😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰 🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 2⃣0⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಉಬೈದನು, ಶರಕ್ ಇಬ್ನು ಅವಾಅ(ರ)ರವರೊಂದಿಗೆ ಅನಾರೇೂಗ್ಯದ ಕುರಿತು ಮಾತನಾಡುತ್ತಿರುವಾಗ ತಕ್ಕ ಸಮಯ ನೇೂಡಿ ಶರಕ್(ರ)ರವರು
*"ಸ್ವಲ್ಪ ನೀರು ತನ್ನಿ"* ಎಂದರು. ⬇
ಆದರೆ ಒಳಗಿನಿಂದ ಯಾವ ಸ್ಪಂದನೆಯೂ ಬರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮತ್ತೊಮ್ಮೆ
"ಹಾನಿಯಾ (ರ) ಸ್ವಲ್ಪ ನೀರು ತನ್ನಿ....!
ಇಲ್ಲ ಈಗಲೂ ಒಳಗಿನಿಂದ ಯಾವುದೇ ಉತ್ತರವಿಲ್ಲ..
ಸ್ವಲ್ಪ ಸಮಯದವರೆಗೆ ಉಬೈದ್ ಅಲ್ಲೇ ಕುಳಿತನು.
"ಒಳಗಡೆ ಯಾರು ಇಲ್ಲ ಎನಿಸುತ್ತದೆ. ಸರಿ ನಾನು ಹೊರಡುತ್ತೇನೆ" ಎನ್ನುತ್ತಾ ಹೊರಟು ಬಾಗಿಲ ತನಕ ಹೇೂದವನು, ಸಂಶಯದಿಂದ ಮತ್ತೆ ಹಿಂದಿರುಗಿ ಬಂದು ಶರಕ್(ರ)ರವರ ಮನೆಯೊಳಗೆ ಹೇೂಗಿ ಸುತ್ತಲೂ ಕಣ್ಣಾಡಿಸಿದ.
ಆಗ ಒಳ ಕೇೂಣೆಯಲ್ಲಿ ಕೂಫದ ಭಾಷೆಗಿಂತ ತುಸು ವ್ಯತ್ಯಾಸವಿರುವ ಭಾಷೆಯಲ್ಲಿ ಮಾತನಾಡುತ್ತಿರುವ ಎರಡು ಮಕ್ಕಳು ಮತ್ತು ಮುಸ್ಲಿಂ(ರ)ರವರನ್ನು ಕಂಡು ದುರುಗುಟ್ಟಿ ನೇೂಡುತ್ತಾ ಮುಸ್ಲಿಂ (ರ)ರವರ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಅಲ್ಲಿಂದ ಹೊರಟು ಹೇೂದನು.
(ಹಾನಿಯಾ(ರ) ಮತ್ತು ಶರಕ್(ರ)ರವರು ಕೂಫದ ಪ್ರಮುಖರಾಗಿದ್ದುದರಿಂದ ಶರಕ್(ರ)ರವರು ಅನಾರೇೂಗ್ಯಕ್ಕೀಡಾಗಿದ್ದಾರೆಂದು ತಿಳಿದ ಕೂಡಲೆ ಅವರನ್ನು ಕಾಣಲು ಉಬೈದ್ ಆಗಮಿಸಿದ್ದ. ಮಾತ್ರವಲ್ಲ ಶರಕ್(ರ) ರವರ ಮನೆಯಲ್ಲಿ ಮುಸ್ಲಿಂ(ರ) ವಾಸ್ತವ್ಯ ಹೂಡಿದ್ದಾರೆಂಬ ಮಾಹಿತಿಯೂ ಅವನಿಗೆ ತಲುಪಿತ್ತು. ಹಾಗಾಗಿಯೇ ಬಾಗಿಲ ತನಕ ಹೇೂಗಿದ್ದ ಉಬೈದ್ ಹಿಂದಿರುಗಿ ಬಂದು ಮನೆಯೊಳಗೆ ಹೇೂಗಿ ಪರಿಶೀಲಿಸಿದ್ದ)
ಉಬೈದ್ ಹೋದ ಕೂಡಲೇ ಶರಕ್(ರ)ರವರು ಹಾನಿಯಾ(ರ)ರವರೊಂದಿಗೆ "ಛೇ... ತಕ್ಕ ಸಮಯ ನೇೂಡಿ ನಾನು ಸೂಚನೆ ಕೊಟ್ಟರೂ ತಾವೇಕೆ ಬರಲಿಲ್ಲ? ಇಷ್ಟು ಒಳ್ಳೆಯ ಅವಕಾಶ ಮತ್ತೆ ಲಭಿಸೀತೇ..?"
ಆಗ ಹಾನಿಯಾ (ರ) ರವರು ಉತ್ತರಿಸುವುದಕ್ಕಿಂತ ಮೊದಲೇ ಮುಸ್ಲಿಂ (ರ) ರವರು ಹೇಳಿದರು.
*ಶರಕ್ (ರ)ರವರೇ...!*
*ನಾವು ಪ್ರವಾದಿ ﷺ ರವರ ವಂಶಸ್ಥರು ಎನ್ನುವುದಕ್ಕಿಂತಲೂ ಮಿಗಿಲಾಗಿ ಅಲ್ಲಾಹನ ಪ್ರತಿನಿಧಿಗಳು ಮತ್ತು ಅಲ್ಲಾಹನ ರಸೂಲ್ ﷺರ ಅನುಯಾಯಿಗಳಾಗಿದ್ದೇವೆ. ವಂಚನೆಯೆನ್ನುವುದು ಮಹಾ ಪಾಪ. ಅಲ್ಲದೆ ಎಂತಹ ಸಂದಿಗ್ಧ ಸನ್ನಿವೇಶದಲ್ಲೂ ಕೂಡ ವಂಚಿಸುವುದನ್ನು ಅಲ್ಲಾಹನ ಸಂದೇಶವಾಹಕರಾದ ನೆಬಿ ﷺ ರವರು ನಮಗೆ ಕಲಿಸಲಿಲ್ಲ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ನಾನು ನಿಮ್ಮ ಅತಿಥಿ. ಅತಿಥಿಯಾಗಿರುವ ನಾನು ನಿಮ್ಮ ಮನೆಗೆ ಆಗಮಿಸಿದ ಮತ್ತೊಬ್ಬ ಅತಿಥಿಯನ್ನು ವಧಿಸುವುದು ದ್ರೇೂಹವಲ್ಲವೇ? ಮಾತ್ರವಲ್ಲ ಇಸ್ಲಾಮಿನ ಆಶಯಕ್ಕೂ ಇದು ವಿರುದ್ಧ. ಯುದ್ಧ ರಂಗದಲ್ಲಿ ಮಾತ್ರ ಶತ್ರುವಿನ ವಿರುದ್ಧ ಹೋರಾಡಬಹುದೆಂದು ಕಲಿಸಿದ ಇಸ್ಲಾಮಿನ ವಕ್ತಾರರಲ್ಲವೇ ನಾವು..?*
ಮುಸ್ಲಿಂ(ರ)ರವರ ಮಾತು ಕೇಳಿದ ಶರಕ್ (ರ) ರವರಿಗೆ ಆಗ ಅಥಿತಿಗಳೊಂದಿಗೆ ಹೇಗಿರಬೇಕೆಂಬುದರ ಬಗ್ಗೆ ಇಸ್ಲಾಮಿನ ಸಂದೇಶದ ಆಳ ಮನವರಿಕೆಯಾಯಿತು.
_ಒಂದು ವಿಷಯವನ್ನಿಲ್ಲಿ ಸಾಂದರ್ಭಿಕವಾಗಿ ಮಾನ್ಯ ಓದುಗರ ಗಮನಕ್ಕೆ ತರಲಿಚ್ಚಿಸುತ್ತೇನೆ..!_
*("ಇಸ್ಲಾಮಿಕ ಯುದ್ಧಗಳಲ್ಲಿ ದೀನಿನ ಸಂರಕ್ಷಣೆಯ ಏಕ ಉದ್ದೇಶದಿಂದಲ್ಲದೆ, ವಯಕ್ತಿಕ ಧ್ವೇಷದಿಂದ ಯಾರೊಂದಿಗೂ ಸೇಡು ತೀರಿಸಲು ಅವಕಾಶವಿಲ್ಲ. ಆ ಕಾರಣದಿಂದಲೇ ತಮಗೆ ವಿಷ ಉಣಿಸಿದ ಜಅದ(ರ)ರೊಂದಿಗಾಗಲಿ ಅಥವಾ ಮತ್ಯಾರೊಂದಿಗೇ ಆಗಲಿ ಸೇಡು ತೀರಿಸಬಾರದೆಂದು ಹಸನ್ (ರ) ರವರು ಮರಣಾಸನ್ನ ವೇಳೆಯಲ್ಲಿ ಹುಸೈನ್(ರ)ರೊಂದಿಗೆ ವಸೀಯ್ಯತ್ ಮಾಡಿದರೆನ್ನುವುದು ಗಮನಾರ್ಹ.")*
ಮರುದಿನ ಫಜರ್'ಗೆ ಮುಂಚಿತವಾಗಿಯೇ ಉಬೈದ್'ನ ಆದೇಶದಂತೆ ಎಂಬತ್ತು ಸೈನಿಕರು ಹಝ್ರತ್ ಶರಕ್ (ರ) ರವರ ಮನೆಯನ್ನು ಸುತ್ತುವರಿದಿದ್ದರು.
ಫಜರ್ ನಮಾಝ್'ಗೆ ಮಸೀದಿಗೆ ಹೇೂಗಲೆಂದು ಹೊರಗಿಳಿದ ಶರಕ್(ರ) ರತ್ತ ಸೈನಿಕರು ಧಾವಿಸಿದಾಗ ಪರಿಸ್ಥಿತಿಯ ಗಂಭೀರತೆಯನ್ನರಿತು ಖಡ್ಗಕ್ಕಾಗಿ ಮನೆಯೊಳಗೆ ಓಡಲೆತ್ನಿಸಿದ ಶರಕ್(ರ)ರವರು ಎಡವಿ ಬಿದ್ದರು. ತಕ್ಷಣ ಅವರನ್ನು ಸೆರೆ ಹಿಡಿದ ಸೈನಿಕರು ಕರೆದೊಯ್ದು ಉಬೈದ್'ನ ಮುಂದೆ ಹಾಜರು ಪಡಿಸಿದರು.
ಶರಕ್(ರ)ರವರನ್ನು ಕಂಡ ಉಬೈದ್ ಕೇಳಿದ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡
No comments:
Post a Comment