Sunday, November 26, 2017

*ಝಿಯಾರತ್ತ್ ಕೇಂದ್ರ*
🍂🍂3⃣3⃣🍂🍂
ಭಾಗ--01
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟೆ.
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
☘☘☘☘☘☘☘

✍ಗಫೂರ್ ಬಾಯಾರ್
〰〰〰〰〰〰〰
ಕೇರಳದ ಕಲ್ಲಿಕೋಟೆ ಜಿಲ್ಲೆಯ ಇಡಿಯಂಙರ ಶೈಖ್ ಮಸ್ಜಿದ್ ಬಹಳಾ ಸುಪ್ರಸಿದ್ದವಾದ  ಮಸಿದಿಗಳಲ್ಲೊಂದಾಗಿದೆ.

 ಫ್ರಾನ್ಸಿಸ್ ರಸ್ತೆಯ ಇಡಿಯಂಙರ ಎಂಬ  ಸ್ಥಳದಲ್ಲಿ ನೆಲೆಗೊಳ್ಳುವ ಶೈಖವರ ಪುಣ್ಯ ಮಖಾಮಿಗೂ ವೈವಿಧ್ಯವಾದ ಸವಿಶೇಷತೆಯೂ ಪುರಾತನ ಇತಿಹಾಸವೂ ಇದೆ.

ರಜಬ್ ತಿಂಗಳ ಪ್ರಥಮ ವಾರದಲ್ಲಿ ಆರಂಭಗೊಳ್ಳುವ
 *ಅಪ್ಪವಾಣಿಭ ನೇರ್ಚೆ* ಎಂಬ ಹಸರಿನಲ್ಲಿ  ಕೇರಳದಲ್ಲಿ ಅತೀ ಪುರಾತನ ಕಾಲದಿಂದ ಇಂದಿನ ವರೆಗೂ ಬಹಳ ಪ್ರಖ್ಯಾತಿಯು ಮತ್ತು ವೈಶಿಷ್ಟ್ಯತೆಯನ್ನು ಹೊಂದಿದ ಉರೂಸುಗಳಲ್ಲಿ ಒಂದಾಗಿದೆ.
ದೇಹಾ ಭಾಗಗಳ ರೂಪದಲ್ಲಿರುವ ಹಪ್ಪಲಗಳು ತೆಗೆದುಕೊಂಡು ಮಖಾಮಿನಲ್ಲಿ ದಾನ ಕೊಡುವುದರೊಂದಿಗೆ ಕಾಣಿಕೆಯ ರೂಪದಲ್ಲೂ, ಹರಕೆಯ ರೂಪದಲ್ಲೂ ಸಮರ್ಪಣೆ ಮಾಡುವ ಇಲ್ಲಿಯ ನೇರ್ಚೆಯ ವೃತಿರಿಕ್ತ ರೀತಿ ಮತ್ತು ವಾಡಿಕೆ.

ಉರೂಸಿನ ಮೊದಲ ದಿನ ಧ್ವಜಾರೋಹನದ ಮೂಲಕ ಚಾಲನೆಗೊಂಡು ಕೆಲವು ದಿನಗಳವರೆಗೆ ನಡೆಯಲಿರುವ ಉರೂಸಿನಲ್ಲಿ ಮೌಲಿದ್ ಪಾರಾಯಣ, ಖುರ್'ಆನ್ ಪಾರಾಯಣ, ರಾತ್ತಿಬ್'ಗಳು, ಧಾರ್ಮಿಕ ಮತ ಪ್ರವಚನಗಳು, ಅನುಸ್ಮರಣೆ, ಉಲಮಾ ಸಮ್ಮೇಳನ, ಅನ್ನದಾನ, ಮೊದಲಾದ ಕಾರ್ಯಕ್ರಮಗಳಿರುತ್ತದೆ.
ಉರೂಸಿನ ಸಮಾರೋಪ ಸಮಾರಂಭದಂದು  ಸಾವಿರಾರು ಜನರು ಒಟ್ಟುಗೂಡುವ ಹಾಗು ದಾರಿಯ ಎರಡು ಭಾಗದಲ್ಲೂ ಕಿಲೋ ಮೀಟರ್'ಗಳಷ್ಟು ಉದ್ದವಿರುವ ಹಪ್ಪಲ ವ್ಯಾಪಾರಗಳು ಕಾಣವುದು ಒಂದು ವ್ಯತ್ಯಾಸ್ತ ಅನುಭವವಾಗಿದೆ.

ಸರಿ ಸುಮಾರು 500 ವರ್ಷಗಳ ಮೊದಲು ಹಿಂಸಿ ಎಂಬ ಊರಿನಿಂದ ಕೇರಳದ ಕಲ್ಲಿಕೋಟೆಗೆ ಹಡಗಿನ ಮೂಲಕ ವ್ಯಾಪಾರಕ್ಕಾಗಿ ಬಂದ ಅಲಾವುದ್ದೀನ್ (ರ) ರವರ ಮಗನಾಗಿ ಜನಿಸಿದ ಶೈಖ್ ಶಂಶುದ್ದೀನ್ ಮುಹಮ್ಮದ್ ಇಬ್ನು ಅಲಾಈದ್ದೀನ್ ಹಿಂಸ್ಸಿ (ರ) ರವರು ಬಾಲ್ಯದಲ್ಲೇ ಖುರ್'ಆನ್ ಕಂಠಪಾಠ ಮಾಡಿದ ಮಹಾನವರು ಧಾರ್ಮಿಕ ಪ್ರಭೋಧನಾ ರಂಗದಲ್ಲಿ ಅತ್ಯುನ್ನತಿ ಪ್ರಾಪ್ತಿಸಿ ಜಗದೊಡೆಯನಾದ ಅಲ್ಲಾಹನ ಇಷ್ಟ ದಾಸರಲ್ಲಿ ಒಬ್ಬರಾಗಿದ್ದರು.

ತದನಂತರ ಆತ್ಮೀಯ ರಂಗದ ಪುಣ್ಯ ಹಾದಿಯಲ್ಲಿ ಸಂಚರಿಸಿದರು.
ಜೀವಿತ ಕಾಲದಲ್ಲಿಯೂ, ವಫಾತ್ತಿನ(ಮರಣ) ನಂತರವೂ ಹಲವಾರು ಕರಾಮತ್ತು(ಪವಾಡ)ಗಳು ಪ್ರಕಟವಾಗುತ್ತಿತ್ತು.

ಮಹಾನುಭಾವರು *ಖಾದಿರಿಯ್ಯಾ, ಜಿಶ್ತೀಯಾ* ತ್ವರೀಖತ್ತುಗಾರರಾಗಿದ್ದರು. ಅಲ್ಲದೇ ಅಪಾರವಾದ ಶಿಷ್ಯಂದಿರುಗಳನ್ನು ಹೊಂದಿದ್ದರು.

ಪೋರ್ಚ್ಚುಗೀಸುಗಳ ಹಾಗೂ ವಿದೇಶಿ ಅಧಿಪತ್ಯದ ವಿರುದ್ಧ ದೇಶಕ್ಕಾಗಿ ಹೋರಾಡಲು ತನ್ನ ಆತ್ಮೀಯ ಶಕ್ತಿಯನ್ನು ಮಹಾನವರು  ಸಮರ್ಪಿಸಿದ್ದರು.

ಮಖ್ಡೂಮ್ ತಂಙಳ್(ರ)ರವರ ನಿರ್ದೇಶನ ಪ್ರಕಾರ ಆತ್ಮೀಯ ಪ್ರಕಾಶದ ಪ್ರಭೆ ಪಸರಿಸಲು ಮಹಾನುಭಾವರು ಪೊನ್ನಾನಿ, ವೆಳಿಯಂಗೋಡು ಹಾಗು ತಾನೂರು ಎಂಬೀ ಸ್ಥಳಗಳಲ್ಲಿ ಸಂಚರಿಸಿದರು. ಇಸ್ಲಾಮಿನ ಧಾರ್ಮಿಕ ರಂಗದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ ಮಹಾನುಬಾವರ ಜೀವನ ಶೈಲಿಯನ್ನು ಕಂಡು ಅದರ ಮೂಲಕ ಧಾರಾಳ ಜನರು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಅದೊಂದು ನಿಮಿತ್ತವೂ ಆಯಿತು.

*ಕರಾಮತ್ತು(ಪವಾಡ)ಗಳು.⤵*

ಮುಂದುವರಿಯುವುದು..

✍ ಗಫೂರ್ ಬಾಯಾರ್.
🌾🌾🌾🌾🌾🌾🌾

No comments:

Post a Comment