😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
ಅಪಾಯದ ಅರಿವಾದ ಮುಸ್ಲಿಂ(ರ) ತಕ್ಷಣ ತಮ್ಮ ಒರೆಯಲ್ಲಿದ್ದ ಖಡ್ಗವನ್ನು ಎಳೆದು ಸೈನಿಕರತ್ತ ನುಗ್ಗಿದರು... ⬇
ಇದನ್ನು ಊಹಿಸಿರದ ಸೈನಿಕರು ವಿಚಲಿತರಾಗಿ ಮುಸ್ಲಿಂ (ರ) ಖಡ್ಗವನ್ನು ಹಿಡಿದು ಮುನ್ನುಗ್ಗುತ್ತಿದ್ದಂತೆ
ಹಿಂದೆ ಸರಿಯಲು ಆರಂಭಿಸಿದರು.
ವಂಚನೆಯನ್ನು ಪಾರಂಪರ್ಯವಾಗಿ ಮುಂದುವರೆಸಿಕೊಂಡು ಬಂದಿರುವ ಕೂಫ ಎಂಬ ನಾಡಿನವರೇ ಆದ ಸೈನಿಕರೂ ವಂಚಿಸುವುದರಲ್ಲಿ ಕಡಿಮೆಯೇನಲ್ಲ.
ಯುದ್ಧದಲ್ಲಿ ನಿಪುಣರಾಗಿರುವ ಮುಸ್ಲಿಂ (ರ)ರನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭದ ಮಾತಲ್ಲವೆಂಬುದನ್ನು ಅರಿತಿದ್ದ ಸೈನಿಕನೊಬ್ಬ ಹೇಳಿದ
*ಮುಸ್ಲಿಂ (ರ)ರವರೇ...*
*ನಾವು ತಮ್ಮನ್ನು ಬಂಧಿಸಲೆಂದು ಬಂದವರಲ್ಲ. ಬದಲಾಗಿ ಕೂಫಾದ ನಿವಾಸಿಗಳಾದ ನಾವು, ಬಂದಿಯಾಗಿರುವ ಹಾನಿಯ (ರ) ರವರನ್ನು ಉಬೈದ್'ನಿಂದ ರಕ್ಷಿಸುವ ಸಲುವಾಗಿ ಉಬೈದ್'ನ ವಿರುದ್ಧದ ಸಮರಕ್ಕೆ ತಮ್ಮೊಂದಿಗೆ ಕೈಜೇೂಡಿಸಲು ಬಂದಿದ್ದೇವೆ. ಸತ್ಯ ಸಂಗತಿಯನ್ನರಿಯದ ಕೆಲ ಸೈನಿಕರು ನಿನ್ನೆ ತಮ್ಮನ್ನು ಬೆನ್ನಟ್ಟಿದ ವಿಷಯ ತಿಳಿದು ತಮಗೆ ಮನವರಿಕೆ ಮಾಡಲು ಬಂದವರಾಗಿದ್ದೇವೆ ನಾವು.*
ಇದನ್ನು ಕೇಳಿದಾಗ ಮುಸ್ಲಿಂ (ರ) ಶಾಂತರಾಗಿ *"ಹಾಗಾದರೆ ಸರಿ"* ಎನ್ನುತ್ತಾ ಖಡ್ಗವನ್ನು ಒರೆಗೆ ಹಾಕಿದರು.
ಖಡ್ಗವನ್ನು ಒರೆಗೆ ಹಾಕಿದ್ದೇ ತಡ ಆ ಸೈನಿಕರು ಮುಸ್ಲಿಂ (ರ)ರವರ ಮೇಲೆ ಎರಗಿ ಹಿಡಿದು ಕಟ್ಟಿ ಕೊಂಡೊಯ್ದು ಉಬೈದ್'ನ ಮುಂದೆ ಹಾಜರು ಪಡಿಸಿದರು.
ಮುಸ್ಲಿಂ (ರ)ರನ್ನು ಕಂಡ ಉಬೈದ್ ಆಕ್ರೋಶದಿಂದ...
*ಹೇ ಮಕ್ಕಾದವನೇ...*
*ಯಝಿದ್'ನ ಆಡಳಿತದ ವಿರುದ್ಧ ಕೂಫದ ಜನತೆಯನ್ನು ಎತ್ತಿ ಕಟ್ಟಲು ಪ್ರಯತ್ನಿಸಿದ ನಿನ್ನ ಶ್ರಮವನ್ನು ಸಫಲವಾಗಲು ನಾನು ಬಿಡಲಾರೆ ಎನ್ನುತ್ತಾ..*
*ಈತನನ್ನೂ ಜೈಲಿಗೆ ತಳ್ಳಿರಿ ಎಂದು ಸೈನಿಕರಿಗೆ ಅಜ್ಞಾಪಿಸಿದನು.*
ಸೈನಿಕರು ಹಾನಿಯಾ (ರ)ರವರನ್ನು ಬಂಧಿಸಿದ್ದ ಕೋಣೆಯ ಪಕ್ಕದ ಸೆಲ್'ನಲ್ಲಿ ಮುಸ್ಲಿಂ (ರ) ರನ್ನೂ ಕೂಡಿ ಹಾಕಿದರು.
*( ಆದರೆ ಈ ಯಾವ ವಿಷಯಗಳೂ ಮಕ್ಕಾದಲ್ಲಿರುವ ಹುಸೈನ್ (ರ)ರಿಗೆ ತಿಳಿದಿರಲಿಲ್ಲ )*
ಮರುದಿನ ಕೂಫದ ಜನರೆಲ್ಲ ಸಂಘಟಿತರಾಗಿ ಸುಮಾರು ಐದು ಸಾವಿರ ಜನರು ಒಟ್ಟು ಗೂಡಿ "ದಾರುಲ್ ಇಮಾರ"ದ ಮುಂದೆ ಜಮಾಯಿಸಿ, ನುಅಮಾನು ಇಬ್ನು ಬಶೀರ್ (ರ)ರೊಂದಿಗೆ ಮುಸ್ಲಿಂ (ರ) ಮತ್ತು ಹಾನಿಯಾ (ರ) ರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದಾಗ ನುಅ್'ಮಾನ್ ಇಬ್ನು ಬಶೀರ್ (ರ)ರವರು ಒಳ ಕೇೂಣೆಯೊಂದರಲ್ಲಿ ಕುಳಿತಿದ್ದ ಉಬೈದ್'ನ ಬಳಿ ಹೇೂಗಿ ಹೇಳಿದರು...
ಹೊರಗಡೆ ಕೂಫದ ಜನತೆಯೆಲ್ಲರೂ ಜಮಾಯಿಸಿ ಮುಸ್ಲಿ (ರ) ಮತ್ತು ಹಾನಿಯಾ (ರ)ರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದರು.
ಓಹೋ..
ಹಾಗೇೂ. ವಿಷಯ..?
ಎನ್ನುತ್ತಾ..
ಉಬೈದ್, ಕೂಡಲೇ ಸೈನಿಕರನ್ನು ಕರೆದು
ಜೈಲಿನಲ್ಲಿರುವ ಇಬ್ಬರನ್ನೂ ಇತ್ತ ಕರೆ ತನ್ನಿ ಎಂದನು.
ಹಾಗೆ ಸೈನಿಕರು ಮುಸ್ಲಿಂ (ರ) ಮತ್ತು ಹಾನಿಯಾ (ರ)ರನ್ನು ಕರೆತಂದು ಉಬೈದ್'ನ ಮುಂದೆ ನಿಲ್ಲಿಸಿದರು.
ಆಗ ಅವರಿಬ್ಬರನ್ನೂ ದಾರುಲ್ ಇಮಾರ್'ನ ಮೇಲ್ಭಾಗಕ್ಕೆ ಕರೆದೊಯ್ದ ಉಬೈದ್, ಕೆಳಗೆ ನೆರೆದಿದ್ದ ಜನರನ್ನು ತೇೂರಿಸುತ್ತಾ ಹೇಳಿದ, ನಿಮ್ಮಿಬ್ಬರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವ ಸಲುವಾಗಿ ಇವರೆಲ್ಲರೂ ಸಂಘಟಿತರಾಗಿ ಬಂದು ಇಲ್ಲಿ ನೆರೆದಿದ್ದಾರೆ ಎಂದನು.
ನಂತರ ದಾರುಲ್ ಇಮಾರಿನ ಮೇಲಿನಿಂದಲೇ ಅವರಿಬ್ಬರನ್ನು ಎಲ್ಲರಿಗೂ ಕಾಣುವಂತೆ ಕಟ್ಟಡದ ಅಂಚಿಗೆ ಕರೆ ತಂದು ನಿಲ್ಲಿಸಿ ಅವರ ಹಿಂದೆ ನಿಂತ ಉಬೈದ್, ನುಅ್'ಮಾನು ಇಬ್ನು ಬಶೀರ್ (ರ) ರೊಂದಿಗೆ ಹೇಳಿದನು,
ಇವರನ್ನು ಬಿಟ್ಟು ಕೊಡುತ್ತೇವೆ ಹಾಗಾಗಿ ಪ್ರತಿಭಟನೆ ಕೈಬಿಡಬಿಡಬೇಕೆಂದು ಹೇಳು..! ಎಂದನು.
ನುಅಮಾನು ಇಬ್ನು ಬಶೀರ್ (ರ) ಹಾಗೆಯೇ ಹೇಳಿದರು.
*ಆದರೆ ಅವರು ಹೇಳಿ ಮುಗಿಸುವಷ್ಟರಲ್ಲಿ ಉಬೈದ್ ತನ್ನ 🗡 ಖಡ್ಗದಿಂದ ಒಂದೇ ಏಟಿಗೆ ಮುಸ್ಲಿಂ (ರ) ಮತ್ತು ಹಾನಿಯಾ (ರ)ರವರ ತಲೆ ಕಡಿದು, ಆ ಇಬ್ಬರು ಮಹಾನರ ತಲೆಯನ್ನೂ ಕೆಳಗಿರುವ ಜನರ ಮುಂದೆ ಎಸೆದನು.* 😰😰
ಇದನ್ನು ಕಂಡ ಜನತೆ ಬೆಚ್ಚಿ ಬಿದ್ದರು. ಆಗ ಆ ಜನತೆಯ ಗುಂಪಿನಲ್ಲಿದ್ದವರೊಬ್ಬರು ಆ ಜನತೆಯನ್ನುದ್ದೇಶಿಸಿ ಹೇಳಿದರು,
*ನಾವು ಯಾರನ್ನು ರಕ್ಷಿಸಲಿಕ್ಕಾಗಿ ಬಂದೆವೇೂ ಅವರನ್ನು ಕೊನೆಗೂ ರಕ್ಷಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ನಮ್ಮಿಂದ ಇನ್ನೇನು ತಾನೆ ಮಾಡಲು ಸಾಧ್ಯ? ಹಾಗಾಗಿ ನಾವು ಹಿಂದಿರುಗೇೂಣ ಎಂದರು..!*
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment