😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 1⃣6⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಆದರೆ ಮಕ್ಕಳು ⬇
ಹಠ ಬಿಡದೆ ಏನಾದರೂ ತೊಂದರೆ ಇಲ್ಲ. ನಾವು ಕೂಡ ಬರುತ್ತೇವೆ ದಯವಿಟ್ಟು ನಮ್ಮನ್ನೂ ಕರೆದೊಯ್ಯಿರಿ ಎಂದು ಅಂಗಾಲಾಚಲಾರಂಭಿಸಿದಾಗ ತಮ್ಮ ಸಹಧರ್ಮಿಣಿಯನ್ನು ಕರೆದು *ಮುಸ್ಲಿಂ (ರ)* ಹೇಳಿದರು.
ಪ್ರಿಯೇ...
ಜಗದೊಡೆಯನಾದ ಅಲ್ಲಾಹನ *ಖಳಾಹ್* ಏನಿದೆಯೇೂ ಅದು ನಡೆಯಲೇಬೇಕು. ಅವನ ವಿಧಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಅಂಗಾಲಾಚುತ್ತಿರುವ ಮಕ್ಕಳನ್ನು ಹೇಗೆ ಬಿಟ್ಟು ಹೇೂಗಲಿ? ಹಾಗಾಗಿ ನೀನು ಮಕ್ಕಳಿಗೆ ಒಳ್ಳೆಯ ಉಡುಪು ತೊಡಿಸು ಅವರನ್ನೂ ನನ್ನೊಂದಿಗೆ ಕರೆದೊಯ್ಯುತ್ತೇನೆ ಎಂದರು...!
ಹಾಗೆ ಮಕ್ಕಳಿಬ್ಬರನ್ನೂ ಸ್ನಾನ ಮಾಡಿಸಿ ಒಳ್ಳೆಯ ಬಟ್ಟೆಗಳನ್ನು ತೊಡಿಸಿದ *ಫಾತಿಮಾ(ರ)* ಎಂಬ ಆ ಮಹದಿ, ಪತಿ ಮತ್ತು ಮಕ್ಕಳಿಗೆ ಸಲಾಂ ಹೇಳಿ ಬೀಳ್ಕೊಟ್ಟರು.
ಆದರೆ ನಾಡಿಮಿಡಿತದ ಒಡನಾಡಿಯಂತೆ ಬದುಕಿನ ಕೊನೆಯುಸಿರಿನ ತನಕವೂ ತನಗೆ ಆಸರೆಯಾಗಬೇಕಿದ್ದ ತನ್ನ ಪ್ರಿಯತಮ ಮತ್ತು ತನ್ನ ಮುದ್ದು ಮಕ್ಕಳಿಗೆ ತಾನು ಹೇಳಿದ ಈ ಸಲಾಮ್ ಕೊನೆಯದೆಂಬುದನ್ನರಿಯದ ಆ ಮಹದಿ ಮನೆಯ ಬಾಗಿಲ ತನಕ ಬಂದು ಸಂತೇೂಷದಿಂದ ಬೀಳ್ಕೊಟ್ಟರು.
ಅಂತೆಯೇ....
*ತಮ್ಮ ಬಾಳ ಸಂಗಾತಿಯನ್ನು ಕಾಣಲು ಇನ್ನೆಂದೂ ಹಿಂದಿರುಗಿ ಬರಲಾರೆನೆಂಬ ಸತ್ಯವರಿಯದ ಮುಸ್ಲಿಂ (ರ)ರವರು ಪತ್ನಿಯ ಸಲಾಮಿಗೆ ಉತ್ತರಿಸಿ ಮಕ್ಕಳೊಂದಿಗೆ ಕುದುರೆಯೇರಿ ಯಾತ್ರೆ ಹೊರಟರು.*
ಸುದೀರ್ಘವಾದ ಯಾತ್ರೆಯ ಮೂಲಕ ಮಕ್ಕಳೊಂದಿಗೆ ಕೂಫ ಪಟ್ಟಣ ತಲುಪಿದ *ಮುಸ್ಲಿಂ (ರ)ರವರು ಕೂಫದಲ್ಲಿ ಹಝ್ರತ್ ಹಾನಿಅ (ರ) ರವರ ಮನೆಯಲ್ಲಿ ತಂಗಿದರು. ಆ ಮನೆಯಲ್ಲಿ ಹಾನಿಯ(ರ)ರವರ ಹಿರಿಯ ಸಹೋದರರಾದ ಶಾರಿಕು ಇಬ್ನು ಅವ್ವಾಮ್ (ರ) ಕೂಡ ವಾಸವಾಗಿದ್ದರು.*
*ಹುಸೈನ್ (ರ) ರವರ* ಪ್ರತಿನಿಧಿಯಾಗಿ *ಮುಸ್ಲಿಂ (ರ) ರವರು* ಕೂಫಕ್ಕೆ ಆಗಮಿಸಿದ ವಿಷಯ ತಿಳಿದಾಗ, ಕೂಫದ ಜನತೆ ಗುಂಪು ಗುಂಪಾಗಿ ಹಾನಿಯಾ(ರ)ರವರ ನಿವಾಸಕ್ಕಾಗಮಿಸಿ *ಮುಸ್ಲಿಂ(ರ) ರವರನ್ನು* ಭೇಟಿಯಾಗಿ ತಮ್ಮ ಅಹವಾಲನ್ನು ಹೇಳಿ ಕೊಳ್ಳುತ್ತಾ ಹೇಗಾದರೂ ಮಾಡಿ *ಯಝೀದ್'ನ* ದುರಾಡಳಿತದಿಂದ ನಮ್ಮನ್ನು ರಕ್ಷಿಸಲಿಕ್ಕಾಗಿ ದಯವಿಟ್ಟು *ಹುಸೈನ್ (ರ) ರವರನ್ನು* ಬೇಗನೆ ಬರ ಹೇಳಿರಿ..! ನಿಮ್ಮೊಂದಿಗೆ ನಾವಿದ್ದೇವೆ. ಎಂತಹ ಪರಿಸ್ಥಿತಿಯಲ್ಲೂ ನಾವು ನಿಮ್ಮ ಕೈ ಬಿಡಲಾರೆವು ಹಾಗಾಗಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ *ಯಝೀದ್'ನನ್ನು* ಎದುರಿಸೇೂಣ ಎಂದರು.
ಆದರೆ ಕೂಫ ನಿವಾಸಿಗಳ ವಂಚನೆಯ ಅರಿವಿದ್ದ *ಮುಸ್ಲಿಂ(ರ) ರವರಿಗೆ* ಮೊದ ಮೊದಲು ಅವರ ಮಾತಿನಲ್ಲಿ ನಂಬಿಕೆ ಬರಲಿಲ್ಲ.
ಆದರೆ ಕೂಫದ ಜನತೆ ನಿರಂತರವಾಗಿ ಪ್ರತಿದಿನ ಅಲ್ಲಿಗಾಗಮಿಸಿ ದಯಮಾಡಿ ತಾವು *ಹುಸೈನ್ (ರ) ರವರನ್ನು* ಬರಲು ಹೇಳಿರಿ ಎಂದು ಪರಿಪರಿಯಾಗಿ ವಿನಂತಿಸಿ ಕೊಳ್ಳುತ್ತಿದ್ದ ಕಾರಣ, ಕೂಫ ನಿವಾಸಿಗಳ ಮಾತಿನಲ್ಲಿ ಸತ್ಯವಿರಬಹುದೆಂದು ಭಾವಿಸಿ ಹಾನಿಯ (ರ) ರೊಂದಿಗೆ ಚರ್ಚಿಸಿದ ನಂತರ *ಹುಸೈನ್(ರ)ರವರಿಗೆ* ಪತ್ರವೊಂದನ್ನು ಬರೆದರು...
ಪ್ರಿಯ ಹುಸೈನ್ (ರ)ರವರೇ....
*"ಕೂಫದ ಜನತೆಯ ಮಾತಿನಲ್ಲಿ ಸತ್ಯಾಂಶವಿರಬಹುದೆಂದು ನನಗನಿಸುತ್ತಿದೆ. ಅವರೆಲ್ಲರೂ ಒಮ್ಮತದಿಂದ ನಿಮ್ಮೊಂದಿಗೆ ನಿಲ್ಲುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ ತಾವು ಹೊರಟು ಕೂಫಕ್ಕೆ ಬರಬಹುದು" ಎಂದು ಬರೆದು ಪತ್ರವನ್ನು ಮಕ್ಕಕ್ಕೆ ಕಳುಹಿಸಿದರು.*
ಆದರೆ ಇತ್ತ *ಯಝೀದ್'ನ* ದುರಾಡಳಿತವನ್ನು ಬೆಂಬಲಿಸುತ್ತಿದ್ದ ಕೆಲವರೂ ಈ ಗುಂಪಿನಲ್ಲಿದ್ದು ಅವರು ಅಲ್ಲಿನ ಗವರ್ನರ್ ಆಗಿದ್ದ *ನುಅಮಾನ್ ಇಬ್ನು ಬಶೀರ್(ರ)ರವರ* ಬಳಿ ಹೇೂಗಿ "ಮಕ್ಕದಿಂದ ಮುಸ್ಲಿಂ (ರ) ಎಂಬ ಹೆಸರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ಕೂಫಕ್ಕಾಗಮಿಸಿದ್ದು *ಯಝೀದ್'ನ* ಆಡಳಿತದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದಾರೆ. ಹಾಗಾಗಿ ಅವರನ್ನು ಕೊಲ್ಲಬೇಕು ಅಥವಾ ಜೈಲಿಗಟ್ಟಬೇಕು ಎಂದು ಒತ್ತಡ ಹೇರಲಾರಂಭಿಸಿದರು.
ಆದರೆ ಪ್ರವಾದಿ ﷺ ರವರನ್ನು ಪ್ರೀತಿಸುತ್ತಾ ಅಹ್ಲ್'ಬೈತನ್ನು ಗೌರವದಿಂದ ಕಾಣುತ್ತಿದ್ದ ನುಅಮಾನು ಇಬ್ನು ಬಶೀರ್(ರ) ರವರು *"ಮುಸ್ಲಿಂ(ರ) ರವರು ಇಲ್ಲಿ ದೀನಿಗೆ ವಿರುದ್ಧವಾಗಿ ವರ್ತಿಸಿದರೆ ಮಾತ್ರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ. ಇಲ್ಲದಿದ್ದಲಿ ಅವರ ಮೇಲೆ ಅನಾವಶ್ಯಕ ಕ್ರಮ ಜರುಗಿಸಲು ಸಾಧ್ಯವಿಲ್ಲ"* ಎಂದು ಖಡಕ್ಕಾಗಿ ಹೇಳಿದಾಗ ಆ ಗುಂಪು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದರಾದರೂ ಮತ್ತೊಂದು ಮಸಲತ್ತು ಹೆಣೆಯಲು ತಂತ್ರ ರೂಪಿಸಿದರು. ⤵
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment