Sunday, March 18, 2018

*ಎಪಿ ಉಸ್ತಾದರಿಗೆ ಐಶರಾಮಿ ಕಾರು ಸಿಗಲು ಕಾರಣಕರ್ತನಾದ ಸಳಪಿ ಇದೀಗ ಮೀನು ಮಾರುತ್ತಿದ್ದಾನೆ..!*

-----------ಅಬೂಶಝ---------

ಪ್ರಸ್ತುತ ಘಟನೆಯನ್ನು
TC ಉಸ್ತಾದ್ ಎಂದೇ ಕರೆಯಲ್ಪಡುವ
 ಟಿ ಸಿ ಮುಹಮ್ಮದ್ ಮುಸ್ಲಿಯಾರರ ಭಾಷೆಯಲ್ಲೇ ಕೇಳೋಣ.

ಟೊಯೋಟ ಕಂಪನಿಯ ಏಜೆನ್ಸಿಯೂ, ಧನಿಕನೂ ಆದ *ಸ‌ಈದ್ ಅಲ್'ಉತೈಬ* ಎಂಬ ಅರಬಿ ,ಮಸೀದಿಯಿಂದ ನಮಾಜು ಮುಗಿಸಿ ಹೊರಬರುವುದು ನಾನು ಒಳಗೆ ಪ್ರವೇಶಿಸುವುದು ಒಮ್ಮಲೆ ಆದಾಗ ಆಕಸ್ಮಾತ್ ಪರಸ್ಪರ ಡಿಕ್ಕಿ ಹೊಡೆದವು.
ಡಿಕ್ಕಿಯ ರಭಸಕ್ಕೆ ನನಗೆ ತುಂಬಾ ನೋವಾಯಿತು.ಅವರಿಗೂ ನೋವಾಗಿರಬಹುದು!
ಸಿಡಿಮಿಡಿಗೊಂಡ ಅವರು ಕೋಪದಿಂದ ನನ್ನನ್ನೇ ದುರುಗುಟ್ಟಿ ನೋಡಿದಾಗ ನಾನು ಬೇಗ ಹೋಗಿ ಅವರನ್ನು ಅಪ್ಪಿ ಹಿಡಿದು ಸಮಾಧಾನ ಹೇಳಿದೆ. ಅವರಿಗೆ ತುಂಬಾ ಖುಷಿಯಾಯಿತು.
ಪರಸ್ಪರ ಪರಿಚಯವಾಯಿತು.

ನಂತರ ಅರಬಿಯ ವಾಸಸ್ಥಳ ಕೇಳಿ ತಿಳಿದು ನೋಟ್ ಮಾಡಿಟ್ಟೆ.
ಆನಂತರ ಎಪಿ ಉಸ್ತಾದರನ್ನು ಮತ್ತು ಮರ್ಕಝ್'ನ್ನು ಅವರಿಗೆ ಪರಿಚಯ ಮಾಡಿಸಿದೆ.
ಒಂದು ರಮಳಾನ್'ನಲ್ಲಿ ಎಪಿ ಉಸ್ತಾದ್ ಬಂದಾಗ ಎಲ್ಲೆಡಗೆ ಸಂಚರಿಸಲು ಅವರು ವಾಹನ ಕೊಟ್ಟಿದ್ದರು.
*ಸಹೀದ್ ಅಲ್'ಉತೈಬ* ರವರ ಪುತ್ರ *ಅಬೂಮುಹಾನ* ಅಲ್ಲಿನ ಸರಕಾರದ ಮಂತ್ರಿಯಾಗಿದ್ದರು.
ಈ ಮಂತ್ರಿಯ ಮನೆಯಲ್ಲಿ ಒಬ್ಬ ಡ್ರೈವರಿದ್ದ.
ಅವನೊಬ್ಬ ಸಳಪಿ!
ಜೊತೆಗೆ ಮುಸ್ಲಿಂ ಲೀಗ್ ರಾಜಕೀಯ ತಲೆಗೆ ಅಡರಿತ್ತು.
ಎಪಿ ಉಸ್ತಾದರಿಗೆ ಸಂಚರಿಸಲು ಕಾರು ಮತ್ತು ಎಲ್ಲಾ ಸೌಕರ್ಯಗಳನ್ನು ಮಂತ್ರಿಯ ತಂದೆ ಕೊಟ್ಟಾಗ ಇದನ್ನು ನೋಡಿದ  ಡ್ರೈವರ್ ಸಳಪಿಯ ಪಿತ್ತ ನೆತ್ತಿಗೇರಿತ್ತು! ಅಸೂಯೆಯಿಂದ ಕಂಗಲಾದ ಸಳಪಿ,ಅಲ್ ಉತೈಬಿಯ ಪುತ ರನಾದ ಮಂತ್ರಿಯಲ್ಲಿ  ಎಪಿ ಉಸ್ತಾದರ ವಿರುದ್ಧ ಇಲ್ಲಸಲ್ಲದ ಗಂಭೀರ ಆರೋಪ ಹೊರೆಸಿ ಫಿತ್ನ ಮಾಡಿದ!

ಅವನ ಆರೋಪ ಹೀಗಿತ್ತು....
*"ಎಪಿ ಮುಸ್ಲಿಯಾರ್ ಇಲ್ಲಿಂದ ಹಣ ಕಲೆಕ್ಷನ್ ಮಾಡಿ ಕೇರಳದ ಪೂನೂರು ಎಂಬಲ್ಲಿ ಸ್ವಂತವಾಗಿ ದೊಡ್ಡ ರಿಯಲ್ ಎಸ್ಟೇಟ್ ಮಾಡಿದ್ದಾರೆ,ಬಡಗರ ಎಂಬಲ್ಲಿ ಚಿನ್ನದ ಅಂಗಡಿಯಲ್ಲಿ ಪಾಲುದಾರಿಕೆ ಇದೆ,ಮರ್ಕಝ್ 'ನ ಆಧಾರ ಎಪಿ ಯ ಸ್ವಂತ ಹೆಸರಿನಲ್ಲಿದೆ "ಎಂದೆಲ್ಲಾ ಸುಳ್ಳು ಹೇಳಿದ."*
ಮಂತ್ರಿಯಾದ ಪುತ್ರ ಇದೆಲ್ಲವನ್ನು ತಂದೆ ಅಲ್'ಉತೈಬರಲ್ಲಿ ಹೇಳಿದಾಗ ಅವರು ತುಂಬಾ ಕೋಪಗೊಂಡರು.
ರಮಳಾನ್ ಕಳೆದು ಒಂದು ತಿಂಗಳ ನಂತರ ಎಪಿ ಉಸ್ತಾದರು ಪುನಃ ಇದೇ ಅರಬಿಯ ಮನೆಗೆ ಬೇಟಿಕೊಟ್ಟಾಗ ಅವರು ಮಾತನಾಡದೆ ಹಿಂಜರಿದರು.
ಮಜ್ಲಿಸ್ ನಲ್ಲಿ ಸೇರಿದ ಜನರೆಲ್ಲಾ ಹೋದ ನಂತರ ಅರಬಿ ಅಲ್'ಉತೈಬ ಎಪಿ ಉಸ್ತಾದರತ್ತ ತಿರುಗಿ ತುಂಬಾ ಕಠಿಣ ಶಬ್ದ ಬಳಸಿ  ಉಸ್ತಾದರನ್ನು ತರಾಟೆಗೆ ತೆಗೆದುಕೊಂಡರು.
ಆಗ ಚಂಗರೋತ್ತ್ ಇಬ್ರಾಹಿಮ್ ಹಾಜಿ, ನಾನು ಮತ್ತು ಎಪಿ ಉಸ್ತಾದ್ ಮೂವರು ಮಾತ್ರ ಇದ್ದೆವು.
ಅರಬಿ ಮಾತನಾಡುತ್ತಾ ನೀವು ವಿಶ್ವಾಸ ವಂಚಕರು,ಸುಳ್ಳು ಹೇಳುವವರು ಎಂದೆಲ್ಲಾ ಅರೋಪಿಸಲು ಶುರುಮಾಡಿದಾಗ ತಟ್ಟನೆ ಎದ್ದು ನಿಂತು ಎಪಿ ಉಸ್ತಾದರು ಹೇಳಿದರು.

*"ನೀವು ಅಲ್ಲಾಹನನ್ನು ಮೆರೆತು ಮಾತನಾಡಬಾರದು ನಾಳೆ ಮಹ್'ಷರದಲ್ಲಿ ನಿಮ್ಮನ್ನು ನಾನು ಎದುರಿಸಬೇಕಾಗಿ ಬರಬಹುದು!"*
ಎಪಿ ಉಸ್ತಾದರ ಈ ಮಾತು ಕೇಳಿದಾಗ ಅರಬಿ ತಟಸ್ಥರಾದರು!

ನಂತರ ಅವರು ಹೇಳಿದರು
*"ಸರಿ,ಶೈಖ್ ಅಬೂಬಕರ್ ತಾವು ನಿಜಸ್ಥಿತಿ ವಿವರಿಸಿ"*
ಆಗ ಎಪಿ ಉಸ್ತಾದ್ ಹೇಳಿದರು

*"ತಾವು ಇದು ಮನಪೂರ್ವಕ ಹೇಳುವುದಲ್ಲವೆಂದು ನನಗೊತ್ತು.ಯಾರೋ ನಿಮ್ಮಲ್ಲಿ ನನ್ನ ಕುರಿತು ತಪ್ಪುಗ್ರಹಿಕೆ ಮೂಡಿಸಿದ್ದಾರೆ"*

ಆವಾಗ ಅರಬಿ ಕೂಲಾಗಿ ಹೇಳಿದರು
*"ನೀವು ನಿಮ್ಮ ಪುರಾವೆ ಹಾಜರುಪಡಿಸಬೇಕು"*

ಆಯಿತು, ಹಾಜರುಪಡಿಸುತ್ತೇನೆಂದು ಹೇಳಿ ಎಪಿ ಉಸ್ತಾದ್ ಹೊರಡಲನುವಾದಾಗ ಅರಬಿ ತಮ್ಮ ಎಂದಿನ ಶೈಲಿಯಲ್ಲಿ ಚಹಾ ಕೂಟಕ್ಕೆ ಅಹ್ವಾನಿಸಿದಾಗ ಎಪಿ ಉಸ್ತಾದರ ಪ್ರತಿಕ್ರಿಯೆ ಈ ರೀತಿಯಾಗಿತ್ತು.

*"ಈ ವಿಷಯ ಇತ್ಯರ್ಥವಾದ ಮೇಲೆ ಇನ್ಶಾಅಲ್ಲಾ ಚಹಾ ಕುಡಿಯುವ"*
ಅರಬಿ ಸಮ್ಮತಿಸಿದರು.
ಅಲ್ಲಿಂದ ಹೊರನಡೆದ ಉಸ್ತಾದ್ ಕೂಡಲೇ ಮರ್ಕಝ್'ಗೆ ಫೋನ್ ಮಾಡಿ ಮರ್ಕಝ್'ನ ಆಧಾರ/ಮರ್ಕಝ್ ಕಾಂಪ್ಲಕ್ಷ್'ನ ಮಲಯಾಳದಲ್ಲಿರುವ  ಆಧಾರವನ್ನು ಇಂಗ್ಲೀಷ್ ಗೆ ಭಾಷಾಂತರಿಸಿ ರಿಜಿಸ್ಟ್ರಾರ್ ಅಧಿಕಾರಿಯಿಂದ ಎಟಸ್ಟ್ ಮಾಡಿ ಇಡಿ ನಾಲ್ಕು ದಿವಸ ಕಳೆದು ನಾನು ಊರಿಗೆ ಬರುತ್ತೇನೆಂದು ಹೇಳಿ ಫೋನ್ ಡಿಶ್'ಕನಕ್ಟ್ ಮಾಡಿದರು.

*(ಮರ್ಕಝ್'ಗೆ ಜಾಗ ಖರೀದಿ ಮಾಡುವಾಗ ಮರ್ಕಝ್ ನ ರೆಖಾರ್ಡ್ ಅಂದಿನ ಮರ್ಕಝ್ ಪ್ರಸಿಡೆಂಟ್ ಆಗಿದ್ದ ಶಂಸುಲ್ ಉಲಮಾ ಈಕೆ ಉಸ್ತಾದರ ಹೆಸರಲ್ಲಾಗಿತ್ತು ಇದ್ದದ್ದು.*
*ಕಾಂಪ್ಲೆಕ್ಸ್'ನ ಪ್ರಧಾನ ಬಿಲ್ಡಿಂಗ್ ನಿರ್ಮಾಣವಾಗುವಾಗಲೂ ಶಂಸುಲ್ ಉಲಮಾ ಅದ್ಯಕ್ಷರಾಗಿದ್ದರಿಂದ ಅದರ ಆಧಾರವೂ ಈಕೆ ಉಸ್ತಾದರ ಹೆಸರಿನಲ್ಲಾಗಿತ್ತು*

*ಏಯ್'ತ್ತಚ್ಚನ್'ಕಂಡಿ ಕೋಯಕುಟ್ಟಿ ಮುಸ್ಲಿಯಾರ್'ರವರ ಪುತ್ರ ಅಬೂಬಕರ್ ಮುಸ್ಲಿಯಾರ್ ಎಂದು ಆಧಾರದಲ್ಲಿ ನಮೂದಿಸಲಾಗಿತ್ತು.*

*ಆದರೆ ಕಾಂಪ್ಲೆಕ್ಸ್ ನ ಸಮೀಪವಿರುವ ಮಸೀದಿ ಮತ್ತು ಕಟ್ಟಡಗಳು ನಿರ್ಮಾಣವಾಗುವಾಗ ಸೆಯ್ಯದ್ ಅವೇಲತ್ ತಂಙಳ್ ಅಧ್ಯಕ್ಷರಾಗಿದ್ದರು.
ಹಾಗಾಗಿ ಅದರ ಆಧಾರ ಅವರ ಹೆಸರಿನಲ್ಲಾಗಿತ್ತು)

ನೂರು ರೂಪಾಯಿಯ ಮುದ್ರೆ(ಚಾಪೆ)ಪೇಪರ್ 'ನಲ್ಲಿ K ಅಬ್ದುಲ್ ಹಮೀದ್ ಸಾಹಿಬ್ ರವರು ಇಂಗ್ಲೀಷ್'ಗೆ ಭಾಷಾಂತರಿಸಿ DTP ಟೈಪ್ ಮಾಡಿ ಎಟಸ್ಟ್ ಮಾಡಿಸಿ ಊರಿನಿಂದ ಬರುವ ಒಬ್ಬರಲ್ಲಿ ಕಳುಹಿಸಿ ಕೊಟ್ಟು ನನ್ನ ಕೈ ಸೇರಿತು!

ಸಹೀದ್ ಉತೈಬ ಹಿರಿಯ ತಲೆಮಾರಿನ ವ್ಯಕ್ತಿಯಾದುದರಿಂದಲೇ ಇಂಗ್ಲೀಷ್ ಭಾಷೆಯಲ್ಲಿ ಅಷ್ಟೊಂದು ಹಿಡಿತವಿರಲಿಲ್ಲ
ಆದ್ದರಿಂದಲೇ ಕಣ್ಣೂರು ಯೂಸುಫ್ ಹಾಜಿಯವರ ಟೈಪಿಂಗ್ ಸೆಂಟರ್'ನಲ್ಲಿ ಅದನ್ನು ಅರಬಿ ಭಾಷೆಗೆ ಭಾಷಾಂತರಿಸಿ
ಈ ಮೂರು ಕೋಪಿಯನ್ನು ಹಿಡಿದುಕೊಂಡು
ಹೋಗಿ ಸಹೀದ್ ಅಲ್'ಉತೈಬರ ಕೈಗೆ ಕೊಟ್ಟೆ.
ಅದರಲ್ಲಿರುವ *ಎಯ್'ತ್ತಚ್ಚನ್ ಕಂಡಿ ಅಬೂಬಕರ್ ಎಂದು ಕಂಡಾಗ ಅದು ಎಪಿ ಅಬೂಬಕರ್ ಹೌದಾ*
ಎಂದು ಸಂಶಯವಾಗಿ
ಈ ಅರಬಿಯ ಟೋಯೋಟಾ ಶೋ ರೂಮ್' ಮೇನೇಜರ್ ಎರ್ನಾಂಕುಳಂನ ಒಬ್ಬ ಕ್ರಿಶ್ಚಿಯನ್ ಮತಾನುಯಾಯಿಯ ಕೈಯಲ್ಲಿ ಕೊಟ್ಟು ಪರಿಶೀಲಿಸಿ ಅದೆಲ್ಲವೂ ಸತ್ಯವೆಂದು ಅರಿತು ತನ್ನ ಪುತ್ರನ ಡ್ರೈವರ್ ಹೇಳಿದ್ದು ಸುಳ್ಳು ಎಂದು ಮನದಟ್ಟಾದಾಗ,
*ಅದೇ ಶೋ ರೂಮ್'ನಿಂದ ಎಪಿ ಉಸ್ತಾದರಿಗೆ ಫೋನ್ ಮಾಡಿದ ಅರಬಿ ತುಂಬಾ ಹೊತ್ತು ಅತ್ತು ಉಸ್ತಾದರಲ್ಲಿ ಕ್ಷಮೆ ಕೋರಿದರು.*
(ಅದು ಅರಬಿಗಳ ವಿನಯದ ಒಳ್ಳೆಯ ಗುಣ)

*ಈ ಸಂತೋಷದಿಂದ ಅಂದು ಕೇರಳಕ್ಕೆ ಒಂದು ಐಷರಾಮಿ ಕಾರು ಬಂತು.*
*ಅದು ಟೋಯೋಟಾ ಕಂಪೆನಿಯ ಏಜೆನ್ಸಿ ಕೂಡಾ ಆಗಿದ್ದ ಸಹೀದ್ ಉತೈಬ ಎಪಿ ಉಸ್ತಾದರಿಗೆ ಕೊಟ್ಟ ಗಿಫ್ಟ್ ಆಗಿತ್ತು!*

*ಸಳಪಿ ಫಿತ್ನ ಮಾಡಿದ್ದರಿಂದ ಉಸ್ತಾದರಿಗೆ ಟೋಯೋಟಾ ಕಾರೊಂದು ಗಿಫ್ಟ್'ಆಗಿ ಸಿಕ್ಕಿತ್ತು.!*

ಮಂತ್ರಿಯಾದ ಪುತ್ರನಿಗೂ ವಿಷಯ ಮನದಟ್ಟಾದಾಗ ತಂದೆಯಲ್ಲಿ ಸಮಾಲೋಚಿಸಿ ಸಳಪಿ ಡ್ರೈವರ್'ನನ್ನು ಅವನು ಧರಿಸಿದ ಅದೇ ಡ್ರೆಸ್ಸ್ ಹಾಕಿಸಿ ಏರ್ಪೋರ್ಟ್ ಗೆ ಕರಕೊಂಡು ಬಂದು ಅಲ್ಲಿ ಅವನ ಕೈಯಲ್ಲಿ ಪಾಸ್'ಪೋರ್ಟ್ ಕೊಟ್ಟು UAE ಗೆ ನೋ ಎಂಟ್ರಿ ಮಾಡಿಸಿ ಕಳುಹಿಸಿಕೊಡಲಾಯಿತು!

ನಂತರ ಅವನು ಕುವೈಟ್' ಗೆ ಹೋದ
ಅಲ್ಲಿ ಸರಿಯಾಗದೆ ದಮಾಮ್ ನಲ್ಲಿ ಒಬ್ಬ ಅರಬಿಯ ವ್ಯಾಪಾರ ನೋಡಿಕೊಳ್ಳುತ್ತಿದ್ದ
ಜೊತೆಗೆ ಊರಿಗೆ ಹಣ ಕಳುಹಿಸುವ ಉಂಡಿ(ಹವಾಲಹಣದ) ಬಿಸಿನೆಸ್ ಕೂಡಾ ಮಾಡುತ್ತಿದ್ದ.

ಒಮ್ಮೆ ಹಟತ್ತನೆ ಅರಬಿ ಅಂಗಡಿಗೆ ಬಂದು ಕ್ಯಾಶ್ ನೋಡಿದಾಗ ಲಕ್ಷಾಂತರ ರೂಪಾಯಿ ಇರುವುದನ್ನು ಕಂಡು ಇವನು ನನ್ನ ವ್ಯಾಪಾರದ ಹಣವನ್ನೆಲ್ಲಾ ಕೂಡಿಟ್ಟು ವಂಚಿಸುತ್ತಿದ್ದಾನೆಂದು ಭಾವಿಸಿ ಆ ಎಲ್ಲಾ ಹಣವನ್ನು ತೆಗೆದು ಕೊಂಡು ಹೋದ!
ಈ ಸಳಪಿ ಯನ್ನು ಕೆಲಸದಿಂದ ವಜಾ ಕೂಡಾ ಮಾಡಿದ.!!

ನಿಜವಾಗಿಯೂ ಅಲ್ಲಿದ್ದ ಲಕ್ಷ ಲಕ್ಷ ರಿಯಾಲ್ ಹಣ ಊರಿಗೆ ಕಳುಹಿಸಿ ಕೊಡಲು ಹಲವರು ಇವನಲ್ಲಿ ಕೊಟ್ಟ ಉಂಡಿ ಹಣವಾಗಿತ್ತು!

ನಂತರ ಅವನು ಮೀನು ಮಾರ್ಕೆಟ್'ನಲ್ಲಿ
ಮೀನು ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದ.!

ಈ ಕಡೆ ಎಪಿ ಉಸ್ತಾದರ ಪುತ್ರ ಅಬ್ದುಲ್ ಹಕೀಮ್ ಅಝ್'ಹರಿ ಈ ಅರಬಿಯನ್ನು ಸಂಪರ್ಕಿಸಿ ಗಾಢವಾದ ಸಂಬಂಧ ಬೆಳೆಸಿ
ಪೂನೂರಿನಲ್ಲಿ ಅತೀ ಬೃಹತ್ತಾದ ಒಂದು ಸಂಸ್ಥೆಯನ್ನು ಕಟ್ಟಿಬೆಳೆಸಿದರು.!

ಇದೀಗ ಪೂನೂರಿನಲ್ಲಿ ರಾರಾಜಿಸುತ್ತಿರುವ
ಅತಿ ಬೃಹತ್ತಾದ ಸ್ಥಾಪನೆ
 *'ಮರ್ಕಝ್ ಗಾರ್ಡನ್'* ಸಹೀದ್ ಉತೈಬರ ಕೊಡುಗೆಯಾಗಿದೆ.!

ಎಪಿ ಉಸ್ತಾದರ ವಿರುದ್ಧ ಫಿತ್ನ ಮಾಡಿದ ಸಳಪಿ ಹೇಳಹೆಸರಿಲ್ಲದೆ ನಾಶವಾಗಿ ಹೋದ
ಅವನ ಫಿತ್ನ ನಿಮಿತ್ತ ಸುನ್ನತ್ ಜಮಾತ್'ಗೆ ಒಳ್ಳೆಯ ಒಂದು ಸಂಸ್ಥೆ ಸಿಗುವಂತಾಯಿತು.
ಎಲ್ಲವೂ ಅಲ್ಲಾಹನ ತೀರ್ಮಾನ ತಾನೇ?
ಎಪಿ ಉಸ್ತಾದ್ ಮತ್ತು ಮರ್ಕಝ್ 'ನ ಬೆಳವಣಿಗೆಯಲ್ಲಿ ವಿರೋಧಿಗಳ  ಪಾಲು ಬಹಳಷ್ಟಿದೆ.
ಸಮಯ ಸಿಕ್ಕರೆ ಮುಂದೆ ಬರೆಯುವೆ ಇನ್ಶಾಅಲ್ಲಾ..

 ಅಬೂಶಝ

No comments:

Post a Comment