*بِسْمِ اللّٰهِ الرَّحْمَانِ الرَّحِيمْ*
💦💧💦💧💦💧💦💧💦
💧 *ಜಿಬ್ರೀಲ್(ಅಲೈಹಿ ಸ್ಸಲಾಂ)*💧
💦💧💦💧💦💧💦💧💦
ಜಿಬ್ರೀಲ್(ಅ)ರ ನಿಜವಾದ ಹೆಸರು *ಅಬ್ದುಲ್ಲಾ(ಅಲ್ಲಾಹನ ದಾಸ)* ಆಗಿದೆ. ಇವರು ಎಲ್ಲಾ ಮಲಕುಗಳ *ನಾಯಕ*ರಾಗಿದ್ದಾರೆ .
ಜಿಬ್ರೀಲ್(ಅ)ರವರು ಅಲ್ಲಾಹುವಿಗೆ ತುಂಬಾ ಹತ್ತಿರದ ಮಲಕ್ ಆಗಿದ್ದಾರೆ.
ಇದಕ್ಕಾಗಿ ಅವರನ್ನು *ಸಯ್ಯಿದುಲ್ ಮಲಾಯಿಕತ್* ಎಂದು ಕರೆಯುತ್ತಾರೆ.
ಅಲ್ಲಾಹು ತಆಲ ಮೊದಲು 4 ಮಲಕುಗಳನ್ನು ಬೆಳಕಿನಿಂದ ಸೃಷ್ಟಿಸಿದನು . ಜಿಬ್ರೀಲ್(ಅ) ಈ ಮಲಕುಗಳೊಂದಾಗಿದ್ದಾರೆ . ಈ ನಾಲ್ಕೂ ಮಲಕುಗಳು ಕೊನೇಗೆ ಮರಣ ಹೊಂದುವವರಾಗಿದ್ದಾರೆ .
*ಜಿಬ್ರೀಲ್(ಅ)ರಿಗೆ ಅಲ್ಲಾಹನು ಕೊಟ್ಟ ಕೆಲಸ*
⚜⚜⚜⚜⚜⚜⚜⚜⚜
ಎಲ್ಲಾ ಅವುಲಿಯಾ ಮತ್ತು ಪ್ರವಾದಿಗಳಿಗೆ *ವಹ್ಯನ್ನು ತಲುಪಿಸುವುದು ಮತ್ತು ಅವರ ಶತ್ರುಗಳನ್ನು ನಾಶ* ಮಾಡುವುದು.
ಇದಕ್ಕಾಗಿ ಅವರನ್ನು *ಅಝ್ಝವಜಲ್* ಎಂದೂ ಕರೆಯುತ್ತಾರೆ.
*ಜಿಬ್ರೀಲ್(ಅ) ರವರ ವರ್ಣನೆ(ರೂಪ)*
⚜⚜⚜⚜⚜⚜⚜⚜⚜
ಪ್ರವಾದಿ( ಸ)ರವರು ಜಿಬ್ರೀಲ್(ಅ)ರವರನ್ನು 2 ಸಲ ಅವರ ನಿಜವಾದ ರೂಪವನ್ನು ನೋಡಿದ್ದಾರೆ .
👉 *ಮೊದಲನೇ ಸಲ ಹಿರಾ ಗುಹೆಯಲ್ಲಿ*
👉 *ಎರಡನೆಯ ಸಲ ಮಿಱ್ರಾಜ್ ಪಯಣದಲ್ಲಿ*.
ಮುಹಮ್ಮದ್(ಸ) ಹೇಳುತ್ತಾರೆ :-
👉ಜಿಬ್ರೀಲ್(ಅ) ತನ್ನ ಒಂದು ರೆಕ್ಕೆಯನ್ನು ಬಿಡಿಸಿದಾಗ ಅದು ದೊಡ್ಡದೊಂದು ತೋಟವನ್ನು ಮುಚ್ಚಿಡುವಷ್ಟು ದೊಡ್ಡದಿತ್ತು .
👉 ಗುಹೆಯಲ್ಲಿ ನನ್ನ ಬಳಿಗೆ ಬಂದ ಜಿಬ್ರೀಲ್(ಅ) ಭೂಮ್ಯಾಕಾಶಗಳ ಮದ್ಯೆ ಸಿಂಹಾಸನವೊಂದರಲ್ಲಿ ಆಸೀನರಾಗಿದ್ದರು .ಅವರ ಬೃಹತ್ ರೂಪವು ಉದಯಾಸ್ತಮಾನಗಳ 2 ಜಾಗಗಳನ್ನು ಆವರಿಸಿ ಬಿಡುವಷ್ಟು ದೊಡ್ಡ ಗಾತ್ರವಾಗಿದ್ದವು .
👉ಅವರಿಗೆ 600 ರೆಕ್ಕೆಗಳಿದ್ದವು .
*ಮತ್ತೊಂದು ಹದೀಸ್ ನಲ್ಲಿ ಹೀಗಿದೆ*;
👉 ಜಿಬ್ರೀಲ್(ಅ)ರವರ ಕಾಲುಗಳು ತುಂಬಾ ಬಿಳಿಯಾಗಿದ್ದು ಅದರಲ್ಲಿ ಒಂದು ಮುತ್ತು ಇದೆ . ಅದು ಹೇಗಿದೆ ಎಂದರೆ ಮಳೆಯ ಹನಿ ಹೇಗೆ ಒಂದು ಎಲೆಯ ಮೇಲೆ ತೇಲಾಡುತ್ತವೆಯೋ ಹಾಗೆಯೇ ಆ ಮುತ್ತು ತೇಲಾಡುತ್ತಿತ್ತು.
👉ಅವರ ಹಣೆಯು ಹೊಳೆಯುತ್ತಿತ್ತು.
👉ಅವರ ಕೂದಲು ಗುಂಗುರು ಕೂದಲಾಗಿತ್ತು .
👉ಅವರ ರೆಕ್ಕೆಯಲ್ಲಿ ಮುತ್ತು ಮತ್ತು ವಜ್ರಗಳಿಂದ ಕೂಡಿತ್ತು .ಅವು ಮುತ್ತುಗಳ ಹರಳುಗಳು ಹೇಗೆ ಒಂದೊಂದಾಗಿ ಹತ್ತಿರವಾಗಿರುತ್ತವೋ ಹಾಗೆಯೇ ಇತ್ತು.
👉ಅವರ ಹಲ್ಲುಗಳು ತುಂಬಾ ಹೊಳೆಯುತ್ತಿತ್ತು .
👉ಅವರ ತಲೆಯು ಮೋಡಕ್ಕಿಂತ ಹೆಚ್ಚು ಬಿಳಿಯಾಗಿತ್ತು.
ಒಂದು ಸಲ ಹಂಝ (ರ) ಪ್ರವಾದಿ(ಸ)ರೊಡನೆ ಹೇಳುತ್ತಾರೆ - ನನಗೆ ಜಿಬ್ರೀಲ್(ಅ)ರವರನ್ನು ನೋಡಬೇಕು (ಝಿಯಾರತ್).ಅದಕ್ಕೆ ಪ್ರವಾದಿ(ಸ)ರವರು ಹೇಳುತ್ತಾರೆ ನಿಮಗೆ ಅವರನ್ನು ನೋಡಲು ಸಾಧ್ಯವಿಲ್ಲ. ಅವರನ್ನು ನೋಡುವಷ್ಟು ಶಕ್ತಿ ನಿಮ್ಮಲ್ಲಿಲ್ಲ .
ಅದಕ್ಕೆ ಹಂಝ (ರ) ಹೇಳುತ್ತಾರೆ ಇದು ನನ್ನದೊಂದು ಆಸೆಯಾಗಿದೆ .
ಪ್ರವಾದಿ(ಸ)ರವರು ಜಿಬ್ರೀಲ್(ಅ)ರಲ್ಲಿ ಇದರ ಬಗ್ಗೆ ಹೇಳುತ್ತಾರೆ. ಆಗ ಜಿಬ್ರೀಲ್(ಅ) ಹೇಳುತ್ತಾರೆ ಆಯಿತು,ಅವರನ್ನು ಬೈತುಲ್ಲಾಗೆ ಕರೆದು ಕೊಂಡು ಬನ್ನಿ ಎಂದು.
ಅವರಿಬ್ಬರು ಅಲ್ಲಿಗೆ ತಲುಪಿದಾಗ ಬಿಬ್ರೀಲ್(ಅ) ಒಂದು ಕಟ್ಟಿಗೆಯ ಮೇಲೆ ಕುಳಿತಿದ್ದರು . ಅವರ ಕಾಲು ತುಂಬಾ ದೊಡ್ಡದಿತ್ತು .ಅದೂ ಬಿಳಿ ಬಣ್ಣದ್ದಾಗಿತ್ತು . ಅವರ ಕಾಲು ನೋಡಿ ಹಂಝ (ರ) ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು .
ಅವರ ಬಗ್ಗೆ ಹೇಳಿದಷ್ಟೂ ಮುಗಿಯದು ...
*ಜಿಬ್ರೀಲ್(ಅ)ರ ಬಗ್ಗೆ ಇಷ್ಟೊಂದು ಬರೆಯಲು ಅಲ್ಲಾಹು ನನಗೆ ಭಾಗ್ಯವನ್ನು ಕೊಟ್ಟಿದ್ದಕ್ಕೆ*
*الْحَمْدُ لِلَّهِ*
🥀🥀🥀🥀🥀🥀🥀🥀🥀🥀
No comments:
Post a Comment