Saturday, October 14, 2017

*ಕೆಸಿಎಫ್ UAE ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಇಕ್ಬಾಲ್ ಕಾಜೂರು ರವರ ಕುರಿತು ಒಂದಿಷ್ಟು....*

ಕೇವಲ ಬೆರಳೆಣಿಕೆಯ ಕಾರ್ಯಕರ್ತರು ಒಂದೆಡೆ ಸೇರಿ ಚರ್ಚಿಸುತ್ತಾ  ಇದ್ದಾರೆ.
ಮರಳುಗಾಡಿನಲ್ಲಿ ಯಾಕೆ  ಕರ್ನಾಟಕದ ಸುನ್ನೀ ಸಂಘಶಕ್ತಿಗೆ ಬೆಳೆಯಲು ಸಾದ್ಯವಾಗುವುದಿಲ್ಲ?
ಕರ್ನಾಟಕದ ಸಂಘಶಕ್ತಿಗೆ ಮರಳುಗಾಡು ಬರಡುಭೂಮಿಯೇ?
ಯಾವ ರೀತಿಯಲ್ಲಿ ಸುನ್ನೀ ಸಂಘಟನೆಯನ್ನು ಇಲ್ಲಿ  ಕಟ್ಟಬಹುದು.?
ಇದೇ ಚರ್ಚೆ ಗಳನ್ನು ಮಾಡುತ್ತಾ, ಕಂಡಲ್ಲಿ,ಬೇಟಿಯಾದ್ದಲ್ಲಿ,ರಾತ್ರಿ  ಹಗಲೆನ್ನದೆ ಚರ್ಚೆ  ಮಾಡುತ್ತಾ ಅದರ  ಸಾಕ್ಷಾತ್ಕಾರಕ್ಕೆ  ಬೇಕಾಗಿ ಹಗಲಿರುಳು ದುಡಿದ ಬೆರಳೆಣಿಕೆಯ ಕೆಲವೊಂದು ದೇಹಗಳಿತ್ತು!
ಅವರಲ್ಲಿ ಪ್ರಧಾನ ವ್ಯಕ್ತಿ  ಮತ್ತು ಶಕ್ತಿಯಾಗಿದ್ದರು ,
*ಕಾಜೂರು  ಮುಹಮ್ಮದ್  ಇಕ್ಬಾಲ್!*

ಗಲ್ಫ್ ದೇಶದ ಸುಡು  ಬಿಸಿಲು ಯಾವ ರೀತಿಯಿದೆ ಎಂಬುದನ್ನು   ಅರ್ಥೈಸಲು ಅಲ್ಲಿನ  ಡಾಮಾರು   ರಸ್ತೆಯೇ ಸಾಕ್ಷಿ.
ಬರೀ ರಸ್ತೆಯಲ್ಲಿ  ಮೊಟ್ಟೆಯೊಂದನ್ನು ಒಡೆದು ಹಾಕಿದರೆ  ನಿಮಿಷಾರ್ಧದಲ್ಲಿ ಆಮ್ಲೇಟ್ ಆಗುತ್ತಿತ್ತು!
ಅಂತಹ ಕಠಿಣ ಬಿಸಿಲನ್ನು ಲೆಕ್ಕಿಸದೆ ಪ್ರತಿಯೊಂದು ಗಲ್ಲಿ  ಗಲ್ಲಿಗಳಲ್ಲಿ ಸುತ್ತಾಡಿ,ಫ್ಲಾಟ್ ಗಳಿಗೆ ಹತ್ತಿ ಇಳಿದು ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿ ಎದೆಯುಸಿರು ಬಿಡುತ್ತಿದ್ದ *ಕಾಜೂರು  ಇಕ್ಬಾಲ್ ರವರ*  ದೃಶ್ಯ ಕಣ್ಣಿನಂಚಿನಿಂದ ಮರೆಯಲು  ಅದೇಗೆ ಸಾದ್ಯ?

ಕರ್ನಾಟಕದ ಅನಿವಾಸಿಗಳು ವಾಸಿಸುವ ಅಧಿಕ ಕಟ್ಟಡಗಳು ಲಿಫ್ಟ್ ರಹಿತವಾಗಿದ್ದರಿಂದ *ಇಕ್ಬಾಲ್   ಕಾಜೂರು ಸಂಘ* ಅದ್ಯಾವುದನ್ನು  ಲೆಕ್ಕಿಸದೆ ಕನ್ನಡಿಗರಿರುವ ರೂಮನ್ನ ಲಕ್ಷ್ಯವಾಗಿಟ್ಟು ಅವರ ಬಳಿ ಹೋಗಿ ಸುನ್ನೀ ಸಂಘಟನೆಯ ಅನಿವಾರ್ಯತೆಯ ಕುರಿತು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿ  ಅವರನ್ನು  ಸಂಘಟನೆಗೆ  ಹತ್ತಿರವಾಗಿಸಿದ  ಫಲವಾಗಿ ಇಂದು *ಕೆಸಿಎಫ್*  ಹೆಮ್ಮರವಾಗಿ ಬೆಳೆದು *ಜಿಸಿಸಿ  ಗಡಿದಾಟಿ* ಬೆಳೆದಿದೆ ಎಂಬುದು ಗಮನಾರ್ಹ ವಿಷಯ.

ಅದೇನೊ ಗೊತ್ತಿಲ್ಲ  ಅಲ್ಲಾಹನು  ಕೆಲವರಿಗೆ ನೀಡಿದ ಅನುಗ್ರಹವೆಂದೇ ಹೇಳಬೇಕು ಸಂಘಟನೆಯ ಚಟುವಟಿಕೆ ಗಳಲ್ಲಿ ತಾನು  ಸಕ್ರಿಯವಾಗುವುದರೊಂದಿಗೆ ಇತರರನ್ನು ನಿರಂತರವಾಗಿ ಸಕ್ರಿಯರಾಗಿಸುವ  ವಿಶೇಷ ಶಕ್ತಿಯಿರುವ  ವಿರಳ ನಾಯಕರೊಲ್ಲೊಬ್ಬರಾಗಿದ್ದಾರೆ *ಕಾಜೂರ್  ಇಕ್ಬಾಲ್ !*

ಅವರ ಒಡನಾಟ,ಚಿಂತನೆ ಮತ್ತು ಚಟುವ ಟಿಕೆಗಳು ಪ್ರತಿಯೊಬ್ಬ *ಕೆಸಿಎಫ್*  ಕಾರ್ಯಕರ್ತನಿಗೂ ಮಾದರಿ.

*ಕೆಸಿಎಫ್*  ಸಂಘಟನೆಗೆ ರೂಪು ನೀಡುವುದಕ್ಕಿಂತ ಮುಂಚೆ ನೈಫ್ ಝರ್ವಾನಿ ಮಸೀದಿ ಸಮೀಪದ ಜಿಮ್ ಕಟ್ಟಡದಲ್ಲಿದ್ದ *ಸಅದಿಯ  ಕಛೇರಿಯಲ್ಲಿ ದುಬೈಯ ಮೂಲೆ ಮೂಲೆಗಳಿಂದ ಕಾರ್ಯಕರ್ತರನ್ನು   ಒಟ್ಟುಗೂಡಿಸಿ ನಡೆಸಿದ AWT ತರಗತಿಯಲ್ಲಿ ಕಾರ್ಯಕರ್ತರಿಗೆ ಪವರ್ ಫುಲ್ ಮೋಟಿವೇಶನ್ ನೀಡುವಲ್ಲಿ ಕಾಜೂರು  ಇಕ್ಬಾಲ್ ಸಕ್ರಿಯವಾಗಿ  ಕಾರ್ಯಚರಿಸಿದ್ದರು.*

ಮಾತ್ರವಲ್ಲ ಸದರಿ ತರಗತಿ *ಕೆಸಿಎಫ್*  ಹುಟ್ಟುಹಾಕುವ ಲ್ಲಿ ಮಹತ್ತರ ಪಾತ್ರವಹಿಸಿತು.
*AWT ತರಗತಿಗಳು KCFಗೆ  ಮುನ್ನುಡಿ ಬರೆಯಿತೆಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ.*
ಇದರ ಹಿಂದಿನ ಪ್ರಧಾನ ಚಾಲನಾ ಶಕ್ತಿ ನಾನು ತಿಳಿದಂತೆ ಅದು  *ಕಾಜೂರು ಇಕ್ಬಾಲ್* ಆಗಿದ್ದರು.

ಅವರು  ದುಬೈಗೆ ಬಂದ ಆರಂಭ ಘಟ್ಟದಲ್ಲಿ ತುಛ್ಛವೇತನ ಸಿಗುತ್ತಿದ್ದರೂ ಸಂಘಟನೆಯ ಮೀಟಿಂಗ್ ವಗೈರದ ಚಟುವಟಿಕೆಗಳಿಗಾಗಿ ಕಾರ್ಯಕರ್ತರನ್ನು ಒಟ್ಟುಗೂಡಿಸಲಿಕ್ಕಾಗಿ ತನ್ನ  ವೇತನದ ಒಂದು ಭಾಗವನ್ನು ಮೀಸಲಿಡುತ್ತಿರುವುದನ್ನು ಅದೇಗೆ ಮರೆಯಲು ಸಾದ್ಯ?
ಅವರು ತನ್ನ ಬದುಕನ್ನು  *ಕೆಸಿಎಫ್* ಗಾಗಿ ಮೀಸಲಿಟ್ಟ ವಿಶೇಷ ವ್ಯಕ್ತಿ.
 ಇದೀಗ ಆತ್ಮೀಯ ಮಿತ್ರ, *ಕಾಜೂರು  ಇಕ್ಬಾಲ್ ರವರು UAE KCF* ಇದರ *ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ*  ಹುದ್ದೆಗೆ ಆಯ್ಕೆಯಾಗಿದ್ದಾರೆ.
ಅರ್ಹವಾದ ಪಟ್ಟ ಅಲಂಕರಿಸಿದ್ದಾರೆ.

ಅದೇ ರೀತಿ ಸರಳ ಸಜ್ಜನಿಕೆಯ ವ್ಯಕ್ತಿತ್ವ,ಯಾವುದೇ ಸಮಸ್ಯೆಗಳು ಎದುರಾದರೂ ದೃತಿಗೆಡದೆ ಸೌಮ್ಯವಾಗಿ ಬಗೆಹರಿಸುವ ಎಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಉಸ್ತಾದ್, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ,ಹಲವಾರು ವರ್ಷಗಳಿಂದ *KCF  UAE ರಾಷ್ಟ್ರೀಯ ಅದ್ಯಕ್ಷರಾಗಿ ದಿಟ್ಟ ನೇತೃತ್ವ ನೀಡುತ್ತಿದ್ದಾರೆ.*

ಮತ್ತೊಬ್ಬ ಮಿತ್ರ ಯುವ ವಾಗ್ಮಿ *ಜಲೀಲ್ ನಿಝಾಮಿ  ಉಸ್ತಾದ್* ರಾಷ್ಟ್ರೀಯ ಕೋಶಾಧಿಕಾರಿಯಾಗಿ ಅರ್ಹವಾದ ಆಯ್ಕೆ ನಡೆದಿದೆ.

ಅಲ್ಲಾಹು ಎಲ್ಲರಿಗೂ KCF ನ ಉನ್ನತಿಗಾಗಿ ಅಹರ್ನಶಿ ದುಡಿಯಲು ತೌಫೀಕ್ ನೀಡಲಿ ಆಮೀನ್.
- ಅಬೂಶಝ
(ಅಧ್ಯಕ್ಷರು ಸುಸಾಮ ಮಂಗಳೂರು)

No comments:

Post a Comment