Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣7⃣

**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 *ಮುಸ್ಲಿಂ(ರ)ರವರ ವಿರುದ್ಧ ಕ್ರಮ ಜರುಗಿಸಲು ನುಅಮಾನ್ ಇಬ್ನು ಬಶೀರ್(ರ)* ಒಪ್ಪದಿದ್ದಾಗ ಅಲ್ಲಿಂದ ಹಿಂದಿರುಗಿದ *ಯಝೀದನ* ಬೆಂಬಲಿಗರು ಮತ್ತೊಂದು ಮಸಲತ್ತು ರೂಪಿಸಿದರು. ⬇

*ಯಝೀದ್'ನನ್ನು* ಬೆಂಬಲಿಸುವವರೆಲ್ಲರೂ ಒಂದುಗೂಡಿ ಅರೇಬಿಯದ ಅಂದಿನ ರಾಜಧಾನಿಯಾಗಿದ್ದ *ಶಾಮ್* (ಈಗಿನ ಡಮಾಸ್ಕಸ್)ಗೆ ತೆರಳಿ
*ಯಝೀದ್'ನನ್ನು* ಭೇಟಿಯಾಗಿ ಹೇಳಿದರು, ನಾವು ಕೂಫದ ನಿವಾಸಿಗಳಾಗಿದ್ದೇವೆ..

 ತಮ್ಮ ಆಡಳಿತವನ್ನು ಕೊನೆಗಾಣಿಸಲು ಸಂಚು ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿರಬಹುದೆಂದು ಭಾವಿಸುತ್ತೇವೆ.
ಹಾಗಾಗಿ ತಕ್ಷಣವೇ ಏನಾದರೂ ಕ್ರಮ ಕೈಗೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು *ಯಝೀದ್'ನ* ಕಿವಿಯೂದಿದರು.

 ಇದನ್ನು ಕೇಳಿ ದಿಗ್ಭ್ರಾಂತನಾದ ಯಝೀದ್ ಕೇಳಿದನು

 *ಅಂಥದ್ದೇನಾಗಿದೆ ಈಗ?*

 *ಯಝೀದನ* ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಗುಂಪಿನ ನಾಯಕ ಹೇಳಿದ...

*ಮಕ್ಕದಿಂದ ಹುಸೈನ್ (ರ) ರವರು ಮುಸ್ಲಿಂ (ರ)* ಎಂಬ ವ್ಯಕ್ತಿಯೊಬ್ಬರನ್ನು ಈಗಾಗಲೇ ಕಳುಹಿಸಿದ್ದು, ಅವರು ಕೂಫದಲ್ಲಿ ತಮ್ಮ ಆಡಳಿತದ ವಿರುದ್ಧ ಜನರನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೂಫದ ಕೆಲ ಪ್ರಜೆಗಳೂ ಅವರೊಂದಿಗೆ ಸೇರಿಕೊಂಡಿದ್ದಾರೆ. ಒಂದು ವೇಳೆ ಕೂಫದಲ್ಲೇನಾದರೂ ಯುದ್ಧ ಸಂಭವಿಸಿದರೆ ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಹೆಚ್ಚಾಗಿ ಅದು ಎಲ್ಲೆಡೆ ವ್ಯಾಪಿಸಬಹುದು ಅದರ ಪರಿಣಾಮವಾಗಿ ನಂತರ ಆಡಳಿತ ತಮ್ಮ ಕೈಬಿಟ್ಟು ಹೇೂಗಬಹುದು. ಹಾಗಾಗಿ ಕೂಡಲೆ ಇದನ್ನು ನಿಯಂತ್ರಿಸಬೇಕಾದ್ದು ತಕ್ಷಣದ ಅವಶ್ಯಕತೆಯಾಗಿದೆ ಎಂದನು.

ವಿಷಯವನ್ನೆಲ್ಲ ಅರಿತ
*ಯಝೀದ್* ಕೂಡಲೆ ತನ್ನ ಸೈನ್ಯದ ಮುಖ್ಯಸ್ಥರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು
ಅವರಿಗೆ ಕೆಲ ಸೂಚನೆಗಳನ್ನು ನೀಡಿದ ನಂತರ ಅವರನ್ನು ಉದ್ದೇಶಿಸಿ...

*ಪ್ರಿಯರೆ...*

*ಮಕ್ಕದಿಂದ ಹುಸೈನ್ (ರ) ರವರು, ತಮ್ಮ ಪ್ರತಿನಿಧಿಯಾಗಿ ಮುಸ್ಲಿಂ (ರ) ಎಂಬ ವ್ಯಕ್ತಿಯನ್ನು ಕೂಫಕ್ಕೆ ಕಳುಹಿಸಿದ್ದು ಆ ವ್ಯಕ್ತಿಯು ನನ್ನ ಆಡಳಿತದ ವಿರುದ್ಧ ಜನರನ್ನು ಸಂಘಟಿಸುತ್ತಿದ್ದಾರೆ. ಅದರಿಂದ ಈ ಕೂಡಲೆ ಮುಸ್ಲಿಂ (ರ) ಎಂಬ ಆ ಮನುಷ್ಯನನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಅಥವಾ ವಧಿಸಬೇಕು ತಕ್ಷಣಕ್ಕೆ ಇದು ಅನಿವಾರ್ಯ. ಆದರೆ ಅಲ್ಲಿನ ಗವರ್ನರ್ ಆಗಿರುವ ನುಅಮಾನು ಇಬ್ನು ಬಷಿರ್ (ರ) ಇದಕ್ಕೆ ಸಮ್ಮತಿಸಲಾರರು. ಅದರಿಂದ ನಾನು ಕೇಳುತ್ತಿದ್ದೇನೆ ಮುಸ್ಲಿಂ (ರ) ರನ್ನು ಬಂಧಿಸಲು ಅಥವಾ  ವಧಿಸಲು ದೈರ್ಯವಿರುವವರು ಈ ಸಭೆಯಲ್ಲಿ ಯಾರಿದ್ದೀರಿ.!??*

*ಯಝೀದನ* ಈ ಮಾತಿಗೆ ಯಾರೂ ಉತ್ತರಿಸದೆ ಎಲ್ಲರೂ ಮೌನವಾಗಿದ್ದರು. ಕಾರಣ ಅವರೆಲ್ಲರಿಗೂ ಕೂಫದ ಜನತೆಯ ವಂಚಕತನದ ಅರಿವಿತ್ತು. ಹಾಗಾಗಿ ಯಾರೂ ಮರು ಮಾತನಾಡದೆ ಮೌನಕ್ಕೆ ಶರಣಾಗಿದ್ದರು.

_ಆದರೆ ಅಲ್ಲಾಹನ ಕಲ್ಪನೆ ಏನಿದೆಯೇೂ ಅದು ನಡೆಯಲೇ ಬೇಕಲ್ಲವೇ..?_

ಯಾರೂ ಪ್ರತಿಕ್ರಿಯಿಸದಿದ್ದಾಗ *ಯಝೀದ್* ಸಭೆಯನ್ನೊಮ್ಮೆ ದಿಟ್ಟಿಸಿ ನೇೂಡಿದ. ಆಗ ಹಿರಿಯ ವ್ಯಕ್ತಿಯೊಬ್ಬರು ಎದ್ದು ನಿಂತು.....

ಮಹಾ ಪ್ರಭುಗಳೇ..

 ಕೂಫಕ್ಕೆ ಹೋಗಲು ಧೈರ್ಯವಿರುವವರು ಈ ಸಭೆಯಲ್ಲಿ ಯಾರೂ ಇರಲಾರರು. ಎಂದು ನನ್ನ ಅನಿಸಿಕೆ. ಆದರೆ ತಮ್ಮ ತಂದೆಯವರ ಕಾಲದಿಂದಲೂ ಆಡಳಿತ ವಿರೇೂಧಿಗಳ ಸದ್ದಡಗಿಸಿದ ಬಸರದ ಗವರ್ನರ್ ಆಗಿರುವ *ಉಬೈದುಲ್ಲಾಹಿ ಇಬ್ನು ಝಿಯಾದ್* ಎಂಬಾತನಿಗೆ  ಈ ಜವಾಬ್ದಾರಿಯನ್ನು ವಹಿಸಿರಿ. ಈ ಕೆಲಸಕ್ಕೆ ಅವನೇ ಸರಿ ಎಂದರು.

 ಈ ಸಲಹೆಯನ್ನು ಅಂಗೀಕರಿಸಿದ *ಯಝೀದ್, ಕೂಡಲೇ ಉಬೈದ್'ನಿಗೆ ಪತ್ರವೊಂದನ್ನು ಬರೆದು ಬಸರದ 'ದಾರುಲ್ ಇಮಾರ' ಎಂಬ ಅರಮನೆಗೆ ತನ್ನ ದೂತನ ಮುಖಾಂತರ ಕಳುಹಿಸಿದನು.*

(ಉಬೈದ್ ಇಬ್ನು ಝಿಯಾದ್ ಎಂದರೆ ಕನಿಕರವೆಂದರೇನೆಂದೇ ಅರಿಯದ ಕಟುಕ. ಅವನ ಮಾತಿಗೆ ಎದುರಾಡಿದರೆ ಮರುಕ್ಷಣದಲ್ಲಿ ಎದುರಾಡಿದವನ ತಲೆಯನ್ನೇ ಹಾರಿಸುತ್ತಿದ್ದ ಕ್ರೂರನು.)

*ಪತ್ರ ತಲುಪಿದ ಕೂಡಲೇ ಉಬೈದ್ ಅಲ್ಲಿಯ ಜನತೆಯನ್ನುದ್ದೇಶಿಸಿ, "ನಾನು ಕೆಲವು ದಿನಗಳ ಮಟ್ಟಿಗೆ ಕೂಫಕ್ಕೆ ಹೋಗುತ್ತಿದ್ದೇನೆ. ನಾನು ಮರಳಿ ಬರುವವರೆಗೆ ನನ್ನ ತಮ್ಮನಾಗಿರುವನು ಇಲ್ಲಿಯ ಗವರ್ನರ್. ಅದರಿಂದ ಅವನ ಮಾತುಗಳನ್ನು ನೀವು ಅನುಸರಿಸಬೇಕು ಎಂದನು.*

ಬಳಿಕ ಉಬೈದುಲ್ಲಾಹಿ ಇಬ್ನು ಝಿಯಾದ್ ಕುದುರೆಯೇರಿ ಕೂಫಕ್ಕೆ ಯಾತ್ರೆ ಹೊರಟನು.

ಅತ್ತ ಕೂಫದ ಜನತೆ..
*ಮುಸ್ಲಿಂ (ರ) ರವರು ಪತ್ರ ಬರೆದಿರುವುದರಿಂದ ಹುಸೈನ್(ರ) ರವರ ಆಗಮನವನ್ನು ಕಾತರದಿಂದ ಕಾಯುತ್ತಿದ್ದರು.*

ಆಗ ಒಬ್ಬ ವ್ಯಕ್ತಿ ಹೇಳಿದನು...

ಅದೇೂ ಅತ್ತ ನೇೂಡಿ, ಆ ಕಪ್ಪು ಕುದುರೆಯಲ್ಲಿ.. ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment