Monday, September 21, 2020

ಅಹ್ಲು ಸ್ಸುನ್ನ = 07

*ಅಹ್ಲು ಸ್ಸುನ್ನ - 7*
              *@ ಅಬೂ ರಾಝೀ*
➖➖➖➖➖➖➖➖

*ವಹಾಬಿಸಂ ಬೆಳವಣಿಗೆಯ ಹಿಂದೆ ಪಾಶ್ಚಾತ್ಯ ಶಕ್ತಿಗಳು - ಸೌದಿ ರಾಜಕುಮಾರ*

2018, ಮಾರ್ಚ್ 22. ವಾಷಿಂಗ್ಟನ್‌ ಪೋಸ್ಟ್‌ ಗೆ  ಯುವ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ರವರು ನೀಡಿದ ಸಂದರ್ಶನ ಸಲಫಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. 
Gulf times ಹೊರತಂದ ಈ ಸಂದರ್ಶನ ಸಲಫಿಗಳ ನಿಜಬಣ್ಣವನ್ನು ಬಹಿರಂಗಗೊಳಿಸಿತು. 
ಪಾಶ್ಚಿಮಾತ್ಯ ಶಕ್ತಿಗಳ ಕುಮ್ಮಕ್ಕಿನಿಂದಲೇ ಸಲಫಿಸಂ ಜಗತ್ತಿನಾದ್ಯಂತ ಪ್ರಸಾರವಾಯಿತೆಂದು ಯುವ ರಾಜಕುಮಾರ ಬಹಿರಂಗ   ಪಡಿಸಿದರು.

https://www.rt.com/news/422563-saudi-wahhabism-western-countries/

*ಗಲ್ಫ್ ರಾಷ್ಟ್ರಗಳಲ್ಲಿ ಐಸಿಸ್ ನಡೆಸಿದ ಭಯಾನಕ ಭಯೋತ್ಪಾದನೆ ಹಾಗೂ ಅದರ ಹಿಂದೆಯಿದ್ದ ವಹಾಬಿ ಐಡಿಯೋಲಜಿಯ ಬಗ್ಗೆ ಪಾಶ್ಚಾತ್ಯರು ಚರ್ಚಿಸುತ್ತಿರುವಾಗಲೇ ಕೇವಲ ಸೌದಿ ಅರೇಬಿಯಾದಲ್ಲಿ ಮಾತ್ರ ಸೀಮಿತವಾಗಬೇಕಾಗಿದ್ದ ವಹಾಬಿಸಂ ಜಗತ್ತಿನಾದ್ಯಂತ ಪ್ರಚಾರವಾಗಲು ಪಾಶ್ಚಾತ್ಯ ದೇಶಗಳು ಕಾರಣವೆಂದು ಅವರು ಬಹಿರಂಗ ಪಡಿಸಿದರು*.

ಒಂದನೇ ಮಹಾಯುದ್ಧದ ಸಂದರ್ಭ. ಜಗತ್ತಿನ ಬಲಾಢ್ಯ ಶಕ್ತಿಯಾಗಿದ್ದ ಸೋವಿಯತ್ ಯೂನಿಯನ್ ಗೆ ಸಡ್ಡು ಹೊಡೆಯಲು ಅಮೇರಿಕ - ಬ್ರಿಟನ್ ಒಕ್ಕೂಟ ತೀರ್ಮಾನಿಸಿತು. ಅದಕ್ಕಾಗಿ ಅವರು ಕಂಡು ಕೊಂಡ ಕುತಂತ್ರವೇ ವಹಾಬಿಸಂ  ಪ್ರಚಾರ. 
ಈ ಯೋಜನೆಯ ಪ್ರಕಾರ ಸೌದಿ ಪಾಠ ಶಾಲೆಯಿಂದ ಹೊರಬಂದ ಉಸಾಮ ಬಿನ್ ಲಾಡೆನ್ ರಶ್ಯದ ಜೊತೆ ಹೋರಾಡಲು ಅಫಘಾನಿಸ್ತಾನಕ್ಕೆ ಹೊರಟರು. ಅಲ್ಲಿ ತಾಲಿಬಾನ್ ರಚಿಸಲಾಯಿತು. ಅವರಿಗೆ ಬೇಕಾದ ಶಕ್ತಿ, ಆಯುಧ, ತರಭೇತಿ ಎಲ್ಲವನ್ನೂ ನೀಡಿದ್ದು ಇದೇ ಅಮೇರಿಕಾ. 
ಸೋವಿಯತ್ ಯೂನಿಯನ್ ಹೊಡೆದು ನುಚ್ಚು ನೂರಾದ ನಂತರ ಈ ಭಯೋತ್ಪಾದನೆ ಕೊನೆಗೊಳ್ಳಲಿಲ್ಲ.
ತಾನು ಕಕ್ಕಿದ್ದನ್ನೆ ಪಾಶ್ಚಾತ್ಯಾರು ತಿಂದರು. ಹುಟ್ಟಿಸಿದವರನ್ನು, ಸಾಕಿದವರನ್ನು ಕೊಲ್ಲಲು ಈ ಭಯೋತ್ಪಾದಕರು ಹಿಂದೆ - ಮುಂದೆ ನೋಡಲಿಲ್ಲ.. ಸಾಕಿದ ಗಿಣಿಯೇ  ಹದ್ದಾಗಿ ಕುಕ್ಕಿದ ಪರಿಸ್ಥಿತಿ. 

ಪಾಶ್ಚಾತ್ಯರ ಹಣ ಪಡೆದು ಬೆಳೆದ ವಹಾಬಿಸಂಗೆ ತೌಹೀದ್ ಎಂಬುದು ಕೇವಲ ಅಧಿಕಾರಕ್ಕಾಗಿ ನಡೆಸಿದ ನಾಟಕ. 
ತೌಹೀದ್ ಹೆಸರಲ್ಲಿ ನಡೆಸಿದ ಹೋರಾಟ, ದೌರ್ಜನ್ಯ, ಕ್ರೌರ್ಯ, ಭೀಕರತೆ, ರಕ್ತಪಾತಗಳೆಲ್ಲವೂ ಅವರ ನಿಗೂಢ ಉದ್ದೇಶವನ್ನು ಬಯಲಿಗೆಳೆದಿದೆ.

*ಒಂದು ಕಾಲದಲ್ಲಿ  ಕೇರಳದಲ್ಲಿ ಇವರು ತೌಹೀದ್ ಹೆಸರಲ್ಲಿ ಕಾರ್ಯಚರಿಸಿದಾಗ ಒಂದು ವಿಭಾಗ ಜನರು ಇವರನ್ನು ನಂಬಿದರು. ಆದರೆ ಒಂದು ಹಂತಕ್ಕೆ ಸಲಫಿಗಳು ಬೆಳೆದು ನಿಂತಾಗ ಇವರು ನಡೆಸಿದ ಅಧಿಕಾರ ದಾಹ, ಭ್ರಷ್ಟತೆ, ವಂಚನೆ, ದಗಲ್ಬಾಜಿ ಇಡೀ ಕೇರಳ ನಾಚಿ ತಲೆ ತಗ್ಗಿಸಿತು. ದಮ್ಮಾಜಿ, ಐಸಿಸ್ ಜೊತೆ ಕೆಲವು ಸಲಫಿಗಳ ಸಂಬಂಧದಿಂದ  ಸಲಫಿ ಮುಖಂಡರೇ ತಾವು ಸಲಫಿ ಎಂದು ಕರೆಯಲು ಹಿಂಜರಿದರು*. 

ನಿಜ ಹೇಳಬೇಕಾದರೆ ಒಬ್ಬ ಸಲಫಿಯ ಜೊತೆ  ಮಾತನಾಡಿ. ಆತ ಮೊದ - ಮೊದಲು ಹದೀಸ್ ಳಹೀಫ್ ಎನ್ನುತ್ತಾನೆ. ನಂತರ ನಿಷೇಧಿಸುತ್ತಾನೆ. ಇಮಾಮರನ್ನು ತಿರಸ್ಕರಿಸುತ್ತಾನೆ. ಸ್ವಹಾಬಿಗಳನ್ನು ವಿಮರ್ಶಿಸುತ್ತಾನೆ. ಕಿತಾಬ್‌ಗಳ ಬಗ್ಗೆ ಮಾತನಾಡುವುದೇ ಆತನಿಗೆ ಅಲರ್ಜಿ. 

ಇವರ ತೌಹೀದ್ ಕೇವಲ ಮಣ್ಣಾಂಗಟ್ಟಿ

Sunday, September 20, 2020

ಅಹ್ಲು ಸ್ಸುನ್ನ = 06

*ಅಹ್ಲು ಸ್ಸುನ್ನ - 6*
              *@ ಅಬೂ ರಾಝೀ*
➖➖➖➖➖➖➖➖
*ವಹಾಬಿಸಂ ಪ್ರಚಾರ ಮಾಡಲು ಬಂದ ಅಫ್ಘಾನಿ , ಪಾಶ್ಚಾತ್ಯ ರ ಕೈಗೊಂಬೆಯಾಗಿದ್ದ.*

ಅರಬ್ ಜಗತ್ತಿನ ಹೊರಗೆ ವಹಾಬಿಸಂಗೆ  ನೇತೃತ್ವ ನೀಡಿದ್ದು ಮೂರು ಮಂದಿ.
ಜಮಾಲುದ್ದೀನ್ ಅಫ್ಫಾನಿ ( 1838 - 1898 ) ಮುಹಮ್ಮದ್ ಅಬ್ದು ( 1849 - 1905 ) ರಶೀದ್ ರಿಳಾ( 1865 -  1935 ).
ಇಬ್ನು ಅಬ್ದುಲ್ ವಹಾಬ್‌ನ ಆಶಯಗಳನ್ನು ಅದೇ ರೀತಿ ಸ್ವೀಕರಿಸುವ ಬದಲು, ಅದನ್ನು ಮಾದರಿಯಾಗಿಟ್ಟು ಮತ್ತಷ್ಟು ಬದಲಾವಣೆ, ನವ, ಉಗ್ರ ಸಿದ್ಧಾಂತವನ್ನು ರೂಪಿಸಲು ಈ ಮೂವರು ಪ್ರಯತ್ನಿಸಿದರು. ವಹಾಬಿಗಳು ಬಹಿರಂಗವಾಗಿ ಹೇಳಲು ಹಿಂಜರಿದ ಅನೇಕ ಕಾರ್ಯಗಳನ್ನು ಇವರು ಬಹಿರಂಗವಾಗಿಯೇ ಹೇಳತೊಡಗಿದರು. ಇದರಿಂದ ವಹಾಬಿಸಂ ಮತ್ತೊಂದು ರೂಪ ಪಡೆಯಿತು. 
ನಜ್‌ದ್‌ ಶೈಖ್‌ನ ಸಿದ್ಧಾಂತವನ್ನು ಅದೇ ರೀತಿ ಅಂಗೀಕರಿಸುವವರನ್ನು ಗಲ್ಫ್ ಸಲಫಿಗಳೆಂದು. ಹೊಸ ಬದಲಾವಣೆ ಸ್ವೀಕರಿಸಿದವರನ್ನು ಇಸ್ಲಾಹಿಗಳೆಂದು ಕರೆಯಲಾಯಿತು. 
*ದುಃಖಕರ ಸಂಗತಿಯೆಂದರೆ ಇಬ್ನು ಅಬ್ದುಲ್ ವಹಾಬ್‌ರನ್ನು ಬ್ರಿಟಿಷ್ ಗೂಢಚಾರ ವಶೀಕರಿಸಿದಂತೆ*, 
*ಈ ತ್ರಿಮೂರ್ತಿಗಳನ್ನು ಯಹೂದಿ ಗೂಢಚಾರ ಸಂಘವು ವಶೀಕರಿಸಿತು.*
*ವಹಾಬಿಸಂಗೆ ಹೊಸರೂಪ, ಹೊಸ ಶೈಲಿ ನೀಡಿದ ಈ ಮೂವರು ಯಹೂದಿ ಭೀಕರ ಸಂಘಟನೆ ಮಸೋನಿಸಂನ ಸದಸ್ಯರಾಗಿಯೂ, ಅದರ ಪ್ರಚಾರಕ್ಕಾಗಿಯೂ ಕಾರ್ಯಚರಿಸಿದ್ದು ಮಾತ್ರ ಚಾರಿತ್ರಿಕ ಸತ್ಯ*.

ಅ್ಯಂಡರ್ ಸೋವ್ (ಗ್ರಾಂಡ್ ಮಾಸ್ಟರ್)ರ ನೇತೃತ್ವದಲ್ಲಿ 1717 ರಂದು ಲಂಡನ್‌ನಲ್ಲಿ ಮಸೋನಿಸಂ (Free Mason Movement) ಎಂಬ ಜಾಗತಿಕ ಸಂಘಟನೆ ಅಸ್ಥಿತ್ವಕ್ಕೆ ಬಂತು. ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು ಹಾಗೂ ಆಡಳಿತಾಧಿಕಾರಿಗಳ ಮೇಲೆ ಪ್ರಭಾವ ಬೀರಲು, ಹಾಗೂ ತಮ್ಮ ಸಿದ್ಧಾಂತವನ್ನು ಅವರ ಮೂಲಕ ಪ್ರಚಾರ ಪಡಿಸಲು ಯಹೂದಿಗಳು ರಹಸ್ಯವಾಗಿ ರಚಿಸಿದ ಅಂತರಾಷ್ಟ್ರೀಯ ಸಂಘಟನೆ ಮಸೋನಿಸಂ.
ಬ್ರಿಟನ್‌ನ ಮಸೋನಿಸಂನ್ನು ಎನ್‌ಸೈಕ್ಲೊಪೀಡಿಯಾ ಪರಿಚಯ ಪಡಿಸಿದ್ದು ಹೀಗೆ
 The Largest world wide seer eat Society  
ಈ ಸಂಘಟನೆಯ ಮುಸ್ಲಿಂ ಮುಖಗಳಾಗಿದ್ದರು ಅಫ್ಫಾನಿ, ಅಬ್ದು ಮತ್ತು ರಿಳಾ. ಮುಸ್ಲಿಮರೆಡೆಯಲ್ಲಿ ಯಹೂದಿ ಆಶಯ, ಅಜೆಂಡವನ್ನು ಜಾರಿಗೊಳಿಸಿದ ಕುಖ್ಯಾತಿ ಈ ಮೂವರಿಗಿದೆ. 
ಮೊಸೋನಿಸಂನ ಜ್ಞಾನಕೋಶ ಹೇಳುವುದು ನೋಡಿ *ಬೈರೂತ್‌ನ ಮುಗೋನಿಸ್ಟ್ ನಾಯಕ ರಿಳಾ  ಅಬ್ದುರ್ರಶೀದ್, ಈಜಿಪ್ತ್‌ನ ಮುಸೋನಿಸ್ಟ್ ನಾಯಕ ಜಮಾಲುದ್ದೀನ್ ಅಫ್ವಾನಿಯಾಗಿದ್ದರು. ಅಲ್ಲಿ ಮಸೋನಿಸಂ ಸದಸ್ಯರಲ್ಲಿ ಹೆಚ್ಚಿನವರು ಅಘ್ವಾನಿಯ್ಯ ಬೆಂಬಲಿಗರು ಮತ್ತು, ಶಿಷ್ಯರಾಗಿದ್ದರು. ಆಡಳಿತ ರಂಗದ ಪ್ರಮುಖರು ಅದರಲ್ಲಿದ್ದರು. ನಂತರ ಅದಕ್ಕೆ ನೇತೃತ್ವ  ನೀಡಿದ್ದು ಉಸ್ತಾದ್ ಮುಹಮ್ಮದ್ ಅಬ್ದು. ಅವರ ಉನ್ನತ ಮುಸೋವಿಸ್ಟ್ ಲೀಡರಾಗಿದ್ದರು. (ದಾ‌ಇರತ್ತುಲ್ ಮು‌ಆರಿಫೀನ್ ಮಾಸೂನಿಯ್ಯ 197)*
*ಸುಲಭವಾಗಿ ಹೇಳಬೇಕಾದರೆ ಇಂಡ್ಯಾದ ಸಂಘಪರಿವಾರದ ಮುಸ್ಲಿಂ ಮುಖವಾಗಿ MRM ಇದ್ದಂತೆ, ಮಸೋನಿಸಂನ ಮುಸ್ಲಿಂ ಮುಖವಾಗಿ ಅಫ್ಫಾನ್, ರಿಳಾ, ಅಬ್ದು ಕಾರ್ಯಚರಿಸಿದರು*. 

ಸಲಫಿ ಮುಖಂಡ ,ಸಲಫಿ ಉಲಮಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ M I ಮುಹಮ್ಮದಾಲಿ ಸುಲ್ಲಮೀ ಬರೆದ ಗಲ್ಫ್ ಸಲಫಿಸಂ - ಮುಜಾಹಿದ್ ಪ್ರಸ್ಥಾನಂ ಎಂಬ ಕೃತಿಯಲ್ಲಿ ಕುತೂಹಲಕಾರಿ ಮಾಹಿತಿಗಳಿವೆ.
*ಐರೋಪ್ಯ ಶಕ್ತಿಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಮುಸ್ಲಿಮರ ಮೇಲೆ ಹೇರಳು ನಿರಂತರ ಪ್ರಯತ್ನಿಸುತ್ತಿದ್ದವು.ಆದರೆ ಅದು ಸಾಧ್ಯವಾಗಿಲ್ಲ.ಉಲಮಾಗಳ ಶಕ್ತಿಶಾಲಿ ನೇತೃತ್ವ ಇದಕ್ಕೆ ಅಡ್ಡಿಯಾಗಿತ್ತು.ಇದನ್ನು ಮನಗಂಡ ಪಾಶ್ಚಾತ್ಯ ಶಕ್ತಿಗಳು ಮುಸ್ಲಿಂ ಮುಖಂಡರನ್ನೇ ಇದಕ್ಕಾಗಿ ಉಪಯೋಗಿಸಲು ನಿರ್ಧರಿಸಿತು.ಆಗ ಅವರಿಗೆ ಸಿಕ್ಕಿದ ಮುಖಂಡನೇ ಜಮಾಲುದ್ದೀನ್ ಅಫ್ಘಾನಿ*.

ಐರೋಪ್ಯ ಶಕ್ತಿಗಳ ನೀಚ ಅಜೆಂಡವನ್ನು ಜಾರಿಗೊಳಿಸಲು ಅವರ ಕೈಗೊಂಬೆಯಾಗಿ ವರ್ತಿಸಿದ ಅಫ್ಘಾನಿ ,ಅದಕ್ಕಾಗಿ ಖುರ್‌ಆನ್, ಹದೀಸ್‌ಗಳ ದುರ್ವ್ಯಾಖ್ಯಾನ ಮಾಡಿದರು.ಇಮಾಮ್‌ಗಳನ್ನು ತಿರಸ್ಕರಿಸಿದರು. ಸ್ವಹಾಬಿಗಳ ಬಗ್ಗೆ ಗೊಂದಲ ಮೂಡಿಸಿದರು.ಸಂಶೋಧನೆಯ ನೆಪದಲ್ಲಿ ಇಸ್ಲಾಮಿನ ನೈಜ ಪಥವನ್ನು ಬದಲಾಯಿಸಿದರು.ಸುಂದರ ಸಂಪ್ರದಾಯವನ್ನು ತಳ್ಳಿ ಹಾಕಿದರು.ಹೊಸ ಇಸ್ಲಾಮನ್ನು ಪರಿಚಯಿಸಿದರು.
ಇದರಿಂದ ಈ ಸಮಾಜ ಅನುಭವಿಸಿದ ನಷ್ಟ ಹೇಳತೀರದು.ಅಂದಿನ ದುರಂತದ ಫಲ ಇಂದೂ ಅನುಭವಿಸುತ್ತಿದೆ.

ಆದ್ದರಿಂದಲೇ ಗಲ್ಫ್ ಸಲಫಿಸಂಗೂ ಇತರೆಡೆಯಲ್ಲಿರುವ ಸಲಫಿಗಳಿಗೂ ಅನೇಕ ವ್ಯತ್ಯಾಸಗಳಿವೆ. ಉದಾಹರಣೆ ಕೇರಳ ಸಲಫಿಗಳನ್ನೇ ನೋಡಿರಿ. ಅವರ ಹದೀಸ್ ನಿಷೇಧದ  ಪರಿಣಾಮವಾಗಿ ಇಸ್ಲಾಮನ್ನೇ ಅವಹೇಳನ ಮಾಡುವ ಮುಸ್ಲಿಂ ಸಂಘಗಳು ಕೇರಳದಲ್ಲಿ ಹುಟ್ಟಿಕೊಂಡವು. ಚೇಗನ್ನೂರಿಸಂ (ಅಹ್ಮದಿಯ ಜಮಾ‌ಅತ್) ನಾಸಿಕ ವಾದ (ಜಾಮಿದಾ ಟೀಚರ್) ಖಾದಿಯಾನಿಗಳು. ಇದರಲ್ಲಿರುವ ಹೆಚ್ಚಿನವರು ಒಂದಲ್ಲ ಒಂದು ಕಾಲದ ಸಲಫಿ ಸಿದ್ಧಾಂತದ ಪ್ರಚಾರಕರಾಗಿದ್ದರು. ಇಷ್ಟು ಮಾತ್ರವಲ್ಲ ಹದೀಸ್ ನಿಷೇಧದ ಫಲವಾಗಿ ಕೇರಳದಲ್ಲಿ ಸಲಫಿಗಳೇ 8 - 10 ಗ್ರೂಪ್‌ಗಳಾಗಿ ವಿಭಜಿಸಿದ್ದಾರೆ. 

ಇನ್ನೊಂದು ಘಟನೆ ನೋಡಿ.
ಸೋವಿಯತ್ ರಷ್ಯಾದ ವಿರುದ್ಧ  ಅಫಘಾನ್ ಮುಸ್ಲಿಮರು ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ  ಇತ್ತ ಅಮೇರಿಕವು ತನ್ನ ರಾಜಕೀಯ ಉದ್ದೇಶಕ್ಕಾಗಿ  ವಹಾಬಿಗಳನ್ನು ಬಳಸಿಕೊಂಡಿತು . ಸೌದಿ ವಹಾಬಿ ಪಾಠ ಶಾಲೆಯಿಂದ ಹೊರಬಂದ ಉಸಾಮ ಬಿನ್ ಲಾಡೆನ್ ನೇರವಾಗಿ ಅಫಘಾನ್‌ಗೆ ಹೋದದ್ದು, ಅಲ್ಲಿ ತಾಳಿಬಾನ್ ಸ್ಥಾಪಿಸಿದ್ದು. ಇದೇ ಹಿನ್ನಲೆಯಲ್ಲಿ.  ವಹಾಬಿಸಂನ ಹೊಸ ರೂಪವಾಗಿತ್ತು ತಾಳಿಬಾನ್.
ಶಾಂತಿ, ಸಹೋದರತೆ, ಸಾಮರಸ್ಯದಿಂದ ಜೀವಿಸುತ್ತಿದ್ದ ಹಾಗೂ ಇಸ್ಲಾಮಿನ ಸುಂದರ ಮುಖವಾದ ಸೂಫಿಸಂನ್ನು ಟೀಕಿಸುತ್ತಾ, ಔಲಿಯಾಗಳನ್ನು ವಿಮರ್ಶಿಸುತ್ತಾ, ಮಖ್‌ಬರಗಳನ್ನು ಧ್ವಂಸಗೊಳಿಸುತ್ತಾ, ಇಸ್ಲಾಮಿನ ಪರಂಪರೆ ಬಿಂಬಿಸುವ ಸ್ಮಾರಕಗಳ ಮೇಲೆ ಕರಸೇವೆ ಮಾಡುತ್ತಾ ತಾಳಿಬಾನ್‌ನ ರಥಯಾತ್ರೆ ಆರಂಭವಾಯಿತು. ತಾಲಿಬಾನಿನ ಅಂದಿನ ದಮನ ಕಾರ್ಯಚರಣೆಗೆ ಅಮೇರಿಕ ಪರೋಕ್ಷ ಬೆಂಬಲ ನೀಡಿತು.

ತಾಲಿಬಾನ್, ಅಲ್‌ಖಾಯಿದಾ, ಐಸಿಸ್, ಲಷ್ಕರ್‌ಗಳೆಲ್ಲ ತಮ್ಮ ಸಿದ್ಧಾಂತವನ್ನು ರಚಿಸಿದ್ದು ವಹಾಬಿಸಂನಿಂದ. ಪರಂಪರಾಗತ ಇಸ್ಲಾಮೀ ಆದರ್ಶವನ್ನು ಧಿಕ್ಕರಿಸಿ ನವ ಚಿಂತನೆಯ ಮೂಲಕ ಉಗ್ರವಾದಿತ್ವವನ್ನು ಪಸರಿಸಿದ್ದು ವಹಾಬಿಸಂನ ಸಾಧನೆ. ಭೀಕರ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರಲು ಕೇರಳದಿಂದ  ಹೋದದ್ದು ಸಲಫಿ ಕಾರ್ಯಕರ್ತರು. ವಹಾಬಿಸಂ ಮತ್ತು ಐಸಿಸ್‌ನ ಕಾರ್ಯಶೈಲಿಗಳು ಒಂದೇ ಆಗಿತ್ತು.

ಸಲಫಿಸಂ - ವಹಾಬಿಸಂ ಅಪಾಯದ ಬಗ್ಗೆ ಮುಸ್ಲಿಮರು ಜಾಗೃತರಾಗದಿದ್ದರೆ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ

ಅಹ್ಲು ಸ್ಸುನ್ನ = 05

*ಅಹ್ಲು ಸ್ಸುನ್ನ - 5*
              *@ ಅಬೂ ರಾಝೀ*
➖➖➖➖➖➖➖➖
*ಸಲಫಿಗಳ ಅಧಿಕಾರ ದಾಹಕ್ಕೆ ಫೆಲೆಸ್ತೀನ್ ಬಲಿಯಾಯಿತು*

ಸೌದಿ ಅರೇಬಿಯಾದಲ್ಲಿ ವಹಾಬಿಗಳು ನಡೆಸಿದ ರಕ್ಕಸ ತಾಂಡವ, ಕ್ರೌರ್ಯ, ಹಿಂಸೆ ಜಾಗತಿಕ ಮುಸಲ್ಮಾನರ ನಿದ್ದೆಗೆಡಿಸಿತು. ಮುಸ್ಲಿಂ ಸಮುದಾಯದ ಸಂಕಟವನ್ನು ಅರಿತ ಈಜಿಪ್ಟ್‌ ,ತನ್ನ ಹೊಣೆಗಾರಿಕೆ ನೆರವೇರಿಸಲು ಮುಂದೆ ಬಂತು.
ಇದರ ಪರಿಣಾಮ.ಹಿ. 1226 ರಲ್ಲಿ ವಹಾಬಿಗಳಿಂದ ಪವಿತ್ರ ಮಕ್ಕಾವನ್ನು ರಕ್ಷಿಸಲು  ಈಜಿಪ್ತ್ ಆಡಳಿತಾಧಿಕಾರಿ ಮುಹಮ್ಮದ್ ಬಾಷ ಪ್ರಯತ್ನಿಸಿದರು.  ಮೊದಲ ಪ್ರಯತ್ನ  ಯಶಸ್ಸು ಕಾಣಲಿಲ್ಲ. ಪುನಃ 2 ನೇ ಬಾರಿ ಪ್ರಯತ್ನಿಸಿದರು. ಈ ಬಾರಿ ನಜ್‌ದ್ (ರಿಯಾದ್) ಕೇಂದ್ರವಾಗಿಟ್ಟುಕೊಂಡು ಹೋರಾಟ ನಡೆಸಿದರು. ಈ ಹೋರಾಟದಲ್ಲಿ ವಹಾಬಿಗಳು ಸೋತು ಸುಣ್ಣವಾಗಿ ಓಡಿ ಹೋದರು. ವಹಾಬಿಗಳ ಅಹಂಕಾರ ಹುಟ್ಟಡಗಿಸಲು ಅವರ ಮೇಲೆ ತೆರಿಗೆ ಹಾಕಲಾಯಿತು. 
ಮುಂದೆ ಮಕ್ಕಾ, ಮದೀನಾ, ಜಿದ್ದಾ, ತ್ವಾಯಿಫ್‌ಗಳನ್ನು ಮುಸ್ಲಿಂ ಸೇನೆ ವಹಾಬಿಗಳಿಂದ ರಕ್ಷಿಸಿತು. 

*ಸಹೂದ್ ಮರಣ*  ದರ್‌ಇಯ್ಯಾದ ಆಡಳಿತಾಧಿಕಾರಿ ಇಬ್ನು ಅಬ್ದುಲ್ ವಹಾಬ್‌ನ ಮಿತ್ರನಾಗಿದ್ದ ಮುಹಮ್ಮದ್ ಸಹೂದ್ 1229 ಜಮಾದಿಲ್ ಅವ್ವಲ್‌ನಲ್ಲಿ ಮರಣ ಹೊಂದುತ್ತಾರೆ. ನಂತರ ದರ್‌ಇಯ್ಯಾದ ಆಡಳಿತ ಅವರ  ಮಗ ಅಬ್ದುಲ್ಲಾ ಸಹೂದ್ ವಹಿಸುತ್ತಾರೆ. ದರ್‌ಇಯ್ಯಾದಲ್ಲಿರುವ ವಹಾಬಿ ಆಡಳಿತವನ್ನು ಕೊನೆಗಾಣಿಸಲು, ಈಜಿಪ್ತ್ ಆಡಳಿತಾಧಿಕಾರಿ ತನ್ನ ಮಗ ಇಬ್ರಾಹೀಂ ಭಾಷಾನನ್ನು ಸೈನ್ಯದೊಂದಿಗೆ ರಿಯಾದ್‌ಗೆ  ಕಳುಹಿಸುತ್ತಾರೆ. ಹಿ. 1232 ನಲ್ಲಿ ಇಬ್ರಾಹೀಂ ಬಾಷಾ ಹಾಗೂ ಅಬ್ದುಲ್ಲಾ ಸಹೂದ್ ನಡುವೆ ನಡೆದ ಭೀಕರ ಹೋರಾಟದಲ್ಲಿ  ಇಬ್ರಾಹೀಂ ಬಾಷಾ ವಿಜಯಗೊಳ್ಳುತ್ತಾರೆ. 
ಈ ಸೋಲಿನ ಅವಮಾನದಿಂದ ವಹಾಬಿಗಳು ತಮ್ಮ ಕೇಂದ್ರವನ್ನು ದರ್‌ಇಯ್ಯಾದಿಂದ ರಿಯಾದ್‌ಗೆ ಬದಲಾಯಿಸುತ್ತಾರೆ.

ಉಸ್ಮಾನಿಯಾ ಖಿಲಾಫತ್ ಆಡಳಿತದಲ್ಲಿ ಕೊರತೆಗಳಿದ್ದರೂ  ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಮುಸ್ಲಿಂ ಸಮುದಾಯಕ್ಕೆ ನೇತೃತ್ವ ನೀಡಲು ಖಿಲಾಫತ್‌ಗೆ ಸಾಧ್ಯವಾಗಿತ್ತು. ಈ ಆಡಳಿತದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹೊರಗಿನ ಶಕ್ತಿಗಳು ನುಸುಳಲು ಸಾಧ್ಯವಾಗುತ್ತಿರಲಿಲ್ಲ. 
ಇದು ಬ್ರಿಟಿಷರಿಗೆ ದೊಡ್ಡ ತಲೆನೋವಾಗಿತ್ತು. 
ಬ್ರಿಟಿಷರ ವಸಾಹತುಶಾಹಿ, ಧರ್ಮ ಪ್ರಚಾರ, ಅಧಿಕಾರದಾಹಕ್ಕೆ ತಡೆಯಾಗಿ ನಿಂತದ್ದು ಉಸ್ಮಾನಿಯಾ ಖಿಲಾಫತ್. ಈ ಖಿಲಾಫತ್ ನ ನಾಶಕ್ಕೆ ಬ್ರಿಟಿಷರು ಮಾಡಿದ ಕುತಂತ್ರದ ಫಲವಾಗಿತ್ತು ವಹಾಬಿಸಂನ ಬೆಳವಣಿಗೆ.
( ಸೋವಿಯತ್ ರಷ್ಯಾವನ್ನು ಸೋಲಿಸಲು ಅಮೇರಿಕವು ಅಫ್ಘಾನಿಸ್ತಾನದಲ್ಲಿ ತಾಲಿಬಾನನ್ನು ಬೆಂಬಲಿಸಿದಂತೆ )
*ಒಂದನೇ ಮಹಾ ಯುದ್ದದಲ್ಲಿ ಉಸ್ಮಾನಿಯಾ ಖಿಲಾಫತ್ ವಿರುದ್ಧ ಸಹಕರಿಸಿದರೆ , ವಹಾಬಿ ರಾಷ್ಟ್ರದ ರಚನೆಗೆ ಸಹಕಾರ ನೀಡುವುದಾಗಿ ಬ್ರಿಟಿಷರು ಮತ್ತು ವಹಾಬಿಗಳ ಮಧ್ಯೆ ಒಪ್ಪಂದ ನಡೆಯಿತು*

1915 ರಲ್ಲಿ ವಹಾಬಿ ರಾಷ್ಟ್ರ ಸ್ಥಾಪನೆಗೆ ಅಬ್ದುಲ್‌ ಅಝೀಝ್ ಬಿನ್ ಸಹೂದ್ ಮತ್ತು ಬ್ರಿಟನ್‌ನ ರಾಜಕೀಯ ಪ್ರತಿನಿಧಿ ಸರ್‌ಪೇರ್ಸಿ ಕೋಕ್ಸ್ ನಡುವೆ ಒಪ್ಪಂದ ನಡೆಯಿತು. ಬ್ರಿಟಿಷ್ ಮೇಧಾವಿ ಫಿಲ್‌ಬರ್‌ರನ್ನು ಸಲಹೆಗಾರನ್ನಾಗಿ ನೇಮಿಸಲಾಯಿತು.  
(The Middle east a history sidnley Nuttetion Fisher P575) 

*ಇಸ್ಮಾಮೀ ಖಿಲಾಫತ್‌ನ ವಿರುದ್ಧ ಬ್ರಿಟಿಷ್ ಸಮರ ಸಾರಿದಾಗ ಜಾಗತಿಕ ಮುಸ್ಲಿಮರು ಬ್ರಿಟನ್‌ನ ವಿರುದ್ಧ ನಿಂತರು. ಭಾರತದಲ್ಲೂ ಕೂಡಾ ಬ್ರಿಟಿಷರ ವಿರುದ್ಧ ಖಿಲಾಫತ್ ಚಳವಳಿ ಹುಟ್ಟು ಹಾಕಲಾಯಿತು. ಹಿಂದು - ಮುಸ್ಲಿಮರು ಒಗ್ಗೂಡಿ ಈ ಚಳವಳಿಯನ್ನು ಬೆಂಬಲಿಸಿದರು* 
*ಆದರೆ ಒಂದನೇ ಜಾಗತಿಕ ಮಹಾ ಯುದ್ಧದಲ್ಲಿ ಉಸ್ಮಾನಿಯ ಖಿಲಾಫತ್‌ನ ವಿರುದ್ಧ ಬ್ರಿಟಿಷರಿಗೆ ಪರೋಕ್ಷ ಸಹಾಯ ಮಾಡುತ್ತಾ, ಅವರ ವಿಜಯಗೊಂಡಾಗ ಸಂತಸ ವ್ಯಕ್ತಪಡಿಸಿದ  ಏಕೈಕ ಮುಸ್ಲಿಂ ಗುಂಪು ವಹ್ಹಾಬಿಸಂ*  

ಈ ಯುದ್ಧದಲ್ಲಿ ಉಸ್ಮಾನಿಯಾ ಖಿಲಾಫತ್ ಸೋತಾಗ ಬ್ರಿಟನ್, ಅಮೇರಿಕಾ, ಫ್ರಾನ್ಸ್, ರಶ್ಯಾಗಳು ಮುಸ್ಲಿಂ ಜಗತ್ತನ್ನು ತುಂಡು ತುಂಡಾಗಿ ವಿಭಜಿಸಿದವು. ಫೆಲೆಸ್ತೀನ್ ಸೇರಿದಂತೆ ಅನೇಕ ಅರಬ್ ಭೂ ಪ್ರದೇಶಗಳು ಬ್ರಿಟನ್‌ನ ಪಾಲಾದವು. ಮುಸ್ಲಿಂ ರಾಷ್ಟ್ರಗಳು ಶಾಶ್ವತವಾಗಿ ಪರಸ್ಪರ ಕಚ್ಚಾಡುವಂತೆ ಮಾಡಲು ಬ್ರಿಟನ್ ಹಾಕಿದ ನಿಗೂಢ ಕಾರ್ಯಾಚರಣೆಯ ಫಲವೇ ಇಸ್ರೇಲ್ ಸ್ಥಾಪನೆ. 
ಬ್ರಿಟನ್ ವಿದೇಶ ಕಾರ್ಯ ಸೆಕ್ರೆಟರಿ ಬಾಲ್ಟರ್ ಈ ಯೋಜನೆಯ ಸೂತ್ರಧಾರ. ಇದಕ್ಕೆ ಬಾಲ್ಟರ್ ಡಿಕ್ಲೇರೇಶನ್ ಎಂದು ಹೆಸರು.
1919 - 1945 ರ ನಡುವೆ ಸುಮಾರು 5 ಲಕ್ಷ ಯಹೂದಿಗಳನ್ನು ಫೆಲೆಸ್ತೀನ್‌ಗೆ ತಂದು ಹಾಕಿ ಮುಸ್ಲಿಮರ ಹೃದಯವನ್ನೇ ಭೇಧಿಸಿಲಾಯಿತು. ದುಃಖಕರ ಸಂಗತಿಯೇನೆಂದರೆ ಮುಸ್ಲಿಂ ಸಮುದಾಯ ನೋವಿನಿಂದ ನರಳುತ್ತಿದ್ದಾಗ ವಹಾಬಿಗಳು ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು. ವಹ್ಹಾಬಿಗಳ ಈ ಉಪಕಾರಕ್ಕೆ ಪ್ರತಿಫಲವಾಗಿ 1935 ರಲ್ಲಿ ಅಬ್ದುಲ್ ಅಝೀಝ್ ಬಿನ್ ಸಹೂದ್‌ರಿಗೆ ನೈಟ್ ಪದವಿ ನೀಡಿ ಬ್ರಿಟನ್ ಗೌರವಿಸಿತು.

*ಕ್ರಿ.ಶ. 1192 ರಲ್ಲಿ ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬಿಯವರು ವಶಪಡಿಸಿದ ಬೈತುಲ್ ಮುಖದ್ದಸ್ ಪಟ್ಟಣ 1917 ರವರೆಗೆ ಇಸ್ಲಾಮಿಕ್ ಖಿಲಾಫತ್‌ನ ಅಧೀನದಲ್ಲಿತ್ತು. ಈ ಪ್ರದೇಶವನ್ನು ಸಾಮ್ರಾಜ್ಯತ್ವ ಶಕ್ತಿಗಳು ವಶಪಡಿಸಲು ಹಾಗೂ ಪ್ಯಾಲೆಸ್ತೀನ್ ಜನತೆಯನ್ನು ತನ್ನದೇ ಜನ್ಮಭೂಮಿಯಲ್ಲಿ ನಿರಾಶ್ರಿತರನ್ನಾಗಿ ಜೀವಿಸಲು  ಕಾರಣವಾದದ್ದು ಖಿಲಾಫತ್‌ನ ಪತನ.. ಅದಕ್ಕೆ ನೇತೃತ್ವ ನೀಡಿದ್ದು ಬ್ರಿಟನ್‌. ಆ ಬ್ರಿಟನ್‌ಗೆ ಪರೋಕ್ಷ ಸಹಾಯ ಮಾಡಿದ್ದು ಇದೇ ವಹಾಬಿಗಳು.*

ಇದರ ಅಳಿದುಳಿದ ಗುರುತುಗಳು ಇಂದು ಕೂಡ ಕಾಣಬಹುದು. ಮುಸ್ಲಿಮರಲ್ಲಿ ಛಿದ್ರತೆ, ಭಿನ್ನತೆ, ವಿಭಜನೆ, ಸಂಘರ್ಷ ಸೃಷ್ಟಿಸಿದ ಕುಖ್ಯಾತಿ ವಹಾಬಿಸಂಗಿದೆ‌. 
ಮಕ್ಕಾದ ಮುಪ್ತಿಯಾಗಿದ್ದ, ಹರಂ ಶರೀಫ್‌ನ ಅಧಿಕೃತ ಚರಿತ್ರೆಗಾರರಾದ ಅಹ್ಮದ್ ಝೈನಿ ದಹ್‌ಲಾನ್ ತನ್ನ ಫಿತ್ನ್‌ತುಲ್ ವಹ್ಹಾಬಿಯಾ  ಮತ್ತು Advice for the Whabi ಗ್ರಂಥದಲ್ಲಿ ಈ ರಕ್ತಸಿಕ್ತ ಅಧ್ಯಾಯ ಕಾಣಬಹುದು.

ಅಹ್ಲು ಸ್ಸುನ್ನ = 01

*ಅಹ್ಲು ಸ್ಸುನ್ನ - 1* 
➖➖➖➖➖➖➖➖
*ಸಲಫಿಸಂನ ಅಪಾಯದ ಬಗ್ಗೆ ಅಂದೇ ಅವರು ಎಚ್ಚರಿಸಿದ್ದರು*

ಹದೀಸ್ ನಂ - 1
ಇಮಾಂ ಬುಖಾರಿ(ರ)ರವರಿಂದ ವರದಿ : ಅಬೂ ಸಯೀದಿನ್ ಖುದ್‌ರಿ(ರ) ಹೇಳುತ್ತಾರೆ. ಪ್ರವಾದಿ  ﷺ ರವರು ಒಂದು ಯುದ್ಧ ಮುಗಿಸಿ ಮರಳಿ ಬಂದ ನಂತರ ಯುದ್ಧಾರ್ಜಿತ ಸ್ವತ್ತುಗಳನ್ನು (ಗನೀಮತ್) ಸ್ವಹಾಬಿಗಳಿಗೆ ಹಂಚುತ್ತಿದ್ದರು. ಆ ಸಂದರ್ಭದಲ್ಲಿ ಬನೂ ತಮೀಮ್ ವಂಶಕ್ಕೆ ಸೇರಿದ ದ್ಸುಲ್ ಖುವೈಸಿರತುಲ್ ತಮೀಮ್ ಎಂಬ ವ್ಯಕ್ತಿ ಪ್ರವಾದಿ ﷺ ರವರ ಮುಖ ನೋಡುತ್ತಾ ಓ ಮುಹಮ್ಮದ್ ನೀನು ನ್ಯಾಯ ಪಾಲಿಸು
ಆಗ ಪ್ರವಾದಿ ﷺ ರವರು ಹೇಳಿದರು.
ನಾನು ನ್ಯಾಯ ಪಾಲಿಸುವುದಿದ್ದರೆ ಮತ್ಯಾರು ನ್ಯಾಯ ಪಾಲಿಸುವುದು ?
ಪ್ರವಾದಿ ﷺ ರವರನ್ನು ನಿಂದಿಸಿದ ದ್ಸುಲ್ ಖುವೈಸಿರತ್‌ನ ವಿರುದ್ಧ ಸ್ವಹಾಬಿಗಳು  ತಿರುಗಿ ನಿಂತಾಗ.

*ಪ್ರವಾದಿ ﷺ ರವರು ಹೇಳಿದರು. ಆತನಿಗೆ ಏನು ಮಾಡಬೇಡಿ. ಆತನನ್ನು ಬಿಟ್ಟುಬಿಡಿ, ಅವನ ಅನುಯಾಯಿಗಲು ಮುಂದೆ ಬರಲಿದ್ದಾರೆ. ಅವರ ಮುಂದೆ ನಿಮ್ಮ ನಮಾಝ್ , ಉಪವಾಸ ಏನೂ ಅಲ್ಲ. ಅವರು ಖುರ್‌ಆನ್ ಓದುವರು. ಆದರೆ ಬಿಲ್ಲಿನಿಂದ ಬಾಣ ಹಾರಿದಂತೆ ಅವರು ಇಸ್ಲಾಮಿನಿಂದ ಹೊರ ಹೋಗುವರು. (ಬುಖಾರಿ - 3610 )*

ಹದೀಸ್  : 2.
ಇಬ್ನು ಉಮರ್ (ರ) ಹೇಳುತ್ತಾರೆ. 
ಪ್ರವಾದಿ  ﷺ  ಹೇಳಿದರು, ಅಲ್ಲಾಹನೇ ನಮ್ಮ ಯಮನಿಗೂ, ಶಾಮಿಗೂ ಬರಕತ್ ನೀಡು.
ಆಗ ಕೆಲವು ಸ್ವಹಾಬಿಗಳ ಹೇಳಿದರು. ಪ್ರವಾದಿಗಳೇ ನಮ್ಮ ನಜ್‌ದ್‌ಗಾಗಿ ಪ್ರಾರ್ಥಿಸಿ. ಪ್ರವಾದಿ ﷺ ಪುನಃ ಪ್ರಾರ್ಥಿಸಿದ್ದರು . ಅಲ್ಲಾಹನೇ ನಮ್ಮ ಯಮನಿಗೂ, ಶಾಮಿಗೂ ಬರಕತ್ ನೀಡು.
ಸ್ವಹಾಬಿಗಳು ಪುನಃ ನಜ್‌ದ್‌ಗಾಗಿ ಪ್ರಾರ್ಥಿಸುವಂತೆ ಕೇಳಿದರು. 
ಪ್ರವಾದಿ ﷺ ರವರು ಮೂರನೇ ಬಾರಿಯೂ ಯಮನಿಗೂ, ಶಾಮಿಗೂ ಪ್ರಾರ್ಥಿಸಿದರೇ ಹೊರತು ನಜದ್‌ಗಾಗಿ ಪ್ರಾರ್ಥಿಸಲಿಲ್ಲ.
ಕೆಲವು ಸ್ವಹಾಬಿಗಳು ನಜದ್‌ಗಾಗಿ ಪ್ರಾರ್ಥಿಸಲು ಮನವಿ ಮಾಡಿದಾಗ ಕೊನೆಗೆ 
ಪ್ರವಾದಿ ﷺ ಹೇಳಿದರು. 

*ಸ್ವಹಾಬಿಗಳೇ ಅಲ್ಲಿ ಮಹಾ ಕಂಪನಗಳು ಉಂಟಾಗುತ್ತದೆ. ಅಲ್ಲಿಯೇ ಶೈತಾನಿನ ಕೊಂಬು ಉದಿಸಲಿದೆ. ಬುಖಾರಿ 7084*.

*ಇಬ್ನು ಉಮರ್(ರ) ಹೇಳುತ್ತಾರೆ. ಪ್ರವಾದಿ ﷺ  ಪಶ್ಚಿಮ ಭಾಗಕ್ಕೆ ತಿರುಗಿ ತಿಳಿಯಿರಿ ಫಿತ್ನ್ ಇಲ್ಲಿಂದಲೇ ಆರಂಭಗೊಳ್ಳಲಿದೆ ಎಂದರು. (ಮದೀನಾದ ಪಶ್ಚಿಮ ದಿಕ್ಕಿನಲ್ಲಿ ನಜ್‌ದ್ ಇದೆ.) .ಬುಖಾರಿ 6680*

ಈ ಎರಡು ಹದೀಸ್‌ಗಳಿಂದ ಸ್ಪಷ್ಟ. ಪ್ರವಾದಿ ﷺ ರವರ ಆದೇಶಗಳನ್ನು ಧಿಕ್ಕರಿಸುವ, ಇಸ್ಲಾಮಿನ ಪರಂಪರೆಯನ್ನು ತಿರಸ್ಕರಿಸುವ ಪಂಥವು ದ್ಸುಲ್ ಖುವೈಸಿರತ್ತಿನ ಪರಂಪರೆಯಲ್ಲಿ ನಜ್‌ದ್‌ನಿಂದ ಹೊರ ಬರಲಿದೆ.

*ಪರಂಪರಾಗತ ಇಸ್ಲಾಮನ್ನು ಧಿಕ್ಕರಿಸಿ, ಮಹಾತ್ಮರನ್ನು, ಉಲಮಾಗಳನ್ನು ತಿರಸ್ಕರಿಸಿ ಪಾಶ್ಚಾತ್ಯ, ಆಧುನಿಕ ಶೈಲಿಯ ಇಸ್ಲಾಮಿನ ಪ್ರಚಾರಕನಾಗಿ ಮುಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಎಂಬವ ದ್ಸುಲ್ ಖುವೈಸಿರತ್ತಿನ 16 ನೇ ಪೌತ್ರನಾಗಿ ನಜ್‌ದ್‌ನಲ್ಲಿ ಆಗಮಿಸುವುದರೊಂದಿಗೆ ಪ್ರವಾದಿ ﷺ ರವರ ಭವಿಷ್ಯವಾಣಿ ಸಾಕ್ಷಾತ್ಕಾರ ವಾಯಿತು*.

(ವಹಾಬಿ ಮುಖಂಡ ಅಲ್ ಬುತಾಮಿ ಬರೆದ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಎಂಬ ಗ್ರಂಥದ 15 ನೇ ಪುಟದಲ್ಲಿ ಈ ಪರಂಪರೆ ಕಾಣಬಹುದು) 

ಎಲ್ಲಾ ನೂತನವಾದಿಗಳಿಗೆ ಖವರಿಜ್‌ಗಳೇ ನಾಯಕರು. ಖವಾರಿಜ್‌ಗಳಿಗೆ ದ್ಸುಲ್ ಖುವೈಸಿರತ್ ನಾಯಕನೆಂದು ಸಲಫಿಗಳೇ ಅಂಗೀಕರಿಸುವ  ಇಬ್ನು ತೀಮಿಯ್ಯರೇ ಹೇಳಿದ್ದಾರೆ. 

ಐಕ್ಯರಾಗಿ, ಶಾಂತಿಯಿಂದ ಜೀವನ ನಡೆಸುತ್ತಿದ್ದ ಮುಸ್ಲಿಮರನ್ನು ಛಿನ್ನ ಭಿನ್ನ ಮಾಡಿ ಅಶಾಂತಿ ಸೃಷ್ಟಿಸಲು  ವಹಾಬಿಸಂನ ರಥ ಯಾತ್ರೆ ನಜ್‌ದ್‌ನಲ್ಲಿ ಪ್ರಾರಂಭವಾಯಿತು.

       *ಅಬೂ ರಾಝೀ*

ಅಹ್ಲು ಸ್ಸುನ್ನ = 04

*ಅಹ್ಲು ಸ್ಸುನ್ನ - 4*.
                   @ ಅಬೂ ರಾಝೀ
➖➖➖➖➖➖➖➖
*ಸಲಫಿಗಳ ರಕ್ತ ರಂಜಿತ ಇತಿಹಾಸ*

ಒಂದೆಡೆ ಆಡಳಿತದ ಬೆಂಬಲ, ಇನ್ನೊಂದೆಡೆ ಗೂಢಚಾರ ಹಂಫರ್‌ನ ಸಹಕಾರದಿಂದ ಇಬ್ನು ಅಬ್ದುಲ್ ವಹಾಬ್ ಮೊದಲು ತನ್ನ ಊರ ಸುತ್ತಮುತ್ತ ವಹಾಬಿ ಆಶಯ ಪ್ರಚಾರ ಆರಂಭಿಸಿದ. ತನ್ನ ಮಿತ್ರರು, ಬಂಧುಗಳನ್ನು ಒಗ್ಗೂಡಿಸಿ ಒಂದು ತಂಡ ರಚಿಸಿದ. ನೆರೆಹೊರೆಯ ಪ್ರದೇಶಗಳಿಗೆ ನುಗ್ಗಿ ತನ್ನ ಕೊಳಕು ಆಶಯ ಪ್ರಚಾರ ಮಾಡುವುದು ಆತನ ತಂತ್ರವಾಗಿತ್ತು. ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿರುವವರನ್ನು ಹೊಡೆಯುವುದು, ಬಡಿಯುವುದು, ಕೊಲ್ಲುವುದು. ಮಾತ್ರವಲ್ಲ ಅವರ ಸ್ವತ್ತುಗಳನ್ನು ಲಪಟಾಯಿಸುವ ಹೀನ ಕೆಲಸ ಮಾಡತೊಡಗಿದರು. . ಸ್ವತ್ತಿನ ಆಸೆಯಿಂದ ಅವನ ವಹಾಬಿ ಅನುಯಾಯಿಗಳು ಮತ್ತಷ್ಟು ಕ್ರೂರಿಗಳಾದರು. ಆತನ ಬಂಧುಗಳು ದಿಢೀರ್ ಶ್ರೀಮಂತರಾದರು. 

*ಸಂಪತ್ತಿನ ಆಸೆ ಹಾಗೂ ಭಯದಿಂದ ಜನರನ್ನು ತನ್ನ ಸಂಘಟನೆಗೆ ಸೇರಿಸಿದ. ವಹಾಬಿಸಂನ ಪ್ರಚಾರ ಎಷ್ಟು ಭೀಕರವಾಗಿತ್ತೆಂದರೆ ತನ್ನ ಆಶಯ ಒಪ್ಪದ ವಿದ್ವಾಂಸರನ್ನು ಕೊಲ್ಲುತ್ತಿದ್ದ, ಮಹಿಳೆಯರನ್ನು ಮಾನಭಂಗಗೊಳಿಸಿದ, ಇಸ್ಲಾಮಿನ ಸ್ಮಾರಕಗಳನ್ನು ನಾಶಮಾಡಿದ. ಮಹಾತ್ಮರ ಮಖ್‌ಬರಗಳನ್ನು ಧ್ವಂಸ ಮಾಡಿದ. ಗ್ರಂಥಾಲಯಗಳನ್ನು ಭಸ್ಮ ಮಾಡಿದ. ಪರಂಪರಾಗತ ಇಸ್ಲಾಮಿನ ಚಿಹ್ನೆ, ಸ್ಮಾರಕ, ಗುರುತುಗಳನ್ನು ಆತ ಸಹಿಸುತ್ತಿರಲಿಲ್ಲ. ವಹಾಬಿಗಳ ಅಂದಿನ ಕಾರ್ಯಚರಣೆಯೂ ಇಸ್ಲಾಮಿಕ್ ಇತಿಹಾಸದಲ್ಲಿ ಭಯಾನಕ ದಿನಗಳಾಗಿತ್ತು.* (ತಾರೀಖುಲ್ ಮಮ್‌ಲಕತುಲ್ ಅರಬಿಯ್ಯ ಇಸ್ಲಾಮಿಯ್ಯ)
( ಒಂಥರ ಈಗಿನ ಉಗ್ರ ಹಿಂದುತ್ವವಾದಿಗಳಂತೆ. ಗೋವಿನ ಹೆಸರಲ್ಲಿ, ರಾಮನ ಹೆಸರಲ್ಲಿ ನಿರಪರಾಧಿ ಬಡಜನರನ್ನು ಯಾವ ರೀತಿ ಮರ್ದಿಸಲಾಗಿತ್ತೋ ಅದಕ್ಕಿಂತಲೂ ಭೀಕರವಾಗಿತ್ತು ಸಲಫಿಗಳ ಇತಿಹಾಸ )  

*ಸಲಫಿಗಳ ಮಕ್ಕಾ ಆಕ್ರಮಣ* :
ಹಿಜರಿ  1215 ರಲ್ಲಿ ಮಕ್ಕಾದ ಮೇಲೆ ವಹಾಬಿಗಳು ಭೀಕರ ಆಕ್ರಮಣ ಮಾಡಿದರು. ಈ ಆಕ್ರಮಣದಲ್ಲಿ ಅನೇಕ ಜನ ಸಾಮಾನ್ಯರು ಕೊಲ್ಲಲ್ಪಟ್ಟರು. ಹಿ. 1217 ರಲ್ಲಿ ತ್ವಾಯಿಫ್ ಆಕ್ರಮಣ ಮಾಡಲು ಸಿದ್ಧತೆ ನಡೆಸಿದರು. ಆದರೆ ಆ ವರ್ಷ ಹಜ್‌ನ ಜನ ಬಾಹುಲ್ಯದಿಂದ ಆಕ್ರಮಣ ಮಾಡಲು ಸಾಧ್ಯವಾಗಲಿಲ್ಲ. ಹಜ್ ಮುಗಿದು ಜನರು ಚದುರಿದ ನಂತರ ತ್ವಾಯಿಫ್ ಆಕ್ರಮಿಸಿ ವಶಪಡಿಸಿದರು. ಪುನಃ ಮಕ್ಕಾದತ್ತ ವಹ್ಹಾಬಿ ಸೇನೆಯು ಚಲಿಸಿತು. 14 ದಿವಸ ಅವರು ಮಕ್ಕಾದಲ್ಲಿ ರೌದ್ರವ ತಾಂಡವಾಡಿದರು. ತಮ್ಮ ಸಿದ್ಧಾಂತವನ್ನು ಬಲಪ್ರಯೋಗದಿಂದ ಹೇರಿದರು. ನಂತರ ಜಿದ್ದಾದತ್ತ ಹೊರಟು ಅಲ್ಲಿ 7 ದಿವಸ ಕಾರ್ಯಚರಣೆ ನಡೆಸಿದರು.. ಕೊನೆಗೆ ಮರಳಿ ರಿಯಾದ್‌ನತ್ತ ಹೊರಟರು..

*ಮದೀನಾ ಆಕ್ರಮ*: 
ಎರಡು ತಿಂಗಳ ನಂತರ ರಬೀವುಲ್ ಅವ್ವಲ್‌ನಲ್ಲಿ ಪುನಃ ಮಕ್ಕಾದತ್ತ ಹೊರಟರು. ಆದರೆ ಈ ಬಾರಿ ಜಿದ್ದಾ ಮತ್ತು ಮಕ್ಕಾದ ಗವರ್ನರ್‌ಗಳಾದ ಶರೀಫ್ ಭಾಷಾ, ಶರೀಫ್ ಗೀಲಾಗಿ ಇಬ್ಬರೂ ಸೇರಿ ವಹ್ಹಾಬಿಗಳನ್ನು ಮಕ್ಕಾದಿಂದ ಓಡಿಸಿದರು. ದಿಕ್ಕೆಟ್ಟ ವಹಾಬಿಗಳು ಮದೀನಾದತ್ತ ಚಲಿಸಿದರು. ಮದೀನಾದಲ್ಲಿರುವ ಅನೇಕ ಗೋತ್ರದ ಜನರೊಂದಿಗೆ ರಹಸ್ಯ ಒಪ್ಪಂದ ಮಾಡಿದರು. ಅಧಿಕಾರ, ಹಣ, ಮಹಿಳೆಯರ ಆಸೆ ತೋರಿಸಿ ಅನೇಕ ಗೋತ್ರ ಮುಖಂಡರನ್ನು ಬಲೆಗೆ ಹಾಕಿದರು . ಮದೀನಾದಿಂದ ಮಕ್ಕಾಕ್ಕೆ ಬರುವ ಆಹಾರ ಸಾಮಾಗ್ರಿಗಳನ್ನು ತಡೆದರು. ಗತ್ಯಂತರವಿಲ್ಲದೆ ಮಕ್ಕಾ ಗವರ್ನರ್ ವಹಾಬಿಗಳ ಜೊತೆ ಒಪ್ಪಂದವೇರ್ಪಡಿಸಿದ. ಇದರ ಪ್ರಕಾರ ವಹಾಬಿ ಆಶಯ ಪ್ರಚಾರಕ್ಕೆ ಮಕ್ಕಾದಲ್ಲಿ ಪೂರ್ಣ ಸ್ವಾತಂತ್ರ್ಯ ಸಿಕ್ಕಿತು. ಹೀಗೆ ಮಕ್ಕಾ ,ಮದೀನಾ ವಹಾಬಿಗಳ ಕೈಗೆ ಬಂದಾಗ ಚರಿತ್ರೆಯಲ್ಲಿ ಕಂಡರಿಯದ ಧ್ವಂಸಗಳು, ಕ್ರೌರ್ಯಗಳು ನಡೆದವು . ಇತಿಹಾಸದಲ್ಲಿ ಕಂಡು, ಕೇಳದ ರಕ್ತ ತಾಂಡವ ಮಾಡಿದ ಕುಖ್ಯಾತಿ ವಹ್ಹಾಬಿಗಳಿಗೆ ಸಲ್ಲುತ್ತದೆ*. 

*ಕರ್ಬಲ ಆಕ್ರಮಣ*
ಹಿ. 1216 ರಲ್ಲಿ ವಹಾಬಿ ಸೇನೆ ಕರ್ಬಲ ಆಕ್ರಮಿಸಿತು. ಈ ಆಕ್ರಮಣದ ಕುರಿತು ಕೇರಳ ವಹಾಬಿ ಮುಖಂಡ ಇ.ಕೆ. ಮೌಲವಿ ಅಲ್ ಇತ್ತಿಹಾದ್ ಪತ್ರಿಕೆಯಲ್ಲಿ ಬರೆಯುತ್ತಾರೆ. *1801 ಏಪ್ರಿಲ್ 30 ರಂದು ಸಾವಿರಾರು ವಹಾಬಿಗಳು ಕರ್ಬಲಾವನ್ನು ಆಕ್ರಮಿಸಿದರು. ತಮ್ಮನ್ನು ವಿರೋಧಿಸುವ ನಗರ ವಾಸಿಗಳನ್ನು ಕೊಂದು ಹಾಕಿದರು. ಹುಸೈನ್(ರ)ರವರ ಮುಖಾಂನ್ನು ಧ್ವಂಸ ಮಾಡಿದರು. ಅಲ್ಲಿ ಅರಬೇತರ ಸಂದರ್ಶಕರು ನೀಡಿದ ಸ್ವರ್ಣಗಳ ರಾಶಿಯೇ ಇತ್ತು. ಅದೆಲ್ಲವನ್ನು ಲೂಟಿ ಮಾಡಿದರು. ಅಲ್ಲಿ ಸಿಕ್ಕಿದ ಬೆಳೆಬಾಳುವ ಎಲ್ಲಾ ವಸ್ತುಗಳನ್ನು ವಹಾಬಿ ಸೇನೆ ದೋಚಿತು*. 
( 1956 ಸೆಪ್ಟೆಂಬರ್ 2, ಸಂಚಿಕೆ 7 )

ಸಲಫಿಗಳ ರಕ್ತ ರಂಜಿತ ಇತಿಹಾಸದ ಬಗ್ಗೆ ಖ್ಯಾತ ಇತಿಹಾಸಕಾರ  ಝೈನಿ ದಹ್ಲನ್ ( ರ ) ರು ಉಲ್ಲೇಖಿಸುವುದು
ಹೀಗೆ:
ಮಸೀದಿಗಳು ಹಾಗೂ ಸಜ್ಜನರಿಗೆ ಸಂಭಂಧಿಸಿದ ಚಾರಿತ್ರಿಕ ಕುರುಹುಗಳನ್ನು  ವಹಾಬಿಗಳು ನಾಶ ಮಾಡಿದರು.ಮೊದಲನೆಯದಾಗಿ ಮಕ್ಕಾದ ಜನ್ನಾತುಲ್ ಮುಅಲ್ಲಾ”ದಲ್ಲಿದ್ಧ ಹಲವಾರು ಖುಬ್ಭಗಳನ್ನು ಹೊಡೆದುರುಳಿಸಿದರು. ನಂತರ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ,,ಅಬೂಬಕ್ಕರ್ ಸಿದ್ಧೀಖ್ ( ರ ), ಅಲೀ ( ರ ) 
ಹಾಗೂ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಥಮ ಪತ್ನಿ ಖತೀಜಾ ( ರ ) ಜನ್ಮ ಸ್ಥಳಗಳನ್ನು ಧ್ವಂಸ ಮಾಡಿದರು. ಮಹಾತ್ಮರುಗಳ ವಸ್ತುಗಳನ್ನು,ಅವರ ಚಿಹ್ನೆಗಳನ್ನು ಹುಡುಕಿ, ಹುಡುಕಿ ನಾಶ ಪಡಿಸಿದರು

*ವಹಾಬಿಗಳಲ್ಲಿ ಒಂದು ತಂಡವು  ಇಂತಹ ದುಷ್ಕತ್ಯಗಳನ್ನು ನಡೆಸುವಾಗ ಮತ್ತೊಂದು ತಂಡವು ಮಹಾತ್ಮರನ್ನು ವ್ಯಂಗ್ಯಮಾಡುತ್ತಾ, ಅಪಹಾಸ್ಯ ಮಾಡುತ್ತಾ ಸಾಗುತ್ತಿತ್ತು.* (ಖುಲಾಸತುಲ್ ಕಲಾಮ್) _

*ಹಿರಾ ಗುಹೆ ಧ್ವಂಸ*
ಶೈಖ್ ಶಿಹಾಬುದ್ಧೀನ್ ಅಹ್ಮದ್ ಅಸ್ ಜಾಈ ಬರೆಯುತ್ತಾರೆ:
*ಮಸ್ಜಿದುಲ್ ಅಬೀ ಖುಬೈಸ್,ದಾರುಲ್ ಖೈಝರಾನ್ ಹಾಗೂ ಹಿರಾ ಗುಹೆಯನ್ನು ವಹಾಬಿಗಳು ಹೊಡೆದುರುಳಿಸಿದರು* *ಅದ್ಯಾವುದೂ ಖಬ್ರ್ ನ ಮೇಲೆ ನಿರ್ಮಿಸಲ್ಟಟ್ಟದಲ್ಲ.  ಅದೊಂದು ಚರಿತ್ರಾ ಸ್ಮಾರಕವಾಗಿತ್ತು. ವಿಶೇಷತಃ ಹಿರಾ ಗುಹೆ ಪ್ರವಾದಿತ್ವ ಲಭಿಸುವುದಕ್ಕಿಂತ ಮೊದಲು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಬಾದತ್ ಮಾಡುತ್ತಿದ್ದರು.  ಮುತ್ತಬಿಉ ಸ್ಸುನ್ನು ಇಬ್ನು ಉಮರ್ ( ರ) ರವರಂತಹ  ಸ್ವಹಾಬಿಗಳು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುಣ್ಯ ಪಾದ ಸ್ಪರ್ಶವಾದ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಇಬಾದತ್ ನಿರ್ವಹಿಸುತ್ತಿದ್ದರು ಎಂದು ಸ್ವತಃ ಇಬ್ನು ತೈಮಿಯ್ಯಾ ರೇ ತನ್ನ “ಅಸ್ವಿರಾತುಲ್ ಮುಸ್ತಖಿಮ್” ಎಂಬ ಗ್ರಂಥದಲ್ಲಿ, ಇಮಾಂ ಅಹ್ಮದು ಬಿನ್ ಹಂಬಲ್ ( ರ ) ರಿಂದ  ಉದ್ಧರಿಸಿದ್ದಾರೆ. ಮಖ್‌ಬರ ಮಾತ್ರವಲ್ಲ ಇಸ್ಲಾಮಿನ ಸ್ಮಾರಕಗಳನ್ನು ನಾಶ ಮಾಡಿದ್ದನು ನೋಡುವಾಗ ಸಲಫಿಗಳಿಗೆ ಇಸ್ಲಾಮಿನ ಪರಂಪರೆಯೊಂದಿಗೆ ಎಷ್ಟೊಂದು ವಿರೋಧವಿತ್ತು ಎಂದು ತಿಳಿಯಬಹುದು.*

ತಾಹಿಫ್ ದುರಂತವನ್ನು ಚರಿತ್ರಗಾರರಾದ ಝೈನಿ ದಹ್ಲನ್ ಅದನ್ನು ಹೀಗೆ ವಿವರಿಸುತ್ತಾರೆ:
ವಹಾಬಿಗಳು ತ್ವಾಹಿಫ್ ಪ್ರವೇಶಿಸಿ ವೃದ್ಧರನ್ನೂ , ಯುವಕರನ್ನೂ ನೇತಾರರನ್ನೂ ಹಾಗೂ ಜನ ಸಾಮಾನ್ಯರನ್ನೂ ಕೊಲೆ ಗೈದರು. ತಾಯಿಯ ಎದೆಯ ಮೇಲಿದ್ದ ಎಳೆಯ ಕಂದಮ್ಮಗಳ ಕತ್ತು ಕೊಯ್ದರು. ಮನೆಗಳ ಮೇಲೆ ದಾಳಿ ಮಾಡಿ ಒಳಗೆ ಬೆದರಿ ಕೂತಿದ್ದ ಜನರನ್ನು ಮನೆಯಿಂದ ಹೊರಗಟ್ಟಿ ಕೊಂದರು. ದರ್ಸ್ ನಲ್ಲಿ ಕಲಿಯುತ್ತಿದ್ದಂತಹ ವಿಧ್ಯಾರ್ಥಿಗಳನ್ನು ಬಿಡಲಿಲ್ಲ. ನಮಾಜಿನಲ್ಲಿ, ರುಕೂಅ ನಲ್ಲೂ ಸುಜೂದ್ ನಲ್ಲೂ ಏರ್ಪಟ್ಟವರನ್ನೂ ಕೂಡಾ ಬಿಡದೇ ಕೊಂದರು .ತ್ವಾಹಿಫ್ ನ ಮುಸಲ್ಮಾನರಿಂದ ದಬ್ಬಾಲಿಕೆಯ ಮೂಲಕ ಗಿಟ್ಟಿಸಿ ಕೊಂಡ ಸೊತ್ತುಗಳನ್ನು “ಗನೀಮತ್”ಅಂಶಿಸುವಂತೆ ಐದರಲ್ಲೊಂದು ನೇತಾರನಿಗೂ, ಬಾಕಿ ಅನುಯಾಯಿಗಳಿಗೂ ಎಂಬ ಕ್ರಮದಲ್ಲಿ ಪಡೆದು ಕೊಂಡರು.” 

ಈ ವಿಷಯವನ್ನು ಬಾಗ್ದಾದ್ ಗಾರನಾದ ಸಯ್ಯಿದ್ ಇಬ್ರಾಹಿಮ್ ರ‍್ರಿಫಾಈ ಹೀಗೆ ವಿವರಿಸುತ್ತಾರೆ:

*ವಹಾಬಿಗಳ ಆಕ್ರಮಣ ಜಾಗತಿಕ ಮುಸ್ಲಿಮರನ್ನು ದಿಗ್ಭ್ರಮೆ ಗೊಳಿಸಿತ್ತು. ತ್ವಾಹಿಫ್ ವಶಪಡಿಸಿಕೊಂಡು ಅನೇಕರನ್ನು ಕೊಂದರು. ಅದರಲ್ಲಿ ಹಲವಾರು ವಿದ್ವಾಂಸರು ವಧಿಸಲ್ಪಟ್ಟರು. ಸಯ್ಯಿದ್ ಅಬ್ದುಲ್ಲಾಹಿ ಸ್ವಾವಿ (ಮಕ್ಕಾದ ಶಾಫಿಈ ಮುಫ್ತಿ), ಶೈಖ್ ಅಬ್ದುಲ್ಲಾ ಅಬ್ದುಲ್ ಖೈರ್ (ಮಕ್ಕಾದ ಖಾಝಿ), ಶೈಖ್ ಸುಲೈಮಾನ್ ಮುರಾದಿ (ತ್ವಾಹಿಫ್ ಖಾಝಿ) ಎಂಬತ್ತು ವಯಸ್ಸಿನ ಸೂಫಿವರ್ಯ ಯೂಸೂಫ್ ಸ್ವಾವೀ, ಶೈಖ್ ಹಸನು ಶೈಬಿ, ಶೈಖ್ ಜಅïಫರು ಶೈಬಿ ಮುಂತಾದವರು ವಹ್ಹಾಬಿಗಳ ಆಕ್ರಮಗಳಿಗೆ ಬಳಿಯಾಗಿದ್ದಾರೆ*. 
(ರಿಸಾಲತ್ತು ಔರಖೀಲ್ ಬಾಗ್ದಾದೀಯ್ಯ)
( ಮುಂದುವರಿಯುವುದು )

ಅಹ್ಲು ಸ್ಸುನ್ನ = 03

*ಅಹ್ಲು ಸ್ಸುನ್ನ - 3*
              *@ ಅಬೂ ರಾಝೀ*
➖➖➖➖➖➖➖➖
 *ಸಲಫಿ ನಾಯಕನ ಜೊತೆ ಗೂಢಚಾರ ಸೇರಿ  ಇಸ್ಲಾಮನ್ನು ವಿಕೃತಗೊಳಿಸಿದ*

ಕ್ರಿ.ಶ. 1299 ರ ನಂತರ ಜಾಗತಿಕ ಮುಸಲ್ಮಾನರ ನೇತೃತ್ವ ಉಸ್ಮಾನಿಯಾ ಖಿಲಾಫತ್‌ನ ಕೈಯಲ್ಲಿತ್ತು. 
 (ಅಟ್ಟೋಮನ್  ಅಂಪೆಯರ್) 
ಏನೆಲ್ಲಾ ನ್ಯೂನತೆಗಳು, ಕೊರತೆಗಳಿದ್ದರೂ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಒಗ್ಗೂಡಿಸಿದ ಖ್ಯಾತಿ ಈ ಖಿಲಾಫತ್‌ಗಿದೆ. ಜಗತ್ತಿನ ಮುಸ್ಲಿಮರನ್ನು ಒಂದು ನೇತೃತ್ವದ ಕೆಳಗೆ ಒಗ್ಗೂಡಿಸುವಲ್ಲಿ ಈ ಖಿಲಾಫತ್‌ನ ಪಾತ್ರ ಮಹತ್ವದ್ದು. ಸಿಂಪಲ್ಲಾಗಿ ಹೇಳಬೇಕೆಂದರೆ‌ ಇಂದಿನ ಅಮೇರಿಕದಂತೆ ಈ ಖಿಲಾಫತ್ ಅಂದು ಬಲಿಷ್ಟವಾಗಿತ್ತು.. 

ಇದುವೇ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಲು ಕಾರಣ. ಜಗತ್ತಿನ ಸಣ್ಣ ಪುಟ್ಟ ರಾಷ್ಟ್ರಗಳನ್ನು ಕುತಂತ್ರಗಳ ಮೂಲಕ ತನ್ನ ಬಲೆಗೆ ಹಾಕುತ್ತಿದ್ದ ಬ್ರಿಟಿಷರಿಗೆ, ದೊಡ್ಡ ತಡೆಗೋಡೆಯಾಗಿ ನಿಂತದ್ದು ಉಸ್ಮಾನಿಯಾ ಖಿಲಾಫತ್, ವಸಾಹತುಶಾಯಿಯ ವಿಸ್ತರಣೆ, ಕ್ರೈಸ್ತ ಧರ್ಮದ ಪ್ರಚಾರ ಈ ಎರಡನ್ನು ಒಂದೇ ಸಮನೆ ಮಾಡುತ್ತಿದ್ದ ಬ್ರಿಟಿಷರಿಗೆ ಉಸ್ಮಾನಿಯಾ ಖಿಲಾಫತ್ ನುಂಗಲಾರದ ತುತ್ತಾಗಿತ್ತು.

 *ನೇರವಾಗಿ ಯುದ್ಧ ಮಾಡಿ ಗೆಲ್ಲುವುದು ಅಸಾಧ್ಯ .ತಂತ್ರ ಕುತಂತ್ರಗಳ ಮೂಲಕವೇ ಮುಸ್ಲಿಮರನ್ನು ಬಲಿ ಪಡೆಯಬೇಕು. ಒಂದೇ ಏಟಿಗೆ ಅನೇಕ ಕಾರ್ಯಗಳು ನಢಯಬೇಕು.. ಉಸ್ಮಾನಿಯಾ ಖಿಲಾಫತ್ ಹರಿದು ಹಂಚಾಗಬೇಕು. ಮುಸ್ಲಿಮರು  ಛಿನ್ನ ಭಿನ್ನರಾಗಬೇಕು. ಪರಸ್ಪರ ಕಚ್ಚಾಡುತ್ತಿರಬೇಕು. ಧಾರ್ಮಿಕವಾಗಿ ಅವರು ಹಿಂದೆ ಸರಿಯಬೇಕು. ಪಾಶ್ಚಾತ್ಯ  ಶೈಲಿಗಳನ್ನು  ಅನುಸರಿಸಬೇಕು*. 
*ಇದಕ್ಕಾಗಿ ಅವರು ನಡೆಸಿದ ಅನೇಕ ಕುತಂತ್ರಗಳಲ್ಲಿ ಒಂದಾಗಿತ್ತು ವಹಾಬಿಸಂ*.
ಸಂಶಯವಿದ್ದವರು ಮುಂದೆ ಓದಿ.

ವಹ್ಹಾಬಿಸಂನ ಸ್ಥಾಪಕ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಕ್ರಿ.ಶ. 1724ರಲ್ಲಿ ಬಸ್ವರಕ್ಕೆ ಭೇಟಿ ನೀಡಿದಾಗ ಅಲ್ಲಿ ಬ್ರಿಟಿಷ್ ಗೂಢಾಚಾರ ಹಂಫರ್‌ನ ಪರಿಚಯವಾಗುತ್ತದೆ. ಮಾತುಕತೆ ನಡೆಯುತ್ತದೆ.. ಪರಿಚಯ ಗೆಳೆತನವಾಗಿ ಮಾರ್ಪಡುತ್ತದೆ.

 ಮುಸ್ಲಿಮರೆಡೆಯಲ್ಲಿ ಗುಂಪುಗಾರಿಕೆ, ಛಿದ್ರತೆ ಸೃಷ್ಟಿಸಲು ಬ್ರಿಟಿಷ್ ಸರಕಾರ ಹಂಫರ್ ಎಂಬ ಗೂಢಚಾರನನ್ನು ಮುಸ್ಲಿಂ ರಾಷ್ಟ್ರದೊಳಗೆ ಕಳಿಸಿತ್ತು.  ಇಬ್ನು ಅಬ್ದುಲ್ ವಹಾಬ್‌ನ ಮಹತ್ವಕಾಂಕ್ಷೆ, ಅಧಿಕಾರ ಸ್ನಾನಮೋಹ, ಹಾಗೂ ಇಸ್ಲಾಮಿನ ಪರಂಪರೆಯ ಬಗ್ಗೆ ಆತನಿಗಿರುವ ಜಿಗುಪ್ಸೆಯನ್ನು ಅರಿತ ಹಂಫರ್, ತನ್ನ ಕಾರ್ಯ ಯೋಜನೆಗೆ ಆತನನ್ನು ಚೆನ್ನಾಗಿ ಉಪಯೋಗಿಸಿದ. 
*ವಹಾಬ್‌ನ ಉದ್ದೇಶ ಮುಸ್ಲಿಮರನ್ನು ಇಸ್ಲಾಮಿನ ನೈಜ ಪರಂಪರೆಯಿಂದ  ಬೇರ್ಪಡಿಸಿ ಹೊಸ ವಿಚಾರಧಾರೆಯಲ್ಲಿ ಒಗ್ಗೂಡಿಸುವುದು*. 
*ಹಂಫರ್‌ನ ಉದ್ದೇಶ ಕೂಡ ಮುಸ್ಲಿಮರು ಇಸ್ಲಾಮೀ ಶೈಲಿಯಿಂದ ದೂರ ಮಾಡಿ ಪಾಶ್ಚಾತ್ಯ ಶೈಲಿಯಲ್ಲಿ ಜೀವಿಸುವಂತೆ ಮಾಡುವುದು*.

 ಇದನ್ನು ಕಟ್ಟುಕಥೆಯೆಂದು ಹೇಳುವವರು ಈ ಕೆಳಗಿನ ಗ್ರಂಥವನ್ನು ಒಮ್ಮೆ ಅಧ್ಯಯನ ಮಾಡಬೇಕು.
 ( ಮುದ್ದಕ್ಕಿರಾತುಲ್ ಮಿಸ್ಟರ್ ಹಂಫರ್, ಅಲ್‌ಜಾಸೂಸುಲ್ ಬ್ರಿಸ್ವಾನೀ ಫೀ ಬಿಲಾದಿಲ್ ಇಸ್ಲಾಮಿಯ್ಯ )
( Colonization idea Mr. Homphrys Memories, 
The English spy in Islamic Countries )

1737 ರಲ್ಲಿ ರಾಷ್ಟ್ರೀಯ ಸ್ವರೂಪ ಸ್ವೀಕರಿಸಿದ ವಹಾಬಿಸಂ, ಉಸ್ಮಾನಿಯಾ ಖಿಲಾಫತ್‌ನ ವಿರುದ್ಧ ಬಂಡಾಯವೆದ್ದಿತು . ತೌಹೀದ್‌ನ ಹೆಸರಲ್ಲಿ ಇಸ್ಲಾಮೀ ಖಿಲಾಫತ್‌ನ ವಿರುದ್ಧ ಜನರನ್ನು ಪ್ರಚೋದಿಸುವುದು, ಗಲಭೆ ಸೃಷ್ಟಿಸುವುದು ವಹಾಬಿಸಂನ ಕುತಂತ್ರವಾಗಿತ್ತು. 
( ಇಂದು ಕೂಡ ಸಲಫಿಗಳು ತೌಹೀದ್‌ನ ಹೆಸರಲ್ಲಿಯೇ ಸರ್ವ ಫಿತ್ನಗಳನ್ನು ನಡೆಸುತ್ತಾರೆ ) ಬ್ರಿಟಿಷರು ವಹಾಬಿಗಳಿಗೆ ಪರೋಕ್ಷ ಬೆಂಬಲ ನೀಡಿದರು. 1760ರಲ್ಲಿ ಬ್ರಿಟಿಷರ ಬೆಂಬಲದೊಂದಿಗೆ ಇಬ್ನು ಅಬ್ದುಲ್ ವಹಾಬ್ ಮತ್ತು ಇಬ್ನು ಸಹೂದ್ ಒಟ್ಟು ಸೇರಿ ಪ್ರತ್ಯೇಕ ವಹಾಬಿ ರಾಷ್ಟ್ರದ ಘೋಷಣೆ ಮಾಡಿದರು. ಇವರಿಗೆ ಸಲಹೆ, ಸೂಚನೆ, ಸಂರಕ್ಷಣೆ ನೀಡಲು ಬ್ರಿಟಿಷ್ ಈಸ್ಟ್ ಕಂಪೆನಿ ಮುಂದೆ ಬಂತು. ಈ ಸಹಾಯದ ಪರಿಣಾಮ ತುರ್ಕೀ ಖಿಲಾಫತ್ ವಿರುದ್ಧ ವಿವಿಧೆಡೆ ಸಂಘರ್ಷ ಸೃಷ್ಟಿಯಾಯಿತು. ವಿರೋಧಿಗಳನ್ನು ಕೊಲ್ಲುವುದು, ಪೀಡಿಸುವುದು, ದರೋಡೆ ಮಾಡುವುದು, ಮಕ್ಕಳ ಕತ್ತು ಸೀಳುವ ಕ್ರೌರ್ಯ ವನ್ನು ಪ್ರದರ್ಶಿಸಿದರು. 

 ( ಮುಂದುವರಿಯುವುದು )

.

ಅಹ್ಲು ಸ್ಸುನ್ನ = 02

*ಅಹ್ಲು ಸ್ಸುನ್ನ - 2* 
                   @ ಅಬೂ ರಾಝೀ
➖➖➖➖➖➖➖➖
*ಅವರಿಗೆ ಅಧಿಕಾರ ಬೇಕಿತ್ತು.ಅದಕ್ಕಾಗಿ ವಹಾಬಿಸಂ ಸ್ಥಾಪಿಸಿದರು*

ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ವಹಾಬಿ ಪಂಥದ ಸ್ಥಾಪಕ (ಕ್ರಿ.ಶ 1703 - 1792 ). 
ಈತ ಜನಿಸಿದ್ದು ನಜ್‌ದ್‌ನ ಉಯಯ್ಯ್‌ನಲ್ಲಿ.
ಇಬ್ನು ಅಬ್ದುಲ್ ವಹಾಬ್ ಚಿಕ್ಕಂದಿನಲ್ಲಿಯೇ ಹಾದಿ ತಪ್ಪಿದ್ದ. ಜನರು ಕೇಳದ, ಕಾಣದ,  ಆಶಯ ಪ್ರಚಾರ ಮಾಡತೊಡಗಿದ. ಈತನ ವಿಚಿತ್ರಕಾರಿ ಆದರ್ಶದ ವಿರುದ್ಧ ಸ್ವತಃ ತಂದೆ ಅಬ್ದುಲ್ ವಹಾಬ್ ಮತ್ತು ಅಣ್ಣ ಸುಲೈಮಾನ್‌ರವರು ಜನರನ್ನು ಎಚ್ಚರಿಸಿದ್ದರು.
ಕಲಿಯುತ್ತಲೇ ಇಬ್ನು ತೀಮಿಯ್ಯ ಸಿದ್ಧಾಂತಕ್ಕೆ ಮಾರು ಹೋದ. ಈ ಸಿದ್ಧಾಂತದ ಹೆಸರಲ್ಲಿ ವಹಾಬಿಸಂ ಸ್ಥಾಪನಕ್ಕೆ ಮುಂದಾದ. ಆದರೆ ಉದ್ದೇಶ ಬೇರೆಯೇ ಆಗಿತ್ತು. ಜನರ ಹೊಗಳಿಕೆ, ಕೀರ್ತಿ, ಸ್ಥಾನಮಾನ, ನಾಯಕತ್ವ, ಅಧಿಕಾರ ಕಬಳಿಕೆಯೇ  ವಹಾಬಿಸಂನ ಸ್ಥಾಪನೆಗೆ ಕಾರಣ. 

*ಆಶಯ ಪ್ರಚಾರಕ್ಕಾಗಿ ಇಬ್ನು ಅಬ್ದುಲ್ ವಹಾಬ್ ನಜ್‌ದ್‌ನ ದರ್‌ಇಯ್ಯಾಗೆ ಬಂದ.  ಅಲ್ಲಿನ ಆಡಳಿತಾಧಿಕಾರಿ ಆಲ್ ಸಹೂದ್‌ರನ್ನು ಸಂಪರ್ಕಿಸಿದ. ಜನವಿರೋಧದಿಂದ ಆಡಳಿತ ಕೈ ತಪ್ಪುವ ಭೀತಿಯಲ್ಲಿದ್ದ ಸಹೂದ್‌ರಿಗೆ ವಹಾಬ್‌ನ ಸಹಾಯ ಬೇಕಾಗಿತ್ತು. ಜನರಿಗೆ ಧರ್ಮದ ಅಮಲೇರಿಸಿ ಅಧಿಕಾರವನ್ನು ಶಾಶ್ವತವಾಗಿ ಮುಂದುವರಿಸುವ ದುರಾಲೋಚನೆ ಸಹೂದ್‌ರಿಗೆ ಬಂತು. ಹೀಗೆ ಇವರಿಬ್ಬರ ನಡುವೆ ಒಪ್ಪಂದ ನಡೆಯಿತು*.

ತನ್ನ ಸಿದ್ಧಾಂತದ ಪ್ರಚಾರಕ್ಕೆ ಸಹಾಯ ಮಾಡಿದರೆ , ಆಡಳಿತದ ಭದ್ರತೆ ಮತ್ತು ವಿಸ್ತಾರಕ್ಕೆ ಸಹಾಯ ಮಾಡುವುದಾಗಿ ಇಬ್ನು ಅಬ್ದುಲ್ ವಹಾಬ್ ಆಲ್ ಸಹೂದ್‌ರಿಗೆ ಭರವಸೆ ನೀಡಿದ. ದೇಶದ ಆಡಳಿತ ಅಲ್‌ಸಹೂದ್ ಕುಟುಂಬಕ್ಕೂ, ಧರ್ಮ ಕಾರ್ಯ ವಹಾಬ್‌ನ ಕುಟುಂಬಕ್ಕೂ ನೀಡುವುದಾಗಿದ್ದ ಒಪ್ಪಂದದ ಮುಖ್ಯ ಅಂಶ.
ವಿಚಿತ್ರವೆಂದರೆ ತಾನು  ಪ್ರವಾದಿಯೆಂದು ಪ್ರಚಾರ ಮಾಡಿದ ಮುಸೈಲಿಮತುಲ್ ಕದ್ಸಾಬ್ ನ ಊರಾದ ದರ್‌ಇಯ್ಯಾದಲ್ಲಿ ಈ ಒಪ್ಪಂದ ನಡೆಯಿತು. ಮಾತ್ರವಲ್ಲ ಆಡಳಿತಾಧಿಕಾರಿ ಅಲ್ ಸಹೂದ್ ಮುಸೈಲಿಮತುಲ್ ಕದ್ಸಾಬ್‌ನ ಕುಟುಂಬವಾದ ಬನೂ ಹನೀಫಾ ಗೋತ್ರಾದ ವ್ಯಕ್ತಿಯಾಗಿದ್ದರು.
 *ಒಟ್ಟಿನಲ್ಲಿ. ದ್ಸುಲ್ ಖುವೈಸಿರತ್ತಿನ ಪರಂಪರೆಯ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್* 
*ಮುಸೈಲಿಮತ್ ಕದ್ಸಾಬ್‌ನ ಪರಂಪರೆಯ ಮುಹಮ್ಮದ್ ಸಹೂದ್  ಹೊಸ ಪಂಥವನ್ನು  ಸೌದಿ ಅರೇಬಿಯಾದಲ್ಲಿ ಸ್ಥಾಪಿಸಿದರು*. 

ಇದು ಒಂಥರ ಭಾರತದ ಇಂದಿನ ರಾಜಕೀಯದಂತಿದೆ. ಇಲ್ಲಿ ಅಧಿಕಾರ ಶಾಶ್ವತವಾಗಿರಿಸಲು ಉಗ್ರ ಹಿಂದುತ್ವ ಸೃಷ್ಟಿಸಿದಂತೆ,  
ಅರೇಬಿಯಾದಲ್ಲೂ ಅಧಿಕಾರ ಶಾಶ್ವತವಾಗಿ ನೆಲೆ ನಿಲ್ಲಿಸಲು ವಹಾಬಿಸಂ ಸೃಷ್ಟಿಸಲಾಯಿತು. 
ಅಧಿಕಾರಕ್ಕಾಗಿ ವಹಾಬಿಸಂ ಸ್ಥಾಪಿಸಿದ್ದರೂ ನಂತರ ಬಂದ ಅವನ ಅನುಯಾಯಿಗಳು ಅದನ್ನೇ ನೈಜ ಇಸ್ಲಾಮೆಂದು ಪ್ರಚಾರ ಮಾಡಿದರು. 

*ಆಶ್ಚರ್ಯಕರವೆಂದರೆ ಇವರಿಬ್ಬರ ಪೂರ್ವಜರು ಪ್ರವಾದಿ  ﷺ ರವರ ಕಠಿಣ ವಿರೋಧಿಗಳಾಗಿದ್ದರು.* 
*ಅದರ ಪರಿಣಾಮವೆಂಬಂತೆ ಇಂದಿಗೂ ಇವರ ಅನುಯಾಯಿಗಳಲ್ಲಿ ಪ್ರವಾದಿ - ಸ್ವಹಾಬಿ - ಇಮಾಮರುಗಳ ಬಗ್ಗೆ ಅಸಹನೆ, ಜಿಗುಪ್ಸೆ, ಅಪನಂಬಿಕೆ ಕಾಣಬಹುದು* .

ಎಷ್ಟೊಂದು ಸಾಮ್ಯತೆ ನೋಡಿ.
ಪ್ರವಾದಿ ﷺ ರವರನ್ನು ಸ್ವಹಾಬಿಗಳನ್ನು  ಜೀವಂತದಲ್ಲಿ ಕಾಡಿದ ದ್ಸುಲ್ ಖುವೈಸಿರತ್, ಮರಣ ನಂತರ ಕಾಡಿದ  ಮುಸೈಲಿಮತುಲ್ ಕದ್ಸಾಬ್ ಇವರಿಬ್ಬರ ಪರಂಪರೆಯ ವ್ಯಕ್ತಿಗಳು ಇಡೀ ಇಸ್ಲಾಮಿನ ಪರಂಪರೆಯನ್ನೇ ಬದಲಾಯಿಸಲು ಹೊರಟದ್ದು ಮುಸ್ಲಿಮರ ದುರಂತ  

 ಮಾತ್ರವಲ್ಲ ವಹಾಬ್‌ನ ಮಗಳನ್ನು ಆಡಳಿತಾಧಿಕಾರಿ ಮುಹಮ್ಮದ್ ಬಿನ್ ಸಹೂದ್ ಮದುವೆಯಾಗುವುದರೊಂದಿಗೆ ಈ ಸಂಬಂಧ ಮತ್ತಷ್ಟು ಬಲವಾಯಿತು. ಇದನ್ನು ಪ್ರಮುಖ ಚರಿತ್ರೆಗಾರ ಫಿಲಿಫ್‌ರೇ,ರವರು ಧರ್ಮ ಮತ್ತು ಖಡ್ಗದ ನಡುವಿನ ದಾಂಪತ್ಯವೆಂದು ವಿಶ್ಲೇಷಿಸಿದರು. (ಹಿಸ್ಟರಿ ಆಫ್ ಅರಬ್ 2001 ಪುಟ 740)

Friday, August 28, 2020

ಹಯಾತ್ತುಲ್ ಮುಹ್'ಮೀನಿನ್ ಔಲಿಯಾ, ಕಣ್ಣೂರು ಸಿಟಿ ಮಖಾಂ, ಕಣ್ಣೂರು ಜಿಲ್ಲೆ

#ಝಿಯಾರತ್ತ್_ಕೇಂದ್ರ​​​
🔖🔖 8️⃣9️⃣ 🔖🔖
➖➖➖➖➖➖➖
#ಹಯಾತ್ತುಲ್ ಮುಅ್‌ಮಿನೀನ್ (ಖ.ಸಿ) ಕಣ್ಣೂರು ಸಿಟಿ ಮಖಾಂ, ಕಣ್ಣೂರು ಜಿಲ್ಲೆ.*
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
*********************

ಕಣ್ಣೂರು ಸಿಟಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಮೌಲಲ್ ಬುಖಾರಿ ತಂಙಳ್ (ರ) ಇಚ್ಚ ಮಸ್ತಾನ್ (ರ) ಮತ್ತು ಇಬ್ರಾಹಿಂ ಸಕ್ರಾನ್ (ರ) ಎಂಬ ಸೂಫಿವರ್ಯರ ಮಖಾಮಿನ ವೈಶಿಷ್ಟ್ಯಗಳ ಬಗ್ಗೆ ಹಿಂದೆ ನಾನು ಬರೆದಿದ್ದೆ. ಆ ಮಹಾನರುಗಳ ಮಖ್ಬರದ ಸನಿಹದಲ್ಲೇ ಅಂತ್ಯ ವಿಶ್ರಮ ಪಡೆಯುತ್ತಿರುವ ಮತ್ತೋರ್ವ ಸೂಫಿವರ್ಯರಾಗಿದ್ದಾರೆ ಹಯಾತುಲ್ ಮುಅ್‌ಮಿನೀನ್ (ಖ.ಸಿ).

ಅಸಾಮಾನ್ಯ ವಿದ್ವಾಂಸರೂ ಪ್ರಮುಖ ಸೂಫಿವರ್ಯರೂ ಅಲ್ಲಾಹನ ಇಷ್ಟದಾಸರೂ ಆಗಿದ್ದ ಹಯಾತುಲ್ ಮುಅ್‌ಮಿನೀನ್ (ಖ.ಸಿ)ರವರು ನೊಂದ ಜನಸಾಮಾನ್ಯರಿಗೆ ಸಾಂತ್ವಾನ ನೀಡುವ ಸಂಜೀವಿನಿ ಎನಿಸಿದ್ದರಲ್ಲದೆ ತಮ್ಮ ಜೀವಿತ ಕಾಲದಲ್ಲೇ ಅಸಾಮಾನ್ಯವಾದ ಕರಾಮತ್ತೊಂದನ್ನು ಕಾಣಿಸಿ ವಿಸ್ಮಯ ಮೂಡಿಸಿದವರು.

ಮಹಾನರು ಒಮ್ಮೆ ತಮ್ಮ ಶಿಷ್ಯರೊಂದಿಗೆ, ಈ ಜನಜಂಗುಳಿಯ ನಡುವೆ ಇಲಾಹಿ ಸ್ಮರಣೆಗೆ ಭಂಗವುಂಟಾಗುತ್ತಿದೆ  ಹಾಗಾಗಿ ನಾನು ಖಬರಿನೊಳಗೆ ಹೋಗುತ್ತೇನೆ. ನಲವತ್ತನೇ ದಿನ ನನ್ನ ಖಬರನ್ನು ತೆರೆಯಿರಿ ಎಂದು ಹೇಳಿ ಖುರ್ಆನನ್ನು ಹಿಡಿದುಕೊಂಡು ಮೊದಲೇ ಅಗೆದಿಟ್ಟಿದ್ದ ಖಬರಿನೊಳಗೆ ಇಳಿದು ಶಿಷ್ಯರೊಂದಿಗೆ ಖಬರನ್ನು ಮುಚ್ಚಿಸಿದರು.

ಮಹಾನರು ಹೇಳಿದಂತೆ ನಲವತ್ತನೇ ದಿನ ಶಿಷ್ಯರು ತಮ್ಮ ಉಸ್ತಾದರ ಖಬರನ್ನು ತೆರೆದು ನೋಡಿದಾಗ ಆಶ್ಚರ್ಯಚಕಿತರಾಗಿದ್ದರು. ಕಾರಣ ಖಬರಿನೊಳಗೆ ಮಹಾನರು ಖುರ್ಆನ್ ಓದುತ್ತಿದ್ದರು.

ಹಾಗೆ ಶಿಷ್ಯರು ಖಬರನ್ನು ತೆರೆದಾಗ ಖಬರಿನೊಳಗಿನಿಂದಲೇ, "ನಾನಿನ್ನು ಇಹಲೋಕಕ್ಕೆ ಬರಲಾರೆ ಹಾಗಾಗಿ ಖಬರನ್ನು ಮುಚ್ಚಿಬಿಡಿ" ಎಂದರು. ಉಸ್ತಾದರ ಮಾತಿನಂತೆ ಶಿಷ್ಯರು ಖಬರನ್ನು ಶಾಶ್ವತವಾಗಿ ಮುಚ್ಚಿ ಬಿಟ್ಟರು. ಈ ಕಾರಣದಿಂದ ಈ ಮಹಾನರಿಗೆ ಹಯಾತುಲ್ ಮುಅ್‌ಮಿನೀನ್ ಎಂಬ ಹೆಸರು ಬಂತು.

ಮಹಾನರ ಕರಾಮತ್ತಿನ ಅರಿವಿರುವ ಜನಸಾಮಾನ್ಯರು ಜಾತಿ ಮತಬೇಧವಿಲ್ಲದೆ ಇಲ್ಲಿಗೆ ಝಿಯಾರತ್ತಿಗಾಗಿ ಆಗಮಿಸುತ್ತಾರೆ.
🔹🔹🔹🔹🔹🔹🔹

ಶಹೀದ್ ಮಾಹಿನ್ ಪೊಕರ್ (ಖ:ಸಿ) ಝಿಯಾರತ್ತುಂಗರ, ಮಾಂಬ, ಚಕ್ಕರಕ್ಕಲ್, ಕಣ್ಣೂರು ಜಿಲ್ಲೆ.

*ಝಿಯಾರತ್ತ್ ಕೇಂದ್ರ​​​*
♦️♦️ 8️⃣8️⃣ ♦️♦️
➖➖➖➖➖➖➖
#ವಲಿಯುಲ್ಲಾಹಿ_ಮಾಹಿನ್_ಪೋಕರ್  (ಖ:ಸಿ) ಝಿಯಾರತ್ತುಂಗರ ಪಳ್ಳಿ, ಮಾಂಬ ಚಕ್ಕರಕ್ಕಲ್ ಕಣ್ಣೂರ್ ಜಿಲ್ಲೆ.
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
▪️▪️▪️▪️▪️▪️▪️

ಕೇರಳದ ಕಣ್ಣೂರಿನಿಂದ 18 ಕಿಲೋಮೀಟರ್ ದೂರವಿರುವ ಕಿಯಾಕ್‌ ಮುಯಪ್ಪಾಲ‌ ಬಝಾರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಮಾಂಬ ಎಂಬ ಸ್ಥಳದಲ್ಲಿರುವ ಝಿಯಾರತ್ತುಂಗರ ಜುಮಾ ಮಸೀದಿಯ ಕಾಂಪೌಂಡಿನೊಳಗಿರುವ ದರ್ಗಾ ಶರೀಫ್ ಸರ್ವ ಧರ್ಮಿಯರ ಅಭಯ ಕೇಂದ್ರವಾಗಿದೆ.

ಹಲವಾರು ಕಶ್ಫ್ ಕರಾಮತ್ತುಗಳನ್ನು ಕಾಣಿಸಿರುವ ಮಾಹಿನ್ ಪೋಕರ್ ಶಹೀದ್ (ರ) ಎಂಬ ಮಹಾನರ ದರ್ಗಾ ಶರೀಫ್ ಇದಾಗಿದ್ದು ಈ ಮಹಾನರ ಮಖಾಮಿನ ಸನಿಹದಲ್ಲೇ ಅವರ ಶಿಷ್ಯಂದಿರೂ ಹಾಗೂ ಶುಹದಾಗಳೂ (ಹುತಾತ್ಮ) ಆದ ಸಿರಾಜುದ್ದೀನ್ (ರ) ಮತ್ತು ಅಬ್ದುಲ್ಲ (ರ) ಎಂಬ ಮಹಾನರಿಬ್ಬರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಕಣ್ಣೂರು ಪೊನ್ನಿಲಗತ್ತ್ ಎಂಬ ಮನೆತನದಲ್ಲಿ ತಾಯಿ ತಂದೆಯರಿಗೆ ಏಕೈಕ ಪುತ್ರನಾಗಿ ಜನಿಸಿದ ವಲಿಯುಲ್ಲಾಹಿ ಮಾಹಿನ್ ಪೋಕರ್ (ರ) ರವರು ಸರ್ವ ಧರ್ಮೀಯರನ್ನು ಬಹಳ ಗೌರವದಿಂದ ಕಾಣುತ್ತಾ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

ಬಾಲ್ಯದಿಂದಲೇ ಇಲಾಹಿ ಸ್ಮರಣೆಯನ್ನು ಮೈಗೂಡಿಸಿಕೊಂಡಿದ್ದ ಅವರು ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ ಸದಾ ಆರಾಧನೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಶರೀಅತ್ ನಿಯಮದ ಪ್ರಕಾರ ಪ್ರಾಯ ಪೂರ್ತಿಯಾಗುತ್ತಿದ್ದಂತೆಯೇ ಅಲ್ಲಾಹನ ಇಷ್ಟ ದಾಸರಾದ ಔಲಿಯಾ ಎಂಬ ಪದವಿ ಪಡೆದಿದ್ದರು.

ಬ್ರಿಟೀಷರಿಗಿಂತಲೂ ಬಹಳ ಮುನ್ನವೇ ವ್ಯಾಪಾರ ನಿಮಿತ್ತ ಭಾರತಕ್ಕೆ ಬಂದಿದ್ದ ಪೋರ್ಚುಗೀಸರು ನಿಧಾನವಾಗಿ ಭಾರತವನ್ನು ತಮ್ಮ ವಶಕ್ಕೆ ತೆಗೆದು ಕೊಂಡರಲ್ಲದೆ ಭಾರತೀಯರನ್ನು ಅಪಮಾನಕರವಾಗಿ ನಡೆಸಿಕೊಳ್ಳಲಾರಂಭಿಸಿದ್ದರು. ಇದನ್ನು ಕಂಡು ಸಿಡಿದೆದ್ದ ಮಾಹಿನ್ ಪೋಕರ್ (ರ) ಪೋರ್ಚುಗೀಸರ ವಿರುದ್ಧ ಹೋರಾಟಕ್ಕಿಳಿದಿದ್ದರು.

ತಾಯಿನಾಡಿನ ಉಳಿವಿಗಾಗಿ ಪರಕೀಯರ ವಿರುದ್ಧ ಹೋರಾಟಕ್ಕಿಳಿದಿದ್ದ ಮಾಹಿನ್ ಪೋಕರ್ (ರ)ರವರು ಹದಿನಾರನೇ ವಯಸ್ಸಿನಲ್ಲಿ ಚೊರಯಾನ್ ಕುಂಡ್ ಎಂಬಲ್ಲಿ ಪೋರ್ಚುಗೀಸರ ವಿರುದ್ಧದ ಹೋರಾಟವೊಂದರಲ್ಲಿ ಶಹೀದಾದರು.

ಹಾಗೆ ಶಹೀದಾದ ಮಹಾನರ ಗೌರವಾರ್ಥ ಅವರ ಜನಾಝದ ಅಂತ್ಯಕ್ರಿಯೆಗಾಗಿ ಅಂದಿನ ನಾಡದೊರೆ ಕೊಕುರಚ್ಚನ್ ಎಂಬುವರು ಮಾಂಬ ಎಂಬ ಊರಿನಲ್ಲಿ ದಾನವಾಗಿ ನೀಡಿದ ಸ್ಥಳದಲ್ಲಿ ದಫನ ಮಾಡಲಾಯಿತು. 
ಶಹೀದಾದ ಮಾಹಿನ್ ಪೋಕರ್ (ರ)ರವರು ಜನಿಸಿದ ಮನೆತನವು ನಂತರ *"ಶಹೀದೊರಕಂ"* ಎಂಬ ಗೌರವನಾಮದಿಂದ ಪ್ರಸಿದ್ಧಿ ಪಡೆಯಿತು.

ಮಹಾನರ ಮಖಾಮಿನ ಕೆಳಭಾಗದಲ್ಲಿ ಅವರ ಶಿಷ್ಯಂದಿರೂ, ಹುತಾತ್ಮರೂ ಆದ ಸಿರಾಜುದ್ದೀನ್ (ರ) ಮತ್ತು ಅಬ್ದುಲ್ಲ (ರ) ಎಂಬಿಬ್ಬರು ಮಹಾನರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
🔖🔖🔖🔖🔖🔖🔖🔖

ವಲಿಯುಲ್ಲಾಹಿ ಪಾಲೊಟ್ಟ್ ಮೂಸ ಕುಟ್ಟಿ ಹಾಜಿ (ನ:ಮ) ಕಣ್ಣೂರು ಸಿಟಿ, ಕಣ್ಣೂರು ಜಿಲ್ಲೆ

*ಝಿಯಾರತ್ತ್ ಕೇಂದ್ರ​​​*
       🕎 8️⃣7️⃣ 🕎
➖➖➖➖➖➖➖
#ವಲಿಯುಲ್ಲಾಹಿ ಪಾಲೊಟ್ಟ್ ಮೂಸ ಕುಟ್ಟಿ ಹಾಜಿ (ಖ:ಸಿ) ಕಣ್ಣೂರು ಸಿಟಿ ಕಣ್ಣೂರು ಜಿಲ್ಲೆ*
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
*********************

ಅಹ್ಲ್ ಸುನ್ನತ್ ವಲ್ ಜಮಾಅತಿನ ಪ್ರಬಲ ಪ್ರತಿಪಾದಕರೂ ಖಾದಿಯಾನಿ, ವಹ್ಹಾಬಿ ಮುಂತಾದ ನೂತನವಾದಿಗಳ ದುರ್ವ್ಯಾಖ್ಯಾನಗಳಿಗೆ ಪುರಾವೆ ಸಹಿತ ಸಮರ್ಪಕವಾದ ಉತ್ತರ ನೀಡುತ್ತಿದ್ದ ಅಸಾಮಾನ್ಯ ವಿದ್ವಾಂಸರಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ಪಾಲೋಟ್ಟ್ ಮೂಸ ಕುಟ್ಟಿ ಹಾಜಿ (ರ).

ಕುಂಞಾಹಮದ್ ಎಂಬುವವರ ಪುತ್ರರಾದ ಅವರು 1878ರಲ್ಲಿ ಜನಿಸಿದರು. ವಿವಿಧ ವಿದ್ವಾಂಸರ ಬಳಿ ಜ್ಞಾನಾರ್ಜನೆ ಮಾಡಿದ ನಂತರ ಅಂದರೆ 1912-15ರ ರ ನಡುವೆ ಮಕ್ಕಾ ಮತ್ತು ಮದೀನಾಕ್ಕೆ ತೆರಳಿ ಮದೀನಾದ ಮುಫ್ತಿಯೂ ಆಗಿದ್ದ  ಅಲ್ಲಾಮ ಯೂಸುಫುನ್ನಬಹಾನಿ (ರ) ರಂತಹ ಹೆಸರಾಂತ ವಿದ್ವಾಂಸರಿಂದ ಉನ್ನತ ಶಿಕ್ಷಣ ಗಳಿಸಿದರು. ಈ ಸಮಯದಲ್ಲಿ ಎರಡು ಸಲ ಹಜ್ಜ್ ಕರ್ಮವೂ ನಿರ್ವಹಿಸಿದರು.

ಅನಂತರ ತಾಯಿನಾಡಿಗೆ ಹಿಂದಿರುಗಿದ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಧಾರ್ಮಿಕ ರಂಗಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿರುವ ಅವರು 1930ರಲ್ಲಿ ದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ಸುನ್ನಿ ಜಂಇಯ್ಯತ್ತುಲ್ ಉಲಮಾ ಕಾನ್ಫರೆನ್ಸ್ ನಲ್ಲಿ ಕೇರಳ ವಿದ್ವಾಂಸರ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

1934ರ ನವೆಂಬರ್ 14ರಂದು ಕೇರಳ ಸುನ್ನಿ ಜಂಇಯ್ಯತ್ತುಲ್ ಉಲಮಾ ರೂಪೀಕರಣವಾದಾಗ ಮೂಸಾ ಕುಟ್ಟಿ ಹಾಜಿ (ಖ.ಸಿ)ರವರು ಅದರ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರಲ್ಲದೆ ಪ್ರಥಮ ಮುಶಾವರದ ಸದಸ್ಯರೂ ಆಗಿದ್ದರು.

ಇಸ್ಲಾಮಿನ ಆಶಯ, ಆದರ್ಶ ಮತ್ತು ಪವಿತ್ರ ಸಂದೇಶಗಳನ್ನು ಮನಬಂದಂತೆ ತಿರುಚಿ ವ್ಯಾಖ್ಯಾನಿಸುತ್ತಿದ್ದ ಖಾದಿಯಾನಿ, ಚಲಫಿ ಮುಂತಾದ ನೂತನವಾದಿಗಳ ದುರ್ವ್ಯಾಖ್ಯಾನಗಳ ವಿರುದ್ಧ  ಮೂಸ ಕುಟ್ಟಿ ಹಾಜಿ (ಖ.ಸಿ)ಯವರು ಸಮರವನ್ನೇ ಸಾರಿದ್ದರಿಂದ ಕಂಗೆಟ್ಟಿದ್ದ  ನೂತನವಾದಿಗಳು‌ ಫಸ್ಖ್‌ಗೆ ಸಂಬಂಧಿಸಿದ ವಿಷಯದಲ್ಲಿ ಖಾದಿಯಾನಿ ಪರ ವಕೀಲ ಸಫರುಲ್ಲಾ ಖಾನ್ ಖಾದಿಯಾನಿಯ ಮುಂದಾಳತ್ವದಲ್ಲಿ ಅಂದಿನ ಮದ್ರಾಸ್ ಹೈಕೋರ್ಟಿನಲ್ಲಿ ಹಾಜಿಯ ವಿರುದ್ಧ ಮೊಕದ್ದಮೆ ಹೂಡಿದರು. (ದೇಶ ವಿಭಜನೆಯ ನಂತರ ಈ ಸಫರುಲ್ಲಾ ಖಾನ್ ಪಾಕಿಸ್ತಾನದ ಕಾನೂನು ಮಂತ್ರಿಯಾಗಿದ್ದರು) ತಮ್ಮ ವಾದಕ್ಕೆ ಸೂಕ್ತ ಪುರಾವೆ ಒದಗಿಸಿದ ಹಾಜಿಯವರ ಪರ ಕೋರ್ಟ್ ತೀರ್ಪು ನೀಡಿತ್ತು. ಹಾಜಿಯವರ ಪರ ಪೋಕರ್ ಸಾಹಿಬ್ ಮತ್ತು ಕೆ.ಸಿ ಕೇಶವ ಮೆನೊನ್ ವಾದ ಮಂಡಿಸಿದ್ದರು.

1951ರಲ್ಲಿ ತಮ್ಮ ಶಿಷ್ಯರೊಬ್ಬರೊಂದಿಗೆ ನೂತನವಾದದ ಬಗ್ಗೆ ಚರ್ಚಿಸುತ್ತಿರುವಾಗ, "ಮೌದೂದಿ ಅಥವಾ ಖಾದಿಯಾನಿಗಳ ದುರ್ವ್ಯಾಖ್ಯಾನದ ವಿರುದ್ಧ ಸುನ್ನಿ ವಿದ್ವಾಂಸರು ಆಧಾರ ಸಹಿತ ಪುರಾವೆಯೊಂದಿಗೆ ಸಂವಾದ ನಡೆಸಿ ಅವರ ವಾದಗಳನ್ನು  ಸುಳ್ಳೆಂದು ಸಾಬೀತು ಪಡಿಸುತ್ತಿದ್ದರೂ ಖಾದಿಯಾನಿ ಅನುಯಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಏಕಿರಬಹುದು ಎಂದು ಮೂಸಾ ಕುಟ್ಟಿ ಹಾಜಿ (ಖ:ಸಿ)ಯವರು ಕೇಳಿದರು, ಆಗ ಆ ಶಿಷ್ಯ ವಿನಯದಿಂದಲೇ ನನಗೆ ಅಷ್ಟೊಂದು ತಿಳುವಳಿಕೆ ಇಲ್ಲದಿರುವುದರಿಂದ ಇದರ ಉತ್ತರವನ್ನು ತಾವೇ ವಿವರಿಸಬೇಕು ಎಂದರು.

ಶಿಷ್ಯನ ಮಾತು ಕೇಳಿದ ಹಾಜಿ (ಖ:ಸಿ)ಯವರು ಅದಕ್ಕೆ ಸುದೀರ್ಘವಾದ ವಿಶ್ಲೇಷಣಾತ್ಮಕವಾದ ಉತ್ತರ ನೀಡಿದರು.

ಆ ವಿಶ್ಲೇಷಣಾತ್ಮಕವಾದ ಉತ್ತರ ಹೀಗಿತ್ತು...

*"ಮುಸ್ಲಿಮರಾದ ನಾವು, ಐದು ಹೊತ್ತಿನ ನಮಾಜ್ ನಿರ್ವಹಿಸುವುದರ ಜೊತೆಗೆ ರಮಳಾನ್ ಮಾಸದಲ್ಲಿ ವ್ರತಾಚರಿಸಿ ಝಕಾತ್ ಕೊಡುವುದು ಸೇರಿದಂತೆ ಎಲ್ಲಾ ಕಡ್ಡಾಯ ಕರ್ಮಗಳನ್ನೂ ಚಾಚೂತಪ್ಪದೆ ಪಾಲಿಸುತ್ತೇವೆ. ಆದರೆ ನಮ್ಮ ಈ ಸತ್ಕರ್ಮಗಳನ್ನು ಪೂರ್ವಜರಾದ ಸ್ವಹಾಬಾಗಳು, ತಾಬಿಊಗಳು, ತಬವುತ್ತಾಬಿಊಗಳು ಮತ್ತು ಇಮಾಮರುಗಳ ಸತ್ಕರ್ಮಗಳಿಗೆ ಹೋಲಿಸಿದರೆ ನಮ್ಮ ಸತ್ಕರ್ಮಗಳು ಏನೂ ಅಲ್ಲ. ಆದ್ದರಿಂದ ಅಲ್ಲಾಹನಿಂದ ಅವರಿಗೆ ಲಭಿಸಿದ  ಪದವಿ, ಪುರಸ್ಕಾರ ಮತ್ತು ಸ್ಥಾನಮಾನಗಳನ್ನು ನಾವು ಪಡೆಯುವುದಿರಲಿ ಅದರ ಸಮೀಪಕ್ಕೂ ಸುಳಿಯಲು ನಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ನಮ್ಮ ಇಬಾದತ್‌ಗಳಲ್ಲಿ ಅಷ್ಟೊಂದು ಲೋಪಗಳಿರಬಹುದು."*

*ಹಾಗಾಗಿ ನಾವು ಅಲ್ಲಾಹನ ಕೋಪಕ್ಕೆ ತುತ್ತಾಗದೆ ನರಕದಿಂದ ವಿಮುಕ್ತಿ ಪಡೆಯಲು ನಮಗೊಂದು  ಮಾರ್ಗವಿದೆ.*

*ಅದೇನೆಂದರೆ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು, ಮತ್ತು ಅವರನ್ನು ಅನುಸರಿಸಿದ ಸ್ವಹಾಬಿಗಳು ಸ್ವಹಾಬಿಗಳನ್ನು ಅನುಸರಿಸಿದ ತಾಬಿಉಗಳು, ತಾಬಿಉಗಳನ್ನು ಅನುಸರಿಸಿದ ತಬ‌ಉತ್ತಾಬಿಊಗಳು ಮತ್ತು ತಬ‌ಉತ್ತಾಬಿಊಗಳನ್ನು ಅನುಸರಿಸಿದ ಇಮಾಮರುಗಳು ತೋರಿಸಿದ ಹಿದಾಯತ್ ಎಂಬ ಸನ್ಮಾರ್ಗದಲ್ಲಿ ನಾವು ಸಾಗುವುದರ ಜೊತೆಗೆ ಆ ಸನ್ಮಾರ್ಗದ ಸಂದೇಶವನ್ನು ದುರ್ವ್ಯಾಖ್ಯಾನ ಮಾಡಿ ಮುಗ್ಧ ಜನಸಾಮಾನ್ಯರನ್ನು ದಾರಿ ತಪ್ಪಿಸಲು ಯತ್ನಿಸುವವರನ್ನು ತಿದ್ದಲು ಪ್ರಯತ್ನಿಸುವುದು. ಅದಾಗದಿದ್ದರೆ, ಅಂಥವರ ದುರ್ವ್ಯಾಖ್ಯಾನವನ್ನು ಹೇಗೆಲ್ಲಾ ತಡೆಯಬಹುದೋ ಆ ರೀತಿಯಲ್ಲೆಲ್ಲ ತಡೆಯಲು ಪ್ರಯತ್ನಿಸಬೇಕು ಈ ಕಾರ್ಯವನ್ನು ಒಂದು ಇಬಾದತ್ (ಸತ್ಕರ್ಮ) ಎಂಬ ಭಾವನೆಯಿಂದ ಕಾಣುವುದು.* 

*ಲೌಕಿಕ ಲಾಭದ ದುರುದ್ದೇಶವಿಲ್ಲದೆ ಇಂತಹ ಸತ್ಕರ್ಮವನ್ನು ಕೈಗೊಂಡರೆ ಆ ಕಾರಣದಿಂದ ನಮ್ಮ ಇತರ ಸತ್ಕರ್ಮಗಳಲ್ಲಿ ಸಂಭವಿಸಿರಬಹುದಾದ ಲೋಪದೋಷಗಳನ್ನು ಅಲ್ಲಾಹನು ಕ್ಷಮಿಸಿ ನಮ್ಮ ಸತ್ಕರ್ಮಗಳನ್ನು ಸ್ವೀಕರಿಸಬಹುದು. ಹಾಗಾದಾಗ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರೊಂದಿಗೆ ಸ್ವಹಾಬಿಗಳು ಮತ್ತು ಅವರನ್ನು ಅನುಸರಿಸಿದವರು ಪ್ರವೇಶಿಸುವ ಸ್ವರ್ಗಕ್ಕೆ ನಮಗೂ ಪ್ರವೇಶ ಲಭಿಸುವ ಸಾಧ್ಯತೆ ಇದೆ.*

*ಅದಕ್ಕಾಗಿ ಕರುಣಾನಿಧಿಯಾದ ಅಲ್ಲಾಹನು ನಮ್ಮಂತಹ ಸಾಮಾನ್ಯರ ನೆರವಿಗಾಗಿ ಇಂತಹ ನೂತನವಾದಿಗಳನ್ನು (ಮುಬ್‌ತದಿಉಗಳನ್ನು) ಇಲ್ಲಿ ನೆಲೆಗೊಳಿಸಿರುವನೆನ್ನುವುದು ನಮ್ಮ ಗಮನದಲ್ಲಿರಬೇಕು.*

*ಆದ್ದರಿಂದ ಇಸ್ಲಾಮಿನ ಕಡ್ಡಾಯ ಕರ್ಮಗಳಾದ ನಮಾಜ್ ಉಪವಾಸ ಮುಂತಾದ ಇಬಾದತ್‌ಗಳಂತೆಯೇ ಮುಬ್‌ತದಿವುಗಳ ದುರ್ವ್ಯಾಖ್ಯಾನಗಳ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸಬೇಕು. ಆದರೆ ನಮ್ಮ ಈ ಸೈದ್ಧಾಂತಿಕ ಹೋರಾಟವು ಹಣ, ಕೀರ್ತಿ ಅಥವಾ ಸ್ಥಾನಮಾನಗಳಿಗಾಗಿ ಆಗಿರಬಾರದು.*

*ಈ ಸೈದಾಂತಿಕ ಹೋರಾಟದ ಹಿಂದೆ ಅಂತಹ ಸ್ವಾರ್ಥವೇನಾದರೂ ಇದ್ದರೆ ಇಹಲೋಕದಲ್ಲಿ ಮಾತ್ರವಲ್ಲ ಪರಲೋಕದಲ್ಲೂ ಅದರ ಪ್ರತಿಫಲವನ್ನು ಉಣ್ಣಬೇಕಾದೀತು ಎಂದರು.*

"ಆಧುನಿಕ ಕಾಲಘಟ್ಟದಲ್ಲಿ ಹೆಜ್ಜೆಗೊಂದು ಮುಬ್‌ತದಿವುಗಳು ಹುಟ್ಟಿಕೊಂಡು ದಿನಕ್ಕೊಂದು ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವುದನ್ನು ಕಾಣುವಾಗ ಏಳು ದಶಕಗಳ ಹಿಂದೆ ಮೂಸಾ ಕುಟ್ಟಿ ಹಾಜಿ (ಖ.ಸಿ)ರವರು  ಸಂದೇಶವನ್ನು ನಾವೆಲ್ಲರೂ ಮನನ ಮಾಡಬೇಕಾದ ಅನಿವಾರ್ಯತೆಯಿದೆ."

ಭೌತಿಕ ಪ್ರತಿಫಲಾಪೇಕ್ಷೆ ಇಲ್ಲದೆ ದೀನೀ ಸೇವೆ ಮಾಡುತ್ತಿದ್ದ ಅವರು ಕಣ್ಣೂರಿನ ಕಾಂಬಝಾರಿನಲ್ಲಿ ಇಸ್ಲಾಮಿಕ್ ಗ್ರಂಥಗಳು, ಸುಗಂಧ ದ್ರವ್ಯ, ಸುರುಮ, ಟೊಪ್ಪಿ, ಮಿಸ್ವಾಕ್, ತಸ್'ಬಿಹ್ ಮಾಲೆ ಇತ್ಯಾದಿಗಳ ಮಾರಾಟದ *"ತಾಜಿರತ್ತುಲ್ ಕುತುಬಿ ವಿಲ್ ಅತ್ತರ್"* ಎಂಬ ಹೆಸರಿನ ತಮ್ಮ ಅಂಗಡಿಯ ಆದಾಯದಿಂದ ತಮ್ಮ ಕುಟುಂಬದ ದೈನಂದಿನ ಜೀವನಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ಉಳಿಸಿ ಮಿಕ್ಕಿದ್ದೆಲ್ಲವನ್ನೂ ದೀನೀ ಸೇವೆಗೆ ವ್ಯಯಿಸುತ್ತಿದ್ದರು. ಈ ಅಂಗಡಿ ಮಾತ್ರವಲ್ಲದೆ ರಮಳಾನ್‌ನಲ್ಲಿ ರಾತ್ರಿ ಮಾತ್ರ ತೆರೆಯುತ್ತಿದ್ದ ಒಂದು ಹೋಟೆಲ್ ಸಹ ಮಹಾನವರ  ಮಾಲಿಕತ್ವದಲ್ಲಿತ್ತು.

ಮಿಂಞಂತ ಎಂಬಲ್ಲಿ ನಡೆದ ಸಮಸ್ತ ಸಮ್ಮೇಳನವು ಖುತುಬಾ ಪರಿಭಾಷೆಯ ವಿರುದ್ಧ ವಿಧೇಯಕವನ್ನು ಅಂಗೀಕರಿಸಿ ಫತ್ವಾ ಹೊರಡಿಸಿದ್ದರೂ ಮಹಾನರ ಮನೆಯ ಸಮೀಪದಲ್ಲೇ ಇದ್ದ ಕಣ್ಣೂರು ಸಿಟಿ ಜುಮಾ ಮಸೀದಿಯು ಅದನ್ನು ಪಾಲಿಸಿರಲಿಲ್ಲ. ಹಾಗಾಗಿ ಜುಮಾ ನಮಾಝಿಗಾಗಿ ದೂರದ ವಳಪಟ್ಟಣ ಎಂಬಲ್ಲಿರುವ ಮಸೀದಿಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು. ಉಳಿದ ದಿನಗಳಲ್ಲಿ ಕಣ್ಣೂರು ಸಿಟಿ ಮಸೀದಿಯಲ್ಲಿ ನಮಾಜ್ ನಿರ್ವಹಿಸುತ್ತಿದ್ದ ಅವರು ಲುಹರ್ ನಮಾಜಿನ ಬಳಿಕ ಹದೀಸ್ ತರಗತಿ ನಡೆಸುತ್ತಿದ್ದರು.

ಕೆಲವರ್ಷಗಳ ಹಿಂದೆ ವಿಧಿವಶರಾದ ಸೂಫಿವರ್ಯರಾದ ನೂರುಲ್ ಉಲಮಾ ಎಂ.ಎ ಉಸ್ತಾದ (ಖ:ಸಿ)ರಿಗೆ ಮೂಸಾ ಕುಟ್ಟಿ ಹಾಜಿ (ಖ.ಸಿ) ರವರು ಮಾರ್ಗದರ್ಶಕರಾಗಿದ್ದರು.

ಮಲಯಾಳಂ, ಅರೇಬಿಕ್ ಮಾತ್ರವಲ್ಲದೆ ಉರ್ದು ಭಾಷೆಯಲ್ಲೂ ಹಿಡಿತ ಹೊಂದಿದ್ದ ಅವರು, ಖಾದಿಯಾನಿ, ಸಲಫಿ, ಮೌದೂದಿ, ಮುಂತಾದ ನೂತನವಾದಿಗಳ ದುರ್ವ್ಯಾಖ್ಯಾನಗಳಿಗೆ ಪುರಾವೆ ಸಹಿತ ದಿಟ್ಟ ಉತ್ತರ ನೀಡುತ್ತಿದ್ದ ಕಾರಣ ನೂತನವಾದಿಗಳು ಅದೆಷ್ಟೇ ಕಿರುಕುಳ ನೀಡಿದರೂ ಸಹ ಒಂದಿಂಚು ಹಿಂದೆ ಸರಿಯದೆ ಸುನ್ನತ್ ಜಮಾಅತಿನ ಆಶಯ ಮತ್ತು ಆದರ್ಶಗಳ ಪ್ರಬಲ ಪ್ರತಿಪಾದಕರಾಗಿ 75 ವರ್ಷಗಳ ಕಾಲ ಸಂತೃಪ್ತ ಜೀವನ ನಡೆಸಿ 1953ರ ಜುಲೈ 14 ರಂದು (ಹಿಜರಿ 1272 ದುಲ್‌ಖ‌ಅದ್ 2) ಕಣ್ಣೂರು ಸಿಟಿ ಜುಮ್ಮಾ ಮಸೀದಿಯಲ್ಲಿ ಸುಬಹಿ ನಮಾಜ್ ನಿರ್ವಹಿಸುತ್ತಿರುವಾಗ ಪ್ರಜ್ಞಾಹೀನರಾದವರು ಅಂದು ರಾತ್ರಿ 12 ಗಂಟೆಗೆ ವಿಧಿವಶವಾದರು.

ನೂತನವಾದದ ವಿರುದ್ಧ ಜೀವನಪರ್ಯಂತ ಹೋರಾಡಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನರು ಕಣ್ಣೂರು ಸಿಟಿ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
🔖🔖🔖🔖🔖🔖🔖

Monday, July 13, 2020

ಸಯ್ಯಿದ್ ಮತ್ತಬಲಿಯ (ಖ:ಸಿ) ಮೌಲುಮ್ ಕುನ್ನುಮ್ಮೆಲ್, ಕಣ್ಣೂರು ಜಿಲ್ಲೆ

#ಝಿಯಾರತ್ತ್_ಕೇಂದ್ರ​​​
🔖🔖 8️⃣6️⃣ 🔖🔖
➖➖➖➖➖➖➖
#ಸಯ್ಯಿದ್ ಮುತ್ತಬಲಿಯ (ಖ:ಸಿ). ಮೌಲುಮ್ ಕುನ್ನುಮ್ಮೆಲ್, ಚಕ್ಕಿಯತ್ತ್ ಮುಖ್, ತಲಶ್ಶ್'ರಿ. ಕಣ್ಣೂರು ಜಿಲ್ಲೆ.*
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
*********************

ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿ ಸಮೀಪದ ಕಡಲಕಿನಾರೆಗೆ ಹೊಂದಿಕೊಂಡಿರುವ ರಮ್ಯ ಮನೋಹರವಾದ ನಿಸರ್ಗ ತಾಣವಾಗಿದೆ ಮೌಲುಮ್ ಕುನ್ನುಮ್ಮೆಲ್.

ಸಯ್ಯಿದ್ ಮುತ್ತಬಲಿಯ (ಖ:ಸಿ) ಎಂಬ ಸೂಫಿವರ್ಯರು ಈ ನಿಸರ್ಗ ಧಾಮದ ಒಡಲಿನಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವುದರಿಂದ ಈ ಪರಿಸರವು ಆಧ್ಯಾತ್ಮಿಕ ಕಂಪಿನೊಂದಿಗೆ ಧನ್ಯವಾಗಿದೆ. 

ಸುಮಾರು ಐದು ಶತಮಾನಗಳ ಹಿಂದೆ ದೀನೀ ಪ್ರಬೋಧನೆಯ ಹೊಣೆ ಹೊತ್ತು ಸೌದಿ ಅರೇಬಿಯಾದಿಂದ ಸಮುದ್ರ ಮಾರ್ಗವಾಗಿ ಸಂಚರಿಸಿ ಚಕ್ಕಿಯತ್ ಮುಕ್ಕು ಎಂಬಲ್ಲಿಗೆ ತಲುಪಿದ ಸಯ್ಯಿದ್ ಮುತ್ತ ಬಲಿಯ (ಖ:ಸಿ) ರವರು ಈ ನಿಸರ್ಗ ಧಾಮದ ಗುಡ್ಡದ ಮೇಲೆ ಇಬಾದತ್‌ನಲ್ಲಿ ತಲ್ಲೀನರಾಗಿದ್ದರು.

ಇದನ್ನು ಕಂಡ ಕಡಲ‌ ತೀರದ ನಿವಾಸಿಗಳು ಮಹಾನರನ್ನು ಕಾಣಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದರು.  

ಸಯ್ಯಿದರ ಮುಖದಲ್ಲಿ ಮಿನುಗುತ್ತಿದ್ದ ಆಧ್ಯಾತ್ಮಿಕ ತೇಜಸ್ಸನ್ನು ಕಂಡ ಜನ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ಪ್ರಾರ್ಥಿಸುವಂತೆ ಮನವಿ ಮಾಡುತ್ತಿದ್ದರು.

ಮಹಾನರ ಪ್ರಾರ್ಥನೆ ಮತ್ತು ಕರಾಮತ್‌ನಿಂದ ವಿಘ್ನಗಳು ನಿವಾರಣೆಯಾದಾಗ ಜನರಿಗೆ ಮಹಾನರಲ್ಲಿ ಗೌರವಾದರಗಳು ಹೆಚ್ಚಾಯಿತು.

ಜನಸಾಮಾನ್ಯರ ನೊಂದ ಬದುಕಿಗೆ ಸಾಂತ್ವಾನ ನೀಡುತ್ತಿದ್ದ ಮಹಾನರ ಸಮಕ್ಷಮಕ್ಕೆ ಬರುತ್ತಿದ್ದ ಜನರ ಸಂಖ್ಯೆ ದಿನಗಳೆದಂತೆ ಹೆಚ್ಚಾಗಿತ್ತು.

ನಿರ್ಜನ ಪ್ರದೇಶದಲ್ಲಿರುವ ಈ ಮಕ್ಬರದ ವಿಶೇಷತೆಯ ಅರಿವಿರುವವರು ಅಲ್ಲಿಗೆ ತೆರಳಿ ಝಿಯಾರತ್ ಮಾಡುತ್ತಿರುತ್ತಾರೆ.

ಸಯ್ಯಿದರ ವಂಶಸ್ಥರ ಉಸ್ತುವಾರಿಯಲ್ಲಿರುವ ಮಖಾಮಿನಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ ಮಾಸದಲ್ಲಿ ವಾರ್ಷಿಕ ಮೌಲಿದ್ ನಡೆಯುತ್ತದೆ.

ಪ್ರಕೃತಿ ಪ್ರಿಯರಿಗೆ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ಹೇಳಿ ಮಾಡಿಸಿದ ತಾಣದಂತಿರುವ ಮೌಲುಮ್ ಕುನ್ನುಮ್ಮೆಲ್‌ಗೆ ಭೇಟಿ ನೀಡಿದರೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದರ ಜೊತೆಗೆ ಸಯ್ಯಿದರ ಮಖಾಮಿನಲ್ಲಿ ಝಿಯಾರತನ್ನೂ ಮಾಡಿ ಬರ್ಕತ್ ಪಡೆಯಬಹುದು.
🔹🔹🔹🔹🔹🔹🔹

Thursday, June 25, 2020

ಝಿಯಾರತ್ತ್ ಕೇಂದ್ರ 85. ಶೈಖುಲ್ ಮಾಶಾಇಖ್ ವಲಿಯುಲ್ಲಾಹಿ ಅಬೂಬಕ್ಕರ್ ಞೆಂಡಾಡಿ (ಖ:ಸಿ) ಕೂತ್ತುಪರಂಬು, ಕಣ್ಣೂರು ಜಿಲ್ಲೆ.

*ಝಿಯಾರತ್ತ್ ಕೇಂದ್ರ*
🕎🕎8️⃣5️⃣🕎🕎
〰️〰️〰️〰️〰️〰️〰️
*ಶೈಖುಲ್ ಮಾಶಾಇಖ್ ವಲಿಯುಲ್ಲಾಹಿ ಅಬೂಬಕ್ಕರ್ ಞೆಂಡಾಡಿ (ಖ:ಸಿ) ಕೂತ್ತುಪರಂಬ್, ಕಣ್ಣೂರ್ ಜಿಲ್ಲೆ.*
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰
✍ _ಗಫೂರ್ ಬಾಯಾರ್_
(ಸುಸಾಮ) ಮಂಗಳೂರು.
🔖🔖🔖🔖🔖🔖🔖

*ಞೆಂಡಾಡಿ ಶೈಖ್ (ಖ:ಸಿ)*
  
ಔಲಿಯಾಗಳೆಂದರೆ ವಿಸ್ಮಯಗಳ ಆಗರ. ಅಲ್ಲಾಹನ ಈ ಲೋಕದಲ್ಲಿ ಹಾದು ಹೋದ ಒಂದೊಂದು ಔಲಿಯಾಗಳ ಬದುಕೂ ಸಹ ಬಹಳ ವೈಶಿಷ್ಟ್ಯತೆಯಿಂದ ಕೂಡಿದ್ದಾಗಿದೆ. ಇಂದು ಞೆಂಡಾಡಿ ಶೈಖ್ (ಖ:ಸಿ) ಎಂದೇ ಅರಿಯಲ್ಪಡುವ ಶೈಖುಲ್ ಮಶಾಯಿಖ್ ಅಬೂಬಕರ್     
ಞೆಂಡಾಡಿ (ಖ.ಸಿ)ರವರ ಬಗ್ಗೆ ತಿಳಿಯೋಣ.

ಮಲಪ್ಪುರಂ ಜಿಲ್ಲೆಯ ಅರಿಕೋಡು ಎಂಬಲ್ಲಿ ಜನಿಸಿ ಇಲಾಹಿ ಸ್ಮರಣೆಯ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾಗಿ ಔಲಿಯಾತನದ ಪದವಿಗಳಿಸಿ ಪವಾಡಗಳ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದ ಮಹಾನರಾಗಿದ್ದರು ಞೆಂಡಾಡಿ ಶೈಖ್ (ಖಸಿ).

ಐದು ದಶಕಗಳ ಹಿಂದೆ ಸೂಫಿಗಳ ಕೇಂದ್ರ ಸ್ಥಳವೆಂದೇ ಕರೆಸಿ ಕೊಳ್ಳುತ್ತಿದ್ದ ಮುಸ್ಲಿಮರೇ ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದ್ದ ಞೆಂಡಾಡಿಯಲ್ಲಿ ವಾಸ್ತವ್ಯ ಹೂಡಿದ್ದರು.

ಕುತುಬುಲ್ ಅಖ್ತಾಬ್ ಮೊಹಿದ್ದೀನ್ ಶೈಖ್ (ರ)ರವರನ್ನು ಬಹಳ ಪ್ರೀತಿಸುತ್ತಿದ್ದ ಅವರು,  ಬಗ್ದಾದಿಗೆ ತೆರಳಿ ಖಾದಿರಿಯ್ಯಾ ತ್ವರೀಕತ್ತಿನ ಶೈಖ್ ಆಗಿದ್ದ ಶೈಖುನಾ ಅಸಯ್ಯಿದ್ ಶರಫುದ್ದೀನ್ ಅಲ್ಲಿ ಖಾದಿರಿ ಬಗ್ದಾದಿ (ರ)ರವರ ಶಿಷ್ಯರಾಗಿ ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿದರು. 

ಞೆಂದಾಡಿ  ಶೈಖ್‌ (ಖ:ಸಿ)ರ ವಿಧೇಯತೆ ಭಕ್ತಿ ಮತ್ತು ದೀನಿನ ಬಗೆಗಿರುವ ಕಾಳಜಿಯನ್ನು ಕಂಡ ಬಗ್ದಾದಿ (ರ)ರವರು ಞೆಂಡಾಡಿ ಶೈಖ್‌ (ಖ:ಸಿ)ರಿಗೆ ತನ್ನ ಹೆಸರಾದ ಸಯ್ಯಿದ್ ಶರಫುದ್ದೀನ್ ಅಬೂಬಕ್ಕರ್ ಖಾದಿರಿ (ಖ.ಸಿ) ಎಂದು ಮರು ನಾಮಕರಣ ಮಾಡಿದರು.

ಅನಂತರ ಬಗ್ದಾದಿನಿಂದ ತಾಯಿನಾಡಿಗೆ ಹಿಂದುರುಗಿದ ಞೆಂಡಾಡಿ ಶೈಖ್ (ಖ.ಸಿ) ರವರು ನೇರಳವಾಗಿ ಸುಲ್ತಾನುಲ್ ಹಿಂದ್ ಖ್ವಾಜಾ ಗರೀಬ್ ನವಾಝ್ ಅಜ್ಮೀರಿ (ರ)ರವರು ಮಖಾಮಿಗೆ ತೆರಳಿ ಅಲ್ಲಿ ಹಲವು ವರ್ಷಗಳನ್ನು ಇಬಾದತ್ತಿನಲ್ಲಿ ಕಳೆದಿದ್ದರು.

ನಂತರ ಅಜ್ಮೀರ್'ನಿಂದ ಹಿಂದಿರುಗಿದ ಅವರು ತಮ್ಮ ಸ್ವಗ್ರಾಮದಲ್ಲಿ ವಾಸ್ತವ್ಯ ಹೂಡದೆ ಸೂಫಿ ಸಂತರ ನಾಡೆಂದು ಕರೆಸಿಕೊಳ್ಳುತ್ತಿದ್ದ                 ಞೆಂಡಾಡಿಗೆ ಹೋಗಿ ಜನಸೇವೆಯಲ್ಲಿ ತಲ್ಲೀನರಾದರು.

1940ರಿಂದ 48ರ ತನಕ ವೆಲ್ಲೂರ್ ಬಾಖಿಯಾತಿನಲ್ಲಿ ಮುದರ್ರಿಸ್ ಆಗಿದ್ದ ಶೈಖುನಾ ಶಂಸುಲ್ ಉಲಮಾ ಈ.ಕೆ. ಉಸ್ತಾದರು (ಖ:ಸಿ) ಸಾಂಕ್ರಾಮಿಕ ರೋಗವಾದ ಸಿಡುಬು ವ್ಯಾಪಿಸಿದ್ದರಿಂದ ಅಲ್ಲಿಂದ ಙಂಡಾಡಿಗೆ ತೆರಳಿದ ಉಸ್ತಾದರು ಶೈಖ್‌ರವರ ಮೇಲಿನ ಗೌರವಾದರಗಳಿಂದ ಕೆಲವು ಕಾಲ ಶೈಖ್‌ರೊಂದಿಗೆ ಞೆಂಡಾಡಿಯಲ್ಲಿ ವಾಸ್ತವ್ಯ ಹೂಡಿ ಅವರ ನಿರ್ದೇಶನದಂತೆ ದ‌ಅ್‌ವಾ ನಡೆಸುತ್ತಿದ್ದರು.

ಜೀವನದಲ್ಲಿ ಹಲವಾರು ಕಷ್ಫ್ ಕರಾಮತ್‌ಗಳನ್ನು ಕಾಣಿಸಿದ ಞೆಂಡಾಡಿ     ಶೈಖ್ (ಖ.ಸಿ)ರವರ ಜೀವನ ಚರಿತ್ರೆಯನ್ನು ಯಥಾವತ್ತಾಗಿ ಬರೆಯಲು ಯಾರಿಂದಲೂ ಸಾಧ್ಯವಾಗಿಲ್ಲ.  ಔಲಿಯಾಗಳು ಪ್ರಚಾರ ಮತ್ತು ಕೀರ್ತಿಯನ್ನು ಎಂದೂ ಬಯಸಲಾರರೆಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಆ ಕಾರಣದಿಂದ ಅಂದರೆ ಮಹಾನರ ಸಮ್ಮತಿ ಲಭಿಸದ ಕಾರಣ ಅವರ ಜೀವನದ ಸಾಧನೆಯ ಸ್ಪಷ್ಟ ಚಿತ್ರಣವನ್ನು ಯಾರಿಂದಲೂ ಉಲ್ಲೇಖಿಸಲು ಸಾಧ್ಯವಾಗಿಲ್ಲದಿರಬಹುದು.

ಮಹಾನರು ಜೀವಿಸಿರುವಾಗಲೇ ಅವರು ಅಳಿಯಂದಿರಾದ ಕೂಡಾಡಿ ಮಾಹಿನ್ ಮುಸ್ಲಿಯಾರ್ ಮತ್ತು ಶೈಖುನಾ ಅವರ ಆಪ್ತ ಶಿಷ್ಯರಲ್ಲೊಬ್ಬರಾದ ಶ್ರೀಕಂಠಪುರಂ ಅಬ್ದುಲ್ ಖಾದಿರ್ ಮುಸ್ಲಿಯಾರ್ ಜಂಟಿಯಾಗಿ ಶೈಖ್‌ರವರ ಜೀವನ ಚರಿತ್ರೆಯನ್ನು ಬರೆದು ಪ್ರಕಟಣೆಗಾಗಿ ಅವರ ಸಮ್ಮತಿ ಕೇಳಿದಾಗ, ಅಸಮಾಧಾನಿತರಾದ ಶೈಖ್‌ರವರು  ಅವರಿಬ್ಬರನ್ನೂ ತಮ್ಮ ಬಳಿಗೆ ಕರೆದು ಅವರು ಬರೆದಿದ್ದ ಹಸ್ತ ಪ್ರತಿಯನ್ನು ಪಡೆದು ಪುಟ ತಿರುಗಿದಾಗ ಅದರಲ್ಲಿದ್ದ ಅಕ್ಷರಗಳೆಲ್ಲ ಕಣ್ಮರೆಯಾಗಿತ್ತು.

ನಂತರ ಅವರೊಂದಿಗೆ ನನ್ನ ಜೀವನವು ಮೋಹಿಯುದ್ದಿನ್ ಮಾಲೆಯ ತರವಾಗಿದೆ ಎಂದಿದ್ದರು. ಅಂದರೆ ಈ ಮಹಾನರ ಜೀವನವೆನ್ನುವುದು ಸಾಧಾರಣವಲ್ಲ ಎಂಬುದು ಈ ಮಾತಿನಿಂದಲೇ ನಮಗೆ ವ್ಯಕ್ತವಾಗುತ್ತದೆ.

ಇತ್ತೀಚೆಗೆ ವಫಾತಾದ ಜಲಾಲುದ್ದೀನ್ ಮಸ್ತಾನ್ (ನ.ಮ) ಶೈಖ್‌ರವರ ಪುತ್ರರಾಗಿದ್ದು ಪುತ್ರನ ಬದುಕಿನಲ್ಲಿ ಇಂತಿಂತಹ ಘಟನೆಗಳು ನಡೆಯಲಿದೆ ಎಂದು ತಮ್ಮ ಶಿಷ್ಯಂದಿರಿಗೆ ಹೇಳಿದ್ದರು.

ಇಹಲೋಕ ತ್ಯಜಿಸುವ ಅಲ್ಪ ದಿನಗಳ ಮುಂಚೆ ಮುತ್ತುಪೇಟೆ ದರ್ಗಾಕ್ಕೆ ತೆರಳಿದ ಅವರು ದರ್ಗಾದ ಬಾಗಿಲು ಮುಚ್ಚಿ ಬಹಳ ಹೊತ್ತು ಏಕಾಂತದಿಂದ ಝಿಯಾರತ್ ಮಾಡಿ ಹೊರ ಬಂದು ದರ್ಗಾದಲ್ಲಿದ್ದ ಆದಮ್ ಲಬ್ಬೈ ಎಂಬುವವರೊಂದಿಗೆ ಇಂತಹ ದಿನ ತಾವು ವಫಾತ್ ಆಗಲಿದ್ದೇನೆ ಎಂದಿದ್ದರು.

ಕಣ್ಣೂರು ಜಿಲ್ಲೆಯ ಞೆಂಡಾಡಿ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ  ಞೆಂಡಾಡಿ ಶೈಖ್‌ (ಖ:ಸಿ)ರವರು ತಮ್ಮ ಬದುಕಿನುದ್ದಕ್ಕೂ ವಿಸ್ಮಯಕರವಾದ ಹಲವಾರು ಕಶ್ಫ್ ಕರಾಮತ್ತುಗಳನ್ನು ಕಾಣಿಸಿದ್ದರಾದರೂ ನೂರಕ್ಕೆ ತೊಂಬತ್ತರಷ್ಟು ವಿಸ್ಮಯಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.

ಮಹಾನರ ಬರ್ಕತ್ತಿನಿಂದ ಅಲ್ಲಾಹನು ನಮ್ಮೆಲ್ಲರನ್ನೂ ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ ಆಮೀನ್ 🤲
🍁🍁🍁🍁🍁🍁🍁🍁

Sunday, June 14, 2020

ಝಿಯಾರತ್ತ್ ಕೇಂದ್ರ 84 ವಲಿಯುಲ್ಲಾಹಿ ಶೈಖ್ ಮಖ್ದೂಮ್ ಫರೀದ್ ಮಿಲಿಟರಿ ಬಾಬ (ಖ:ಸಿ) ಅರಿಕುಳಂ ಕೊಯಿಲಾಂಡಿ ಕಲ್ಲಿಕೋಟೆ ಜಿಲ್ಲೆ.

#ಝಿಯಾರತ್ತ್_ಕೇಂದ್ರ​​​
🔖🔖 8️⃣4️⃣ 🔖🔖
➖➖➖➖➖➖➖
#ವಲಿಯುಲ್ಲಾಹಿ_ಶೈಖ್_ಮಖ್ದೂಮ್ #ಫರೀದ್_ಮಿಲಿಟರಿ_ಬಾಬ (ಖ:ಸಿ) #ಅರಿಕುಳಂ_ಕೊಯಿಲಾಂಡಿ_ಕಲ್ಲಿಕೋಟೆ_ಜಿಲ್ಲೆ.
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಮರಣಕ್ಕಿಂತ ಮುಂಚೆ ಸೃಷ್ಟಿಕರ್ತನಾದ ಅಲ್ಲಾಹನ ಹಬೀಬಾದ ನಬಿ ﷺِರನ್ನು ಕನಸಿನಲ್ಲಾದರೂ ಒಮ್ಮೆ ಕಾಣಬೇಕೆಂದು ಬಯಸದ ಮುಅ್‌ಮಿನ್‌‌‌ಗಳೇ ಇಲ್ಲ. ಆದರೆ ಕನಸಿನಲ್ಲಿ ಮಾತ್ರವಲ್ಲದೆ ನನಸಿನಲ್ಲೇ ಆ ಹಬೀಬ್ ﷺِ ರನ್ನು ಕಾಣುವ ಭಾಗ್ಯ ದೊರೆತರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ?

ಹಾಗೆ ಅಲ್ಲಾಹನ ಹಬೀಬ್ ﷺِ ರನ್ನು ಕನಸಿನಲ್ಲಿ ಮಾತ್ರವಲ್ಲದೆ ನನಸಿನಲ್ಲೂ ಕಂಡ ಅನೇಕ ಮಹಾತ್ಮರ ಬಗ್ಗೆ ನಾವು ಕೇಳಿದ್ದೇವೆ. ಅಂತಹ ಮಹಾತ್ಮರ ಪೈಕಿ ಕಲ್ಲಿಕೋಟೆಯ ಕೊಯಿಲಾಂಡಿ ಸಮೀಪದ ಅರಿಕುಳಂ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ವಲಿಯುಲ್ಲಾಹಿ ಶೈಖ್ ಮಖ್ದೂಂ ಫರೀದ್ ಮಿಲಿಟರಿ ಬಾಬಾ (ಖ.ಸಿ) ಸಹ ಒಬ್ಬರು.

ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್‌ ಒರುಮನಯೂರ್‌ ನಿವಾಸಿಯಾದ ಕುಂಞುಮೋನ್‌ ಹಾಜಿಯವರು, "ಮಖ್ದೂಮ್ ಮಿಲಿಟರಿ ಮಾಲ" ಎಂಬ ಸಣ್ಣ ಕೃತಿಯಲ್ಲಿ ಈ ಮಹಾನರನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಮಹಾನರ ಜನನ ತಾಯಿ ತಂದೆಯರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೃತಿಯಲ್ಲಿ ಇಲ್ಲ. ಪೊನ್ನಾನಿ ಅಲ್ಲಾಮಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ)ರಿಂದ ಪೊನ್ನಾನಿ ದರ್ಸ್‌ನಲ್ಲಿ ತಫ್ಸೀರ್, ಫಿಖ್ಹ್‌ ಮತ್ತು ಹದೀಸ್‌ಗಳ ಅಧ್ಯಯನ ಮಾಡಿದರಲ್ಲದೆ ಪೊನ್ನಾನಿ ಮಕ್ಕಿ ಪಳ್ಳಿ ವಾಇಳ್ ಅಬ್ದುಲ್ಲಾ ಮುಸ್ಲಿಯಾರ್ (ಖ.ಸಿ) ಮತ್ತು ಅಬ್ದುಲ್ಲಾ ಯಮಾನಿಲ್‌(ಖ.ಸಿ)ರಿಂದ ಉರ್ದು, ಪಾರ್ಸಿ ಇತ್ಯಾದಿ ಭಾಷೆಗಳಲ್ಲೂ ಜ್ಞಾನಾರ್ಜನೆ ಮಾಡಿದರು.

ಇಹಲೋಕದಲ್ಲಿ ಈಗಲೂ ಜೀವಿಸಿರುವ ಖಿಳ್‌ರ್ ನಬಿ(ಅ)ರು ಆಗಾಗ ಅಲ್ಲಾಹನ ಔಲಿಯಾಗಳನ್ನು ಬೇಟಿ ಮಾಡುತ್ತಾ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುವ ಬಗ್ಗೆ ಔಲಿಯಾಗಳ ಚರಿತ್ರೆಯಿಂದ ತಿಳಿಯುತ್ತದೆ.

ಆ ಖಿಳ್‌ರ್ ನಬಿ (ಅ)ರನ್ನೂ ಕಂಡ ಮಹಾನರಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ಶೈಖ್ ಮಖ್ದೂಂ ಫರೀದ್ ಮಿಲಿಟರಿ ಬಾಬಾ (ಖ.ಸಿ)ರವರು.

ಒಮ್ಮೆ ಮುಂಬೈನ ಸಮುದ್ರ ತೀರದ ಬಂಡೆ ಕಲ್ಲೊಂದರ ಮೇಲೆ ಇಬಾದತ್'ನಲ್ಲಿ ತಲ್ಲೀನರಾಗಿದ್ದಾಗ ಅಲ್ಲಿಗೆ ಆಗಮಿಸಿದ ಖಿಳ್‌ರ್ ನಬಿ (ಅ)ರು, ಮಹಾನರಿಗೆ ಆಹಾರವನ್ನು ತಂದು ಕೊಟ್ಟರಲ್ಲದೆ ಒಂದು ಕೋಲನ್ನು ಅವರ ಕೈಗಿಟ್ಟು, ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ಸೇನಾಧಿಕಾರಿಗಳು ಮತ್ತು ಸೈನಿಕರ ಬಳಿ ತೆರಳಿ ಅವರಿಗೆ ಇಲ್ಮ್ ಮತ್ತು ತೌಹೀದನ್ನು ಕಲಿಸಲು ಸೂಚಿಸಿದರು. 

ಹಾಗೆ ಮಿಲಿಟರಿ ಕ್ಯಾಂಪಿಗೆ ಹೇೂಗಿ ಸೈನಿಕರಿಗೆ ಇಲ್ಮ್ ಕಲಿಸಲಾರಂಭಿಸಿದ ನಂತರ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರಲ್ಲಿ ಅನೇಕರು ಮಹಾನರ ಶಿಷ್ಯತ್ವ ಸ್ವೀಕರಿಸಿದರಲ್ಲದೆ ಮಹಾನರನ್ನು ಮಿಲಿಟರಿ ಬಾಬಾ ಎಂದೇ ಕರೆಯಲಾರಂಭಿಸಿದರು.

ನಂತರ ಸದಾ ಜನಜಂಗುಳಿಯಿಂದ ಗಿಜಿಗಿಡುತ್ತಾ ಪೊಲೀಸರಿಂದಲೂ ನಿಯಂತ್ರಿಸಲಾಗದ ಮುಂಬೈನ ಬೀದಿಗಳಲ್ಲಿ ಸಂಚರಿಸುತ್ತಾ ಖಿಳ್‌ರ್ ನಬಿ(ಅ)ರು ಕೊಟ್ಟ ಕೋಲನ್ನು ಹಿಡಿದು ಜನಜಂಗುಳಿಯನ್ನು ನಿಯಂತ್ರಣಕ್ಕೆ ತರುತ್ತಾ ಪೊಲೀಸರಿಗೆ ನೆರವಾಗುತ್ತಿದ್ದರು.

ಬರ್ಮಾ, ಚೀನಾ, ಸಿಲೋನ್, ಬಗ್ದಾದ್, ಮಕ್ಕಾ, ಮದೀನಾ ಹೀಗೆ ಪ್ರಪಂಚದ ನಾನಾ ಕಡೆ ಸಂಚರಿಸಿದ ಮಹಾನರು ಅಲ್ಲಾಹನ ರಸುಲರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ನನಸಿನಲ್ಲೇ ಕಂಡ ಮಹಾನರಾಗಿದ್ದಾರೆ.

ಹಿಜರಿ 1411ರ ರಬೀವುಲ್ ಅವ್ವಲ್ 23ರ ರವಿವಾರದಂದು ಮಗರಿಬ್‌ಗೆ ಅಲ್ಪ ಮುಂಚೆ ವಫಾತಾದ ಮಹಾನರು ತಮ್ಮ ಸ್ವಗೃಹದ ಮುಂಬಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಈ ಮಹಾನರ ಜೀವಿತ ಕಾಲದಲ್ಲಿ ಅವರ ಕರಾಮತ್ತುಗಳನ್ನು ಕಣ್ಣಾರೆ ಕಂಡವರು ಹಾಗೂ ಅವರಿಂದ ಕೇಳಿ ತಿಳಿದವರು ಮುಂಬೈಯ ವಿವಿಧ ಭಾಗಗಳಿಂದ ಜನರು ಝಿಯಾರತ್‌ಗಾಗಿ ಈ ಮಹಾನರ ಮಖಾಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ಆಗಮಿಸುತ್ತಿದ್ದಾರೆ.

ದಾರಿ: ಕೊಯಿಲಂಡಿ ಅರಿಕುಳಂ.
💢💢💢💢💢💢💢💢

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 19

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --19

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  18:*_
*ಮನೆಯ ಸ್ಥಳ  ಉತ್ತಮವಾಗಿರಲಿ*

ಒಂದು ಮನೆ ಕಟ್ಟಿದರೆ ಜೀವನ ಪರ್ಯಂತ ಅದರ ಸುಖ ಅನುಭವಿಸಿಬೇಕಾದರೆ ಬಹಳ ಮುಖ್ಯವಾಗಿ ಗಮನಿಸಬೇಕಾ ಒಂದು ಅಂಶವಾಗಿದೆ ಮನೆ ಕಟ್ಟುವ ಸ್ಥಳ.
ಮನೆ ಕಟ್ಟುವಾಗ ಪ್ರಮುಖವಾಗಿ ಮಸೀದಿ ಸಮೀಪವಿದೆಯೇ ಎಂದು ಆಲೋಚಿಸಬೇಕು.
ಶಾಲೆ,ಅಂಗಡಿಮುಂಗಟ್ಟುಗಳು,ಆಸ್ಪತ್ರೆ ಎಲ್ಲವೂ ಮುಖ್ಯವೇ ಆಗಿದೆ.ಇತ್ತೀಚಿಗೆ ಒಂದು ಮನೆಯ ಜಾಹಿರಾತು ನೋಡಿದೆ.ಮನೆಯಿಂದ ಏರ್ಪೋರ್ಟ್'ಗೆ ಕೇಲವ 30 ಕಿಲೋಮೀಟರ್ ಅಂತ.
ಮನೆಗೆ ದಿನಾಲು ಫ್ಲೈಟಲ್ಲಿ ಬರುವವರಿದ್ದರೆ ಅಂತಹಾ ಮನೆ ಆಯ್ಕೆ ಮಾಡಬಹುದು.
ಪ್ರಮುಖವಾಗಿ ಗಮನಿಸಬೇಕಾದ ಹಲವನ್ನು ಕೆಲವರು ಗಮನಿಸುತ್ತಿಲ್ಲ.

ಮುಸ್ಲಿಮನ ಮನೆ ಸಮೀಪ ಮಸೀದಿಯಿದ್ದರೆ ಅಝಾನ್ ಚೆನ್ನಾಗಿ ಕೇಳಬಹುದು.ಸ್ವಲಾತ್,ದ್ಸಿಕ್ರ್ ಎಲ್ಲವೂ ಆಲಿಸಬಹುದು.
5 ವಕ್ತ್ ಜಮಾಅತ್ ನಮಾಝ್ ಗೆ ಸುಲಭವಾಗಿ ಹೋಗಬಹುದು.
ಮಹಿಳೆಯರಿಗೆ ಮಸೀದಿಯಿಂದ ಕೇಳುವ ಪ್ರವಚನಗಳನ್ನು ಆಲಿಸಬಹುದು.
ಮಸೀದಿಗೆ ತಾಗಿಕೊಂಡು ಮದ್ರಸ ಎಲ್ಲಾ ಕಡೆ ಇರುವುದರಿಂದ ಪುಟ್ಟ ಮಕ್ಕಳಿಗೆ ಮದ್ರಸಕ್ಕೆ ಹೋಗಲೂ ಸುಲಭವಾದೀತು.

ಮದೀನಾ ನಿವಾಸಗಳ ಪೈಕಿ ಕೆಲವರು  ಮಸೀದಿಗೆ ದೂರದಲ್ಲಿರುವ ಮನೆಗಳನ್ನು ಮಸೀದಿಯ ಸಮೀಪ ಕಟ್ಟಲು ಉದ್ದೇಶಿಸಿದ ಬಗ್ಗೆ ಪ್ರವಾದೀವರ್ಯರಿಗೆ ತಿಳಿದಾಗ ನಿಮ್ಮ ಮನೆ ಅಲ್ಲೇ ಇರಲಿ.ನೀವು ದೂರದ ಸ್ಥಳಗಳಿಂದ ಜಮಾಅತ್ ನಮಾಝ್ ಗೆ ಮಸೀದಿಗೆ ಬಂದರೆ ನಿಮ್ಮ ಒಂದೊಂದು ಹೆಜ್ಜೆಗೂ ಹಲವಾರು ಪ್ರತಿಫಲವಿದೆಯೆಂದು ಆ ಸ್ವಹಾಬಿಗಳಲ್ಲಿ ಹೇಳಿದಾಗ ಅವರು ಆ ತೀರ್ಮಾನದಿಂದ ಹಿಂದೆ ಸರಿದ ಬಗ್ಗೆ ಹದೀಸ್ ನಲ್ಲಿದೆ.
ಮಸೀದಿ ಸಮೀಪವಿದ್ದರೆ ಮಾತ್ರ ನಾವು ಮಸೀದಿಗೆ ಹೋಗುವೆವು.ದೂರದಲ್ಲಾದರೆ ಮನೆಯಲ್ಲೇ ನಮಾಝ್ ಮಾಡುವೆವು.
ಸ್ವಹಾಬತ್ ನಂತೆ ಈಮಾನ್ ನಮ್ಮಲ್ಲಿ ಇಲ್ಲದಿರುವುದರಿಂದ ನಮ್ಮ ಮನೆ ಮಸೀದಿ ಬಳಿಯೇ ಇದ್ದರೆ ಚೆನ್ನ ಎಂದು ನಾನು ಹೇಳಿದ್ದೇನೆ.
ದೂರದ ಸ್ಥಳದಿಂದ ಜಮಾಅತ್ ನಮಾಝ್'ಗೆ ಬಂದಲ್ಲಿ ಹಲವಾರು ಪ್ರತಿಫಲವಿದೆಯೆಂದು ನಾವು ತಿಳಿದಿರಬೇಕು.

ಪಿತ್ನ ಫಸಾದ್ ಕೋರರಿಂದ ನಮ್ಮ ಮನೆ ಮುಕ್ತವಾದಲ್ಲಿ ಮಾತ್ರ ನಮ್ಮ ಮನೆಯಲ್ಲಿ ಸಂತೋಷವಿರಬಹುದು.
(ನೆರೆಕರೆ ಹೇಗಿರಬೇಕೆಂದು 7 ನೇ ಭಾಗದಲ್ಲಿ ವಿವರಿಸಿದ್ದೇನೆ)

ಮನೆಯ ಒಳಗೆ ಮತ್ತು ಹೊರಗೆ ಬಹಳ ಮುಖ್ಯವಾಗಿ ಶುಚಿತ್ವ ಕಾಪಾಡಬೇಕು.
ಮೊರೋಕೋ ರಾಷ್ಟದಲ್ಲಿ ಮರಾಕಿಶ್ ಎಂಬ ಪಟ್ಟಣದ ಜನರಿಗೆ ರೋಗ ಬರುವುದು ಬಹಳ ಕಡಿಮೆಯಂತೆ.ಅಲ್ಲಿನ ಜನರಿಗೆ ಆ ಊರಿನಲ್ಲಿ ಆಸ್ಪತ್ರೆ ಎಲ್ಲಿ ಅಂತ ತಿಳಿದಿರುವುದು ಕಡಿಮೆ.ಕಾರಣ ಅವರ ಮನೆಯ ಒಳ ಮತ್ತು ಹೊರಗೆ ಅಷ್ಟು ಶುಚಿತ್ವವನ್ನು ಕಾಪಾಡುತ್ತಾರೆ.ಮಾರ್ಗದ ಬದಿಯಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಅಲ್ಲಿ ಕಾಣಲು ಸಾಧ್ಯವಿಲ್ಲ.
ದೂಳು ಮಣ್ಣುಗಳಿಲ್ಲ.
ಶುಚಿತ್ವ ಕಾಪಾಡಿದ್ದಲ್ಲಿ ಯಾವುದೇ ರೋಗಗಳು ಬರದು.
"ಮನೆಯ ಒಳಗೆ ಮತ್ತು ಹೊರಗೆ ಶುಚಿತ್ವ ಕಾಪಾಡಿ" ಎಂಬ ಒಂದು ಸೂತ್ರ ನಂತರದ ಭಾಗದಲ್ಲಿ ಬರಲಿದೆ.

ನಮ್ಮ ಮನೆ ತೆರೆದ ಮನೆಯಾಗಬಾರದು.
ಕಿಟಕಿಗಳಿಗೆ ಬಾಗಿಲುಗಳಿರಬೇಕು.
ಗ್ಲಾಸ್ ನಿಂದ ಕೂಡಿದ ಬಾಗಿಲುಗಳಾದಲ್ಲಿ ಅದಕ್ಕೆ ಪರದೆ ಹಾಕಬೇಕು.
ರೂಮಿನ ಲೈಟ್ ಹಾಕಿದ್ದಲ್ಲಿ ಹೊರಗಿನಿಂದ ರೂಮಿನೊಳಗಿರುವವರನ್ನು ಕಾಣದಂತೆ ಭದ್ರಗೊಳಿಸಬೇಕು.

ಕೆಲವು ಮನೆಯ ಹೊರಗೆ ನಿಂತರೆ ಒಳಗಿನ ಅಡುಗೆ ಕೋಣೆ ಸಹಿತ
ಎಲ್ಲವೂ ಕಾಣುತ್ತದೆ.
ಹಾಗಿದ್ದರೆ ಇದ್ದವರಿಗೂ ಬಂದವರಿಗೂ ತೊಂದರೆ.
ಆದುದರಿಂದ ಮನೆ ನಿರ್ಮಿಸುವಾಗ ಬಾಗಿಲುಗಳನ್ನು ಆಚೀಚೆ ಮಾಡಿ ಒಳಕೋಣೆ ಕಾಣದಂತೆ ಇಡುವುದು ಉತ್ತಮವಾಗಿದೆ.
ಹಾಗೆ ಮಾಡಿ ಆಗಿದ್ದಲ್ಲಿ ಬಾಗಿಲುಗಳ ಮೂಲಕ ಒಳಕೋಣೆಗಳು ಕಾಣದಂತೆ ಪರದೆ ಹಾಕುವುದು ಉತ್ತಮವಾಗಿದೆ.
ಪರದೆ ಇದ್ದರೂ ಕೆಲವು ಮನೆಗಳಲ್ಲಿ ಅದನ್ನು ಸುರುಟಿ ಎತ್ತಿ ಕಟ್ಟಿ ಹಾಕಿರುತ್ತಾರೆ.ಇದೂ ಕೂಡಾ ಸಲ್ಲದು.
ಮನೆಯ ಒಳಗೆ ಯಾವಾಗಲೂ ಪ್ರೈವಸಿ ಬೇಕು.
ವಿಶೇಷವಾಗಿಯೂ ಮಹಿಳೆಯರಿರುವ ಮನೆ.
ಅದಕ್ಕಾಗಿ ಒಳಗಿನ ಗುಟ್ಟನ್ನು ರಟ್ಟು ಮಾಡಬಾರದು.



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 18

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --18

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  17:*_
*ಮಕ್ಕಳ ಎದುರಲ್ಲಿ ತಂದೆ-ತಾಯಿಯ ಕಲಹ ಇಲ್ಲದಿರಲಿ*

ಮನುಷ್ಯ ಸಾಮೂಹಿಕವಾಗಿ ಜೀವಿಸುವ ಜೀವಿಯಾಗಿದ್ದಾನೆ.ಮಗುವಾಗಿದ್ದಾಗ ತಂದೆ ತಾಯಿಯ ಮತ್ತು ಯುವಕ/ಯುವತಿಯಾದಾಗ ಪತಿ/ಪತ್ನಿಯ ಆಶ್ರಯದಲ್ಲೂ ಪ್ರಾಯವಾಗುವಗ ಮಕ್ಕಳ ಆಶ್ರಯದಲ್ಲೂ ಜೀವಿಸುವವನಾಗಿದ್ದಾನೆ.
ಸಮೂಹದ ಮಧ್ಯೆ ಜೀವಿಸುವಾಗ ಕುಂದು ಕೊರತೆಗಳುಂಟಾದಲ್ಲಿ ಸಹ ಜೀವನ ನಡೆಸುವವರಿಗೆ  ಕೆಲವೊಮ್ಮೆ ಹಿಡಿಸದು.ಆದುದರಿಂದಲೇ ಪರಸ್ಪರ ಅನಿಷ್ಟ ಸಂಗತಿಗಳು ನಡೆಯಲೂ ಬಹುದು.
ಪರಸ್ಪರ ವಿಶ್ವಾಸಕ್ಕೆ ತೆಗೆದು ಸ್ನೇಹ ,ಪ್ರೀತಿಯಿಂದ ಬಾಳಬೇಕು.
ಪತಿ-ಪತ್ನಿಯರ ನಡುವೆ ಸಿಲ್ಲಿ ವಿಷಯಗಳಲ್ಲಿ ಕಲಹವುಂಟಾಗುವುದು ಸಹಜ.
ಪರಸ್ಪರ ಕ್ಷಮಿಸಿ ಜೀವನ ನಡೆಸಿದರೆ ಯಾವುದೇ ತೊಂದರೆ ಬರಲಾರದು.

ಚಿಕ್ಕ ಪುಟ್ಟ ವಿಷಯಗಳಿಗೆ ಮನೆಯಲ್ಲಿ ನಾಯಿ- ಬೆಕ್ಕಿನಂತೆ ಕಚ್ಚಾಡುವ ದಂಪತಿಗಳಿದ್ದಾರೆ.
ಮಕ್ಕಳೆದುರಲ್ಲಿ ಕಚ್ಚಾಡುವ ಗುಣವಿರುವ ದಂಪತಿಗಳಾಗಿದ್ದರೆ ಖಂಡಿತವಾಗಿಯೂ ಆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುವರು.
ಮಕ್ಕಳು ಶಾಲೆ ಮತ್ತು ಮದ್ರಸದಲ್ಲಿ ಕಲಿಕೆಯಲ್ಲಿ ಹಿಂದಿದ್ದಾರೆಂದಾರೆಂದರೆ ಇದೂ ಕೂಡಾ ಒಂದು ಕಾರಣವಾಗಿರಬಹುದು.
ಯಾವುದೇ ಕಾರಣಕ್ಕೆ ಮಕ್ಕಳ ಎದುರಲ್ಲಿ ಕಚ್ಚಾಡಬಾರದು.
ದಂಪತಿಗಳ ನಡುವೆ ಜಗಳವಿದ್ದರೆ ಅದನ್ನು ಸರಿಪಡಿಸುವ ದಾರಿಗಳನ್ನು ಇಸ್ಲಾಮ್ ಕಲಿಸಿಕೊಟ್ಟಿದೆ.ಆ ಮೂಲಕ ಅದಕ್ಕೆ ಪರಿಹಾರ ಮಾಡಬಹುದಾಗಿದೆ.

ದಂಪತಿಗಳ ನಡುವೆ ಇಬ್ಬರೂ ಹಟಮಾರಿಗಳಾಗಿದ್ದರೆ ಸರಿಪಡಿಸಲು ಕಷ್ಟಸಾಧ್ಯ.ಪತಿಯಯೊಂದಿಗೆ ಗೌರವವಿರುವ ಪತ್ನಿ ಪತಿಯೊಂದಿಗೆ ಜಗಳವಾಡಲಾರಳು.
ಪತ್ನಿಯೊಂದಿಗೆ ಸ್ನೇಹವಿರುವವನು ಪತ್ನಿಯೊಂದಿಗೆ ಜಗಳವಾಡಲಾರ.

ದಂಪತಿಗಳ ನಡುವೆ ಜಗಳವಿರುವ ಮಕ್ಕಳಿಗೆ ನೆಮ್ಮದಿ ಇರಲಾರದು.ಆ ಮನೆಯಲ್ಲಿ ಸಂತೋಷವಿರಲಾರದು.
ತರ್ಕ ಮತ್ತು ವಿವಾದಗಳು ಎಲ್ಲಿ ಸೃಷ್ಠಿಯಾಗುವವೋ ಅಲ್ಲಿ ನೆಮ್ಮದಿ ಇರಲಾರದು.
ಪವಿತ್ರ ರಂಝಾನಿನಲ್ಲಿ ಲೈಲತುಲ್ ಖದ್ರ್ ಎಂಬ ಪುಣ್ಯ ರಾತ್ರಿಯಿದೆ.ಅದು ಯಾವ ರಾತ್ರಿಯೆಂದು ಪ್ರವಾದೀ ವರ್ಯರಿಗೆ ತಿಳಿಸಿಕೊಡಲಾಗಿತ್ತು.
ಅದು ಹೇಳಲು ಸ್ವಹಾಬತ್'ನ ಬಳಿ ಪ್ರವಾದೀ ವರ್ಯರು ಬಂದಾಗ ಇಬ್ಬರು ಹಣದ ವಿಚಾರದಲ್ಲಿ ಜಗಳವಾಡುತ್ತಿದ್ದರು.
ಆ ತಕ್ಷಣವೇ ಪ್ರವಾದೀ ವರ್ಯರಿಗೆ ಆ ಪವಿತ್ರ ರಾತ್ರಿ ಯಾವಾಗ ಎಂಬುವುದು ಮರೆತು ಹೋಯಿತು.
ಇದು ಇಮಾಮ್ ಬುಖಾರಿ ವರದಿ ಮಾಡಿದ ಹದೀಸಿನಲ್ಲಿ ಇದೆ.
ಸಾಧ್ಯವಾದಷ್ಟು ತರ್ಕಗಳನ್ನು ತ್ಯಜಿಸಬೇಕು.
ಮಕ್ಕಳ ಎದುರಲ್ಲಿ ಪತ್ನಿಯನ್ನು ಅಶ್ಲೀಲ ಪದಗಳಿಂದ ಸಂಬೋಧನೆ ನಡೆಸಿದರೆ ಮಕ್ಕಳೂ ಕೂಡಾ ಆ ಮಾರ್ಗವನ್ನು ಸ್ವೀಕರಿಸುವರು.
ಮನೆಯಲ್ಲಿರುವ ಎಲ್ಲರ ಮಾತುಗಳು ಮುತ್ತಿನಂತಾಗಬೇಕು.ಕೊಳಕು ಭಾಷೆ,ಅಡ್ಡ ಹೆಸರುಗಳಿಂದ ಕೂಡಿದ ಮಾತುಗಾರಿಕೆಗಳು ಬಹಳ ಅಪಾಯ.
ಇಮಾಮ್ ಗಝ್ಝಾಲಿ (ರ)ರವರ ಇಹ್ಯಾ ಉಲೂಮಿದ್ದೀನ್ ನ 3 ನೇ ಭಾಗ 69, 70 ನೇ ಪುಟಗಳಲ್ಲಿ ಇದನ್ನು ವಿವರಿಸಿದ್ದಾರೆ.

كل مولود يولد على الفطرة فأبواه يهودانه أو ينصرانه
ಯಾವುದೇ ಮಗುವು ಹುಟ್ಟುವಾಗ ಇಸ್ಲಾಮ್ ನ ಸಂದೇಶ ಸ್ವೀಕರಿಸುವ ರೂಪದಲ್ಲಿ ಜನಿಸುತ್ತದೆ.ಅವನ ತಂದೆ ತಾಯಿ ಅವನನ್ನು ಯಹೂದಿ,ನಸ್ರಾನೀ ಮಾಡುತ್ತರೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಹದೀಸ್ ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.




*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 17

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --17

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  16:*_

*ಮನೆಯಲ್ಲಿ ನಡೆಯುವ ಸಭೆ ಸಮಾರಂಭಗಳು ಇಸ್ಲಾಮಿನ ಚೌಕಟ್ಟಿನಲ್ಲಿರಲಿ*

ಮನೆಯ ಸದಸ್ಯರೆಲ್ಲರೂ ಸೇರಿ ಸಮಾಲೋಚನೆ ನಡೆಸಿ ಸಮಾರಂಭ ನಡೆಸಬೇಕೆಂದು 16 ನೇ ಭಾಗದಲ್ಲಿ ವಿವರಿಸಿದ್ದೇನೆ.
ಸಾವಿರಾರೂ ರುಪಾಯಿ ಖರ್ಚು ಮಾಡಿ ಮಾಡುವ ಸಮಾರಂಭಗಳು ಅನಿಸ್ಲಾಮಿಕವಾದರೆ ಅಲ್ಲಾಹನ ಬಳಿ ಆ ಖರ್ಚು ಮಾಡಿದ್ದಕ್ಕೆ ಲೆಕ್ಕ ಹೇಳಬೇಕು.ಆದುದರಿಂದಲೇ ನಮ್ಮ ಸಭೆ-ಸಮಾರಂಭಗಳು ಇಸ್ಲಾಮಿಯ್ಯತ್ ನ ಚೌಕಟ್ಟು ಮೀರಿರಬಾರದು.
ಸಮಾರಂಭದ ಜವಾಬ್ಧಾರಿ ಯಾರಿಗೆ ವಹಿಸಿಕೊಟ್ಟರೂ ಮೇಲಾಧಿಕಾರಿಯಂತೆ ತಂದೆ ಅಥವಾ ಮನೆಯ ಯಜಮಾನ ಇರಲೇ ಬೇಕು.
ಕುಂದು ಕೊರತೆಗಳು ಬರುವಾಗ ಮಕ್ಕಳನ್ನು ತಿದ್ದಲು ಆ ತಂದೆಗೆ ಸಾಧ್ಯವಾಗಬೇಕು.
ಬೇಡವಾದ ಸಂಗತಿಗಳು ನಡೆದರೆ ಮಕ್ಕಳ ಕಡೆ ಬೊಟ್ಟು ಮಾಡಿ,ಏನು ಮಾಡುವುದು ಉಸ್ತಾದ್!ಮಕ್ಕಳ ಕಾರುಬಾರು.ನಾವು ಹೇಳಿದರೆ ಮಕ್ಕಳು ಕೇಳುತ್ತಾರೆಯೇ? ಎಂಬ ಮಾತು ಯಜಮಾನನ ಬಾಯಿಯಿಂದ ಬರಲೇ ಬಾರದು.
ಅದಕ್ಕಾಗಿ ಮೊದಲಿನಿಂದಲೇ ಸಮಾರಂಭಗಳಲ್ಲಿ ಅನಿಸ್ಲಾಮಿಯ್ಯತ್ ಬರದಂತೆ ಜಾಗ್ರತೆ ವಹಿಸಬೇಕು.
ಮದುವೆಯಂತಹ ಅದ್ದೂರಿ ಸಮಾರಂಭಗಳ ವೇಳೆ ಹಲವಾರು ಅನಿಸ್ಲಾಮಿಕ ಕಾರ್ಯಗಳು ನಡೆಯಬಹುದು.
ಹೆಚ್ಚಾಗಿ ಸ್ತ್ರೀ ಪುರುಷರು ಒಟ್ಟಾಗಿ ಬೆರೆಯುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು.
ನಮ್ಮ ಮನೆಗೆ ಆಗಮಿಸುವ ಅನ್ಯ ಸ್ತ್ರೀ ಪುರುಷರು  ಪರಸ್ಪರ ಕಾಣುವ ದಾರಿಗಳನ್ನು ಮುಚ್ಚಬೇಕು.

ನಮ್ಮ ಮನೆಯ ಕಂಪೌಂಡ್ ಗೆ 2 ಗೇಟ್ ಅತೀ ಮುಖ್ಯ.
1 ನೇ ಗೇಟ್ ದೊಡ್ಡ ಗೇಟಾದರೆ ಅದನ್ನು ಅಗತ್ಯದ ಸಂದರ್ಭದಲ್ಲಿ ಮಾತ್ರ ತೆರೆದರಾಯಿತು.
ಅದು ಸಮಾರಂಭಗಳ ವೇಳೆ ಪುರುಷರಿಗಾಗಿ ತೆರೆದಿಡಬಹುದು.
ಇನ್ನೊಂದು ಪುಟ್ಟ ಗೇಟ್ ಮಹಿಳೆಯರ ಬಾಗದಲ್ಲಿ ಇಡಬೇಕು.ಸಮಾರಂಭಗಳ ವೇಳೆ ಸ್ತ್ರೀಯರು ಪುರುಷರೊಂದಿಗೆ ಬೆರೆಯದಿರಲು ಇದು ಬಹಳ ಪ್ರಯೋಜನಕಾರಿ.

ನಮ್ಮ ಮನೆಯಲ್ಲಿ ಸಂಭ್ರಮ ನಡೆಯುವಾಗ ಪುರುಷರಿಗೆ ಮಹಿಳೆಯರು ಸೇರಿದ ಸ್ಥಳಗಳ ಪ್ರವೇಶವನ್ನು ನಿಷೇಧಿಸಬೇಕು.
ಪುರುಷರ ಭಾಗದ ನಿಯಂತ್ರಣ ಪುರುಷರು ಮತ್ತು ಮಹಿಳೆಯರ ಭಾಗದ ನಿಯಂತ್ರಣವನ್ನು ಮಹಿಳೆಯರಿಂದಲೇ ಮಾಡಬೇಕು.
ಮದುವೆಯೊಂದಕ್ಕೆ ಹೋದಾಗ ಪುರುಷರ ಕಡೆ ಸಪ್ಲೈ ಗೆ ಜನರೇ ಇರಲಿಲ್ಲ.
ಅವರೆಲ್ಲರೂ ಮಹಿಳೆಯರ ಕಡೆ ಸಪ್ಲೈ ಮಾಡುತ್ತಿದ್ದಾರೆ ಅಂತ ಒಬ್ಬರು ಹೇಳಿದ್ದು ನೆನಪಾಗುತ್ತಿದೆ.

ಔತಣ ಕೂಟದಲ್ಲಿ ಅನಿಸ್ಲಾಮಿಯ್ಯತ್ ಬಂದು ಸೇರಿದರೆ ವ್ಯಯಿಸಿದ ಹಣ ಮತ್ತು ಸಮಯ ಪೋಲು.ಅಲ್ಲಾಹನ ಬಳಿ ಅದಕ್ಕೆ ಉತ್ತರಿಸಬೇಕು.
ಮಾತ್ರವಲ್ಲ ಆ ಔತಣ ಕೂಟಕ್ಕೆ ಎಷ್ಟೇ ದೊಡ್ಡ ಸೆಯ್ಯಿದ್/ಆಲಿಂಗಳನ್ನು ಕರೆಸಿ ದುಆ ಮಾಡಿಸಿದರೂ ಪ್ರಯೋಜನವಾಗದು.

ಪ್ರಖ್ಯಾತ ಇಮಾಮ್ ಇಬ್ನ್ ಹಜರ್ (ರ) ತನ್ನ ತುಹ್ಫದಲ್ಲಿ ಹೇಳುವುದು ನೋಡಿ,
والظاهر أن سرها رجاء صلاح الزوجة ببركتها(تحفة)
ಲಭಿಸಿದ ಪತ್ನಿಯು ವಲೀಮದ ಬರ್ಕತ್ ನಿಂದ ಉತ್ತಮವಾಗಳು ವಲೀಮ ಇಸ್ಲಾಮ್ ಸುನ್ನತ್ ಮಾಡಿದೆ.
(ತುಹ್ಫಾ)

ಅನಿಸ್ಲಾಮಿಕ ಚಟುವಟಿಕೆಗಳು ಮದುವೆಯಲ್ಲಿ ಕೂಡಿದರೆ ಹೇಗೆ ತಾನೇ ಬರ್ಕತ್ ಲಭಿಸುವುದು?

*ನಮ್ಮ ಔತಣ ಕೂಟಗಳಲ್ಲಿ ಇವಿಷ್ಟು ಮಾಡಿ*

1.ಸಾತ್ವಿಕರನ್ನು ಆಹ್ವಾನಿಸಿ
2.ಕುಟುಂಬಸ್ಥರನ್ನು ಆಹ್ವಾನಿಸಿ
3.ಬಡವರನ್ನು ಅಹ್ವಾನಿಸಿ
4.ಕೌಟುಂಬಿಕ ಕಲಹ ಕಾರಣ ಕೋಪಿಸಿಕೊಂಡವರೊಂದಿಗೆ ರಾಜಿಯಾಗಿ ಆಹ್ವಾನಿಸಿ
5.ಬಂದವರಿಗೆಲ್ಲಾ ಊಟೋಪಚಾರ ಸಿಗುವಂತೆ ಮಾಡಿ
6.ಯಾವುದೇ ಆಹಾರಗಳು ಪೋಲಾಗದಂತೆ ನೋಡಿ
(ಒಂದು ಹೊತ್ತಿನ ಗಂಜಿ ಊಟಕ್ಕೆ ಅಲೆದಾಡುವ ಬಡವರಿದ್ದಾರೆ ಎಂಬುವುದು ನೆನಪಿರಲಿ)
7.ಬಂದ ನೆಂಟರನ್ನು ಸರಿಯಾಗಿ ಸತ್ಕರಿಸಿ
8.ಬಂದವರು ಹೊರಟು ಹೋಗುವಾಗ ಸಂತೋಷ ಪೂರ್ವಕ ಅವರನ್ನು ಕಳುಹಿಸಿ ಕೊಡಿ
9.ಬಂದ ಅತಿಥಿಗಳ ಜೊತೆ ಮನೆಯ ಸದಸ್ಯನೊಬ್ಬ ಕುಳಿತು ಆಹಾರ ಸೇವಿಸಬೇಕು.
10.ಆಹಾರದ ಮುಂಚೆ ಮನೆಯ ಸದಸ್ಯ ಮೊದಲು ಕೈ ತೊಳೆದು ಕುಳಿತುಕೊಳ್ಳಬೇಕು.
ಆಹಾರದ ನಂತರ ಎಲ್ಲರೂ ಎದ್ದ ನಂತರ ಮನೆಯ ಸದಸ್ಯ ಕೈ ತೊಳೆಯಬೇಕೆಂದು ಇಮಾಮ್ ಗಝ್ಝಾಲಿ (ರ)ವಿವರಿಸಿದ್ದಾರೆ.

*ಇದು ಮಾಡದಿರಿ*

1.ಅನ್ಯ ಸ್ತ್ರೀ ಪುರುಷರು ಬೆರೆಯುವಂತೆ ಯಾವ ಕಾರಣಕ್ಕೂ ಮಾಡದಿರಿ
2.ಸಮಾರಂಭದಲ್ಲಿ ಅನ್ಯ ಸ್ತ್ರೀಯರ ಪೊಟೋ/ವೀಡಿಯೋ ತೆಗೆಯದಿರಿ
(ನಮ್ಮ ಪತ್ನಿಯರ ವೀಡಿಯೋ ಇನ್ನೊಬ್ಬ ಮಾಡಿದರೆ ನಾವು ಸಹಿಸದಂತೆ ಇನ್ನೊಬ್ಬನ ಪತ್ನಿಯ ವೀಡಿಯೋ ನಾವು ಮಾಡಿದ್ದಲ್ಲಿ ಅವನು ಸಹಿಸಲಾರ ಎಂದು ನೆನಪಿಟ್ಟುಕೊಳ್ಳಿ)
3.ಬಂದ ಅತಿಥಿಗಳಿಗೆ ತೊಂದರೆಯುಂಟಾಗುವ ಯಾವುದೇ ಕಾರ್ಯವನ್ನು ಮಾಡದಿರಿ.
4.ಬಂದ ಆತಿಥಿಗಳನ್ನು ಕೂರಿಸಿ ಮಾಡಿಟ್ಟ ಆಹಾರ ಅವರ ಬಳಿ ಇಟ್ಟು ಬಿಡಿ.
ನಾವಾಗಿ ಅವರ ಬಟ್ಟಲಿಗೆ ಹಾಕದಿರೋಣ.ಕಾರಣ ನಮಗೆ ಇಷ್ಟವಾದ ವಸ್ತು ಆತನಿಗೆ ಹಿಡಿಸಬೇಕೆಂದಿಲ್ಲ.ಆತನಿಗೆ ಇಷ್ಟವಾದುದನ್ನು ಆತ ಹಾಕಿ ತಿನ್ನುವನು.
ಕೆಲವರು ಕೈ ತೊಳೆಯದೆ ಎಲ್ಲೆಂದರಲ್ಲಿ ಹಾಕಿದ್ದ ಕೈಯಿಂದ ಆಹಾರಗಳನ್ನು ಬಟ್ಟಲಿಗೆ ಹಾಕುತ್ತಾರೆ.ತೀರ ಅಸಹ್ಯವಾದ ಸಂಗತಿಯಾಗಿದೆ ಅದು.ಹಸಿದವನ ಬಳಿ ತಿನ್ನಿ ತಿನ್ನಿ ಎಂದು ಹೇಳಬೇಕಾದ ಅಗತ್ಯವೇನಿದೆ?
ಹಸಿದವನು ಬೇಕಾದಷ್ಟು ತಿನ್ನುವನು.
5.ಬೇಕಾದ ಆಹಾರ ಇಟ್ಟು ಬಿಡಬೇಕು.ಮನೆಯವರು ಅಲ್ಲಿ ನಿಲ್ಲಬಾರದು.ತುಂಬಾ ಹಸಿದವನ ಬಳಿ ನಿಂತು ಬಿಟ್ಟರೆ ಸಂಕೋಚದಿಂದ ಆತ ತಿನ್ನಲಾರ.
ಕೆಲವೊಂದು ಮನೆಗೆ ಹೋದರೆ ಡೈನಿಂಗ್ ಟೇಬಲ್ ನ ಬಳಿ ಮನೆಯವರೆಲ್ಲರೂ ನಿಂತು ನೋಡು ದೃಶ್ಯ ತುಂಬಾ ನಾಚಿಗೆಕೇಡು.
ಕೋರ್ಟ್ ಗೆ ಕರೆದು ಕೊಂಡು ಹೋಗುವ ಅಪರಾಧಿಯ ಸುತ್ತ ಪೋಲೀಸರು ನಿಲ್ಲುವಂತೆ ಮನೆಯವರು ನಿಂತರೆ ಬಂದ ಅತಿಥಿಗಳು ಹೇಗೆ ತಾನೇ ಆಹಾರ ತಿನ್ನುವರು?

6.ನಿಂತು ತಿನ್ನುವ ಸಂಪ್ರದಾಯಕ್ಕೆ ಕಡಿವಾಣ ಹಾಕಬೇಕು.
7.ಮದುವೆ ಮೆಹಂದಿಯ ಮನೆಯಲ್ಲಿ ಮದುಮಗಳನ್ನು ಸ್ಟೇಜ್ ಗೆ ಹತ್ತಿಸಿ ಪ್ರದರ್ಶನಕ್ಕಿಡುವುದನ್ನು ಕೊನೆಗೊಳಿಸಬೇಕು.
8.ಮದುಮಗಳಿಗೆ ಹಾರ ಹಾಕಲು ಮದುಮಗ ಹೋಗುವಾಗ ಆತನ ಗೆಳೆಯರು ಜತೆಯಾಗಿ ಹೋಗುವ ಸಂಪ್ರದಾಯ ನಿರ್ಮೂಲನೆ ಮಾಡಬೇಕು.
(ನೇರ ನೇರವಾಗಿ ಹೇಳಿದರೆ ಮದುಮಗನ ಗೆಳೆಯರು ಗಲಾಟೆ ಉಂಟು ಮಾಡಲು ಸಾಧ್ಯತೆಯಿರುವುದರಿಂದ ಮನೆಯ ಹಿರಿಯರ ಮೂಲಕ ಹಿಕ್ಮತ್ ನಿಂದ ಅದನ್ನು ಇಲ್ಲದಾಗಿಸಬಹುದು)
9.ಸಾಲ ಮಾಡಿ ಮದುವೆಯ ಮುಂಚಿನ ಮೆಹಂದಿ ಹಾಗೂ ಮದುವೆಯ ನಂತರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು.

ನಮ್ಮ ಸಮಾರಂಭಗಳ ಪೈಕಿ ನಮ್ಮ ಕಂಟ್ರೋಲ್ ಗೆ ಸಿಗದ ಸಮಾರಂಭ ಮದುವೆಯಾದುದರಿಂದ ಮದುವೆಯ ಬಗ್ಗೆ ಮಾತ್ರ ಸ್ವಲ್ಪ ಬರೆದೆ ಅಷ್ಟೇ.
ಎಲ್ಲಾ ಸಮಾರಂಭಗಳಲ್ಲೂ ಅಲ್ಲಾಹನ ಮತ್ತು ರಸೂಲರ ಪ್ರೀತಿ ಮಾತ್ರ ಉದ್ದೇಶಿಸಿ ಅಲ್ಲಾಹು ಇಷ್ಟಪಡುವುದನ್ನು ಮಾತ್ರ ಮಾಡಬೇಕು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಊರಿಡೀ ಆಹ್ವಾನಿಸಿ ಎಲ್ಲರೂ ತಿಂದು ತೇಗಿ ಆಹಾರದ ಕೊರತೆಯನ್ನು ಹೇಳಿ ಮರಳಿ ಹೋದರೆ ನಿನಗೇನು ಅದರಿಂದ ಲಾಭ ಲಭಿಸಿತು?
ನಿನಗಾಗಿ,ನಿನ್ನ ಮನೆಯವರಿಗಾಗಿ ದುಆ ಮಾಡುವ ಒಬ್ಬನೂ ಆ ಪೈಕಿ ಇಲ್ಲದಿದ್ದರೆ ನಿನ್ನ ಮನೆಯಲ್ಲಿ ಸಂತೋಷ ಮತ್ತು ನೆಮ್ಮದಿಯಿರುವುದೇ?

ಮೊಹಲ್ಲಾದ ಎಲ್ಲರನ್ನೂ ಆಹ್ವಾನಿಸುವ ಕಾರ್ಯಕ್ರಮವಾದರೆ ಯಾವುದೇ ಮನೆಯು ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು.
ನಮ್ಮ ಕಾರ್ಯಕ್ರಮಕ್ಕೆ ಬಂದು ಒಂದೊತ್ತಿನ ಊಟ ಸೇವಿಸಿದ ಮಾತ್ರಕ್ಕೆ ಅವರ ಉಳಿದ ದಿನದ ಹೊಟ್ಟೆ ತುಂಬುವುದಿಲ್ಲ.ಎಲ್ಲರನ್ನೂ ಆಹ್ವಾನಿಸಿ ಒಂದು ಮನೆ ಬಿಟ್ಟು ಬಿಟ್ಟರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ.
ಅದ್ಕಕಾಗಿ ಕಾರ್ಯಕ್ರಮಕ್ಕೆ ನಿಗದಿಯಾದ ದಿನದ ಎರಡು ದಿವಸಗಳ ಮುಂಚೆ ಮನೆಯಲ್ಲಿ ಒಂದು ಸಮಾಲೋಚನೆ ಅತ್ಯಗತ್ಯ.

*ಆಹಾರ ಪೋಲಾಗುವುದನ್ನು ಹೇಗೆ ತಪ್ಪಿಸುವುದು?*
ಕಾರ್ಯಕ್ರಮಕ್ಕೆ ಯಾರೆಲ್ಲ ಆಹ್ವಾನಿಸಿದ್ದಾರೋ ಅವರೆಲ್ಲಾ ಒಟ್ಟುಗೂಡಿ ಸಮಾಲೋಚನೆ ನಡೆಸಿ ಎಷ್ಟು ಮಂದಿಯನ್ನು ಆಹ್ವಾನಿಸಿದ್ದೇವೆ ಎಂಬ ಮಾಹಿತಿ ನೀಡಿದ್ದಲ್ಲಿ ಆಹ್ವಾನಿಸಬೇಕಾದ ಜನರ ಪೈಕಿ  ಬಿಟ್ಟು ಹೋದದ್ದನ್ನು ತಿಳಿಯಬಹುದು ಹಾಗೂ ಎಷ್ಟು ಜನರು ಸೇರಬಹುದು ಎಂಬ ಮಾಹಿತಿಯೂ ಲಭಿಸಬಹುದು.
ಅಷ್ಟು ಜನರ  ಲೆಕ್ಕ ಹಾಕಿ ಆಹಾರ ತಯಾರಿಸಬಹುದು.
ಸೆಯ್ಯಿದರೊಬ್ಬರ ಪುತ್ರನ ಮದುವೆಯ ಬಗ್ಗೆ ಒಬ್ಬರು ಈ ರೀತಿ ಹೇಳಿದರು.
"ಮದುವೆಗೆ ಆಗಮಿಸಿದವರಿಗೆ ಒಂದು ಬಟ್ಟಲು ಊಟ ಮಾತ್ರ.ಮುಗಿದ ನಂತರ ಬೇರೆ ಊಟ ಇಲ್ಲ.
ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ
ಯಾರ ಬಟ್ಟಲಲ್ಲೂ ಊಟ ಬಾಕಿ ಇಲ್ಲ.ಯಾರಿಗೂ ಕೂಡಾ ಇನ್ನೂ ಊಟ ಬೇಕು ಎಂದು ಅನಿಸಲಿಲ್ಲ.
ಒಂದೇ ಒಂದು ಅಕ್ಕಿಯ ಊಟ ಪೋಲಾಗಲಿಲ್ಲ.ಆ ಸೆಯ್ಯಿದರು ಸುತ್ತಲು ನಡೆಯುತ್ತಾ ಅದನ್ನೆಲ್ಲಾ ಗಮನಿಸುತ್ತಿದ್ದರಂತೆ.
ಬಹುಷ ಆ ಸೆಯ್ಯಿದ್ ರವರ ಬರ್ಕತ್ ನಿಂದಾಗಿರಬಹುದು ಎಲ್ಲರೂ ಆ ಒಂದು ಬಟ್ಟಲು ಊಟದಿಂದ ಹೊಟ್ಟೆ ತುಂಬಿಸಿ ಈ ರೀತಿ ನಮಗೂ ಮಾಡಿ ನೋಡಬೇಕೆಂದು ಹೇಳುತ್ತಾ ಸಂತೃಪ್ತಿಯಿಂದ ಮರಳಿದರಂತೆ.
ಊರಲ್ಲಿ ಈ ಸಂಪ್ರದಾಯವಿಲ್ಲದಿದ್ದರೂ ನಮಗೂ ಟ್ರೈ ಮಾಡಿ ನೋಡಬಹುದಲ್ಲವೇ?



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 16

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --16

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  15:*_
 *ಸಭೆ ಸಮಾರಂಭಗಳ ಬಗ್ಗೆ ಮನೆ ಮಂದಿಯೊಂದಿಗೆ  ಸಮಾಲೋಚನೆ ನಡೆಯಲಿ*

ನಮ್ಮ ಮನೆಗಳಲ್ಲಿ ಒಂದಲ್ಲೊಂದು ಕಾರ್ಯಕ್ರಮ ನಡೆಯುತ್ತಾ ಇರುತ್ತದೆ.
ಕುಟುಂಬಸ್ಥರನ್ನು ಮತ್ತು ನೆರೆಕರೆಯವರನ್ನು ಕರೆದು ಮಾಡುವ ಸಮಾರಂಭಗಳಿಗೆ ಮನೆಯಲ್ಲಿ ಮುಶಾವರ (ಸಮಾಲೋಚನೆ )ನಡೆಯಬೇಕು.
ನಮ್ಮ ಮನೆಗಳಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳು
1.ಮಗುವಿನ ಹೆಸರಿಡುವ ಕಾರ್ಯಕ್ರಮ
2.ಮುಂಜಿ ಕಾರ್ಯಕ್ರಮ
3.ವಿವಾಹ ನಿಶ್ಚಯ
4.ಮದುವೆ
5.ಮದುವೆಯ ನಂತರದ ಒಂದೆರಡು ಕಾರ್ಯಕ್ರಮ
6.ಗೃಹ ಪ್ರವೇಶ
7.ರಬೀವುಲ್ ಅವ್ವಲ್ ತಿಂಗಳಲ್ಲಿ ಮೌಲಿದ್
8.ರಬೀವುಲ್ ಆಕಿರ್ ನಲ್ಲಿ ರಾತೀಬ್
9.ರಮಳಾನಿನಲ್ಲಿ ಇಫ್ತಾರ್
10.ಮರಣ ಹೊಂದಿದರೆ 3,7,40 ರ ಕಾರ್ಯಕ್ರಮಗಳು
ಹೀಗೆ ಹಲವಾರು ಸಮಾರಂಭಗಳು  ನಡೆಯುತ್ತದೆ.
ಮನೆಯ ಯಜಮಾನ ಈ ಸಮಾರಂಭಗಳನ್ನು ಆಲೋಚಿಸುವಾಗ ಮನೆಯಲ್ಲಿರುವ ಪತ್ನಿ-ಮಕ್ಕಳೊಂದಿಗೆ ಸಮಾಲೋಚನೆ ನಡೆಸುವುದು ಅತೀ ಮಹತ್ವದ ಸಂಗತಿಯಾಗಿದೆ.
ಉದ್ದೇಶಿಸಿದ ಕಾರ್ಯಕ್ರಮಗಳು ನಾವು ಉದ್ದೇಶಿಸಿದಂತೆ ಯಶಸ್ವಿಯಾಗಬೇಕಾದರೆ ಸಮಾಲೋಚನೆ ಅತ್ಯಗತ್ಯ.
ಯಾರೊಂದಿಗೂ ಸಮಾಲೋಚನೆ ನಡೆಸದೆ ಸ್ವಂತ ತೀರ್ಮಾನ ಪ್ರಕಾರ ಯಾವ ಕಾರ್ಯಕಗಳನ್ನು ಮಾಡಿದರೂ ಒಂದಲ್ಲ ಒಂದು ರೀತಿಯಲ್ಲಿ ಅದರಲ್ಲಿ ಸೋಲು ಖಚಿತ.
ಸಮಾಲೋಚನೆ ನಡೆಸದೆ ಮನೆ ಕಟ್ಟಿ ಸೋತವರಿದ್ದಾರೆ.
ಸಮಾಲೊಚನೆಯಿಲ್ಲದೆ ಮದುವೆಯಾಗಿ ಸೋತವರು ಇದ್ದಾರೆ.ವಾಹನ ಖರೀದಿಸಿ  ಸೋತವರೂ ಇದ್ದಾರೆ.

ಸಮಾಲೋಚನೆಯಿಂದ ಸೋಲು ಅಥವಾ ಗೆಲುವು ಉಂಟಾಗಬಹುದು.
ಮೂರ್ಖರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ ಸೋಲು ಹಾಗೂ ಬುದ್ಧಿವಂತರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲಿ ಗೆಲುವು ಖಚಿತ.

ಅನುಭವವಿರುವ ಮನೆಯ ಯಜಮಾನನ ಮೇಲ್ನೋಟದಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾದರೂ ಯಜಮಾನನ ಮರಣದ ನಂತರ ಮನೆಯಲ್ಲಿ ಮಕ್ಕಳು ಮಾಡುವ ಸಮಾರಂಭದಲ್ಲಿ ಆಗಬಾರದ ಅನಾಹುತ ಆಗಿ ಹೋಗುತ್ತದೆ.ಕಾರಣ ಮಕ್ಕಳಿಗೆ ಅನುಭವ ಕಡಿಮೆ.ಅನುಭವವಿದ್ದ ತಂದೆ ಮಕ್ಕಳಿಗೆ ಅದನ್ನು ಕಲಿಸಿ ಕೊಟ್ಟಿಲ್ಲ.ನೂರು ಜನರನ್ನು ಸೇರಿಸಿ ಯಾವ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಸಮಾಲೋಚನೆ ಮಕ್ಕಳೊಂದಿಗೆ ಅವರು ನಡೆಸಿಲ್ಲ.

ಮನುಷ್ಯನ ಬುದ್ಧಿ ಅಪಾರ.
ಒಬ್ಬನಿಗೆ ತೋಚದ ಕಾರ್ಯ ಇನ್ನೊಬ್ಬನಿಗೆ ತೋಚುವುದುಂಟು.ಹಲವರು ಸೇರಿ ಸಮಾಲೋಚನೆ ನಡೆಸುವಾಗ ಹಲವಾರು ಉತ್ತಮ ಅಭಿಪ್ರಾಯಗಳು ಕೇಳಿ ಬರುತ್ತದೆ.ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಬಹುದಾಗಿದೆ.

قال الحسن: "ما تشاور قوم إلا هداهم الله لأفضل ما يحضرهم". (الأدب المفرد)
ಜನರ ಸಮಾಲೋಚನೆ ಅತ್ಯುತ್ತಮವಾದುದಕ್ಕೆ ತಲುಪಿಸುತ್ತದೆ ಎಂಬ ಹಸನ್ (ರ)ರವರ ಮಾತನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.

ನಮಾಝ್ ಗೆ ಪ್ರತಿಫಲವಿದ್ದಂತೆ ಸಮಾಲೋಚನೆಗೂ ಪ್ರತಿಫಲವಿದೆ ಎಂದು ಖುರ್'ಆನ್ ಕಲಿಸಿ ಕೊಟ್ಟಿದೆ.
وَالَّذِينَ اسْتَجَابُوا لِرَبِّهِمْ وَأَقَامُوا الصَّلَاةَ وَأَمْرُهُمْ شُورَى بَيْنَهُمْ وَمِمَّا رَزَقْنَاهُمْ يُنْفِقُونَ [الشورى : 38]

ಸತ್ಯವಿಶ್ವಾಸಿಗಳು ತಮ್ಮ ಕಾರ್ಯಗಳಲ್ಲಿ ಸಮಾಲೋಚನೆ ನಡೆಸುವರು ಎಂದು ಸೂರತುಶ್ಸೂರ ದ 38 ನೇ ಸೂಕ್ತದಲ್ಲಿದೆ.
وَشَاوِرْهُمْ فِي الأمْرِ فَإِذَا عَزَمْتَ فَتَوَكَّلْ عَلَى اللَّهِ.
ನಿಮ್ಮ ಕಾರ್ಯಗಳಲ್ಲಿ ಸಮಾಲೋಚನೆ ನಡೆಸಿರಿ.ನಂತರ ದೃಢ ತೀರ್ಮಾನಗೈದು ಅಲ್ಲಾಹನಿಗೆ ತವಕ್ಕುಲ್ ಮಾಡಿರಿ
(ಆಲು ಇಂಮ್ರಾನ್ 159)
 ಎಂದು ಖುರ್'ಆನ್ ಹೇಳಿದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರಮುಖ ಕಾರ್ಯಗಳಲ್ಲಿ ಸಮಾಲೋಚನೆ ನಡೆಸುತ್ತಿದ್ದರು.ಬದ್ರ್ ,ಉಹ್ದ್ ಯುದ್ಧಕ್ಕೆ ಹೊರಡುವ ವೇಳೆ ಸಮಾಲೋಚನೆ ನಡೆಸಿದ್ದು,ನಮಾಝ್ ಗೆ ಮಸೀದಿಗೆ ಆಹ್ವಾನಿಸಲು ಯಾವ ಮಾರ್ಗ ಸ್ವೀಕರಿಸಬೇಕೆಂದು ಸಮಾಲೋಚನೆ ನಡಿಸಿದ್ದು ಚರಿತ್ರೆಗಳಲ್ಲಿ ಬಹಳ ಪ್ರಸಿದ್ಧವಾಗಿದೆ.

ಕಾರ್ಯಕ್ರಮದ ಮುಂಚೆ ಸಮಾಲೋಚನೆ ನಡೆಸಿ ಒಂದೊಂದು ಕೆಲಸಗಳನ್ನು ಮನೆ ಮಂದಿಗೆ ವಹಿಸಿ ಕೊಟ್ಟರೆ ಎಲ್ಲವೂ ಒಬ್ಬನ  ಮೇಲೆ ಭಾರವಾಗುವುದು ತಪ್ಪುತ್ತದೆ.ಮಾತ್ರವಲ್ಲ ಅದರಿಂದ ಮನೆ ಮಂದಿಗೂ ಹೊಸ ಅನುಭವ ಲಭಿಸುತ್ತದೆ.

(ಮನೆಯಲ್ಲಿ ನಡೆಸುವ ಸಭೆ-ಸಮಾರಂಭ ಹೇಗೆ ಪ್ಲಾನ್ ಮಾಡಬಹುದು ಎಂಬುವುದನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಿ)



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 15

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --15

📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  14:*_
 *ಮನೆಯಲ್ಲಿ ನಮಾಝ್ ಮಾಡಿರಿ*

ಇದು ನಾನು ಬರೆಯಬೇಕಾದರೆ ಲಾಕ್'ಡೌನ್ ನಾಲ್ಕನೇ ಹಂತದಲ್ಲಿದೆ.
ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ ಎಂಬ ಸರಕಾರದ ಆಜ್ಞೆಯೊಂದಿಗೆ ಸಹಕರಿಸುತ್ತಾ 10 ನೇ ಶುಕ್ರವಾರವೂ ಜುಮಾ ನಮಾಝ್ ಇಲ್ಲದೆ ಮನೆಯಲ್ಲೇ ಎಲ್ಲಾ ಪ್ರಾರ್ಥನೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ.

ಇಲ್ಲಿ ನಾನು ಬರೆಯಲುದ್ದೇಶಿಸುವುದು ಅದಲ್ಲ.
ಪುರುಷರು ಫರ್ಳ್ ನಮಾಝ್ ಮಸೀದಿಯಲ್ಲಿ ನಿರ್ವಹಿಸಬೇಕು.ಸುನ್ನತ್ ನಮಾಝ್ ಗಳನ್ನು ಮನೆಯಲ್ಲೂ ನಿರ್ವಹಿಸಬೇಕು.ಮಹಿಳೆಯರ ಎಲ್ಲಾ ನಮಾಝ್ ಗಳು ಮನೆಯಲ್ಲೇ ಆಗಿರಬೇಕು.
ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ,
عَنْ زيدِ بنِ ثابتِ أَنَّ النَّبيَّ ﷺ قالَ: صلُّوا أَيُّها النَّاسُ فِي بُيُوتِكُمْ، فَإنَّ أفضلَ الصَّلاةِ صلاةُ المَرْءِ في بَيْتِهِ إِلاَّ المكْتُوبَةَ
(بخاري ,مسلم)
ಓ ಜನರೇ!ನೀವು ನಿಮ್ಮ ಮನೆಗಳಲ್ಲಿಯೇ ನಮಾಝ್ ನಿರ್ವಹಿಸಿ.ಫರ್ಳೇತರ ನಮಾಝ್ ಗಳು ಉತ್ತಮವಾದದ್ದು ಮನೆಯಲ್ಲೇ ಆಗಿರುತ್ತದೆ.
(ಬುಖಾರಿ,ಮುಸ್ಲಿಂ)

ಸುನ್ನತ್ ನಮಾಜುಗಳು ಹಲವಾರು ಇದೆ.ಮೇಲಿನ ಹದೀಸಿನ ಉದ್ದೇಶ ಫರ್ಳ್ ನಮಾಝ್'ಗಳ ಮುಂಚೆ ಮತ್ತು ನಂತರವಿರುವ ರವಾತಿಬ್ ನಮಾಝ್'ಗಳು ಮನೆಯಲ್ಲಿ ನಿರ್ವಹಿಸುವುದಾಗಿದೆ.ಸುನ್ನತ್ ಗಳ ನಮಾಜಿನ ಪೈಕಿ ತಹಿಯ್ಯತ್ ಎಂಬ ನಮಾಝ್ ಇದೆ.ಮಸೀದಿಯೊಳಗೆ ಪ್ರವೇಶಿಸಿದವನು ನಿರ್ವಹಿಸುವ ನಮಾಝಾಗಿದೆ ಅದು.ಅದು ಮಸೀದಿಯಲ್ಲೇ ನಿರ್ವಹಿಸಬೇಕು.
ಜಮಾಅತ್ ಆಗಿ ಸುನ್ನತ್ ಇರುವ ಸುನ್ನತ್ ನಮಾಝ್ ಗಳನ್ನು ಮಸೀದಿಯಲ್ಲಿ ನಿರ್ವಹಿಸುವುದು ಉತ್ತಮವಾಗಿದೆ.
ಜಮಾಅತ್ ಸುನ್ನತ್ ಇಲ್ಲದ ಸುನ್ನತ್ ನಮಾಜುಗಳನ್ನು ಮನೆಯಲ್ಲಿ ನಿರ್ವಹಿಸುವುದು ಉತ್ತಮವೆಂದು  ಇಮಾಮ್ ಇಬ್ನ್ ಹಜರ್ (ರ)ರವರ ಹೇಳಿಕೆಯನ್ನು ಹಲವಾರು ಇಮಾಮರು ಉಲ್ಲೆಖಿಸಿದ್ದಾರೆ.
-------------------------------------------------------
ಇನ್ನೊಂದು ಹದೀಸ್ ನೋಡಿ,
عَنْ أُمِّ سَلَمَةَ رَضِيَ اللهُ عَنْهَا: عَنْ رَسُولِ - صلى الله عليه وسلم - أَنَّهُ قَالَ: خَيرُ مَسَاجِدِ النِّسَاءِ قَعرُ بُيُوتِهِنَّ.(احمد)
ಉಮ್ಮು ಸಲಮ (ರ)ಹೇಳುತ್ತಾರೆ,ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಸ್ತ್ರೀಯರಿಗೆ ನಮಾಜಿಗೆ ಉತ್ತಮ ಅವರ ಮನೆಯೊಳಗಿರುವ ಕೋಣೆಯಲ್ಲಾಗಿದೆ.
(ವರದಿ ಇಮಾಮ್ ಅಹ್ಮದ್ 25331)

ಉಮ್ಮು ಸಲಮ ಬೀವಿ ಪ್ರವಾದೀ ವರ್ಯರ ಪತ್ನಿಯಾಗಿರುವರು.
 ಇತರ ಮಹಿಳೆಯರಿಗಿಂತ ಪ್ರವಾದೀ ಚರ್ಯೆ ತಿಳಿದಿರುವುದು ಪ್ರವಾದೀ ಪತ್ನಿಯರಿಗಾಗಿದೆ.
ಮಹಿಳೆಯರು ಮಸೀದಿಗೆ ತೆರಳುವುದಲ್ಲಿ ಯಾವುದಾದರೊಂದು ಪುಣ್ಯವಿರುತ್ತಿದ್ದಲ್ಲಿ ಪ್ರವಾದೀ ವರ್ಯರ ಪತ್ನಿಯರು ಮತ್ತು ಮಕ್ಕಳು ಮಸೀದಿಗೆ ತೆರಳುತ್ತಿದ್ದರು.ಅವರು ಯಾರೂ ಕೂಡಾ ಮಸೀದಿಗೆ ನಮಾಝಿಗೆ ತೆರಳಿಲ್ಲವೆಂದು ಇಮಾಮ್ ಶಾಫೀಈ (ರ)ಹೇಳಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ಸ್ತ್ರೀಯರ ಮಸೀದಿಯಲ್ಲಿನ ಜುಮಾ- ಜಮಾಅತ್ ನ ಬಗ್ಗೆ ಇನ್ನಷ್ಟು ತಿಳಿಯಲು ನಾನು ಬರೆದ
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಮತ್ತು
 *ಬೀವಿ ಆತಿಕ(ರ)* ಎಂಬ 2 ಲೇಖನವನ್ನು ಓದಿರಿ.
ಅದರ ಲಿಂಕ್ ಈ ಕೆಳಗೆ ಇದೆ.
👇
ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ
http://gafoorbayar786.blogspot.com/2018/10/1_21.html?m=1

ಬೀವಿ ಆತಿಕ(ರ)
👇
http://sunniislamik.blogspot.com/2017/09/blog-post_16.html?m=1
--------------------------------------------------------

ಒಟ್ಟಿನಲ್ಲಿ ನಮ್ಮ ಮನೆಗಳಲ್ಲಿ ಧಾರಾಳವಾಗಿ ಸುನ್ನತ್ ನಮಾಜ್'ಗಳು ನಡೆಯಬೇಕು.
ನಮಾಝಿನ ಬರ್ಕತ್'ನಿಂದ ನಮ್ಮ ಮನೆಗಳಲ್ಲಿ ನೆಮ್ಮದಿ ಮತ್ತು ಸಂತೋಷ ಲಭಿಸುತ್ತದೆ.



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

Tuesday, June 2, 2020

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 14

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --14


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  13:*_

*ಮನೆ ಕಟ್ಟಿದ ಜಾಗ ಮತ್ತು ಮನೆಗೆ ಉಪಯೋಗಿಸಿದ ಹಣ ಹಲಾಲ್ ಆಗಿರಲಿ*

ಭೂಮಿ ಅಲ್ಲಾಹನದ್ದಾಗಿದೆ.ಭೂಮಿ ವಿಶಾಲವಾಗಿದೆ.ಮನುಷ್ಯ ಈ ಲೋಕದಲ್ಲಿ ತಾತ್ಕಲಿಕವಾಗಿ ಎಲ್ಲವನ್ನೂ ತನ್ನದಾಗಿಸುತ್ತಾನೆ.ಶಾಶ್ವತವಾಗಿ ತನ್ನದಾಗಿಸುವುದು ಸ್ವರ್ಗದಲ್ಲಾಗಿದೆ.ಈ ನೆನಪು ಎಲ್ಲರಿಗೂ ಬೇಕಾಗಿದೆ.

ವಾಸಿಸಲು ಕಟ್ಟುವ ಮನೆಯ ಅಡಿಪಾಯದ ಭೂಮಿ ಹಲಾಲ್ ಆಗಿರಬೇಕು.
ಇನ್ನೊಬ್ಬನ ಸ್ಥಳವನ್ನು ಅಕ್ರಮವಾಗಿ ತನ್ನದಾಗಿಸುವವರಿದ್ದಾರೆ.
ಸಮೀಪದ ಭೂಮಿಯ ಮಾಲಕನಿಗೆ ತಿಳಿಯದ ರೂಪದಲ್ಲಿ ಬೇಲಿ/ಕಂಪೌಂಡ್' ಹಾಕಿ ಸ್ವಂತ ಭೂಮಿಗೆ ಸೇರಿಸುವ ವಂಚಕರಿದ್ದಾರೆ.
ಅಧಿಕಾರವಿರುವಾಗ ಅನ್ಯರ ಜಾಗವನ್ನು ನುಂಗುವ ನುಂಗಪ್ಪಗಳನ್ನು ನಾವು ನೋಡಿದ್ದೇವೆ.ಇನ್ನೊಬ್ಬನ ಜಾಗದ ರೆಕಾರ್ಡ್'ಸ್'ಗಳನ್ನು ದುರುಪಯೋಗಪಡಿಸಿ ಸ್ವಂತ ಭೂಮಿಯಾಗಿ ಪರಿವರ್ತಿಸುವ ಹಲವರಿದ್ದಾರೆ.
ಎಲ್ಲರೂ ಈ ಒಂದು ಹದೀಸ್ ತಿಳಿಯುವುದು ಒಳಿತು,
عَنْ سَعِيدِ بْنِ زَيْدٍ رَضِيَ اللَّهُ عَنْهُمَا: أَنَّ رَسُولَ اللَّهِ ﷺ قَالَ: مَنِ اقْتَطَعَ شِبْرًا مِنَ الْأَرْضِ ظُلْمًا طَوَّقَهُ اللَّهُ إِيَّاهُ يَوْمَ الْقِيَامَةِ مِنْ سَبْعِ أَرَضِينَ. مُتَّفَقٌ عَلَيْهِ
ಮತ್ತೊಬ್ಬನ ಭೂಮಿಯನ್ನು ಕಸಿದರೆ ಅಂತ್ಯ ದಿನದಲ್ಲಿ ಅವನ  ಕೊರಳಿಗೆ ಕಸಿದ  ಭೂಮಿಯ 7 ಪಟ್ಟು ಭೂಮಿಯನ್ನು ಹಾರವಾಗಿ ಹಾಕಲಾಗುವುದು.
(ವರದಿ :ಬುಖಾರಿ,ಮುಸ್ಲಿಂ)
------------------------------------------------------
ಇನ್ನೊಂದು ಹದೀಸ್ ನೋಡಿ,
عن عروة بن الزبير رحمه الله أن أروَى بنتَ أويس ادَّعَتْ على سعيد بن زيد أنه أخذَ شيئًا من أرضِها، فخاصَمَتْه إلى مَرْوان بن الحَكَم، فقال سعيد: أنا كنتُ آخذُ من أرضِها شيئًا بعد الذي سمِعتُ من رسولِ الله صلى الله عليه وسلم؟ قال: وما سمِعْتَ من رسولِ الله صلى الله عليه وسلم؟ قال: سمِعتُ رسولَ الله صلى الله عليه وسلم يقول: (من أخذَ شِبرًا من الأرضِ ظُلْمًا، طُوِّقَه إلى سبعِ أرَضِين)، فقال له مروان: لا أسألُك بيَّنَةً بعد هذا، فقال: "اللهمَّ إن كانت كاذبةً فعَمِّ بصرَها، واقتُلْهَا في أرضِها"، قال: "فما ماتتْ حتى ذهبَ بَصَرُها، ثم بيْنا هي تمشِي في أرضِها، إذْ وقعَتْ في حفرةٍ فماتَتْ (بخاري)

 ಉರ್'ವತು ಬಿನ್ ಝುಬೈರ್ ಹೇಳುತ್ತಾರೆ,
ಸ್ವಹಾಬಿಯಾದ ಸಈದ್ ಬಿನ್ ಝೈದ್(ರ)ರವರ ವಿರುದ್ಧ ಅರ್'ವಾ ಬಿನ್ತ್ ಉವೈಸ್ ಎಂಬ ಮಹಿಳೆ  ತನ್ನ ಜಾಗವನ್ನು ಕಬಳಿಸಿದ್ದಾಗಿ ಮರ್'ವಾನ್  ಬಿನ್ ಹಕಮ್ (ರ)ರೊಂದಿಗೆ ಹೇಳಿದರು.ಮರ್ವಾನ್ (ರ )ರವರು ಸಈದ್ (ರ)ರನ್ನು ಕರೆಸಿ ನೀವು ಅರ್ವಾ ಎಂಬ ಮಹಿಳೆಯ ಸ್ಥಳವನ್ನು ಕಬಳಿಸಿದ್ದೀರಾ ಎಂದು ತನಿಖೆ ಮಾಡಿದರು.ಆಗ ಸಈದ್ (ರ)ರವರು ಹೇಳಿದರು.ಭೂ ಕಬಳಿಕೆಯ ವಿರುದ್ಧ  ಪ್ರವಾದೀ ಪೈಗಂಬರರು ಹೇಳಿದ್ದನ್ನು ಕೇಳಿದ ಬಳಿಕ ನಾನು ಭೂಮಿ ಕಬಳಿಸುವೆನಾ?
ಆಗ ಮರ್ವಾನ್ (ರ) ಕೇಳಿದರು.ನೀವು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ಏನೆಂದು ಕೇಳಿದ್ದೀರಿ?
ಆಗ ಸಈದ್ (ರ)ರವರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ
"ಮತ್ತೊಬ್ಬನ ಭೂಮಿಯನ್ನು ಕಸಿದರೆ ಅಂತ್ಯ ದಿನದಲ್ಲಿ ಅವನ  ಕೊರಳಿಗೆ ಕಸಿದ  ಭೂಮಿಯ 7 ಪಟ್ಟು ಭೂಮಿಯನ್ನು ಹಾರವಾಗಿ ಹಾಕಲಾಗುವುದು"
ಎಂಬ ಹದೀಸನ್ನು ಓದಿ ಹೇಳಿದರು.
ಇದು ಕೇಳಿದ ಮರ್ವಾನ್(ರ)ಹೇಳಿದರು.ಇದರ ಬಳಿಕ ನಾನು ಬೇರೆ ಯಾವುದೇ ಆಧಾರಗಳನ್ನು ನಿಮ್ಮಲ್ಲಿ ಕೇಳಲಾರೆ.(ಭೂ ಕಬಳಿಕೆಯ ನಿಷಿದ್ಧವೆಂದು ನಿಮಗೆ ಅತಿಯಾದ ತಿಳುವಳಿಕೆ ಇದೆ.ನೀವು ಕಬಳಿಸುವರೆಂದು ನಾನು ನಂಬುತ್ತಿಲ್ಲ)
ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದನ್ನು ಸಹಿಸದ ಸಈದ್ (ರ) ಈ ರೀತಿ ಪ್ರಾರ್ಥಿಸಿದರು.ಅಲ್ಲಾಹನೇ  ಈ ಮಹಿಳೆ ಹೇಳುವುದು ಸುಳ್ಳಾಗಿದ್ದಲ್ಲಿ ಅವಳನ್ನು ನೀನು ಕುರುಡಾಗಿಸು.ಅವಳ ಭೂಮಿಯಲ್ಲೇ ಅವಳಿಗೆ ಮರಣ ನೀಡು.
ಜೀವನದ ಕೊನೆಯ ಗಳಿಗೆಯಲ್ಲಿ ಅರ್ವಾ ಬಿನ್ತ್ ಉವೈಸ್ ಎಂಬ ಆ ಮಹಿಳೆಗೆ ಕಣ್ಣಿನ ದೃಷ್ಠಿ ನಷ್ಟ ಹೊಂದಿ  ತನ್ನದೇ ಜಾಗದಲ್ಲಿದ್ದ ಒಂದು ಹೊಂಡಕ್ಕೆ ಬಿದ್ದು ಮರಣ ಹೊಂದಿದರು.
(ಬುಖಾರಿ 3198 )

ಜಾಗದ ವಿಷಯದಲ್ಲಿ ತಕರಾರು ನಡೆಸಕೂಡದೆಂದು ಈ ಹದೀಸ್ ಬಹಳ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.
ಕೇಸ್,ಕೋರ್ಟ್,ಕೊಲೆ ಎಲ್ಲವೂ ಈ ಜಾಗದ ವಿಷಯದಲ್ಲಿ ನಡೆಯುತ್ತಿರುತ್ತದೆ.
ಸಂಬಂಧಗಳನ್ನು ಕೂಡಾ ಇದು ದೂರ ಮಾಡುತ್ತದೆ.
ಅಲ್ಲಾಹನ ಮತ್ತು ಅಂತ್ಯ ದಿನದ ಭಯವಿರುವವನು ಜಾಗದ ವಿಷಯದಲ್ಲಿ ತಕರಾರು ಮಾಡಬಾರದೆಂದು ಖುರ್'ಆನ್ ಮತ್ತು ಹದೀಸಿನಿಂದ ಬಹಳ ಸ್ಪಷ್ಟ.
ಕಟ್ಟಿದ ಮನೆಯಲ್ಲಿ ನೆಮ್ಮದಿ ಬೇಕೆಂದಾದರೆ ಆ ಮನೆಯ ಜಾಗದಲ್ಲಿ ತಕರಾರಿರಬಾರದು.

ಮನೆ ಕಟ್ಟಿದರೆ ಸಾಲವಾಗುವುದಂತೂ ಖಂಡಿತಾ.
ಗೆಳಯರಿಂದ/ಪರಿಚಯಸ್ಥರಿಂದ ಸಾಲ ಮಾಡಿಯಾದರೂ ಪರವಾಗಿಲ್ಲ.ಬಡ್ಡಿಗೆ ಹಣ ತೆಗೆದು ನೀವು ಮನೆಕಟ್ಟುವಿರಾ?
ಖಂಡಿತಾ ಸೋಲು ಕಟ್ಟಿಟ್ಟ ಬುತ್ತಿ.
ಲೋನ್ ಮಾಡಿ ಮನೆ ಕಟ್ಟಿದವರ್ಯಾರೂ ಕೂಡಾ ಆ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಿಲ್ಲ.
ವಿಜ್ರಂಭಣೆಯ ಗ್ರಹ ಪ್ರವೇಶ ಮಾಡಿ 2 ವರ್ಷ ಹೇಗೋ ಲೋನ್ ಕಟ್ಟಿ  ಮುಂದಕ್ಕೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಬಂದಾಗ ಲೋನ್ ಕಟ್ಟಲು ಮನೆ ಮಾರಾಟ ಮಾಡಿ ಕೊನೆಗೆ ಮನೆಗೆ ಹಾಕಿದ ಹಣವೂ ಕೈಗೆ ಬರದೆ ಬಾಡಿಗೆ ಮನೆಯಲ್ಲಿ ವಾಸಿಸುವ ಎಷ್ಟೋ ಫ್ಯಾಮಿಲಿ ನನಗೆ ತಿಳಿದಿದೆ.

ಲೋನ್ ಮಾಡಿ ಭವ್ಯ ಬಂಗಲೆ ಕಟ್ಟುವುದಕ್ಕಿಂತ  ಹಣ ಕೈಯಲ್ಲಾಗುವಾಗ ಅಲ್ಪಲ್ಪ ಕೆಲಸ ಮಾಡಿಸಿ ಮನೆಕಟ್ಟಿ ನೆಮ್ಮದಿಯಿಂದಿರುವವನೇ ಅರಸ.
ಬಡ್ಡಿಗೆ ಲೋನ್ ಪಡೆದು ಮನೆ ಕಟ್ಟಿದರೆ ಹೇಗೆ ತಾನೇ ಸಂತೋಷವಿರಬಹುದು?
ಬಡ್ಡಿಯ ವ್ಯವಹಾರದಲ್ಲಿ ಭಾಗಿಯಾಗುವ 10 ವಿಭಾಗವನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬಹಳ ಖಡಕ್ಕಾಗಿ ಶಪಿಸಿದ್ದಾರೆ.ಜಾಗೃತಾಗಿರಿ



*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 13

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --13


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  12:*_
*ಸಾತ್ವಿಕರನ್ನು ಮನೆಗೆ ಕರೆಸಿ*

ಭೂಮಿಯ ಮೇಲೆ ಅಲ್ಲಾಹನು ಸಾವಿರಾರು ಜೀವಿಗಳನ್ನು ಸೃಷ್ಥಿಸಿದ್ದಾನೆ.ಅವುಗಳ ಪೈಕಿ ಶ್ರೇಷ್ಠತೆಯ ಜೀವಿ ಮನುಷ್ಯನಾಗಿದ್ದಾನೆ.
ಮನುಷ್ಯರೆಲ್ಲರೂ ಒಂದೇ ರೀತಿಯಲ್ಲಿ ಅಲ್ಲ.
ಕೆಲವರನ್ನು ಅಲ್ಲಾಹನು ಉನ್ನತಗೊಳಿಸಿದ್ದಾನೆ.ಪ್ರವಾದಿಗಳ ಪೈಕಿ ಉಲುಲ್ ಅಝ್ಮ್,ಮುರ್ಸಲ್ ಗಳು,ಅಂಬಿಯಾಗಲು ವ್ಯತ್ಯಸ್ಥ ಸ್ಥಾನದಲ್ಲಿರುವವರಾಗಿದ್ದಾರೆ.ಸರ್ವ ಸೃಷ್ಟಿಗಳ ಪೈಕಿ ಉನ್ನತರು ಹಝ್ರತ್ ಪೈಗಂಬರ್ ಸಲ್ಲಲಾಹು ಅಲೈಹಿವಸಲ್ಲಮರಾಗಿದ್ದಾರೆ.
ಅವರ ಕುಟುಂಬಸ್ಥರಾದ ಅಹ್ಲು ಬೈತ್ ನಲ್ಲಿ ಒಳಪಟ್ಟವರು ಮಹೋನ್ನತಾರಾಗಿದ್ದಾರೆ.
(ಅಹ್ಲು ಬೈತ್ ನ ಬಗ್ಗೆ ಸವಿಸ್ತಾರವಾಗಿ ನಾನು ಲೇಖನ ಬರೆದಿದ್ದು,ಹೆಚ್ಚಿನ ವಿವವರಗಳಿಗಾಗಿ ಅದನ್ನು ಓದಿರಿ)
ಔಲಿಯಾಗಳು ಕೂಡಾ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ.
ಅವರು ಅಲ್ಲಾಹನ ಬಳಿ ಅತ್ಯಂತ ಸ್ಥಾನವಿರುವವರೂ ಆವರ ಪ್ರಾರ್ಥನೆಗೆ ವಿಶೇಷ ಉತ್ತರಗಳು ಲಭಿಸುತ್ತದೆ.
ಆದುದರಿಂದ ಸಾತ್ವಿಕ ಪುರುಷರೊಂದಿಗೆ ನಮಗೆ ಸದಾ ಭಾಂದವ್ಯವಿರಬೇಕು.
ಅವರನ್ನು ನಮ್ಮ ಮನೆಗೆ  ಆಗಾಗ ಆಹ್ವಾನಿಸಿ ಅವರಿಂದ ಪ್ರಾರ್ಥಿಸಿಕೊಳ್ಳಬೇಕು.
ಖಂಡಿತವಾಗಿಯೂ ಅಂತಹಾ ಮನೆಗಳಲ್ಲಿ ಬರ್ಕತ್ ಮತ್ತು ನೆಮ್ಮದಿ ಇರುತ್ತದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಸ್ವಹಾಬತ್ ಬರ್ಕತ್'ಗಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸುತ್ತಿದ್ದರು ಹಾಗೂ  ಅವರ ಮನೆಗಳಿಗೆ ಪ್ರವಾದೀ ವರ್ಯರನ್ನು ಆಹ್ವಾನಿಸುತ್ತಿದ್ದರು.

ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸ್ ನೋಡಿ,
عَنْ أَنَسٍ قَالَ دَخَلَ النَّبِيُّ صَلَّى اللَّهُ عَلَيْهِ وَسَلَّمَ عَلَيْنَا وَمَا هُوَ إِلَّا أَنَا وَأُمِّي وَأُمُّ حَرَامٍ خَالَتِي فَقَالَتْ أُمِّي يَا رَسُولَ اللَّهِ خُوَيْدِمُكَ ادْعُ اللَّهَ لَهُ قَالَ فَدَعَا لِي بِكُلِّ خَيْرٍ وَكَانَ فِي آخِرِ مَا دَعَا لِي بِهِ أَنْ قَالَ اللَّهُمَّ أَكْثِرْ مَالَهُ وَوَلَدَهُ وَبَارِكْ لَهُ فِيهِ(مسلم 2481)
ಅನಸ್ (ರ)ಹೇಳುತ್ತಾರೆ,ನನ್ನ ಮನೆಗೆ ಪ್ರವಾದೀ ವರ್ಯರು ಬಂದರು.ಆಗ ನನ್ನ ಮನೆಯಲ್ಲಿ ನಾನು,ತಾಯಿ ಹಾಗೂ ನನ್ನ ಚಿಕ್ಕಮ್ಮ ಇದ್ದರು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನನ್ನ ತಾಯಿ ಈ ರೀತಿ ಹೇಳಿದರು,
ಓ ಪ್ರಾವದೀ ವರ್ಯರೇ!ನಿಮ್ಮ ಸೇವಕ ಅನಸ್ ಗಾಗಿ ತಾವು ದುಆ ಮಾಡಿರಿ.ಆಗ ಪ್ರವಾದೀ ವರ್ಯರು ನನ್ನ ಎಲ್ಲಾ ಒಳಿತಿಗಾಗಿ ದುಆ ಮಾಡಿದರು.
(ಮುಸ್ಲಿಂ 2481)

ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಇತ್'ಬಾನ್ (ರ) ರವರಿಗೆ ಕಣ್ಣಿನ ದೃಷ್ಠಿ ಕಳೆದುಹೋದಾಗ ಪ್ರವಾದೀ ವರ್ಯರ ಬಳಿ ಬಂದು ನನಗೆ ಮಸೀದಿಗೆ ಬರಲು ಸಾಧ್ಯವಾಗುತ್ತಿಲ್ಲ.ತಾವು ನನ್ನ ಮನೆಗೆ ಬಂದು ನನ್ನ ಮನೆಯಲ್ಲಿ ನಮಾಝ್ ಮಾಡಿ ನನ್ನನ್ನು ಆಶಿರ್ವದಿಸಿ ಎಂದು ಬೇಡಿಕೆಯಿಟ್ಟ ಘಟನೆ ಇಮಾಮ್ ಬುಖಾರಿ ವರದಿ ಮಾಡಿದ್ದು,ಅದನ್ನು ಇದೇ ಲೇಖನದ 5 ನೇ ಭಾಗದಲ್ಲಿ ವಿವರಿಸಿದ್ದೇನೆ.

ಪ್ರಸ್ತುತ ಹದೀಸ್'ಗೆ ಇಮಾಮ್ ಇಬ್ನ್ ಹಿಬ್ಬಾನ್ ಅಧ್ಯಾಯ ನೀಡಿದ್ದು ಈ ರೀತಿಯಾಗಿದೆ,
ذكر ما يستحب للامام من اعطاء رعيته ما ياملونه من الاسباب التي بها يتبركون من ناحيته
ಬರ್ಕತ್ ಉದ್ದೇಶವಿಟ್ಟು ಅನುಯಾಯಿಗಳು ನಾಯಕನಲ್ಲಿ ಒಂದು ಸ್ಥಳ ನಿರ್ಣಯಿಸುವಂತೆ ಬೇಡಿಕೆಯಿಟ್ಟರೆ ಅನುಯಾಯಿಗಳ ಬೇಡಿಕೆಯನ್ನು ಈಡೇರಿಸುವುದು ನಾಯಕನಿಗೆ ಸುನ್ನತ್ ಆಗಿದೆ.
(ಸ್ವಹೀಹ್ ಇಬ್ನ್ ಹಿಬ್ಬಾನ್)

ಬರ್ಕತ್ ಗಾಗಿ ಸಾತ್ವಿಕರನ್ನು ಮನೆಗೆ ಆಹ್ವಾನಿಸಿದರೆ ಆ ಕರೆಗೆ ಉತ್ತರಿಸುವುದು ಸಾತ್ವಿಕರ ಬಾಧ್ಯತೆಯಾಗಿದೆ ಎಂದು ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಇಬ್ನ್ ಬತ್ತಾಲ್ (ರ)ಹೇಳಿದ್ದಾರೆ.
من دعي من الصالحين الي شيئ يتبرك به منه فله ان يجيب اذا امن الفتنة من العجب
(ಫತ್'ಹುಲ್ ಬಾರಿ 2/77)

ವಹ್ಹಾಬಿಗಳ ನಾಯಕ ಶೌಕಾನಿ ತನ್ನ ನೈಲುಲ್ ಔತಾರ್ ನ 3/95 ರಲ್ಲಿ ಕೂಡಾ ಇದನ್ನೇ ಹೇಳಿದ್ದಾರೆ.

ಒಟ್ಟಿನಲ್ಲಿ ನಮ್ಮ ಮನೆಗೆ ಸಜ್ಜನರಾದ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ಅನ್ನ-ಪಾನೀಯ ನೀಡಿ ಅವರಿಂದ ಪ್ರಾರ್ಥಿಸಿಕೊಂಡಲ್ಲಿ ಆ ಮನೆಯಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಗೊಳ್ಳುವವು.
----------------------------------------------------------

*ಪ್ರತ್ಯೇಕ ಗಮನಕ್ಕೆ*

ಭಾಗ 2 ರಲ್ಲಿ  ಒಂದು ಹದೀಸ್ ಗೆ ಅರ್ಥ ನೀಡುವಲ್ಲಿ
الدُّنيا متاعٌ، وخيرُ متاعِ الدُّنيا المرأةُ الصَّالحة،
*ಪ್ರಪಂಚದಲ್ಲಿರುವ ಸರಕುಗಳ ಪೈಕಿ ಉತ್ತಮವಾದ ಸರಕು ಉತ್ತಮ ಸ್ತ್ರೀಯಾಗಿದ್ದಾಳೆ*
ಎಂದು ಬರೆದಿದ್ದೆ.
ಮಿತ್ರರೊಬ್ಬರು ಮೆಸೇಜ್ ಮಾಡಿ ಮಹಿಳೆಯನ್ನು ನೀವು ಸರಕುಗಳಾಗಿ ಕಂಡದ್ದು ತಪ್ಪೆಂದು ಸೂಚಿಸಿದ್ದರು.

ವಾಸ್ತವದಲ್ಲಿ ಆ ಬರೆದದ್ದು ತಪ್ಪಾಗಿರಲಿಲ್ಲ.
ಕಾರಣ "ಸರಕು" ಎಂದರೆ ಅಷ್ಟೊಂದು ಕೀಳುಮಟ್ಟದ ಪದವಲ್ಲ.
ಯಾವುದೇ ಸರಕುಗಳಿಗೆ ಬೆಲೆ ಇದೆ.
ಬೆಲೆಯಿಲ್ಲದ ಸರಕು ಪ್ರಪಂಚದಲ್ಲಿ ಯಾವುದಿದೆ?
ಸರಕು ಅಂದರೆ ಬೆಲೆಯಿರುವ ವಸ್ತು ಎಂದೇ ಅಲ್ಲಿ ಉದ್ದೇಶಿಸಲಾಗಿತ್ತು.
ಅಂದರೆ, ಪ್ರಪಂಚದಲ್ಲಿರುವ ಬೆಲೆ ಬಾಳುವ ವಸ್ತುಗಳ  ಪೈಕಿ ಅತ್ಯಂತ ಬೆಲೆಯಿರುವ ವಸ್ತು ಸಜ್ಜನ ಮಹಿಳೆಯಾಗಿದ್ದಾಳೆ ಎಂದಾಗಿದೆ ಅದರ ಅರ್ಥ.

ಆ ರೀತಿ ಅರ್ಥಮಾಡಿಕೊಂಡರೆ ಯಾವುದೇ ಸಮಸ್ಯೆಯಿಲ್ಲ.

ಸೂಕ್ಮತೆಯಿಂದ ಓದಿ ಅಭಿಪ್ರಾಯ ತಿಳಿಸಿದ್ದಕ್ಕಾಗಿ ಆ ಮಿತ್ರನಿಗೆ ಧನ್ಯವಾದಗಳು.


*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)


ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 12

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --12


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  11:*_

*ಮನೆಯಲ್ಲಿ ಇಸ್ಲಾಮಿಕ್ ಲೈಬ್ರರಿಗಳಿರಲಿ*

ಓದುವ ಹವ್ಯಾಸವಿರುವವನು ಪುಸ್ತಕ ಖರೀದಿಸುವನು.ಎಷ್ಟೇ ಕಷ್ಟಪಟ್ಟಾದರೂ ಪುಸ್ತಕ ಸಂಗ್ರಹಿಸುವನು.
ಒಂದು ಉತ್ತಮ ಲೈಬ್ರರಿ ಮನೆಯಲ್ಲಿದ್ದರೆ ಮನೆಯಲ್ಲಿರುವವರಿಗೆ ಮತ್ತು ಅತಿಥಿಗಳಿಗೆ ಬಹಳ ಪ್ರಯೋಜನಕಾರಿಯಾದೀತು.
ಈಗ ಓದುವ ಹವ್ಯಾಸ ಬಹಳ ಕಡಿಮೆ.ಪುಸ್ತಕ ಖರೀದಿಸುವ ಹವ್ಯಾಸವೂ ಮಾಯವಾಗಿ ಬಿಟ್ಟಿದೆ.
ಮುಂಚೆ ನಾನು ಎಲ್ಲಿ ಸಮ್ಮೇಳನಗಳಿಗೆ ಹೋದರು ಮೊದಲು ಅಲ್ಲಿ ಹುಡುಕುತ್ತಿದ್ದದ್ದು ಸಮ್ಮೇಳನ ಪ್ರಯುಕ್ತ ಹೊರತಂದ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂದಾಗಿತ್ತು.ಉಪಯುಕ್ತ ಮಾಹಿತಿಗಳು ಆ ಸುವನೀರ್ ಗಳಿಂದ ಲಭಿಸುತ್ತಿದ್ದವು.ಈಗೀಗ ಸುವನೀರ್ ಗಳು ಕಡಿಮೆ.ಇದ್ದರೂ ಪ್ರಯೋಜನಕಾರಿಯಾದ ಬರಹಗಳು ಕಡಿಮೆ.ದರ್ಸ್ ನಲ್ಲಿ ಕಲಿಯುವಾಗ ಮಂಗಳೂರಿನ ಅತ್ರಿ ಬುಕ್ ಸ್ಟಾಲ್ ಗೆ ಹೋಗಿ ಹಲವಾರು ಪುಸ್ತಕ ಖರೀದಿಸಿದ್ದೆ.
ಅದೇ ರೀತಿ ಒಮ್ಮೆ ಬೆಂಗಳೂರಿಗೆ ಪ್ರವಾಸ ಹೋದಾಗ ಬೆಂಗಳೂರಿನ ಸಪ್ನ ಬುಕ್ ಸ್ಟಾಲ್'ಗೂ ಹೋಗಿ ಪುಸ್ತಕ ಖರೀದಿಸಿದ್ದೆ.
ಅದು ಈಗಲೂ ಜೋಪಾನವಾಗಿಟ್ಟಿದ್ದೇನೆ.

ಈಗ ಓದುವ ಹವ್ಯಾಸದಿಂದ ಹಿಂದೆ ಸರಿದು ಏನಿದ್ದರೂ ಮೊಬೈಲ್ಗಳಲ್ಲಿಯೇ ತಲ್ಲೀಣರಾಗಿದ್ದೇವೆ.
ನಮ್ಮ ಮನೆಗಳಲ್ಲಿನ ಲೈಬ್ರರಿಗಳಲ್ಲಿ ಉಪಯುಕ್ತ ಪುಸ್ತಕಗಳನ್ನಿಟ್ಟರೆ ಅದರಿಂದ ತುಂಬಾ ಪ್ರಯೋಜನವಿದೆ.
ಬುದ್ಧಿ ಶಕ್ತಿ ಮತ್ತು ನೆನಪು ಶಕ್ತಿ ಓದುವಿಕೆಯಿಂದ ಹೆಚ್ಚುತ್ತದೆ.

ಮಿತ್ರರೊಬ್ಬರು ಹೇಳಿದ ಒಂದು ತಮಾಷೆ ಈ ರೀತಿ ಇದೆ.
ಕೇರಳಿಗನ ಒಬ್ಬನ ಕೈಯಲ್ಲಿ ಹತ್ತು ಪತ್ರಿಕೆಗಳಿದ್ದರೆ ಕನ್ನಡಿಗರು ಹತ್ತು ಜನರು ಸೇರಿ ಒಂದು ಪೇಪರ್ ಖರೀದಿಸುತ್ತಾರೆ.

ಪವಿತ್ರ ಖುರ್'ಆನಿನ ಮೊದಲನೇ ಸೂಕ್ತ ಓದುವುದನ್ನು ಪ್ರೋತ್ಸಾಹಿಸುವ ಸೂಕ್ತವಾಗಿದೆ.
اقرا باسم ربك الذي خلق
ಎಂದಾಗಿತ್ತು ಪ್ರಥಮ ಸೂಕ್ತ.
ಓ ಪ್ರವಾದೀ ವರ್ಯರೇ!ತಮ್ಮನ್ನು ಸೃಷ್ಠಿಸಿದ ಅಲ್ಲಾಹನ ನಾಮದಿಂದ ಓದಿರಿ
---------------------------------------------------------
ಬರಹ ಮತ್ತು ಓದುವಿಕೆಗೆ ಬಹಳಷ್ಟು ಪ್ರಾಮುಖ್ಯ ಇಸ್ಲಾಮ್ ನೀಡಿದೆ.

ಬದ್ರ್ ನಲ್ಲಿ ಸೆರೆ ಸಿಕ್ಕ ಶತ್ರುಗಳನ್ನು  ವಿಮೋಚಿಸಲು ಶತ್ರುಗಳು ಬೇಡಿಕೆಯಿಟ್ಟಾಗ ಅವರಿಂದ ಹಣವನ್ನು ಪಡೆಯುವ ಬದಲು
 ಓದು -ಬರಹ ಗೊತ್ತಿಲ್ಲದ ಅನಕ್ಷರಸ್ಥರಿಗೆ ಓದು -ಬರಹ ಕಲಿಸುವಂತೆ ಆ ಶತ್ರುಗಳೊಂದಿಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಆಜ್ಞಾಪಿಸಿದರು.
---------------------------------------------------------
ಉತ್ತಮ ದಿನ ಪತ್ರಿಕೆಗಳನ್ನೂ ನಮ್ಮ ಮನೆಯ ಲೈಬ್ರರಿಗೆ ತರಿಸಬಹುದು.
ಸಕಾಲಿಕ ವಿಷಯಗಳ ಬಗ್ಗೆ ತಿಳುವಳಿಕೆಗಾಗಿ ಪತ್ರಿಕೆಗಳ ಸಂಪಾದಕೀಯವನ್ನು ಓದುವುದು ಬಹಳ ಪ್ರಯೋಜನಕಾರಿ.

ಕಳೆದ ಭಾಗದಲ್ಲಿ ವಿವರಿಸಿದಂತೆ ಇಸ್ಲಾಮ್ ದೀನಿನ ಕುರಿತು ಆಳವಾಗಿ ಚರ್ಚಿಸಲ್ಪಡುವ ಪುಸ್ತಗಳು ನಮ್ಮ ಬಳಿ ಇರಬೇಕು.
ವಾರಪತ್ರಿಕೆ ,ಪಾಕ್ಷಿಕ ಪತ್ರಿಕೆ,ತಿಂಗಳ ಪತ್ರಿಕೆ ಗಳೂ ತರಿಸಬಹುದು.
ಪವಿತ್ರ ಸುನ್ನತ್ ಜಮಾಅತ್ ಗೆ ವಿರುದ್ಧವಾದ ನೂತನವಾದಿಗಳ ಪತ್ರಿಕೆಗಳನ್ನು ಓದಬಾರದು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮತ್ತು ಅಂಬಿಯಾ - ಔಲಿಯಾಗಳನ್ನು ಅವಹೇಳಿಸುವ ನೂತನವಾದಿಗಳ ಭಾಷಣ ಅಥವಾ ಅವರ ಪುಸ್ತಕಗಳನ್ನು ಓದಿ ಇರುವ ಈಮಾನ್ ನಷ್ಟಪಡಿಸಬಾರದು.

ನಮ್ಮ ಮನೆಗಳ ಲೈಬ್ರರಿಯಲ್ಲಿ ಈ ಪುಸ್ತಕಗಳು ಇರಲಿ.
1.ಖುರ್'ಆನ್ ಗೆ ಸಂಭಂಧಪಟ್ಟ ಪುಸ್ತಕ.
2.ಹದೀಸ್ ಗೆ ಸಂಭಂಧಪಟ್ಟ ಪುಸ್ತಕ.
3.ಅಖಾಇದ್
4.ಫಿಖ್'ಹ್
5..ಚರಿತ್ರೆ
ಹಾಗೂ ಇನ್ನಿತರ ಜನರಲ್ ನಾಲೇಡ್ಜ್ ನ ಪುಸ್ತಕಗಳು.

ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಪಾನವಾಗಿಟ್ಟರೆ ಅದರಿಂದುಂಟಾಗುವ ನೆಮ್ಮದಿ ಅಷ್ಟಿಷ್ಟಲ್ಲ.
ನಾವು ಕಲಿತ ಎಲ್ಲಾ ಪುಸ್ತಕ,ಕಿತಾಬ್ ಗಳನ್ನು ತೆಗೆದಿರಿಸಬೇಕು.
ನಾವು ಎಷ್ಟೇ ಕಂಠಪಾಟ ಮಾಡಿದ್ದರೂ ಕಲಿತ ಪುಸ್ತಕಗಳನ್ನು ಎಲ್ಲೆಂದರಲ್ಲಿ ಹಾಕಿ ನಾಶಪಡಿಸಬಾರದು.
ನಮಗಲ್ಲದಿದ್ದರೂ ಇನ್ನೊಬ್ಬರಿಗೆ ಅದರಿಂದ ಉಪಕರಿಸಬಹುದು.


*ಎಲ್ಲರಿಗೂ ಶೇರ್ ಮಾಡಿ*

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 11

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --11


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  10:*_

*ಮನೆಯಲ್ಲೊಂದು ದೀನೀ ಕ್ಲಾಸ್ ಇರಲಿ*

ಅಲ್ಲಾಹನು ಹೇಳುತ್ತಾನೆ,

يَا أَيُّهَا الَّذِينَ آمَنُوا قُوا أَنفُسَكُمْ وَأَهْلِيكُمْ نَارًا (التحريم 6)
ಓ ಸತ್ಯ ವಿಶ್ವಾಸಿಗಳೇ!ನಿಮ್ಮ ಮತ್ತು ನಿಮ್ಮವರ ಶರೀರರವನ್ನು ನರಕಾಗ್ನಿಯಿಂದ ರಕ್ಷಿಸಿರಿ
(ಸೂರಾ ಅತ್ತಹ್'ರೀಮ್ 6)

ಮನೆಯಲ್ಲಿರುವ ಪತ್ನಿ ಮಕ್ಕಳು ಸಹಿತ ಎಲ್ಲರಿಗೂ ದೀನಿನ ಬಗ್ಗೆ ಕಲಿಸಿಕೊಡಬೇಕೆಂದು ಪ್ರಸ್ತುತ ಸೂಕ್ತ ತಿಳಿಸಿಕೊಡುತ್ತದೆ.

ಯಾವುದೇ ಆರಾಧನಾ ಕರ್ಮ ನಿರ್ವಹಿಸಬೇಕಾದರೂ ಇಲ್ಮ್ ಅತ್ಯಗತ್ಯ.
ಕಲಿಯದೆ ಆರಾಧನೆ ನಿರ್ವಹಿಸಿದರೆ ಅದೆಲ್ಲವೂ ನಿಷ್ಫಲ.
ನಮ್ಮ ಮನೆಯಲ್ಲಿ ದಿನ ನಿತ್ಯ ಅಥವಾ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕುಟುಂಬ ತರಗತಿ ನಡೆಸಬೇಕು.
ವಿಶೇಷ ದಿನಗಳ ಮಹತ್ವ ಮತ್ತು ಆ ದಿವಸಗಳಲ್ಲಿ ಮಾಡಬೇಕಾದ ಆರಾಧನೆಗಳನ್ನು ವಿವರಿಸುವ ತರಗತಿ ಪ್ರಸ್ತುತ ಮಜ್ಲಿಸ್ ನಲ್ಲಿ ನಡೆಸಬಹುದು.
ಎಲ್ಲರಿಗೂ ಕುಳಿತುಕೊಳ್ಳಲು ಸೌಕರ್ಯವಿರುವ ಒಂದು ಸ್ಥಳದಲ್ಲಿ ಆ ಕ್ಲಾಸ್ ನಡೆಸಬಹುದು.ಮನೆಯಲ್ಲಿ ಕಲಿತವರು ಇದ್ರೆ ಅವರೇ ಅದನ್ನು ನಡೆಸಬಹುದು.
ಕಲಿತವರು ಇಲ್ಲದಿರುವ ಸಂದರ್ಭದಲ್ಲಿ ಮಹಿಳೆಯರಿಗಾಗಿ ಮಾತ್ರ ಕಲಿಸಲು ಮಹಿಳಾ ಆಲಿಮತನ್ನು ಕರೆಸಿ ಕ್ಲಾಸ್ ನಡೆಸಬಹುದು.
(ಪುರುಷರಿಗೆ ಮಸೀದಿಗಳಲ್ಲಿ ತರಗತಿಗಳು ಲಭ್ಯವಿದ್ದು ಅದರ ಸದುಪಯೋಗ ಪಡೆಯಬಹುದಾಗಿದೆ.)

ಮಹಿಳಾ ಆಲಿಮತ್ ಗಳು ನಡೆಸುವ ಕ್ಲಾಸ್ ಆಗಿದ್ದರೆ ಪುರುಷರು ಅಲ್ಲಿ ಸೇರಬಾರದು.
ತರಗತಿ ನಡೆಸುವವರು ಪುರುಷ ಆಲಿಮ್ ಆಗಿದ್ದರೆ ಫರ್ಳ್ ಕಾರ್ಯಗಳನ್ನು ಕಲಿಸುವ ತರಗತಿ ಆಗಿದ್ದರೆ ಮಾತ್ರ ಮಹಿಳೆಯರನ್ನು ದರ್ಶಿಸಬಹುದು.ಇನ್ನಿತರ ಕಲಿಯಲು ಕಡ್ಡಾಯವಲ್ಲದ ಸುನ್ನತ್ತಾದ ಇಲ್ಮನ್ನು ಕಲಿಸಲು ಅನ್ಯ ಮಹಿಳೆಯರ ಮುಖ ನೋಡುವಂತಿಲ್ಲ.
ಇದು ಇಮಾಮ್ ಝೈನುದ್ದೀನ್ ಮಕ್ದೂಮ್ (ರ) ಫತ್'ಹುಲ್ ಮುಈನ್ ನಲ್ಲಿ ವಿವರಿಸಿದ್ದಾರೆ.

ಖಡ್ಡಾಯ ಇಲ್ಮ್ ಅಲ್ಲದಿದ್ದರೂ ಹಲವಾರು ಮಹಿಳೆಯರು ಸೇರುವ ಕ್ಲಾಸ್ ಆಗಿದ್ದರೆ ಪರದೆಯ ಹಿಂದೆ ಮಹಿಳೆಯರು ಕುಳಿತು ಇಲ್ಮ್ ಆಲಿಸುವುದರಲ್ಲಿ ಯಾವುದೇ ತಪ್ಪಿಲ್ಲ.

ಇಮಾ ಬುಖಾರಿಯ ಒಂದು ಹದೀಸ್ ನೋಡಿ,
عَنْ أَبِي سَعِيدٍ الْخُدْرِيِّ قَالَتْ النِّسَاءُ لِلنَّبِيِّ صَلَّى اللَّهُ عَلَيْهِ وَسَلَّمَ غَلَبَنَا عَلَيْكَ الرِّجَالُ فَاجْعَلْ لَنَا يَوْمًا مِنْ نَفْسِكَ فَوَعَدَهُنَّ يَوْمًا لَقِيَهُنَّ فِيهِ فَوَعَظَهُنَّ وَأَمَرَهُنَّ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದು ಮಹಿಳೆಯರು ಈ ರೀತಿ ಭಿನ್ನವಿಸಿಕೊಂಡರು,
ಓ ಪ್ರವಾದೀ ವರ್ಯರೇ!
ಪುರುಷರು ಎಲ್ಲಾ ಕಡೆ ತಮ್ಮೊಂದಿಗೆ ಕುಳಿತು ಇಲ್ಮ್ ಕಲಿಯುವರು.ನಮಗೂ ಅಲ್ಪ ಇಲ್ಮ್ ಹೇಳಿ ಕೊಡುವಿರಾ?
ಆವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಹಿಳೆಯರಿಗಾಗಿ ಒಂದು ದಿನವನ್ನು ಗೊತ್ತು ಪಡಿಸಿದರು
(ಬುಖಾರಿ 101)

ನಮ್ಮ ದೈನಂದಿನ ಆರಾಧನೆಗಳಲ್ಲಿ ನಮ್ಮಿಂದ ಎಷ್ಟೋ ತಪ್ಪುಗಳು ಸಂಭವಿಸುತ್ತಾ ಇರುತ್ತದೆ.
ಕಿರಿಯ ಪ್ರಾಯದಲ್ಲಿ ಮದ್ರಸಗಳಲ್ಲಿ ಕಲಿತ ಇಲ್ಮ್ ಪ್ರಾಯೋಗಿಕ ರೂಪದಲ್ಲಿ ಪ್ರಯೋಗಿಸುವಾಗ ಅದು  ಮರೆತುಬಿಟ್ಟಿರುತ್ತದೆ.
ಕೆಲವರಿಗೆ ಚಿಕ್ಕ ಪುಟ್ಟ ವಿಷಯಗಳನ್ನು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಪುನಃ ತಪ್ಪುಗಳನ್ನೇ ಮಾಡುವವರಿದ್ದಾರೆ.
ಆದುದರಿಂದ ನಾವು ದೈನಂದಿನ ಮಾಡವ ಇಬಾದತ್ ಗಳಲ್ಲಿ ತಪ್ಪುಗಳು ಬಾರದಂತೆ  ಎಚ್ಚರವಹಿಸಿ ನಿರ್ವಹಿಸಬೇಕು.
ಅದಕ್ಕಾಗಿ ಇಲ್ಮ್ ನಾವು ಕಲಿತಿರಬೇಕು.
ಕಲಿತ ಇಲ್ಮ್ ಮರೆತು ಹೋಗುವುದಕ್ಕಾಗಿ ಇನ್ನಷ್ಟು ಕಲಿಯಬೇಕು.ಕಲಿತದ್ದನ್ನು ಜೀವನದಲ್ಲಿ ಅಳವಡಿಸಬೇಕು.

ಒಂದು ಉತ್ತಮ ಆಲಿಮ್ ಒಬ್ಬರ ಮೊಬೈಲ್ ನಂಬರ್ ನಮ್ಮ ಬಳಿ ಇದ್ದರೆ ಬಹಳ ಉತ್ತಮ.ಸಂಶಯ ಬರುವಾಗ ಅವರಿಂದ ಅದನ್ನು ಕೇಳಿ ಸಂಶಯ ನೀಗಿಸಲು ಸಹಾಯಕಾರಿಯಾದೀತು.
ಮಹಿಳೆಯರು ಕರೆ ಮಾಡಿ ಪುರುಷ ಆಲಿಮರೊಂದಿಗೆ ಸಂಶಯ ಕೇಳಲೇ ಬಾರದು.
ಕಾರಣ ,ಅದು  ಕೆಡುಕನ್ನು ಅಹ್ವಾನಿಸುತ್ತದೇ ಹೊರತು ಅದರಿಂದ ಒಳಿತಿಲ್ಲ.


ನಾನು ಒಂದು ಉಸ್ತಾದರ ಮನೆಗೆ ಹೋಗಿದ್ದೆ.
ಮನೆಯಲ್ಲಿ ಮಹಿಳೆಯರು ಕುಳಿತುಕೊಳ್ಳುವ ಹಿಂಬದಿಯಲ್ಲಿ ಒಂದು ಬೋರ್ಡ್ ತೋರಿಸಿ ಉಸ್ತಾದ್ ಹೇಳಿದರು,
ವಿಶೇಷ ದಿನಗಳ ಮಹತ್ವ ಮತ್ತು ಆ ದಿನಗಳಲ್ಲಿ ಮಾಡಬೇಕಾದ ಕಾರ್ಯಗಳನ್ನು ಚುಟುಕಾಗಿ ಈ ಬೋರ್ಡಲ್ಲಿ ನಾನು ಬರೆದುಕೊಡುತ್ತೇನೆ.
ಮಕ್ಕಳು ಅದು ನೋಡಿ ಕಲಿಯುತ್ತಾರೆ.
ನನ್ನ ಪತ್ನಿ ಅದನ್ನು ಅವಳ ಗೆಳತಿಯರಿಗೆ ಮೆಸೇಜ್ ಮಾಡಿ ಅವರಿಗೂ ಕಲಿಸಿಕೊಡುತ್ತಾಳೆ.

ನಮ್ಮ ಮನೆಯಲ್ಲೂ ಈ ರೀತಿಯ ಉಪಕರಣಗಳಿದ್ದರೆ ತುಂಬಾ ಉತ್ತಮವಲ್ಲವೇ?





ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

Tuesday, May 5, 2020

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 10

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --10


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  9:*_

*ನಿಮ್ಮ ಮನೆಯಲ್ಲಿ ಅಲ್ ಬಖರ ಸೂರತ್ ಪಾರಾಯಣ ಮಾಡಿರಿ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
عَنْ أَبِي هُرَيْرَةَ أَنَّ رَسُولَ اللَّهِ صَلَّى اللَّهم عَلَيْهِ وَسَلَّمَ قَالَ لَا تَجْعَلُوا بُيُوتَكُمْ مَقَابِرَ إِنَّ الشَّيْطَانَ يَنْفِرُ مِنَ الْبَيْتِ الَّذِي تُقْرَأُ فِيهِ سُورَةُ الْبَقَرَةِ
(صحيح مسلم)
ನೀವು ಮನೆಗಳನ್ನು ಖಬರ್ ಮಾಡದಿರಿ.(ಖಬರಿನ ಒಳಗೆ ಖುರ್'ಆನ್ ಓದಲ್ಪಡಲಾಗುವುದಿಲ್ಲ.ಆ ರೀತಿ ನೀವು ಮನೆಗಳನ್ನು ಮಾಡದಿರಿ)
ಅಲ್ ಬಖರ ಸೂರತ್ ಪಾರಾಯಣ ಮಾಡುವ ಮನೆಯಿಂದ ಶೈತಾನ್ ಓಡುವನು.
(ಸ್ವಹೀಹ್ ಮುಸ್ಲಿಂ)
---------------------------------------------------------
ಅಲ್ ಬಕರ ಸೂರತ್ ನ ಕೊನೆಯ 2 ಆಯತ್ ಗಳು ಅತೀ ಮಹತ್ವವಿರುವ ಆಯತ್ ಗಳಾಗಿವೆ. ಅದರ ಪಾರಯಣ ನಾವು ರೂಡಿ ಮಾಡಬೇಕು.

ಇಮಾಮ್ ತುರ್ಮುದ್ಸಿಯ ವರದಿ ನೋಡಿ,
عَنْ النُّعْمَانِ بْنِ بَشِيرٍ، عَنِ النَّبِيِّ صَلَّى اللَّهُ عَلَيْهِ وَسَلَّمَ قَالَ : ( إِنَّ اللَّهَ كَتَبَ كِتَابًا قَبْلَ أَنْ يَخْلُقَ السَّمَوَاتِ وَالْأَرْضَ بِأَلْفَيْ عَامٍ ، أَنْزَلَ مِنْهُ آيَتَيْنِ خَتَمَ بِهِمَا سُورَةَ الْبَقَرَةِ ، وَلَا يُقْرَآنِ فِي دَارٍ ثَلَاثَ لَيَالٍ فَيَقْرَبُهَا شَيْطَانٌ (ترمذي)

ಆಕಾಶ ಭೂಮಿಗಳನ್ನು ಸೃಷ್ಠಿಸುವುದಕ್ಕಿಂತ 2000 ವರ್ಷಗಳ ಮುಂಚೆ ಬರೆಯಲ್ಪಟ್ಟ ಒಂದು ಗ್ರಂಥದಿಂದ 2 ಆಯತ್ ಗಳನ್ನು ಅಲ್ಲಾಹನು ಭೂಮಿಗೆ ಇಳಿಸಿಕೊಟ್ಟನು.ಅಲ್ ಬಕರ ಸೂರತ್'ನ ಮುಕ್ತಾಯ ಆ ಆಯತ್'ನೊಂದಿಗಾಗಿದೆ.
3 ರಾತ್ರಿಗಳಲ್ಲಿ ಆ ಆಯತ್ ಗಳನ್ನು ಪಾರಾಯಣ ಮಾಡಿದ್ದಲ್ಲಿ ಶೈತಾನ್ ಆ ಮನೆಗೆ ಪ್ರವೇಶಿಸಲಾರ
(ವರದಿ :ತುರ್ಮುದ್ಸೀ)




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 09

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --9


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  8:*_
*ಕಾರ್ಮಿಕನ ವೇತನ ಸರಿಯಾಗಿ ನೀಡಿ*

ಒಂದು ಮನೆ ಕಟ್ಟುವಾಗ ಮಣ್ಣಿನ ಕೆಲಸದಿಂದ ಹಿಡಿದು ಮರಕೆಲಸ ತನಕ ಎಲ್ಲವೂ ನಡೆಯುತ್ತದೆ.
ಮನೆಯ ಅಡಿಪಾಯಕ್ಕೆ ಮಣ್ಣು ಅಗೆಯುವವರು,ಕಲ್ಲು ಕಟ್ಟುವವರು,ಕಲ್ಲು ಕೋರೆಯಿಂದ ತಲುಪಿಸುವವರು,ಹೊಯ್ಗೆ,ಮರ,ಎಲೆಕ್ಟಿಷಿಯನ್ ಅದೇ ರೀತಿ ಕೊಳಾಯಿಗಾರ ಸಹಿತ ನೂರಾರು ಕಾರ್ಮಿಕರ ಅಗತ್ಯ ಬರುತ್ತದೆ.
ಮನೆಕೆಲಸಕ್ಕೆ ಕರೆಸಿದ ಕಾರ್ಮಿಕರಿಗೆ ಅನ್ನ ಪಾನೀಯಗಳ ಜತೆಗೆ ಅವರ ವೇತನವನ್ನು ಕೂಡಾ ಸರಿಯಾದ ಸಮಯಕ್ಕೆ ಕೊಡಲೇಬೇಕು.

ಕಟ್ಟಿದ ಮನೆಯಲ್ಲಿ ನೆಮ್ಮದಿ ಇಲ್ಲ ಎಂದಾದಲ್ಲಿ ಯಾವುದೋ ಕಾರ್ಮಿಕನಿಗೆ ಕೊಡಬೇಕಾದ ಸಂಬಳ ಬಾಕಿ ಇದೆ ಎಂದು ತಿಳಿಯಬೇಕಾಗಿದೆ.

ಕೆಲವರು ಮನೆಕಟ್ಟಿಸಿ ಬಹಳ ವಿಜ್ರಂಭಣೆಯಿಂದ ಗ್ರಹ ಪವೇಶ ನಡೆಸುತ್ತಾರೆ.
ಮನೆ ಸಂಪೂರ್ಣ ಲೈಟಿಂಗ್ಸ್ ನಿಂದ ಅಲಂಕರಿಸುತ್ತಾರೆ.
ಆದರೆ ಬಡವನಾದ ಕಾರ್ಮಿಕನಿಗೆ ಕೊಡಬೇಕಾದ ವೇತನ ಕೇಳುವಾಗ ಬೆಧರಿಕೆ ಮತ್ತು ಸತಾಯಿಸುವಿಕೆ ಮಾಡುವುದಾದಲ್ಲಿ ಯಾವ ನೆಮ್ಮದಿ ಆ ಮನೆಯಲ್ಲಿ ನಿರೀಕ್ಷಸಬೇಕು?

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಒಂದು ಹದೀಸ್ ನೋಡಿ,
عن عبد الله بن عمر ـ رضي الله عنهما  قال: قال رسول الله  صلى الله عليه وسلم : أعطوا الأجير أجره قبل أن يجف عرقه (ابن ماجه)
ಕಾರ್ಮಿಕನ ಬೆವರು ಒಣಗುವ ಮುಂಚೆ ಆತನ  ವೇತನವನ್ನು ನೀಡಿರಿ
(ವರದಿ :ಇಬ್ನ್ ಮಾಜ)
------------------------------------------------------------
ಇನ್ನೊಂದು ಹದೀಸ್ ನೋಡಿ
عن أبي هريرة ـ رضي الله عنه ـ عن النبي ـ صلى الله عليه وسلم ـ قال: قال الله تعالى: ثلاثة أنا خصمهم يوم القيامة: رجل أعطى بي ثم غدر، ورجل باع حرا فأكل ثمنه، ورجل استأجر أجيرا فاستوفى منه ولم يعطه أجره 
(البخاري)
ಅಬೂಹುರೈರ(ರ) ರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿ ಮಾಡುತ್ತಾರೆ,
ಅಲ್ಲಾಹನು ಹೇಳಿರುವನು,
ಅಂತ್ಯದಿನದಲ್ಲಿ 3 ವಿಭಾಗ ಜನರು ನನ್ನ ವಿರೋಧಿಯಾಗಿರುವರು.
1.ನನ್ನ ಹೆಸರಲ್ಲಿ ಆಣೆ ಹಾಕಿ ಹೇಳಿ ಅದಕ್ಕೆ ವಿರುದ್ಧವಾಗಿ ನಡೆದವರು.
2.ಸ್ವತಂತ್ರ ವ್ಯಕ್ತಿಯನ್ನು ಮಾರಾಟ ಮಾಡಿ ಆ ಹಣದಿಂದ ತಿಂದವನು.
3.ಕೂಲಿ ಕೆಲಸಕ್ಕಾಗಿ ಒಬ್ಬನನ್ನು ಕರೆಸಿ ಕೆಲಸ ಮಾಡಿಸಿ ಸಂಬಳ ಕೊಡದವನು.
(ಬುಖಾರಿ)
------------------------------------------------------------------
ಅರಿವಿಲ್ಲದೆ ಕಾರ್ಮಿಕರ ಸಂಬಳ ಕೊಡದೆ ಬಾಕಿಯಿಟ್ಟಿದ್ದಲ್ಲಿ ಅದನ್ನು ಅವರಿಗೆ ಕೊಡಲೇ ಬೇಕು.

ಇಮಾಮ್ ಬುಖಾರಿ ತನ್ನ ಸ್ವಹೀಹ್ ನಲ್ಲಿ ವರದಿ ಮಾಡಿದ ಒಂದು ಹದೀಸಿನಲ್ಲಿ 3 ಜನರು ಗುಹೆಯೊಳಗೆ ಬಂದಿಯಾದ ಒಂದು ಚರಿತ್ರೆಯಿದೆ.ಆ 3 ಜನರು ಅಲ್ಲಿಂದ ರಕ್ಷೆಹೊಂದಲು ಅವರು ತಮ್ಮ ಜೀವನದಲ್ಲಿ ಮಾಡಿದ ಸತ್ಕರ್ಮಗಳನ್ನು ಮುಂದಿಟ್ಟು ಅಲ್ಲಾಹನಲ್ಲಿ ತವಸ್ಸುಲ್ ಮಾಡಿ ಪ್ರಾರ್ಥಿಸಿದರು.
ಅದರೊಲ್ಲಬ್ಬರು ಪ್ರಾರ್ಥಿಸಿದ ಪ್ರಾರ್ಥನೆ ಹೀಗಿತ್ತು,
فقال:  اللهم استأجرت أجراء وأعطيتهم أجرهم غير رجل واحد ترك الذي له وذهب، فثمرت أجره حتى كثرت منه الأموال، فجاءني بعد حين، فقال: يا عبد الله، أد إليّ أجري، فقلت: كل ما ترى من أجرك من الإبل والبقر والغنم والرقيق، فقال: يا عبد الله، لا تستهزئ بي! فقلت: لا أستهزئ بك، فأخذه كله فاستاقه فلم يترك منه شيئا، اللهم إن كنت فعلت ذلك ابتغاء وجهك فافرج عنَّا ما نحن فيه، فانفرجت الصخرة فخرجوا يمشون .
( البخاري)
ಅಲ್ಲಾಹನೇ!
 ನನ್ನ ಮನೆಗೆ ಒಂದು ದಿವಸ ಹಲವಾರು ಕಾರ್ಮಿಕರನ್ನು ಕೆಲಸಕ್ಕೆ ಕರೆಸಿದೆ.ಎಲ್ಲರಿಗೂ ಅವರವರ ವೇತನ ನೀಡಿದೆ.ಒಬ್ಬರಿಗೆ ಮಾತ್ರ ನೀಡಿಲ್ಲ.ಅವರಿಗೆ ನೀಡಬೇಕಾದ ಆ ಹಣದಿಂದ ನಾನು ಆಡು,ಹಸು,ಒಂಟೆಗಳನ್ನು ಖರೀದಿಸಿದೆ.
ವರ್ಷಗಳ ಬಳಿಕ ಆ ವ್ಯಕ್ತಿ ನನ್ನ ಬಳಿ ಬಂದು ತನ್ನ ವೇತನವನ್ನು ಕೇಳಿದ.
ನಾನು ಆತನಿಗೆ ನೀಡಬೇಕಾದ ಹಣದಿಂದ ಖರೀದಿಸಿದ ಎಲ್ಲಾ ಮೃಗಗಳನ್ನು ತೋರಿಸಿ ಹೇಳಿದೆ.ಇದೆಲ್ಲವೂ ನಿನ್ನದ್ದಾಗಿದೆ.ಇದನ್ನು ಕೊಂಡು ಹೋಗು.
ಆಗ ಆತ ಕೇಳಿದ,ನನ್ನನ್ನು ಹಿಯಾಳಿಸುತ್ತೀಯಾ? ನಾನು ಹೇಳಿದೆ,
 ಖಂಡಿತಾ ಅಲ್ಲ.ಇದೆಲ್ಲವೂ ನಿನ್ನ ಹಣದಿಂದ ಖರೀದಿಸಿದ್ದಾಗಿದೆ.
ಇದು ಹೇಳಿದಾಗ ಆ ವ್ಯಕ್ತಿ ಬಹಳ ಸಂತೋಷದಿಂದ ಅದನ್ನೆಲ್ಲಾ ಕೊಂಡು ಹೋದ.
ಅಲ್ಲಾಹನೇ!ನಾನು ಮಾಡಿದ ಆ ಸತ್ಕರ್ಮ ನೀನು ಇಷ್ಟಪಟ್ಟಿರುವೆಯಾದರೆ ನಮ್ಮ ಈ ಗುಹೆಯ ಬಾಗಿಲನ್ನು ತೆರೆದು ಕೊಡು.
ಆವಾಗ ಮುಚ್ಚಲ್ಪಟ್ಟ ಗುಹೆಯ ಬಾಗಿಲುಗಳು ತೆರೆಯಿತು.
(ಬುಖಾರಿ) -------------------------------------------------------------
عن أبي أمامة بن ثعلبة الحارثي رضي الله عنه  أن رسول الله صلى الله عليه وسلم ـ قال: من اقتطع حقّ مسلم بيمينه، حرم الله عليه الجنة، وأوجب له النّار، قالوا: وإن كان شيئا يسيرا؟، قال: وإن كان قضيبا من أراك.
 (مسلم )
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ಆಣೆ ಹಾಕಿ ಇನ್ನೊಬ್ಬನ ಹಖ್ಖನ್ನು ಯಾರು ಕಸಿಯುವನೋ ಅವನಿಗೆ ನರಕ ಕಡ್ಡಾಯವಾಗಿದೆ.
ಆವಾಗ ಸ್ವಹಾಬತ್ ಕೇಳಿದರು,ಅದು ಅತೀ ಚಿಕ್ಕದಾದರೂ ಅವನಿಗೆ ನಕರ ಕಡ್ಡಾಯವೇ?
ಹೌದು!ಅದು ಹಲ್ಲುಜ್ಜುವ ಪುಟ್ಟ ಮರದ ತುಂಡಾದರೂ ಸರಿ ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.
(ಮುಸ್ಲಿಂ)
-------------------------------------------------------------
ಕುಟುಂಬದ ಜವಬ್ದಾರಿ ಹೊತ್ತ ಕಾರ್ಮಿಕ ನಮ್ಮ ಮನೆಯ ಕೂಲಿ ಕೆಲಸ ಮಾಡಿ ಬರೀ ಕೈಯಲ್ಲಿ ಆತ ಮರಳುವುದಾದರೆ ಹಾಯಾಗಿ ಆ ಮನೆಯಲ್ಲಿ ವಾಸಿಸಬಹುದೆಂದು ಸ್ವಪ್ನದಲ್ಲೂ ಕೂಡಾ ಯಾರು ಭಾವಿಸಬೇಡಿ.
ಆತನ ಮತ್ತು ಕುಟುಂಬದ ಶಾಪವೇ ಧಾರಾಳ ಸಾಕು.




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 08

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --8


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  7:*_
*ಮನೆಗೆ ಪ್ರವೇಶಿಸುವಾಗ ನೆಬಿ ತಂಙ್ಙಳ ಸುನ್ನತ್ ಪಾಲಿಸಿ*

ದೈನಂದಿನ ಚಟುವಟಿಕೆಗಾಗಿ ಹೊರಗಡೆ ಹೋಗಿ ಬರುವ ವ್ಯಕ್ತಿ ಹಲವಾರು ಟೆಂಕ್ಷನ್ ಗಳನ್ನು ಹೊತ್ತು ಮನೆ ಕಡೆಗೆ ಬರುತ್ತಾನೆ.ತುಸು ನೆಮ್ಮದಿ ಆತ ಮನೆಯಲ್ಲಿ ಬಯಸುತ್ತಾನೆ.
ದಿನದ ತನ್ನ ವ್ಯವಹಾರದಲ್ಲಿ ನಷ್ಟವಾಗಿ,ದುಡಿದ ದುಡಿಮೆಯ ಕೂಲಿ ಲಭಿಸದ ಕಾರಣದಿಂದಾಗಿ,ತನ್ನ ಮಾಲಿಕನ ಬೈಗುಳಗಳನ್ನು ಕೇಳಿ, ಹೀಗೆ ನೂರಾರು ಒತ್ತಡಗಳು ಎಲ್ಲರಲ್ಲೂ ಇರುತ್ತದೆ.
ಇದಕ್ಕೆಲ್ಲಾ ಕಡಿವಾಣ ಹಾಕಲು ಮನುಷ್ಯನು ಕಂಡುಕೊಳ್ಳುವ ಸಂತೋಷದ ತಾಣ ಮನೆಯಾಗಿದೆ.
ಮನೆಗೆ ಅರಬಿಯಲ್ಲಿ ಸಕನ್,ಮಸ್ಕನ್ ಮುಂತಾದ ಹೆಸರುಗಳು ಹೇಳಲ್ಪಡುತ್ತದೆ.
ಸಕನ್ ಅಂದರೆ ಸಮಾಧಾನ ಕೇಂದ್ರ ಎಂದು ಬೇಕಾದರೆ ಅರ್ಥ ನೀಡಬಹುದು.
ತನ್ನ ಮನೆಯಲ್ಲಿ ಕುಟುಂಬಸ್ಥರ ಜತೆ ಸೇರಿಕೊಂಡಾಗ ತನಗೆ ಲಭಿಸುವ ಸಮಾಧಾನಕ್ಕಾಗಿಯೇ ಈ ಹೆಸರು ಬಂದಿದೆ.

ನಮ್ಮ ಮನೆಗೆ ನಾವು ಪ್ರವೇಶಿಸುವಾಗ ಹಲವಾರು ನಿರ್ದೇಶಗಳನ್ನು ಇಸ್ಲಾಮ್ ನೀಡಿವೆ.
----------------------------------------------------------
ಪ್ರಖ್ಯಾತರಾದ ಇಮಾಮ್ ನವವೀ(ರ)ರವರಿಗೆ ಮುಸ್ಲಿಮನ ದಿನಚರಿ ಕಲಿಸುವ ಒಂದು ಗ್ರಂಥವಿದೆ.ಅಲ್ ಅದ್ಸ್'ಕಾರ್ ಎಂದಾಗಿದೆ ಪ್ರಸ್ತುತ ಗ್ರಂಥದ ಹೆಸರು.ಅದರಲ್ಲಿ ಒಂದು ಅಧ್ಯಾಯ ಈ ರೀತಿ ಓದಬಹುದಾಗಿದೆ.
باب ما يقول اذا دخل بيته
ಮನೆಗೆ ಪ್ರವೇಶಿಸುವಾಗ ಹೇಳಬೇಕಾದ ಸಂಗತಿಗಳು.

ನಂತರ ಏನೆಲ್ಲಾ ಹೇಳಬೇಕೆಂದು ಅದರಲ್ಲಿ ವಿವರಿಸುತ್ತಾರೆ. ಅದನ್ನು ಇಲ್ಲಿ ನೀಡುತ್ತಿದ್ದೇನೆ.

يُستحب أن يقول: باسم الله، وأن يكثرَ من ذكر الله تعالى: وأن يسلّمَ سواءٌ كان في البيت آدميّ أم لا، لقول الله تعالى: فَإِذَا دَخَلْتُمْ بُيُوتًا فَسَلِّمُوا عَلَى أَنْفُسِكُمْ تَحِيَّةً مِنْ عِنْدِ اللَّهِ مُبَارَكَةً طَيِّبَةً
1.ಮನೆಗೆ ಪ್ರವೇಶಿಸುವಾಗ ಬಿಸ್ಮಿ ಹೇಳಬೇಕು.
2.ದ್ಸಿಕ್ರ್ ಹೇಳುತ್ತಿರಬೇಕು.
3.ಒಳಗೆ ಕಾಲಿಡುವಾಗ ಸಲಾಮ್ ಹೇಳಬೇಕು.(ಜನರು ಇದ್ದರೂ ಇಲ್ಲದಿದ್ದರೂ ಸಲಾಮ್ ಹೇಳಬೇಕು)
 "ನೀವು ಮನೆಯೊಳಗೆ ಪ್ರವೇಶಿಸುವಾಗ ಸಲಾಮ್ ಹೇಳಿ"ಎಂದು ಅಲ್ಲಾಹನು ಹೇಳಿದ್ದಾನೆ.
ಇದೆಲ್ಲವೂ ಸುನ್ನತ್ ಅಗಿದೆ.

روينا في "كتاب الترمذي"عن أنس رضي الله عنه، قال: قال لي رسول الله صلى الله عليه وسلم: "يا بُنَيَّ! إذَا دَخَلْتَ على أهْلِكَ فَسَلِّمْ، يكن برَكَةً عَلَيْكَ وعلى أهْلِ بَيْتِكَ". قال الترمذي: حديث حسن صحيح
ಅನಸ್ (ರ)ರಿಂದ ಇಮಾಮ್ ತುರ್ಮುದ್ಸೀ ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಇದೆ.
ನನ್ನೊಂದಿಗೆ ಪ್ರವಾದೀ ವರ್ಯರು ಹೇಳಿದರು,
ಓ ಅನಸ್! ನೀನು ಮನೆಯೊಳಗೆ ಪ್ರವೇಶಿಸುವಾಗ ಸಲಾಮ್ ಹೇಳು.ಅದು ನಿನಗೆ ಮತ್ತು ಮನೆಯವರಿಗೆ ಬರಕತ್ ನೀಡುತ್ತದೆ.(ತುರ್ಮುದ್ಸೀ)
----------------------------------------------------------
131- وروينا في "سنن أبي داود" عن أبي مالك الأشعري رضي الله عنه، قال: قال رسول الله -صلى الله عليه وسلم: "إذا وَلَجَ الرَّجُلُ بَيْتَهُ فَلْيَقُلِ: اللَّهُمَّ إِني أسألُكَ خَيْرَ المَوْلِجِ، وَخَيْرَ المَخْرَجِ، باسْمِ اللَّهِ وَلجْنا، وباسْمِ اللَّهِ خَرَجْنا، وَعَلى اللَّهِ رَبِّنا تَوََكَّلْنا؛ ثُمَّ ليُسَلِّمْ على أهْلِهِ".
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.ಒಬ್ಬ ಮನೆಯೊಳಗೆ ಪ್ರವೇಶಿಸುವಾಗ ಈ ರೀತಿ ಹೇಳಲಿ,
"ಅಲ್ಲಾಹುಮ್ಮ ಇನ್ನೀ ಅಸ್'ಹಲುಕ ಕೈರಲ್ ಮೌಲಿಜಿ ವಖೈರಲ್ ಮಖ್'ರಜಿ ಬಿಸ್ಮಿಲ್ಲಾಹಿ ವಲಜ್'ನಾ ವಬಿಸ್ಮಿಲ್ಲಾಹಿ ಖರಜ್'ನಾ 
ವಅಲಲ್ಲಾಹಿ ರಬ್ಬಿನಾ ತವಕ್ಕಲ್'ನಾ"
ನಂತರ ಮನೆಯವರಿಗೆ ಸಲಾಮ್ ಹೇಳಲಿ.
(ವರದಿ: ಅಬೂದಾವೂದ್ )
----------------------------------------------------------
 عن أبي أُمامةَ الباهلي رضي الله عنه، رَجُلٌ دَخَلَ بَيْتَهُ بِسلامٍ، فَهُوَ ضَامنٌ على اللَّهِ سُبْحانَهُ وتَعَالى". حديث حسن. رواه أبو داود 
ಸಲಾಮ್ ಹೇಳುತ್ತಾ ಮನೆಯೊಳಗೆ ಪ್ರವೇಶಿಸಿದ ವ್ಯಕ್ತಿಯು ಅಲ್ಲಾಹನ ಸಂರಕ್ಷಣೆಯಲ್ಲಿರುತ್ತಾನೆ.
(ವರದಿ : ಅಬೂದಾವೂದ್)
----------------------------------------------------------
 عن جابر بن عبد الله رضي الله عنهما، قال: سمعت النبي صلى الله عليه وسلم يقول: "إذَا دَخَلَ الرجلُ بيتهُ، فَذَكَرَ اللَّهَ تَعالى عنْدَ دُخُولِهِ، وَعِنْدَ طَعامِهِ، قالَ الشِّيْطانُ: لا مَبِيتَ لَكُمْ وَلا عَشاءَ؛ وَإذا دَخَلَ فَلَمْ يَذْكُرِ اللَّهَ تَعالى عنْدَ دُخُولِه، قالَ الشيطانُ: أدْرَكْتُمُ المَبِيتَ، وَإذا لَمْ يَذْكُرِ اللَّهَ تَعالى عِنْدَ طَعامِهِ، قالَ: أدْرَكْتُمُ المَبِيتَ والعَشَاء" رواه مسلم

ಜಾಬಿರ್ (ರ)ವರದಿ,ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಒಬ್ಬ ಮನೆಯೊಳಗೆ ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವ ವೇಳೆ ದ್ಸಿಕ್ರ್ ಹೇಳಿದ್ದಲ್ಲಿ ಪಿಶಾಚಿ ಹೇಳುವನು"ಈ ಮನೆಯಲ್ಲಿ ಇಂದು ನಮಗೆ ಆಹಾರವಿಲ್ಲ,ತಂಗಲು ಸಾಧ್ಯವೂ ಇಲ್ಲ".
ಮನೆ ಪ್ರವೇಶಿಸುವಾಗ ಮತ್ತು ಆಹಾರದ ವೇ ದ್ಸಿಕ್ರ್ ಹೇಳದಿದ್ದಲ್ಲಿ ಪಿಶಾಚಿ ಹೇಳುವನು"ಇಂದು ನಮಗೆ ಆಹಾರವಿದೆ.ತಂಗುವ ವ್ಯವಸ್ಥೆಯಿದೆ".
(ಇಮಾಮ್ ಮುಸ್ಲಿಂ ವರದಿ)
----------------------------------------------------------
 وروينا في "موطأ مالك رحمه الله" أنه بلغه أنه يستحبّ إذا دخل بيتاً غير مسكونٍ أن يقولُ: السلامُ عَلَيْنا وَعلى عِبادِ اللَّهِ الصالحين؛ والله أعلم.
ಮನೆಯೊಳಗೆ ಪ್ರವೇಶಿಸುವಾಗ ಯಾರೂ ಇಲ್ಲದಿದ್ದರೆ "ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸ್ವಾಲಿಹೀನ್" ಎಂದು ಹೇಳಬೇಕೆಂದು ಇಮಾಮ್ ಮಾಲಿಕ್(ರ)ತನ್ನ "ಮುವತ್ತದಲ್ಲಿ" ವರದಿ ಮಾಡಿದ್ದಾರೆ.
----------------------------------------------------------
عن سهل بن سعد الساعديّ قال: شكا رجل إلى رسول الله صلى الله عليه وسلم الفقر وضيق المعيشة، فقال له رسول الله صلى الله عليه وسلم: إذا دخلتَ البيت فسلِّمْ إن كان فيه أحد، وإن لم يكن فيه أحد فسلم عليّ، واقرأ: قُلْ هُوَ الله أَحَدٌ مرة واحدة ـ ففعل الرجل فأدرّ الله عليه الرزق، حتى أفاض على جيرانه(تفسير الرازي)

ಮನೆಯಲ್ಲಿ ಬಹಳ ತೊಂದರೆ ಮತ್ತು ದಾರಿದ್ರ್ಯವಿದೆ ಎಂದು ಅಳಲು ತೋಡಿಕೊಂಡ ಸ್ವಹಾಬಿಯೊಬ್ಬರಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು "ನೀನು ಮನೆಗೆ ಪ್ರವೇಶಿಸುವಾಗ ಅಲ್ಲಿ ಇದ್ದವರ ಮೇಲೆ ಸಲಾಮ್ ಹೇಳು.
ಯಾರೂ ಇಲ್ಲದಿದ್ದರೆ ನನ್ನ ಮೇಲೆ ಸಲಾಮ್ ಹೇಳು
(ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್)
ನಂತರ ನೀನು ಒಂದು ಸಲ ಸೂರತುಲ್ ಇಖ್ಲಾಸ್ ಪಾರಾಯಣ ಮಾಡು" ಎಂದು ಹೇಳಿಕೊಟ್ಟರು.ಆ ವ್ಯಕ್ತಿ ಆ ರೀತಿ ಹೇಳತೊಡಗಿದರು.
ಅವರ ದಾರಿದ್ರ ಮತ್ತು ತೊಂದರೆಗಳು ನೀಗಿ ಅವರು ತನ್ನ ಸಂಪತ್ತಿನಿಂದ ನೆರೆಕರೆಯ ಮನೆಯವರಿಗೆ ದಾನ ಮಾಡಿದರು
(ಇಮಾಮ್ ರಾಝಿಯ ತಫ್ಸೀರುಲ್ ಕಬೀರ್ )



ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........

ನಿಮ್ಮ ಮನೆಯಲ್ಲಿ ಸಂತೋಷ ಬೇಕೇ? 40 ಸೂತ್ರಗಳು ಪಾಲಿಸಿ. ಭಾಗ 07

*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
  ಭಾಗ --7


📝 _ಮುನೀರ್ ಸಖಾಫಿ ಸಾಲೆತ್ತೂರು_

_*ಸೂತ್ರ  6:*_
*ನೆರೆಕರೆಯವರು ಉತ್ತಮರಾಗಿರಲಿ*


ನಾವು ಒಂದು ಸ್ಥಳ ಅಥವಾ ಮನೆ ಖರೀದಿಸುವಾಗ ಅಲ್ಲಿನ ನೆರೆಕರೆಯವರ ಬಗ್ಗೆ ಮೊದಲು ತಿಳಿದಿರಬೇಕಾದುದು ಅತೀ ಅಗತ್ಯವಾಗಿದೆ.
ಲಕ್ಷಾಂತರ ರೂ ಖರ್ಚು ಮಾಡಿ ಮನೆ ಕಟ್ಟಿ ಅದರಲ್ಲಿ ವಾಸ ಯೋಗ್ಯವಾಗಬೇಕಾದರೆ  ಆ ಮನೆಯ ನೆರೆಕರೆಯವರು ಉತ್ತಮ ಜನರಾಗದಿದ್ದಲ್ಲಿ ಈ ದುಖಃ ಒಮ್ಮೆಯೂ ಮಾಯವಾಗುವುದಿಲ್ಲ.

ಚಿಕ್ಕ ಪುಟ್ಟ ವಿಷಯಗಳಿಗೆ ತಕರಾರೆತ್ತುವ ನೆರೆಕರೆಯವರಾದರೆ ನಮ್ಮ ಮನೆ ಎಷ್ಟೇ ದೊಡ್ಡದಿದ್ದರೂ ನೆಮ್ಮದಿ ಇರಲಾರದು.

ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಕಟ್ಟುವ ಮೊದಲು ನೆರೆಕರೆಯವರ ಬಗ್ಗೆ ತಿಳಿದುಕೊಂಡರೆ ಆ ಮಹಾ ವಿಪತ್ತನ್ನು ತಡೆಯಬಹುದು.

ಇಮಾಮ್ ಬುಖಾರಿ ವರದಿ ಮಾಡಿದ ಹದೀಸ್ ನೋಡಿ,
عَنْ نَافِعِ بْنِ عَبْدِ الْحَارِثِ رضي الله عنه قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ :مِنْ سَعَادَةِ الْمَرْءِ الْمَسْكَنُ الْوَاسِعُ, والْجَارُ الصَّالِحُ ، وَالْمَرْكَبُ الْهَنِيءُ .
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಒಬ್ಬನ ವಿಜಯದ ಲಕ್ಷಣಗಳು ಮೂರಾಗಿವೆ.
1.ವಾಸಯೋಗ್ಯವಾದ ಮನೆ.
2.ಉತ್ತಮ ನೆರೆಕರೆಯವ.
3.ಉತ್ತಮ ವಾಹನ.
(ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ )
--------------------------------------------------------
ಇಮಾಮ್ ಬೈಹಖೀ ವರದಿ ಮಾಡಿದ ಒಂದು ಹದೀಸಲ್ಲಿ ಈ ರೀತಿ ಇದೆ,
وأربع من الشقاء فاما الشقاء  فالزوجة السوء ، والجار السوء ، والمركب السوء ، وضيق المسكن (شعب الايمان)
ನಾಲ್ಕು ಕಾರ್ಯಗಳು ಸೋಲಿನ ಲಕ್ಷಣಗಳಾಗಿವೆ.
1.ಕೆಟ್ಟ ಪತ್ನಿ
2.ಕೆಟ್ಟ ನೆರೆಕರೆಯವ
3.ಕೆಟ್ಟ ವಾಹನ
4.ಕಿರಿದಾದ ಮನೆ
(ವರದಿ ಇಮಾಮ್ ಬೈಹಖಿ ಶುಹ್'ಬುಲ್ ಈಮಾನ್  9556 ರಲ್ಲಿ)
--------------------------------------------------------
ಮನೆ ವಿಶಾಲವಾಗಿರಬೇಕು.
ಅಂದರೆ ಪುಟ್ಟ ಫ್ಯಾಮಿಲಿಗೆ 4000 ಸ್ಕ್ವಾರ್ ಫೀಟ್ ನ ಮನೆ ಬೇಕೆಂದಲ್ಲ.
ತನಗೆ ಮತ್ತು ತನ್ನ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಬೇಕಾದ ವ್ಯವಸ್ಥೆ ಮನೆಯಲ್ಲಿರಬೇಕು.
ನಾಲ್ಕು ಜನ ಸೇರಿದರೆ ಕುಳಿತುಕೊಳ್ಳಲು ಸ್ಥಳ ಬೇಕು.
ಅವರು ತಂಗುವುದಾದರೆ ಅವರಿಗೆ ಮಲಗಳು ಸ್ಥಳ ಬೇಕು.ಆ ರೀತಿಯ ಪ್ಲಾನ್ ನೊಂದಿಗೆ ಮನೆ ನಿರ್ಮಿಸಬೇಕು ಎಂದಾಗಿದೆ ಪ್ರಸ್ತುತ ಹದೀಸ್ ನ ವ್ಯಾಖ್ಯಾನ.

ಪ್ರಖ್ಯಾತ ತತ್ವಜ್ಞಾನಿಯಾಗಿದ್ದ ಲುಕ್ಮಾನ್ ಅಲೈಹಿಸ್ಸಲಾಮ್ ತನ್ನ ಪುತ್ರನೊಂದಿಗೆ ಹೇಳಿದ ಒಂದು ವಸಿಯ್ಯತ್ ಈ ರೀತಿ ಇದೆ,
عن عمران بن سليمان رضي الله عنه قال بلغني ان لقمان عليه السلام قال لابنه يا بنى قد حملت الحجارة والحديد والحمل الثقيل فلم اجد شيئا أثقل قط من جار السوء يا بنى انى قد ذقت المر كله فلم أذق شيئا قط أمر من الفقر (شعب الايمان)
ಓ ಪ್ರೀತಿಯ ಮಗನೇ!
ನಾನು ಕಲ್ಲು ಮತ್ತು ಕಬ್ಬಿಣದಂತಹ ಬಾರದ ವಸ್ತುಗಳನ್ನು ಹೊತ್ತು ನಡೆದಿದ್ದೇನೆ.ಆದರೆ ಕೆಟ್ಟ ನೆರೆಕರೆಯವನನ್ನು ಹೊತ್ತು ನಡೆಯಲು ನನ್ನಿಂದ ಸಾಧ್ಯವಿಲ್ಲ.
ನಾನು ಹಲವಾರು "ಕಹಿ"ಯನ್ನು ಅನುಭವಿಸಿದ್ದೇನೆ.
ದಾರಿದ್ರ್ಯವೆಂಬ "ಕಹಿ" ಅನುಭವಿಸಲು ನನ್ನಿಂದ ಸಾಧ್ಯವಿಲ್ಲ.
(ಶುಹ್'ಬುಲ್ ಈಮಾನ್)
--------------------------------------------------------
ನಾವು ಎಷ್ಟೇ ಒಳ್ಳೆಯತನ ಮಾಡಿದರೂ  ನೆರೆಕರೆಯವರು ಕೆಟ್ಟವರಾದರೆ ಆ ಮನೆಯಲ್ಲಿ ಒಮ್ಮೆಯೂ ನೆಮ್ಮದಿ ಇರಲಾರದು.

ಆದುದರಿಂದ ನೆಮ್ಮದಿಯ ವಾತಾವರಣ ನಮ್ಮ ಮನೆ ಪರಿಸರದಲ್ಲಿ ಬೇಕೆಂದಾದರೆ ನೆರೆಕರೆಯವರು ಹೇಗಿದ್ದಾರೆಂದು ಮೊದಲೇ ಆಲೋಚಿಸಿ.
--------------------------------------------------------




ಎಲ್ಲರಿಗೂ ಶೇರ್ ಮಾಡಿ

ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)

ಮುಂದುವರಿಯುವುದು........