Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰  🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣5⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
ಮಕ್ಕಳೇ ಯಾರು ನೀವು?
ಮರದಲ್ಲೇಕೆ ಕುಳಿತಿರುವಿರಿ ?
ಕೆಳಗಿಳಿಯಿರಿ ಎಂದಳು.. ⬇

ಮೊದಲೇ ಭಯವಿಹ್ವಲರಾಗಿದ್ದ
ಬೌದ್ಧಿಕ ಪರಿಪಕ್ವತೆಯೂ ಇಲ್ಲದ ಆ ಕಂದಮ್ಮಗಳು ಏನೂ ಹೇಳದೆ ಸುಮ್ಮನೆ ಕುಳಿತಿರುವುದನ್ನು ಕಂಡು ಮತ್ತೊಮ್ಮೆ ಹೇಳಿದಳು...

*ಭಯಪಡಬೇಡಿ ಮಕ್ಕಳೇ... ಧೈರ್ಯದಿಂದ ಕೆಳಗಿಳಿದು ಬನ್ನಿ.*

ವಾತ್ಸಲ್ಯಪೂರಿತವಾದ ಆ ಕರೆಯಿಂದ ತುಸು ಧೈರ್ಯ ತಂದುಕೊಂಡ ಆ ಮಕ್ಕಳು ಕೆಳಗಿಳಿದು ಬಂದು...

*"ನಾವು ಮಕ್ಕಾದವರಾಗಿದ್ದೇವೆ. ನಮ್ಮ ತಂದೆಯಾದ ಮುಸ್ಲಿಂ (ರ)ರನ್ನು ಕೂಫದ ಸೈನಿಕರು ವಧಿಸಿದ್ದಾರೆ. ನಮ್ಮ ಜೀವಕ್ಕೂ ಅಪಾಯವಿದೆಯಂತೆ ಹಾಗಾಗಿ ನಾವು ಮಕ್ಕಕ್ಕೆ ಹಿಂದಿರುಗುತ್ತಿದ್ದೇವೆ" ಎಂದರು.*

ಇದಿಷ್ಟನ್ನು ಕೇಳುತ್ತಿದ್ದಂತೆ ವಿಷಯದ ಗಂಭೀರತೆಯನ್ನು ಗ್ರಹಿಸಿದ ಆ ಮಹಿಳೆ, ಮಕ್ಕಳನ್ನು ತಬ್ಬಿಕೊಂಡು ಸಂತೈಸುತ್ತಾ ತನ್ನೊಂದಿಗೆ ಕರೆದೊಯ್ದು ತನ್ನ ಯಜಮಾನಿಯಾದ *ತುವಾಅ(ರ)* ಎಂಬ ಎಂಬಾಕೆಯೊಂದಿಗೆ ಎಲ್ಲ ವಿಷಯವನ್ನೂ ವಿವರಿಸಿದಳು.

ಮಕ್ಕಳಿಲ್ಲದ *ತುವಾಅ(ರ)* ಆ ಕಂದಮ್ಮಗಳನ್ನು ಬಿಗಿದಪ್ಪಿ ಸಂತೈಸುತ್ತಾ ಹೇಳಿದರು...

ಮಕ್ಕಳಿಲ್ಲದೆ ಕೊರಗುತ್ತಿದ್ದ ನನ್ನ ಕೊರಗನ್ನು ನೀಗಿಸಲು ಅಲ್ಲಾಹನು ಕರುಣಿಸಿದ ಸೌಭಾಗ್ಯವಿದೆಂದು ನಾನು ಭಾವಿಸುವೆ. ಆದ್ದರಿಂದ ಮಕ್ಕಳೇ ನನ್ನ ಮುಖ ನೇೂಡುತ್ತಾ ಒಮ್ಮೆ *ಉಮ್ಮಾ* ಎಂದು ನನ್ನನ್ನು ಕರೆಯುವಿರಾ ಎಂದರು ಕಂಬನಿಗರೆಯುತ್ತಾ...

( *_ಮಕ್ಕಳಿಲ್ಲದೆ ಕೊರಗುತ್ತಾ ಬೆಲೆಕಟ್ಟಲಾಗದ "ಉಮ್ಮಾ" ಎಂಬ ಎರಡಕ್ಷರದ ಕರೆಯನ್ನು ತಮ್ಮ ಹೆತ್ತ ಮಕ್ಕಳ ಬಾಯಿಂದ ಕೇಳಬೇಕೆಂಬ ಕಾತರದಿಂದ  ಕನವರಿಸುತ್ತಾ ಹಂಬಲಿಸುವ ಮನದೊಂದಿಗೆ ಕಂಬನಿ ಮಿಡಿಯುತ್ತಿರುವ ಅದೆಷ್ಟೇೂ ಸಹೇೂದರಿಯರು ನಮ್ಮ ನಡುವೆಯಿರಬಹುದು. ಕರುಣಾನಿಧಿಯಾದ ಅಲ್ಲಾಹನು ಕರ್ಬಲಾ ಶುಹದಾಗಳ ಹಕ್ಕ್'ಜಾಹ್ ಬರ್ಕತ್'ನಿಂದ ಅಂತಹ ಮಾತೃ ಹೃದಯಿಗಳಿಗೆ ಸ್ವಾಲಿಹಾದ ಮಕ್ಕಳನ್ನು ದಯಪಾಲಿಸಿ ಅನುಗ್ರಹಿಸಲಿ ಆಮೀನ್_* )

ಹಲವು ದಿನಗಳಿಂದ ತಾಯಿಯಿಂದಲೂ ದೂರಾಗಿ ಇದೀಗ ತಂದೆಯನ್ನೂ ಕಳೆದುಕೊಂಡು ತಬ್ಬಲಿಯಾಗಿ ದಿಕ್ಕುದೆಸೆಯಿಲ್ಲದೆ ಕಂಗಾಲಾಗಿದ್ದ ಆ ಮುದ್ದು ಮಕ್ಕಳು ಈ ವಾತ್ಸಲ್ಯದಿಂದೊಡಗೂಡಿದ ಕೇೂರಿಕೆಯಿಂದ ಉಲ್ಲಸಿತರಾಗಿ "ತುವಾಅ" ಎಂಬ ಮಹಿಳೆಯ ಮುಖ ನೋಡುತ್ತಾ ಬಾಯಿ ತುಂಬಾ *ಉಮ್ಮಾ* ಎನ್ನುತ್ತಾ ಬಿಗಿದಪ್ಪಿದಾಗ...

ಸಂತಾನವಿಲ್ಲದ ಕೊರಗಿನಿಂದ ಬರಡಾದ ಕೊರಡಿನಂತೆ ಜೀವನ ನಡೆಸುತ್ತಿದ್ದ ಆ ಮಹಿಳೆಗೆ ಈ ಎಳೆ ಕಂದಮ್ಮಗಳ ಆಂತರ್ಯದಿಂದ ಹೊರಹೊಮ್ಮಿದ ಅಪ್ಯಾಯಮಾನತೆಯಿಂದೊಡಗೂಡಿದ ಆರ್ತನಾದದ ಕರೆಗೆ ಆಕೆಯ ಹೃನ್ಮನಗಳು ತುಂಬಿ ಕಣ್ಣಂಚಿನಲಿ ಆನಂದಾಶ್ರುಗಳು ತೊಟ್ಟಿಕ್ಕಿದಾಗ ತುಂಬಿದ ಹೃದಯದೊಂದಿಗೆ ಆ ಮುದ್ದು ಕಂದಮ್ಮಗಳನ್ನು ತನ್ನೆದೆಗಪ್ಪಿ ಚುಂಬಿಸುತ್ತಾ ಮಕ್ಕಳೇ ಭಯಪಡಬೇಡಿ ನನ್ನ ಜೀವವಿರುವ ತನಕ ನಾನು ನಿಮಗೆ ಅಭಯ ನೀಡಿ ಸಂರಕ್ಷಿಸುತ್ತೇನೆ ಎನ್ನುತ್ತಾ ಮುಂದುವರಿದು...

"ಈ ಕಾಡನ್ನು ದಾಟಿ ಉಬೈದಾಗಲೀ ಅಥವಾ ಅವನ ಸೈನಿಕರಾಗಲೀ ಇಲ್ಲಿಗೆ  ಬರಲಾರರು. ಆದರಿಂದ ನೀವಿಬ್ಬರೂ ಯಾವುದೇ ಅಳುಕು, ಅಂಜಿಕೆಗಳಿಲ್ಲದೆ  ಸುರಕ್ಷಿತವಾಗಿ ನನ್ನ ಮಕ್ಕಳಂತೆ ಇಲ್ಲಿರಬಹುದು." ಎನ್ನುತ್ತಾ ಮಕ್ಕಳನ್ನು ಸ್ನಾನ ಮಾಡಿಸಿ ಊಟ ಬಡಿಸಿದಳು.

ಹೊಟ್ಟೆಗೆ ಆಹಾರವೂ ಇಲ್ಲದೆ ಜೀವ ಭಯದಿಂದ ದಿನವಿಡೀ ಓಡಿ ನಿದ್ರೆಯೂ ಇಲ್ಲದೆ ಬಳಲಿದ್ದ ಆ ಮಕ್ಕಳು ಸ್ವಲ್ಪ ಹೊತ್ತು ಮಲಗಿ ನಿದ್ರಿಸಿದವು.

ಆದರೆ ತುವಾಅ (ರ)ರಿಗೆ ಅಬ್ದುಲ್ಲ ಎಂಬ ಪತಿಯಿದ್ದು, ಆತ ಮದ್ಯಪಾನಿಯೂ ಮಹಾ ವಂಚಕನೂ, ಮದ್ಯದ ಅಮಲು ತಲೆಗೇರಿದಾಗ ಏನು ಮಾಡಲೂ ಹೇಸದ ಕ್ರೂರಿಯೂ ಆಗಿದ್ದ.

ಹಾಗಾಗಿ ತುವಾಅ (ರ) ಮುಸ್ಸಂಜೆಯಾಗುತ್ತಿದ್ದಂತೆ ಬೇಗನೆ ಮಕ್ಕಳಿಗೆ ಉಣ ಬಡಿಸಿ ಒಳ ಕೇೂಣೆಯೊಂದರಲ್ಲಿ ಮಲಗಿಸಿದಳು. ನಂತರ ಪತಿ ಬಂದಾಗ ಆತನಿಗೂ ಆಹಾರ ಕೊಟ್ಟು ಮತ್ತೊಂದು ಕೇೂಣೆಯಲ್ಲಿ ಆತನನ್ನು ಮಲಗಿಸಿದಳು.

*"ಮುಸ್ಲಿಂ (ರ)ರವರ ಮಕ್ಕಳನ್ನು ತಂದೊಪ್ಪಿಸಿದವರಿಗೆ ಸಾವಿರ ದೀನಾರ್ ಬಹುಮಾನ ಕೊಡುವುದಾಗಿ ಉಬೈದ್ ಘೇೂಷಿಸಿರುವ ಘೇೂಷಣೆಯ ಬಗ್ಗೆ ಅಬ್ದುಲ್ಲನಿಗೆ ತಿಳಿದಿತ್ತು. ಆದರೆ ಆ ಮಕ್ಕಳು ತನ್ನ ಮನೆಯಲ್ಲೇ ಇದ್ದಾರೆನ್ನುವ ವಿಷಯ ಮಾತ್ರ ಆತನಿಗೆ ತಿಳಿದಿರಲಿಲ್ಲ."*

ಆದರೆ ಸೃಷ್ಟಿಕರ್ತನ ವಿಧಿಯನ್ನು ಸೃಷ್ಟಿಗಳಿಂದ ತಡೆಯಲು ಸಾಧ್ಯವೇ...?

ಒಳಕೇೂಣೆಯಲ್ಲಿ ಮಲಗಿರುವ ಮಕ್ಕಳಿಗೊಂದು ಕನಸು...

*ಅಲ್ಲಾಹನ ರಸೂಲರೂ ಈ ಮಕ್ಕಳ ಪಿತಾಮಹರೂ ಆದ ಸಯ್ಯದುನಾ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಈ ಮಕ್ಕಳ ತಂದೆಯಾದ ಮುಸ್ಲಿಂ (ರ) ರೊಂದಿಗೆ ಕೇಳುತ್ತಿದ್ದಾರೆ...*

"ಮಕ್ಕಳನ್ನು ಯಾರ ಬಳಿ ಬಿಟ್ಟು ಬಂದೆ?" ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment