“ *ಮುಹಮ್ಮದ್” ಎಂದು ನಾಮಕರಣ ಹೇಗೆ ಬಂತು*?
🏵🏵🏵🏵🏵🏵🏵🏵🏵🏵🏵
*ಅದೊಂದು ಅಂದಕಾರದಲ್ಲಿ ಮುಳುಗಿದ್ದ ಕತ್ತಲಯುಗ!*
ಅಜ್ಞಾನ, ಅಕ್ರಮ, ಹಿಂಸೆ, ಕಾಳಗ, ಉಗ್ರರೂಪತಾಳಿದ್ದ ಅರಬಿಕ್ ಜಗತ್ತು. ಎಲ್ಲೆಲ್ಲೂ ಅನ್ಯಾಯ, ಅಧರ್ಮದ ರುದ್ರ ನರ್ತನ. ಮಧ್ಯಪಾನ ವ್ಯಭಿಚಾರ, ಕಳ್ಳತನ ಜೂಜಾಟ ಕೊಲೆ, ಲೂಟಿ ಸುಲಿಗೆಗಳ ತಾಂಡವ. ಗೋತ್ರಬಲ ವರ್ಣಬಲ ತೋಳ್ಬಲ ಹಣಬಲ ಇದ್ದವರದ್ದೇ ಕಾರುಬಾರು. ಉಳ್ಳವನೇ ಯಜಮಾನ. ಇಲ್ಲದವನಿಗೆ ಅಪಮಾನ. ಗೋತ್ರ, ಪಂಗಡಗಳ ಹೆಸರಿನಲ್ಲಿ ವರ್ಷಗಟ್ಟಲೆ ವೈರತ್ವ ಕಟ್ಟಿಕೊಂಡು ಕಲಹದಲ್ಲೇ ದಿನ ಕಳೆಯುವವರು. ಅದೆಷ್ಟೋ ಹೆಣ್ಮಕ್ಕಳನ್ನು ಯತೇಚ್ಚವಾಗಿ ಬಳಸುತ್ತಿದ್ದರೂ ಹೆಣ್ಣು ಹುಟ್ಟಿದರೆ ಮಾತ್ರ ಅಪಶಕುನವೆಂದು ಜರೆದು ಜೀವಂತ ಹೂಳುತ್ತಿದ್ದ ಕಿರಾತ ಮಂದಿ ಬೇರೆ. ಹೆಣ್ಣು ಬೆಳೆದು ಬಂದರೂ ಅವಳಿಗೆ ಸೊತ್ತು. ವಾರಿಸುದಾರಿಕೆಯಲ್ಲಿ ಕತ್ತರಿ. ಪವಿತ್ರ ಕಹಬಾ ಭವನದಲ್ಲಿ ಪ್ರತಿಮೆಗಳನ್ನಿಟ್ಟು ಉತ್ಸಾಹ ದಿನದಂದು ಗಂಡು ಹೆಣ್ಣೆಂಬ ಭೇದವಿಲ್ಲದೆ ಕುಡಿದು ಬೆತ್ತಲೆಯಾಗಿ ಕುಣಿಯುತ್ತಾ ಕೇಕೆ ಹಾಕುವ ಅನಾಗರಿಕರು ಒಂದು ಕಡೆ.ಆ ಪ್ರತಿಮೆಗಳನ್ನೂ ತಮ್ಮ ತಮ್ಮ ಗೋತ್ರಗಳದ್ದೆಂದು ವಿಂಗಡಿಸಿ ಮೇಲಾಟ ನಡೆಸುವ ಗಲಾಟೆ ಬೇರೆ. ಹೀಗೆ ಮನೆ, ಮಠ, ಮಂದಿರ, ಪೇಟೆ, ಪಟ್ಟಣ ಎಂದಿಲ್ಲದೆ ಎಲ್ಲೆಂದರಲ್ಲಿ ರಕ್ತದ ಕಾರಂಜಿ ಹರಿಸುತ್ತಿದ್ದ ಥೇಟು ಮೃಗೀಯ ಶೈಲಿ ವರ್ತಿಸುವ ಅದೇನೋ ಒಂಥರಾ ಮನುಷ್ಯ ಕುಲವಿದು. ಸತ್ಯ, ನ್ಯಾಯ, ನೀತಿ, ಶಾಂತಿ, ಪ್ರೀತಿ, ಸಂಸ್ಕೃತಿ ಊಹೂಂ ಇದ್ಯಾವುದರ ಪರಿಚಯವಿಲ್ಲದ ಜನತೆ!.
ಅಲ್ಲ ನೀವೇ ಊಹಿಸಿ ನೋಡಿ, ಆ ಕಾಲಘಟ್ಟ ಹೇಗಿದ್ದಿರಬಹುದು? ಅದಕ್ಕೇ ಇತಿಹಾಸಗಾರರು ಹೇಳಿದ್ದು ಅದು ಕತ್ತಲ ಯುಗ, ನಿಜಕ್ಕೂ ಅದುವೇ ಕರೆಕ್ಟು. ಬೆಳಕು ಕಾಣದ ಕಗ್ಗತ್ತಲಲ್ಲಿ ಸಿಲುಕಿರುವ ಒಂಥರಾ ಮನುಷ್ಯ ಜೀವಿಗಳು ಅಷ್ಟೇ.
ನಿಜಕ್ಕು ಆ ಕಾಲಕ್ಕೆ ಆ ಪ್ರದೇಶಕ್ಕೆ ಒಬ್ಬ ಧರ್ಮ ಸುಧಾರಕನ ಅಗತ್ಯತೆ ಜರೂರತ್ತಾಗಿ ಇತ್ತು. ಜನರನ್ನು ಅನ್ಯಾಯ ಅನಾಗರಿಕತೆ, ಹಿಂಸೆ, ಕಾಳಗದಿಂದ ಮೇಲೆತ್ತಬೇಕು. ಅವರನ್ನು ಶುದ್ಧ ಸಂಸ್ಕಾರಯುತರಾಗಿ ರೂಪಿಸಬೇಕು. ಅಸಲಿಗೆ ಅವರನ್ನು ಕೆಡುಕುಗಳಿಂದ ತೊಳೆದು ಶುದ್ಧ ಮನುಷ್ಯರಾಗಿ ರೂಪಿಸಬೇಕು. ಅಂಥ ಶ್ರೇಷ್ಠ ಹಾಗೂ ಅಷ್ಟೇ ಕಷ್ಟದಾಯಕ ಕೆಲಸ ಮಾಡುವ ಧರ್ಮ ಸುಧಾರಕ ಹೇಗಿರಬೇಕು ಹೇಳಿ?
ಅಷ್ಟರಲ್ಲಿ ಅಂಥ ಕೆಲಸ ಮಾಡುವುದು ಸಾಮನ್ಯರಿಂದ ಸಾಧ್ಯವಿಲ್ಲ ಅಸಾಮಾನ್ಯನೇ ಆಗಿರಬೇಕು. ಸಹನೆ, ಶ್ರಮ, ದಿವ್ಯಶಕ್ತಿ, ಬುದ್ಧಿ ಮತ್ತೆ ಮನೋಧೈರ‍್ಯ, ದೂರ ದೃಷ್ಟಿ, ಪರಿಪೂರ್ಣ ವ್ಯಕ್ತಿತ್ವ, ಅಚಂಚಲ ನಂಬಿಕೆ ಸತ್ಯವಂತ, ನ್ಯಾಯವಂತ, ಸ್ನೇಹಶೀಲ, ಪ್ರಾಮಾಣಿಕ, ಗುಣವಂತ, ಎಲ್ಲದಕ್ಕೂ ಮಿಗಿಲಾಗಿ ಮೊದಲಿಗೆ ವೈಯಕ್ತಕವಾಗಿ ಶುದ್ಧ, ನಿರ್ಮಲ, ಸಚ್ಛಾರಿತ್ರ್ಯ ವಂತ, ನಿಷ್ಕಳಂಕ, ವ್ಯಕ್ತಿಯೇ ಆಗಿರಬೇಕು. ಅದೇ ತೆರನಾಗಿ ಜನರಿಗೆ ಸಮಗ್ರ ಜೀವನ ಪದ್ಧತಿ ತೋರಿಸುವ, ಎಲ್ಲಾ ರೀತಿಯ ತಾರತಮ್ಯಗಳಿಂದ ಕುಟ್ಟಿ, ಕೆಡವಿ ಎಲ್ಲರೂ ಒಂದೇ ಎಂದು ಒಂದುಗೂಡಿಸಿ ಜೊತೆಗೆ ಕೊಂಡೊಯ್ಯುವ ಸಮರ್ಥ ಮಾದರಿ ನಾಯಕನೇ ಆಗಿರಬೇಕು.
ಅಂಥ ಕಮಾಲು ಆದ ವ್ಯಕ್ತಿ ಯಾರಿರುತ್ತಾರೆ? ಎಲ್ಲಿ ಸಿಗುತ್ತಾರೆ? ಅಂಥ ಪರಿಶುದ್ಧ, ಪರಿಪೂರ್ಣ ವ್ಯಕ್ತಿಯ ಆಗಮನಕ್ಕೆ ವೇದಿಕೆ ರೆಡಿಯಾಗುತ್ತದೆ. ಮನುಷ್ಯ ಕುಲದಿಂದಲೇ ಅಂಥ ಸುಧಾರಕರೊಬ್ಬರನ್ನು ಜಗದೊಡೆಯ ರೂಪಿಸುತ್ತಾನೆ. ಅದೂ ಅದೇ ಏರಿಯಾದಿಂದ ಅದೇ ಅರೇಬಿಯಾದ ಗೋತ್ರವೊಂದರಿಂದ…!.
*ಅದು ರಬೀವುಲ್ ಅವ್ವಲ್!*
ಉಮ್ಮುಲ್ ಕುರಾ ಮಕ್ಕದಲ್ಲಿ ಅದೂ ಮಹೋನ್ನತ ಕುರೈಶಿ ಕುಲದಲ್ಲಿ ಅನುಗ್ರಹೀತ ಟೈಮು ಸುಪ್ರಭಾತದ ಶುಭ ಮುಹೂರ್ತದಲ್ಲಿ ಅಬ್ದುಲ್ಲಾ ಆಮಿನಾ ದಂಪತಿಗಳ ಸುಪುತ್ರನಾಗಿ ಗಂಡು ಮಗುವೊಂದು ಜನುಮ ತಾಳಿತು!.
*ಅದ್ಭುತ ಘಟನಾವಳಿಗಳು ಆ ಮಗುವಿನ ಜನನಕ್ಕೆ ಮೊದಲು ಮತ್ತು ನಂತರ ಘಟಿಸಿದ್ದೇ ಊರವರಿಗೊಂದು ಅಚ್ಚರಿ. ಕೆಲವರು ಆ ಜನುಮದ ಮರ್ಮವರಿಯಲು ತಿರ್ಮಾನಿಸಿದ್ದೂ ಇದೆ. ಆದರೆ ಅಂಥದ್ದೊಂದು ಅದ್ಭುತಗಳ ಸದ್ದು ಗದ್ದಲಗಳೊಂದಿಗೆ ಆ ಮಗುವಿನ ಆಗಮನ ಜಗತ್ತಿಗೆ ಆಗಲೇ ಬೇಕಿತ್ತು. ಪುಣ್ಯ ಪ್ರವಾದಿಯ ಪುಣ್ಯ ಪ್ರಭೆ ಸ್ಪುರಿಸಲು ವೇದಿಕೆ ರೆಡಿಯಾಗಿದ್ದು ಆ ಪ್ರಸವದಲ್ಲೇ. ಅದು ಜಗ ನಾನಿಯಂತ್ರಕನಾದ ಅಲ್ಲಾಹನ ತೀರ್ಮಾನ. ಅಂಧಕಾರದಲ್ಲಿ ಮುಳುಗಿದ್ದ ಜನ ಹಾಗೂ ಪರಿಸರ, ಪೌರ್ಣಮಿ ಚಂದಿರದ ಉದಯದೊಂದಿಗೆ ಲಕ ಲಕ ಜಗಮಗಿಸಲು ಭೂಮಿಕೆ ತಯಾರಿ ಮಾಡಿತು. ಇಲ್ಲವೇ ಅನುಗ್ರಹೀತ ಆಗಮನದ ಹರ್ಷದ ಸ್ಪರ್ಶದಲ್ಲಿ ಅಗಣಿತವಾಗಿ ಪ್ರಣೀತಗೊಂಡಿತು.*
ಹಾಗೆ ನೋಡಿದರೆ ಆ ಆಗಮನ ಕೆಲವರ ಬದುಕಿನೊಳು ಇನ್ನಿಲ್ಲದ ಸಂತಸ, ಸಂಭ್ರಮದ ಹೊನಲು ಹರಿಸಿದರೆ, ಇನ್ನು ಕೆಲವರಲ್ಲಿ ಅಂಕೆಗೆ ಸಿಗದ ದುಃಖ ಎಣೆ ಇಲ್ಲದ ಖಿನ್ನತೆ ಮೂಡಿಸಿದ್ದು ಸುಳ್ಳಲ್ಲ. ಅವರು ಬೇರೆ ಯಾರೂ ಅಲ್ಲ, ವಿಗ್ರಹರಾಧನೆಯಲ್ಲಿ ಮಗ್ನರಾದ ಮಂದಿ. ಕಲ್ಲಿನ ಪ್ರತಿಮೆಗಳಂತೆ ಅವರ ಮನ ಕೂಡಾ ಕಲ್ಲಾಗಿತ್ತು. ಅಲ್ಲಿ ಸಂತಸದ ಪ್ಲಾಶ್‌ಮಿಂಚಲು ಇಂಚು ಜಾಗವಿರಲಿಲ್ಲವೇನೋ!.
ಹಾಗೆ ಹೇಳುವುದಾದರೆ ವೇದದ ಮೇಧಾವಿಗಳು, ಪುರಾಣಗಳ ಪುರಾವೆಯೊಂದಿಗೆ ಪ್ರಪಂಚಕ್ಕೆ ಪ್ರಭೆ ಸ್ಪುರಿಸುವ ಪ್ರವಾದಿಯರ ಆಗಮನದ ಬಗ್ಗೆ ಬರೋಬ್ಬರಿ ಕ್ಲೂ ನೀಡಿದ್ದಾರೆ. ಹಾಗಾದರೆ ಈ ಶಿಶು ಅದೇ ಪ್ರವಾದಿ ಆಗಿರಬಹುದೇ? ವಿಗ್ರಹರಾಧಕರಿಗೆ ತಳಮಳ!.
ಸ್ತುತ್ಯರ್ಹ ಎಂದು ಅರ್ಥ ಬರುವ ಮುಹಮ್ಮದ್ ಎಂಬ ಹೆಸರನ್ನು ಆ ಶಿಶುವಿಗೆ ಪಿತಾಮಹ ನಾಮಕರಣ ಮಾಡಿದರು. ಅಂದಿನವರೆಗೂ ಯಾರೋಬ್ಬರಿಗೂ ಇಟ್ಟಿರದ ಅತ್ಯುನ್ನತ ಹೆಸರು ಅದು.
ಅಷ್ಟಕ್ಕೂ ಆಕಸ್ಮಿಕವಾಗಿ ಅರ್ಪಿತವಾದ ಹೆಸರಾಗಿರಲಿಲ್ಲ ಅದು. ಕಾಣದ ಕೈ ಅಲ್ಲೊಂದು ಪೂರ್ವ ತಯಾರಿ ನಡೆಸಿದೆ. ಜಗ ನಾಯಕರಾಗಿ ರೂಪುಗೊಳ್ಳುವ ಶಿಶುವಿಗೆ ಶ್ರೇಷ್ಠ ಹೆಸರೇ ಆಗಿರಬೇಕು. ಆ ಹೆಸರಲ್ಲೇ ಜನ ಅವರಿಗೆ ಸ್ತೋತ್ರ ಸಲ್ಲಿಸಬೇಕು. ಇವೆಲ್ಲವೂ ನಿಗೂಢ. ಅದೃಶ್ಯ ತಯಾರಿ. ಹೌದು ಸೃಷ್ಟಿಕರ್ತನ ದಿವ್ಯ ಸಂದೇಶದೊಂದಿಗೆ ನಡೆದ ನಾಮಕರಣ ಇಲ್‌ಹಾಂ ಅಂಥಾರಲ್ಲ ಆ ಪಿತಾಮಹರ ಮೈಂಡಲ್ಲಿ ಮೂಡಿ ಬಂದ ಅಂಥ ದಿವ್ಯ ಜ್ಞಾನ.
*ಅಂದು ಅಬ್ದುಲ್ ಮುತ್ತಲಿಬ್‌ರ ನಿವಾಸದಲ್ಲಿ ಒಂದು ಸೇರಿದ ಕುರೈಶಿ ಮುಖಂಡರು ಮೌಲೀದ್ ಸಂಭ್ರಮದಲ್ಲಿ ಸೇರಿಕೊಂಡಿದ್ದರು. ಹೇಳಿ ತೀರದ ಸಡಗರ ಸಂಭ್ರಮ..*
ಮೃಷ್ಠಾನ್ನ ಭೋಜನ, ಹೃತ್ಪೂರ್ವಕ ಸ್ವಾಗತ. ಎಲ್ಲೆಲ್ಲೂ ಥೇಟು ಹಬ್ಬದ ಗೌಜಿ ಗದ್ದಲ. ಇಂದು ಮಗುವಿಗೆ ಏಳನೇ ದಿನ. ಮೃಗ ಬಲಿದಾನ ನಡೆದಿದೆ. ಅದು ಮಗುವಿಗೊಂದು ಕಾವಲು. ದುರಂತಗಳನ್ನು ದೂರ ಮಾಡುವ ಶ್ರೀರಕ್ಷೆ ಹಕೀಕತ್!.
*ಭೋಜನದ ನಂತರ ಬಂದವರು ಕೇಳಿದರು ಅಬ್ದುಲ್ ಮುತ್ತಲಿಬರೇ ತಮ್ಮ ಮಗುವಿಗೆ ಏನು ಹೆಸರಿಟ್ಟಿದ್ದೀರಿ?*
’ಮುಹಮ್ಮದ್’ ಅವರು ಉತ್ತರಿಸಿದರು.*
ಛೇ! ತಮ್ಮ ತಾತಂದಿರ ಹೆಸರನ್ನೇಕೆ ಇಡಲಿಲ್ಲ? ಇಲ್ಲ ಸರ್ವರೂ ನನ್ನ ಮಗುವನ್ನು ಸಂಕೀರ್ತನೆ ನಡೆಸಬೇಕು. ಅದು ನನ್ನ ಬಯಕೆ, ವಾತ್ಸಲ್ಯ ನಿಧಿಯಾದ ಆ ಪಿತಾಮಹನ ನಿಷ್ಕಳಂಕ ಬಯಕೆ ಈಡೇರಲು ಹೆಚ್ಚಿನ ಸಮಯ ಬೇಕಿರಲಿಲ್ಲ. ಎಳೆಯದರಲ್ಲೇ ಆ ಮಗು ಉನ್ನತಿಗೇರಿತು.
ಹೌದು ಇಂದು ಭೂ ನಭೋ ಮಂಡಲಗಳಲ್ಲಿ ನಿಮಿಷಂಪ್ರತಿ ಹೇಳಲ್ಪಡುವ ಹೆಸರು ಅದೇ ’ಮುಹಮ್ಮದ್’
ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಎಳೆಯದರಲ್ಲೇ ಆ ಶಿಶು ಹೆತ್ತವರಿಗೆ ಮತ್ತೊಂದು ಅಭಿಧಾನಕ್ಕೆ ಜನ ಹಿಂಜರಿಯಲಿಲ್ಲ.
ಅಲ್‌ಅಮೀನ್ (ನಂಬಿಕಸ್ಥ) ಎಂಬ ಮುದ್ದಿನ ಹೆಸರಿನಲ್ಲಿ ಆ ಮಗುವನ್ನು ಜನ ಕರೆಯಿತು. ಕರೆಕ್ಟಾಗಿ ಹೇಳಬೇಕಂದರೆ ಅದು ಕೇವಲ ಮುದ್ದಿನ ಹೆಸರಾಗಿರಲಿಲ್ಲ. ಉನ್ನತ ಪದವಿಗೇರುವ ವ್ಯಕ್ತಿಯೊಬ್ಬರ ಶುದ್ಧ ವ್ಯಕ್ತಿತ್ವಕ್ಕೆ ಬಾಲ್ಯದಲ್ಲೇ ಜನ ನೀಡಿದ ಅಂಗೀಕಾರದ ಸರ್ಟಿಫಿಕೇಟ್ ಆಗಿತ್ತು.
*ಅಂದಿನ ಜಮಾನದಲ್ಲಿ ಅಲ್‌ಅಮೀನ್ ಆಗಿ ಭೂಮಂಡಲದಲ್ಲಿ ಯಾವ ನರಪಿಳ್ಳೆಯೂ ಇರಲಿಲ್ಲ. ಏಕೆಂದರೆ ಅಂಧಕಾರದ ಕತ್ತಲ ಯುಗವದು!.*
ಕೆಲವರು ಅಸ್ವಾದಿಕ್ (ಸತ್ಯವಂತ) ಎಂದು ಮುದ್ದಿನಿಂದ ಮಗುವನ್ನು ಕರೆದರು. ಒಂದರ್ಥದಲ್ಲಿ ಅದು ಕೂಡ ಶುದ್ಧ ಚಾರಿತ್ರ್ಯಕ್ಕೊಂದು ಅಂಗೀಕಾರದ ಮುದ್ರೆಯಾಗಿತ್ತು.ನಿಜಕ್ಕೂ ಸತ್ಯಸಂಧತೆ ಪ್ರಮಾಣಿಕತೆ ಆ ಮಗುವಿನಲ್ಲಿ ಮೂಡಿತ್ತು. ದೀರ್ಘ ನಲ್ವತ್ತು ವರ್ಷಗಳ ಒಡನಾಟ ಆ ಜಮಾನದ ಅಬಾಲ ವೃದ್ಧರಾಗಿ ಸರ್ವರ ಮನದಾಳದಲ್ಲಿ ಸ್ಥಾನ ಪಡೆಯುವಂತೆ ಮೂಡಿತ್ತು. ಭದ್ರವಾಗಿ ಮನದಾಳದಲ್ಲಿ ವ್ಯಕ್ತಿಯೊಬ್ಬರು ತಳವೂರಲು ಜಾಗ ಪಡೆಯುವುದು ಇದೆಯಲ್ಲಾ. ಅದಕ್ಕು ವಿಶೇಷ ಶಕ್ತಿ ಬೇಕಾಗುತ್ತದೆ. ಅಂಥ ಶ್ರೇಷ್ಠ ಕಲ್ಮಶ ರಹಿತ ಬದುಕು ಕಟ್ಟಿರಬೇಕು.
ಊರ ಜನರ ಯಾವ ಸಮಸ್ಯೆ ಪರಿಹಾರಕ್ಕೂ ಅಲ್‌ಅಮೀನ್‌ರನ್ನೇ ಆಶ್ರಯಿಸಿದರು. ತಲೆಮಾರುಗಳಿಂದ ಬದುಕಿನುದ್ದಕ್ಕೂ ನೆರಳಿನಂತೆ ಹಿಂಬಾಲಿಸಿ ಬಂದಿದ್ದ ಕೌಟುಂಬಿಕ ಕಲಹ ಇನ್ನಿತರ ತರ್ಕ ವಿತರ್ಕ ಎಲ್ಲವನ್ನು ಈ ಕ್ರಾಂತಿ ಧೂತ ಅನಾಯಸವಾಗಿ ಮುಗಿಸಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಯಶಸ್ವಿಯಾದರು.
*ಪ್ರವಾದಿ ಪಟ್ಟ ಕಟ್ಟಿ ಅಲ್‌ಅಮೀನ್‌ರನ್ನು ಅಲ್ಲಾಹನು ನಬಿಯಾಗಿ ನೇಮಕ ಮಾಡಿದರು. ಧರ್ಮ ಬೋಧನೆ ನಡೆಸುವ ಜವಾಬ್ದಾರಿಯೂ ವಹಿಸಿಕೊಡಲಾಯಿತು.*
ಮೊದಲು ಹತ್ತಿರದ ಸಂಬಂಧಿಕರು ಕುರೈಶಿಗಳು ಇವರಿಗೆ ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಾಂ) ಸಂದೇಶ ಬೋಧನೆ ನಡೆಸಿದ್ದು. ಆದರೆ ಅವರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅಷ್ಟೇ ಅಲ್ಲ, ತೀವ್ರವಾಗಿ ವಿರೋಧಿಸಿದ್ದರು.
ಅದೊಂದು ದಿನದ ಸುಪ್ರಭಾತದ ಟೈಮು ಕತ್ತಲುಕರಗಿ ಬೆಳಕು ಹರಿಯಿತು. ಜನ ಕೆಲಸ ಕಾರ‍್ಯಗಳಲ್ಲಿ ಮಗ್ನರಾಗತೊಡಗಿದ್ದಾರೆ. ಸ್ವಫಾ ಪರ್ವತದ ತಪ್ಪಲಿನಿಂದ ಕೇಳಿ ಬರುತ್ತಿರುವ ಕೂಗು. ಅವರೆಲ್ಲ ಗೌರವಿಸುತ್ತಿದ್ದ ಒಂದು ಪರ್ವತವಾಗಿತ್ತು ಸ್ವಫಾ. ಅಂದು ಒಂದು ಪುರುಷನ ರೂಪದ ಪ್ರತಿಮೆಯೊಂದು ಸ್ವಫಾ ಪರ್ವತದ ತಪ್ಪಲಲ್ಲಿತ್ತು. ಇಸ್ವಾಫ್ ಎಂದು ಅದರ ಹೆಸರು. ಅದೇ ತೆರನಾಗಿ ಮತ್ತೊಂದು ಮರ್ವಾದಲ್ಲಿ ಒಂದು ಮಹಿಳಾ ರೂಪದ ಪ್ರತಿಮೆ ಇತ್ತು ಅದು ’ನಾಇಲ’
ಕಅಭಾದಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ವ್ಯಕ್ತಿಗಳಾಗಿದ್ದರು. ಈ ಇಸ್ವಾಫ್ ಮತ್ತು ನಾಇಲ ಅವರನ್ನುಅಲ್ಲಾಹನು ಕಲ್ಲುಗಳನ್ನಾಗಿ ಮಾಡಿ ಎರಡು ಪರ್ವತದ ತಪ್ಪಲಿನಲ್ಲಿ ಪ್ರತಿಷ್ಠಾಪನೆ ಮಾಡಿದ. ಆನರಿಗೆ ಅದೊಂದು ಪಾಠವಾಗಲಿ ಎಂದಾಗಿತ್ತು. ಆದರೆ ಬುದ್ಧಿಹೀನರು ಆ ಕಲ್ಲನ್ನು ಆರಾಧಿಸತೊಡಗಿದರು.ಅದೋ ಅಲ್‌ಅಮೀನ್ ಕೂಗಿ ಹೇಳುತ್ತಿದ್ದಾರೆ.
ಜನರೆಲ್ಲ ಸ್ವಫಾದ ತಪ್ಪಲಿಗೆ ಬಂದು ಸೇರಿದರು. ಆ ಪೈಕಿ ಮೊದಲಿಗೆ ಬಂದದ್ದು ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಂ) ರವರ ಚಿಕ್ಕಪ್ಪ ಅಬ್ದುಲ್ ಉಸ್ಸಾ ಆಗಿದ್ದರು. ಹೌದು ಅಬೂಲ ಹಬ್! ಒಂದು ಸೈನ್ಯ ನಿಮ್ಮನ್ನು ಆಕ್ರಮಿಸಲು ಸಜ್ಜಾಗಿ ನಿಂತಿದೆ. ಎಂದು ನಾನು ಹೇಳಿದರೆ ನೀವದು ನಂಬುವರೆ..? ಅಲ್‌ಅಮೀನ್ ಅಂಥದ್ದೊಂದು ಪ್ರಶ್ನೆ ತೇಲಿ ಬಿಟ್ಟರು.ಇಂದಿನವರೆಗೆ ಒಂದೇ ಒಂದು ಸುಳ್ಳಾಡದ ತಾವು ಹಾಗಂತ ಹೇಳಿದರೆ ನಾವೇನು ನಂಬದೆ ಇರುವುದು..?
ಅವರೆಲ್ಲ ಒಕ್ಕೊರಳಿನಿಂದ ಹೇಳಿದರು. ಹಾಗಾದರೆ ಕೇಳಿ ನಾನು ಅಲ್ಲಾಹನ ಪ್ರವಾದಿಯಾಗಿದ್ದೇನೆ ಏಕನಾದ ಅಲ್ಲಾಹನಲ್ಲೂ ನೀವು ನಂಬಿಕೆ ಇರಿಸಿ. ಹಾಗಾದಲ್ಲಿ ಮಾತ್ರ ರಕ್ಷೆ ಹೊಂದಲು ಸಾಧ್ಯ ಇದು ಖಂಡಿತಾ
ಮುಹಮ್ಮದ್ ನಾಶವಾಗಲಿ!
ಹಾಗಂತ ಜನರ ಗುಂಪಿನಿಂದ ಅಬುಲ್ ಉಸ್ಸಾನದ್ವನಿ ಕೇಳಿ ಬಂತು. ಉಸ್ರಾನದಾಸ..! ಬೃಹದಾಕಾರದ ಕಲ್ಲಿನ ಪ್ರತಿಮೆಯಾಗಿದೆ ಈ ಉಸ್ಸಾ. ಅಬ್ದುಲ್ ಉಸ್ಸಾ ಅಬೂಲಹಬ್. ಆಗಿ ಮಾರ್ಪಟ್ಟ. ಬೆಂಕಿನಾಲೆಯ ತಂದೆ ಎಂದರ್ಥ! ಅಬೂಲಹಬನಿಗೆ ನಬಿ (ಸಲ್ಲಲ್ಲಾಹುಅಲೈಹಿವಸಲ್ಲಂ) ರ ನೈಜ ದರ್ಶನವಾಗಲಿಲ್ಲ. ಅಬೂಜಹಲ್ ಉತುಬತ್‌ಗಳಂಥವರು ಕೂಡ ಕಂಡಿರದಂತೆ ಅವರಿಗೆಲ್ಲ ಪ್ರವಾದಿಯವರ ನೈಜ ದಿಗ್ಭರ್ಶನಕ್ಕಿರುವ ಕಣ್ಣುಗಳೇ ಇರಲಿಲ್ಲ. ಅದಕ್ಕೆ ಬಾಹ್ಯವಾಗಿ ಕಾಣುವ ನೇತ್ರ ಸಾಲದು. ಒಳಗಣ್ಣು ಎಂಬ ಮಹತ್ತರ ಅನುಗ್ರಹ ಅದಕ್ಕೆ ಬೇಕು. ಅಬೂಲಹಬ್ ಕಂಡದ್ದು ಕೇವಲ ಮುಹಮ್ಮದ್‌ರನ್ನು ಮಾತ್ರ ಅದಕ್ಕೆ ಹೊರಗಣ್ಣು ಮಾತ್ರ. ಸಾಕಾಗುತ್ತದೆ.
ಹಾಗೆ ನೋಡಿದರೆ ಅಬ್ದುಲ್ಲಾಹ್‌ಬಿನ್ ಉಮ್ಮ ಮಕ್ತೂಂರವರ ಬಾಹ್ಯ ನೇತ್ರಗಳಿಗೆ ಕಾಣುವ ಶಕ್ತಿ ಇರಲಿಲ್ಲ. ಅಂಧರಾಗಿದ್ದರು.ಆದರೆ ಅವರಿಗೆ ಪ್ರವಾದಿಯವರ ದಿಗ್ಧರ್ಶನ ಸಾಧ್ಯವಾಯಿತು. ಒಳ ಗಣ್ಣಿನಿಂದ ಮನ ತುಂಬಾ ಅವರು ಪ್ರವಾದಿಯವರನ್ನು ಕಂಡರು.
ಅದೇ ತೆರನಾಗಿ ಹತ್ತಿರದಲ್ಲಿರುವವರಿಗೂ ಪ್ರವಾದಿಯ ದಿಗ್ಧರ್ಶನವಾಗುತ್ತದೆ. ಅವೆಲ್ಲವೂ ಒಳಗಣ್ಣು ಎಂಬ ಮಹತ್ತರ ಅನುಗ್ರಹದಿಂದ ಅಷ್ಟಕ್ಕೂ ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಾ) ರವರು ಕಾಣದವರು. ಅಂದಿನಂತೆ ಇಂದಿನ ಜಮಾನದಲ್ಲಿ ಬರೋಬ್ಬರಿ ಇದ್ದಾರೆ. ಅದು ಮುಂದೆಯೂ ಇರುತ್ತದೆ. ಅವರು ಕಾಣುವುದು ಕೇವಲ ಮುಹಮ್ಮದ್‌ರನ್ನು ಕಾಣುತ್ತಿರುವುದು ಅದೇ ಮುಹಮ್ಮದ್‌ರನ್ನು ಮಾತ್ರ.
ಹೌದು. ಇದು ಪುಣ್ಯ ಪ್ರವಾದಿ (ಸಲ್ಲಾಲ್ಲಾಹುಅಲೈಹಿವಸಲ್ಲಂ) ರವರ ಜನುಮದ ಮಾಸ. ನೆರೆಹೊರೆಯವರು ಸಂಬಂಧಿಕರು ಸೇರಿ ಪ್ರೀತಿ ಹಂಚಿಕೊಂಡು ಮೌಲಿದ್ ಆಚರಿಸುವ ಮಾಸ. ಕೌಟುಂಬಿಕ ಸಂಬಂಧ ಬಲಪಡಿಸಲು ಸಿಗುವ ಸುವರ್ಣ ಸಂದರ್ಭ.
*ಕತ್ತಲ ಯುಗವನ್ನು ಜ್ಞಾನದಿಂದ ಬೆಳಕಿನಿಂದ ಬೆಳಗಿಸಿದ ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಂ) ರವರ ಮೇಲೆ ಸಲಾತ್ ಹೇಳೋಣ ಬನ್ನಿ.*
ಸಲ್ಲಲ್ಲಾಹುಅಲಾ ಮುಹಮ್ಮದ್
ಸಲ್ಲಲ್ಲಹುಅಲೈಹಿವಸಲ್ಲಂ
No comments:
Post a Comment