Tuesday, September 26, 2017

♻ ಕಾಂತಪುರಂ ಎ ಪಿ ಉಸ್ತಾದರನ್ನು ವಿಮರ್ಶಿಸುವವರ ಹತ್ತಿರ ಪ್ರೀತಿ ಪೂರ್ವಕ...



💠 ಕಾಂತಪುರಂ ಎಂಬ ಆ ಮಹಾ ಪ್ರಸ್ಥಾನವನ್ನು ಕುಗ್ಗಿಸಲೋ, ನಾಶ ಮಾಡಲೋ, ಯಾರಿಂದಲೂ ಸಾದ್ಯವಿಲ್ಲ. ಅದಕ್ಕೆ ಕಾಲವೇ ಸಾಕ್ಷಿಯಾಗಿದೆ.

ಒಂದು ಪಂಡಿತರನ್ನು ಅಪಹಾಸ್ಯ ಮಾಡಲು, ಹಿಯಾಲಿಸಲು ಮಾತ್ರ ನೀವು ಅಷ್ಟಕ್ಕೂ ನೀಚರಾದರಲ್ಲರೇ⁉....

ಒಂದು ಪಂಡಿತರ ಸುಳ್ಳು ಆರೋಪ ಹೊರಿಸಲು ನಿಮಗೆ ಕಿಚ್ಚಿಂತೂ ನಾಚಿಕೆ ಕೂಡ ಇಲ್ಲವಲ್ಲವೇ....

ನಿಮಗೆ ಕಾಂತಪುರಂ ಉಸ್ತಾದರ ಕುರಿತು ಏನು ಗೊತ್ತು?

ಕಾಂತಪುರಂ ಉಸ್ತಾದ್ ಯಾರೆಂದು ಇಡೀ ಜಗತ್ತಿಗೆ ಗೊತ್ತಿದೆ.
ಕಾರಣ ಕಾಲ ಕಂಡಿರುವ  ಪಂಡಿತ ಮಹಾನ್ ತೇಜಸ್ಸ್ ಆಗಿದ್ದಾರೆ ಕಾಂತಪುರಂ ಉಸ್ತಾದರು.

ಕಾಂತಪುರಂ ಉಸ್ತಾದ್ ಲೋಕದಲ್ಲಿ ಮಾಡಿದ ಉತ್ತಮ ಕಾರ್ಯದ ಒಂದಂಶ ನೀವು ನಿಮ್ಮ ಜೀವನದಲ್ಲಿ ಮಾಡಿರಲಿಕ್ಕಿಲ್ಲ.. ಮಾಡಲು ನಿಮ್ಮಿಂದ ಸಾಧ್ಯವು ಇಲ್ಲ..

 ಮಾತ್ರವಲ್ಲ ನೀವು ಅವರು ಮಾಡಿದಂತಹ ಉತ್ತಮ ಕೆಲಸವನ್ನು  ಚಿಂತಿಸಲು ಕೂಡ ನಿಮ್ಮಿಂದ ಸಾಧ್ಯವಿಲ್ಲ ....

ಕಾಂತಪುರಂ ಉಸ್ತಾದ್ ಓದಿ ಕಲಿತ ಸಾವಿರಾರು ಕಿತಾಬುಗಳನ್ನು ನೀವು ಕಂಡಿರಲಿಕ್ಕಿಲ್ಲ.
ಸರಿಸುಮಾರು ಐದು ದಶಕಗಳಿಂದ ವಿಶ್ವ ಮುಸ್ಲಿಮರ ಎರಡನೆಯ ಗ್ರಂಥವಾದ ಬುಖಾರಿ ಕಿತಾಬನ್ನು ಹಲವು ಪಂಡಿತರಿಗೆ ಬೋಧಿಸುತ್ತಿದ್ದಾರೆ..

ಇಂತಹ ಒಬ್ಬ ಪಂಡಿತರನ್ನು ಅಪಹಾಸ್ಯ ಮಾಡಿಯಾದರೂ ನಿಮಗೆ ಏನಾದರು ಲಾಭ ಸಿಕ್ಕಿತೇ⁉

ಕಾಂತಪುರಂ ಉಸ್ತಾದರನ್ನು ನಾಶ  ಮಾಡಲು ಇಂದಿನವರೆಗೆ ಯಾರಿಗಾದರೂ ಸಾದ್ಯವಾಗಿದೆಯೇ?
ಇಲ್ಲವೇ ಇಲ್ಲ..
ಉತ್ತರ ಬರೀ ಶೂನ್ಯ..

ಇನ್ನು ಯಾರಿಗಾದರು ಸಾದ್ಯವಿದೆಯಾ? ಇಲ್ಲ ಒಮ್ಮೆಯೂ ಸಾದ್ಯವಿಲ್ಲ....

ಕಾರಣ ಸಮುದ್ರದ ಅಲೆಗಳಂತೆ  ಬೀಸುವ ಅದೆಷ್ಟೋ ದೊಡ್ಡ ದೊಡ್ಡ ಆರೋಪಗಳನ್ನೂ, ಆಕ್ಷೇಪಗಳನ್ನೂ, ಅಪಹಾಸ್ಯಗಳನ್ನೂ, ಈಗ ತಾನೇ ಬಿರಿದಂತಹ ಪುಷ್ಪಗಳ ಹಾಗೆ, ಮಂದಸ್ಮಿತ ಭರಿತವಾದ ನಗುಮುಖದಿಂದ  ಸ್ವೀಕರಿಸುವ ಆ ಮಹಾ ಮನುಷ್ಯನನ್ನು ಹೇಗೆ ತಾನೇ ನಾಶ ಮಾಡಲು ಸಾದ್ಯ....❓

ಅಲ್ಲಾಹು ನಮ್ಮ ಶೈಖುನಾರಿಗೆ ನೀ ದೀಘಾಯುಷ್ಯ ನೀಡಿ ಅನುಗ್ರಹಿಸು.... ಆಮೀನ್.

ಅಕ್ರಮಿಗಳಿಂದ ಉಸ್ತಾದರನ್ನು ಸಂರಕ್ಷಿಸು ಅಲ್ಲಾಹ್.. ಆಮೀನ್.

ಬುದ್ದಿ ಇರುವವರನ್ನು ಅಪಹಾಸ್ಯ ಮಾಡುವವರು  ನಿಜವಾಗಿಯೂ ಬುದ್ದಿಹೀನರಲ್ಲವೇ..,❓

ನೀವು ನಿಮ್ಮ ಜೀವನದಲ್ಲಿ  ಮಾಡಿ, ಕೂಡಿಟ್ಟಂತಹ  ಅನಾವಶ್ಯಕ ಚಟುವಟಿಕೆಗಳ ಕುರಿತು ನೀವು ಎಂದಾದರೂ ಚಿಂತಿಸಿದ್ದೀರಾ❓

ಭೂಲೋಕದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಷಯ' ಈ ಜೀವನ ಶಾಶ್ವತವಲ್ಲ, ಶಾಶ್ವತ ಜೀವನ ಪರಲೋಕದಲ್ಲಾಗಿದೆ' ಎಂಬುವುದು..
ಆ ಪರಲೋಕ ಜೀವನಕ್ಕೆ ನಾನು ಏನನ್ನು ಮಾಡಿಟ್ಟಿದ್ದೇನೆ ಎಂಬುವುದನ್ನು ನೀನು ಚಿಂತಿಸಿದ್ದೀಯಾ❓
ಖಂಡಿತ ಇಲ್ಲ..
ನೀನು ಮಾಡಿದ್ದು ಒಂದೇ,
ವಿದ್ವಾಂಸರ ಹಸಿ ಮಾಂಸ ಭಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು.

ಚಿಂತಿಸು ಮನುಜಾ,
ನಿನ್ನ ಒಂದು  ಬೆರಳು ಇನ್ನೊಬ್ಬರನ್ನು ತೋರಿಸಿ
 ಅವರು ಕೆಟ್ಟವರೆಂದು ಹೇಳುವಾಗ ಬಾಕಿ ಮೂರು ಬೆರಳುಗಳು ನಿನ್ನನ್ನೇ ಹಾಸ್ಯಭಾವದಿಂದ ನೋಡಿಕೊಂಡು ನೀನು ಬರೀ ಕೆಟ್ಟವ ಎಂದು ತನ್ನ ಸ್ವಂತ ಮೂರು ಬೆರಳುಗಳು ಹೇಳುತ್ತಿರುತ್ತದೆ..
ಅದನ್ನು ಗಮನಿಸುವವನು ಬುದ್ಧಿವಂತ.
ಬುದ್ಧಿವಂತನು ಆಲಿಂರನ್ನು, ಅಥವಾ ಯಾರನ್ನೂ ಹೀಯಾಲಿಸುವ ಗೋಜಿಗೆ ಹೋಗಲಾರ...

ಆದರೆ ಅದು ತಿಳಿಯುವಂತಹ ವಿವೇಕತೆ ನಿನಗೆ ಇಲ್ಲವಾಯಿತೇ❓

ಇನ್ನೊಬ್ಬರ ಮೇಲೆ ಎಗರುವ ಮೊದಲು ಅದರ ಕನಿಷ್ಟ ಯೋಗ್ಯತೆ ನನಗೆ ಇದೆಯಾ? ಎಂದು ಮೆದುಳಿನಲ್ಲಿ ಬೆರಳಿಟ್ಟು ಚಿಂತಿಸುವುದು ಒಳ್ಳೆಯದು❗

ಅಂಗಾತವಾಗಿ ಮಲಗಿ ಮೇಲೆಕ್ಕೆ ಉಗುಳುವುದು ಜಾಣ ಬುದ್ದಿಯಾ?
 ಅಥವಾ
 ಹೀನ ಬುದ್ದಿಯೋ?

ಒಂದು ನಿಮಿಷ ಎದೆಗೆ ಕೈ ಇಟ್ಟು
ನೀವೊಮ್ಮೆ ಚಿಂತಿಸಿ....
ನಾನು ಕಾಂತಪುರ (ಉಸ್ತಾದ್) ರನ್ನು ಕಂಡಿಲ್ಲವಲ್ಲ...?
ಅವರು ನನ್ನನ್ನು ಅಪಹಾಸ್ಯ ಮಾಡಿಲ್ಲವಲ್ಲ...?
ಮತ್ತ್ಯಾಕೆ ನಾನು ಅವರ ಹಸಿ ಮಾಂಸ ಭಕ್ಷಿಸುತ್ತಿರಬೇಕು?

ಹೌದು...
ಉಸ್ತಾದರು ತನ್ನ ಜೀವನದಲ್ಲಿ ಇನ್ನೊಬ್ಬರನ್ನು ಅಪಹಾಸ್ಯ ಮಾಡಿದವರಲ್ಲ.... ಯಾರನ್ನೂ ತೇಜೋವಧೆ ನಡೆಸಿಯೂ ಇಲ್ಲ

ಇಂತಹ ಪಂಡಿತರನ್ನು ನಾನು ಯಾಕೆ ತೇಜೋವಧೆ ನಡೆಸಬೇಕು?

ನಾನು ಕಾಣದವರನ್ನು  ಯಾಕೆ ಅಪಹಾಸ್ಯ ಮಾಡಬೇಕು?

ನಾನು ನನಗೆ ಅರಿಯದವರ ಮೇಲೆ  ಯಾಕೆ ಕಲ್ಲು ಬಿಸಾಡಬೇಕು..?

ಹೀಗೆ ಚಿಂತಿಸಿದರೆ ನಿಮಗೆ ಲಭಿಸುವ ಉತ್ತರ ಒಂದೇ ...

ನಾನು ದಿಕ್ಕಾರಿಯಾಗಿದ್ದೇನೆ.
ನಾನು ಮಹಾ ಬುದ್ದಿಹೀನಾಗಿದ್ದೇನೆ, ನಾನು ಪಾಪಿಯಾಗಿದ್ದೇನೆ.
ನನಗಿಂತ ದೊಡ್ಡ ದಿಕ್ಕಾರಿ ಬೇರೆ ಯಾರಿದ್ದಾರೆ?..
ಎಂಬಿತ್ಯಾದಿ ಉತ್ತರಗಳು ನಿಮಗೆ ಲಭಿಸಬಹುದು.

ನಾಳೆಗೆ ಮುಂದಿಡದೆ ಇಂದೇ
ಚಿಂತಿಸು...
ಚಿಂತಿಸು...
ಚಿಂತಿಸು...

ತೌಬಾ ಮಾಡಲು ಈಗಲೂ ಸಮಯವಿದೆ.

💠ಮರಣ ಕೈಗೆಟಕುವ ಹತ್ತಿರದಲ್ಲಿ ಇದೆ. ಯಾವುದೇ ಸಮಯದಲ್ಲೂ ಯಾವುದೇ ಮುಲಾಜಿಲ್ಲದೆ, ಕನಿಕರವಿಲ್ಲದೆ ಅಝ್ರಾಈಲ್ (ಅ) ನಮ್ಮ ರೂಹ್ ಕ್ರೂರವಾಗಿ ಹಿಡಿದುಕೊಂಡು ಹೋಗಬಹುದು.

ಚಿಂತಿಸುವವರಿಗೆ ದೃಷ್ಟಾಂತವಿದೆ.

✍🏾 ಗಫೂರ್ ಬಾಯಾರ್
🌾🌾🌾🌾🌾🌾🌾🌾🌾

No comments:

Post a Comment