😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣2⃣
**********************
*صَـلــُّوا عَـلَـى النَّبِيِّ ﷺ وَآلـِهِ*
*اللَّهُمَّ صَلِّ عَلَى سَيِّدِنَا مُحَمَّدٍ*
*عَدَدَ مَا فِي عِلْمِ الله*
*صَلاَةً دَائِمَةً بِدَوَامِ مُلْكِ الل
☔☔☔☔☔☔☔☔☔
ಉಬೈದ್'ನ ಸೈನಿಕರಿಂದ ತಪ್ಪಿಸಿಕೊಂಡು ಬಂದ ಮುಸ್ಲಿಂ(ರ)ರವರು ಕಾಡಿನ ನಡುವೆಯಿದ್ದ ಮನೆಯೊಂದರ ಬಾಗಿಲು ಬಡಿದು ಕುಡಿಯಲು ನನಗೆ ಸ್ವಲ್ಪ ನೀರು ಕೊಡುವಿರಾ? ಎಂದು ಕೇಳಿದಾಗ..
ಆ ಮನೆಯಲ್ಲಿದ್ದ ಅಜ್ಜಿ ನೀರು ತಂದು ಕೊಟ್ಟು ತಾವು ಯಾರು? ಯಾಕೆ ಹೀಗೆ ಎದುಸಿರು ಬಿಡುತ್ತಿರುವಿರಿ? ಏನಾಯಿತು?
ಎಂದೆಲ್ಲ ಪ್ರಶ್ನಿಸಿದರು....
ಮುಸ್ಲಿಂ (ರ) ಹೇಳಲಾರಂಭಿಸಿದರು...
*ನಾನು ಹಝ್ರತ್ತ್ ಹುಸೈನ್ (ರ) ರವರ ಪ್ರತಿನಿಧಿಯಾಗಿ ಮಕ್ಕಾದಿಂದ ಕೂಫದ ಜನತೆಗೆ ನೆರವಾಗಲು ಬಂದವನು. ಎನ್ನುತ್ತಾ ಎಲ್ಲವನ್ನೂ ವಿವರಿಸಿ ಕೊನೆಗೆ..*
*ಈಗ ಉಬೈದ್'ನ ಕಿಂಕರರಿಂದ ತಪ್ಪಿಸಿಕೊಂಡು ಬಂದೆ ಎಂದರು.*
ವಿಷಯವನ್ನೆಲ್ಲ ಕೇಳಿ ತಿಳಿದ ಆ ಅಜ್ಜಿ "ಅಲ್ ಹಮ್ದುಲ್ಲಿಲ್ಲಾಹ" الحمد لله ಎನ್ನುತ್ತಾ....
ಹಾಗಾದರೆ ತಾವಿಂದು ಇಲ್ಲಿಯೇ ಇರಿ..! ಉಬೈದ್'ನ ಸೈನಿಕರು ಕಾಡಿನೊಳಗಿರುವ ಈ ಮನೆಗೆ ಬರಲಾರರು. ಆದ್ದರಿಂದ ತಾವು ಇಲ್ಲಿ ಆರಾಮವಾಗಿರಬಹುದು ಎಂದರು. ಅಜ್ಜಿಯ ಮಾತಿಗೆ ಸರಿ ಎಂದು ಸಮ್ಮತಿಸಿದ ಮುಸ್ಲಿಂ (ರ) ಅಂದು ಅಲ್ಲೇ ತಂಗಿದರು.
ಆಗ ಮತ್ತೊಂದೆಡೆ, ಮುಸ್ಲಿಂ (ರ) ಸೈನಿಕರಿಂದ ತಪ್ಪಿಸಿಕೊಂಡ ವಿಷಯ ತಿಳಿದ ಉಬೈದ್....
ಮುಸ್ಲಿಂ (ರ) ರನ್ನು ತೋರಿಸಿ ಕೊಟ್ಟವರಿಗೆ "ಸಾವಿರ ದೀನಾರ್" ಬಹುಮಾನ ನೀಡಲಾಗುವುದು ಎಂದು ಪ್ರಖ್ಯಾಪಿಸಿದನು.
ಆ ಅಜ್ಜಿಗೊಬ್ಬ ಮಗನಿದ್ದು ಆತ ಉಬೈದ್'ನ ಪ್ರಖ್ಯಾಪನೆಯ ಬಗ್ಗೆ ತಿಳಿದಾಗ ಆ ಮುಸ್ಲಿಂ (ರ) ಎಲ್ಲಿರುವರೆಂದು ತಿಳಿದಿದ್ದರೆ ತೋರಿಸಿ ಕೊಟ್ಟು ಆ ಬಹುಮಾನವನ್ನು ತನ್ನದಾಗಿಕೊಳ್ಳಬಹುದಾಗಿತ್ತು ಎಂದೆಲ್ಲಾ ಯೇೂಚಿಸುತ್ತಾ...
ಮನೆಗೆ ಬಂದನು.
ತನ್ನ ಮಗನನ್ನು ಕಂಡೊಡನೆ ಆ ತಾಯಿ ಹೇಳಿದರು; ಮಗನೇ..
*ಇಂದು ಈ ಮನೆ ಪ್ರವಾದಿ ﷺ ರ ಕುಟುಂಬದ ಸಾನಿಧ್ಯದಿಂದ ಅನುಗ್ರಹೀತವಾಗಿದೆ. ಅಂದರೆ ಹುಸೈನ್(ರ) ರವರ ಪ್ರತಿನಿಧಿಯಾಗಿ ಮಕ್ಕಾದಿಂದ ಆಗಮಿಸಿರುವ ಮುಸ್ಲಿಂ (ರ) ರಿಗೆ ಇಂದು ನಮ್ಮ ಮನೆಯಲ್ಲಿ ಅಭಯ ನೀಡುವ ಸೌಭಾಗ್ಯ ನಮಗೆ ಲಭಿಸಿದೆ ಎಂದರು.*
"ಹುಡುಕುವ ಬಳ್ಳಿ ಕಾಲಿಗೆ ಸುತ್ತಿಕೊಂಡಿತು" ಎಂಬಂತೆ
ಈ ವಿಷಯ ತಿಳಿದ ಆತ ಸಂತಸದಿಂದ ಕುಣಿದಾಡಿದ. ಇದನ್ನು ಕಂಡ ತಾಯಿ ಕೇಳಿದರು,
ನಿನಗೇನಾಯಿತು? ಯಾಕೆ ಹೀಗೆ ಕುಣಿದಾಡುತ್ತಿರುವೆ?
ಅಮ್ಮಾ ನಿಮ್ಮ ಮುಖದ ಸಂತೋಷ ಕಂಡಾಗ ನನಗೂ ಸಂತೋಷ ತಾಳಲಾಗಲಿಲ್ಲ ಎಂದ.
ಅಂದು ರಾತ್ರಿ ಎಲ್ಲರೂ ನಿದ್ರೆಗೆ ಜಾರಿದ್ದರೆ, ಆ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದ ಇಬ್ಬರಿಗೆ ಮಾತ್ರ ಅರ್ಧ ರಾತ್ರಿಯಾದರೂ ನಿದ್ರೆ ಬರಲಿಲ್ಲ.
ಒಂದೆಡೆ ಮುಸ್ಲಿಂ (ರ) ತಮ್ಮ ಮಕ್ಕಳಿಬ್ಬರು ಶರಕ್ ಇಬ್ನು ಅವಾಂ (ರ) ರವರ ಮನೆಯಲ್ಲಿದ್ದಾರೆ. ಅವರ ಸ್ಥಿತಿ ಏನಾಗಿರಬಹುದೆಂದು ಯೇೂಚಿಸುತ್ತಾ ತಳಮಳದಿಂದ ಮರುಗುತ್ತಿದ್ದರು.
ಮತ್ತೊಂದೆಡೆ ಆ ಅಜ್ಜಿಯ ಮಗನಾದ ಆ ಮನುಷ್ಯ, ಮುಸ್ಲಿಂ (ರ)ರವರು ತನ್ನ ಮನೆಯಲ್ಲಿರುವ ಸಂಗತಿಯನ್ನು ಉಬೈದ್'ನಿಗೆ ಯಾವ ರೀತಿ ತಲುಪಿಸಲಿ ಎಂದು ಚಿಂತಿಸುತ್ತಾ ತೊಳಲಾಡುತ್ತಿದ್ದ.
ಮಧ್ಯರಾತ್ರಿಯಾಗುತ್ತಿದ್ದಂತೆ ಸದ್ದಾಗದಂತೆ ಮೆಲ್ಲನೆ ಮನೆಯಿಂದ ಹೊರ ಬಂದ ಆ ದುಷ್ಟ ಮನುಷ್ಯ ಬೀದಿಗಿಳಿದು ನೇರವಾಗಿ ಉಬೈದ್'ನ ಅರಮನೆಯತ್ತ ಹೆಜ್ಜೆ ಹಾಕಲಾರಂಭಿಸಿದ...!
ಉಬೈದ್ ತಂಗಿರುವ "ದಾರುಲ್ ಇಮಾರ" ಸೌಧಕ್ಕೆ ತಲುಪುತ್ತಿದ್ದಂತೆ ಮೊದಲಿಗೆ ಆತನಿಗೆ ನುಅಮಾನ್ ಇಬ್ನು ಬಶೀರ್(ರ) ಎದುರಾದರು. ಆಗ ಅವರೊಂದಿಗೆ ಮುಸ್ಲಿಂ (ರ) ತನ್ನ ಮನೆಯಲ್ಲಿ ಆಶ್ರಯ ಪಡೆದಿರುವ ವಿಷಯ ತಿಳಿಸಿದಾಗ ಸರಿ ನೀನೀಗ ಹೇೂಗು. ಆಮೇಲೆ ಬೇಕಾದ ವ್ಯವಸ್ಥೆ ಮಾಡೇೂಣ ಎಂದರು.
ಆದರೆ ಇದರಿಂದ ತೃಪ್ತನಾಗದ ಆ ವ್ಯಕ್ತಿ ಸ್ವಲ್ಪ ದೂರ ಹೇೂಗಿ ಮತ್ತೆ ಹಿಂದಿರುಗಿ ಬಂದ. ಆಗ ಉಬೈದ್ ಒಬ್ಬನೇ "ದಾರುಲ್ ಇಮಾರ್" ಅರಮನೆಯ ಮುಂದೆ ಕುಳಿತಿದ್ದ. ಕೂಡಲೆ ಉಬೈದ್'ನನ್ನು ಭೇಟಿಯಾಗಿ ಸಂಗತಿ ತಿಳಿಸುತ್ತಿದ್ದಂತೆ ಮುಸ್ಲಿಂ (ರ)ರನ್ನು ಸೆರೆ ಹಿಡಿಯುವ ಸಲುವಾಗಿ ಉಬೈದ್ ತಕ್ಷಣ ನೂರಾ ಇಪ್ಪತ್ತು ಸೈನಿಕರನ್ನು ಆ ವ್ಯಕ್ತಿಯೊಂದಿಗೆ ಕಳುಹಿಸಿದ..!
ಮರುದಿನ ಬೆಳಿಗ್ಗೆ ಸುಬಹಿ ನಮಾಝ್'ಗಾಗಿ ವುಲೂಅ್ ಮಾಡಲೆಂದು ಹೊರಗಿಳಿದ ಮುಸ್ಲಿಂ (ರ) ರನ್ನು ಹೊರಗೆ ಜಮಾಯಿಸಿದ್ದ ಸೈನಿಕರು ಸುತ್ತುವರಿದರು.
ಅಪಾಯದ ಅರಿವಾದ ಮುಸ್ಲಿಂ (ರ) ತಕ್ಷಣ ಒರೆಯಿಂದ ತನ್ನ ಖಡ್ಗವನ್ನು ಎಳೆದರು.... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment