Wednesday, December 13, 2017

ಝಿಯಾರತ್ತ್ ಕೇಂದ್ರ 51 ಚೆರೂರ್ ಶುಹದಾಗಳು.

*ಝಿಯಾರತ್ತ್ ಕೇಂದ್ರ​*
      *👉🏻5⃣1⃣*
------------------------
 *ಚೆರೂರ್ ಶುಹದಾಗಳು*
*ತಿರೂರಂಗಾಡಿ, ಚೆಮ್ಮಾಡ್ ಮಲಪ್ಪುರಂ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪
ಚೆರೂರ್ ಯುದ್ಧದಲ್ಲಿ ಶಹೀದಾದ ಪುವ್ವಾಡನ್ ಮೊಯಿದೀನ್ (ರ) (ಪೊನ್ಮಳ), ಪಟ್ಟರ್'ಕಡವನ್ ಹುಸೈನ್ (ರ), ಮರಕಾರ್ ಮುಹ್ಯಿದ್ದೀನ್ (ರ), ಪೂಂದಿರುತ್ತಿ ಇಸ್ಮಾಯಿಲ್ (ರ), ಕುನ್ನಚೇರಿ ಅಲಿ ಫಸಲ್ (ರ), ಮೂಸ ಕುಟ್ಟಿ (ರ), ಚೊಲಕಲ್ ಬುಖಾರಿ (ರ) ಎಂಬ ಏಳು ಹುತ್ಮಾತ್ಮರುಗಳಾಗಿದ್ದಾರೆ ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು.

ವೆಣ್ಣಿಯೂರ್ ಎಂಬ ಊರಿನ 6 ಜನರು ಸ್ವಇಚ್ಛೆಯಿಂದ ಧರ್ಮಪರಿವರ್ತನೆಗೊಂಡದನ್ನು ಬ್ರಿಟಿಷರು ತಮ್ಮ ಬೇಳೆ ಬೇಯಿಸಲು ಉಪಯೋಗಿಸಿದ್ದಾಗಿದೆ ಇಲ್ಲಿನ ಗಲಭೆ ಸಂಘರ್ಷಭರಿತವಾಗಿ, ಯುದ್ಧ ನಡೆಯಲು ಮುಖ್ಯ ಕಾರಣವಾಗಿರುವುದು.

ಚೆರೂರ್ ಪ್ರದೇಶದ ಅಧಿಕಾರಿಯೂ, ಜಮೀನುದಾರನೂ ಆಗಿದ್ದ ಕಪ್ರಾಟ್ಟ್ ಎಂಬವರು, ಕೃಷ್ಣ ಪಣಿಕರ್ ಎಂಬ ಅಮುಸ್ಲಿಂ ಜಮೀನುದಾರನ ಮನೆಯ ಕೆಲಸದಾಳು ಹೆಣ್ಣು ಸ್ವಮನಸ್ಸಿನಿಂದ ಧರ್ಮ ಬದಲಿಸಿದ ಘಟನೆಯೂ, ಚೆರೂರ್ ಪಡೆ ಪ್ರಾರಂಭವಾಗಲು ಇನ್ನೊಂದು ಕಾರಣವಾಯಿತು.

ಇದು ಹಿಜರಿ 1252 ರಮಳಾನ್ 28 (1843 ಅಕ್ಟೊಬರ್ )ಲಾಗಿತ್ತು.
ಈ ಗಲಭೆಯಲ್ಲಿ ಅಮುಸ್ಲಿಮರು ಹಾಗೂ ಮುಸ್ಲಿಂಗಳು ಪರಸ್ಪರ ಹೋರಾಡಿದರು. ಈ ಸಂದರ್ಭವನ್ನು ಬಳಸಿ ಬ್ರಿಟಿಷರು ಹಿಂದುಗಳ ಜೊತೆ ಸೇರಿ ಮುಸ್ಲಿಮರ ವಿರುದ್ದ ಯುದ್ಧ ಮಾಡಿದರು. ನಂತರ ಬ್ರಿಟಿಷರೊಂದಿಗೆ ಮುಸ್ಲಿಮರ ಮದ್ಯೆ ಘೋರವಾದ ಯುದ್ಧ ನಡೆಯಿತು. ಮುಸ್ಲಿಂ ಪಕ್ಷದಲ್ಲಿ ಜನರು ಕಡಿಮೆಯಾದರೂ ಯುದ್ದದಲ್ಲಿ ಭಾಗವಹಿಸಿದ ಮುಸ್ಲಿಮರೆಲ್ಲರೂ ಕೆಚ್ಚೆದೆಯಿಂದ ಧೀರವಾಗಿ ಹೋರಾಡಿದರು. ಅವರು ಶತ್ರುಗಳನ್ನು ಮಣ್ಣು ಮುಕ್ಕಿಸಿದರು. ಹಲವಾರು ಶತ್ರುಗಳು ಸಾವಿಗೀಡಾದರು.

 ಮುಸ್ಲಿಮರ ಪರವಾಗಿ ಹಸಿರು ಟೋಪಿ ಧರಿಸಿದ ಅಪರಿಚಿತರಾದ ಓರ್ವರ ಖಡ್ಗದ ಇರಿತದಿಂದಾಗಿದೆ ಹಲವಾರು ಬ್ರಿಟಿಷ್ ಸೈನಿಕರ ತಲೆ ಬೇರ್ಪಟ್ಟಿರುವುದು.
*"ಋತ್ತುಬುಝಮಾನ್ ಮಂಬುರಂ ತಂಗಳಾಗಿದ್ದರು (ರ)"* ಆ ಅಪರಿಚಿತ ವ್ಯಕ್ತಿ.!
 ಬ್ರಿಟಿಷರ ವಿರೋಧಿಯಾಗಿದ್ದ ತಂಗಳರು ಯಥಾ ಸಮಯದಲ್ಲಿ ರಣರಂಗಕ್ಕೆ ಓಡಿ ಬಂದು ಧುಮುಕಿದರು. ಹೋರಾಟದ ನಡುವೆ ತಂಗಳರ ಕಾಲಿಗೆ ಇರಿತದಿಂದ ಗಾಯವಾಗಿತ್ತು. ನಂತರದ ಕಾಲದಲ್ಲಿ ತಂಗಳರ ವಫಾತ್ತಿಗೆ ಕಾರಣವಾಗಿರುವುದು ಇದೇ ಗಾಯವಾಗಿತ್ತು!!

ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ 7 ಜನರ ಮಯ್ಯಿತ್ತ್ ತಿರೂರಂಗಾಡಿ ಹಳೆಯ ಪೊಲೀಸ್ ಠಾಣೆಯ ಹತ್ತಿರ ಕೊಂಡು ಹೋಗಿ ಬ್ರಿಟಿಷರು ದಹಿಸಲು ವಿಫಲ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಮಯ್ಯಿತ್ತ್'ಗಳನ್ನು ಒಟ್ಟುಗೂಡಿಸಿ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟರು. ಆದರೆ ಮಹಾದ್ಬುತವೇ ನಡೆಯಿತು. ಶುಹದಾಗಳ ಶರೀರಕ್ಕೆ ಏನು ಸಂಭವಿಸಲಿಲ್ಲ. ಬಳಿಕ ಮುಸ್ಲಿಮರು ಹತ್ತಿರದ ಮೈದಾನದಲ್ಲಿ ಮಯ್ಯಿತ್ತುಗಳನ್ನು ದಫನ್ ಮಾಡಿದರು.

ಚೆಮ್ಮಾಡ್ ಬಸ್ಸು ನಿಲ್ದಾಣದ ಎದುರು ಭಾಗದಲ್ಲಾಗಿದೆ ಮಕ್ಬರಗಳು ಇರುವುದು. ಇಲ್ಲಿಗೆ ಧಾರಾಳ ಜನರು ಝಿಯಾರತ್ತಿಗೆ ಬರುತ್ತಿದ್ದರು. ಇದನ್ನು ಕಂಡ ಬ್ರಿಟಿಷರು, ಇಲ್ಲಿ ಝಿಯಾರತ್ತ್ ಮಾಡಿದರೆ ಅವರ ಆತ್ಮೀಯ ಶಕ್ತಿ ವರ್ಧಿಸಲು ಕಾರಣವಾದೀತೆಂದು ಗ್ರಹಿಸಿ ಮುಸ್ಲಿಂಗಳನ್ನು ಇಲ್ಲಿ ಝಿಯಾರತ್ತ್ ಮಾಡುದರಿಂದ್ದ ತಡೆದರು.

ಈ ನಿಷೇಧವನ್ನು ಉಲ್ಲಂಘಿಸಿದ ಕಾರಣದಿಂದಾಗಿದೆ 1921 ರಲ್ಲಿ ಅಲಿ ಮುಸ್ಲಿಯಾರ್ (ರ) ರವರ ಹೆಸರಿನಲ್ಲಿ ದಾಖಲಿಸಿದ ಒಂದನೆಯ ಕೇಸ್. ( ಸುಜೂದ್'ನಲ್ಲಿ ಮಲಗಿ ವಫಾತ್ತಾದ ಮಹಾನರ ಮಕ್ಬರ ಕೋಯಂಬತ್ತೂರ್ ಮೆಟ್ಟುಪಾಳಯಂ ಮಾರ್ಗದಲ್ಲಿರುವ ಶುಕ್ರಾರ್'ಪೇಟ ಖಬರ್ಸ್ತಾನಿನ ಪ್ರವೇಶ ದ್ವಾರದ ಉತ್ತರ ಭಾಗದಲ್ಲಿದೆ. ಆದರೆ ಬ್ರಿಟಿಷರು ಮಹಾನರನ್ನು ನೇಣು ಕಂಬಕ್ಕೆ ಹಾಕಿ ಕೊಂದರೆಂದು  ಅಪಪ್ರಚಾರ ಮಾಡಿದರು.)

ಚೆರೂರ್ ಶುಹದಾಗಳ ಆಂಡ್ ನೇರ್ಚೆ ರಮಳಾನ್ 28ಕ್ಕೆ ಆಗಿದೆ.

ದಾರಿ: ತಲಪ್ಪಾರ, ಕಕ್ಕಾಡ್, ನಿಂದ ಚೆಮ್ಮಾಡ್ ಬಸ್ಸ್ ನಿಲ್ದಾಣದ ಮರುಭಾಗದಲ್ಲಾಗಿದೆ ಶುಹದಾಗಳ ಮಕ್ಬರವಿರುವುದು.

✍ ಗಫೂರ್ ಬಾಯಾರ್
🍂🍂🍂🍂🍂🍂🍂🍂🍂

No comments:

Post a Comment