🔵🔵🔵 *ಸ್ವರ್ಗ*🔵🔵🔵
☄☄☄
*ಅಲ್ಲಾಹನು ಈ ಲೋಕದ ಹೊರತಾಗಿ ಎರಡು ವಿಶೇಷ ನಿವಾಸಗಳನ್ನು ಸ್ರಷ್ಟಿಸಿರುವನು*
ಅವುಗಳೆಂದರೆ 👇
*👉 "ದಾರುನ್ನಈಮ್" > ಅನುಗ್ರಹಗಳ ನಿವಾಸ . ಅಂದರೆ ಸ್ವರ್ಗ*
*👉 "ದಾರುಲ್ ಅಝಾಬ್ "> ಶಿಕ್ಷೆಯ ಮನೆ . ಅಂದರೆ ನರಕ*
*ಸ್ವರ್ಗ*
👉 ಸ್ವರ್ಗದಲ್ಲಿ ಅಲ್ಲಾಹನು ತನ್ನ ವಿಧೇಯ ದಾಸರಿಗಾಗಿ ವೈವಿಧ್ಯ ಪೂರ್ಣವಾದ , ಅಭೂತ ಪೂರ್ವವಾದ ಅನುಗ್ರಹಗಳನ್ನು ಸಜ್ಜು ಗೊಳಿಸಿರುವನು . ಅಲ್ಲಿನ ವೈಭವ , ಆಡಂಬರತೆ ಎಷ್ಟೊಂದು ವಿಶೇಷವಾಗಿರುವುದೆಂದರೆ ಮನುಷ್ಯನು ಅದನ್ನು ಊಹಿಸಿಯೂ ಇರಲಾರನು . ತನ್ನ ಕಣ್ಣುಗಳಿಂದ ನೋಡಿಯೂ ಇರಲಾರನು . ಕಿವಿಗಳಿಂದ ಆಲಿಸಿರಲಾರನು .
ಸ್ವರ್ಗದ ಸುಖಾಡಂಬರಗಳನ್ನು , ಸೌಲಭ್ಯಗಳನ್ನು ಯಾರಿಂದಲೂ ವರ್ಣಿಸಲು ಸಾಧ್ಯವಿಲ್ಲ . ಆ ಸ್ವರ್ಗ ಪ್ರವೇಶಿಸಲು ಅಲ್ಲಾಹನು ಅವಕಾಶ ನೀಡಿದ ಮೇಲೆಯೇ ಅಲ್ಲಿನ ವೈಭವ , ಸುಖಾಡಂಬರಗಳನ್ನು ಅರಿಯಲು ಸಾಧ್ಯವಾದೀತು . ಸ್ವರ್ಗದಲ್ಲಿ ನೂರು ಅಂತಸ್ತುಗಳಿವೆ . ಪ್ರತಿಯೊಂದು ಅಂತಸ್ತುಗಳ ಅಂತರ ಭೂಮಿ ಮತ್ತು ಆಕಾಶದಷ್ಟಿರುವುದು .
ಇಡೀ ಮನುಕುಲವು ಒಂದು ಅಂತಸ್ತಿನಲ್ಲಿ ಒಗ್ಗೂಡಿದರೆಂದಾದರೆ ಅವರಿಗದು ಸಾಕಾಗುವುದು . ಅಂದರೆ ಒಂದು ಅಂತಸ್ತೇ ಅಷ್ಟು ವಿಶಾಲತೆಯನ್ನು ಹೊಂದಿರುವುದು . ಇನ್ನು ಅದರ ಬಾಗಿಲು ಎಷ್ಟು ವಿಶಾಲವಾಗಿರುತ್ತದೆಯೆಂದರೆ ಅದರ ಒಂದು ಕಡೆಯಿಂದ ಮತ್ತೊಂದು ಕಡೆಗಿರುವ ಅಂತರ ಒಂದು ಕುದುರೆಯು ವೇಗವಾಗಿ ಓಡುತ್ತಾ 70 ವರ್ಷಗಳ ಕಾಲ ಸಂಚರಿಸಿದರೆ ಎಷ್ಟು ದೂರವನ್ನು ಕ್ರಮಿಸುತ್ತದೋ ಅಷ್ಟು ಅಂತರವಿರುವುದು .
ಸ್ವರ್ಗದಲ್ಲಿ ವೈವಿಧ್ಯಮಯ ಅನುಗ್ರಹಗಳ ಸಮಾಹಾರವಿದೆ . ಮಧ್ಯ ಹಾಗೂ ಜೇನಿನ ಕಾಲುವೆಗಳಿವೆ . ಸದಾ ಸೇವೆಗೆ ಸಿದ್ದ ವಾಗಿ ನಿಂತಿರುವ ಶುಭ್ರ ಹಾಗೂ ಹೊಚ್ಚ ಹೊಸ ವಸ್ತ್ರಧಾರಿಗಳಾದ ಬಾಲಕರು , ಸೇವಕರು ಅಲ್ಲಿರುವರು . ಬಟ್ಟಲುಗಣ್ಣಿನ , ಅಪ್ಸರೆಯಂತಹ ಸ್ಪುರದ್ರೂಪಿ ಹೂರುಲ್ ಈನ್ ಗಳು ಅಲ್ಲಿರುವರು . ಅವರು ಅದೆಂತಹ ರೂಪವತಿಯಾಗಿರುವುದೆಂದರೆ ಅವರೇನಾದರೂ ಭೂಮಿಗೆ ಇಳಿದು ಬಂದರೆಂದಾದರೆ ಅವರ ಸೌಂದರ್ಯದ ಮುಂದೆ ಸೂರ್ಯನ ಪ್ರಕಾಶವೂ ಕಳಾಹೀನವಾಗಿ ಬಿಡುವುದು .
ಸ್ವರ್ಗವು ಮುಸ್ಲಿಮರ ಪಾಲಿಗೆ ಶಾಶ್ವತ ತಾಣ . ಅಲ್ಲಿ ಅವರು ಮರಣವಿಲ್ಲದ ಚಿರಂಜೀವಿಗಳು . ವ್ರದ್ದಾಪ್ಯದ ಚಿಂತೆ ಇಲ್ಲ . ಚರ್ಮ ಸುಕ್ಕು ಗಟ್ಟುವ , ಕೂದಲು ಬೆಳ್ಳಗಾಗುವ ವ್ಯಥೆ ಇಲ್ಲ . ಎಂದೆಂದೂ ಚಿರಯೌವನ ❗ ಸ್ವರ್ಗ ವಾಸಿಗಳು ಅಲ್ಲಿ ಏನನ್ನು ಬಯಸುವರೋ ಅದು ತಟ್ಟನೆ ಹಾಜರಾಗಿ ಬಿಡುವುದು ❗ಅವರು ಅಲ್ಲಿ ಏನನ್ನು ಆಗ್ರಹಿಸುವರೋ ಅದು ಆ ಕ್ಷಣವೇ ಈಡೇರುವುದು❗ ಅಲ್ಲಿ ಭಯ , ಚಿಂತೆ , ವ್ಯಥೆ , ತಳಮಳ , ಒತ್ತಡ , ಯಾತನೆ , ನೋವು , ಯಾವುದೂ ಇಲ್ಲದ ಸ್ವಚ್ಚಂದ ಬದುಕು ❗
ಪ್ರತಿಯೊಂದು ಕ್ಷಣ ಸ್ವರ್ಗದ ಅನುಗ್ರಹಗಳ ವರ್ಷಧಾರೆ ❗ ತಾನಿಷ್ಟ ಪಡುವ ಸ್ವಾದಭರಿತ ರುಚಿಕರವಾದ ಆಹಾರ ಪದಾರ್ಥಗಳು , ಪಾನೀಯಾಗಳು ,ತನ್ನ ಮುಂದೆ ಆ ಕ್ಷಣವೇ ಸಿದ್ಧವಾಗಿರುತ್ತದೆ . ಸ್ವರ್ಗದ ರಮಣೀಯವೂ ಮನೋಹರವೂ ಆದ ಉದ್ಯಾನಗಳ ಮಧ್ಯೆ ಮುತ್ತು ಮಾಣಿಕ್ಯಗಳಿಂದ ನಿರ್ಮಿಸಿದ ಭವ್ಯ ಭವನಗಳು ❗ ಅದರಲ್ಲಿ ಅತ್ತಿತ್ತ ನಲಿದಾಡುವ ಬಟ್ಟಲುಗಣ್ಣಿನ ಸುರಸುಂದರಿಯರಾದ ಹೂರುಲ್ ಈನ್ ಗಳು ❗ಬಯಸಿದ್ದನ್ನು ಭೋಗಿಸುವ , ಇಚ್ಛಿಸಿದ್ದನ್ನು ಆಸ್ವಾದಿಸುವ ಸುಂದರ ಕ್ಷಣ ❗ ಮುತ್ತಿನಂತೆ ಮಿನುಗುವ ಸೇವಕರು ಮಿರಮಿರ ಮಿನುಗುವ ಲೋಟ ಮತ್ತು ಪಾತ್ರೆಯೊಂದಿಗೆ ಸ್ವರ್ಗವಾಸಿಗಳನ್ನು ಸುತ್ತುವರಿಯುವರು . ಅಲ್ಲಾಹನ ವತಿಯಿಂದ ಕ್ಷಣ ಕ್ಷಣವೂ ವೈವಿಧ್ಯಮಯ ಉಡುಗೊರೆ , ಪಾರಿತೋಷಕಗಳು ಸ್ವರ್ಗ ವಾಸಿಗಳಿಗೆ ತಲುಪುತ್ತಿರುವುದು . ನದಿ , ಕಾಲುವೆಗಳಿಂದ ಸಂಶುದ್ಧ ಹಾಲು , ಜೇನು , ಹಾಗೂ ಮದ್ಯ ಪ್ರವಹಿಸುತ್ತಿರುತ್ತವೆ . ಅವುಗಳನ್ನೆಲ್ಲ ಮನದಣಿಯೇ ಕುಡಿಯುವ ಸಂತಸಮಯ ಕ್ಷಣ ❗ವರ್ಣಿಸಲಸಾಧ್ಯವಾದ ಸ್ವಾದಿಷ್ಟ ಪಾನೀಯಗಳು ❗
ಸ್ವರ್ಗದಲ್ಲಿರುವ ಅನುಗ್ರಹಗಳ ಪೈಕಿ ಅತ್ಯಂತ ದೊಡ್ಡ ಅನುಗ್ರಹ ಅಲ್ಲಾಹನ ಲಿಖಾ ದರ್ಶನ ❗ ಆ ಭಾಗ್ಯವು ಲಭಿಸಿದೊಡನೆ ಸ್ವರ್ಗ ನಿವಾಸಿಗಳ ಕಣ್ಮನ ತಣಿಯುವುದು. ಮನಸ್ಸು ಆನಂದಾಹ್ಲಾದದಿಂದ ತೇಲಾಡುವುದು .
ಲಿಖಾ ದರ್ಶನದ ಖುಷಿಯಲ್ಲಿ ಅವರು ಮೈ ಮರೆತು , ಆನಂದತುಂದಿಲರಾಗಿ ಸ್ವರ್ಗದ ಇತರ ಅನುಗ್ರಹಗಳನ್ನೇ ಮರೆತು ಬಿಡುವರು .
🔵🔵🔵🔵🔵🔵🔵🔵🔵
*ಅಲ್ಲಾಹನು ನಮಗೂ ಸ್ವರ್ಗ ಪ್ರವೇಶ ಹಾಗೂ ಲಿಖಾ ದರ್ಶನದ ಭಾಗ್ಯವನ್ನು ಕರುಣಿಸಲಿ ಆಮೀನ್*
No comments:
Post a Comment