🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣6⃣
➖➖➖➖➖➖➖➖➖
ನಡೆದುಕೊಂಡು ಹೋಗುವ ಮಸೂದ್'ನನ್ನು ಕಂಡರು⤵
ಯುವಕನನ್ನು ನೋಡಿದ ಅವರು ಕೂಡಲೇ ಜೊತೆಗಿರುವವರನ್ನು ಕರೆದು ಹೇಳಿದರು ಹೇಯ್.. "ಅಲ್ಲಿ ನೋಡಿ ಅದು ನಮ್ಮ *ಯಮಾಮದ* ರಾಜನ ಮಗನಾದ ಮಸೂದಲ್ಲವೆ ಹೋಗುತ್ತಿರುವುದು??..!!"
ಆಗ ಜೊತೆಗಿದ್ದ ಇನ್ನೊಬ್ಬ ಹೇಳಿದ ಒಮ್ಮೆ ಸುಮ್ಮನಿರುತ್ತೀರಾ!!
ಸಾವಿರಾರು ಕುದುರೆಗಳು, ಒಂಟೆಗಳು, ಪಿತ್ರಾರ್ಜಿತವಾಗಿ ಲಭಿಸಿದ ಮನುಷ್ಯನಾಗಿದ್ದಾನೆ ಮಸೂದ್, ಅವರು ಹೀಗೆ ಒಂಟಿಯಾಗಿ ನಡೆದು ಹೋಗುವುದಾ?!!!! ಸಾಧ್ಯವೇ ಇಲ್ಲ..
ಆಗ ಮತ್ತೊಬ್ಬ ಹೇಳಿದ ಅಲ್ಲಾ.. ಅದು ಮಸೂದೇ ಆಗಿದ್ದಾರೆ..!
ನಾವು ಅವರನ್ನೊಮ್ಮೆ ಕರೆದು ಮಾತನಾಡೋಣ..
ಬಳಿಕ ಜೊತೆಗಿದ್ದವರಲ್ಲಿ ಒಬ್ಬ ಜೋರಾಗಿ ಮಸೂದ್.. ಹೇ ಮಸೂದ್ ಎಂದು ಕೂಗಿ ಕರೆದನು..
ತನ್ನ ಹೆಸರು ಕರೆಯುವುದನ್ನು ಗಮನಿಸಿದ *ಮಸೂದ್ ಇಬ್ನು ಮುಸೈಲಿಮ* ಆಶ್ಚರ್ಯದಿಂದ ಒಮ್ಮೆಲೆ ತಿರುಗಿ ನೋಡಿದ..
ಯಾರಾಗಿರಬಹುದು ನನ್ನನ್ನು ಕರೆಯುತ್ತಿರುವುದು? ಎಂದು ಚಿಂತಿಸುತ್ತಿರುವಷ್ಟರಲ್ಲಿ.. ಗುಂಪಿನವರು ಹತ್ತಿರಕ್ಕೆ ತಲುಪಿದರು..
*ಮಸೂದ್:* ಹೋ.. ಅದು ಸರಿ! ನೀವಾ..!?! ನೀವೆಲ್ಲಿಗೆ ಹೋಗುತ್ತಿದ್ದೀರಿ??
*ಅದರಲ್ಲಿದ್ದ ಓರ್ವ:* ನಾವು ಅಹುವಾಸಿಯಿಂದ ವ್ಯಾಪಾರವನ್ನು ಮುಗಿಸಿಕೊಂಡು ಬಾಕಿ ಉಳಿದ ಸರಕು ಸಾಮಾಗ್ರಿಗಳೊಂದಿಗೆ ಬಗ್ದಾದಿಗೆ ಹೋಗುತ್ತಿರುವುದು...
ಜೊತೆಗಿರುವ ಇನ್ನೋರ್ವ ಹೇಳಿದನು, ಅಲ್ಲ ಮಸೂದ್ ಆರು ತಿಂಗಳಿನಿಂದ ಈಚೆಗೆ ನಿನ್ನನ್ನು ವ್ಯಾಪಾರ ಸಂತೆಯಲ್ಲಿ ನಾವು ಕಾಣಲಿಲ್ಲ.. ನಿಜವಾಗಿ ನೀನು ಇಷ್ಟು ದಿನಗಳ ಕಾಲ ಎಲ್ಲಿಗೆ ಹೋಗಿದ್ದೆ?!
*ಮಸೂದ್:* ತನ್ನ ಜೀವನದಲ್ಲಿ ನಡೆದ ಅವಿಸ್ಮರಣೀಯವಾದ ಮದುವೆಯ ಬಗ್ಗೆ ಸವಿಸ್ತಾರವಾಗಿ ಅವರಿಗೆ ವಿವರಿಸಿದನು..
ನಂತರ ಸಂಘದವರು ಹೇಳಿದರು, ಮಸೂದ್ ನೀನಿಲ್ಲದೆ ಸಂತೆಯಲ್ಲಿ ಸ್ವಲ್ಪವೂ ಏಳಿಗೆಯಿಲ್ಲ.. ಸರಿ..
ನೀನು ಈಗ ಎಲ್ಲಿಗೆ ಹೋಗುತ್ತಿರುವೆ??
*ಮಸೂದ್:* ನಾನು ಯಮಾಮಕ್ಕೆ ಹೋಗುತ್ತಿರುವೆನು...
*ಅವರು:* ಯಮಾಮಕ್ಕಾ?
ನಾವೆಲ್ಲರೂ ಸೇರಿ ಜೊತೆಯಾಗಿ ಹೋಗೋಣ! ಮೊದಲು ನೀನು ನಮ್ಮ ಜೊತೆ ಬಾಗ್ದಾದಿಗೆ ಬರಬೇಕು..
*ಮಸೂದ್:* ಅದು ನನ್ನಿಂದ ಸದ್ಯಕ್ಕೆ ನಡೆಯದು.. ನನಗೆ ಈಗಲೇ ಊರಿಗೆ ಹೋಗಲೇಬೇಕು.
ಆಗ ಸ್ನೇಹಿತರೆಲ್ಲರೂ ಒಂಟೆಯ ಮೇಲೆಯಿಂದ ಕೆಳಗಿಳಿದು ಮಸೂದ್'ನನ್ನು ಅಪ್ಪಿ ಹಿಡಿದು ಹೇಳಿದರು "ನೀನು ನಮ್ಮೊಂದಿಗೆ ಬಗ್ದಾದಿಗೆ ಬಾ, ನಮಗೆ ಅಲ್ಲಿಗೆ ಹೋಗಿ ಪಾರ್ಟಿ ಮಾಡಲಿಕ್ಕಿದೆ. ಅಲ್ಲಿ ಸುತ್ತಾಡಿ, ಕುಣಿದು ಆನಂದಿಸಿಕೊಂಡು ಊರ ಕಡೆಗೆ ಹೋಗೋಣ.." ನೀನು ಈ ಕಡೆಗೆ ಬಾ ಎಂದು ಒತ್ತಾಯದಿಂದ ಕೈ ಹಿಡಿದು ಎಳೆದು ಒಂಟೆಯ ಮೇಲೇರಿಸಿದರು.
ಹೀಗೆ ಮಸೂದ್ ಅವರ ಪ್ರೀತಿ ತುಂಬಿದ ಮಾತಿನ ಒತ್ತಾಯಕ್ಕೆ ಮಣಿದು ಆ ಸಂಘದೊಂದಿಗೆ ಸೇರಿ ಹಾಡುತ್ತಾ ಕೇಕೆ ಹಾಕಿ ಕುಣಿಯುತ್ತಾ ದಿಜಿಲದ ತೀರದಿಂದ ಬಗ್ದಾದಿನ ಕಡೆಗೆ ಯಾತ್ರೆ ಮುಂದುವರಿಸಿದರು.. ⤵
ಮುಂದುವರಿಯುವುದು..
✍ *ಗಫೂರ್ ಬಾಯಾರ್*
+974 6669 3010
*ಸಹಾಯ: ಅಕ್ಬರ್ ಪಿ.ಎ.*
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment