Tuesday, March 20, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 1⃣5⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠

 ಈ ಪತ್ರವನ್ನು ಓದಿದ ⬇

*ಹುಸೈನ್ (ರ)* ನೇರವಾಗಿ *ಕಅಬಾಲಯ'ಕ್ಕೆ* ಹೇೂಗಿ ಕೂಫದ ಜನತೆಯ ಸಂಕಟವನ್ನು ನೆನೆದು ಪವಿತ್ರವಾದ ಆ ಗೇಹದ *ಕಿಲ್ಲೆಯನ್ನು* ಹಿಡಿದು ಬಿಕ್ಕಿ ಬಿಕ್ಕಿ ಅತ್ತರು....

*ಆ ಸಂದರ್ಭದಲ್ಲಿ ಮಖಾಮು ಇಬ್ರಾಹಿಂ'ನ ಹಿಂಭಾಗದಲ್ಲಿ ಮುಸ್ಲಿಂ ಇಬ್ನು ಉಹೈಲ್ (ರ) ಎಂಬ ಸ್ವಹಾಬಿ ನಮಾಝ್ ನಿರ್ವಹಿಸುತ್ತಿದ್ದರು.*

*ರಸೂಲ್ ﷺ ರವರ* ವಂಶಸ್ಥರಾದ ಆ *ಸ್ವಹಾಬಿವರ್ಯರು ಹುಸೈನ್(ರ)ರವರ* ಸಂಕಟವನ್ನು ಕಂಡು ಅವರ ಸಮೀಪ ಹೇೂಗಿ ಕೇಳಿದರು.

*ಹುಸೈನ್ (ರ)ರವರೇ* ಯಾಕಿಷ್ಟು ಸಂಕಟಪಡುತ್ತಿದ್ದೀರಿ? ಅಂಥಾದ್ದೇನಾಗಿದೆ?

*ಆಗ ತಮ್ಮ ಕೈಲ್ಲಿದ್ದ ಪತ್ರವನ್ನು ಹುಸೈನ್ (ರ) ರವರು ಮುಸ್ಲಿಂ (ರ) ರವರಿಗೆ ಕೊಟ್ಟರು.*

ಪತ್ರವನ್ನು ಓದಿದ *ಮುಸ್ಲಿಂ (ರ) ಹುಸೈನ್ (ರ) ರವರನ್ನು* ಸಂತೈಸುತ್ತಾ ಹೇಳಿದರು.
ಈ ಪತ್ರವನ್ನು ಬರೆದವರು ಯಾರು?

*" _ಕೂಫದವರು_ "*

*ತಕ್ಷಣ ಮುಸ್ಲಿಂ (ರ) ಹೇಳಿದರು...*
*ಕೂಫದವರು ನಂಬಿಕೆಗೆ ಅರ್ಹರಲ್ಲ ಅವರು ವಂಚಕರು. ತಮ್ಮ ತಂದೆಯವರನ್ನು ವಂಚಿಸಿ ಕೊಂದವರೂ ಈ ಕೂಫದವರೇ ಆಗಿದ್ದಾರೆ.*

ಮಾತ್ರವಲ್ಲ ಇದರಲ್ಲೇನೇೂ ಮಸಲತ್ತಿರುವಂತೆ ನನಗೆ ಭಾಸವಾಗುತ್ತಿದೆ. ಆದ್ದರಿಂದ ತಾವು ಆ ಬಗ್ಗೆ ಏನೂ ಚಿಂತಿಸದೆ ಧೈರ್ಯವಾಗಿರಿ ಎಂದರು.

ಆಗ *ಹುಸೈನ್ (ರ)ರವರು,*
ಈ ಪತ್ರದ ಪದ ಪ್ರಯೋಗಗಳನ್ನೊಮ್ಮೆ ನೋಡು..!

*ನಾನು ಅಲ್ಲಿಗೆ ಹೋಗದಿದ್ದರೆ, ಅವರ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳದಿದ್ದರೆ ನಾಳೆ ಅಲ್ಲಾಹನ ಸಮಕ್ಷಮದಲ್ಲಿ ನನಗೆದುರಾಗಿ ಸಾಕ್ಷಿ ಹೇಳುವೆವು ಎಂದಿದ್ದಾರೆ. ಹಾಗಿರುವಾಗ ನಾನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೇಗೆ..!?*

*ಮುಸ್ಲಿಂ (ರ)* ಪುನಃ ಹೇಳಿದರು. ಸರಿಯಾಗಿ ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಅಷ್ಟಕ್ಕೂ ಅಲ್ಲಿಗೆ ಹೇೂಗುವುದೇ ಬೇಡ. ಕಾರಣ ಈ ಪತ್ರವನ್ನು ಬರೆದವರು ಕೂಫದವರು ಎನ್ನುವುದು ನೆನಪಿರಲಿ..!

ಆದರೆ *ಮುಸ್ಲಿಂ (ರ) ಎಷ್ಟು ತಿಳಿ ಹೇಳಿದರೂ ಹುಸೈನ್ (ರ) ರವರು* ಕೂಫಕ್ಕೆ ತೆರಳುವ ತಮ್ಮ  ನಿರ್ದಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದಾಗ ಕೊನೆಗೆ *ಮುಸ್ಲಿಂ (ರ)* ಹೇಳಿದರು.

 ಹಾಗಾದರೆ ನಾವೊಂದು ಕೆಲಸ ಮಾಡೇೂಣ. ಮೊದಲು
ನಾನು ನಿಮ್ಮ ಪ್ರತಿನಿಧಿಯಾಗಿ ಕೂಫಕ್ಕೆ ಹೋಗಿ ಅಲ್ಲಿಯ ಪರಿಸ್ಥಿತಿಯನ್ನು ಅವಲೇೂಕಿಸಿ ಸತ್ಯ ಸಂಗತಿಯೇನೆಂದು ತಿಳಿದು ತಮ್ಮ ಗಮನಕ್ಕೆ ತರುತ್ತೇನೆ.
ನನ್ನಿಂದ ಉತ್ತರ ಲಭಿಸಿದ ನಂತರವಷ್ಟೇ, ಅಂದರೆ ತಾವು ಬರಬಹುದು ಎಂದು ನಾನು ತಿಳಿಸಿದರೆ ಮಾತ್ರ ತಾವು ಮಕ್ಕದಿಂದ ಹೊರಡಬೇಕು..! ಏನೆನ್ನುವಿರಿ ಎಂದಾಗ..

ಇದೊಂದು ಉತ್ತಮ ಸಲಹೆಯೆನ್ನಿಸಿದ್ದರಿಂದ *ಹುಸೈನ್ (ರ)ರವರು ಮುಸ್ಲಿಂ(ರ)ರವರ* ಮಾತಿಗೆ ಸಹಮತಿ ಸೂಚಿಸಿದರು.

ನಂತರ ಕಅಬಾಲಯದಿಂದ ತಮ್ಮ ನಿವಾಸಕ್ಕೆ ಮರಳಿದ *ಮುಸ್ಲಿಂ (ರ)ರವರು* ತಮ್ಮ ಪತ್ನಿಯೊಂದಿಗೆ ವಿಷಯ ತಿಳಿಸಿದಾಗ, ಕೂಫದ ಜನತೆಯ ಕಪಟತನದ ಅರಿವಿದ್ದ ಆ ಮಹದಿಯು ವಂಚಕರ ಆ ನಾಡಿಗೆ ಹೇೂಗುವುದೇ ಬೇಡ ಎಂದರು.

ಆಗ *ಮುಸ್ಲಿಂ (ರ)* ನಡೆದ ವಿಷಯವನ್ನೆಲ್ಲ ವಿವರಿಸಿ ತಾನು ಹೇೂಗದಿದ್ದರೆ *ಹುಸೈನ್(ರ)* ಹೇೂಗುವರು. ಹಾಗಾಗಿ ಮೊದಲು ತಾನಲ್ಲಿಗೆ ಹೇೂಗಿ ಪರಿಸ್ಥಿತಿಯ ಅವಲೇೂಕನ ನಡೆಸಿ ತಿಳಿಸುವುದಾಗಿ *ಹುಸೈನ್(ರ)ರಲ್ಲಿ* ಹೇಳಿದ್ದೇನೆ. ಹಾಗಾಗಿ ತಾನು ಕೂಫಕ್ಕೆ ಹೇೂಗಲೇ ಬೇಕಾಗಿದೆಯೆಂದಾಗ ಪತ್ನಿಯು ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದರು.

*ಬಳಿಕ ಮುಸ್ಲಿಂ (ರ)ರವರು ಕೂಫಕ್ಕೆ ಹೊರಟು ನಿಂತಾಗ ಅವರ 9 ಮತ್ತು 11 ವರ್ಷ ಪ್ರಾಯದ ಮುಹಮ್ಮದ್ ಹಾಗು ಇಬ್ರಾಹಿಂ ಎಂಬ ಮಕ್ಕಳು "ಅಪ್ಪನೊಂದಿಗೆ ನಾವೂ ಬರುತ್ತೇವೆಂದು ಹಠ ಹಿಡಿಯಲಾರಂಭಿಸಿದರು."*

ಕೂಫ ಎಂದರೇನೆಂದೇ ಅರಿಯದ ಮುಗ್ಧ ಮನಸ್ಸಿನ ಮಕ್ಕಳ ಬಳಿ *ಮುಸ್ಲಿಂ (ರ)* ಹೇಳಿದರು ಮಕ್ಕಳೇ, ಅಪ್ಪ  ಹೋಗುತ್ತಿರುವುದು ಕೂಫ ಎಂಬ ಸ್ಥಳಕ್ಕಾಗಿದ್ದು ಅದು ಮಹಾ ವಂಚಕರ ನಾಡಾಗಿದೆ. ಅಲ್ಲಿಂದ ಮರಳಲು ಸಾದ್ಯವಾದೀತೆಂಬ ಭರವಸೆಯೂ ಇಲ್ಲ.
ಆದರಿಂದ ಮಕ್ಕಳೇ ನೀವು ಬರುವುದು ಬೇಡ..!

ಆದರೆ ಮಕ್ಕಳು ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰

No comments:

Post a Comment