Sunday, October 15, 2017

ಸುಗಂಧಭರಿತ ಗಾಳಿ ಬೀಸುವ ಖಬರ್ ಭಾಗ = 03

*ಸುಗಂಧಭರಿತ ಗಾಳಿ ಬೀಸುವ ಖಬರ್...!!!*
🌷🌷🌷🌷🌷🌷🌷🌷🌷

_ಭಾಗ-03_

ಮಾಶಿತಾ ಬೀವಿ (ರ)ರವರ ದೃಢ ವಿಶ್ವಾಸ ಕಿಚ್ಚಿಂತೂ ಬದಲಾಗಲಿಲ್ಲ.⤵

ಇದನ್ನು ಕಂಡ ಫಿರೌನ್ ಇನ್ನಷ್ಟು ಉದ್ರಿಕ್ತನಾಗಿ ಕೊನೆಗೆ ಬರೀ ಏಳು ತಿಂಗಳು ಪ್ರಾಯವಿರುವ ಮೂರನೇ ಕಂದಮ್ಮನನ್ನು ಕುದಿಯುವ ಎಣ್ಣೆಗೆ ಎಸೆಯಲು ಅಣಿಯಾದಾಗ
ಆ ಮಾತೆಯ ಹೃದಯ ಒಡೆದು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು..

ಆ ಎಳೆಯ ಮಗುವನ್ನು ಕೈಯಲ್ಲಿ ಎತ್ತಿ ಮುದ್ದಿಸುತ್ತಾ ಮಗುವಿನ ಕೆನ್ನೆಗೆ ಸ್ನೇಹ ಚುಂಬನ ನೀಡಿ, ತನ್ನ ಮಡಿಲಲ್ಲಿ ಮಲಗಿಸುತ್ತಾ ತನ್ನ ಮಗುವಿನ ಮೇಲಿನ ಅಪಾರವಾದ ಪ್ರೀತಿಯನ್ನು ತೋರ್ಪಡಿಸಿದರು.
ಆದರೂ ತನ್ನ ಪ್ರೀತಿಯ ಕಂದಮ್ಮನ ಮುದ್ದಿಸುವ ಆಸೆ ಮುಗಿಯಲಿಲ್ಲ..

ನನ್ನ ಅಸುಳೆ ಕಂದಮ್ಮನನ್ನು ಅಲ್ಲವೇ ಈ ಪಿಶಾಚಿಗಳು ಉರಿಯುವ ಎಣ್ಣೆಗೆ ಹಾಕಿ ಸುಡಲು ಹೋಗುತ್ತಿರುವುದು....!
ಮಾಶಿತ ಬೀವಿ (ರ) ಹೃದಯವಿದ್ರಾವಕಗೊಂಡು ಅಳಲು ಪ್ರಾರಂಭಿಸಿದರು.

ಇದನ್ನು ಕಂಡ ಫಿರ್'ಔನ್ ಮತ್ತು ಸಂಗಡಿಗರು ಅಪಹಾಸ್ಯ ಮಾಡಿ ನಗಲು ಪ್ರಾರಂಭಿಸಿದರು..

ಇವಳಿಗೆ ಇನ್ನು ಸಹಿಸಲು ಸಾಧ್ಯವಿಲ್ಲ..
ಈಗ ಹೇಳು....?
ನಾನು ಇಸ್ಲಾಮಿನಿಂದ ಹಿಂದಿರುಗಿರುವೆನೆಂದು....!
ಮಾಶಿತಾ ಬೀವಿಯವರಲ್ಲಿ ಫಿರೌನ್‌ ಅಂದನು.

ಆ ಪಿಶಾಚಿಗಳ ಅಟ್ಟಹಾಸದ ನಗುವ ನಡುವೆ ಹಾಗೂ ಮಾಶಿತಾ ಬೀವಿ (ರ) ರವರ ಅಳುವಿನ ನಡುವಿನಲ್ಲಿ....

ಅದ್ಭುತವೇ ಅಧ್ಬುತ....!!!!

ಏಳು ತಿಂಗಳು ಪ್ರಾಯವಿರುವ ಎಳೆಯ ಕಂದಮ್ಮ ಆ ಕುದಿಯುವ ಎಣ್ಣೆಯ ಹತ್ತಿರದಿಂದ ತಾಯಿಯನ್ನು ಕರೆದು ಹೇಳಿತು..

ಉಮ್ಮಾ, ಆಳಬೇಡಿ..
ಉಮ್ಮಾ, ದುಃಖಿಸದಿರಿ.. ಉಮ್ಮಾ.

ನಾವು ವಿಶ್ವಾಸವಿರಿಸಿರುವುದು  ಪರಿಶುದ್ಧ ಇಸ್ಲಾಂ ಅಲ್ಲವೇ..?
ಉಮ್ಮಾ, ನಾವು ಅಲ್ಲಾಹನ ಸ್ವರ್ಗಿಯ ಹೂದೋಟದಲ್ಲಿ ನಮಗೆ ಒಂದಾಗೋಣ ಉಮ್ಮಾ..

 ಹಸುಳೆಯ ಅದ್ಬುತವಾದ ಮಾತನ್ನು ಕೇಳಿದ ಮಾಶಿತಾ (ರ) ರವರು ಓಡಿ ಹೋಗಿ ತನ್ನ ಮಗುವನ್ನು ಎತ್ತಿ ಅಪ್ಪಿಕೊಂಡು  ಚುಂಬನ ನೀಡುತ್ತಾ, ಮಗುವನ್ನು ಮುದ್ದಿಸುತ್ತಾ  ಶತ್ರುಗಳೊಂದಿಗೆ ಹೇಳಿದರು..
ಇಲ್ಲ.. ಇಲ್ಲ.. ನಾನು ವಿಶ್ವಾಸವಿರಿದಂತಹ ಪರಿಶುದ್ಧ ಇಸ್ಲಾಂ ದೀನಿನಿಂದ  ಹಿಂತಿರುಗುವುದಿಲ್ಲ....

ಅಹದ್.. ಅಹದ್..☝

ಇದನ್ನು ಕೇಳಿದ ಫಿರೌನ್‌ ಕಿಂಕರರು ಆ ಎಳೆಯ ಮಗುವನ್ನು ಎಣ್ಣೆಗೆ ಎಸೆದು ಸುಟ್ಟರು.

ತನ್ನ ಮೂರು ಮಕ್ಕಳನ್ನು ತನ್ನ ಕಣ್ಣ ಮುಂದೆಯೇ ಕುದಿಯುವ ಎಣ್ಣೆಗೆ ಎಸೆದು ಕೊಂದರೂ ಕೂಡಾ ತನ್ನ ವಿಶ್ವಾಸದಿಂದ ಸಾಸಿವೆಯಷ್ಟು ಕದಲದ ಆ ಧೀರ ಮಹಿಳೆ ಮಾಶಿತಾ ಬೀವಿ (ರ) ರವರೊಂದಿಗೆ ಫಿರೌನನ ಪ್ರಶ್ನೆ..?

ಮಾಶಿತಾ.... (ರ)
ಇನ್ನು ಮುಂದಿನ ಸರದಿ ನಿನ್ನನ್ನು ಈ ಎಣ್ಣೆಗೆ ಎಸೆದು ಸುಟ್ಟು ಕೊಲ್ಲಲಿದ್ದೇನೆ.
ಈಗ ನಿನ್ನ ತೀರ್ಮಾನ.!?
ನಿನ್ನ ಜೀವಿತಕಾಲದ ಕೊನೆಯ ಆಗ್ರಹವಾದರೂ ಏನು .?

ಮಾಶಿತಾ ಬೀವಿ (ರ) ಉತ್ತರಿಸುತ್ತಾರೆ..
ನನ್ನನ್ನು ನೀವು ಸುಟ್ಟು ಕೊಂದು ಖಬರ್'ನಲ್ಲಿ ದಫನ್ ಮಾಡುವಾಗ ಸುಟ್ಟು ಕರಗಳಾದ ನನ್ನ ಆ ಮೂರು ಮುತ್ತುಗಳನ್ನು ನನ್ನ ಖಬರ್'ನಲ್ಲಿ ನನ್ನ ಜೊತೆಯಾಗಿ ಇಡಬೇಕು. ಇದಾಗಿದೆ ನನ್ನ ಕೊನೆಯ ಆಗ್ರಹ.

ಅದೇ ರೀತಿ ಫಿರೌನ್ ಎಂಬ ಶೈತಾನನು ಮಾಶಿತಾ ಬೀವಿ(ರ)ಯನ್ನು ಕೊಂದು ಅವರ ಆಗ್ರಹದಂತೆ ಒಂದೇ ಖಬರ್'ನಲ್ಲಿ ದಫನ್ ಮಾಡಿದರು.

ಜಿಬ್ರೀಲ್ (ಅ) ಈ ಚರಿತ್ರೆಯನ್ನು ಹಬೀಬ್ ﷺ ರವರೊಂದಿಗೆ ಹೇಳಿ ಕೊಟ್ಟು ಕೊನೆಗೊಳಿಸುತ್ತಾರೆ...

ಇದಾಗಿದೆ ನಬಿ ﷺ ರವರೆ ಆ ಅಡಿಯಾಳು ಮಹಿಳೆ ಮಾಡಿದ ಪುಣ್ಯ.
ಈ ಕಾರಣದಿಂದಾಗಿದೆ ಅಂತ್ಯ ದಿನದ ವರೆಗೆ ಆ ಖಬರ್'ನಿಂದ ಸುಗಂಧ ಸುವಾಸನೆ‌ ಬೀರುವುದು..

ದೀನೀ ಚರಿತ್ರೆ ಇನ್ನಷ್ಟು ತಿಳಿಯಲು, ಅದು ಅನುಸರಿಸಿಕೊಂಡು ಕಾರ್ಯಾಚಿಸಲು ಅಲ್ಲಾಹು ನಮ್ಮನ್ನು ಅನುಗ್ರಹಿಸಲಿ..
ಆಮೀನ್..

ಇದನ್ನು ವರ್ಗಾಯಿಸಿ ಕೊಡುವ,
ಜ್ಞಾನ ಪರಮ ಪುಣ್ಯವಾಗಿದೆಯಂತೆ..
ಒಳಿತು ತೋರುವುದಾದರೆ ವರ್ಗಾಯಿಸಿರಿ..

ಮುಗಿಯಿತು🌹

✍ಗಫೂರ್ ಬಾಯಾರ್
🌷🌷🌷🌷🌷🌷🌷🌷🌷

No comments:

Post a Comment