😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔
*"ಅವರಿಬ್ಬರನ್ನೂ ರಕ್ಷಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಹಿಂದಿರುಗೇೂಣ"* ಎಂದು ಆ ಗುಂಪಿನ ನಾಯಕ ಹೇಳಿದಾಗ ⬇
ಜನರೆಲ್ಲರೂ ಅಲ್ಲಿಂದ ನಿರ್ಗಮಿಸಿದರು.
ನಂತರ ದಾರುಲ್ ಇಮಾರಿನ ಮೇಲ್ಛಾವಣಿಯಿಂದ ಕೆಳಗಿಳಿದು ಬಂದ ಉಬೈದ್, ಅಲ್ಲಿ ಅನಾಥವಾಗಿ ಬಿದ್ದಿದ್ದ ತಲೆಗಳನ್ನು ನೇೂಡಿ ಗಹಗಹಿಸಿ ನಗುತ್ತಾ...
*"ಯಝಿದ್"ನ ಆಡಳಿತದ ವಿರುದ್ಧ ಧ್ವನಿಯೆತ್ತುವವರೆಲ್ಲರ ಕತೆಯೂ ಇಷ್ಟೇ ಎಂದನು.*
ನಂತರ ಉಬೈದ್'ನಿಂದ ಮತ್ತೊಂದು ಘೋಷಣೆ ಹೊರಬಿತ್ತು.
*"ಮುಸ್ಲಿಂ (ರ) ರವರ ಎರಡು ಮಕ್ಕಳನ್ನು ತಂದೊಪ್ಪಿಸಿದವರಿಗೆ ಸಾವಿರ ದಿನಾರ್ ಬಹುಮಾನ ನೀಡಲಾಗುವುದು."*
ಆದರೆ ಇದ್ಯಾವುದನ್ನೂ ಅರಿಯದ ಮುಸ್ಲಿಂ(ರ)ರವರ ಮಕ್ಕಳಾದ 9 ಮತ್ತು 11 ವರ್ಷ ಪ್ರಾಯದ ಮುಹಮ್ಮದ್ (ರ) ಮತ್ತು ಇಬ್ರಾಹೀಂ (ರ) ಎಂಬ ಇಬ್ಬರು ಮಕ್ಕಳು ಹಾನಿಯಾ (ರ) ರವರ ಮನೆಯಲ್ಲಿ ಶರಕ್ (ರ) ರವರ ಜೊತೆಯಲ್ಲಿದ್ದರು.
ಉಬೈದ್'ನಿಂದ ತಮ್ಮ ಸಹೇೂದರರಾದ ಹಾನಿಯಾ (ರ) ಮತ್ತು ಮುಸ್ಲಿಂ (ರ) ವಧಿಸಲ್ಪಟ್ಟಿದ್ದರಿಂದ ಮಕ್ಕಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಭಾವಿಸಿದ ಶರಕ್ (ರ) ರವರು ಆ ಎರಡು ಮಕ್ಕಳನ್ನು ಕರೆದು ಹೇಳಿದರು.
*ಮಕ್ಕಳೇ..!*
*ನಿಮ್ಮ ತಂದೆ ಮತ್ತು ನನ್ನ ಸಹೇೂದರ ಹಾನಿಯಾ (ರ) ಇಬ್ಬರೂ ವಧಿಸಲ್ಪಟ್ಟಿದ್ದಾರೆ. ಆದ್ದರಿಂದ ನೀವು ಆದಷ್ಟು ಬೇಗ ಇಲ್ಲಿಂದ ಸುರಕ್ಷಿತವಾದ ಸ್ಥಳಕ್ಕೆ ಪಲಾಯನ ಮಾಡಬೇಕು. ಅಂದರೆ, ಮಕ್ಕಾಕ್ಕೆ ಹೋಗುವ ಯಾವುದಾದರೂ ವ್ಯಾಪಾರಿ ಸಂಘದೊಂದಿಗೆ ಹೇೂಗಿ ಮಕ್ಕ ತಲುಪಿದರೆ ಮತ್ತೆ ನಿಮ್ಮನ್ನು ಯಾರಿಂದಲೂ ಏನೂ ಮಾಡಲಾಗದು ಎನ್ನುತ್ತಾ...*
ತಮ್ಮ ಕೆಲಸಗಾರನೊಬ್ಬನನ್ನು ಕರೆದು ಹೇಳಿದರು, ಮಕ್ಕಾಕ್ಕೆ ಹೋಗುವ ಯಾವುದಾದರೂ ಖಾಫಿಲ (ಸಂಘ)ವನ್ನು ಕಂಡು ಹಿಡಿದು ವಿಷಯವನ್ನೆಲ್ಲ ಅವರಿಗೆ ವಿವರಿಸಿ ಮಕ್ಕಳನ್ನು ಅವರೊಂದಿಗೆ ಕಳುಹಿಸು ಎನ್ನುತ್ತಾ ಆ ಕೆಲಸಗಾರನೊಂದಿಗೆ ಮಕ್ಕಳನ್ನು ಕಳುಹಿಸಿದರು.
ಹಾಗೆ ಆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕೆಲಸಗಾರ ಸ್ವಲ ದೂರ ಹೇೂಗುತ್ತಿದ್ದಂತೆ ಮಕ್ಕಳಿಗೆ ಒಂದು ದಾರಿ ತೇೂರಿಸಿ ಹೀಗೆಂದನು,
*ಮಕ್ಕಳೇ...*
*ಈ ದಾರಿಯಲ್ಲಿ ಒಂದು ವ್ಯಾಪಾರೀ ಸಂಘ ಮಕ್ಕಾದತ್ತ ಹೇೂಗುತ್ತಿದೆ. ಅದರಿಂದ ನೀವು ಬೇಗನೆ ಓಡಿ ಹೇೂದರೆ ಆ ಯಾತ್ರಾ ಸಂಘವನ್ನು ಸೇರಿಕೊಳ್ಳಬಹುದು. ಎನ್ನುತ್ತಾ ಮಕ್ಕಳನ್ನು ಆ ದಾರಿಯಲ್ಲಿ ಕಳುಹಿಸಿದನು.*
(ಆದರೆ ವಾಸ್ತವವಾಗಿ ಆ ದಾರಿಯಲ್ಲಿ ಯಾವ ಸಂಘವೂ ಇರಲಿಲ್ಲ. ಒಂದು ವೇಳೆ ಉಬೈದ್'ನ ಸೈನಿಕರು ಮಕ್ಕಳೊಂದಿಗೆ ಕಂಡರೆ ತನ್ನ ಜೀವಕ್ಕೂ ಸಂಚಕಾರ ಬಂದೀತೆಂಬ ಭಯದಿಂದ ಹಾಗೆಂದಿದ್ದ)
ತಂದೆ ವಧಿಸಲ್ಪಟ್ಟಿದ್ದಾರೆಂದೂ ಹಾಗಾಗಿ ನಿಮ್ಮ ಜೀವಕ್ಕೂ ಅಪಾಯವಿದೆಯೆಂದು ಶರಕ್ (ರ) ಹೇಳಿದ್ದರಿಂದ ಮೊದಲೇ ಕಂಗಲಾಗಿದ್ದ ಆ ಮಕ್ಕಳು ಭಯದಿಂದ ಸೇವಕ ಹೇಳಿದಂತೆ ವ್ಯಾಪಾರಿ ಸಂಘವನ್ನು ಸೇರಿಕೊಳ್ಳಬೇಕೆಂಬ ಉದ್ದೇಶದಿಂದ ಓಡಲಾರಂಭಿಸಿದವು.
ಎಷ್ಟು ಓಡಿದರೂ ಯಾವ ಸಂಘವೂ ಆ ಮಕ್ಕಳಿಗೆ ಕಾಣ ಸಿಗಲಿಲ್ಲ. ತಾಯಿ ತಂದೆಯರನ್ನು ಒಂದು ದಿನವೂ ಅಗಲಿರದ ಆ ಪುಟ್ಟ ಕಂದಮ್ಮಗಳು ಜೀವ ಭಯದಿಂದ ಕಂಡ ದಾರಿಯಲ್ಲೆಲ್ಲ ಓಡುತ್ತಾ ಕೊನೆಗೆ, ಗಿಡ ಮರಗಳಿಂದಾವೃತವಾದ ವನವೊಂದಕ್ಕೆ ತಲುಪಿದವು. ಅಲ್ಲೊಂದು ಹೊಳೆ ಇತ್ತು.
ಅಷ್ಟರಲ್ಲಾಗಲೇ ಕತ್ತಲಾವರಿಸಿದ್ದರಿಂದ ಹೊಳೆ ದಾಟಲು ಸಾಧ್ಯವಾಗದೆ ಆಯಾಸದಿಂದ ಬಳಲಿದ್ದ ಆ ಮುಗ್ಧ ಮಕ್ಕಳು ಹೊಳೆಯ ಸಮೀಪದ ಮರವೊಂದನ್ನು ಹತ್ತಿ ಕುಳಿತವು.
ತಾಯಿ ತಂದೆಯರನ್ನೇ ಅವಲಂಭಿಸಿದ್ದ ಆ ಕಂದಮ್ಮಗಳು ಒಂದು ದಿನವೂ ಅವರನ್ನು ಬಿಟ್ಟು ದೂರ ಇದ್ದವರಲ್ಲ. ಹಾಗಾಗಿ ಅಸಹಾಯಕತೆಯಿಂದ ಕಂಗಾಲಾಗಿದ್ಗ ಆ ಕಂದಮ್ಮಗಳು ಭಯ ಮತ್ತು ಆತಂಕದಿಂದ ಒಬ್ಬರನ್ನೊಬ್ಬರು ಅಪ್ಪಿ ಹಿಡಿದು ಒಂದಿನಿತೂ ಕಣ್ಣೆವೆ ಮುಚ್ಚದೆ ಆ ಮರದ ಕೊಂಬೆಯ ಮೇಲೆ ರಾತ್ರಿ ಕಳೆದರು.
ಮರುದಿನ ಬೆಳಕು ಹರಿದು ಬಾನಿನ ಅಂಗಳದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ನೀರಿಗಾಗಿ ಮಹಿಳೆಯೊಬ್ಬಳು ಆ ಹೊಳೆಗೆ ಬಂದಳು.
ಚರ್ಮದ ಪಾತ್ರೆಯಲ್ಲಿ ಹೊಳೆಯಿಂದ ನೀರು ಮೊಗೆಯುತ್ತಿರುವಾಗ ಮರದ ಮೇಲೆ ಕುಳಿತಿರುವ ಮಕ್ಕಳ ಪ್ರತಿಬಿಂಬವನ್ನು ಕಂಡು ಮರದತ್ತ ದಿಟ್ಟಿಸಿದಳು.
ಮುಂದೇನು ಮಾಡಬೇಕೆಂದರಿಯದೆ ಭಯದಿಂದ ಕಂಪಿಸುತ್ತಾ ಮರದ ಮೇಲೆ ಅಡಗಿ ಒಬ್ಬರನ್ನೊಬ್ಬರು ಅಪ್ಪಿ ಹಿಡಿದು ಕುಳಿತಿರುವ ಅಪರಿಚಿತರಾದ ಆ ಮುದ್ದು ಮಕ್ಕಳನ್ನು ಕಂಡ ಆ ಸ್ತ್ರೀ ಪಾತ್ರೆಯನ್ನಲ್ಲೇ ಇಟ್ಟು ಮರದ ಹತ್ತಿರ ಹೇೂಗಿ,
*ಮಕ್ಕಳೇ ಯಾರು ನೀವು? ಮರದಲ್ಲೇಕೆ ಕುಳಿತಿರುವಿರಿ? ಕೆಳಗಿಳಿಯಿರಿ ಎಂದಳು.* ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment