗೂ ಮೂರನೇಯವನು ಕೇವಲ ಒಂದು ವರ್ಷ ಪ್ರಾಯದ ಕೂಸು. ಇವರನ್ನು ತನ್ನ ಬಳಿ ಕೂರಿಸಿ ಆ ತಂದೆಯವರು ಅವರಲ್ಲಿ ಭಾಷಣ ರೂಪದಲ್ಲಿ ಹೇಳಲು ಆರಂಭಿಸುತ್ತಾರೆ. ಹಜ್ಜ್ ಎಂದರೆ ಲೋಕದಲ್ಲಿರುವ ಮುಸ್ಲಿಮರೆಲ್ಲರೂ ಅಲ್ಲಾಹನ ಅಥಿತಿಗಳಾಗಿ ಅರಫಾ ಮೈದಾನದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ಪ್ರಾರ್ಥನೆಯಲ್ಲಿ ಮುಳುಗಿರುವ ಅವಸ್ಥೆಯಲ್ಲಿರುತ್ತಾರೆ ಹೀಗೆ ಕಥೆ ಹೇಳುತ್ತಿರುವ ನಡುವೆ ಪಕ್ಕದ ಮನೆಯ ತನ್ನ ಅದೇ ವಯಸ್ಸಿನ ಹುಡುಗಿ ಹೊಸಾ ಉಡುಪು ಧರಿಸಿ ಅಂಗಳದಲ್ಲಿ ನಿಂತಿರುವುದನ್ನು ಕಂಡ ಎಲ್ಕೇಜಿಯಲ್ಲಿ ಕಳಿಯುವ ಮಗಳು ಮನೆಯ ಹೊರಗಡೆ ಓಡಲು ಆರಂಭಿಸಿದಳು, ಆದರೆ ತಂದೆ ಅದಕ್ಕೆ ಸಮ್ಮತಿಸಿಲ್ಲ ಆ ಸಮಯದಲ್ಲಿ ಅವಳ ಕಣ್ಣುಗಳಿಂದ ಕಣ್ಣೀರು ಬರುತ್ತಿತ್ತು. ಇದನ್ನು ನೋಡಿಯೂ ನೋಡದಂತೆ ನಟಿಸಿ ತಂದೆ ತನ್ನ ಕಥೆಯನ್ನು ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಒಂದು ವಯಸ್ಸಿನ ಕೂಸು ತಂದೆಯ ಮಡಿಲಲ್ಲಿ ಮೂತ್ರವಿಸರ್ಜನೆಯನ್ನೇ ಮಾಡಿದನು. ಕಥೆ ಮುಂದುವರಿಸಬೇಕಾ ಅಥವ ಮೂತ್ರವನ್ನು ಶುಚಿಗೊಳಿಸಬೇಕಾ ಎಂದು ತಂದೆ ಚಿಂತಿಸುತ್ತಿರುವ ವೇಳೆ ಏನೂ ತಿನ್ನದ ಎರಡನೇ ಮಗ ವಾಂತಿಬರುವುದಾಗಿ ನಟಿಸಿ ಅಡುಗೆಕೋಣೆಯಲ್ಲಿರುವ ತಾಯಿಯ ಬಳಿಗೆ ಓಡಿದನು. ಪಕ್ಕದಲ್ಲಿರುವ ಅಜ್ಜಿ ಈ ತಂದೆಗೆ ಬೈಯ್ಯಲು ಆರಂಭಿಸಿದರು. ಪೆರ್ನಾಲ್ ದಿವಸ ಮಕ್ಕಳಿಗೆ ಹೊಸಾ ಉಡುಪು ನೀಡಿ ಇತರ ಮಕ್ಕಳಂತೆ ಆಟವಾಡಲು ಬಿಡದೆ ಅವನ ಕಥೆ ಎಂದು ಅಜ್ಜಿ ಚರಿಪಿರಿ ಮುಂದುವರಿಸಿದರು. ಸಹೋದರಾ ಕಥೆ ನಿಲ್ಲಿಸುತ್ತೇನೆ.
ಇನ್ನು ವಿಷಯಕ್ಕೆ ಬರುವ ಹಜ್ಜ್ ಪೆರ್ನಾಲ್ ಎಂದರೆ ಹೊಸಾ ಉಡುಪುದರಿಸುವುದು, ವಿಭಿನ್ನ ಶೈಲಿಯ ಆಹಾರ ತಿನ್ನುವುದಲ್ಲ, ಬದಲಾಗಿ ಆ ಪುಣ್ಯದಿನದ ಚರಿತ್ರೆ ಹಾಗೂ ಆಶಯವನ್ನು ಪಾಲಿಸುವುದಾಗಿದೆ ಎಂದು ವಿಶ್ವಸಿದ್ದ ತಂದೆ ತನ್ನ ಮಕ್ಕಳನ್ನು ಪೆರ್ನಾಲಿಗೆ ಅವರ ಸಂತೋಷಕ್ಕೆ ಬಿಡದೆ ಮನೆಯಲ್ಲಿ ಕೂಡಿಹಾಕುವುದರ ಭಯಾನಕ ರಂಗವಾಗಿದೆ ನೀವು ಕಥೆಯಲ್ಲಿ ಕಾಣಲು ಸಾಧ್ಯವಾದದ್ದು. ಇದೇ ತರಹ ನೆಬಿದಿನದ ಅಂದು ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಪ್ರವಾದಿಯವರ ಜೀವನ ಶೈಲಿಯನ್ನು ಈಗಿನ ಕೆಲವು ಲೇಖಕರು ಬರೆದ ಭಯಾನಕ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದ್ದಲ್ಲಿ ಮುಂದಿನ ನೆಬಿದಿನ ಬರುವುದಕ್ಕಿಂತ ಮೊದಲು ಸಣ್ಣ ಮಕ್ಕಳಿಗೆ ನಡುಕ ಹಾಗೂ ಜ್ವರ ಬರಲು ಆರಂಭವಾಗಬಹುದು.
ಈ ಸಮಾಜದಲ್ಲಿ ಮಕ್ಕಳು, ದೊಡ್ಡವರು, ಧನಿಕರು, ಭಿಕ್ಷುಕರು ಹಾಗೆ ಹಲವಾರು ರೀತಿಯಲ್ಲಿ ಜೀವಿಸುವವರಿದ್ದಾರೆ. ಒಬ್ಬೊಬ್ಬರ ಜೀವನ ಶೈಲಿ ಒಂದೊಂದು ರೀತಿಯಾಗಿರುತ್ತದೆ. ಮಕ್ಕಳಿಗೆ ಪೆರ್ನಾಲ್ ಎಂದರೆ ಹೊಸಾ ಉಡುಪು, ಹಾಡು, ಆಟ ಹಾಗೂ ವಿವಿಧ ಶೈಲಿಯಲ್ಲಿರುವ ಆಹಾರವಾಗಿದೆ. ತಾಯಿಯಂದರ ಕುರಿತು ಹೇಳುವುದಾದರೆ ಈ ಮಕ್ಕಳ ಆಟ ನೋಡಿ ಆನಂಧಿಸುವುದಾಗಿದೆ ಪೆರ್ನಾಲ್, ಇದೇ ರೀತಿ ಹಲವರಿಗೆ ಹಲವು ರೀತಿಯಲ್ಲಾಗಿದೆ ಆಚರಣೆ. ಪೆರ್ನಾಲಿನ ಎಲ್ಲಾ ಅನಂದವನ್ನು ಬದಿಗಿಟ್ಟು ಫಲಸ್ತೀನ್ ಮೈದಾನದ ವಿಷಯ ತ್ಯಾಗಬಲಿದಾನದ ವಿಷಯವನ್ನೇ ಎಲ್ಲರಲ್ಲೂ ಒಂದೇ ರೀತಿಯಲ್ಲಿ ವಿವರಿಸಲು ಹೊರಟರೆ ಮತ್ತೆ ಪೆರ್ನಾಲ್ ಎಂದು ಕೇಳುವಾಗಲೇ ಎಲ್ಲರ ಮನಸ್ಸಲ್ಲಿ ಒಂದು ರೀತಿಯ ಭೀತಿ ಹುಟ್ಟಬಹುದು. ನೆಬಿದಿನದ ವಿಷಯವೂ ಇದೇ ರೀತಿಯಾಗಿದೆ. ಯಾಕೆ ಈ ಧಫ್, ರ್ಯಾಲಿ,ಮೌಲೂದ್, ಬುರ್ದಾ, ಹಾಡು, ಪ್ರಸಂಗ ಹಾಗೂ ಅನ್ನ ದಾನ ಎಂದು ಸಂಶಯಿಸುವವರೇ, ನೀವು ಒಮ್ಮೆ ಆ ಕಥೆ ಕೇಳಿದ ಮಕ್ಕಳ ಅವಸ್ಥೆಯನ್ನು ನೆನಪಿಸಿ ನೋಡಿ. ಮಕ್ಕಳ ಮನಸ್ಸಲ್ಲಿ ಮುತ್ತ್ ನೆಬಿಯರು ಸ್ನೇಹದೂತರಾಗಿ ಹುಟ್ಟಿ ಬರಬೇಕು. ಅದಕ್ಕಾಗಿ ಅವರು ಅರ್ಥಮಾಡುವ ರೀತಿಯಲ್ಲಿ ಅವರಿಗೆ ಹೇಳಿಕೊಡಬೇಕು. ರಬೀಉಲ್ ಅವ್ವಲ್ ಆರಂಭವಾಗುತ್ತದೆ ಎಂದು ಕೇಳುವಾಗ ಮಕ್ಕಳ ಮನಸ್ಸಲ್ಲಿ ನೆಬಿಯರ ಇಷ್ಕ್ ಉಕ್ಕಿ ಬರಬೇಕು. ಅದಕ್ಕಾಗಿ ರ್ಯಾಲಿ, ಹಾಡು, ಮೌಲೂದ್, ಧಫ್ ಹಾಗೂ ಇನ್ನಿತರ ಕಾರ್ಯಕ್ರಮಗಳೇ ಸೂಕ್ತವಾದ ರೀತಿಯಾಗಿದೆ. ಮಾತ್ರವಲ್ಲದೇ ಮನೆಯೊಳಗಿರುವ ತಾಯಂದಿರ ವಿಷಯ ಹೇಳುವುದಾದರೆ ನೆಬಿದಿನದ ಒಂದು ತುತ್ತು ಅನ್ನ ಸಿಗುವುದು ಎಂದರೆ ಅದು ಮಹಾ ಭಾಗ್ಯವಾಗಿದೆ. ಅವರಿಗೆ ಹೊಟ್ಟೆ ತುಂಬಿಸಲು ಬೇರೆ ದಾರಿ ಇಲ್ಲದ್ದಕ್ಕಲ್ಲ ಇಷ್ಟು ಆಸೆ, ಬದಲಿಗೆ ಮನೆಯಲ್ಲಿ ವಿವಿಧ ಶೈಲಿಯಲ್ಲಿರುವ ಆಹಾರ ಪದಾರ್ಥಗಳ ನಡುವೆ ರಸೂಲ್ (ﷺ)ರ ಹೆಸರಿನಲ್ಲಿ ಸಿಗುವ ಒಂದು ತುತ್ತು ಎಂದರೆ ರಸೂಲ್ (ﷺ)ರನ್ನು ಪ್ರೀತಿಸುವವರಿಗೆ ಅದೂವೇ ಎಲ್ಲವೂ ಆಗಿದೆ.
ಸತ್ಯವಿಶ್ವಾಸಿಯ ಮನಸ್ಸಿನಲ್ಲಿ ಎಂದೆಂದಿಗೂ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರಿಗಿಂತ ಉನ್ನತ ಸ್ಥಾನ ಬೇರೆ ಯಾರಿಗೂ ಇರುವುದಿಲ್ಲ.
(ರಿಸಾಲದಿಂದ ಕನ್ನಡಕ್ಕೆ)
*✍ಸಲಾಂ ಪಡ್ಪು*
No comments:
Post a Comment