Sunday, October 15, 2017

ಸುಗಂಧಭರಿತ ಗಾಳಿ ಬೀಸುವ ಖಬರ್ ಭಾಗ = 01

*ಸುಗಂಧಭರಿತ ಗಾಳಿ ಬೀಸುವ ಖಬರ್..!*
🌷🌷🌷🌷🌷🌷🌷🌷🌷

_ಈ ಚರಿತ್ರೆಯನ್ನು ಸಂಪೂರ್ಣವಾಗಿ ಓದಿದರೆ ನಿಮ್ಮ ಕಣ್ಣುಗಳಿಂದ ಕಣ್ಣೀರ ಹನಿ ಸುರಿಯದಿರಲಾರದು._

  *ಭಾಗ -01*
〰〰〰〰〰〰〰〰〰
ಮಿಅ್'ರಾಜ್'ನ ರಾತ್ರಿಯಲ್ಲಿ ಬುರಾಖ್ ಎಂಬ ಅದ್ಬುತ ವಾಹನದಲ್ಲಿ ಮುತ್ತು ನಬಿ ﷺ ರವರು ಮತ್ತು ಜಿಬ್ರೀಲ್ (ಅ) ರವರು ಯಾತ್ರೆ ಹೋಗುತ್ತಿರುವಾಗ ಅತ್ಯದ್ಭುತವಾದ ಸುಗಂಧ ಸುವಾಸನೆಯು ನಬಿ ﷺ ರವರಿಗೆ ಅನುಭವವಾಗುತ್ತದೆ.!

ಪರಿಮಳದ ತೀವ್ರತೆಯಿಂದ ಆಶ್ಚರ್ಯಗೊಂಡ ಹಬೀಬ್ ﷺ ರವರು ಜಿಬ್ರಿಲ್(ಅ)ರೊಂದಿಗೆ ಕೇಳುತ್ತಾರೆ..!

ಓ.. ಜಿಬ್ರೀಲ್ (ಅ) ಎಲ್ಲಿಂದಾಗಿದೆ ಈ ಸುಗಂಧ ಪರಿಮಳ ಬೀಸುವುದು..?

ನಬಿಯವರೇ..ﷺ

ಅದು ಒಂದು ಖಬರಿನಿಂದಾಗಿದೆ..

ಆಗ ನಬಿ ﷺ ರವರು ಮಗದೊಮ್ಮೆ ಆಶ್ಚರ್ಯಚಕಿತರಾಗಿ ಪ್ರಶ್ನಿಸುತ್ತಾರೆ ಖಬರ್'ನಿಂದವಾ..?

ಅದೇ.. ನಬಿ.. ﷺಯವರೇ..

ಯಾವ ಪ್ರವಾದಿಯವರ ಖಬರ್ ಅದು?
ಹಬೀಬ್ ﷺ ರವರ ಪ್ರಶ್ನೆಯಿದು..!

ಅಲ್ಲ ನಬಿಯವರೇ ﷺ ಆ ಖಬರ್ ಯಾವುದೇ ಪ್ರವಾದಿಯವರದ್ದಲ್ಲ..

ಅದೊಂದು ಅಡಿಯಾಳು ಹೆಣ್ಣಿನ ಹಾಗೂ ಅವರ ಮೂರು ಮಕ್ಕಳ ಖಬರ್ ಆಗಿದೆ..!

ಖಿಯಾಮತ್ತ್ ದಿನದವರೆಗೂ ಆ ಗೋರಿಯಿಂದ ಈ ಸುಗಂಧ ಪರಿಮಳ ಬಿಸುತ್ತಲೇ ಇರುವುದು..

ಹಬೀಬ್ ﷺ ರವರು ಆಶ್ಚರ್ಯದೊಂದಿಗೆ ಜಿಬ್ರೀಲ್ ಅ. ರವರ ಬಳಿ ಕೇಳಿದರು..?

ಇಷ್ಟು ದೊಡ್ಡ ಮಹೋನ್ನತಿಗೆ ತಲುಪಲು ಆ ಅಡಿಯಾಳು ಸ್ತ್ರೀ  ಮಾಡಿರುವ ಪುಣ್ಯ ಕಾಯಕವಾದರೂ ಏನು ಜಿಬ್ರಿಲರೇ..? (ಅ)

ಜಿಬ್ರಿಲ್ (ಅ) ನಬಿ ﷺ ರವರಿಗೆ ನಡೆದ ಘಟನೆಯನ್ನು ವಿವರಿಸಲು ಪ್ರಾರಂಭಿಸಿದರು..

ಫಿರ್'ಔನ್'ನ ಅರಮನೆಯಲ್ಲಿ ಅಡಿಯಾಳು ಹೆಣ್ಣಾಗಿ ಬದುಕಿದ ಹೆಣ್ಣಾಗಿದ್ದಾರೆ ಅವಳು..

ಹೆಸರು *"ಮಾಶಿತಾ".... (ರ)*

ಆ ಮಹಿಳೆ ರಾಜನ ಆಸ್ಥಾನದಲ್ಲಿ ಯಾರೂ ಕೂಡಾ ತಿಳಿಯದೆ ಮುಸಾ ನಬಿ (ಅ) ರವರ ಮುಖಾಂತರ ಅಲ್ಲಾಹನ ಮೇಲೆ  ವಿಶ್ವಾಸವಿಟ್ಟವರು..

ಹೀಗಿರುವಾಗ ಒಂದು ದಿನ ಮುಸಾ ನಬಿ (ಅ) ಅವಳ ಹತ್ತಿರ ಹೇಳಿದರು..
ಮಾಶಿತಾ.... ನೀನು ಯಾವುದೇ ಒಳ್ಳೆಯ ಕಾರ್ಯ ಮಾಡಲು ಪ್ರಾರಂಭಿಸುವಾಗಲು 'ಬಿಸ್ಮಿ' ಹೇಳಬೇಕು..!
ಮೂಸಾ ನೆಬಿ (ಅ)ಅವರ ಆದೇಶದನುಸಾರ ಅದನ್ನು ಜೀವನದಲ್ಲಿ ಅಳವಡಿಸುತ್ತಾ ಬಂದಿದ್ದರು,
ಒಂದು ದಿನ ಮಾಶಿತಾ ಬೀವಿ (ರ) ಮಗಳ ಕೂದಲು ಬಾಚಲು ಬಾಚಣಿಗೆ ಕೈಗೆತ್ತಿಕೊಂಡ ಕೂಡಲೇ *ಬಿಸ್ಮಿಲ್ಲಾಹಿ ರಹ್ಮಾನಿ ರಹಿಂ* ಎಂದು ಹೇಳಿದರು..!!

ನಾನಾಗಿದ್ದೇನೆ ಅತೀ ದೊಡ್ಡ ರಬ್ಬ್ ಎಂದು ಹೇಳುವ "ಫಿರೌನ್'ನ ಕಿವಿಗೆ ತಲುಪಿತು ಆ ಬಿಸ್ಮಿ..!
ತನ್ನ ಆಸ್ಥಾನದಲ್ಲಿರುವ ದಾಸಿ ಅಡಿಯಾಳು ಹೆಣ್ಣು *ಇಸ್ಲಾಂ ಧರ್ಮ* ಸ್ವೀಕರಿಸಿರುವುದು ತಿಳಿದ ಫಿರೌನಿನ ರೋಷ ನೆತ್ತಿಗೇರಿತು..

"ಮಶಿತಾ ಬೀವಿ (ರ) ಯವರನ್ನು ತನ್ನಲ್ಲಿಗೆ ಕರೆಸಿ, ಏಕ ಇಲಾಹಿ ವಿಶ್ವಾಸದಿಂದ ಹಿಂತಿರುಗಳು ಆಜ್ಞಾಪಿಸಿದನು..

ಆದರೆ ಮಶಿತಾ (ರ) ರವರು ಫಿರೌನಿನ ಆಜ್ಞಾಪಣೆಯನ್ನು ಪಾಲಿಸದೆ ತನ್ನ ವಿಶ್ವಾಸದಲ್ಲಿಯೇ ಸ್ಥಿರಗೊಂಡರು.

ಫಿರೌನ್ ಎಂಬ ರಾಕ್ಷಸನು ಮಾಶಿತಾ ಬೀವಿ(ರ)ಯ ಮನಪರಿವರ್ತನೆ ನಡೆಸಲು ಮಾಡಿದ ಎಲ್ಲಾ ಶ್ರಮವು ಸೋತು ಸುಣ್ಣದಾಗ ಕೊನೆಗೆ ಫಿರೌನ್ ಮತ್ತು ಆತನ ಅನುಯಾಯಿಗಳು ಜೊತೆಗೂಡಿ ಸಭೆ ಸೇರಿಕೊಂಡು ಒಂದು ತೀರ್ಮಾನ ಕೈಗೊಂಡರು....

*ಮುಂದುವರಿಯುವುದು*

✍ಗಫೂರ್ ಬಾಯಾರ್
💎💎💎💎💎💎💎💎💎

No comments:

Post a Comment