Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 2⃣6⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
☔☔☔☔☔☔☔☔☔

"ಮಕ್ಕಳನ್ನು ಯಾರ ಬಳಿ ಬಿಟ್ಟು ಬಂದೆ..? ⬇

*ಅಲ್ಲಾಹನ ರಸೂಲರೊಂದಿಗೆ ತಂದೆಯನ್ನು ಕಂಡಿದ್ದೇ ತಡ, ಮಕ್ಕಳಿಬ್ಬರೂ ಉಪ್ಪಾ... ಉಪ್ಪಾ... ಎಂದು ಅರಚುತ್ತಾ ಎಚ್ಚೆತ್ತವಾದರೂ ತಂದೆಯನ್ನು ಕಾಣದೆ ಅಳಲಾರಂಭಿಸಿದವು.*

ಮತ್ತೊಂದು ಕೇೂಣೆಯಲ್ಲಿ ಮಲಗಿದ್ದ ಅಬ್ದುಲ್ಲನಿಗೆ ಮಕ್ಕಳ ಅಳು ಕೇಳಿ ದಡಕ್ಕನೆ ಎದ್ದು ಕುಳಿತ...

ಕೂಡಲೇ ಪತ್ನಿಯನ್ನು ತಟ್ಟಿ ಎಬ್ಬಿಸಲೆತ್ನಿಸಿದ. ಆದರೆ ಮಕ್ಕಳಿಗೆ ಅಭಯ ನೀಡಿದ್ದ ತುವಾಅ(ರ) ಮಕ್ಕಳ ಅಳು ಕೇಳಿ "ಯಾ ಅಲ್ಲಾಹ್ ಆ ಮಕ್ಕಳಿಗೆ ಸಂರಕ್ಷಣೆ ನೀಡು ನಾಥಾ" ಎಂದು ಮನದಲ್ಲೇ  ಅಲ್ಲಾಹನಲ್ಲಿ ಮೊರೆಯಿಡುತ್ತಾ... ನಿದ್ರಿಸುತ್ತಿರುವವಳಂತೆ ಮಲಗಿದ್ದಳು.

ಅಬ್ದುಲ್ಲ ಪುನಃ ತುವಾಅ(ರ)ರನ್ನು ತಟ್ಟಿ ಎಬ್ಬಿಸಿ ಕೇಳಿದನು. ನಿನಗೆ ಮಕ್ಕಳ ಅಳು ಕೇಳಿಸುತ್ತಿಲ್ಲವೇ...?

ಆಗ ತುವಾಅ (ರ) ನನಗೆ ಕೇಳಿಸಲಿಲ್ಲವಲ್ಲ? ಕುಡಿತದ ಅಮಲಿನಲ್ಲಿ ನಿಮಗೆ ತೋಚಿದ್ದಾಗಿರಬಹುದು ಸುಮ್ಮನೆ ಮಲಗಿ ಎಂದಳು.

ಆದರೆ ತುವಾಅ(ರ)ರವರ ಮಾತಿನಿಂದ ಸಮಾಧಾನವಾಗದ ಅಬ್ದುಲ್ಲ ಪಟ್ಟು ಬಿಡದೆ, ಮಕ್ಕಳ ಅಳು ಕೇಳಿಸಿದ್ದು ನಮ್ಮ ಮನೆಯ ಒಳ ಕೇೂಣೆಯಿಂದಲೇ ಸತ್ಯ ಹೇಳು ಯಾರವರು? ಎಂದು ಕೇಳಿದನು.

ಗತ್ಯಂತರವಿಲ್ಲದೆ ಕೊನೆಗೆ  ತುವಾಅ(ರ) ಅಬ್ದುಲ್ಲನಿಗೆ ವಿಷಯವನ್ನೆಲ್ಲ ವಿವರಿಸಿದರು.

ತುವಾಅಳ(ರ) ಮಾತು ಕೇಳಿದ ಅಬ್ದುಲ್ಲನ ಮುಖವರಳಿತು.  ಆ ಮಕ್ಕಳನ್ನು ಹಿಡಿದು ಕೊಟ್ಟವರಿಗೆ ಉಬೈದ್'ನಿಂದ ಸಾವಿರ ದಿನಾರ್ ಬಹುಮಾನವಿದೆ. ಆದರಿಂದ ಬೇಗನೆ ಆ ಮಕ್ಕಳನ್ನು ಉಬೈದ್'ನಿಗೆ ಹಸ್ತಾಂತರಿಸಿ ಮೆಚ್ಚುಗೆಯೊಂದಿಗೆ ಸಾವಿರ ದೀನಾರ್ ಬಹುಮಾನವನ್ನೂ ಪಡೆಯಬೇಕು. ಎನ್ನುತ್ತಾ  ಮೊದಲೇ ಮದ್ಯದ ಅಮಲಿನಲ್ಲಿದ್ದ ಆತ ಎದ್ದು ಮಕ್ಕಳು ಮಲಗಿರುವ ಕೇೂಣೆಗೆ ಹೇೂದವನು,

*ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಕುಗ್ಗಿ ಹೇೂಗಿದ್ದ ಆ ಎರಡು ಮುದ್ದು ಕಂದಮ್ಮಗಳ ತಲೆಗೂದಲನ್ನು ಹಿಡಿದು ಎಳೆದೊಯ್ಯಲಾರಂಭಿಸಿದ.*

ಇದನ್ನು ಕಂಡ ತುವಾಅ(ರ) ತಕ್ಷಣ ಮಕ್ಕಳ ರಕ್ಷಣೆಗೆ ಧಾವಿಸಿ,

*"ಮಕ್ಕಳಿಲ್ಲದೆ ಕೊರಗುತ್ತಿದ್ದ ನನಗೆ ಅಲ್ಲಾಹನು ಕರುಣಿಸಿದ ಸೌಭಾಗ್ಯವಿದು. ಹಾಗಾಗಿ ಈ ಮಕ್ಕಳನ್ನು ಕ್ರೂರಿಯಾದ ಆ ಉಬೈದ್'ನ ಕೈಗೊಪ್ಪಿಸಲು  ನನ್ನ ಜೀವವಿರುವ ತನಕ ಬಿಡಲಾರೆ ಎನ್ನುತ್ತಾ ಅವನ ದಾರಿಗೆ ಅಡ್ಡ ನಿಂತರು.*

ಮದ್ಯದ ಅಮಲಿನಲ್ಲಿದ್ದ ಅಬ್ದುಲ್ಲ ತುವಾಅ(ರ)ರನ್ನು ದೂರ ತಳ್ಳಿ ಮತ್ತೆ ಮಕ್ಕಳನ್ನು ಎಳೆಯಲಾರಂಭಿಸಿದಾಗ, ಬಿದ್ದಲ್ಲಿಂದ ಎದ್ದು ಬಂದು ಆ ಮಕ್ಕಳಿಬ್ಬರನ್ನೂ ತಬ್ಬಿಕೊಂಡು ಮಕ್ಕಳೇ... ಹೀಗಾಬಹುದೆಂದು ನಾನು ಊಹಿಸಲಿಲ್ಲ. ಇಲ್ಲದಿದ್ದರೆ ಆಗಲೇ ನಿಮ್ಮನ್ನು ಇಲ್ಲಿಂದ ಕಳುಹಿಸಿರುತ್ತಿದ್ದೆ ಎನ್ನುತ್ತಾ ರೇೂಧಿಸಲಾರಂಭಿಸಿದರು

*ಈ ಹಠಾತ್ ದಾಳಿಯಿಂದ ಕಂಗಾಲಾದ ಮಕ್ಕಳು ಗಾಬರಿಯಿಂದ ತುವಾಅ(ರ)ರನ್ನು ಅಪ್ಪಿಕೊಂಡು ಆ ದುಷ್ಟ ಬಿಟ್ಟು ಬಿಡಲಿ ಎಂಬ ಆಸೆಗಣ್ಣಿನಿಂದ ಅವನನ್ನೇ ನೇೂಡುತ್ತಿದ್ದವು.*

ಆದರೆ ಪಟ್ಟು ಬಿಡದ ಅಬ್ದುಲ್ಲ, ಪ್ರತಿರೇೂಧಿಸುತ್ತಿದ್ದ ತುವಾಅ(ರ)ರವರನ್ನು ಮನ ಬಂದಂತೆ ಚಚ್ಚುತ್ತಾ ಆಕೆಯ ತಲೆಯನ್ನು ಹಿಡಿದು ಗೇೂಡೆಗೆ ಬಡಿದಾಗ ತುವಾಅ(ರ)ರವರ ತಲೆಗೆ ಗಾಯವಾಗಿ ರಕ್ತ ಚಿಮ್ಮಲಾರಂಭಿಸಿತು.

ತುವಾಅ(ರ)ರಂತೂ ಮಕ್ಕಳನ್ನು ಬಿಟ್ಟು ಬಿಡುವಂತೆ ಅಬ್ದುಲ್ಲನನ್ನು ಪರಿಪರಿಯಾಗಿ ಅಂಗಲಾಚಿ ಬೇಡುತ್ತಲೇ ಇದ್ದರು.

*ಎಷ್ಟು ಗೇೂಗರೆದರೂ ಆ ದುಷ್ಟ ಪಟ್ಟು ಬಿಡಲಿಲ್ಲವಾದಾಗ ಕೊನೆಗೆ ತುವಾಅ(ರ) ಹೇಳಿದರು, "ನನ್ನ ಜೀವವಿರುವ ತನಕ ಈ ಮಕ್ಕಳನ್ನು  ನಾನು ಬಿಟ್ಟು ಕೊಡಲಾರೆ. ಅಷ್ಟಕ್ಕೂ ಈ ಮಕ್ಕಳನ್ನು ಆ ದುಷ್ಟನ ಕೈಗೊಪ್ಪಿಸದೆ ಬಿಡಲಾರೆನೆನ್ನುವುದೇ ನಿಮ್ಮ ಕೊನೆಯ ಮಾತಾದರೆ ಮೊದಲು ನನ್ನನ್ನು ಕೊಲ್ಲಿ" ಎಂದರು*

ಆಗ ಅಬ್ದುಲ್ಲ ಓಹೇೂ ಹಾಗೇೂ ವಿಷಯ ಎನ್ನುತ್ತಾ ಮನೆಯೊಳಗೆ ಹೋದನು.

ಆಗ *ತುವಾಅ(ರ)ರಿಗೆ* ಬಚಾವಾದೆವೆನಿಸಿ ಸಮಾಧಾನದ ನಿಟ್ಟುಸಿರು ಬಿಡುತ್ತಾ..

ಮಕ್ಕಳೊಂದಿಗೆ ಹೇಳಿದರು...
ಮಕ್ಕಳೇ..! ಈಗ ಮಲಗಿರಿ..! ನಾಳೆ ಬೆಳಿಗ್ಗೆ ಇಲ್ಲಿಂದ ಪಾರಾಗಲು ಏನಾದರೂ ಉಪಾಯ ಕಂಡು ಕೊಳ್ಳೇೂಣ. ಎನ್ನುತ್ತಾ ಅಲ್ಲೇ ಕುಳಿತರು.

ಮಕ್ಕಳನ್ನು ಕರೆದೊಯ್ಯಲು ಪತ್ನಿ ಒಪ್ಪದ ಕಾರಣ ಆಚೆ ಹೇೂಗಿದ್ದ ಅಬ್ದುಲ್ಲ ಮತ್ತಷ್ಟು ಮದ್ಯ ಕುಡಿದು ಖಡ್ಗದೊಂದಿಗೆ ಹಿಂದಿರುಗಿ ಬಂದು ಖಡ್ಗವನ್ನು ಝಳಪಿಸುತ್ತಾ ಹೇಳಿದನು...

*"ಈ ಮಕ್ಕಳನ್ನು ನಾನು ಉಬೈದ್'ನಿಗೆ ಒಪ್ಪಿಸದೆ ಬಿಡಲಾರೆ. ಅದು ನಿನ್ನನ್ನು ಕೊಂದಾದರೂ ಸರಿ ಎನ್ನುತ್ತಿದ್ದಂತೆ."*

ಅಧೀರರಾದ ತುವಾಅ(ರ) ಕಂಬನಿ ಮಿಡಿಯುತ್ತಾ ಹೇಳಿದರು... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment