Monday, December 11, 2017

*#ಯಾತಕ್ಕಾಗಿ_ನಾವು_ಸಂಘಟನೆಯಲ್ಲಿ #ಸೇರಬೇಕು....??*
*#ಸೇರಿದರೆ_ಅದರಲ್ಲಿ_ನಮಗೇನು #ಪ್ರಯೋಜನ..??*

💎💎💎💎💎💎💎💎💎
✍ ಗಫೂರ್ ಬಾಯಾರ್
🔷🔷🔷🔷🔷🔷🔷🔷🔷

ಸುನ್ನತ್ತ್ ಜಮಾಅತ್ತಿನ ಸಂಘಟನೆಗಳಾದ *ಎಸ್.ಎಸ್.ಎಫ್, ಎಸ್.ವೈ.ಎಸ್. ಹಾಗು ಕೆ.ಸಿ.ಫ್* ಸಂಘಟನೆಗೆ ಸೇರಿಕೊಂಡ ಹೊಸ ಸದಸ್ಯರಿಗೂ, ಸಂಘಟನೆಗೆ ಸೇರಲಿಚ್ಚಿಸಿರುವ  ಕಾರ್ಯಕರ್ತರೊಂದಿಗೂ ಕೆಲವು ವಿಷಯಗಳನ್ನು  ನೆನಪಿಸುತ್ತೇನೆ.
💐ಸ್ನೇಹಪೂರ್ವಕ 💐

ಮೊತ್ತಮೊದಲು ಅಲ್ಲಾಹನ ತೃಪ್ತಿಗಾಗಿ ನಾವು ಇಖ್ಲಾಸ್'
(ಪ್ರಾಮಾಣಿಕ) ನೊಂದಿಗೆ ಸತ್ಕರ್ಮಗಳನ್ನು ಮಾಡಬೇಕು.

ನಂತರ ನಮ್ಮ ಕುಟುಂಬದವರನ್ನು,  ನಮ್ಮ ನೆರೆಕರೆಯವರನ್ನು, ನಮ್ಮ ಸ್ನೇಹಿತರನ್ನು, ನಮ್ಮೊಂದಿಗೆ ಸಂಬಂಧವಿರುವವರನ್ನು ಹಾಗೂ ಪರಿಚಯವಿರುವವರನ್ನು ಒಳಿತಿಗೆ ಆಹ್ವಾನಿಸಿ, ಅದಕ್ಕಿರುವ ಅವಕಾಶವನ್ನು ಮಾಡಿ ಕೊಡಬೇಕು.

ಉದಾರಾಣೆಗೆ..
ಐದು ವಕ್ತ್ ನಮಾಝ್' ನಿರ್ವಹಿಸಲು ಮಸೀದಿಗೆ ಕರೆಯಬೇಕು. ಧಾರ್ಮಿಕ ಪ್ರಭಾಷಣಕ್ಕೆ ಕರೆದುಕೊಂಡು ಹೋಗಬೇಕು, ಹಾಗೂ ದಿಕ್ರ್ ಮಜ್ಲಿಸ್ ಸ್ವಲಾತ್ ಮಜ್ಲಿಸ್ ಮುಂತಾದ ಆತ್ಮ ಶುದ್ದೀಕರಣದ ಮಜ್ಲಿಸುಗಳಿಗೆ  ಕರೆದುಕೊಂಡು ಹೋಗಬೇಕು, ಇಂತಹ ಮಜ್ಲಿಸುಗಳನ್ನು  ಸಂಘಟಿಸಬೇಕು.
ಮಸ್ಜಿದ್, ಮದ್ರಸಗಳನ್ನು ನಿರ್ಮಿಸಲು ಸಹಕರಿಸಬೇಕು. ಸಾಂತ್ವನ ಕಾರ್ಯಗಳು ಒಳಗೊಂಡ ಒಳ್ಳೆಯ ಕಾರ್ಯಗಳಿಗೆ ಕರೆಯಬೇಕು.

ನಾಡಿನ ಧರ್ಮ ಸೌಹಾರ್ದತೆ ಕಾಪಾಡಬೇಕು, ಅದಕ್ಕಾಗಿ ಕಾರ್ಯಾಚರಿಸಬೇಕು.

ತಿಳುವಳಿಕೆ, ನೀತಿ, ನ್ಯಾಯ, ಮುಂತಾದವುಗಳನ್ನು ಕಲಿಸಿ ಕೊಡಬೇಕು.
ಅದನ್ನು ಜೀವನದಲ್ಲಿ ಸ್ವತಃ ಪಾಲಿಸಬೇಕು.

ಅಲ್ಲಾಹನನ್ನು ಅನುಸರಿಸಬೇಕು. ಅಲ್ಲಾಹನ ಸಂತೃಪ್ತಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಿ ಅವನ ಪ್ರೀತಿಗಳಿಸಿಕೊಂಡು ಪರಲೋಕ ರಕ್ಷೆ ಹೊಂದಬೇಕೆಂಬ ಉದ್ದೇಶವಿಟ್ಟುಕೊಂಡು ಸಂಘಟನೆಯಲ್ಲಿ ಕಾರ್ಯಾಚರಿಸಬೇಕು.

*ಇನ್ನು ಕೆಲವು ವಿಷಯಗಳನ್ನು ಕೂಡಾ ನಿಮ್ಮ ಮುಂದಿಡುತ್ತೇನೆ.*

ಹಲವಾರು  ಕಾರ್ಯಕರ್ತಕರು ಧೀರ ಹುತ್ಮಾತ್ಮರಾದ ಸಂಧರ್ಭಗಳಲ್ಲಿ *"ಮಕ್ಕಳೇ ನೀವು ಪ್ರತಿಕ್ರಿಯಿಸಬೇಡಿ.. ಒಮ್ಮೆಯೂ ನೀವು ಬಡಿದಾಡಿಕೊಂಡು ತಲೆ ಹೊಡೆದುಕೊಳ್ಳದಿರಿ. ಹೊರತಾಗಿ, ನಮ್ಮನ್ನು ಸೃಷ್ಟಿಸಿದ ಅಲ್ಲಾಹನು ಇವೆಲ್ಲವನ್ನೂ ನೋಡಿ ಕೊಳ್ಳುತ್ತಾನೆ"*
ಎಂದು ತಿಳಿದುಕೊಂಡು, ಒಂದು ತೋರು ಬೆರಳಿನಿಂದ ಒಂದು ಸಮುದಾಯವನ್ನು ನಿಯಂತ್ರಿಸಿಕೊಂಡು ಬರುತ್ತಿರುವ, ಕಾಲವು ಇವರ ಬದಲಿಗೆ ಇನ್ನೊಬ್ಬರು ಇಲ್ಲವೆಂದು ಸಮ್ಮತಿಸಿದ ವಿಶ್ವವೇ ಅರಿಯಲ್ಪಡುವ *ಆಶಿಖುರ್ರಸೂಲ್ ﷺ* ವಿದ್ವಾಂಸ ಶ್ರೇಷ್ಠರಾದ *ಖಮರುಲ್ ಉಲಮಾ ಕಾಂತಪುರಂ ಎ. ಪಿ. ಉಸ್ತಾದರ* ಸಹ ಕಾರ್ಯಕರ್ತರಾಗಿದ್ದೇವೆ ನಾವು.

ನಾವು ಸಂಘಟನೆಯಲ್ಲಿ ಕಾರ್ಯಾಚರಿಸುವುದು ಪೋಲೀಸ್ ಠಾಣೆ ಆಕ್ರಮಿಸಲೋ, ಬಿಸಿ ರಕ್ತದಲ್ಲಿ ಚೆಲ್ಲಾಟವಾಡಲೋ, ಬಾಂಬನ್ನು ಎಸೆದು ಊರುಗಳಲ್ಲಿ ಅನಾಥ ಮಕ್ಕಳನ್ನು ಸೃಷ್ಟಿಸಲೋ, ಮಸ್ಜಿದ್'ಗಳನ್ನು, ಮದ್ರಸಗಳನ್ನು ನಾಶಪಡಿಸಲೋ, ಖುರ್'ಆನ್'ನನ್ನು ಅಪಮಾನಿಸಲೋ, ಕಲ್ಲು ಬಿಸಾಡಿ ಬಸ್ಸಿನ ಗಾಜುಗಳನ್ನು ಪುಡಿ ಮಾಡಲೋ, ಭಯೋತ್ಪಾದಕತೆಯನ್ನು ಬೆಳೆಸಲೋ, ಭೀತಿವಾದವನ್ನು ಪ್ರಚಾರಪಡಿಸಲೋ ಅಲ್ಲವೇ ಅಲ್ಲ...

ನಾವು ಸಂಘಟನೆಯಲ್ಲಿ ಸದಸ್ಯರಾಗಿರುವುದು ಮತದಾನದಲ್ಲಿ ಜಯಗಳಿಸಿದ ಪಾರ್ಟಿಗಳಿಗೆ ಬೇಕಾಗಿ ಅವರ ಹರ್ಷೋದ್ಘಾರದಲ್ಲಿ ಭಾಗಿಯಾಗಲೋ, ಸೋತ ಪಾರ್ಟಿಯನ್ನು ಹೀಯಾಳಿಸಲೋ, ಸಂಸ್ಕಾರ ಶೂನ್ಯವಾಗಿ ವರ್ತಿಸಲೋ, ರಾಜಕೀಯಕ್ಕೆ ಬೇಕಾಗಿಯೂ ಅಲ್ಲದೆಯೂ ಊರಿನಲ್ಲಿ ಅನಗತ್ಯ ವಿವಾದಗಳನ್ನು ತರ್ಕಗಳನ್ನು ಸೃಷ್ಟಿಸಲೋ ಅಲ್ಲವೇ ಅಲ್ಲ..

ಬದಲಾಗಿ ಅಲ್ಲಾಹನ 'ಸಿರಾತುಲ್ ಮುಸ್ತಖೀಮಾದ ಹಾದಿಯಲ್ಲಿ ಅವನ ಪ್ರೀತಿ ಗಳಿಸುವ ಉದ್ದೇಶದಿಂದ ಮಾತ್ರವಾಗಿದೆ.

ಪವಿತ್ರವಾದ ಇಸ್ಲಾಂ ದೀನಿನ ನಿಯಮಗಳನ್ನು ಉಲ್ಲಂಘಿಸುವ..,
ಧರ್ಮಗುರುಗಳ ಮಾತನ್ನು ಧಿಕ್ಕರಿಸುವ, ಯಾ ಅಂಗೀಕರಿಸದ ಕೆಲವು ನಾಲಾಯಕರಾದಂತಹ   ಅಕ್ರಮಿಗಳು ಹಾಗೂ ದುಷ್ಟರು ಈ ಸಂಘಟನೆಗಳಿಗೆ ಅಗತ್ಯವಿಲ್ಲ.

4600 ದಷ್ಟು ಮಸ್ಜಿದ್'ಗಳನ್ನು ವಿಶ್ವಾಸಿಗಳಿಗಾಗಿ ನಿರ್ಮಿಸಿ, ಮದ್ರಸಗಳು ಹಾಗೂ ದೀನಿ ಸ್ಥಾಪನೆಗಳನ್ನು ಸ್ಥಾಪಿಸಿ, ನಿರ್ಗತಿಕರಿಗಾಗಿ 1000 ದಷ್ಟು ಬಾವಿಗಳನ್ನು, ಮನೆಗಳನ್ನು, ನಿರ್ಮಿಸಿ ಕೊಟ್ಟು, ಪ್ರವಾದಿ ﷺ ಚರ್ಯೆಯಾದ ಅನಾಥ ಮಕ್ಕಳಿಗೆ ಆಶ್ರಯರಾಗಿ, 10,000 ದಷ್ಟು ಯುವ ವಿದ್ವಾಂಸರನ್ನು ಸಮೂಹಕ್ಕೆ ಸನ್ಮಾನಿಸಿದ, ಪ್ರತಿದಿನ ಸ್ವಹೀಹುಲ್ ಬುಖಾರಿ ತರಗತಿ ನಡೆಸುವ, ಲೋಕ ರಾಷ್ಟ್ರಗಳಲ್ಲಿ ಭಾರತದ ಸಿಂಹ ಘರ್ಜನೆಯಾಗಿ ಒಂದು ಪುರುಷಾಯುಷ್ಯವನ್ನು ಸಮೂಹಕ್ಕಾಗಿ ಸಮರ್ಪಿಸಿದ, ಕಾಶ್ಮೀರಿಗಳ ಶೈಖ್ ಸಾಬ್ ಆಗಿ,
ಅರೇಬಿಯನ್ ವಿದ್ವಾಂಸರುಗಳ ಎಡೆಯಲ್ಲಿ ಶೈಖ್ ಅಬೂಬಕ್ಕರ್ ಆಗಿ, ನಮ್ಮ ಪ್ರೀತಿಯ ಶೈಖುನಾ *ಖಮರುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ್* ಹಾಗೂ ಅವರ ಜೊತೆಗಿರುವ ಸಮುದ್ರ ಸಮಾನವಾದ ತಿಳುವಳಿಕೆಯಿರುವ ವಿದ್ವಾಂಸರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ಮಾಡಿ ಕೊಟ್ಟು ಅವರನ್ನು ಅನುಸರಿಸಿ, ಅಲ್ಲಾಹನ ತೃಪ್ತಿ ಪಡೆಯಲು, ಪರಲೋಕ ರಕ್ಷೆ ಹೊಂದಲಿಕ್ಕಾಗಿ ಮಾತ್ರ ಕಾರ್ಯಾಚಿಸುತ್ತಿರುವ ಒಂದು ಆತ್ಮೀಯ ಸಂಘಟನೆಯಾಗಿದೆ.

🔹ಮುಂದುವರಿಯುವುದು

✍ಗಫೂರ್ ಬಾಯಾರ್
💎💎💎💎💎💎💎💎💎

No comments:

Post a Comment