😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣7⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
*وَبَارِكْ وَسَلِّمْ عَلَيْه*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಹಿಜರಿ ನಲವತ್ತರಲ್ಲಿ ಅಧಿಕಾರ ವಹಿಸಿಕೊಂಡ ಮುಆವಿಯಾ(ರ)ರವರು ಹಿಜರಿ ಅರುವತ್ತರ ತನಕ ಅಂದರೆ ಸುದೀರ್ಘ ಇಪ್ಪತ್ತು ವರ್ಷಗಳ ಕಾಲ ಸಮರ್ಥವಾಗಿ ಆಳ್ವಿಕೆ ನಡೆಸಿದರು. ⬇
ತಮ್ಮ ಆಡಳಿತದ ಕೊನೆಯ ಹಂತದಲ್ಲಿ ರೇೂಗ ಪೀಡಿತರಾದ ಮುಆವಿಯಾ(ರ)ರ ರೇೂಗವು ದಿನೇ ದಿನೇ ಉಲ್ಭಣಿಸುತ್ತಿದ್ದ ಕಾರಣ ಇನ್ನು ಆಡಳಿತ ನಡೆಸಲು ತಮ್ಮಿಂದಾಗದೆಂದು ಭಾವಿಸಿ ತಮ್ಮ ಪುತ್ರನಾದ *ಯಝೀದ್*'ನೊಂದಿಗೆ ಹೇಳಿದರು.
ಮಗನೇ..
ನಾನಿನ್ನು ಬಹುಕಾಲವೇನೂ ಬದುಕಿರಲಾರೆ. ಹಾಗಾಗಿ ನನ್ನ ಮರಣಾ ನಂತರ ಇಸ್ಲಾಮಿಕ್ ಆಡಳಿತವನ್ನು ನಿನ್ನ ಕೈಗೊಪ್ಪಿಸುತ್ತಿದ್ದೇನೆ. ನೀನು ಖುಲಫಾಉಲ್ ರಾಷಿದೀನ್'ಗಳ ಆಳ್ವಿಕೆಯನ್ನು ಅನುಸರಿಸಿ ಜನತೆಯ ಕುಂದು ಕೊರತೆಗಳನ್ನು ಪರಿಹರಿಸುತ್ತಾ ಮಾದರಿ ಯೇೂಗ್ಯವಾದ ಆಡಳಿತ ನಡೆಸಬೇಕು. ಮತ್ತು
ಅಹ್ಲ್'ಬೈತನ್ನು ತುಂಬು ಗೌರವದಿಂದಲೂ, ಪ್ರೀತಿಯಿಂದಲೂ ಕಾಣಬೇಕು.
ತಂದೆಯ ಉಪದೇಶವನ್ನು ಕೇಳಿದ *ಯಝೀದ್* ಅಪ್ಪಾ... ನಿಮ್ಮ ಮರಣಾ ನಂತರ ಅಧಿಕಾರ ಖಂಡಿತಾ ನನ್ನ ಕೈವಶವಾಗಲಿದೆಯೆಂಬುದನ್ನು ನಾನು ಬಲ್ಲೆ.
*ಖುಲಫಾಉಲ್ ರಾಷಿದೀನ್'ಗಳು* ಆಡಳಿತವನ್ನು ಹೇಗಾದರೂ ನಡೆಸಿರಲಿ. ಆದರೆ ನನ್ನ ಆಳ್ವಿಕೆ ಮಾತ್ರ ನನ್ನ ಮನೇೂಗತಿಯನ್ನು ಅವಲಂಬಿಸಿದ್ದಾಗಿರುತ್ತದೆ. ಅದರಿಂದ ಹೆಚ್ಚು ಉಪದೇಶವೇನೂ ಬೇಡ. ಹೇಗೆ ಆಳ್ವಿಕೆ ಮಾಡಬೇಕೆಂಬುದು ನನಗೆ ಗೊತ್ತು ಎಂದು ಮುಖಕ್ಕೆ ಹೊಡೆದಂತೆ ಹೇಳಿದನು.
ಕೆಲ ದಿನಗಳಲ್ಲೇ...
*"ಅಲ್ಲಾಹನ ವಿಧಿಯ ಕರೆ ಬಂದಾಗ ಪ್ರತಿಯೊಬ್ಬರೂ ಅವನ ವಿಧಿಗೆ ವಿಧೇಯರಾಗಲೇಕೆಂಬ"*
*ಖುರ್'ಆನಿನ ಈ ವಚನದಂತೆ ಮುಆವಿಯ (ರ) ರವರು ಈ ಲೋಕಕ್ಕೆ ವಿದಾಯ ಹೇಳಿದರು.* 😰
" إنا لله وإنا إليه راجعون "
ತಂದೆ ಮರಣಾಸನ್ನರಾಗಿದ್ದಾಗ ಬೇಟೆಗೆ ಹೋಗಿದ್ದ *ಯಝೀದ್* ಹಿಂದಿರುಗಿದಾಗ ತಂದೆಯವರ ಅಂತಿಮ ಕರ್ಮಗಳು ಮುಗಿದಿತ್ತು.
ದಫನ್ ಮುಗಿದ ನಂತರ *ಯಝೀದ್* ಎಂಬ ಆ ಅಧಿಕಾರಮೇೂಹಿ ಅಧಿಕಾರ ವಹಿಸಿಕೊಂಡು ಸಿಂಹಾಸನವೇರಿದ್ದೇ ತಡ *ಬೈತುಲ್ ಮಾಲ್'ನಿಂದ ಅಹ್ಲುಬೈತ್'ಗೆ ಸಂಧಾಯವಾಗುತ್ತಿದ್ದ ಪೆನ್ಷನ್ ನಿಲ್ಲಿಸುವಂತೆ ಆಜ್ಞಾಪಿಸಿದನು.!!*
ಬಳಿಕ ಅವನ ಮನಸ್ಸು *ಉಮ್ಮುಲ್ ಹಕೀಮ್(ರ)ರತ್ತ* ಹೊರಳಿ, ಆ ಸುಂದರ ಚೆಲುವೆಯನ್ನು ತನ್ನವಳನ್ನಾಗಿಸಬೇಕೆಂದು ನಿರ್ಧರಿಸಿ *ಉಮ್ಮುಲ್ ಹಕೀಂ(ರ)* ಕುರಿತು ಮಾಹಿತಿ ನೀಡುವಂತೆ ತನ್ನ ದೂತರಿಗೆ ಆಜ್ಞಾಪಿಸಿದನು.
*ಈ ಬಗ್ಗೆ ಮಾಹಿತಿ ಕಲೆ ಹಾಕಲು ತೆರಳಿದ ದೂತ ಬಂದು ಅಲಿ (ರ) ರವರು ನುಅಮಾನ್ (ರ)ರಿಗೆ ಉಮ್ಮುಲ್ ಹಕೀಮ್(ರ)ರನ್ನು ವಿವಾಹ ಮಾಡಿ ಕೊಟ್ಟಿರುದಾಗಿ ತಿಳಿಸಿದನು.*
ನಂತರ *ಯಝೀದ್* ಇನ್ನೊಬ್ಬ ದೂತನೊಂದಿಗೆ ಪತ್ರವೊಂದನ್ನು ಕೊಟ್ಟು ಮದೀನದಲ್ಲಿರುವ *ಉಮ್ಮುಲ್ ಹಕೀಮ್ (ರ)ರ ಪತಿ ನುಅ್'ಮಾನ್ (ರ)ಗೆ* ಈ ಪತ್ರವನ್ನು ತಲುಪಿಸುವಂತೆ ಹೇಳಿದನು.
ರಾಜಾಜ್ಞೆಯಂತೆ ದೂತನು ಮದೀನಕ್ಕೆ ತೆರಳಿ *ನುಅಮಾನ್ (ರ)ಗೆ ಆ ಪತ್ರವನ್ನು ಕೊಟ್ಟನು. ಪತ್ರ ಓದಿದ ನುಅಮಾನ್ (ರ)ರ ಸಂತಸ ಹೇಳ ತೀರದು.*
ಆಗ ಪತ್ನಿ *ಉಮ್ಮುಲ್ ಹಕೀಂ (ರ)* ಕೇಳಿದರು, ಏನಾಯಿತು? ಯಾಕಿಷ್ಟು ಸಂತೇೂಷದಿಂದ ಕುಣಿದಾಡುತ್ತಿದ್ದೀರಿ?
ಆಗ ತನ್ನ ಸಂತಸಕ್ಕೆ ಕಾರಣವಾದ ಆ ಸುವಾರ್ತೆಯನ್ನು ನುಅ್'ಮಾನ್ (ರ) ತನ್ನ ಪತ್ನಿಗೆ ಹೇಳಲಾರಂಭಿಸಿದರು.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment