Monday, October 16, 2017

ಯಾರೇನೇ ಹೇಳಲಿ, ನನ್ನ ಪ್ರಕಾರ ವಿಶ್ವದ ಅತ್ಯಂತ ಬುದ್ದಿವಂತ ಪ್ರಾಣಿ ಅಂದರೆ, ಅದು ಈ ನಮ್ಮ ಕೇರಳದ ಚಲಪಿಗಳು ಮಾತ್ರ..!

ಯಾಕೆಂದರೆ, ಈ ಚಲಪಿಯ ವಾಲ್ ಸಂಪೂರ್ಣವಾಗಿ ಕೇಳಿನೋಡಿ, ನಿಮಗೇ ಅರ್ಥವಾಗುತ್ತದೆ.  ಇದರಲ್ಲಿ ಚಲಪಿ ಹೇಳುವುದೇನೆಂದರೆ, ಸುನ್ನಿಗಳು ಮುಹ್ಯುದ್ದೀನ್ ಶೈಖ್ (ರ) ರವರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಆದರೆ, ಅವರಿಗಿಂತಲೂ ಉನ್ನತರಾದ ಅಬುಬಕರ್ ಸ್ವಿದ್ದೀಖ್ (ರ), ಉಮರ್ (ರ), ಉಸ್ಮಾನ್ (ರ), ಅಲಿ (ರ) ರವರನ್ನು ಕರೆದು ಇಸ್ತಿಗಾಸ ನಡೆಸುವುದಿಲ್ಲ ಯಾಕೆ?. ಅದಕ್ಕೆ ಚಲಪಿಯ ವ್ಯಾಖ್ಯಾನ, ಶಿಯಾ ಗಳಂತೆ ಸುನ್ನಿಗಳಿಗೂ ಈ ಮೂರು ಖಲೀಫರ ಮೇಲೆ ದ್ವೇಷವಂತೆ..!

ಹೆಂಗಿದೆ ಈ ಚಲಪಿಯ ಬುದ್ದಿವಂತಿಕೆ..

ಮುಹ್ಯುದ್ದೀನ್ ಶೈಖ್ ರವರನ್ನು ಕರೆದು ಇಸ್ತಿಗಾಸ ಮಾಡುವ ನಾವು, ಈ ನಾಲ್ಕು ಖಲೀಫರನ್ನು ಕರೆದು ಇಸ್ತಿಗಾಸ ಮಾಡದಿದ್ದರೆ, ಅವರೊಂದಿಗೆ ನಮಗೆ ದ್ವೇಷ ಎಂದು ಅರ್ಥ ಕೊಡುವುದಾದರೆ, ಚಲಪಿಯ ಭಾಷೆಯಲ್ಲಿ ಈ ಕೆಳಗಿನದ್ದನ್ನು 👇🏾  ಈ ರೀತಿ ವ್ಯಾಖ್ಯಾನಿಸಬಹುದು.

ಮಂಗಳೂರಲ್ಲಿರುವ ದೊಡ್ಡ ಸೂಪರ್ ಮಾರ್ಕೆಟ್ "ಫಾತಿಮಾ ಷ್ಟೋರ್". ಇನ್ನು ಯಾರಾದರು ಮಂಗಳೂರಿನವರು "ಫಾತಿಮ ಷ್ಟೋರ್" ಗೆ ಸಾಮಾನು ಖರೀದಿಸಲು ಹೋಗದೆ, ಬೇರೆ ಯಾವುದಾದರೂ ಸೂಪರ್ ಮಾರ್ಕೆಟಿಗೆ ಹೋಗುವುದಾದರೆ, ಅದು ಈ ಚಲಪಿಗಳ ವ್ಯಾಖ್ಯಾನದಲ್ಲಿ ಆ ವ್ಯಕ್ತಿಗೆ "ಫಾತಿಮಾ ಷ್ಟೋರ್" ನವರೊಂದಿಗೆ ದ್ವೇಷ.

ಮಂಗಳೂರಿನವರು ಸಹಜವಾಗಿ ಕೋಳಿ, ಆಡು, ದನ ತಿನ್ನುತ್ತಾರೆ. ಒಂಟೆ, ಮೊಲ, ಜಿಂಕೆ, ಪಾರಿವಾಳ ತಿನ್ನುವುದಿಲ್ಲ. ಚಲಪಿಗಳ ವ್ಯಾಖ್ಯಾನದಲ್ಲಿ ಮಂಗಳೂರು ಮುಸ್ಲಿಮರಿಗೆ ಒಂಟೆ, ಮೊಲ, ಪಾರಿವಾಳ ದೊಂದಿಗೆ ದ್ವೇಷ. ಅಥವಾ, ಅದರ ಮಾಂಸ ಹರಾಂ. ಯಾಕೆಂದರೆ, ಮಂಗಳೂರಿನವರು ಅದನ್ನು ಉಪಯೋಗಿಸುವುದಿಲ್ಲವಲ್ಲ. ಉಪಯೋಗಿಸದಿದ್ದರೆ, ಅದರೊಂದಿಗೆ ದ್ವೇಷ ಎಂದರ್ಥ ಈ ಚಲಪಿಗಳ ಭಾಷೆಯಲ್ಲಿ.

ಇನ್ನು ಈ ಚಲಪಿಗಳ ವಾದವನ್ನನುಸರಿಸಿ ಚಲಪಿಗಳಿಗೆ ಒಂದು ತಿರುಗು ಪ್ರಶ್ನೆ..

ಚಲಪಿಗಳ ಕೆಲವೊಂದು ಮಸೀದಿಗಳ ಹೆಸರು ಈ ರೀತಿ ಇದೆ..
ಆಯಿಷಾ ಮಸ್ಜಿದ್,
ಸಿದ್ದೀಖಿಯಾ ಮಸ್ಜಿದ್
ಮಸ್ಜಿದುಲ್ ಅಲಿಯ್ಯ್..etc

 ಈ ಹೆಸರಿಡಲ್ಪಟ್ಟವರಿಗಿಂತಲೂ ಶ್ರೇಷ್ಠ ವ್ಯಕ್ತಿ, ಪ್ರವಾದಿ ಮುಹಮ್ಮದ್ (ಸ.ಅ) ರು ಆಗಿದ್ದಾರೆ. ನಂತರ ಅಬುಬಕರ್ ಸ್ವಿದ್ದೀಖ್ (ರ) ಆಗಿದ್ದಾರೆ ತಾನೇ. ಯಾಕೆ ನೀವು ಈ ಎರಡು ಮಹಾನರುಗಳ ಹೆಸರನ್ನು ಬಿಟ್ಟು ಬೇರೆಯವರ ಹೆಸರನ್ನು ಬಳಸಿರೋದು? ಅಂದರೆ, ನಿಮಗೆ ಕೂಡಾ ಶಿಯಾಗಳಂತೆ ಪ್ರವಾದಿ (ಸ.ಅ) ಮತ್ತು ಅಬುಬಕರ್ (ರ) ರವರೊಂದಿಗೆ ದ್ವೇಷ ವಿದೆಯಾ?  ಇದಕ್ಕೆ ನೀವು ಸ್ಪಷ್ಟವಾಗಿ ಉತ್ತರಿಸಲೇ ಬೇಕು.

ಇನ್ನು ಕೊನೆಯದಾಗಿ, ನಾವು ಅಬುಬಕರ್ (ರ), ಉಸ್ಮಾನ್ (ರ) ಮುಂತಾದವರನ್ನು ಕರೆಯುವುದಿಲ್ಲ ಎಂದು ನಿಮಗೆ ಸಂಶಯವಿದ್ದರೆ 👇🏾 ಇದನ್ನು ನೋಡಿ ತಿದ್ದಿಕೊಳ್ಳಿ..

ಯಾ ಅಬೂಬಕರ್ ಸ್ವಿದ್ದೀಖ್ (ರ),
ಯಾ ಉಮರ್ (ರ),
ಯಾ ಉಸ್ಮಾನ್ (ರ),
ಯಾ ಅಲೀಯ್ (ರ) ರವರೇ,

ತಮ್ಮ ಕರುಣೆ, ರಕ್ಷಣೆಯ ನೋಟ ಎಂದೆಂದೂ ಈ ಪಾಪಿಗಳಾದ ನಮ್ಮ ಮೇಲೆ ಸದಾ ಇರಲಿ, ಆಮೀನ್ ಯಾ ಅಲ್ಲಾಹ್.

ಒ ಚಲಪಿ ಈಗಲಾದರೂ ಸಂಶಯ ನಿವಾರಣೆ ಆಯಿತಾ?

ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.

No comments:

Post a Comment