😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣6⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಮರುದಿನ ಪ್ರಭಾತಕ್ಕೆ ಮುನ್ನವೇ ಇಬ್ಬರೂ ಎಚ್ಚೆತ್ತರು. ಖತ್ವಾಮಿ ಮನೆಯ ಮತ್ತೊಂದು ಕೇೂಣೆಗೆ ತೆರಳಿದಳು ಅಲ್ಲಿಂದ ⬇
*ವಿಷ ಲೇಪಿತವಾದ ಖಡ್ಗವೊಂದನ್ನು ತಂದು ಇಬ್ನು ಮುಲ್'ಜಂ'ನ ಕೈಯಲ್ಲಿಟ್ಟು ಆಕ್ರೋಶದಿಂದ ಹೇಳಿದಳು...*
*"ಹೇೂಗು ನನ್ನ ತಂದೆ ಮತ್ತು ಪತಿಯನ್ನು ವಧಿಸಿದ ಆ ಘಾತಕನನ್ನು ವಿಷ ಪೂರಿತವಾದ ಈ ಖಡ್ಗದಿಂದ ವಧಿಸಿ ಬಾ.. ಮುಲ್'ಜಂ.."*
ಖತ್ವಾಮಿಯಿಂದ ಖಡ್ಗವನ್ನು ಪಡೆದ ಇಬ್ನು ಮುಲ್'ಜಂ
ಬಹುಮಾನ್ಯರಾದ *ಅಲಿ (ರ) ರವರನ್ನು* ಹತ್ಯೆಗೈಯ್ಯುವ ದುರುದ್ದೇಶದೊಂದಿಗೆ ಅಲ್ಲಿಂದ ಹೊರ ಬಿದ್ದನು.
*"ಖೈಬರ್ ಚಕ್ರವರ್ತಿಯೊಂದಿಗಿನ ಸೆಣೆಸಾಟದಲ್ಲಿ ತನ್ನ ಕೈಲ್ಲಿದ್ದ ಭರ್ಜಿ ಕೈತಪ್ಪಿದಾಗ ಖೈಬರ್ ಅರಮನೆಯ ಬೃಹತ್ತಾದ ಬಾಗಿಲನ್ನೇ ಎಡಗೈಯಿಂದ ಕಿತ್ತೆಗೆದು ಭರ್ಜಿಯಂತೆ ಹಿಡಿದು ಯುದ್ಧ ಮಾಡಿ ಖೈಬರ್ ಚಕ್ರವರ್ತಿಯನ್ನು ಸದೆ ಬಡಿದ ಇಸ್ಲಾಮಿನ ಕೆಚ್ಚೆದೆಯ ವೀರ, ಹುಲಿ ಮರಿಯೆಂದೇ ಪ್ರಸಿದ್ಧರಾದ ಅಲಿ ಹೈದರ್(ರ) ರವರ ಎದುರಿನಿಂದ ಹೇೂದರೆ ತನ್ನ ತಲೆ ಉಳಿಯದೆಂದು ಚೆನ್ನಾಗಿ ಬಲ್ಲವನಾಗಿದ್ದ ಇಬ್ನು ಮುಲ್'ಜಂ ಮತ್ತೊಂದು ತಂತ್ರ ಪ್ರಯೇೂಗಿಸಿದ."*
ಅದೇನೆಂದರೆ...
*ಹಝ್ರತ್ತ್ ಅಲಿ (ರ) ರವರು ಫಜರ್ ನಮಾಜಿಗಾಗಿ ತನ್ನ ಮನೆಯಿಂದ ಮದೀನ ಮಸೀದಿಗೆ ಹೋಗುವ ದಾರಿಯಲ್ಲಿ ಅಡಗಿ ಕುಳಿತನು.*
الصلوة خير من النوم
الصلوة خير من النوم
الله أكبر الله أكبر لااله إلا الله
ಮದೀನ ಮಸೀದಿಯಿಂದ ಫಜರಿನ ಅಝಾನ್ ಮೊಳಗಿತು....
ಅದೋ ಬರುತ್ತಿದ್ದಾರೆ..
*ಅಲಿ (ರ)*....
*ಕತ್ತಲಿನಲ್ಲಿ ಅಡಗಿ ಕುಳಿತಿದ್ದ ಆ ವಿಶ್ವಾಸ ದ್ರೇೂಹಿಯು ಚೂಪಾಗಿ ವಿಷ ಲೇಪಿತವಾದ ಆ ಖಡ್ಗದಿಂದ ಬಹುಮಾನ್ಯರ ಬೆನ್ನ ಹಿಂದಿನಿಂದ 🗡 ಇರಿದೇ ಬಿಟ್ಟ..!!*
" إنا لله وإنا إليه راجعون "
*ಸೈನ್ಯಕ್ಕೆ ಸೇರಲೆಂದು ಬಂದ ಇಬ್ನು ಮುಲ್'ಜಂ'ನನ್ನು ಮೊದಲ ಬಾರಿಗೆ ಕಂಡಾಗಲೇ ಅಲಿ (ರ) ರವರು "ನೀನು ನನ್ನ ಹಂತಕನಾಗುವುದನ್ನು ನಾನು ಕಾಣುತ್ತಿದ್ದೇನೆ" ಎಂದು ಹೇಳಿದ್ದ ಆ ಮಾತು ಬರೀ ಮಾತಾಗಿರಲಿಲ್ಲ. ಮುಂದೆ ನಡೆಯಲಿರುವ ಈ ಘಟನೆಯನ್ನು ಅಲ್ಲಾಹನು ಅಂದೇ ಅಲಿ(ರ)ರಿಗೆ (ಅವನು ಇಷ್ಟಪಡುವ ಮಹಾತ್ಮರಿಗಷ್ಟೇ ಕಾಣಲು ಮತ್ತು ಕೇಳಲು ಸಾದ್ಯವಾಗುವ ವಿಸ್ಮಯಕರವಾದ) ಇಲ್'ಹಾಮ್ ಮೂಲಕ ತೇೂರಿಸಿ ಕೊಟ್ಟಿದ್ದ*
ಹಾಗೆ *"ಖುಲಫಾಉಲ್ ರಾಷಿದ್" ಗಳೆಂಬ ಹೆಗ್ಗಳಿಕೆಗೆ ಪಾತ್ರರಾದ ಇಸ್ಲಾಮಿನ ನಾಲ್ಕು ಖಲೀಫರಲ್ಲೊಬ್ಬರಾದ ಸಯ್ಯದುನಾ ಅಲಿ ಬಿನ್ ಅಬೀ ತ್ವಾಲಿಬ್(ರ) ಇಹ ಲೋಕದಿಂದ ಶಾಶ್ವತವಾಗಿ ಮರೆಯಾದರು."* 😰
( _ಇಸ್ಲಾಮಿನ ಏಳಿಗೆಗಾಗಿ ಜೀವನ ಪರ್ಯಂತ ಅಸಂಖ್ಯ ಸವಾಲುಗಳನ್ನೆದುರಿಸುತ್ತಾ ಅಲ್ಲಾಹನ ಸಂತೃಪ್ತಿಗಾಗಿ ಆ ದಿಟ್ಟ ಧೀಮಂತ ನಾಯಕರು ಅನುಭವಿಸಿದ ತ್ಯಾಗ ಮತ್ತು ಬಲಿದಾನಗಳು ವರ್ಣನೆಗೆ ನಿಲುಕುವಂಥದ್ದಲ್ಲ. ಆ ಮಹಾತ್ಮರ ಹಕ್ಕ್'ಜಾಹ್ ಬರ್ಕತ್'ನಿಂದ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರ ಈಮಾನನ್ನೂ ಸಲಾಮತ್ ಮಾಡಲಿ ಆಮೀನ್._ )
*ಸಯ್ಯದುನಾ ಅಲಿ (ರ) ರವರ ಕಾಲಾನಂತರ ಇಸ್ಲಾಮಿಕ್ ಆಡಳಿತದ ನೇತೃತ್ವವನ್ನು ಮುತ್ತು ರಸೂಲ್ ﷺ ರವರ ಮೊಮ್ಮೊಗನೂ, ಅಲಿ (ರ) ಮತ್ತು ಫಾತಿಮಾ (ರ) ದಂಪತಿಗಳ ಪುತ್ರರತ್ನರೂ ಆದ ಸಯ್ಯದುನಾ ಹಸನ್ (ರ) ವಹಿಸಿಕೊಂಡರಾದರೂ ಅದಕ್ಕೂ ಮೊದಲೇ ಮುಸ್ಲಿಂ ಸಮುದಾಯದ ನಡುವೆಯೇ ಬೂದಿ ಮುಚ್ಚಿದ ಕೆಂಡದಂತೆ ಹಲವಾರು ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿತ್ತು. ಸಾಲದ್ದಕ್ಕೆ ಮುಸ್ಲಿಂ ಸಮುದಾಯವು "ಶಿಯಾ ಮತ್ತು ಸುನ್ನೀ" ಎಂದು ಎರಡು ಹೇೂಳಾಗಿ ಪರಸ್ಪರರಲ್ಲಿ ಭಿನ್ನಮತ ತಾರಕಕ್ಕೇರಿದ್ದರಿಂದ ಸಯ್ಯದುನಾ ಹಸನ್(ರ) ರವರಿಗೆ ಖುಲಫಾಉಲ್ ರಾಶಿದುಗಳಂತೆ ಪಾರದರ್ಶಕವಾಗಿ ಆಡಳಿತ ನಡೆಸಲು ತಮ್ಮಿಂದ ಸಾಧ್ಯವಾಗದೆನಿಸಿದ್ದರಿಂದ ಕೂಫದ ಗವರ್ನರ್ ಆಗಿದ್ದ ಮುಆವಿಯ (ರ) ರವರನ್ನು ಮದೀನಕ್ಕೆ ಕರೆಸಿ ಅವರೊಂದಿಗೆ ಹಸನ್ (ರ) ರವರು ಹೇಳಿದರು, ಭಿನ್ನಮತದಿಂದ ಒಡೆದು ಹೇೂಳಾಗುತ್ತಿರುವ ಮುಸ್ಲಿಂ ಸಮುದಾಯವನ್ನು ಒಂದು ಕೊಂಡಿಯಲ್ಲಿ ಜೋಡಿಸಿ ಐಕ್ಯದೊಂದಿಗೆ ಕೊಂಡೊಯ್ಯುತ್ತಾ ಆಳ್ವಿಕೆ ನಡೆಸಲು ನನ್ನಿಂದ ಸಾಧ್ಯವಾಗಬಹುದೆಂದು ನನಗನಿಸುತ್ತಿಲ್ಲ. ಅದರಿಂದ ಅರೇಬಿಯಾದ ಇಸ್ಲಾಮಿಕ್ ಆಡಳಿತವನ್ನು ತಾವು ವಹಿಸಿಕೊಂಡು ಸಮುದಾಯದ ನಡುವೆ ತಲೆದೋರಿರುವ ಭಿನ್ನಮತವನ್ನು ಶಮನ ಮಾಡಿ ಸಮರ್ಥವಾಗಿ ಆಳ್ವಿಕೆ ನಡೆಸುವುದರೊಂದಿಗೆ "ಬೈತುಲ್ ಮಾಲ್" ಎಂಬ ಖಜಾನೆಯಿಂದ 'ಅಹ್ಲ್'ಬೈತಿಗೆ' ಇಂತಿಷ್ಟು ಅಂತ ಪೆನ್ಷನ್ ಕೊಡಬೇಕು.* ಎಂದಾಗ
ಮುಆವಿಯಾ(ರ)ರವರು ಹಝ್ರತ್ ಹಸನ್ (ರ)ರವರ ಬೇಡಿಕೆಗಳನ್ನು ತುಂಬು ಗೌರವದಿಂದ ಅಂಗೀಕರಿಸಿ ಈಡೇರಿಸುತ್ತಾ ಸಮರ್ಥವಾಗಿ ಆಡಳಿತ ನಡೆಸುವ ಭರವಸೆಯೊಂದಿಗೆ ಅಧಿಕಾರ ವಹಿಸಿಕೊಂಡರು.
*_ಹಾಗೆ ಮುಆವಿಯಾ (ರ) ಖಲೀಫರಾಗಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ 'ಉಮವಿಯ್ಯ ಆಡಳಿತ' ಆರಂಭವಾಯಿತು._*
ಆ ತನಕ ಮದೀನಾ ಇಸ್ಲಾಮಿಕ ರಾಷ್ಟ್ರದ ರಾಜಧಾನಿಯಾಗಿತ್ತು. ಮುಆವಿಯಾ(ರ) ಅಧಿಕಾರ ವಹಿಸಿಕೊಂಡ ನಂತರ ರಾಜದಾನಿಯು ಮದೀನಾದಿಂದ ಸಿರಿಯಾದ ಡಮಸ್ಕಸ್'ಗೆ ಸ್ಥಳಾಂತರವಾಯಿತು.
ಸುಂದರವಾದ ಆಡಳಿತ ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment