😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಶರಕ್(ರ)ರವರನ್ನು ಕಂಡ ಉಬೈದ್ ಕೇಳಿದ.. ⬇
ನಿನ್ನೆ ಸಭೆಯಲ್ಲಿ ನಾನಾಡಿದ ಮಾತುಗಳನ್ನು ನೀನು ಕೇಳಲಿಲ್ಲವೇ.? ಅಷ್ಟಕ್ಕೂ ನಿನಗೆ ಮರಣದ ಭಯವಿಲ್ಲವೇ.?
ಆಗ ಹಝ್ರತ್ ಶರಕ್(ರ) ರವರು ಹೇಳಿದರು..
*ಪ್ರವಾದಿ ﷺ ರವರ ಕುಟುಂಬಕ್ಕೆ ವಾಸ್ತವ್ಯ ಕಲ್ಪಿಸಿ ಸಂರಕ್ಷಣೆ ನೀಡಿದ ಕಾರಣಕ್ಕೆ ಜೀವವನ್ನೇ ಬಲಿದಾನಗೈಯ್ಯಬೇಕಾದ ಅನಿವಾರ್ಯತೆ ಎದುರಾದರೆ ಸಂತೇೂಷದಿಂದ ಅದನ್ನು ನಾನು ಸ್ವೀಕರಿಸುತ್ತೇನೆಯೇ ಹೊರತು ನಿನ್ನಂಥವನ ಜೊತೆ ಕೈ ಜೇೂಡಿಸಿ ಅಹ್ಲ್'ಬೈತಿಗೆ ವಂಚನೆಯೆಸಗಲಾರೆ. ಹೆಚ್ಚೆಂದರೆ ನನ್ನನ್ನು ನೀನು ಕೊಲ್ಲಬಹುದು ಅದಕ್ಕಿಂತ ಹೆಚ್ಚಾಗಿ ನಿನ್ನಿಂದ ಏನು ತಾನೆ ಮಾಡಲು ಸಾಧ್ಯವಿದೆ..? ಆದರೆ ಮರಣಾನಂತರ ಕೊನೆಯೆಂಬುದೇ ಇಲ್ಲದ ಸುವಿಶಾಲವಾದ ಮತ್ತೊಂದು ಬದುಕಿದೆ ಎಂಬುದು ನಿನಗೂ ನೆನಪಿರಲಿ ಎಂದರು.*
ಆಗ ಉಬೈದ್ ಹೇಳಿದ..
ನನಗೆ ನಿನ್ನ ಉಪದೇಶದ ಅವಶ್ಯಕತೆಯಿಲ್ಲ. ನೀನು ಹೇಳಿದಂತೆ ಅಷ್ಟು ಬೇಗನೆ ನಿನ್ನನ್ನು ನಾನು ಕೊಲ್ಲಲಾರೆ. ನಿನ್ನ ಮರಣವನ್ನು ಕಂಡು ಇಡೀ ಕೂಫವೇ ಕಂಪಿಸಬೇಕು. ಮತ್ತು ನಿನ್ನ ಮರಣದಿಂದ ಅವರೆಲ್ಲರೂ ಪಾಠ ಕಲಿಯಬೇಕು. ಅಷ್ಟು ಕ್ರೂರವಾಗಿ ನಿನ್ನನ್ನು ಕೊಲ್ಲುತ್ತೇನೆ. ಅಷ್ಟರ ತನಕ ನೀನು ಜೈಲಿನಲ್ಲಿರು ಎನ್ನುತ್ತಾ ಶರಕ್(ರ)ರನ್ನು ಜೈಲಿಗೆ ತಳ್ಳಿದನು.
ಉಬೈದ್'ನ ಸೈನಿಕರು ಶರಕ್(ರ)ರನ್ನು ಸೆರೆ ಹಿಡಿದ ಬಗ್ಗೆ ಮುಸ್ಲಿಂ (ರ)ರವರು ಕೂಫದ ಜನತೆಯನ್ನು ಸಮೀಪಿಸಿ ನಡೆದ ವಿಷಯಗಳನ್ನು ವಿವರಿಸಿ ಸುಮಾರು ಐನೂರು ಜನರನ್ನು ಸಂಘಟಿಸಿ ಶರಕ್(ರ) ರವರ ಬಿಡುಗಡೆಗೆ ಒತ್ತಾಯಿಸುವ ಸಲುವಾಗಿ ಉಬೈದ್ ತಂಗಿರುವ "ದಾರುಲ್ ಇಮಾರ" ಅರಮನೆಯತ್ತ ಹೊರಟರು.
ಜನರನ್ನು ಯಾವ ರೀತಿ ಬೆದರಿಸಿದರೆ ಚದುರುತ್ತಾರೆಂಬ ಬಗ್ಗೆ ಚೆನ್ನಾಗಿ ಅರಿವಿದ್ದ ಉಬೈದ್'ನು ಕೂಫದ ಜನತೆ ಸಂಘಟಿತರಾಗಿ ಬರುತ್ತಿರುವ ವಿಷಯ ತಿಳಿದೊಡನೆ ಸೈನಿಕರೊಂದಿಗೆ ಹೇಳಿದನು..
ನೀವು ಬಿಲ್ಲು, ಬಾಣ ಮತ್ತು ಈಟಿಗಳೊಂದಿಗೆ 'ದಾರುಲ್ ಇಮಾರ್'ನ ಮೇಲೆ ನಿಂತು ದಾಳಿ ನಡೆಸಲು ಸನ್ನದ್ಧರಾಗಿರುವವರಂತೆ ಸಂಘಟಿತರಾಗಿ ಬರುತ್ತಿರುವ ಜನರಲ್ಲಿ ಭೀತಿ ಮೂಡಿಸಬೇಕು.
ಆದರೆ ಯಾರನ್ನೂ ವಧಿಸಬಾರದು. ಅವರಲ್ಲಿ ಭೀತಿ ಮೂಡಿಸಿದರೆ ಸಾಕು. ಎಂದನು.
ಮುಸ್ಲಿಂ (ರ) ರವರ ನೇತೃತ್ವದಲ್ಲಿ ಹೊರಟ ಐನೂರು ಜನರ ಗುಂಪು ದಾರುಲ್ ಇಮಾರ್'ನ ಅಂಗಳಕ್ಕೆ ತಲುಪುತ್ತಿದ್ದಂತೆ ಉಬೈದ್'ನ ಸೈನಿಕರು ಗೌಜು, ಗದ್ದಲವೆಬ್ಬಿಸುತ್ತಾ ಬಿಲ್ಲು ಬಾಣಗಳಿಂದ ದಾಳಿ ನಡೆಸಲು ಸಿದ್ಧರಾಗಿರುವವರಂತೆ ನಟಿಸಲಾರಂಭಿಸಿದರು.
ಇದನ್ನು ಕಂಡು ಭಯ ಭೀತರಾದ ಜನತೆ ಮುಸ್ಲಿಂ (ರ) ರವರನ್ನು ಅಲ್ಲೇ ಬಿಟ್ಟು ಹಿಂದಿರುಗಿ ಓಡಲಾರಂಭಿಸಿದರು.
ಸೈನಿಕರ ಹಾಹಾಕಾರ, ಗೌಜು ಮತ್ತು ಗದ್ದಲದಿಂದಾಗಿ ತಮ್ಮ ಹಿಂದೆ ಬರುತ್ತಿರುವ ಗುಂಪು ಹಿಂದಿರುಗಿ ಓಡಿದ ವಿಷಯ ಮುಸ್ಲಿಂ (ರ) ರವರ ಗಮನಕ್ಕೆ ಬರಲಿಲ್ಲ. ಹಾಗಾಗಿ ಮತ್ತಷ್ಟು ಮುಂದೆ ನಡೆದರು.
ಒಂಟಿಯಾಗಿ ಬರುತ್ತಿರುವ ಮುಸ್ಲಿಂ(ರ) ರವರನ್ನು ಕಂಡ ಉಬೈದ್, ಅಟ್ಟಹಾಸಗೈಯ್ಯುತ್ತಾ....
*"ಆ ಮಕ್ಕ ನಿವಾಸಿಯನ್ನು ಹಿಡಿಯಿರಿ" ಎಂದು ಆಜ್ಞಾಪಿಸಿದನು.*
ಮಹಾನರಾದ ಮುಸ್ಲಿಂ (ರ)ರವರನ್ನು ಸೆರೆ ಹಿಡಿಯಲೆಂದು ಉಬೈದ್'ನ ಸೈನಿಕ ಪಡೆ ಅತ್ತ ಧಾವಿಸಿದಾಗ
ಮುಸ್ಲಿಂ (ರ) ರವರು ನಿಂತಲ್ಲಿಂದಲೇ ಹಿಂದಿರುಗಿ ನೋಡಿದರು. ಆಗ ತಮ್ಮ ಹಿಂದಿದ್ದ ಜನತೆ ಹಿಂದಿರುಗಿ ಓಡುತ್ತಿರುವುದು ಕಾಣಿಸಿತು....
ಇದರಿಂದ ಕಂಗಾಲಾದ ಮುಸ್ಲಿಂ(ರ)ರವರಿಗೆ ತಾವೊಬ್ಬರೇ ಆ ಸೈನಿಕ ಪಡೆಯನ್ನು ಎದುರಿಸಲು ಸಾಧ್ಯವೂ ಇಲ್ಲ. ಮತ್ತು ತಾವು ಸೈನಿಕರ ಕೈಗೆ ಸಿಕ್ಕಿದರೆ ಶರಕ್(ರ)ರನ್ನು ಬಿಡಿಸಲು ಮತ್ತೆಂದೂ ಸಾಧ್ಯವಾಗದು ಹಾಗಾಗಿ ಸದ್ಯದ ಮಟ್ಟಿಗೆ ಸೈನಿಕರಿಂದ ತಪ್ಪಿಸಿಕೊಳ್ಳಲೇಬೇಕೆಂಬ ಉದ್ದೇಶದಿಂದ ಮುಸ್ಲಿಂ (ರ) ರವರೂ ಹಿಂದಿರುಗಿ ಓಡಲಾರಂಭಿಸಿದರು.
ಉಬೈದ್'ನ ಸೈನಿಕ ಪಡೆಯು ಅಷ್ಟಕ್ಕೆ ಸುಮ್ಮನಾಗದೆ ಮುಸ್ಲಿಂ(ರ)ರವರನ್ನು
ಬೆನ್ನಟ್ಟಲಾರಂಭಿಸಿತು.
ಬಹಳಷ್ಟು ದೂರ ಓಡಿದ ಮುಸ್ಲಿಂ(ರ)ರವರು, ದಾರಿ ಬದಲಿಸಿ ಗಿಡ ಮರಗಳಿಂದಾವೃತವಾದ ಓಣಿಯೊಂದರಲ್ಲಿ ನುಗ್ಗಿ ತಪ್ಪಿಸಿಕೊಂಡು ಮತ್ತಷ್ಟು ದೂರ ಓಡಿದಾಗ ದೂರದಲ್ಲಿ ಮನೆಯೊಂದು ಕಾಣಿಸಿತು.
ಸೈನಿಕರು ಬರುತ್ತಿಲ್ಲವೆಂಬುದನ್ನು ಮನವರಿಕೆ ಮಾಡಿಕೊಂಡು ಆ ಮನೆಯತ್ತ ಹೆಜ್ಜೆ ಹಾಕಿದ ಮುಸ್ಲಿಂ(ರ)ರವರು ಬಾಗಿಲು ತಟ್ಟಿದರು.
ಆಗ ಆ ಮನೆಯಲ್ಲಿದ್ದ ವೃದ್ಧೆಯಾದ ಮಹಿಳೆಯೊಬ್ಬರು ಕದ ತೆರೆದರು...
ಅಜ್ಜೀ.....
ನನಗೆ ಕುಡಿಯಲು ಸ್ವಲ್ಪ ನೀರು ಕೊಡುವಿರಾ...? ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
No comments:
Post a Comment