*📝 ಪ್ರವಾದಿ ಸಂದೇಶ 📡*
*ಸ್ವಲಾತ್ ಹೇಳುವುದರಿಂದ ಸಿಗುವ ಒಳಿತುಗಳು*
🌺🌺🌺🌺🌺🌺🌺🌺🌺🌺🌺
*1⃣ ಸ್ವಲಾತ್ ಧಾರಾಳ ಪ್ರತಿಫಲ ಲಭಿಸಲೂ ಕಾರಣವಾಗುತ್ತದೆ.*
عن علي : قال : قال رسول الله : من صلى علي صلاة كتب الله له قيراطا والقيراط مثل أحد ( عبد الرزاق
"ನನ್ನ ಮೇಲೆ ಸ್ವಲಾತ್ ಹೇಳುವವರಿಗೆ ಉಹ್ ದ್ ಪರ್ವತದಷ್ಟು "ಖೀರಾತ್" (ಪ್ರತಿಫಲ) ನೀಡಲಾಗುವುದು"
*2⃣ ಸ್ವಿರಾತ್ ಸೇತುವೆಯಲ್ಲಿ ಸ್ವಲಾತ್ ಸಹಾಯಕವಾಗುತ್ತದೆ.*
عن عبدالرحمن بن سمرة قال : قال رسول الله :رأيت رجلا من أمتي يزحف على الصراط مرة ويجثو مرة ويتعلق مرة فجاءته صلاته علي فأخذت بيده فأقامته على الصراط حتى جاوز ( الطبراني
ನಬಿ (ಸ.ಅ)ರವರು ಹೇಳಿದರು "ನನ್ನ ಸಮುದಾಯಕ್ಕೆ ಸೇರಿದ ಓರ್ವ ವ್ಯಕ್ತಿಯೂ ಸ್ವಿರಾತ್ ಸೇತುವೆಯಲ್ಲಿ ಕಷ್ಟಪಡುತ್ತಿದ್ದಾರೆ ಆಗ ನನ್ನ ಮೇಲೆ ಹೇಳಿದ ಸ್ವಲಾತ್ ಅವನ ಕೈ ಹಿಡಿದು ರಕ್ಷಿಸುತ್ತದೆ "
*3⃣ ಸ್ವಲಾತ್ ಪಾಪ ವಿಮೋಚನೆಗಾಗಿ ಪ್ರಾರ್ಥಿಸುತ್ತದೆ.*
فعن عائشة قالت: قال رسول الله :ما من عبد يصلي علي صلاة إلا عرج بها ملك حتى يجيء بها وجه الرحمن عز وجل فيقول الله عز وجل اذهبوا بها إلى القبرعندي تستغفرلقائلها وتقر بها عينه ( الديلمي
"ಯಾವುದೇ ದಾಸನೂ ನನ್ನ ಮೇಲೆ ಸ್ವಲಾತ್ ಹೇಳಿದರೆ ಅದರ ಸಮೇತ ಒಂದು ಮಲಕ್ ಅಲ್ಲಾಹುವಿನ ಸನ್ನಿಧಿಗೆ ಹೋಗುವರು . ಆಗ ಅಲ್ಲಾಹನು ಅದನ್ನು ನನ್ನ ಖಬ್ ರಿಗೆ ತಲುಪಿಸಲೂ ಹೇಳುವನು ಹೀಗೆ ಆ ಸ್ವಲಾತ್ ಅವನಿಗಾಗಿ ಪಾಪವಿಮೋಚನೆಯನ್ನು ಬೇಡುತ್ತದೆ. ಅದರಿಂದ ಅವನಿಗೆ ಸಂತೃಪ್ತಿಯಾಗುತ್ತದೆ."
*4⃣ ಸ್ವಲಾತ್ ಹೇಳುವವರಿಗೆ ಅಲ್ಲಾಹುವಿನ ಸಂತೃಪ್ತಿ ಲಭಿಸುತ್ತದೆ.*
:عن عائشة قالت : قال رسول الله : من سره أن يلقى الله عنه راضيا فليكثر الصلاة علي الجرجاني
"ಯಾರಾದರೂ ಅಲ್ಲಾಹನನ್ನು ಸಂತೃಪ್ತಿಯೊಂದಿಗೆ ನೋಡಲೂ ಉದ್ದೇಶಿಸುವುದಾದರೆ ನನ್ನ ಮೇಲೆ ಅತ್ಯಧಿಕ ಸ್ವಲಾತ್ ಹೇಳಲಿ"
*5⃣ ಸ್ವಲಾತ್ ಹೇಳುವವರನ್ನು ಅಲ್ಲಾಹುವಿನ ಅನುಗ್ರಹವೂ ಆವರಿಸುತ್ತದೆ.*
عن أنس عن النبي قال : إن لله سيارة من الملائكة يطلبون حلق الذكر فإذا حفوا عليهم وأتوا بهم ثم بعثوا رائدهم إلى السماء إلى رب العزة تبارك وتعالى فيقولون ربنا أتينا على عباد من عبادك يعظمون آلائك ويتلون كتابك ويصلون على نبيك محمد صلى الله عليه وسلم ويسألونك لآخرتهم ودنياهم فيقول تبارك وتعالى غشوهم رحمتي فيقولون يا رب إن فيهم فلانا الخطاء إنما اعتنقهم اعتناقا فيقول تبارك وتعالى غشوهم رحمتي فهم الجلساء لا يشقى بهم جليسهم ( البزار
"ಅಲ್ಲಾಹನಿಗೆ ಸಂಚಾರಿಗಳಾದ ಕೆಲವು ಮಲಕುಗಳಿದ್ದಾರೆ. ಅವರು ದ್ಸಿಕ್ ರಿನ ಮಜ್ ಲಿಸನ್ನು ಅನ್ವೇಶಿಸುತ್ತಾ ನಡೆಯುವರು ಅದು ಸಿಕ್ಕಿದಾಗ ಅ ಮಜ್ ಲಿಸನ್ನು ಅವರು ಆವರಿಸುವರು ಅವರು ನಾಯಕರು ಅಲ್ಲಾಹನೊಂದಿಗೆ ಹೇಳುವರು ಅಲ್ಲಾಹನೇ ನಿನ್ನನ್ನು ಪ್ರಸಂಶಿಸುತ್ತಾ ನಿನ್ನ ನಬಿಯವರ ಮೇಲೆ ಸ್ವಲಾತ್ ಹೇಳುವ ಒಂದು ವಿಭಾಗವನ್ನು ನಾವು ಕಂಡೆವು. ಅವರು ನಿನ್ನೊಂದಿಗೆ ಇಹಲೋಕವನ್ನೂ ಪರಲೋಕವನ್ನೂ ಕೇಳುತ್ತಾರೆ. ಆಗ ಅಲ್ಲಾಹನು ಹೇಳುವನು ನೀವು ನನ್ನ ರಹ್ಮತಿನಿಂದ ಅವರನ್ನು ಆವರಿಸಿರಿ. ಆಗ ಮಲಕ್ ಹೇಳುವರು ಅವರ ಸಮೂಹದಲ್ಲಿ ಓರ್ವ ಕೆಟ್ಟ ವ್ಯಕ್ತಿ ಇದ್ದಾನೆ. ಆಗ ಅಲ್ಲಾಹನು ಹೇಳುವನು ಅಲ್ಲಿರುವ ಎಲ್ಲರನ್ನೂ ನನ್ನ ರಹ್ಮತಿನಿಂದ ಆವರಿಸಿರಿ ಒಳ್ಳೆಯವರೊಂದಿಗೆ ಸೇರಿ ಕುಳಿತುಕೊಂಡವನು ಪರಾಜಿತನಾಗಲಾರ."
🌻☀☀☀🌟🌟🌟✨✨✨🌻
No comments:
Post a Comment