Monday, October 16, 2017

📝 ಸಲಪಿಯ ವಾದ ಮತ್ತು ಖುರ್ ಆನ್, ಹದೀಸ್

✍ಝುಹ್ ರಿ, ಮಂಗಳಪೇಟೆ

ಸಲಪಿ ಯಾಗಬೇಕಾದರೆ ಈ ಎರಡು ಗುಣ ಬೇಕು.�
👉� ಒಂದು ಸುಳ್ಳು ಹೇಳುವುದು.
👉ಮತ್ತೊಂದು ಸ್ವಂತವಾಗಿ ದೀನ್ ಹೇಳುವುದು.

ಈ ಎರಡು ಗುಣ ಇದ್ದರೆ ಯಾವ ಆಯತ್ ಓದಿ ಸ್ವಂತ  ವಾದ ಮಂಡಿಸಬಹುದು.

ಇನ್ನು ಸಲಪಿಯ ಸುಳ್ಳು  ನೋಡೋಣ

ಸುನ್ನಿಗಳು ದರ್ಗಾಕ್ಕೆ ಹೋಗುತ್ತಾರೆ. ಅಲ್ಲಿ ಅಗಲಿದ  ಮಹಾನುಭಾವರ ಸನ್ನಿದಿಯಲ್ಲಿ ಇಸ್ತಿಗಾಸ, ತವಸ್ಸುಲ್ ನಡೆಸುತ್ತಾರೆ.

ಇದನ್ನು ಕಂಡ ಸಲಪಿ ಎಲರ್ಜಿಯಾಗಿ
ಸುಳ್ಳು ಹೇಳುತ್ತಾನೆ.

" ನೋಡಿ !! ಸುನ್ನಿಗಳು ದರ್ಗಾಗಳಿಗೆ ಹೋಗಿ ಪ್ರಾರ್ಥಿಸುತ್ತಾರೆ "!

ಪ್ರಾರ್ಥನೆ ಅಲ್ಲಾಹುನೊಂದಿಗೆ ಮಾತ್ರ. ಅಲ್ಲಾಹನಲ್ಲದವನೊಂದಿಗೆ ಪ್ರಾರ್ಥಿಸಬೇಕೆಂಬ ವಾದ ಸುನ್ನಿಗಳಿಗೂ ಇಲ್ಲ.
ಸಲಪಿಗೆ ಸುನ್ನಿಗಳನ್ನು ಕಾಪಿರ್ ಮಾಡಬೇಕು. ಅದಕ್ಕಾಗಿ ಸುಳ್ಳು ಬಿತ್ತುತ್ತಿದ್ದಾನೆ.

ಸಲಪಿಯ ಸುಳ್ಳು ತಿಳಿಯಲು ಈ ಉದಾಹರಣೆ ನೋಡಿ;
ಒಬ್ಬ ತಾಯಿ ಬಳಿ ಹೇಳುತ್ತಾನೆ; "ಉಮ್ಮಾ... ನನಗೆ ಹಸಿವಾಗುತ್ತಿದೆ ಆಹಾರ ನೀಡು"
ಮತ್ತೊಬ್ಬ ಅಲ್ಲಾಹನ ಬಳಿ ಹೇಳುತ್ತಾನೆ ;
"ಅಲ್ಲಾ... ನನಗೆ ಹಸಿವಾಗುತ್ತಿದೆ. ಆಹಾರ ನೀಡು"

ಅಲ್ಲಾಹನ ಬಳಿ ಕೇಳಿದ್ದು ಪ್ರಾರ್ಥನೆ.
ತಾಯಿ ಬಳಿ ಕೇಳಿದ್ದು ಬೇಡಿಕೆ ಅಥವಾ ಅಭ್ಯರ್ಥನೆ,

ಇದು ಬುದ್ಧಿ ಇರುವ ಯಾರಿಗೂ ಮನದಟ್ಟು ಮಾಡಬಹುದು.

ಸಲಪಿ ಹೇಳುತ್ತಿದ್ದಾನೆ; "ಆತನು ತಾಯಿಯ ಬಳಿ  ಪ್ರಾರ್ಥಿಸಿದ"

ಪ್ರಾರ್ಥನೆ ಮತ್ತು ಬೇಡಿಕೆ ಸಲಪಿಗೆ ತಿಳಿದಿಲ್ಲ.

ಇವೆರಡರ ರೂಪವು ಒಂದೇ .
ಆದರೆ ಕೇಳುಗರ ಉದ್ದೇಶ ಒಂದಲ್ಲ.
ತಾಯಿ ಬಳಿ ಕೇಳಿದವನು ತಾಯಿ ಎಂಬ ನೆಲೆಯಲ್ಲಾದರೆ, ಅಲ್ಲಾಹನ ಬಳಿ ಕೇಳಿದವನು ಇಲಾಹ್, ನೀಡಲು ಸ್ವಯಂ ಸಾಮರ್ಥ್ಯ ಇರುವವನೆಂಬ ನೆಲೆಯಲ್ಲಾಗಿದೆ.

ಆದರೆ ಈ ವಿಭಜನೆಯನ್ನು ಏಕೀಕರಿಸಿ ಎಲ್ಲದ್ದಕ್ಕೂ ಪ್ರಾರ್ಥನೆ ಎಂಬ ಮುದ್ರೆ ಒತ್ತುವುದು ಸಲಪಿಯತ್ ನ ಜಹಾಲತ್ ನ ಪರಮಾವಧಿಯಾಗಿದೆ.

📝 ಇನ್ನು ಸ್ವಂತ ವಾದ ನೋಡಿ;

ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯಾರ್ಥನೆ ಮಾಡಬಾರದೆಂಬುದು ಸಲಪಿಯ ಸ್ವಂತ ವಾದ. ಆ ರೀತಿ ಇಸ್ಲಾಮಿನಲ್ಲಿಲ್ಲ.

ಸಲಪಿ ಓದುವ ಆಯತ್, ಹದೀಸ್ ನಿಜ, ಆದರೆ ಆಯತ್ ಹದೀಸ್ ಹೆಸರಲ್ಲಿ ಮಂಡಿಸುವ ವಾದ ಸ್ವಂತದ್ದು. ಆ ವಾದಕ್ಕೂ ಓದುವ ಆಯತ್, ಹದೀಸ್ ಗೂ ಪರಸ್ಪರ ಸಂಬಂಧ ವಿಲ್ಲ.
ಉದಾಹರಣೆ ನೋಡಿ;
ಒಬ್ಬ ಬ್ಲಾಕ್ ಚಾ ( kattam chaya ) ಕುಡಿಯುತ್ತಾ ಇರುತ್ತಾನೆ. ಅಲ್ಲಿಗೆ ಸಲಪಿ ಬರುತ್ತಾನೆ. ಖುರ್ ಆನಿನ ಆಯತ್ ಓದುತ್ತಾನೆ; ಮದ್ಯಪಾನವನ್ನು ಇಸ್ಲಾಮ್ ಹರಾಂ ಗೊಳಿಸಿದೆ. ಆದ್ದರಿಂದ ನೀನು ಮದ್ಯಪಾನ ಮಾಡಬೇಡ.
ಸಲಪಿ ಇಲ್ಲಿ ಆಯತ್ ಓದಲು ಕಾರಣ ಮದ್ಯ ಬ್ಲಾಕ್ ಹಾಗೂ ಸಿಹಿ ಇದೆ.
ಬ್ಲಾಕ್ ಟೀಯು ಇದೇ ರೀತಿ ಬ್ಲಾಕ್ ಹಾಗೂ ಸಿಹಿ ಇದೆ.
ಸಲಪಿಯ ಸ್ವಂತ ಕಂಡು ಹಿಡಿತ ಬ್ಲಾಕ್ ಕಲರ್ ಮತ್ತು ಸಿಹಿ ಇದ್ದರೆ ಅದು ಮದ್ಯಪಾನ.
ಇಲ್ಲಿ ಸಲಪಿ ಓದಿದ ಆಯತ್ ಗೂ ಆತ ಕುಡಿಯುವುದಕ್ಕೂ ಪರಸ್ಪರ ಸಂಬಂಧ ವಿದೆಯೇ ??
ಆಯತ್ ಓದಿದ್ದು ಸರಿ. ಆದರೆ ಬ್ಲಾಕ್ ಟೀ ಕುಡಿಯಬಾರದೆಂಬುದು ಸಲಪಿಯ ಸ್ವಂತ ವಾದ ಎಂಬಂತೆ, ಇಸ್ತಿಗಾಸ ತವಸ್ಸುಲ್ ಸಲ್ಲದು ಎಂಬುದು ಸಲಪಿಯ ಸ್ವಂತ ವಾದವಾಗಿದೆ.

ಸಲಪಿಯತ್ ಎಂದರೇನು ?? ಎಂಬ ಪ್ರಶ್ನೆ ಬಂದರೆ, ಸುಳ್ಳು ಮತ್ತು ಸ್ವಂತ ವಾದ ಮಂಡಿಸುವುದನ್ನಾಗಿದೆ ಸಲಪಿಯತ್ ಎನ್ನುತ್ತಾರೆ. ಎಂದು ಉತ್ತರಿಸಿದರಾಯಿತು.

✍� ಝುಹ್ ರಿ ಮಂಗಳಪೇಟೆ

No comments:

Post a Comment