Wednesday, October 18, 2017

*ಮಹಿಳೆಯರ ಬೀದಿ ಪ್ರದರ್ಶನಕ್ಕೆ ಹದೀಸ್ ಉಂಟಂತೆ!!*

*ಮಹಿಳೆಯರ ಬೀದಿ ಪ್ರದರ್ಶನಕ್ಕೂ ಹದೀಸ್ ಉಂಟಂತೆ!!*
*--------------------------*

✍ ಅಬೂಶಝ

ಮಿತ್ರನೊಬ್ಬ, ಎಪಿ ಉಸ್ತಾದ್  ಆಸೀನರಾಗಿದ್ದ ವೇದಿಕೆಯೊಂದರಲ್ಲಿ ಒಬ್ಬಳು ಸ್ತ್ರೀ ಕುಳಿತಿದ್ದ ಫೋಟೊಗಳನ್ನು ಶೇರ್ ಮಾಡಿ ತಾನು ಹಿಮಾಲಯ ಪರ್ವತ ಹತ್ತಿ ಸಕ್ಸಸ್ ಆದವನಂತೆ ವಿಜಯ ನಗೆ  ಬೀರುತ್ತಿದ್ದ.
ಫಿತ್ನ ಮಾಡುವವರು ತಿಳಿಯಲಿಕ್ಕಾಗಿಯೆಂದು ಟೈಟಲ್ ಕೂಡಾ ಹಾಕಿದ್ದ!

ಅವನು ದೂರದ ಸೌದಿಯಲ್ಲಿರುವುದರಿಂದಲೇ ಕಾಲ್ ಮಾಡಿ ಮನದಟ್ಟು ಮಾಡಲು ದುಪ್ಪಟ್ಟು ಹಣ ಬೇಕು.ಮಾತ್ರವಲ್ಲ ಇದು ಅವನು ಮಾತ್ರ ಶೇರ್ ಮಾಡಿದ್ದಲ್ಲ, ಹಲವಾರು ಯುವಕರು ಅನೇಕ ಗ್ರೂಪುಗಳಲ್ಲಿ ಹಾಕಿ ಆತ್ಮ ಸಂತೃಪ್ತಿಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂತು.
ಹಾಗಾಗಿ ಎಲ್ಲರೂ ತಿಳಿಯಲಿ ಅಂತ ಬರೆಯುತ್ತಿದ್ದೇನೆ.

ಒಂದನೆಯದಾಗಿ,
ಎಪಿ ಉಸ್ತಾದರ ಖುದ್ದು ನೇತೃತ್ವದಲ್ಲಿ ಅದೆಷ್ಟು ಲೆಕ್ಕವಿಲ್ಲದಷ್ಟು ಸಭೆ ಸಮಾರಂಭ, ಸಮ್ಮೇಳನಗಳು ನಡೆದಿದೆ.
ಅದರಲ್ಲಿ ಯಾವುದಾದರೊಂದು  ಸಭೆಯಲ್ಲಾದರೂ ಒಬ್ಬ ಮಹಿಳೆಯನ್ನು ಆಹ್ವಾನಿಸಿ ವೇದಿಕೆ ಮೇಲೆ ಕುಳ್ಳಿರಿಸಿದ ಚರಿತ್ರೆ ಉಂಟಾ ಎಂದು ಅವನಲ್ಲಿ ಕೇಳಿದರೆ ಇಲ್ಲ ಎಂದು ಹೇಳಿ ಮಕಾಟೆ ಮಲಗುತ್ತಾನೆ.

ಕಾರಣ ಇಸ್ಲಾಂ ಅನುಮತಿಸುವುದಿಲ್ಲ.
ಅದೇ ಸಮಯ ಸರಕಾರವೊಂದು  ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಎಪಿ ಉಸ್ತಾದರು ಅಸೀನರಾಗಿದ್ದ ಸಭೆಯಲ್ಲಿ ಅಕಸ್ಮಿಕವಾಗಿ ಒಬ್ಬಳು ಸರಕಾರಿ ಹುದ್ದೆಯ ಮಹಿಳೆ ಬಂದು ಕುಳಿತುಕೊಂಡರೆ ಅದು  ಉಸ್ತಾದರ ತಪ್ಪಾ?

ನಾನು ನನ್ನ ಸ್ವಂತ ಕಾರಲ್ಲಿ ಅನ್ಯ ಯುವತಿಯನ್ನು ಕೊಂಡೊಯ್ಯುವುದು ಹರಾಂ.
ಅದೇ ಸಮಯ ನಾನು ಬಸ್ಸೊಂದರಲ್ಲಿ ಸಂಚರಿಸುತ್ತಿರುವಾಗ ಅದೇ ಬಸ್ಸಲ್ಲಿ ಕೆಲವೊಂದು ಯುವತಿಯರು ಕುಳಿತು ನನ್ನೊಂದಿಗೆ ಸಂಚರಿಸಿದರೆ  ಅದು ನನ್ನ ತಪ್ಪಾ?

ಅದರ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಹಾಕಿ ಸಂಭ್ರಮಿಸುವವನಿಗೆ ಎಷ್ಟು ವಿವೇಕವಿದೆ ಎಂದು ನೀವೇ ಆಲೋಚಿಸಿ.
ದೀನಿಯಾದ ನೋಲೇಜ್ ಹೋಗಲಿ, ಕನಿಷ್ಠ ಚಿಂತಿಸುವ ಬುದ್ದಿಯೂ ಇಲ್ಲವೆಂದೇ ಅರ್ಥ.

ಈ ರೀತಿ ಯುವಕರು ಸಂಘಟನೆ  ದಾಸರಾಗಿ ಮತಿಭಮಣೆ ಹೊಂದಿದರೆ ಯಾರಿಗೂ ರೈಲು, ವಿಮಾನ ಯಾತ್ರೆಗೆಯ್ಯುವಂತಿಲ್ಲ.
ಹೋಗಲಿ ಕನಿಷ್ಠ ಪಕ್ಷ ಬಸ್ಸಿಗಾಗಿ ಬಸ್ಸ್ ನಿಲ್ದಾಣದಲ್ಲಿ ಕಾಯುವಂತಿಲ್ಲ. ಕಾರಣ ಅಲ್ಲೆಲ್ಲಾ ಅನ್ಯಸ್ತ್ರೀಯರು ಇರುವುದರಿಂದ ಫೊಟೋ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಹರಿಯಬಿಡುವನು.

ಒಟ್ಟಿನಲ್ಲಿ ತಮ್ಮ ಸಭೆ  ಸಮಾರಂಭ, ಸಮ್ಮೇಳನದ ವಿಜಯಕ್ಕಾಗಿ ಮಹಿಳೆಯರನ್ನು ಹೊತ್ತೊಯ್ದು ಬೀದಿಗಿಳಿಸುವುದನ್ನು ಇಸ್ಲಾಂ ಸುತರಾಂ ಒಪ್ಪುವುದೇ ಇಲ್ಲ.
ಅದನ್ನು ಸಮರ್ಥಿಸಲಿಕ್ಕಾಗಿ  ಮುಸ್ಲಿಮೇತರರ ವೇದಿಕೆಯಲ್ಲಿ ಮುಸ್ಲಿಯಾರರೊಂದಿಗೆ ವೇದಿಕೆ ಹಂಚಿದ ಮಹಿಳೆಯ ಫೋಟೋ ಅಂಟಿಸಿ ಶೇರ್ ಮಾಡುವುದು ಪೆದ್ದುತನ.
ಅಥವಾ ವಿವೇಕದ ಕೊರತೆ.

ನಮ್ಮ ಉಲಮಾಗಳು ಅಂದೇ ಎಚ್ಚರಿಕೆ ನೀಡಿದ್ದರು. ಬಾಹ್ಯವಾಗಿ ಸಮುದಾಯಪರ ಬ್ಯಾಟಿಂಗ್ ಬೀಸುತ್ತಿದ್ದರೂ ಮುಖ್ಯ ಗುರಿ, ಸುನ್ನೀ ಯುವಕರಿಗೆ ನೂತನವಾದದ ಅಮಲೇರಿಸುವ ಕಾರ್ಯತಂತ್ರವಾಗಿದೆ.

ಅವರಿಗೊಂದು ಗುರಿಯಿತ್ತು ಸುನ್ನೀ ಯುವಕರ ಬಾಯಿಯಿಂದಲೇ ಸಲಫಿಸಂ ನ್ನು ಬಡಿಸುವುದು. ಅದರಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಇದೀಗ ಮಹಿಳೆಯರು ಬೀದಿಗಿಳಿದು ವೇದಿಕೆ ಹತ್ತಿ ಬಾಷಣ ಬಿಗಿಯಬಹುದೆಂಬುದಕ್ಕೆ ಪುರಾವೆಯಾಗಿ ಆಯಿಶಾ(ರ)ರವರ ಹದೀಸನ್ನು ಹಿಡಿದು ಓಡುತ್ತಿರುವುದು ಸುನ್ನೀ ಯುವಕರು!
ಇಬ್ಲೀಸ್ ದೂರ ನಿಂತು ತನ್ನ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವ ಯುವಕರನ್ನು ನೋಡಿ ಮುಸಿಮುಸಿ ನಗುತ್ತಿದ್ದಾನೆ!
ಅವನ ಪ್ಲಾನ್ ಸಕ್ಸಸ್ ಆದ ಆತ್ಮ ಸಂತೃಪ್ತಿಯ ನಗೆ!!
ಪಾಪ ಸುನ್ನೀ ಯುವಕ ಮಾತ್ರ ಎದೆಯುಸಿರು ಬಿಡುತ್ತಾ ಎಲ್ಲರಿಗೂ ತಲುಪಿಸಲಿಕ್ಕಾಗಿ ಓಡುತ್ತಲೇ ಇದ್ದಾನೆ.
ಕಡಲತೀರಕ್ಕೆ ಹೊಯ್ಗೆ ಹೊತ್ತೊಯ್ದು ರಾಶಿ ಹಾಕುವವನಂತೆ!

ತಮ್ಮ ವಾದ ಸಮರ್ಥಿಸಲಿಕ್ಕಾಗಿ ಇಸ್ಲಾಮಿನ ಚರಿತ್ರೆಗಳನ್ನು ನಿಷ್ಠೂರವಾಗಿ ವ್ಯಭಿಚರಿಸುತ್ತಿದ್ದಾರೆ.

ಸ್ಯಾಂಪಲ್ ಗೆ ಒಂದು ಹೇಳುತ್ತೇನೆ.
ಅವರ ವಾದ ಪ್ರಕಾರ ಆಯಿಶಾ(ರ) ಜಮಲ್ ಯುದ್ದ ನಡೆಯುವಲ್ಲಿಗೆ ಮಾತುಕತೆ ನಡೆಸಲು ಹೋಗಿದ್ದಾರಂತೆ.

ಹಾಗಾಗಿ ಮುಸ್ಲಿಂ ಮಹಿಳೆಯರು ವೇದಿಕೆ ಹತ್ತಿ ಭಾಷಣ ಬಿಗಿಯಬಹುದೆಂಬ ಮೊಂಡುವಾದ ಮಂಡಿಸಿ ಅಂಡಲೆಯುತ್ತಿದ್ದಾರೆ!

ಆದರೆ ಈ ವಿಷಯದ ಕುರಿತು ಇಮಾಮ್ ಕುರ್ತುಬಿ(ರ) ಹೇಳುತ್ತಾರೆ.
ಬಹು ಸಅ್ಲಬ್(ರ) ಹಾಗೂ ಇತರರು ವರದಿ ಮಾಡುತ್ತಾರೆ.

ಸೂರಾ ಅಹ್ಝಾಬ್ ನ 33ನೇ ಆಯತ್ 👇🏻

*ನಿಮ್ಮ ಮನೆಗಳಲ್ಲೇ ಅಡಗಿದ್ದು ಕೊಳ್ಳಿರಿ ಗತಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತೆ ನೀವು ಮೈಮಾಟವನ್ನು ಪ್ರದರ್ಶಿಸಬೇಡಿ*
(ಅಧ್ಯಾಯ ಅಹ್ಝಾಬ್ 33)

ಅರ್ಥಾತ್ ಸ್ತ್ರೀಯರು ಕಡ್ಡಾಯ ಕಾರ್ಯಗಳ ಹೊರತು ಎಲ್ಲ  ಸಂದರ್ಭಗಳಲ್ಲೂ ಹೊರಗಿಳಿಯದೆ ಮನೆಯೊಳಗೆ ಇರಬೇಕೆಂಬ ಪ್ರಸ್ತುತ ಆಯತ್ ಓದುತ್ತಿರುವಾಗ ಆಯಿಶಾ ಬೀವಿ ತನ್ನ ಮುಖ ಪರದೆ (ಮಕ್ಕನೆ) ಒದ್ದೆಯಾಗುವಷ್ಟು ಅಳುತ್ತಿದ್ದರು!

ಯಾಕೆ? ಅಳುತ್ತಿದ್ದರು?👇🏻

*ಜಮಲ್ ಯುದ್ದದ ಸಂದರ್ಭದಲ್ಲಿ ಮುಸ್ಲಿಮರೊಳಗಿನ ಸಂಧಾನ ಮಾತುಕ ತೆಗಾಗಿ ತಾನು ಹೊರಗಿಳಿದುದು ತಪ್ಪಾಯಿತೇ ಎಂಬ ಭಯವಾಗಿತ್ತು ಅವರ ಅಳುವಿಗೆ ಕಾರಣ.*

*"ನೀವು ಮನೆಯೊಳಗೇ ಇರಬೇಕು ಎಂದಾಗಿತ್ತಲ್ಲವೇ ಅಲ್ಲಾಹನ ಆದೇಶ?"  ಎಂದು ಆಯಿಶಾ(ರ) ರವರಲ್ಲಿ ಅಮ್ಮಾರ್(ರ) ಕೇಳಿದರು ಎಂದು ಕೂಡಾ ವರದಿಯಾಗಿದೆ.*

(ತಫ್ಸೀರ್ ಖುರ್ತುಬಿ, 4/180)

ಇಷ್ಟೊಂದು ಸ್ಪಷ್ಟವಾಗಿ ಮುಫಸ್ಸಿರ್ ಗಳು ಆಯಿಶಾ ಬೀವಿ (ರ)ರವರು ಹೊರ ಹೋಗಿದ್ದಕ್ಕೆ ಖೇದವನ್ನು ಪ್ರಕಟಿಸಿ ತನ್ನ ವಸ್ತ್ರ ಒದ್ದೆಯಾಗುಷ್ಟು ಬಿಕ್ಕಿಬಿಕ್ಕಿ ಅಳುತ್ತಾ ಇದ್ದರು ಎಂದು ಹೇಳಿಯೂ ಕೂಡಾ ಅದೇ ಚರಿತ್ರೆಯನ್ನು ವ್ಯಭಿಚರಿಸುತ್ತಾ ಮಹಿಳೆಯರನ್ನು ಬೀದಿಗೆ ತಳ್ಳಿ ಪರಪುರುಷರೊಂದಿಗೆ ವೇದಿಕೆ ಹತ್ತಿಸಲು ಪುರಾವೆಯಾಗಿ ಹೇಳಿ ಕೊಡುತ್ತಾರೆಂದರೆ ಅದು ಸಮುದಾಯದ ಅತೀ ದೊಡ್ಡ ದುರಂತವೆಂದೇ ಹೇಳಬೇಕು.

*"ನೀವು ಮನೆಯೊಳಗೆ ಅವಿತುಕೊಂಡಿರಬೇಕು"*
👆
ಎಂಬ ಕುರಾನಿನ ಆದೇಶದ ಉದ್ದೇಶ, ಹೊರ ಸುತ್ತಾಟವು ನಾಶಕ್ಕೆ ಹೇತುವೆಂಬುದರಲ್ಲಿ ಸಂದೇಹವಿಲ್ಲ. ನಾಶವುಂಟು ಮಾಡುವುದು ನಿಷಿದ್ದ. ಆದ್ದರಿಂದ ನಿಷಿಧ್ಧಕ್ಕೆ ಕಾರಣವಾಗುವ ಕಾರ್ಯವೂ ನಿಷಿಧ್ಧ.
(ಬದಾ ಈಉಸ್ಸನಾಈ. 1/275)

ಪವಿತ್ರ ಇಸ್ಲಾಮಿನಲ್ಲಿ ಇಷ್ಟೊಂದು ಕಟ್ಟುನಿಟ್ಟಿನ ತ್ರೀವ್ರ ಸುರಕ್ಷೆತೆಯ ಆದೇಶ ಇರುವಾಗ ಅದೇಗೆ ಮುಸ್ಲಿಂ ಯುವತಿಯರನ್ನು ಬೀದಿಗೆ ತಳ್ಳಲು ಮನಸ್ಸು ಬರುತ್ತದೆ!?

ಉಮ್ಮು ಖಲ್ಲಾದ್ (ರ) ಎಂಬ ಸಹಾಬಿ ವನಿತೆಯ ಪುತ್ರ ಒಂದು  ಯುದ್ದದಲ್ಲಿ ಶಹೀದ್  ಆದಾಗ, ಅವರು ಅತೀವ ದುಖತಪ್ತರಾಗಿ ತನ್ನ ಪುತ್ರನ ಮರಣ ವಾರ್ತೆಯನ್ನು ಧೃಢೀಕರಿಸಲು ಮೈ ಪೂರ್ತಿ ಮುಚ್ಚಿ ಪುಣ್ಯ ರಸೂಲರ ಬಳಿ ಬಂದಾಗ, ಸ್ವಂತ ಪುತ್ರನ ಮರಣ ವಾರ್ತೆ ತಿಳಿಯಲು ಬರುವ ಮಹಿಳೆಗೆ ತನ್ನ ವಸ್ತ್ರಧಾರಣೆ ಪೂರ್ಣವಾಗಿ ಮುಚ್ಚಲು ಅದೇಗೆ ಸಾದ್ಯವೆಂಬ ಕೆಲವರ ಸಂದೇಹಕ್ಕೆ ಸಹಾಬಿ ವನಿತೆ ಹೀಗೆ ಉತ್ತರಿಸಿದರು.
👇🏻
"ನನಗೆ ಪುತ್ರ ನಷ್ಟವಾಗಿದ್ದಾನೆಯೇ ಹೊರತು ಮಾನ ನಷ್ಟವಾಗಲಿಲ್ಲ"

ಅಂದರೆ ಸ್ವಂತ ಪುತ್ರನ ಮರಣದ ದುಖಕರದ ಸನ್ನಿವೇಶದಲ್ಲೂ ಅವರು ಪರಪುರುಷರ ಮುಂದೆ ಮುಖ ಸಹಿತ ದೇಹ ಪೂರ್ತಿ
ಮುಚ್ಚುತ್ತಿದ್ದರು!

ಇಂತಹ ಸಹಾಬಿ ವನಿತೆಯರು ಬೀದಿಗಿಳಿದಿದ್ದರು,
ಅನ್ಯಪುರುಷರ ಮುಂದೆ ಪ್ರದರ್ಶನ ವಸ್ತುವಿನಂತೆ ವೇದಿಕೆ ಹತ್ತಿ ಭಾಷಣ ಬಿಗಿಯುತ್ತಿದ್ದರು,
ಯುದ್ದದ ಕಮಾಂಡರ್ ಆಗಿದ್ದರು!
ಎಂದು ತರಗತಿ ಕೊಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಲು ಸುನ್ನೀ ಯುವಕ/ಯುವತಿಯರ ಬ್ರೈನ್ ವಾಶ್ ಮಾಡಿ ಅವರನ್ನು ಬೀದಿಗೆ ಬರುವಂತೆ ಮಾಡಲು  ಉಪಯೋಗಿಸುವುದು ತುಂಬಾ ಖೇದಕರ!

ಅದೇ ರೀತಿ ಮತ್ತೊಂದು ಸ್ವಾರಸ್ಯಕರ ಫೋಟೋ ಹರಿಯ ಬಿಟ್ಟಿದ್ದಾರೆ.
ಎ.ಪಿ. ಉಸ್ತಾದರು ಮಲೇಷಿಯಾದ ಯುನಿವರ್ಸಿಟಿಯ ಮಹಿಳಾ ಚಾನ್ಸಲರೊಬ್ಬರು ಅವರ  ಯುನಿವರ್ಸಿಟಿಯೊಂದಿಗಿನ ಕರಾರು ಪತ್ರವನ್ನು ಹಸ್ತಾಂತರ ಮಾಡುವ ಫೋಟೊ ಹಿಡಿದು, ಇದು ಹಲಾಲ?
ಎಂದು ಕಮಂಟಿಸುವವನು ಜೆಸ್ಟ್ ನ್ಯಾಯಲಯ, ತಾಲೂಕು ಕಛೇರಿಗಳಲ್ಲಿರುವ ಮಹಿಳೆಯರಲ್ಲಿ  ನಮ್ಮ ಕೇಸ್, ಅಥವಾ ಜಾಗದ RTC ಕಡತವಿದ್ದರೆ ಅದನ್ನು ಅವರಿಂದ ಪಡೆಯುವುದು  ಹಲಾಲಾ ಎಂದು ಕೇಳಿ ನೊಡಿ.

ಅದು ಹಲಾಲ್ ಎಂದು ಹೇಳುವವನು ಯಾಕೆ ಒಂದು ಯುನಿವರ್ಸಿಟಿಯ ಕಡತ ಮಹಿಳೆಯಿಂದ ಹಸ್ತಾಂತಗೊಳ್ಳುವುದರ ಫೋಟೋ ಹಾಕಿ ರಂಪಾಟ ಮಾಡುವುದು?

ಫತುಹುಲ್ ಮುಈನ್ ಸಹಿತ ಎಲ್ಲ ಕರ್ಮಶಾಸ್ತ್ರ ಗ್ರಂಥಗಳಲ್ಲಿ ಇದು ಅನುವದನೀಯವೆಂದು ಇದೆ. (ಅದರ  ಉದ್ದರಣಿ ಕೊನೆಯಲ್ಲಿ  ಕೊಟ್ಟಿದ್ದೇನೆ. ಯಾವುದಾದರೂ ಅರಬಿಗೊತ್ತಿರುವ  ಕೌನ್ಸಿಲರಲ್ಲಿ ಅರ್ಥ ಕೇಳಿ ತಿಳಿದುಕೊಳ್ಳಿ)

ದೀನಿನ ಕರ್ಮ ಸರಣಿ ಯಾವುದು ಗೊತ್ತಿಲ್ಲದೆ ಕಲಿಯದೆ ತನ್ನ ಸಂಘಟನೆ ಮಾಡುತ್ತಿರುವ ಮಹಾ ತಪ್ಪನ್ನು ಮರೆಮಚಲು/ಸಮರ್ಥಿಸಲು ಇಂತಹ ಉಲಮಾಗಳನ್ನು ನಿಂದಿಸುವ ಫೋಟೊ ಹಾಕಿ ಈಮಾನ್ ನಷ್ಟಹೊಂದಿಸಬೇಡಿ .

ಜಸ್ಟ್ ನೀವು ದೀನಿನ  ಬಗ್ಗೆ ಕಲಿಯಿರಿ ಮತ್ತೆ ವಿಮರ್ಶಿಸಿ...

ಸುನ್ನಿಗಳು ಸಂಘಟಿಸುವ ಯಾವುದೇ ಸಭೆ ಸಮಾರಂಭದ ವೇದಿಕೆಗಳಲ್ಲಿ  ಮಹಿಳೆಯರ ಸಾನಿದ್ಯ ಇದೆಯಾ?

ನೀವು ಚಿಂತಿಸಿ ....

ಆದರೆ ಇದೀಗ ಏನಾಗಿದೆ ಸುನ್ನೀ ಆಶಯದ ಯುವತಿಯರನ್ನು ಬಸ್ಸಿನಲ್ಲಿ ತುರ್ಕಿಸಿ  ಸಮ್ಮೇಳನಕ್ಕೆ ಕೊಂಡೊಯ್ಯುವ ದಯನೀಯ ಸ್ಥಿತಿ!

ಅದನ್ನು ಸಮರ್ಥಿಸಲು ಸುನ್ನೀ ಯುವಕರೇ ಮುಂದೆ ಬಂದಿರುವುದು.....!!
ಸಲಫಿಯ ಸಾಥ್ ಬೇರೆ....
ಎಲ್ಲವೂ ಒಂದೇ ಮನೆಯ ವಿವಿಧ ಕೋಣೆಗಳು ತಾನೆ?
ಬೇಸರವೇನೆಂದರೆ ಸುನ್ನೀ ಯುವಕರು ಆ ಕೋಣೆಗಳನ್ನು ತಮ್ಮ ಸ್ವಂತ ಮನೆಯೆಂದು ಭಾವಿಸಿ ತಂಗುವುದು.
ಅವರಿಗೆನೇ ಗೊತ್ತಾಗುತ್ತಿಲ್ಲ ನಮ್ಮ ಸುನ್ನಿಸಂ ಹಂತಹಂತವಾಗಿ ಜಾರುತ್ತಿದೆಯೆಂದು....!
ಸ್ಲೋ ಪೋಯಿಝನ್..!!

ದೀನುಲ್ ಇಸ್ಲಾಂನ ವಿಧಿವಿದಾನಗಳನ್ನು ಸಂಘಟನೆಯ ಅಸ್ಥಿತ್ವಕ್ಕೆ ಬೇಕಾಗಿ ಗಾಳಿಗೆ ತೂರಿ ನಾಶವನ್ನು ಮೈಮೇಲೆ ಎಳೆಯುವ ಭೀತಿಜನಕ ಅವಸ್ಥೆ!

ಓ... ಮುಸ್ಲಿಂ ನಾರಿಯರೇ...
ಪವಿತ್ರ ಕುರಾನಿನ ಸೂರತ್ ಅಹ್ಝಾಬಿನ 33/ 59ನೇ ಆಯತ್ ನೋಡಿ....

ಅರ್ಥಾತ್!
ಚಾದರದ ಸೆರಗನ್ನು ತಲೆಯ ಮೇಲಿಂದ ಇಳಿಬಿಟ್ಟು ಮುಖವನ್ನು ಮುಚ್ಚಿರಿ.

ಮುಹಮ್ಮದ್ ಬಿನ್ ಸೀರೀನ್ ಈ ಆಯತ್ ಬಗ್ಗೆ ಕೇಳಿದಾಗ ಅವರು ತನ್ನ ಒಂದು ವಸ್ತ್ರವನ್ನು ತಲೆ ಮೇಲೆ ಮತ್ತು ಮುಖವನ್ನು ಸಂಪೂರ್ಣ ಮುಚ್ಚಿ ಎಡ ಕಣ್ಣನ್ನು ಮಾತ್ರ ಮುಚ್ಚದೆ  ಉಳಿಸಿ ತೋರಿಸಿದರು.

ಇಷ್ಟೊಂದು ಕಟ್ಟುನಿಟ್ಟಿನ ನಿಯಮಗಳು ಮಹಿಳೆಯರ ಬಗ್ಗೆ ಇರುವಾಗ ಅದನ್ನು ಸಿಲ್ಲಿ ಮಾಡಿ ಯುವಕರ ಮನಸ್ಸಲ್ಲಿ ಇಸ್ಲಾಂ ವಿರುದ್ದ ಚಿಂತನೆಗಳನ್ನು ತುಂಬಿಸುವ ಷಡ್ಯಂತರಗಳನ್ನು ಮಟ್ಟ ಹಾಕುವುದು ಕಾಲದ ಜಿಹಾದ್.

ಇದೇ ರೀತಿ ಸುಮ್ಮನಿದ್ದು ಪ್ರತಿಕ್ರಯಿಸದೆ ಇದ್ದರೆ ಮುಂದೊಂದು ದಿನ ಇಸ್ಲಾಂ ಚೂರು ಚೂರಾಗಿ ಕೇವಲ ಹೆಸರಿಗಷ್ಟೇ ಸಮುದಾಯ ಇಲ್ಲಿ ಬಾಕಿಯಾಗಬಹುದು.
ಅಲ್ಲಾಹು ಕಾಪಾಡಲಿ ಆಮೀನ್.
           
*ويباح نظر الوجه فقط بقدرالحاجة لمعاملة وشهادة*

(👆ದಾಖಲೆ  ಹಸ್ತಾಂತರ ಇನ್ನಿತರ ಅನಿವಾರ್ಯ ಚಟುವಟಿಕೆಗಳ ಸಮಯ ಅನ್ಯ ಮಹಳೆಯರ ಮುಖ ಮಾತ್ರ ನೋಡಲು ಅನುವದನೀಯ.)

ಫತುಹುಲ್ ಮುಈನ್/
ಖುಲಾಸ

*ಸುನ್ನೀ ಸಾಹಿತ್ಯ ಮಂಡಳಿ*
                (ಸುಸಾಮ)

No comments:

Post a Comment