*ಜೀವಂತವಿರುವವರು ಅಥವಾ ಮರಣಹೊಂದಿದವರೊಂದಿಗೆ ಸಹಾಯ ಯಾಚಿಸುವುದು ಶಿರ್ಕಲ್ಲ*
*✍🏻 ಹಾರಿಸ್ ಪೆರಿಯಪಾದೆ*
*ನಿಸಾಅ್ ಅಧ್ಯಾಯದ 64ನೇ ಸೂಕ್ತದ* ವ್ಯಾಖ್ಯಾನವನ್ನು ಖುರ್ತಬೀ ಬರೆಯುತ್ತಾರೆ:
ಅಬೂಸ್ವಾದಿಕ್, ಅಲೀ ರಲಿಯಲ್ಲಾಹು ಅನ್'ಹು ರವರಿಂದ ನಿವೇದನೆ: ಅಲಿ ಹೇಳಿದರು: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ದಫನ ಮಾಡಿ ಮೂರು ದಿನ ಕಳೆದಾಗ ಗ್ರಾಮೀಣ ಅರಬಿಯೊಬ್ಬ ಬಂದು ಅವರ ಕಬರಿನ ಮೇಲೆ ಹೊರಳಾಡಿ ಅಲ್ಲಿಂದ ಮಣ್ಣೆತ್ತಿಕೊಂಡು ತಲೆಗೆ ಸವರಿದ. ಅನಂತರ ಆತ ಹೀಗೆ ಹೇಳುತ್ತಿರುವುದನ್ನು ನಾವು ಆಲಿಸಿದೆವು: *ಓ ಅಲ್ಲಾಹನ ಸಂದೇಶವಾಹಕರೇ,ನೀವು ಹೇಳುತ್ತಿರುವುದನ್ನು ಆಲಿಸಿ ನಾವು ವಿಷಯಗಳನ್ನು ಅರಿತುಕೊಂಡೆವು. ತಮ್ಮಿಂದ ನಾವು ಅದನ್ನು ಮೈಗೂಡಿಸಿಕೊಂಡೆವು. ಅಲ್ಲಾಹನು ತಮಗೆ ಅವತೀರ್ಣಗೊಳಿಸುವುದರಲ್ಲಿ ಹೀಗಿತ್ತು: "ಜನರು ಅವರ ದೇಹದೊಂದಿಗೆ ಅಕ್ರಮಗೈದು ನಿಮ್ಮನ್ನು ಸಮೀಪಿಸುತ್ತಾರೆ(ಹೀಗೆ ಆ ಗ್ರಾಮೀಣನು ಆಯತ್'ನ ಅಂತ್ಯದ ತನಕ ಪಾರಾಯಣ ಮಾಡಿದ) ಓ ಅಲ್ಲಾಹನ ಸಂದೇಶವಾಹಕರೇ, ನಾನು ನನ್ನ ದೇಹವನ್ನು(ಪಾಪಗಳಿಂದ) ಆಕ್ರಮಿಸಿದ್ದೇನೆ. ನನಗೆ ಕ್ಷಮೆ ಯಾಚಿಸಲು ನಾನಿದೋ ನಿಮ್ಮನ್ನು ಸಮೀಪಿಸಿರುವೆನು"*, ಆಗ ಖಬರಿನಿಂದ _ನಿಶ್ಚಯವಾಗಿಯೂ"ನಿಮ್ಮನ್ನು ಅಲ್ಲಾಹನು ಕ್ಷಮಿಸಿಬಿಟ್ಟಿದ್ದಾನೆ" ಎಂಬ ಶಬ್ದವು ಮೊಳಗಿತು_. *(ಅಲ್ ಜಾಮಿಉ ಫೀ ಅಹ್ಕಾಮಿಲ್ ಕುರ್ ಆನ್, ಖುರ್ತುಬಿ 3/229)*
_ಇದರಿಂದ ಮಾನವ ಸಾಮರ್ಥ್ಯದ ಮಿತಿಯ ಆಚೆಗಿರುವ ಕಾರ್ಯಗಳಲ್ಲಿ ಜೀವಂತವಿರುವವರು ಅಥವಾ ಮ್ರತರೊಂದಿಗೆ ಸಹಾಯ ಯಾಚಿಸುವುದು ಶಿರ್ಕಾಗಿದೆ ಎಂಬ ಇಸ್ತಿಗಾಸ ವಿರೋಧಿಗಳ ವಾದಕ್ಕೆ ಖುರ್ ಆನ್ ಹಾಗೂ ಮುಸ್ಲಿಂ ಜಗತ್ತಿನ ಇಜ್ಮಾಅ್ ಮೊದಲಾದವುಗಳಲ್ಲಿ ಯಾವುದೇ ಆಧಾರವಿಲ್ಲವೆಂದು ಸುಸ್ಪಷ್ಟವಾಗುತ್ತದೆ._
*✍🏻 ಹಾರಿಸ್ ಪೆರಿಯಪಾದೆ*
No comments:
Post a Comment