Monday, October 16, 2017

*ವಿದ್ವಾಂಸರ  ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಮೈಮೇಲೆ ಎಳೆದುಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ!*
*--------------------------*

*(ಉಪ್ಪಿನಂಗಡಿ ಉಲಮಾ ಸಂಗಮದ ಸಾರ್ವಜನಿಕ ಸಮಾವೇಶದಲ್ಲಿ ಡಾ. ಫಾರೂಕ್ ನಹೀಮಿ ಕೊಲ್ಲಂ ನಡೆಸಿಕೊಟ್ಟ  ಪ್ರಭಾಷಣವನ್ನು ಅಕ್ಷರಕ್ಕಿಳಿಸಿದ್ದೇನೆ)*

✍ ಅಬೂಶಝ

(ಭಾರತ ಸಹಿತ) ಜಗತ್ತಿನಾದ್ಯಾಂತ ಭೀಕರ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಾಗ ಕೆಲವೊಂದು ಯುವಕರು ಚಿಂತಿಸುತ್ತಿದ್ದಾರೆ,
ರಟ್ಟೆಬಲ,ಪ್ರತಿಭಟನೆ,
ಶಕ್ತಿಪ್ರದರ್ಶನ,
ಸ್ತ್ರೀ ಪುರುಷರೆಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಬೀದಿಗಿಳಿದು ಶಕ್ತಿಪ್ರದರ್ಶನ ನಡೆಸುವ ದಾರಿಯ ಮೂಲಕ ಮಾತ್ರವಾಗಿದೆ, ನಮಗಿಲ್ಲಿ ಬದುಕಲು ಸಾದ್ಯ, ಮತ್ತು ನಮ್ಮ ವಿಜಯ.  ಎಂದು ತಪ್ಪು ಸಂದೇಶ ನೀಡಿ ಯುವಕ/ ಯುವತಿಯರ ಬ್ರೈನ್ ವಾಶ್ ಮಾಡುತ್ತಿರುವ ಸಂಧಿಗ್ದಘಟ್ಟದಲ್ಲಾಗಿದೆ ನಾವು  ಜೀವಿಸುತ್ತಿರುವುದು.

ಈ ಉಮ್ಮತಿಗೆ ಸ್ಪಷ್ಟವಾದ ಸತ್ಯ ಸಂದೇಶ ನೀಡುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಒಮ್ಮೆಯೂ ಈ ಸಮುದಾಯ ಸಂಧಿಗ್ದಘಟ್ಟಗಳನ್ನು ಎದುರಿಸಲಿಕ್ಕಾಗಿ ಶಕ್ತಿ ಪ್ರದರ್ಶನ  ನಡೆಸಲಿಲ್ಲ.
ಇಸ್ಲಾಮಿನ ಚರಿತ್ರೆಯಲ್ಲಿ ಯುದ್ದ ಸಮರಗಳು ಅತ್ಯಂತ ಅನಿವಾರ್ಯ ಘಟ್ಟಗಳಲ್ಲಿ ನಡೆದಿದ್ದರೂ,ಅಲ್ಲಿಯೂ ನಮಗೆ  ವಿಳಾಸ ತಂದುಕೊಟ್ಟದ್ದು ಶಕ್ತಿಪ್ರದರ್ಶನ ಮತ್ತು  ರಟ್ಟೆಬಲವಾಗಿರಲಿಲ್ಲ.
ಬದಲಾಗಿ ಈಮಾನ್ ಮತ್ತು ಇಲ್ಮ್ಎಂಬ ವಜ್ರಾಯುಧಗಳಾಗಿವೆ.

ಆದ್ದರಿಂದಲೇ ಇಸ್ಲಾಮಿನ ಸಂಸ್ಕೃತಿ ಮತ್ತು ಸಮುದಾಯದ ವಿಜಯದ  ಅಡಿಪಾಯ ಈಮಾನ್ ಮತ್ತು  ಇಲ್ಮ್ ನೊಂದಿಗೆ ಬೆಸುದುಕೊಂಡಿದೆಯೆಂದು, ಸಮುದಾಯದ ಯುವಕ/ಯುವತಿಯರಿಗೆ  ನಾವು  ಮನದಟ್ಟು ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.

ಅಂದು ಘೋರಸಮರದ, ಕದನ ಮೈದಾನದಲ್ಲಿ ಸೇರಿದ ಮುಸ್ಲಿಂ ತಂಡಗಳು ತಮ್ಮ ಶಕ್ತಿ ಪ್ರದರ್ಶನ ಮೂಲಕ ಜಯಿಸಿದ್ದಲ್ಲ,ಬದಲಾಗಿ ಧೃಡವಿಶ್ವಾಸ ಹೊಂದಿದ  ಉಲಮಾಗಳ ನೇತೃತ್ವ ಅಂಗೀಕರಿಸಿ,ಅವರ ಸಾರಥ್ಯದಲ್ಲಿ ನಡೆಸಿದ ಕ್ರಾಂತಿಕಾರಿ ಹೆಜ್ಜೆಗಳು ಸರ್ವ ವಿಜಯದ ಪತಾಕೆ ಹಾರಿಸಿತು   ಎಂಬ ಸತ್ಯ ನಾವು  ಮನಗಾಣಲೇ ಬೇಕು.

ಮುಸ್ಲಿಂ ವಿಧ್ವಾಂಸರು ಖಾಝಿಗಳು ನೀಡುವ ವಿದ್ಯೆ  ಮತ್ತು ಧೃಢವಿಶ್ವಾಸದ ಶಕ್ತಿಯೊಂದಿಗೆ ಈ ಉಮ್ಮತ್  ಎಲ್ಲಾ ಕಾಲದಲ್ಲೂ ಸರ್ವವಿಧ ಸಂಧಿಗ್ದ ಘಟ್ಟಗಳನ್ನು ಎದುರಿಸಿದೆ ಎಂಬುದನ್ನು ನಾವು  ಮರೆಯಬಾರದು.

ಅದಲ್ಲದೆ ಸ್ತ್ರೀ ಪುರುಷ ವ್ಯತ್ಯಾಸವಿಲ್ಲದೆ ರಾಜಕೀಯ ಸನ್ನಿವೇಶಗಳನ್ನು ದುರುಪಯೋಗಪಡಿಸಿ,ಬೀದಿ ಬೀದಿಗಳಲ್ಲಿ ನಡೆಸುವ ಬೀದಿ ಪ್ರದರ್ಶನ ಮತ್ತ ನಾಟಕಗಳು ಯಾವತ್ತೂ ಮುಸ್ಲಿಂ ಉಮ್ಮತಿಗೆ  ಶಕ್ತಿ ನೀಡಲೇ ಇಲ್ಲ. ಸುಂದರಿಗಳಾದ ಮುಸ್ಲಿಂ ಯುವತಿಯರು
ಬೀದಿಗಿಳಿಸುವುದನ್ನು ಉತ್ತೇಜಿಸಿ, ಅದುವೇ ವಿಜಯದ ರಹದಾರಿಯೆಂದು ತಪ್ಪು ಸಂದೇಶ ನೀಡಿ ಇಸ್ಲಾಮಿನ ಮುಖವನ್ನು ವಿರೂಪಗೊಳಿಸುವ ಷಡ್ಯಂತರಗಳ ವಿರುದ್ದ ಸೆಟೆದೆದ್ದು ಈ ಉಮ್ಮತ್ತಿಗೆ ಸ್ಪಷ್ಟವಾದ ಗುರಿಗಳ ಕುರಿತು ಹೇಳಿಕೊಡುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲೆ ಸಂಜಾತವಾಗಿದೆ.

ಪ್ರತಿಯೊಂದು ಕಾಲಘಟ್ಟಗಳಲ್ಲೂ ನಮ್ಮ ಉಲಮಾಗಳು ಇಸ್ಲಾಮಿನ ವಿರುದ್ದ ಆಂತರಿಕ ಮತ್ತು ಬಾಹ್ಯವಾಗಿ ಬಂದರೆಗಿದ ಅಪಾಯದ ವಿಧ್ವಂಸಕ ಶಕ್ತಿಗಳನ್ನು ಉಪಾಯಗಳಿಂದ ಮತ್ತು ಪಕ್ವತೆಯಿಂದ ಎದುರಿಸಿದ ಚರಿತ್ರೆ ತೆರೆದ ಪುಸ್ತಕದಂತೆ ಸ್ಪಷ್ಟವಾಗಿದೆ.

ಮಹಾನರಾದ ಲೈಸ್ ಬಿನ್ ಸಅದ್(ರ)ರವರ ಚರಿತ್ರೆ ನಮಗೆ ತಿಳಿದಿದೆ ತಾನೆ?
ಅವರ ಸಾರಥ್ಯ ಅಂದಿನ ದೊರೆ ಹಾರೂನ್ ರಶೀದರನ್ನು ಕೂಡಾ ನಿಯಂತ್ರಿಸುವಷ್ಟು ಶಕ್ತಿಯುತವಾಗಿತ್ತು.
ಮಹಾತ್ಮರೊಂದಿಗೆ ಈಜಿಪ್ಟಿನ ಗವರ್ನರ್ ಪದವಿ ಸ್ವೀಕರಿಸಲು ಕೇಳಿಕೊಂಡಾಗ ಮತ್ತು ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗ ಬೇಕೆಂದು ಕೇಳಿಕೊಂಡಾಗಲೂ ತಿರಸ್ಕರಿಸಿದರು.
ಆದರೆ ಗವರ್ನರ್ ,ಚೀಫ್ ಜಸ್ಟೀಸ್ ಸಹಿತ ಎಲ್ಲರೂ ಒಂದು  ವಿಧಿ ಘೋಷಣೆ ಮಾಡಬೇಕಾದರೆ ಲೈಸ್ ಬಿನ್ ಸಅದ್ (ರ)  ರವರ ಅನುಮತಿ  ಪಡೆಯಬೇಕಾಗಿತ್ತು!
ಅಷ್ಟೊಂದು ಪ್ರಭಾವವಿರುವ ಮಹಾ ವಿದ್ವಾಂಸರಾಗಿದ್ದರು ಲೈಸ್ (ರ).

ಅದೇ ರೀತಿ ಇಮಾಮ್  ಮಾಲಿಕ್ (ರ) ಕೂಡಾ ಆಡಳಿತಧಿಕಾರಿಗಳ ಸಿಂಹಸ್ವಪ್ನವಾಗಿದ್ದರು.

ನಾಲ್ಕು ಮದ್ಸಹಬಿನ ಇಮಾಮರುಗಳು ಉಮ್ಮತಿಗೆ  ಸ್ಪಷ್ಟವಾದ ದಾರಿ ಮತ್ತು ಗುರಿ ತೋರಿಸಿಕೊಟ್ಟಿದ್ದರು.

ಮತ್ತೊರ್ವ ವಿದ್ವಾಂಸ ಸಈದು ಬಿನ್ ಮುಸಯ್ಯಬ್(ರ) 40ವರ್ಷಗಳ ತನಕ  ಮದೀನಾ ಮಸೀದಿಯಲ್ಲಿ  ದರ್ಸ್ ನಡೆಸಿಕೊಟ್ಟ ಮಹಾತ್ಮರಾಗಿದ್ದಾರು.
ಆಡಳಿತಧಿಕಾರಿಗಳ ಅನ್ಯಾಯದ ವಿರುದ್ದ ಸೂಕ್ತಸಮಯಗಳಲ್ಲಿ ಪಕ್ವತೆಯಿಂದ ಪ್ರತಿರೋಧ ಒಡ್ಡುತ್ತಿದ್ದರು.
ಹಲವಾರು ಸಂಧಿಗ್ದ ಘಟ್ಟಗಳನ್ನು ಎದುರಿಸಿದರು.
ಎಷ್ಟೇ ತ್ಯಾಗಗಳನ್ನು ಸಹಿಸಬೇಕಾಗಿ ಬಂದರೂ ಸಮುದಾಯ ಸತ್ಯಪಥದಿಂದ ಒಂದಿಂಚು ಸರಿಯದಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ಮಹಾತ್ಮರ  ಈಮಾನ್ ಮತ್ತು ಇಲ್ಮ್ ನ ಆನೆಬಲದ ಮುಂದೆ ಅಧಿಕಾರಿ ವರ್ಗಕ್ಕೆ  ಮಂಡಿಯೂರಬೇಕಾಗಿ ಬಂತು.

ಮಸ್ಚಿದುನ್ನಬವಿಯ ಮುಸಲ್ಲದಿಂದ ತಾತ್ಕಾಲಿಕವಾದರೂ ಬಿಟ್ಟು ಹೊರನಡಿಯಬೇಕೆಂಬ ಆದೇಶ ಅಧಿಕಾರಿ ವರ್ಗಗಳಿಂದ ಬಂದಾಗ ಇಲ್ಲ, ಮುಸಲ್ಲ ಬಿಟ್ಟು ಕೊಡುವುದಿಲ್ಲ.ನಿಮ್ಮ ರಾಜಕೀಯ ತಾತ್ಪರ್ಯಕ್ಕೆ ತಲೆ ಬಾಗುವವನು ನಾನಲ್ಲ.!
ಎಂಬ  ಧೀರ ಶಬ್ದದೊಂದಿಗೆ ರಾಜಕೀಯ ದುರ್ಗಶಕ್ತಿಗಳ ವಿರುದ್ದ ಸೆಟೆದೆದ್ದು ನಿಂತುಕೊಳ್ಳಲು ಮಹಾತ್ಮ ರ  ಈಮಾನ್ ಮತ್ತು ಇಲ್ಮ್ ನ ಪವರಿನಿಂದ ಸಾದ್ಯವಾಯಿತು.

ಅಂತಹ ಉಲಮಾ ದಿಗ್ಗಜರು ನೇತೃತ್ವ ಕೊಟ್ಟ ಜನತೆ ಎಂದಿಗೂ ಪರಾಜಿತರಾಗಲಿಲ್ಲ.
ಯಾವಗಲೂ ನೇತೃತ್ವ ಉಲಮಾಗಳ ಕೈಯಲ್ಲಾಗಬೇಕು.ಆವಾಗ ಉಮ್ಮತಿನ ವಿಜಯ ಸುದೃಢವಾಗಿರುತ್ತದೆ.

ನಾಲ್ಕು ಮದ್ಹಬಿನ ಉಲಮಾಗಳಲ್ಲೊಬ್ಬರಾದ ಇಮಾಂ ಅಹ್ಮ ದ್ ಬಿನ್ ಹಂಬಲ್ (ರ)  ರವರನ್ನು *ಕುರಾನ್ ಸೃಷ್ಟಿ*  ಎಂಬ ವಿಚಾರ ವಿವಾದದಲ್ಲಿ ಮಹಾನರು *ಕುರ್ಆನ್  ಸೃಷ್ಟಿ ಅಲ್ಲ* ಎಂಬ ಸತ್ಯದ ಮಾರ್ಗದಲ್ಲಿ ಧೃಢವಾಗಿ ನೆಲೆಯೂರಿ ನಿಂತಾಗ ಆಡಳಿತ ವರ್ಗ ಇಮಾಮ್ ರವರಿಗೆ ದೈಹಿಕವಾಗಿ ಹಲ್ಲೆ ನಡೆಸಿತು!

ಪರಿಣಾಮ ಇಮಾಂ ರವರ ಎರಡು ಕೈಗಳ ಎಲುಬುಗಳು ತುಂಡಾಯತು!

ಅವರನ್ನು ಜೈಲಿಗೆ ತಳ್ಳಲಾಯಿತು.ಆದರೂ ಅವರು ಸತ್ಯಪಥದಿಂದ ಕಿಂಚತ್ ಹಿಂದೆ ಸರಿಯಲಿಲ್ಲ!!

ಇಮಾಮರ ಬೆಂಬಲಕ್ಕೆ ನಿಂತಿದ್ದ  ಹಲವಾರು ಉಲಮಾಗಳು ಇದೀಗ ಹಿಂದೆ ಸರಿದು ಆಡಳಿತ ವರ್ಗದ ಜತೆ ಸೇರಿದ್ದರು!
ಕಾರಣ ಅವರ ಮೇಲೆ ಅಷ್ಟೊಂದು ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು.
ಅದನ್ನು ಸಹಿಸಲಾಗದೆ  ಅವರು ಸತ್ಯಪಥದಿಂದ ಹಿಂದೆ ಸರಿದು ಇಮಾಮ್ ಅಹ್ಮ ದ್ ಬಿನ್ ಹಂಬಲ್ (ರ)ರವರ ವಿರುದ್ದ ಪಕ್ಷದಲ್ಲಿ  ಸಕ್ರಿಯರಾಗಿದ್ದರು.

ಕೆಲವರಿಗೆ ಮನಮೋಹಕ ವಾಗ್ದಾನಗಳನ್ನು ನೀಡಲಾಗಿತ್ತು.

ಇಮಾಮ್ ರವರಲ್ಲಿ ಕೇಳಲಾಯಿತು,ನಿಮ್ಮ ಜೊತೆಗಿದ್ದ ಅನೇಕಾರು ಉಲಮಾಗಳು ಇದೀಗ ನಿಮ್ಮನ್ನು  ಕೈ ಬಿಟ್ಟು ಸರಕಾರದೊಂದಿಗೆ ಕೈ ಜೋಡಿಸಿದ್ದಾರೆ.ನಿಮಗೆ ತಾತ್ಕಾಲಿಕವಾಗಿಯೂ ಅದೇ ದಾರಿ ಸ್ವೀಕರಿಸಬಹುದಲ್ಲವೇ?

ತಟ್ಟನೆ ಇಮಾಮ್ ರವರು ಉತ್ತರಿಸಿದರು.

"ನೀವು ಹೊರಗೆ ಒಮ್ಮೆ ನೊಡಿ ಲಕ್ಷಾಂತರ ಸಾಮಾನ್ಯ ಜನರು ಈ ವಿಷಯದಲ್ಲಿ ಇಮಾಮ್ ಅಹ್ಮದ್ ಹಂಬಲ್ ಏನು ಹೇಳುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.
ಅಥವಾ ಈ ವಿಷಯದಲ್ಲಿ ಅಧೀಕೃತವಾದ ಧರ್ಮ ವಿಧಿ ಏನೆಂಬುದರ ಕುರಿತು ತಿಳಿಯಲು ಅವರು ಕಾತರದಿಂದ ಕಾಯುತ್ತಾ  ಇದ್ದಾರೆ.
ಅವರ ಈಮಾನ್ ನನ್ನ ಅಭಿಪ್ರಾಯದೊಂದಿಗೆ ಬೆಸೆದು  ನಿಂತಿದೆ.
ಅಲ್ಲಿ ನಿಂತಿರುವ ಲಕ್ಷಾಂತರ ಜನರ ಈಮಾನನ್ನು ಅಪಾಯಕ್ಕೆ ಸಿಲುಕಿಸಿ ನಗೆ ಸುಖಕರವಾಗಿ ಬದುಕು ಸಾಗಿಸುವ ಅಗತ್ಯ ಇಲ್ಲ ."
ಎಂದು ಧೀರತೆಯ ಶಬ್ದದೊಂದಿಗೆ ಘೋಷಿಸಿದಾಗ ಗತ್ಯಂತರವಿಲ್ಲದೆ ಆಡಳಿತಧಿಕಾರಿಗಳು ವಯೋವೃದ್ದ ಪ್ರಾಯದ ಇಮಾಂ ರವರನ್ನು  ಜೈಲಿನಿಂದ ಬಿಡುಗಡೆಗೊಳಿಸಿದರು.

ಮಹಾತ್ಮರು  ವಫಾತಾದಾಗ ಜನಾಝ ನಮಾಜು ಮಾಡಲು ಸೇರಿದ ಲಕ್ಷಾಂತರ ಜನರು ಸಮೀಪಕಾಲದಲ್ಲಿ ಎಲ್ಲಿಯೂ ಸೇರಿರಲಿಲ್ಲ.
ಅಂದು ಒಂದು ಚರ್ಚೆ ಬಂತು. *ಯದುಲ್ಲಾಹಿ ಅಲಲ್  ಜಮಾಅತಿ*  ಎಂಬ ಹದೀಸ್ ಪ್ರಕಾರ  ಇಮಾಂ ಅಹ್ಮದ್ ಬಿನ್ ಹಂಬಲ್(ರ) ಒಂಟಿ ಹೋರಾಟಗಾರರಾಗಿದ್ದು ಉಲಮಾಗಳ ದೊಡ್ಡ ಸಮೂಹ  ವಿರುದ್ದ ಪಕ್ಷದಲ್ಲಿ ಇದ್ದುದರಿಂದ ಅಲ್ಲಾಹನ ಸಹಾಯ ಒಂಟಿಯಾದ ಇಮಾಂ ರವರಿಗೆ ಹೇಗೆ ಸಲ್ಲುತ್ತದೆ  ಎಂಬ ಪ್ರಶ್ನೆಗೆ ಸತ್ಯ ಪಥದಲ್ಲಿರುವ ಉಲಮಾಗಳು ಹೇಳಿದರು,

ಅಹ್ಮದ್ ಬಿನ್ ಹಂಬಲ್ (ರ)  ಸತ್ಯ ಪಥದಲ್ಲಿ ಇರುವ ನಿಮಿತ್ತ ಅವರೇ *ಜಮಾಅತ್*  ಆಗಿದ್ದಾರೆ.
ಅದಕ್ಕೆ ಸಾಕ್ಷಿಯಾಗಿ ಅವರ ಜನಾಝ ನಮಾಝ್ ನಿರ್ವಹಿಸಲು ಲಕ್ಷಾಂತರ ಜನ ಸೇರಿದ್ದಾರೆ.
ಆದ್ದರಿಂದಲೇ ನಾವು ಗಮನಿಸಬೇಕಾದ ವಿಷಯವೊಂದಿದೆ,ಎಲ್ಲಾ ಕಾಲದಲ್ಲೂ ಮುಸ್ಲಿಂ ಉಮ್ಮತಿಗೆ  ನೇತೃತ್ವ ಕೊಟ್ಟು ಅವರನ್ನು ಸರಿಯಾದ ದಾರಿಗೆ  ಕೊಂಡೊಯ್ಯುವ ಕೆಲಸ ಉಲಮಾಗಳಿಂದಲೇ ನಡೆದಿದೆ.
ಅದರಲ್ಲಿ ಅವರು ಪೂರ್ಣ ವಿಜಯ ಸಾಧಿಸಿದ್ದಾರೆ.

ಆದರಿಂದಲೇ ಇಲ್ಲಿ ನೆರೆದಿರುವಂತಹ ಸಾಮಾನ್ಯ ಜನರಲ್ಲಿ  ನಾನು ಹೇಳುತ್ತಿದ್ದೇನೆ.

ಗಮನಿಸಿ.....

ಇತ್ತ ಗಮನಿಸಿರಿ....

ಪ್ರತಿಯೊಂದು ಕಾಲದಲ್ಲೂ ಈ ಉಮ್ಮತನ್ನು ಸರಿಯಾದ ಸ್ಪಷ್ಟವಾದ ಗುರಿಗೆ  ತಲುಪಿಸಲು   ಉಲಮಾಗಳಿಂದ ಮಾತ್ರ ಸಾದ್ಯ ಎಂಬುದನ್ನು ನೀವು ಮನಗಾಣಬೇಕು.
ಕಾರಣ ಅವರು ಈಮಾನ್ ಮತ್ತು ಇಲ್ಮ್  ಎಂಬ ವಜ್ರಾಯುಧದ ಮೂಲಕ ನಿಮ್ಮನ್ನು ಮುನ್ನೆಡೆಸುತ್ತಿದ್ದಾರೆ.
ಆವಾಗಲೇ ಈ ಉಮ್ಮತ್ ಗೆ ಸ್ಪಷ್ಟವಾದ ಗುರಿಗೆ ತಲುಪಲು ಸಾದ್ಯ.

ಉಲಮಾಗಳನ್ನು ತಿರಸ್ಕರಿಸುತ್ತಾ, ಅವರೊಂದಿಗೆ ಸಮಾಲೋಚನೆ ಇಲ್ಲದೆ ಕೇವಲ ಆವೇಶ,ಅರ್ಭಟ,ಅಪಕ್ವತೆಯ ನಡೆಯನ್ನು  ಆಯುಧವಾಗಿಸಿ ಬೀದಿ ಬೀದಿಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಾ ಅದನ್ನು ಮುಸ್ಲಿಂ ಸಮುದಾಯದ ಧ್ವನಿಯಾಗಿ ಚಿತ್ರೀಕರಿಸಿ ಮುನ್ನಡೆಯುವ  ಕೆಲವೊಂದು ಅಟ್ಟಹಾಸ ಕೂಟ ಸಮುದಾಯವನ್ನು ತನ್ನ ಹಿಡಿತದಲ್ಲಿ  ಕೊಂಡುಬರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಖಂಡಿತವಾಗಿಯೂ ನಾನು ಹೇಳಬಯಸುತ್ತೇನೆ ಅದು ಅತೀ ದೊಡ್ಡ  ಅಪಾಯವನ್ನು ಈ ಸಮುದಾಯಕ್ಕೆ ತಂದೊಡ್ಡುತ್ತದೆ  ಎಂಬುದರಲ್ಲಿ ಸಂಶಯವಿಲ್ಲ.

ಬೆಳೆಯುತ್ತಿರುವ ಹೊಸತಲೆಮಾರು ಆವೇಶದ ಹೆಸರಿನಲ್ಲಿ,ಕುದಿಯುವ ರಕ್ತದ ಅಮಲಿನಲ್ಲಿ,ಪ್ರತಿಭಟನೆ,
ರಟ್ಟೆಬಲ ಪ್ರದರ್ಶನ ಮುಂತಾದ ಅಪಕ್ವ ಭೀಕರ ಮಾರ್ಗಗಳನ್ನು ದಅವತ್ತಾಗಿ  ಸ್ವೀಕರಿಸಿದ ಪ್ರಸ್ತುತ ಸಂಧಿಗ್ದ ಘಟ್ಟದಲ್ಲಿ ಅವರ ಅಪಾಯದ  ನಡೆಯನ್ನು   ತಿದ್ದುವ  ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.

ಢಮಾಸ್ಕಸ್ ನ ಇಂದಿನ ದಯನೀಯ ಸ್ಥಿತಿ ನಿಮಗೆ ಗೊತ್ತಿದೆ  ತಾನೆ?
ಯಾಕಾಗಿ ವಿಜ್ಞಾನ ನಗರ ಇಷ್ಟೊಂದು ಶೋಚನೀಯ ಅವಸ್ಥೆ ತಲುಪಿತು?
ರೋಹಾಂಗ್ಯ ಯಾಕೆ ಕಣ್ಣೀರು ಸುರಿಸುತ್ತಿದೆ?
ಹೇಳುತ್ತೆನೆ.....ಕೇಳಿ....

(ಮುಂದುವರಿಯುವುದು)

*ಸುನ್ನೀ ಸಾಹಿತ್ಯ ಮಂಡಳಿ*
                 *ಸುಸಾಮ*

No comments:

Post a Comment