Tuesday, December 12, 2017

*📝 ಪ್ರವಾದಿ ಸಂದೇಶ 📡*
     🔹🔹🔹🔹🔹🔹
*ಸ್ತ್ರೀಗಳು ಮನೆಯಿಂದ ಹೊರಗಿಳಿಯುವಾಗ ಮುಖ ಮುಚ್ಚುವುದು ಕಡ್ಡಾಯವೇ...*
🍃🍃🍃🍃🍃🍃🍃🍃🍃🍃🍃

➡ ಶರೀರದಿಂದ ಮುಚ್ಚಲೂ ಕಡ್ಡಾಯವಾದ ಭಾಗಕ್ಕಾಗಿದೆ ಔರತ್ ಎಂದು ಹೇಳುವುದು. ನಮಾಜಿನಲ್ಲಿಯೂ ಹೊರಗೂ, ಅನ್ಯರ ಮುಂದೆಯೂ ಔರತ್ ಮುಚ್ಚುವುದು ವಿವಿಧ ರೂಪಗಳಲ್ಲಿ ಕಡ್ಡಾಯವಾಗುತ್ತದೆ. ಸ್ತ್ರೀಗಳ ಔರತ್ ಐದು ವಿಧದಲ್ಲಿ ವಿವರಿಸಲಾಗಿದೆ. ಅನ್ಯ ಪುರುಷರು ನೋಡುವಂತಹಾ ಸಂಧರ್ಭದಲ್ಲಿ ಶರೀರವೆಲ್ಲಾ ಔರತ್ ಎಂಬುವುದಾಗಿದೆ ಪ್ರಭಲಾಭಿಪ್ರಾಯ.

⚠️ಹಿಂದಿನ ಕಾಲದ ಮುಸ್ಲಿಮರು ಸ್ತ್ರೀಗಳ ಮುಖ ತೆರೆದು ಹೊರಗಿಳಿಯಳು ಅನುಮತಿ ನೀಡುತ್ತಿರಲಿಲ್ಲ ಎಂದು ಇಮಾಮುಲ್ ಹರಮೈನಿ (ರ.ಅ)ರವರು ಹೇಳಿದ್ದಾರೆ.

.وقد روى البخاري عن عائشة رضي الله عنها قالت ” لما أنزلت هذه الآية ‘وليضربن بخمرهن على جيوبهن’ أخذن أزورهن. فشققنها من قبل الحواشي فاختمرن بها

⚠️ಇಮಾಂ ಬುಖಾರೀ (ರ.ಅ)ರವರು ಆಇಶಾ (ರ.ಅ)ರವರಿಂದ ಉಲ್ಲೇಖಿಸಿ ವರದಿ ಮಾಡುತ್ತಾರೆ.
وليضربن بخمرهن على جيوبهن
ಎಂಬ ಆಯತ್ ಅವತರಿಸಿದಾಗ ಸ್ತ್ರೀಗಳು ಅವಳ ವಸ್ತ್ರವನ್ನು ಹರಿದು ಅದರಿಂದ ಮುಖ ಮುಚ್ಚುತ್ತಿದ್ದರು. فاختمرن ಎಂಬುವುದಕ್ಕೆ ಹಾಪಿಳ್ ಇಬ್ನು ಹಜರಿಲ್ ಅಸ್ಕಲಾನಿ (ರ.ಅ)ಮುಖದ ಕವರ್ ಎಂದಾಗಿದೆ ಅರ್ಥ ನೀಡಿದ್ದು.

⚠️ಇಮಾಂ ನವವೀ, ರಿಫಾಈ (ರ.ಅ)ಎಂಬಿಬ್ಬರ ಮಾತಿನಿಂದ ತಿಳಿದುಬರುವುದು ಮುಖ ಮುಚ್ಚುವುದು ಕಡ್ಡಾಯವಾಗಿದೆ ಎಂದಾಗಿದೆ. ಅದೇ ರೀತಿ ಮುಖ ಮುಚ್ಚವುದು ಕಡ್ಡಾಯವೆಂದಾಗಿದೆ ಮುಗ್ನಿಯಲ್ಲಿ ಇಮಾಂ ಶರ್ ಬೀನಿ (ರ.ಅ)ರವರು ಹೇಳುವುದು. ಅನ್ಯ ಪುರುಷರು ನೋಡುತ್ತಾರೆಂದು ದೃಡವಾದರೆ ಸ್ತ್ರೀಗೆ ಸ್ತ್ರೀಗೆ ಮುಖ ಮುಚ್ಚುವುದು ಕಡ್ಡಾಯವಾಗಿದೆ ಎಂದು ಇಮಾಂ ಇಬ್ನು ಹಜರ್ (ರ.ಅ)ರವರು ತುಹ್ಫದಲ್ಲಿ ಹೇಳುತ್ತಾರೆ.

🔴ಕೆಟ್ಟ ಭಾವನೆಯೊಂದಿಗೆ ಅನ್ಯರು ತನ್ನನ್ನು ನೋಡುವರೆಂದು ಭಯ ಉಂಟಾದರೆ ಮುಖ ಮುಚ್ಚುವುದು ಕಡ್ಡಾಯವಾಗಿದೆ ಎಂದು ಮದ್ಸ್ಹಬಿನ ನಾಲ್ಕು ಇಮಾಮರುಗಳು ಫತ್ ವಾ ನೀಡಿದ್ದಾರೆ.

⚠️ ತಾಬಿಉಗಳಲ್ಲಿ ಪ್ರಮುಖರಾದ ಉಬೈದ (ರ.ಅ)ರವರು 'ಜಿಲ್ ಬಾಬ್' ಧರಿಸುವ ರೂಪವನ್ನು ಹೇಳಿದ್ದು ತಫ್ ಸೀರುತ್ವಬ್ ರಿಯಲ್ಲಿ ಕಾಣಬಹುದು. ಅವರು
يدنين عليهن من جلابيبهن
ಎಂಬ ಆಯತ್ ವಿವರಿಸುತ್ತಾ ಅವರ ಸಾಲನ್ನು ತೆಗೆದು ಮುಖವನ್ನೂ ಮೂಗನ್ನು ಎಡ ಕಣ್ಣನ್ನೂ ಮುಚ್ಚಿ ಬಲಕಣ್ಣು ಮಾತ್ರ ಹೊರಗೆ ತೋರಿಸಿದರು. ಮೇಲಿನಿಂದ ಕಣ್ಣಿನ ಮೇಲಿರುವ ಕೂದಲನ್ನು ಕೂಡಾ ಮುಚ್ಚಿದರು. ಈ ರೀತಿಯಲ್ಲಾಗಿದೆ 'ಜಿಲ್ ಬಾಬ್' ಧರಿಸುವ ರೂಪವನ್ನು ಮಹಾನುಭಾವರು ತೋರಿಸಿಕೊಟ್ಟದ್ದು. ಉಮರ್ (ರ.ಅ)ರವರ ಕಾಲಾವಧಿಯಲ್ಲಿ ಮದೀನಾದಲ್ಲಿ ಜೀವಿಸಿದವರಾಗಿದ್ದಾರೆ ಮಹಾನುಭಾವರು.
🌻✨✨✨☀☀☀⭐⭐
💎💎💎💎💎💎💎💎💎

No comments:

Post a Comment