Sunday, October 15, 2017

ಸುಗಂಧಭರಿತ ಗಾಳಿ ಬೀಸುವ ಖಬರ್ ಭಾಗ = 02

*ಸುಗಂಧಭರಿತ ಗಾಳಿ ಬೀಸುವ ಖಬರ್..!!*
🌷🌷🌷🌷🌷🌷
🌷🌷

_ಭಾಗ 02_

ಫಿರ್'ಔನ್ ಮತ್ತು ಆತನ ಅನುಯಾಯಿಗಳು ಸಭೆ ಸೇರಿ ಒಂದು ತೀರ್ಮಾನ ಕೈಗೊಂಡರು..⤵

ಮಾಶಿತಾ ಬೀವಿ (ರ)ಯನ್ನು ಹತ್ಯೆಗೈಯಬೇಕು..!
ಇದಾಗಿತ್ತು ಅವರ ತೀರ್ಮಾನ.

ಅದಕ್ಕಾಗಿ ಬೃಹತ್ತಾದ ಅಗ್ನಿ ಕುಂಡವನ್ನು ಸ್ಥಾಪಿಸಿ ಅದರೊಳಗೆ ಬೆಂಕಿ ಹೊತ್ತಿಸಿದರು. ಒಂದು ದೊಡ್ಡ ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿದರು.

ಆ ಅಗ್ನಿ ಕುಂಡದ ಹತ್ತಿರ ಮಾಶಿತಾ ಬೀವಿ(ರ)ರವರನ್ನು ಕರೆದುಕೊಂಡು ಬಂದು ಫಿರ್'ಔನ್ ಹೇಳಿದನು.
ಮಾಶಿತಾ (ರ) ಇದು ನಿನಗಿರುವುದಲ್ಲ..
ನಿನ್ನ ಮೂರು ಮಕ್ಕಳನ್ನು ಈ ಕುದಿಯುವ ಎಣ್ಣೆಯಲ್ಲಿ ಹಾಕಿ ಸುಡಲು ತೀರ್ಮಾನಿರುವೆನು..
ಏನು ಹೇಳುತ್ತಿಯಾ ನೀನು..?
ನೀನು ವಿಶ್ವಾಸವಿರಿಸಿದ್ದಂತಹ ಅಲ್ಲಾಹನ ಧರ್ಮದಿಂದ ಹಿಂತಿರುಗಿ ನನ್ನ ಧರ್ಮಕ್ಕೆ ಮರಳುತ್ತೀಯಾ!? ಅಥವಾ ನಿನ್ನ ವಿಶ್ವಾಸದಲ್ಲೇ ದೃಢವಾಗಿರುತ್ತೀಯಾ..?

ಮಾಶಿತಾ ಬೀವಿ(ರ)ಯು ತಾನು ಅನುಸರಿಸಿದಂತಹ ಧರ್ಮದ ಮೇಲೆ ದೃಢ ವಿಶ್ವಾಸವಿಟ್ಟು ನನ್ನನ್ನು ನನ್ನ ಮೂರು ಮಕ್ಕಳನ್ನು ತುಂಡು ತುಂಡಾಗಿ ಕಡಿದರೂ, ಹೊತ್ತಿಸಿ ಸುಟ್ಟರೂ ನಾನು ಸ್ವೀಕರಿಸಿದ ಇಸ್ಲಾಮಿನಿಂದ ಯಾವುದೇ ಕಾರಣಕ್ಕೂ ಹಿಂತಿರುಗುವುದಿಲ್ಲ ಎಂದು ಖಡಾಖಂಡಿತವಾಗಿ ಉತ್ತರಿಸುತ್ತಾರೆ....

ಮಾಶಿತ (ರ) ರವರ ದೃಢವಾದ ತೀರ್ಮಾನ  ಕೇಳಿ ರೋಷಗೊಂಡ ಫಿರೌನ್ ಹಾಗೂ ಅನುಯಾಯಿಗಳು ಬೆಂಕಿಯಿಂದ ಕುದಿಸಿ ಚೆಲ್ಲುತ್ತಿರುವ ಎಣ್ಣೆಗೆ ಮಾಶಿತಾ ಬೀವಿ (ರ) ರವರ ಏಳು ವರ್ಷದ ಹಿರಿಯ ಮಗಳನ್ನು ಹಿಡಿದುಕೊಂಡು ಬಂದರು....

ಆ ಕುದಿಯುತ್ತಿರುವ ಎಣ್ಣೆಗೆ ಮಗಳನ್ನು ಹಾಕಿ ಇನ್ನೇನು ಕೊಲ್ಲಲು ತಯಾರಾಗಿ ಬಾಣಲೆಯ ಹತ್ತಿರಕ್ಕೆ ಹಿಡಿದು ಫಿರ್'ಔನ್'ನ ಕಿಂಗರರು ಕೇಳಿದರು....

ಹೇಯ್.. ಮಾಶಿತಾ.... (ರ)

ನಿನ್ನ ಮಗಳನ್ನು ಈ ಉರಿಯುತ್ತಿರುವ ಎಣ್ಣೆಗೆ ಹಾಕಿ ಸುಡಲು ತಯಾರಾಗಿದ್ದೇವೆ..! ನಾವು..

ನೀನು ನಿನ್ನ ತೀರ್ಮಾನದಿಂದ ಹಿಂತಿರುಗಿತ್ತೀಯಾ!? ಅಥವಾ ಇಲ್ಲವೇ..?
ನಿನ್ನ ಇಸ್ಲಾಮಿನಿಂದ ಹೊರಗೆ ಬರುತ್ತೀಯಾ..?
ಬೇಗ ಹೇಳು..

ಈ ಭಯಾನಕವಾದ ದೃಶ್ಯ ಒಬ್ಬಳು ಮಾತೃ ಹೃದಯಕ್ಕೂ ಸಹಿಸಲು ಸಾಧ್ಯವಿಲ್ಲ..!

ಆದರೆ ಮಾಶಿತ ಬೀವಿ (ರ)
ತನ್ನ ಮಗಳನ್ನು ಅಪ್ಪಿ ಹಿಡಿದು ಚುಂಬನ ಕೊಟ್ಟು ಹೇಳಿದರು..
ಮಗಳೇ.... ನಾವು ಸ್ವೀಕರಿಸಿರುವುದು ಏಕ ಇಲಾಹಿಯನ್ನಾಗಿದೆ.
ನಿನಗೆ ಅಲ್ಲಾಹನ ಕರೆ ಬಂದಿದೆ.
ನೀನು ನಗುತ್ತಲೇ ಅಲ್ಲಾಹನ ರಾಜ ಸನ್ನಿದಿಗೆ ಮರಳು..
ಸ್ವರ್ಗೀಯ ವೃಂದಾವನದಲ್ಲಿ ನಾವು ಒಂದಾಗೋಣ.
ಇದನ್ನು ಕೇಳಿದ ಫಿರೌನ್ ಮತ್ತು ಜೊತೆಗಿರುವವರು ಮಗಳನ್ನು ಕುದಿಯುತ್ತಿರುವ ಎಣ್ಣೆಗೆ ಹಾಕಿ ಆ ಸುಟ್ಟರು....!
ಯಾ.. ಅಲ್ಲಾಹ್..!

ಎರಡನೇ ಮಗಳನ್ನು ಆ ಮಾತೃ ಹೃದಯದ ಕಣ್ಣಿನ ಮುಂದೆ ಅದೇ ರೀತಿಯಲ್ಲಿ ಸುಟ್ಟು ಕೊಂದರು..!!
ಆಗಲೂ ಮಾಶಿತಾ  ಬೀವಿಯವರು ಹೇಳಿದರು..
ನಾನು ಸ್ವೀಕರಿಸಿರುವುದು ಇಸ್ಲಾಂ ಆಗಿದೆ.
ಈ ಪರಿಶುದ್ದ ದೀನ್ ಏಕ ಇಲಾಹನದ್ದಾಗಿದೆ..

*ಬೀವಿ(ರ)ಯರ ದೃಢ ವಿಶ್ವಾಸ ಕಿಚ್ಚಿಂತೂ ಬದಲಾಗಲಿಲ್ಲ..*

ಇನ್ನು ಮುಂದಿನ ಸರದಿ..

🌷ಮುಂದುವರಿಯುವುದು

✍ಗಫೂರ್ ಬಾಯಾರ್
💎💎💎💎💎💎💎💎💎

No comments:

Post a Comment