*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘 *ಪ್ರವಾದಿಯವರ ಬಹುಪತ್ನಿತ್ವ 🏘🏘🏘 ಸತ್ಯಾಂಶವೇನು...?* 🏘🏘🏘🏘🏘🏘🏘🏘🏘🏘🏘🏘🏘
*﷽*
*ಸಂಚಿಕೆ* 0⃣3⃣
💥 ಬದರ್ ಯುದ್ದದಲ್ಲಿ ರಕ್ತಶಾಕ್ಷಿಯಾದ ಖುನೈಸ್ (ರ.ಅ)ರವರ ಪತ್ನಿಯಾಗಿದ್ದ ಹಫ್ಸ ಬೀವಿಯವರಾಗಿದ್ದರು ಪ್ರವಾದಿಯವರ ನಾಲ್ಕನೇ ಪತ್ನಿ. ಈ ವನಿತೆಯನ್ನು ಹಿಜ್ ರಾ ಮೂರನೇ ವರ್ಷದಲ್ಲಾಗಿದೆ (ಕ್ರಿ.ಶ 624) ಪ್ರವಾದಿಯವರು ವಿವಾಹವಾದದ್ದು. ಹಿಜ್ ರಾ ಮೂರನೇ ವರ್ಷದಲ್ಲಿಯೇ ಮತ್ತೊಂದು ವಿಧವೆಯನ್ನು ಕೂಡಾ ವಿವಾಹವಾದರು. ಉಹ್ ದ್ ಯುದ್ದದಲ್ಲಿ ರಕ್ತಶಾಕ್ಷಿಯಾದ ಅಬ್ದುಲ್ಲಾಹಿಬ್ ನು ಜಹ್ ಷ್ (ರ.ಅ)ರವರ ಪತ್ನಿ ಉಮ್ಮುಲ್ ಮಸಾಕೀನ್ ಝೈನಬರವರನ್ನಾಗಿತ್ತದು. ಔದಾರ್ಯತೆಯಿಂದ ತುಂಬಿ ತುಳುಕುವ ಕೊಡವಾಗಿದ್ದರು ಆ ಮಹಿಳಾರತ್ನ.
💥 ಪ್ರವಾದಿ (ಸ.ಅ)ರವರ ಪಿತೃ ಸಹೋದರಿ ಉಮೈಬಾರವರ ಪುತ್ರಿ ಝೈನಬಾ ಬೀವಿಯವರಾಗಿದ್ದರು ಪ್ರವಾದಿಯವರ ಆರನೇ ಪತ್ನಿ. ತನ್ನ ದತ್ತು ಪುತ್ರರಾದ ಝೈದ್ (ರ.ಅ)ರವರೊಂದಿಗೆ ಝೈನಬಾರನ್ನು ವಿವಾಹ ಮಾಡಿಸಬೇಕೆಂದಾಗಿತ್ತು ಪ್ರವಾದಿ (ಸ.ಅ)ರವರು ಉದ್ದೇಶಿಸಿದ್ದು. ಆದರೆ ಝೈನಬ ಹಾಗೂ ಕುಟುಂಬಸ್ಥರು ಅದಕ್ಕೆ ಸಮ್ಮತಿಸಲಿಲ್ಲ. ವರ ಪ್ರವಾದಿ (ಸ.ಅ)ರವರೇ ಆಗಬೇಕೆಂದು ಅವರು ಹಟಮಾಡಿದರು. ಝೈದ್ (ರ.ಅ)ರವರೇ ಝೈನಬರವರ ವರನಾಗಬೇಕೆಂದು ಪ್ರವಾದಿಯವರು ತೀರ್ಮಾನಿಸಿದರು. ಪ್ರವಾದಿಯವರ ಒತ್ತಾಯಕ್ಕೆ ಮಣಿದು ಝೈದ್ ಹಾಗೂ ಝೈನಬ ರವರ ವಿವಾಹವೂ ನಡೆಯಿತು. ಆದರೆ ಭಿನ್ನತೆಗಳು ಉಂಟಾಯಿತು. ಆದ್ದರಿಂದ ವಿವಾಹವನ್ನು ಬೇರ್ಪಡಿಸಬೇಕಾಗಿ ಬಂತು. ಕೊನೆಗೆ ಕುಟುಂಬಸ್ಥರ ಒತ್ತಾಯಕ್ಕೆ ಮಣಿದಾಗಿತ್ತು ಝೈನಬಾರವರನ್ನು ಪ್ರವಾದಿಯವರು ವಿವಾಹವಾದದ್ದು. ವಿವಾಹವಾಗಿ ಅಧಿಕ ದಿವಸ ಕಳೆಯುವುದಕ್ಕಿಂತ ಮುಂಚೆ ಝೈನಬಾ (ರ.ಅ)ರವರು ವಫಾತಾದರು.
*(ಮುಂದುವರೆಯುವುದು)*
🌻⭐⭐⭐☀☀
No comments:
Post a Comment