Monday, December 11, 2017

ಯಾತಕ್ಕಾಗಿ ನಾವು ಸಂಘಟನೆಯಲ್ಲಿ ಸೇರಬೇಕು....??​ ​ಸೇರಿದರೆ ಅದರಲ್ಲಿ ನಮಗೇನು ಪ್ರಯೋಜನ..??​ 👉 ಮುಂದುವರಿದ ಭಾಗ 02 ♻♻♻♻♻♻♻♻♻ ✍ ಗಫೂರ್ ಬಾಯಾರ್

*ಯಾತಕ್ಕಾಗಿ ನಾವು ಸಂಘಟನೆಯಲ್ಲಿ ಸೇರಬೇಕು....??*
*ಸೇರಿದರೆ ಅದರಲ್ಲಿ ನಮಗೇನು ಪ್ರಯೋಜನ..??*

 👉 ಮುಂದುವರಿದ ಭಾಗ 02
♻♻♻♻♻♻♻♻♻
✍ ಗಫೂರ್ ಬಾಯಾರ್
〰〰〰〰〰〰〰〰〰

ಮುಂದಿನ ದಿನಗಳಲ್ಲಿ ಸಂಘಟನೆಯ ಮುಖಾಂತರ ಅಧಿಕಾರಕ್ಕೆ ತಲುಪಬಹುದೆಂದೋ, ಅಧಿಕಾರದ ಸುಖ ಉಲ್ಲಾಸದಲ್ಲಿ ಸಾಗಬಹುದೆಂದೋ, ಅತ್ಯಾಸೆಯಿಂದಲೋ, ಅಥವಾ ಆ ರೀತಿಯ ಸ್ಥಾನ ಲಭಿಸಿ
ಊರಿನವರು, ಮನೆಯವರು ಹೂಮಾಲೆ ಹಾಕಿ ಸ್ವೀಕರಿಸುತ್ತಾರೆಂಬ ಉದ್ದೇಶವನ್ನಿಟ್ಟುಕೊಂಡು *ಎಸ್ ಎಸ್ ಎಫ್* ಸಂಘಟನೆಗೆ ಸೇರಬಾರದು, ಬದಲಾಗಿ ಇಹದಲ್ಲೂ ಪರದಲ್ಲೂ ನನಗೆ ಅಲ್ಲಾಹನ ರಹ್ಮತ್ತ್ ಲಭಿಸಬೇಕು ಎಂಬ ಉದ್ದೇಶದಲ್ಲಾಗಿರಬೇಕು.

*ನಾಳೆ ಮರಣ ಹೊಂದಿದರೆ  ತಾಜುಲ್ ಉಲಮಾ (ಖ:ಸಿ)ರಿಗೂ, ನೂರುಲ್ ಉಲಮಾ (ಖ:ಸಿ)ರಿಗೂ ಹಾಗೂ ಪೊಸೋಟ್ ತಂಗಳ್ (ಖ:ಸಿ)ರಿಗೂ ಹಾಗೂ "ಎಸ್ ಎಸ್ ಎಫ್" ನಾಯಕರಿಗೆ ಲಭಿಸಿದ ಹಾಗೆ ದಶಲಕ್ಷ "ತಹ್ಲೀಲ್'ಗಳು, ಖುರ್'ಆನ್ ಖತಮ್'ಗಳು, ಪ್ರಾರ್ಥನೆಗಳು ನನಗೆ ಲಭಿಸಬೇಕೆಂಬ ಚಿಂತನೆಯಲ್ಲಿ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಬೇಕು.*

ಸುನ್ನತ್ತ್ ಜಮಾಅತ್ತಿನ ಈ ಸತ್ಯ  ಹಾದಿಯಲ್ಲಿ ಕಲ್ಲುಗಳು, ಮುಳ್ಳುಗಳು, ಹೊಂಡಗಳು, ವಂಚನೆಗಳು, ಆರೋಪಗಳು,
ತುಂಬಿರಬಹುದು.
ಜೀವನದಲ್ಲಿ ಇಷ್ಟರವರೆಗೆ ಅನುಭವಿಸುತ್ತಿದ್ದ ಸುಖಗಳು, ಸಂತೋಷಗಳು ಕೂಡಾ ಪರಲೋಕಕ್ಕಾಗಿ ತ್ಯಜಿಸಬೇಕಾಗಿ ಬರಬಹುದೆಂಬ ಅರಿವಿದ್ದುಕೊಂಡೇ ಆಗಿದೆ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದು.

ಬಹುಶ: ಸ್ನೇಹಿತರಿಂದಲೂ, ಮನೆಯವರಿಂದಲೂ ಆಕ್ಷೇಪಗಳೂ, ಬೈಗಳುಗಳೂ, ಅಧಿಕಾರಿ ವರ್ಗಗಳಿಂದ ವಿರೋಧವೂ, ಸತ್ಯದ ಹಾದಿಗಾಗಿ ಅನುಭವಿಸಬೇಕಾದೀತು.

ಊರಿನಲ್ಲೂ, ಮನೆಯಲ್ಲೂ, ಸತ್ಯ ಪ್ರಚಾರಪಡಿಸಿದ ಕಾರಣದಿಂದ ಒಂಟಿತನವನ್ನು, ಸುಳ್ಳಾರೋಪಗಳನ್ನು ಎದುರಿಸಬೇಕಾದೀತು ಎಂದು ಅರಿತುಕೊಂಡೇ ಈ ಸಂಘಟನೆಯಲ್ಲಿ ಪೂರ್ಣ ಮನಸ್ಸಿನೊಂದಿಗೆ  ಸೇರಿಕೊಳ್ಳಬೇಕು.

ನನ್ನ ಶರೀರದಿಂದ ರೂಹ್ ಹಿಡಿಯುವ ಮೊದಲು ಈ ಸಂಘಟನೆಯ ನೇತೃತ್ವದಿಂದ ಏನಾದರೂ ಸಾಧಿಸಿ ಇಹಲೋಕದಲ್ಲಿ ಸುಖಾಡಂಭರದ ಜೀವನ ಅಸ್ವಾದಿಸಬಹುದೆಂದು ಯಾವುದೇ ಕಾರ್ಯಕರ್ತಕರು ನೆನೆಸಬಾರದು.

"ಆದರೆ ನಾನು ಸಂಪೂರ್ಣವಾಗಿ ವಿಶ್ವಾಸವಿರಿಸಿದ್ದೇನೆ"

ಮರಣಕ್ಕೆ ಶರಣಾಗಿ ಮುಚ್ಚಿ ಹೋದ ಕಣ್ಣುಗಳಲ್ಲಿ,

ಮಣ್ಣು ಹಾಕಿ ಮುಚ್ಚುವ ಖಬರ್'ನಲ್ಲಿ

ರಕ್ಷಣೆಗಾಗಿ ಯಾಚನೆ ಮಾಡುವ ಪರಲೋಕದಲ್ಲಿ..

*ಎಸ್. ಎಸ್. ಎಫ್, ಎಸ್. ವೈ. ಎಸ್. ಕೆ. ಸಿ. ಫ್. ಮುಸ್ಲಿಂ ಜಮಾಅತ್ತ್'ಗಳ ಕಾರ್ಯ ಚಟುವಟಿಕೆಗಳಿಂದ ಪ್ರತಿಫಲಗಳು ನನಗೆ ಅಲ್ಲಾಹು ಪ್ರಕಾಶವಾಗಿ ನೀಡುವನೆಂದು  ಸಂಪೂರ್ಣ ವಿಶ್ವಾಸವಿದೆ....*

ಅಂಗಾಂತ ಮಲಗಿಯೂ,
ಮುದುಡಿ ಮಲಗಿಯೂ,
ಮುಖ ನೆಲಕ್ಕೆ ಗುದ್ದಿಕೊಂಡು
ಸಣ್ಣ ಪುಟ್ಟ ಹೆಜ್ಜೆಗಳನ್ನಿಡುತ್ತಾ ಎದ್ದು ಬಿದ್ದು ಕೊಂಡಲ್ಲದೆ ಜಗತ್ತಿನಲ್ಲಿ ಯಾವ ಮನುಷ್ಯನೂ ಎದ್ದು ನಿಲ್ಲಲಿಲ್ಲ. ಅದೇ ರೀತಿಯಲ್ಲಿ
ಯಾವುದೇ  ಸಂಘಟನೆಯ ಕ್ರಾಂತಿಯು ಕೂಡಾ ಬೆಳೆದು ಬಂದಿಲ್ಲ.

ಇದು ಒಂದೊಂದು ಕಾರ್ಯಕರ್ತರ ವಿಶ್ವಾಸವಾಗಿದೆ.
ಅಚಂಚಲ ಆತ್ಮ ವಿಶ್ವಾಸವಾಗಿದೆ.

 *ಬಿಡುವಿಲ್ಲದ ಜೀವನದಲ್ಲಿ ಪ್ರೀತಿಯ ತಂದೆ ತಾಯಿಯವರಿಗಾಗಿ, ಪ್ರಾರ್ಥಿಸುವ, ನೆನಪಿಸುವ,  ಅವರನ್ನು ವೃದ್ಧ ಸದನಗಳಿಗೆ ತಳ್ಳದೆ, ಮರಣ ಸಮಯದಲ್ಲಿ ಒಂದು ಬಿಂದು ನೀರು ಕೂಡಾ ಕೊಡಲು ಮನಸ್ಸಿಲ್ಲದ ಮಕ್ಕಳಾಗದಿರಲು ಇಸ್ಲಾಮಿಕ್ ಸಂಸ್ಕಾರ ಮತ್ತು ಪಾರಂಪರ್ಯವನ್ನು ನೆಲೆ ನಿಲ್ಲಿಸಲು,*
*ಮಯ್ಯತ್ತಿನ ತಲೆಯ ಭಾಗದಲ್ಲಿ ಕುಳಿತು ಖುರ್'ಆನ್ ಓದಲು, ಖಬರ್'ನ ಹತ್ತಿರ ಬಂದು ಯಾಸೀನ್ ಓದಿ, ತನ್ನ  ಸ್ವಂತದವರಿಗೆ ಬೇಕಾಗಿ ಪ್ರಾರ್ಥಿಸಲು..*
*ಸುನ್ನತ್ತ್ ಜಮಾಅತ್ತ್ ಕಲಿಯಲು, ಪ್ರಚಾರ ಮಾಡಲು ಬೇಕಾಗಿ ಆಗಿದೆ*
*ಎಸ್ ಎಸ್ ಎಫ್/ಎಸ್ ವೈ ಎಸ್/ ಕೆ ಸಿ ಫ್/ಮುಸ್ಲಿಂ ಜಮಾಅತ್ತ್ ಎಂಬ ಸಂಘಟನೆಗಳು ಇರುವುದು.*

ಅಹ್ಲುಸುನ್ನತಿ ವಲ್ ಜಮಾಅತ್ ಸಂಘಟನೆಗೆ ನಿಮ್ಮ ಮಗನನ್ನು, ಸ್ನೇಹಿತರನ್ನು ಪ್ರೀತಿ ಪೂರ್ವಕ ಆಹ್ವಾನಿಸುತ್ತೇವೆ..


🔻ಮುಗಿಯಿತು.

✍ ಗಫೂರ್ ಬಾಯಾರ್
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱

No comments:

Post a Comment