Monday, October 16, 2017

💧ತವಸ್ಸುಲ್,ಇಸ್ತಿಗಾಸ💧
❄❄❄❄❄❄❄❄❄❄❄

ಗೌಸುಲ್ ಅಅ್ ಲಮ್ ಅಬ್ದುಲ್ ಖಾದರ್ ಜೀಲಾನಿ(ರ.ಅ) ಹೇಳುತ್ತಾರೆ.

     "ಅಲ್ಲಾಹನ ಅನುಗ್ರಹದಿಂದ ಮದೀನಾವನ್ನು ಸಂದರ್ಶಿಸಲು ಅವಕಾಶ ದೊರಕಿದರೆ ಸ್ವಲಾತ್ ಓದುತ್ತಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮಸೀದಿಗೆ ಪ್ರವೇಶಿಸಬೇಕು. ನಂತರ ಪವಿತ್ರ ಗೋರಿಯ ಬಳಿಗೆ ಹೋಗಬೇಕು. ಮಿಂಬರ್ ಎಡಭಾಗದಲ್ಲಿ ಬರುವ ಹಾಗೆ ನಿಲ್ಲಬೇಕು. ಪವಿತ್ರ ಖಬರ್ ಮುಂಭಾಗದಲ್ಲಿರಬೇಕು.

ಆಗ " ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು" ಎಂದು ಸಲಾಂ ಹೇಳಬೇಕು.ನಂತರ ನಮಾಜಿನಲ್ಲಿ ಓದುವ ಸ್ವಲಾತನ್ನು ಹಾಗೂ ಬಾಂಗ್ ಕರೆಯ ನಂತರದ ದುಆವನ್ನು ಓದಬೇಕು ನಂತರ ಹೀಗೆ ಪ್ರಾರ್ಥಿಸಬೇಕು..👇

    "ಓ ಅಲ್ಲಾಹನೇ! ನೀನು ಖುರ್ ಆನ್ ನಲ್ಲಿ ನಿನ್ನ ನೆಬಿವರ್ಯರೊಂದಿಗೆ ಹೇಳಿದೆ ಜನರು ಸ್ವತಃ ಅವರನ್ನೇ ಆಕ್ರಮಿಸಿ ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ದುಆ ಮಾಡಿದರೆ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರಿಗಾಗಿ ದುಆ ಮಾಡಿದರೆ ಖಂಡಿತವಾಗಿ ಅಕ್ರಮಿಗಳು ಅಲ್ಲಾಹನನ್ನು ಕ್ಷಮಾಶೀಲನಾಗಿ ಕಾಣುವರು (ನಿಸಾ 64)
   
 ಅಲ್ಲಾಹನೇ ನಾನು  ನೆಬಿವರ್ಯರ ಬಳಿಗೆ ಪಶ್ಚಾತ್ತಾಪ ಪಡುತ್ತಾ ಕ್ಷಮೆಯನ್ನು ಅರಸುತ್ತಾ ಹಾಜರಾಗಿದ್ದೇನೆ ಮತ್ತು ನಿನ್ನೊಂದಿಗೆ ಮೊರೆ ಇಡುವುದೇನೆಂದರೆ ನನ್ನನ್ನು ಸಹಾ ನಿನ್ನ ನೆಬಿವರ್ಯರ ಜೀವಿತಾ ಅವಧಿಯಲ್ಲಿ ಜನರು ಅವರ ಬಳಿ ಬಂದು ಪಶ್ಚಾತ್ತಾಪ ಪಟ್ಟಾಗ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರ ಕ್ಷಮೆಗಾಗಿ ಪ್ರಾರ್ಥಿಸಿದಾಗ ನೀನು ಅವರನ್ನು ಕ್ಷಮಿಸಿದಂತೆಯೇ ಈಗಲೂ ನನ್ನನ್ನು ಕ್ಷಮಿಸು.

     ಓ ಅಲ್ಲಾಹನೇ! ನಾನು ನಿನ್ನ ಕರುಣಾಮಯಿಯಾದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮುಖಾಂತರ ನಿನ್ನೆಡೆಗೆ ಮುಖ ತಿರುಗಿಸಿದ್ದೇನೆ. ಓ ಅಲ್ಲಾಹನ ಸಂದೇಶವಾಹಕರೇ ನಾನು ನಿಮ್ಮ ವಸೀಲಾ ಸಹಾಯ ಅಪೇಕ್ಷೆ ಯನ್ನು ಬೇಡುತ್ತಾ ಅಲ್ಲಾಹ ನೊಂದಿಗೆ ಕ್ಷಮೆಯನ್ನು ಕೇಳುತ್ತಿದ್ದೇನೆ, ಅವನು ನನ್ನ ತಪ್ಪುಗಳನ್ನು ಕ್ಷಮಿಸಲಿ ಮತ್ತು ನನಗೆ ಕರುಣೆ ದಯೆ ಪಾಲಿಸಲಿ.

(ಗುನ್ಯತುತ್ವಾಲಿಬೀನ್ 11-12)

❄❄❄❄❄❄❄❄❄❄❄

No comments:

Post a Comment